Tag: loksabha elections2019

  • ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ: ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಸಕ್ಕರೆ ನಾಡಿನಲ್ಲಿ ರಾಜಕೀಯ ಸಮೀಕರಣ ಬದಲಾಗುತ್ತಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದರು. ಆದ್ರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿ ಬಳಿಕ ಸಮಾವೇಶದಲ್ಲಿ ಆಡಿದ ಮಾತು ಇದೀಗ ಬೇರೆಯದ್ದೇ ಸುಳಿವು ನೀಡುತ್ತಿದೆ.


    ಸುಮಲತಾಗೆ ಬೆಂಬಲ ನೀಡುವುದಾಗಿ ಪ್ರಧಾನಿಯವರು ಬಹಿರಂಗ ಹೇಳಿದ್ದರ ಪರಿಣಾಮದಿಂದಾಗಿ ಸಕ್ಕರೆ ನಾಡಿನ ರಾಜಕೀಯ ಸಮೀಕರಣ ಬದಲಾಗುತ್ತಾ ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಒಂದು ವೇಳೆ ಚುನಾವಣೆಯಲ್ಲಿ ಸುಮಲತಾ ಗೆದ್ರೆ ಬಿಜೆಪಿಗೆ ಹೋಗಬಹುದು ಎಂಬ ಭೀತಿಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಬಿಜೆಪಿ ವಿರೋಧಿಗಳು ಹಾಗೂ ಮುಸ್ಲಿಮರು ಸುಮಲತಾರಿಂದ ಸಂಪೂರ್ಣವಾಗಿ ದೂರ ಉಳಿಯುವ ಸಾಧ್ಯತೆಗಳಿವೆ. ಈ ಮೂಲಕ ಮೋದಿ ಕೈಯಾರೆ ಸುಮಲತಾ ಗೆಲುವನ್ನು ತಪ್ಪಿಸುತ್ತಿದ್ದಾರಾ ಎಂಬ ಪ್ರಶ್ನೆಯೂ ಮೂಡಿದ್ದು, ಮೋದಿ ಹಾಗೂ ಬಿಜೆಪಿ ವಿರೋಧಿ ಮತಗಳು ನಿಖಿಲ್‍ಗೆ ಬೀಳುವ ಲಕ್ಷಣಗಳು ಕಂಡುಬರುತ್ತಿದೆ. ಒಟ್ಟಿನಲ್ಲಿ ಮತದಾನಕ್ಕೆ ಇನ್ನೇನು 8 ದಿನ ಬಾಕಿ ಇರುವಾಗಲೇ ಮಂಡ್ಯ ಪಾಲಿಟಿಕ್ಸ್ ಮೆಗಾ ಟ್ವಿಸ್ಟ್ ಪಡೆದುಕೊಂಡಿದೆ.

    ಮೋದಿ ಹೇಳಿದ್ದೇನು?
    ಚಿತ್ರದುರ್ಗದ ನಂತರ ಮೈಸೂರಿಗೆ ಭೇಟಿ ನೀಡಿದ ಪ್ರಧಾನಿಯವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಅಂಬರೀಶ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಆಶೀರ್ವಾದ ಮಾಡಿ ನನಗೆ ಶಕ್ತಿ ತುಂಬಿ ಎಂದು ಹೇಳಿದ್ದರು.

    ಸುಮಲತಾ ಹೇಳಿದ್ದೇನು?
    ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದ ಸುಮಲತಾ, ಪ್ರಧಾನಿ ಮೋದಿ ಅವರು ಅಂಬರೀಶ್ ಅವರನ್ನ ನೆನಪು ಮಾಡಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ ಹೇಳಲು ಪದಗಳೇ ಬರುತ್ತಿಲ್ಲ. ಮೋದಿ ಅವರಿಗೆ “ಹಾರ್ಟ್ ಫೆಲ್ಟ್ ಥ್ಯಾಂಕ್ಸ್”. ಇದು ಹೆಮ್ಮೆ ಪಡುವಂತ ವಿಚಾರ. ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ. ಮೋದಿ ಈ ಮಾತಿನಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ ಎಂದು ಅಭಿನಂದಿಸಿದ್ದರು.

  • ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಮಂಡ್ಯ: ಯುಗಾದಿ ಹಬ್ಬದ ಬ್ರೇಕ್ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಪ್ರಚಾರಕ್ಕೆ ಇಳಿದಿದ್ದು, ಇಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.

    ಅಂಬರಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಯಾವುದೇ ಕನ್ ಫ್ಯೂಶನ್ ಇಲ್ಲ. ಯಾಕಂದ್ರೆ ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಜನರ ಮುಗ್ಧತೆಯನ್ನ ಮಿಸ್‍ಯೂಸ್ ಮಾಡಿಕೊಳ್ಳಬಾರದು ಎಂದು ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಬಿಜೆಪಿ ಸುಮಲತಾಗೆ ಬೆಂಬಲವನ್ನು ನೀಡುತ್ತಿದೆ. ಹೀಗಾಗಿ ಮೋದಿ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ಮೋದಿಯನ್ನ ಭೇಟಿ ಮಾಡಲ್ಲ. ಅವರ ಭೇಟಿ ಬಗ್ಗೆ ನಮ್ಮ ಅಭ್ಯರ್ಥಿ ಸುಮಲತಾ ಅಂಬರೀಶ್ ನಿರ್ಧರಿಸುತ್ತಾರೆ ಎಂದರು.

    ಹಳ್ಳಿ ಹಳ್ಳಿಗೂ ಹೋಗಿ ನಮ್ಮ ಕರ್ತವ್ಯದಂತೆ ನಾವು ಪ್ರಚಾರ ಮಾಡುತ್ತಿದ್ದೇವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಕರ್ತವ್ಯದ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅಭ್ಯರ್ಥಿ ಏನು ಮಾಡಿದ್ದಾರೆ. ಅವರ ಅಭಿವೃದ್ಧಿ ಏನು ಮಾಡುತ್ತಾರೆ. ಇದಕ್ಕಾಗಿ ಅವರ ಯೋಜನೆಗಳು ಏನು ಎಂಬುದರ ಬಗ್ಗೆ ಅವರು ಮಾತಾಡುತ್ತಾರೆ. ಹೀಗಾಗಿ ನಾನು ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕಿಂತ ಅವರು ಮಾತನಾಡುವುದೇ ಸೂಕ್ತ ಎಂದು ಯಶ್ ಹೇಳಿದ್ರು.

    ಸುಮಲತಾ ಅವರು ಸುಮ್ಮನೆ ಹಿಂಗೆ ಬಂದು ಹಿಂಗೆ ಹೋಗುವವರು ಅಲ್ಲ. ಬಹಳಷ್ಟು ದಿನ ಉಳಿಯುತ್ತಾರೆ. ಇಲ್ಲಿ ಕೆಲಸಗಳನ್ನು ಮಾಡುತ್ತಾರೆ. ಜನರ ಪ್ರೀತಿ ಗಳಿಸೋದಕ್ಕೆ ಅಂತಾನೇ ಅವರು ಬಂದಿದ್ದಾರೆ. ಅಮೆರಿಕದಂತೆ ಇಲ್ಲಿಯೂ ಅಭ್ಯರ್ಥಿಗಳಿಬ್ಬರನ್ನು ನಿಲ್ಲಿಸಿ ಒಂದು ವೇದಿಕೆ ಕ್ರಿಯೇಟ್ ಮಾಡಿ. ಆವಾಗ ಯಾರು ಏನೇನು ಯೋಜನೆಗಳನ್ನಿಟ್ಟುಕೊಂಡಿದ್ದಾರೆ. ಯಾರು ಎಷ್ಟು ಯೋಜನೆಗಳನ್ನು ಇಟ್ಟುಕೊಂಡು ಅದರ ಬಗ್ಗೆ ಆಸಕ್ತಿ, ಶಕ್ತಿ, ಜ್ಞಾನ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಲಹೆ ನೀಡಿದ ಅವರು, ಮಂಡ್ಯದ ಯುವಕರು ಬೇರೆ ಬೇರೆ ಕಡೆ ಕೆಲಸಕ್ಕೆಂದು ತೆರಳುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬಂತೆ ಸಾಕಷ್ಟು ಪತ್ರಗಳು ಬಂದಿದೆ. ಅಲ್ಲದೇ ಮಂಡ್ಯದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದೆ. ಇವುಗಳನ್ನೆಲ್ಲಾ ಸುಮಲತಾ ಅಂಬರೀಶ್ ಮಾಡುತ್ತಾರೆ ಎಂದು ಭರವಸೆ ನೀಡಿದರು.

  • ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನ: ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಡಿಯೋದಲ್ಲಿ ಮತನಾಡಿದ ಪ್ರಕಾರ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಪುಕ್ಸಟ್ಟೆ ಲೀಡ್ರಾ ಅನ್ನೋ ಪ್ರಶ್ನೆಯೂ ಮೂಡಿದೆ. ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸನ್ನು ಬಿಜೆಪಿ ಮರೆತಿಲ್ಲ ಎಂದು ಸಂಭಾಷಣೆ ನಡೆದಿದ್ದು, ಈ ಮೂಲಕ ಬಿಜೆಪಿ ಕಾರ್ಯಕರ್ತರೇ ಎ ಮಂಜು ವಿರುದ್ಧ ಮತ ಹಾಕ್ತಾರಾ ಅನ್ನೋ ಅನುಮಾನ ಬಿಜೆಪಿ ವಲಯದಲ್ಲಿ ಮೂಡಿದೆ.

    ಎ ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್‍ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯನ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಹೀಗಾಗಿ ಹಾಸನ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ಪ್ರೀತಂಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಆಡಿಯೋದಲ್ಲೇನಿದೆ?
    ಬಿಜೆಪಿ ಕಾರ್ಯಕರ್ತ: ಅಲ್ಲ ಹೋಗ್ಲಿ ಅವನಿಗೇನು ದರ್ದು.. ನಮ್ ಪಾರ್ಟಿಗೆ ಬಂದು ಕ್ಯಾಂಡಿಡೇಟ್ ಆಗೋಕೆ?
    ಪ್ರೀತಂಗೌಡ: ಪುಕ್ಸಟ್ಟೆ ಲೀಡರ್ ಆಗ್ತಾನಲ್ಲ…
    ಬಿಜೆಪಿ ಕಾರ್ಯಕರ್ತ: ಹೌದಣ್ಣ ಹೌದು..
    ಪ್ರೀತಂಗೌಡ: ಇಲ್ಲೇನಾಗಿದೆ.. ಈಗ ಬಿಜೆಪಿ ಡೆವಲಪ್ ಆಗಿದೆ.. ಬೇಲೂರು ಸೆಕೆಂಡ್ ಪ್ಲೇಸು.. ಸಕಲೇಶಪುರ ಸೆಕೆಂಡ್ ಪ್ಲೇಸು.. ಇಲ್ಲಿ ಗೆದ್ದಿದ್ದಿವಿ.. ಅರಸೀಕೆರೆಲಿ ವೋಟ್ ಬ್ಯಾಂಕ್ ಇದೆ.. ಕಡೂರಲ್ಲೂ ಇದೆ..
    ಬಿಜೆಪಿ ಕಾರ್ಯಕರ್ತ: ಒಂದ್ ನಿಮಿಷ ಅಣ್ಣ.. ನೀವು ಹೇಳಿದಂಗೆ ಪುಕ್ಸಟ್ಟೆ ಲೀಡರ್ ಆಗ್ತಾನೆ ನಿಜ.. ಆದರೆ ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕ್ಸಿದ್ದಾನಲ್ಲ.. ಜನ ಮರೆತು ಬಿಡ್ತಾರಾ..?

    ಪ್ರೀತಂಗೌಡ: ಹಾ.. ನೆಗೆಟಿವಿಟಿ ಹತ್ತು ವರ್ಷದ ಹಿಂದೆ ಆಗಿದ್ದರೆ ಜನ ಮರೆತು ಬಿಡ್ತಾರೆ ಅನ್ಕೊಬಹುದು. ಅದರೆ ಏಳು ತಿಂಗಳ ಹಿಂದೆ ಮಂಜು ಮಾಡಿರುವ ಅವಾಂತರ ಮರಿಯೋಕೆ ಆಗಲ್ಲ.
    ಬಿಜೆಪಿ ಕಾರ್ಯಕರ್ತ: ಹೌದಣ್ಣ.. ನಿಜ ನಿಜ..
    ಪ್ರೀತಂಗೌಡ: ಹಂಗಾಗಿ ಜೆಡಿಎಸ್‍ಗೆ ವೋಟು ಹೋಗುತ್ತೆ.
    ಬಿಜೆಪಿ ಕಾರ್ಯಕರ್ತ: ಅಲ್ಲಾ ಅಣ್ಣ.. ಜೆಡಿಎಸ್ ಗೆಲ್ಲುತ್ತೆ ಅಂತ ನೀವೇ ಹೇಳ್ತೀರಿ… ಹಾಗಾದ್ರೆ ನೀವು ಮಾಡುತ್ತಿರುವ ಶ್ರಮ ಎಲ್ಲ ವೇಸ್ಟ್ ಅಲ್ವೇನಣ್ಣ..?

    ಪ್ರೀತಂ ಗೌಡ: ಹಾಂ… ನಾನು 20 ಗಂಟೆ ಕೆಲಸ ಮಾಡ್ತೀನಿ.. ಬಿಜೆಪಿಯವರು-ಸಂಘದವರು ಇವರಿಗೆ ಮಾಡಲ್ಲ. ಬಳ್ಳಾರಿ ಶ್ರೀರಾಮುಲು ಎಲೆಕ್ಷನ್ ರಿಪೀಟ್ ಆಗುತ್ತೆ. ಹೆಸರಿಗೆ ಮಾತ್ರ ಮಂಜು ಬಿಗ್ ಸ್ಟಾರ್.. ಬೂತ್ ತೆಗೆದು ನೋಡಿದರೆ ಎರಡು ಲಕ್ಷ ಎಂಬತ್ತು ಸಾವಿರ ವೋಟಿನಲ್ಲಿ ಜೆಡಿಎಸ್‍ನವರು ಗೆದ್ದರು ಅಂತಾರೆ… ಓಹ್… ದುಡ್ಡು ಹಂಚಿದ್ರು ಜೆಡಿಎಸ್‍ನವರು ಅಂತಾರೆ.
    ಬಿಜೆಪಿ ಕಾರ್ಯಕರ್ತ: ಆಯ್ತು ಅಣ್ಣ.. ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ ನಾನು.. ಒಕೆ.. ನೀವು ಹೇಳಿದಂಗೆ ಸೋಲ್ತಾನೆ.. ಒಂದು ಪಕ್ಷ ಗೆದ್ದರೆ ಅವನು, ಬಂದಿರುವ ವೋಟುಗಳನ್ನೆಲ್ಲ ಪ್ರೀತಂಗೌಡರಿಂದ ಬಂತು ಅಂತ ಹೇಳ್ತಾನಾ?

    ಪ್ರೀತಂಗೌಡ: ವೋಟು ಬಂದ್ರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಆಮೇಲೆ ಓಡೋಗಿ ಬಿಡ್ತಾರೆ… ಸೋತರೆ ಮತ್ತೆ ಸಿದ್ದರಾಮಯ್ಯ ಅಂತ ಹೊರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ.. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ.. ಆಪರೇಷನ್ ಕಮಲ ಲಾಸ್ಟ್ ಟೈಮ್ 2008ರಲ್ಲಿ ಬಂದು ಹೋದ್ರು.. ಅದಕ್ಕೂ ಮುಂಚೆ 99ರಲ್ಲಿ ಗೆದ್ದು ವಾಪಸ್ ಹೋದ್ರು… ಅವರು ಬಂದಾಗ ಏನೋ ಮಾಡ್ತಾರೆ.. ಆಮೇಲೆ ಏನ್ ಗೊತ್ತಾ ಈಗ ನಾವು ಸೆಕಂಡ್ ಪ್ಲೇಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ.. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ… ಮತ್ತೆ ನಾವು ಥರ್ಡ್ ಪ್ಲೇಸಿಗೆ ಹೋಗ್ಬೇಕಾಗುತ್ತೆ..
    ಬಿಜೆಪಿ ಕಾರ್ಯಕರ್ತ: ಆಯ್ತು ಬಿಡಣ್ಣ.. ಅರ್ಥ ಆಯ್ತು.. ವಾಪಸ್ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ..

  • ಕೋಟೆನಾಡಿನಲ್ಲಿಂದು ಮೋದಿ ರಣಕಹಳೆ- ಸವಿಯಲಿದ್ದಾರೆ ಉಪಾಧ್ಯ ಹೋಟೆಲ್‍ನ ದೋಸೆ!

    ಕೋಟೆನಾಡಿನಲ್ಲಿಂದು ಮೋದಿ ರಣಕಹಳೆ- ಸವಿಯಲಿದ್ದಾರೆ ಉಪಾಧ್ಯ ಹೋಟೆಲ್‍ನ ದೋಸೆ!

    ಚಿತ್ರದುರ್ಗ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಲಿದ್ದಾರೆ.

    ಸಮಾವೇಶದ ವೇಳೆಯಲ್ಲೆ ಪ್ರಧಾನಿ ನರೇಂದ್ರ ಮೋದಿ ದುರ್ಗದ ಉಪಾಧ್ಯ ಹೋಟೆಲ್ ನ ದೋಸೆ ಸವಿಯಲಿದ್ದು, ಮೋದಿಗೆ ಕಮಲದ ಕಸೂತಿ ಇರುವ ಕೇಸರಿ ಕಂಬಳಿ ಹೊದಿಸಿ ಸ್ಥಳೀಯ ನಾಯಕರು ಸನ್ಮಾನ ಮಾಡಲಿದ್ದಾರೆ.

    ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಸಂಪೂರ್ಣಗೊಂಡಿದ್ದು ಮಧ್ಯಾಹ್ನ 2:10 ನಿಮಿಷಕ್ಕೆ ಮೋದಿ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

    8 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಕಾಂಗ್ರೆಸ್ ಕೋಟೆಯನ್ನ ಕೇಸರಿಯನ್ನಾಗಿ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಪರಿಣಾಮವೇ ಚಿತ್ರದುರ್ಗದಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲೆ 8 ತಿಂಗಳ ಅವಧಿಯಲ್ಲೆ ಮೋದಿ ಮತ್ತೊಮ್ಮೆ ಕೋಟೆ ನಾಡಿನಲ್ಲಿಂದು ಭಾಷಣ ಮಾಡಲಿದ್ದಾರೆ.

    ಇಂದು ಮಧ್ಯಾಹ್ನ ಚಿತ್ರದುರ್ಗದ ಚಳ್ಳಕೆರೆಯ ಡಿಆರ್ ಡಿಓ ಸಂಸ್ಥೆಗೆ ಆಗಮಿಸಿ ನಂತರ ಅಲ್ಲಿಂದ ದುರ್ಗದ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುವ ಮೋದಿ ನಂತರ ರಸ್ತೆ ಮಾರ್ಗವಾಗಿ ಮುರುಗರಾಜೇಂದ್ರ ಕೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

    ಮೋದಿ ಸಮಾವೇಶಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.

  • ಮಂಡ್ಯದಲ್ಲಿ ನಿಖಿಲ್ ನೋಟು, ಸುಮಲತಾ ವೋಟಿನ ಮಧ್ಯೆ ಸ್ಪರ್ಧೆ- ಶ್ರೀನಿವಾಸ್ ಪೂಜಾರಿ

    ಮಂಡ್ಯದಲ್ಲಿ ನಿಖಿಲ್ ನೋಟು, ಸುಮಲತಾ ವೋಟಿನ ಮಧ್ಯೆ ಸ್ಪರ್ಧೆ- ಶ್ರೀನಿವಾಸ್ ಪೂಜಾರಿ

    ಮಡಿಕೇರಿ: ಮಂಡ್ಯದಲ್ಲಿ ಮೂವರು ಸುಮಲತಾ ಅವರನ್ನು ನಿಲ್ಲಿಸಲಾಗಿದೆ. ಆದರೆ ಬಿಜೆಪಿಯಿಂದ ಸುಮಲತಾ ಅಂಬರೀಶ್ ಗೆ ಸಂಪೂರ್ಣ ಬೆಂಬಲ ನೀಡುತ್ತಿದೇವೆ. ಈ ಬಾರಿ ಮಂಡ್ಯದಲ್ಲಿ ನಿಖಿಲ್ ನೋಟು ಮತ್ತು ಸುಮಲತಾ ವೋಟಿನ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಜನಸಾಮಾನ್ಯರ ಸಲಹೆ ಸೂಚನೆ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ದೇಶದ ಭದ್ರತೆಗೆ ಪ್ರಥಮ ಸ್ಥಾನ, ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ, ಸೇನೆಗೆ ಬೇಕಾದ ವಿಶೇಷ ಉಪಕರಣಗಳ ಪೂರೈಕೆ ನುಸುಳುಕೋರರನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    2030ರ ವೇಳೆಗೆ ಭಾರತದಲ್ಲಿ ಸಂಪೂರ್ಣ ಬಡತನ ನಿರ್ಮೂಲನೆ ಮಾಡುವುದು ಬಿಜೆಪಿ ಪಕ್ಷದ ಗುರಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಅಂದ್ರು.

    2022 ರ ಒಳಗೆ ರೈಲ್ವೆ ಟ್ರ್ಯಾಕ್ ಸಂಪೂರ್ಣ ಅಳವಡಿಕೆ ಭಾರತೀಯ ಜನತಾ ಪಕ್ಷದಿಂದ ಸ್ಪಷ್ಟ ನಿಲುವು. ಉಗ್ರವಾದಕ್ಕೆ ಯುಪಿಎ ಸರ್ಕಾರದಿಂದ ಬೆಂಬಲ ನೀಡುತ್ತಿದೆ. ಆದರೆ ಉಗ್ರವಾದದ ವಿರುದ್ಧ ಎನ್ ಡಿಎ ನಿಲುವು ತೆಗೆದುಕೊಳ್ಳಲಿದೆ. ಮಂಗಳವಾರ ಪ್ರಧಾನಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ 22 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ನರೇಂದ್ರ ಮೋದಿಯನ್ನು ಸೋಲಿಸಲು ಕರ್ನಾಟಕದಲ್ಲಿ ಹೊಂದಾಣಿಕೆಯಾಗಿದೆ. ಜನ ನಗುವಂತ ವಾತವರಣ ನಿರ್ಮಾಣ ಮಾಡಿದ್ದಾರೆ. ಗೆದ್ದೆ ಗೆಲ್ಲುತ್ತೇವೆ ಎನ್ನುವ ಮೈತ್ರಿ ಸರ್ಕಾರಕ್ಕೆ ಸೋಲು ಖಚಿತವಾಗಿದೆ.

  • ಹಾಸನದಲ್ಲಿ ಚುನಾವಣೆ ಗೆಲ್ಲಲು ಪ್ರೀತಂಗೌಡ ರಣತಂತ್ರ- ವಿಡಿಯೋ ವೈರಲ್

    ಹಾಸನದಲ್ಲಿ ಚುನಾವಣೆ ಗೆಲ್ಲಲು ಪ್ರೀತಂಗೌಡ ರಣತಂತ್ರ- ವಿಡಿಯೋ ವೈರಲ್

    ಹಾಸನ: ಬಿಜೆಪಿ ಶಾಸಕ ಪ್ರೀತಮ್ ಗೌಡ ಚುನಾವಣೆ ಗೆಲ್ಲಲು ರಣತಂತ್ರ ಹೂಡಿರುವ ವಿಡಿಯೋ ವೈರಲ್ ಆಗಿದೆ.

    ಜೆಡಿಎಸ್ ಮತದಾರರ ಗಮನ ಹೇಗೆ ಸೆಳೆಯಬೇಕು ಅನ್ನೋ ವಿಚಾರದ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮಾಡಿದ ಪಾಠ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?:
    ಅವರು ಹೇಗೆ ಮಾತಾಡ್ತಾರೆ ಹಂಗೆ ಮಾತಾಡಿ. ಕೊನೆಗೆ ನಮ್ಮ ರೂಟಿಗೆ ತರಬೇಕು. ರೇವಣ್ಣನ ಭಕ್ತ ಇದ್ದರೆ ಈ ಬಾರಿ ನಮ್ಮ ಗೆಲ್ಲಿಸು ಮುಂದೇ ರೇವಣ್ಣನ ಗೆಲ್ಲಿಸ್ತಿವಿ ಎಂದು ಹೇಳಿ. ಆ ಹುಡುಗ ಎಲ್ಲರನ್ನು ಹೋಗೋ ಬಾರೋ ಅಂತಾನೆ ಅವರಿಗ್ಯಾಕೆ ಓಟ್ ಹಾಕ್ತಿರ ಎಂದು ಹೇಳಿ. ಅವನು ಈಗಲೇ ಗೌರವ ಕೊಡಲ್ಲ, ಗೆದ್ದರೆ ನೀವೆಲ್ಲಾ ಕೈ ಕಟ್ಟಿಕೊಂಡು ನಿಲ್ಲಬೇಕು. ಹೀಗಾಗಿ ಅವರನ್ನು ಸೋಲಿಸಿದ್ರೆ ಮಾತ್ರ ಅವರಿಗೆ ಭಯ ಬರೋದು. ಹಾಗೆಯೇ ನೀವು ಹೇಳಿದ್ದನ್ನು. ಅವರು ಕೇಳೋದು. ಆಗ ನಮ್ಮ ಮನೆ ಪಾತ್ರೆ ತೊಳೆಯೋ ಲಕ್ಷ್ಮಿಯನ್ನು ನಿಲ್ಲಿಸಿದ್ರೂ ಗೆಲ್ತಾರೆ ಅನ್ನೋ ಕಾನ್ಫಿಡೆಂಟ್ ಬರುತ್ತದೆ. ಈಗ ಬೂತ್ ಗೆ ಒಂದು ಲಕ್ಷ ಕೊಟ್ಟವ್ನೆ, ಎಂಪಿ ಸೋತರೆ ಎಮ್‍ಎಲ್‍ಎ ಗೆ ಐದು ಲಕ್ಷ ಕೊಡ್ತಾನೆ ಎಂದು ನೀವು ಕನ್ವಿನ್ಸ್ ಮಾಡಿ ಎಂದು ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎ ಮಂಜು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

  • ಮಾದೇಗೌಡರು ನನ್ನ ಬಳಿ ಹಣ ಕೇಳಿದ್ದು ಸತ್ಯ – ಪುಟ್ಟರಾಜು ಸ್ಪಷ್ಟನೆ

    ಮಾದೇಗೌಡರು ನನ್ನ ಬಳಿ ಹಣ ಕೇಳಿದ್ದು ಸತ್ಯ – ಪುಟ್ಟರಾಜು ಸ್ಪಷ್ಟನೆ

    ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಹಿರಿಯ ಮುಖಂಡ ಜಿ ಮಾದೇಗೌಡರು ಸಿ ಎಸ್ ಪುಟ್ಟರಾಜು ಅವರಿಗೆ ಕರೆ ಮಾಡಿ ಹಣ ಕೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಕುರಿತಂತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾತನಾಡಿರುವುದು ಸತ್ಯ. ಚುನಾವಣಾ ಪ್ರಚಾರಕ್ಕೆ ಆಯೋಗನೇ ಅಭ್ಯರ್ಥಿಗಳಿಗೆ 70 ಲಕ್ಷ ಖರ್ಚು ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಗಳಾಗಿರುವುದರಿಂದ ಲೋಕಲ್ ಅವರು ನಮಗೆ ಸಪರೇಟ್ ಆಗಿ ಚುನಾವಣಾ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿರುವಂತದ್ದು ನಿಜ. ಹಾಗೆಯೇ ನಾನು ಕೂಡ ಅರೆಂಜ್ ಮಾಡಿಕೊಡುತ್ತೇನೆ ಎಂದು ಹೇಳಿದ್ದು ಕೂಡ ಅಷ್ಟೇ ಸತ್ಯ.

    ಚುನಾವಣಾ ಪ್ರಚಾರ ಮಾಡಲು ವ್ಯವಸ್ಥೆಗಳನ್ನು ಮಾಡಲು ತಮ್ಮಣ್ಣನ ಬಳಿ ನಮ್ಮ ಹುಡುಗರು ಹೋಗೋದಿಲ್ಲ. ಹೀಗಾಗಿ ಜಿಲ್ಲಾ ಮಂತ್ರಿ, ಮೈತ್ರಿ ಧರ್ಮ ಪಾಲನೆ ಮಾಡಿ ಚುನಾವಣೆ ಚೆನ್ನಾಗಿ ನಡೆಸಬೇಕು. ಅದಕ್ಕೆ ಅರೆಂಜ್‍ಮೆಂಟ್ ಮಾಡಿಕೊಡಿ ಎಂದು ಮಾದೇಗೌಡರು ಕೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ಶುಕ್ರವಾರ ರಾತ್ರಿ ಫೋನ್ ಸಂಭಾಷಣೆ ಆಗಿದ್ದು, ನಿನ್ನೆ ಬ್ಯಾಂಕ್ ರಜೆ ಇತ್ತು. ಹೀಗಾಗಿ ಹಣ ಹೊಂದಿಸುತ್ತಿದ್ದೇವೆ. ಇದು ಬಿಟ್ಟು ಎಲೆಕ್ಷನ್ ದಿಕ್ಕು ತಪ್ಪಿಸುವಂತದ್ದು ಏನೂ ಇಲ್ಲ. ಇದರಿಂದ ಫೋನ್ ಟ್ರ್ಯಾಪ್ ಮಾಡುತ್ತಾರೆ ಎಂದು ಗೊತ್ತಾಗುತ್ತೆ ಅಲ್ವ ಎಂದರು.

    ಆದಾಯ ತೆರಿಗೆ ಇಲಾಖೆಯ ಮುಖಾಂತರ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಹೀಗಾಗಿ ಐಟಿ ಇಲಾಖೆಯೇ ಅವರ ಪರ ಕೆಲಸ ಮಾಡುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ನಾವು ಹೋಟೆಲಿನಲ್ಲಿ ಉಳಿದುಕೊಂಡರೂ ಬಂದು ರೇಡ್ ಮಾಡುತ್ತಾರೆ. ಇಷ್ಟೆಲ್ಲ ಹಿಂದೆ ಬಿದ್ದು ನನ್ನ ಕುಟುಂಬದ ಫೋನ್ ಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ನನಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದರಿಂದ ಚುನಾವಣೆ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜಿಲ್ಲೆಯ ಜನ ಬಹಳ ಪ್ರಜ್ಞಾವಂತರಿದ್ದಾರೆ. ಸುಮಲತಾ ಮೇಡಂ ಹೇಳುತ್ತಿದ್ದರು ಜನ ಮುಟ್ಟಾಳರಲ್ಲ ಎಂದು ಹಾಗೆಯೇ ಇದರಿಂದ ಬಿಜೆಪಿಯವರಿಗೆ ನಮ್ಮನ್ನು ಮುಟ್ಟಾಳರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ ಏ.18ರಂದು ಜಿಲ್ಲೆಯ ಜನ ಉತ್ತರ ಹೇಳುತ್ತಾರೆ ಬಿಜೆಪಿಗೆ ಟಾಂಗ್ ಕೊಟ್ಟರು.

    ಆಡಿಯೋದಲ್ಲೇನಿದೆ?
    ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀಕರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.

    ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಆದಷ್ಟು ಬೇಗ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.

  • ಸಚಿವ ಪುಟ್ಟರಾಜು ಬಳಿ ಹಣ ಕೇಳಿದ್ರಾ ಮಾದೇಗೌಡ?

    ಸಚಿವ ಪುಟ್ಟರಾಜು ಬಳಿ ಹಣ ಕೇಳಿದ್ರಾ ಮಾದೇಗೌಡ?

    ಮಂಡ್ಯ: ಸಚಿವ ಸಿ.ಎಸ್ ಪುಟ್ಟರಾಜು ಬಳಿ ಕಾಂಗ್ರೆಸ್ ಹಿರಿಯ ಮುಖಂಡ ಜಿ. ಮಾದೇ ಗೌಡರು ಹಣ ಕೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆಯಾ ಅನ್ನೋ ಪ್ರಶ್ನೆಯೊಂದು ಚರ್ಚೆಗೆ ಗ್ರಾಸವಾಗಿದೆ.

    ಮಾದೇಗೌಡರಿಗೆ ಬೇರೆ ಯಾರೋ ಫೋನ್ ಮಾಡಿಕೊಡುತ್ತಾರೆ. ಅಲ್ಲದೆ ಒಬ್ಬ ಸಚಿವರಾಗಿದ್ದವರು ಬೇರೆಯವರ ಫೋನಿನಲ್ಲಿ ಹಣದ ವಿಚಾರ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಆದ್ರೆ ಈ ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

    ಆಡಿಯೋದಲ್ಲೇನಿದೆ?
    ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.

    ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ ಅನ್ನೋ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.

  • ಕೊಪ್ಪಳ ‘ಕೈ’ ನಾಯಕರಿಗೆ ಸಿದ್ದರಾಮಯ್ಯ ವಾರ್ನ್!

    ಕೊಪ್ಪಳ ‘ಕೈ’ ನಾಯಕರಿಗೆ ಸಿದ್ದರಾಮಯ್ಯ ವಾರ್ನ್!

    ಕೊಪ್ಪಳ: ಮಾಜಿ ಮುಖ್ಯಮಂತ್ರಿ ಕೊಪ್ಪಳ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇತ್ತೀಚೆಗಿನ ಸಮಾವೇಶ ಮುಗಿದ ಬಳಿಕ ಜಿಲ್ಲೆಯ ಕೈ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

    ಸಿದ್ದರಾಮಯ್ಯ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಮೀಟಿಂಗ್ ಮಾಡಿದ್ದು, ಹೇಗಾದರೂ ಮಾಡಿ ಲೋಕಸಭಾ ಚುನಾವಣೆಯಲ್ಲಿ ರಾಜಶೇಖರ್ ಹಿಟ್ನಾಳ್ ನನ್ನು ಗೆಲ್ಲಿಸಬೇಕು. ಒಂದು ವೇಳೆ ಗೆಲ್ಲದೆ ಹೋದರೆ ನನಗೆ ಮುಖ ತೋರಿಸಬೇಡಿ ಎಂದು ಸಿದ್ದರಾಮಯ್ಯ ಕೊಪ್ಪಳ ಲೋಕಸಭಾ ವ್ಯಾಪ್ತಿಯ ಕೈ ನಾಯಕರಿಗೆ ವಾರ್ನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿದ್ದರಾಮಯ್ಯ ಸುಮಾರು ಅರ್ಧಗಂಟೆಗಳ ಕಾಲ ಮಾಜಿ ಶಾಸಕರು ಮತ್ತು ಸಚಿವರೊಂದಿಗೆ ಮೀಟಿಂಗ್ ಮಾಡಿದ್ದು, ಸಭೆಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಕೈ ಶಾಸಕ ಅಮರೆಗೌಡ ಬಯ್ಯಾಪೂರ್, ಕೊಪ್ಪಳ ಕೈ ಶಾಸಕ ರಾಘವೇಂದ್ರ ಹಿಟ್ನಾಳ್, ಜೆ.ಡಿ.ಎಸ್ ಮುಖಂಡರು ಭಾಗಿಯಾಗಿದ್ದರು.

    ಈ ಮೀಟಿಂಗ್ ಗೆ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಗೈರಾಗಿದ್ದಾರೆ. ರಾಯರೆಡ್ಡಿ ನಡೆಯಿಂದ ಸಾಕಷ್ಟು ಅನುಮಾನ ಮೂಡಿಸಿದೆ. ಇದೇ ವೇಳೆ ಕೆಲ ನಾಯಕರು ಸಿದ್ದರಾಮಯ್ಯ ಮುಂದೆ ವಿಧಾನಸಭೆ ಸೋಲಿನ ಕಹಿ ತೋಡಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಆಗಿದ್ದನ್ನ ಮರೆತು ಬಿಡಿ, ಇದೀಗ ಒಟ್ಟಾಗಿ ಚುನಾವಣೆ ಮಾಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

  • ಸಿದ್ದರಾಮಯ್ಯಗೆ ನಿಖಿಲ್ ಆಹ್ವಾನ – ಮಂಡ್ಯದಲ್ಲಿ ನಡೆಯುತ್ತಾ ಮಾಜಿ ಸಿಎಂ ಕ್ಯಾಂಪೇನ್?

    ಸಿದ್ದರಾಮಯ್ಯಗೆ ನಿಖಿಲ್ ಆಹ್ವಾನ – ಮಂಡ್ಯದಲ್ಲಿ ನಡೆಯುತ್ತಾ ಮಾಜಿ ಸಿಎಂ ಕ್ಯಾಂಪೇನ್?

    ಬೆಂಗಳೂರು: ಪ್ರಚಾರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಆಹ್ವಾನ ಮಾಡಿದ್ದಾರೆ.

    ನಗರದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾದ ನಿಖಿಲ್, ಸಾರ್ ನೀವು ಪ್ರಚಾರಕ್ಕೆ ಬನ್ನಿ. ನಿಮ್ಮ ಆಶೀರ್ವಾದ ನನಗೆ ಬೇಕು. ಹಿಂದಿನದ್ದು ಬಿಟ್ಟು ಬಿಡಿ, ನಾನು ಭವಿಷ್ಯದ ಬಗ್ಗೆ ಯೋಜನೆ ಮಾಡುವವನು. ಹೀಗಾಗಿ ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯ ಮನಗೆಲ್ಲಲು ಮಾತು ಮಾತಿಗೂ ಸರ್ ನಿಮ್ಮ ಸಹಕಾರ ಮುಖ್ಯ ಎಂದು ನಿಖಿಲ್ ಹೇಳಿದ್ದು, ಮಂಡ್ಯದಲ್ಲಿ ಆದಷ್ಟು ಹೆಚ್ಚು ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಮನವೊಲಿಸುವಂತೆಯೂ ನಿಖಿಲ್ ಇದೇ ವೇಳೆ ಕೇಳಿಕೊಂಡಿದ್ದು, ಮಂಡ್ಯ ಕೈ ನಾಯಕರಿಗೆ ಬುದ್ಧಿ ಹೇಳುವಂತೆ ಕೂಡ ಹೇಳಿದ್ದಾರೆ. ನಿಖಿಲ್ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಆದಷ್ಟು ಎಲ್ಲ ಅಡೆತಡೆ ನಿವಾರಿಸುವ ಭರವಸೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.