Tag: loksabha elections2019

  • ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋತ್ರೆ ಸಮ್ಮಿಶ್ರ ಸರ್ಕಾರ ಉಳಿಯಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

    ಸಮ್ಮಿಶ್ರ ಸರ್ಕಾರ 5 ವರ್ಷ ಇರಬೇಕು. ಆದ್ರೆ ನವು ಸೋತ್ರೆ ಸರ್ಕಾರ ಇರುತ್ತದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿನೂ ಆಯ್ತು. ಮುಗೀತು ನನ್ನದು. ಸರ್ಕಾರ ಇದೆಯಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ ದೇವೇಗೌಡ ಹಾಗೂ ಸಾರಾ ಮಹೇಶ್, ತಮ್ಮಣ್ಣ, ಪುಟ್ಟರಾಜು ಇವೆಲ್ಲರೂ ಮಂತ್ರಿಗಳಾಗಿದ್ದಾರೆ. ನಾನೇನೂ ಇಲ್ಲ. ನಮ್ಮವರು 27 ಮಂದಿ ಇದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರದಂಗೆ ನೋಡಿಕೊಳ್ಳಬೇಕಲ್ವ. ಅದಕ್ಕೆ ತಾನೇ ನಾವು ಒಂದಾಗಿರೋದು ಎಂದು ಹೇಳಿದ್ದಾರೆ.

    ಕಳೆದ ಚುನಾವಣೆಯಲ್ಲಿ ಕೆಲವರು ನಾನು ಗೆಲ್ಲಬಾರದು, ಸಿಎಂ ಆಗಬಾರದು, ನಾನು ಗೆದ್ರೆ ಖರ್ಗೆ, ಪರಮೇಶ್ವರ್ ಸಿಎಂ ಆಗಲ್ಲ ಎಂದು ಚೀಟಿ ಹಂಚಿದ್ರು. ಆದ್ರೀಗ ಸಿಎಂ ಆಗಿರೋದು ಯಾರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪು ಮಾಡಿಕೊಂಡ್ರು. ಚುನಾವಣೆಯ ಮೇಲೆ ಆಸಕ್ತಿ ಕಡಿಮೆ ಆಗಿದ್ದು ಇನ್ಮುಂದೆ ಎಲೆಕ್ಷನ್‍ಗೆ ನಿಲ್ಲಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಎಂದು ಓಡಾಡ್ತಿದ್ದೇನೆ. ಬಿಜೆಪಿ ವಿರುದ್ಧದ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದ್ರು. ಇಲ್ಲಿ ಬಿಜೆಪಿ ಗೆಲ್ಲಬಾರದು ನಾವು ಸೋತ್ರೆ ಸರ್ಕಾರ ಇರುತ್ತಾ, ಮೈತ್ರಿ ಅಭ್ಯರ್ಥಿ ಗೆಲ್ಬೇಕು ಎಂದು ಹೇಳಿದ್ರು.

    ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಜಿ.ಟಿ ದೇವೇಗೌಡ ಜೊತೆಯಾಗಿ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ನಂಗೆ ಯಾವಾಗ್ಲೂ ಇಲವಾ ಕ್ಷೇತ್ರದಲ್ಲಿ ಲೀಡ್ ಬರುತ್ತೆ. ಆದ್ರೆ ಅದೇನಾಯ್ತೋ ಕಳೆದ ಚುನಾವಣೆಯಲ್ಲಿ ನಂಗೆ ನೀವು ಲೀಡ್ ಕೊಟ್ಟಿಲ್ಲ ಎಂದು ಜಿಟಿ ದೇವೇಗೌಡರ ಎದುರೇ ಮತದಾರರನ್ನು ಪ್ರಶ್ನಿಸಿದ್ರು.

  • ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದು, ಇಂದು ತಮ್ಮ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.

    ಕಳೆದ ಕೆಲ ದಿನಗಳಿಂದ ಪ್ರಚಾರ ಮಾಡಿದ್ದರಿಂದ ದರ್ಶನ್ ಅವರಿಗೆ ಗಂಟಲು ನೋವು, ಕೈನೋವು ಕಾಣಿಸಿಕೊಂಡಿತ್ತು. ಗಂಟಲು ನೋವಿದ್ದರೂ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಇಂದು ಪ್ರಚಾರ ನಡೆಸುತ್ತಿದ್ದಾಗ ಮೈಕ್ ಆಗಾಗ ಕೈ ಕೊಡುತಿತ್ತು. ಗಂಟಲು ಕಟ್ಟಿಕೊಂಡಿದ್ದ ಕಾರಣ ಮೈಕ್ ಇಲ್ಲದೆ ಭಾಷಣ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಕೇವಲ ನಾಲ್ಕು ಊರುಗಳಲ್ಲಿ ಮಾತ್ರ ಪ್ರಚಾರ ಮಾಡಿ ನಂತರ ತಮ್ಮ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ನಾಳೆ ಮತ್ತೆ ದರ್ಶನ್ ತಮ್ಮ ಪ್ರಚಾರ ಮುಂದುವರಿಸಲಿದ್ದಾರೆ. ಇತ್ತ ದರ್ಶನ್ ವಾಪಸ್ ಹೋದ ವಿಷಯ ಗೊತ್ತಿಲ್ಲದೇ ಹೆಮ್ಮನಹಳ್ಳಿ, ಸೋಮನಹಳ್ಳಿ ಸೇರಿ ಹಲವು ಗ್ರಾಮಗಳ ಜನ ರಸ್ತೆಯಲ್ಲಿ ಸಾರಥಿಗಾಗಿ ಕಾದು ನಿಂತಿದ್ದಾರೆ.

    ಎಲ್ಲೆಲ್ಲಿ ಪ್ರಚಾರ:
    ಮದ್ದೂರು ತಾಲೂಕಿನ ಗ್ರಾಮಗಳಲ್ಲಿ ಸಾರಥಿ ಅಬ್ಬರದ ಪ್ರಚಾರ ನಡೆಸಿದ್ದರು. ಮಲ್ಲನಕುಪ್ಪೆಯಲ್ಲಿ ಇಂದು ಪ್ರಚಾರ ಆರಂಭಿಸಿದ ದರ್ಶನ್ ಸುಮಲತಾ ಪರ ದರ್ಶನ್ ಮತಯಾಚನೆ ಮಾಡಿದ್ರು. ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಗೆ ಶುಭ ಕೋರಿದರು. ದರ್ಶನ್ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುವುದು ಕಂಡುಬಂತು. ದರ್ಶನ್‍ಗೆ ನಟ, ಸ್ನೇಹಿತ ರವಿಚೇತನ್ ಸಾಥ್ ನೀಡಿದ್ದರು.

    ಮದ್ದೂರಿನ ಕೆಸ್ತೂರಿನಲ್ಲಿ ದರ್ಶನ್‍ಗೆ ಭವ್ಯ ಸ್ವಾಗತ ಸಿಕ್ಕಿದ್ದು, ಗ್ರಾಮಸ್ಥರು ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಜೆಡಿಎಸ್‍ನ ಸ್ಥಳೀಯ ಮುಖಂಡ ಧನಂಜಯ್ ಅವರು, ಪ್ರಚಾರ ವಾಹನ ಹತ್ತಿ ಸುಮಲತಾ ಪರ ಬೆಂಬಲ ಘೋಷಿಸಿದ್ರು.

    ಅಂತಿಮ ಹಂತದ ಪ್ರಚಾರ ಕಣದಲ್ಲಿ ದರ್ಶನ್ ಭಾಷಣ ಮಾಡಿದ್ದು, ಮತಗಳನ್ನು ಮಾರಿಕೊಳ್ಳದಂತೆ ಜನತೆಗೆ ಮನವಿ ಮಾಡಿದ್ರು. ಹಣಕ್ಕೆ ಮತ ಮಾರಿಕೊಳ್ಳಬೇಡಿ. ಸ್ವಾಭಿಮಾನದ ಮತಗಳನ್ನು ಸುಮಲತಾರಿಗೆ ಹಾಕುವಂತೆ ದರ್ಶನ್ ಕೇಳಿಕೊಂಡರು. ಇದೇ ವೇಳೆ ಪ್ರಚಾರದ ಮೈಕ್ ಕೂಡ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರಿಯಾಗಿ ಭಾಷಣ ಮಾಡಲು ಸಾಧ್ಯವಾಗಿಲ್ಲ.

    ಮದ್ದೂರಿನ ತೂಬಿನಕೆರೆಯಲ್ಲಿ ಅಭಿಮಾನಿಗಳು ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿದ್ರು. ಎರಡು ಜೆಸಿಬಿ ಮೂಲಕ ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮದ್ದೂರಿನ ಕೆಸ್ತೂರಿನಲ್ಲಿ ಮಾತನಾಡುವಾಗಲೂ ಮೈಕ್ ಕೈ ಕೊಡ್ತಿದ್ದ ಕಾರಣ ದರ್ಶನ್ ಸಿಟ್ಟಾದ್ರು. ಅಲ್ಲದೆ ತಮ್ಮ ಕೈಲಿದ್ದ ಮೈಕನ್ನು ಕೆಳಕ್ಕೆ ಎಸೆದ ಪ್ರಸಂಗವೂ ನಡೆಯಿತು.

  • ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯ: ಪ್ರಚಾರದ ಅಬ್ಬರ ನಡುವೆಯೇ ಯೋಧರೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಕತೆ ನಡೆಸಿದ್ದಾರೆ.

    ಶ್ರೀರಂಗಪಟ್ಟಣದ ಮೂಳೆಕೊಪ್ಪಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯೋಧ ತನ್ನ ನೆಚ್ಚಿನ ನಟನಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ.

    ಮಧ್ಯಾಹ್ನದ ಊಟ ಮುಗಿಸಿ ಸೈನಿಕನ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ದರ್ಶನ್, ನಿಮ್ಮ ಮಾತಿನಿಂದ ನಮಗೆ ಮತ್ತಷ್ಟು ಧೈರ್ಯ ಸಿಕ್ಕಿದೆ ಎಂದು ಹೇಳಿದರು. ಅಭಿಮಾನಿ ಯೋಧ ಜಮ್ಮು ಗಡಿ ಸೇನಾ ಕ್ಯಾಂಪ್ ನಿಂದ ದರ್ಶನ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಹಾಕುವುದಾಗಿ ಹೇಳಿದ್ದಾರೆ. ಯೋಧನ ಮಾತಿಗೆ ದರ್ಶನ್ ಥ್ಯಾಂಕ್ಯೂ.. ಥ್ಯಾಂಕ್ಯೂ.. ಎಂದು ಹೇಳಿದ್ದಾರೆ.

  • ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ಐಟಿ ಸಹಾಯ ಪಡೆದುಕೊಂಡು ಮಂಡ್ಯದಲ್ಲಿ ದಾಳಿ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ ಐಟಿ ಈಗ ಮಂಡ್ಯದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆದಿದೆ.

    ಮಂಡ್ಯದಲ್ಲಿ ಸದ್ದಿಲ್ಲದೆ ಐಟಿಯ ಕಂಟ್ರೋಲ್ ರೂಂ ತೆರೆದಿದ್ದು, ಮಂಡ್ಯದ ಮೂಲೆ ಮೂಲೆಯಲ್ಲೂ ಐಟಿ ಸಂಚಾರಿ ತನಿಖಾ ದಳ ಸ್ಥಾಪನೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದ 40 ಕಡೆಗಳಲ್ಲಿ ಐಟಿಯಿಂದ ರಹಸ್ಯ ಕಾರ್ಯಾಚರಣೆ ನಡೆಯಲಿದ್ದು, ಬಾಲಕೃಷ್ಣನ್ ಸೂಚನೆ ಮೇರೆಗೆ ಮಂಡ್ಯದಲ್ಲಿ `ಅಪರೇಷನ್ ಮನಿ’ಗೆ ಇಬ್ಬರು ಅಧಿಕಾರಿಗಳು ಕೂಡ ಬಂದಿಳಿದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು: ಪುಟ್ಟರಾಜು

    ಮಂಡ್ಯದಲ್ಲಿ ಸ್ಥಾಪಿಸಲಾಗಿರುವ ಐಟಿ ಕಂಟ್ರೋಲ್ ರೂಂನಲ್ಲೇ ಫೋನ್ ಕದ್ದಾಲಿಕೆ ವ್ಯವಸ್ಥೆ ಕೂಡ ಮಾಡಲಾಗಿದೆ. `ಟಾರ್ಗೆಟ್ ಮಾಡಲಾದ ವ್ಯಕ್ತಿಗಳ ಫೋನ್ ಕದ್ದಾಲಿಕೆ’ಗೆ ಇಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ `ಟಾರ್ಗೆಟ್ ಆಗಿರುವ ವ್ಯಕ್ತಿ’ಗಳ ಮೊಬೈಲ್ ನಂಬರ್, ಧ್ವನಿಯನ್ನ ಫೀಡ್ ಮಾಡ್ತಾರೆ. ಈ ಮೂಲಕ 1 ಕಿಲೋ ಮೀಟರ್ ದೂರದಿಂದಲೇ ಟಾರ್ಗೆಟ್ ವ್ಯಕ್ತಿಗಳ ಕಾಲ್ ಕದ್ದಾಲಿಕೆ ಆಗುತ್ತದೆ. ಹಣ ಸಾಗಾಟ, ಸುಮಲತಾ ವಿರೋಧಿಗಳ ಕ್ಷಣಕ್ಷಣದ ನಡೆಯ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತದೆ. ಈ ಎಲ್ಲ ಆಪರೇಷನ್‍ಗಳನ್ನು ನೋಡಿಕೊಳ್ಳಲು ಇಬ್ಬರು ಅಧಿಕಾರಿಗಳ ರವಾನೆ ಮಾಡಲಾಗಿದೆ. ಈಗಾಗ್ಲೇ ಮಂಡ್ಯಕ್ಕೆ ಪಂಕಜ್‍ಕುಮಾರ್ ಸಿಂಗ್, ಹೇಮಂತ್ ಹಿಂಗೋನಿಯಾ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಹೇಳಿಕೆಯನ್ನು ಕೇಳದೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ: ಜಗದೀಶ್ ಶೆಟ್ಟರ್ ಪ್ರಶ್ನೆ

    ಹೇಳಿಕೆಯನ್ನು ಕೇಳದೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ: ಜಗದೀಶ್ ಶೆಟ್ಟರ್ ಪ್ರಶ್ನೆ

    ಹುಬ್ಬಳ್ಳಿ: ಸಂತೋಷ್ ಅವರ ಹೇಳಿಕೆಯನ್ನು ಕೇಳದೇ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

    ಡಿಎನ್‍ಎ ನೋಡಿ ಪಕ್ಷದ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿಕೆ ವಿಚಾರದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಅದನ್ನು ಕೇಳದೇ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಪಾಕಿಸ್ತಾನ ಏಜೆಂಟರಿದ್ದಂತೆ. ಅವರಿಗೆ ಭಾರತಕ್ಕಿಂತ ಪಾಕಿಸ್ತಾನದ್ದೇ ಹೆಚ್ಚಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಎಲ್ಲ ಭಾಗದಲ್ಲಿಯೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹೈದರಾಬಾದ್ ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಈ ರಾಜ್ಯದಲ್ಲಿ ಮ್ಯಾಜಿಕ್ ರೀತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಹೇಗೆ: ಬಿ.ಎಲ್ ಸಂತೋಷ್ ಪ್ರಶ್ನೆ

    ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಧರ್ಮದ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಮುಂಚೆ ಧರ್ಮವನ್ನು ಒಡೆಯಲು ಹೋದವರು ಈಗ ಎಲ್ಲ ಒಂದೇ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ವಿನಯ ಕುಲಕರ್ಣಿಗೆ ಟಾಂಗ್ ನೀಡಿದ್ರು.

    ಕಳೆದ ವಿಧಾನಸಬಾ ಚುನಾವಣೆಯಲ್ಲಿ ಪೆಟ್ಟು ತಿಂದ ಮೇಲೆ ಈಗ ಹೋರಾಟ ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿಕೆಶಿ ಕ್ಷಮೆ ಕೇಳಿದ ಮೇಲೆ ಎಂ.ಬಿ.ಪಾಟೀಲ್ ಹಾಗೂ ಡಿಕೆಶಿ ಮಧ್ಯೆ ಜಟಾಪಟಿ ನಡೆದಿದೆ. ಧಾರವಾಡ ಅಭ್ಯರ್ಥಿ ಹೋರಾಟ ಕೈಬಿಟ್ಟಿದ್ದೇವೆ ಎಂದರೆ ಎಂ.ಬಿ ಪಾಟೀಲ್ ಅವರು ಕುಲಕರ್ಣಿಯನ್ನು ಪ್ರಶ್ನೆ ಮಾಡಬೇಕಿದೆ. ಲಿಂಗಾಯತ ಧರ್ಮದ ವಿಚಾರವಾಗಿ ಹೋರಾಟ ಮಾಡಿದ ಕಾಂಗ್ರೆಸ್‍ನವರು ಇದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ರು.

    ಧಾರವಾಡ ಕ್ಷೇತ್ರಕ್ಕೆ ವಿನಯ ಕುಲಕರ್ಣಿಯವರ ಕೊಡುಗೆ ಏನಿದೆ ಎಂದು ಮರು ಪ್ರಶ್ನೆ ಹಾಕಿದ ಶೆಟ್ಟರ್, ಧರ್ಮ ರಾಜಕಾರಣ ಮಾಡುವುದನ್ನ ಬಿಡಿ, ಕ್ಷೇತ್ರದ ಜನತೆಗೆ ಎಲ್ಲವೂ ಗೊತ್ತಿದೆ. ಮಹಾಮೈತ್ರಿ ಕೂಟ ಮೂರಾಬಟ್ಟೆಯಾಗಿರುವ ಕೂಟವಾಗಿದೆ ಅಂದ್ರು.

    ಇದೇ ವೇಳೆ ಐಟಿ ಇಲಾಖೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಜಾವಾಬ್ದಾರಿ ಹೇಳಿಕೆಗಳನ್ನ ನೀಡುವುದು ನಿಲ್ಲಿಸಬೇಕು. ಹೈಕೋರ್ಟ್ ಆದೇಶದ ಪ್ರಕಾರ ವಿನಯ ಕುಲಕರ್ಣಿಯವರ ಮೇಲೆ ಕೇಸ್ ದಾಖಲಾಗಿದೆ. ಇದರಲ್ಲಿ ಬಿಜೆಪಿಯವರ ಕೈವಾಡವಿದೆ ಎನ್ನುವುದು ಸುಳ್ಳು ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಗರಂ ಆದ್ರು. ಇದನ್ನೂ ಓದಿ: ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್‍ವೈ

    ಹುಬ್ಬಳ್ಳಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಜೋಶಿ ಸ್ಪರ್ಧಿಸಿದ್ರೆ, ಮೈತ್ರಿ ಅಬ್ಯರ್ಥಿಯಾಗಿ ವಿನಯ್ ಕುಲಕರ್ಣಿ ಕಣದಲ್ಲಿದ್ದಾರೆ.

  • ಇವಿಎಂ ಒಡೆದು ಹಾಕಿದ ಅಭ್ಯರ್ಥಿ!

    ಇವಿಎಂ ಒಡೆದು ಹಾಕಿದ ಅಭ್ಯರ್ಥಿ!

    ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೇ ಇವಿಎಂ ಒಡೆದು ಹಾಕಿದ ಘಟನೆ ಅನಂತರಪುರ ಜಿಲ್ಲೆಯ ಗುತ್ತಿಯಲ್ಲಿ ನಡೆದಿದೆ.

    ಜನಸೇನಾ ಪಾರ್ಟಿ ಅಭ್ಯರ್ಥಿ ಮಧುಸೂದನ್ ಗುಪ್ತಾನೇ ಮತ ಯಂತ್ರವನ್ನು ಪೀಸ್ ಪೀಸ್ ಮಾಡಿರುವ ಅಭ್ಯರ್ಥಿಯಾಗಿದ್ದಾರೆ. ಪೋಲಿಂಗ್ ಬಾಕ್ಸ್ ಗೆ ಎಂಪಿ ಅಥವಾ ಎಂಎಲ್‍ಎ ಎಂದು ಪೋಸ್ಟ್ ಅಂಟಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗುಪ್ತಾ, ಇವಿಎಂ ಒಡೆದು ಹಾಕುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

    ಸಾವಿರಾರು ಸಂಖ್ಯೆಯಲ್ಲಿ ಜನ ಮತದಾನ ಮಾಡಲು ಬಂದಿದ್ದಾರೆ. ಆದ್ರೆ ಒಬ್ಬ ಪೊಲೀಸ್ ಸಿಬ್ಬಂದಿಯೂ ಇಲ್ಲದೇ ಜನ ಪರದಾಡಿದ್ದಾರೆ. ಈ ವೇಳೆ ಮಧುಸೂದನ್ ಗುಪ್ತಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು. ಸದ್ಯ ಆಂಧ್ರ ಪ್ರದೇಶದ ಪೊಲೀಸರು ಗುಪ್ತಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಆಂಧ್ರದ ವಿಜಯನಗರ ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಅಶೋಕ್ ಗಜಪತಿರಾಜು, ವಿಶಾಖಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುರಂದರೇಶ್ವರಿ ಕಣದಲ್ಲಿದ್ದಾರೆ.

    ಐಇಡಿ ಬ್ಲಾಸ್ಟ್!:
    ಮತದಾನದ ದಿನ ಬೆಳ್ಳಂಬೆಳಗ್ಗೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಛತ್ತೀಸ್‍ಗಡದ ನಾರಾಯಣಪುರದಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

    ಮೊದಲ ಹಂತದ ಮತದಾನ:
    ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಆರಂಭಗೊಂಡಿದ್ದು, 18 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

    ಒಂದು ಲಕ್ಷದ 66 ಸಾವಿರ ಮತಗಟ್ಟೆಗಳಲ್ಲಿ 1961 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದದಲ್ಲಿ ನಿರ್ಧಾರ ಆಗಲಿದೆ. ಕ್ಷೇತ್ರವಾರು ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದ್ದು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ನಲ್ಲಿ ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆ, ಉತ್ತಾರಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಏಳರಿಂದ ಸಂಜೆ ಐದು ಗಂಟೆ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಮಣಿಪುರ, ನಾಗಲ್ಯಾಂಡ್, ಮೇಘಾಲಯ ದಲ್ಲಿ ಬೆಳಗ್ಗೆ ಏಳರಿಂದ ಸಂಜೆ ನಾಲ್ಕು ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಸರಕಾರದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ಸುರಕ್ಷತೆಗೆ ನೇಮಕ ಮಾಡಲಾಗಿದೆ.

  • ರಾಜ್ಯ ಸರ್ಕಾರದ ವಿರುದ್ಧ ರತ್ನಪ್ರಭಾ ಗಂಭೀರ ಆರೋಪ

    ರಾಜ್ಯ ಸರ್ಕಾರದ ವಿರುದ್ಧ ರತ್ನಪ್ರಭಾ ಗಂಭೀರ ಆರೋಪ

    ಕಲಬುರಗಿ: ರಾಜ್ಯ ಸರ್ಕಾರದ ವಿರುದ್ಧ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಗಂಭೀರ ಆರೋಪ ಮಾಡಿದ್ದಾರೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ದಲಿತರ ಪರ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಿಜಾಂಶದಲ್ಲಿ ದಲಿತರನ್ನು ಕಂಡರೆ ಎರಡೂ ಪಕ್ಷದ ನಾಯಕರ ಮನಸ್ಸಿನಲ್ಲಿಯೂ ದ್ವೇಷವಿದೆ. ನಾನು ದಲಿತೆ ಎಂಬ ಕಾರಣಕ್ಕೆ ನನ್ನನ್ನು ತುಳಿಯಲಾಗಿದೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ರು.

    2014ರಲ್ಲಿಯೇ ನಾನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬೇಕಿತ್ತು. ಆದ್ರೆ ನನಗೆ ಸುಳ್ಳು ಹೇಳಿ ಮೋಸ ಮಾಡಿ ಆ ಹುದ್ದೆ ನೀಡಲಿಲ್ಲ. ಕಾಟಾಚಾರ ಎನ್ನುವಂತೆ ಚುನಾವಣೆ ಇರುವಾಗ 4 ತಿಂಗಳ ಮಟ್ಟಿಗೆ ಸಿಎಸ್ ಹುದ್ದೆಗೆ ನೇಮಿಸಿದ್ದರು. ಈ ಮೂಲಕ ಹಿಂದಿನ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

  • ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ಇವೆಲ್ಲಾ ನಂಗೆ ಗೊತ್ತಿಲ್ಲ- ನಿಖಿಲ್

    ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ಇವೆಲ್ಲಾ ನಂಗೆ ಗೊತ್ತಿಲ್ಲ- ನಿಖಿಲ್

    ಮೈಸೂರು: ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗಿಪನ್ ಚಾಲೆಂಜ್ ನಂಗೆ ಗೊತ್ತಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಅಭಿವೃದ್ಧಿ ಕುರಿತ ನಿಖಿಲ್ ಚಾಲೆಂಜ್ ಸ್ವೀಕರಿಸಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಂಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

    ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದಾರೆ.

    ಚಾಲೆಂಜ್ ಏನು? 
    ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಇದಕ್ಕೆ Any time, any where..I am ready ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.

  • ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!

    ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!

    ಮೈಸೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಕೆ.ಆರ್.ನಗರದಲ್ಲಿ ಪ್ರಚಾರ ನಡೆಸಿದ್ದು, ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮೂರು ನಿಂಬೆ ಹಣ್ಣು ನೀಡಿದ್ದಾರೆ.

    ಹೌದು. ಜೆಡಿಎಸ್ ಕಾರ್ಯಕರ್ತರು ಮೂರು ನಿಂಬೆಹಣ್ಣನ್ನು ಸಚಿವ ಸಾರಾ ಮಹೇಶ್ ಕೈಗೆ ಕೊಟ್ಟು ನಿಖಿಲ್‍ಗೆ ಕೊಡಿ ಎಂದ ಹೇಳಿದ್ದಾರೆ. ಹಾಗೆಯೇ ಸಚಿವರು ನಿಂಬೆಹಣ್ಣನ್ನು ನಿಖಿಲ್ ಕೈಗಿತ್ತಿದ್ದಾರೆ. ಈ ವೇಳೆ ನಿಖಿಲ್, ಹೇ ನಂಗೆ ಯಾಕೆ ಅಣ್ಣ ನಿಂಬೆ ಹಣ್ಣು. ನಾನಿದನ್ನು ನಂಬಲ್ಲ ಎಂದು ಹೇಳಿ ಬೇಡ ಕೊಟ್ಟು ಬಿಡಣ್ಣ ಅಂದಿದ್ದಾರೆ. ಹೀಗಾಗಿ ಸಚಿವರು ನಿಂಬೆ ಹಣ್ಣನ್ನು ತಕ್ಷಣವೇ ಕೆಳಗೆ ಇದ್ದ ಜೆಡಿಎಸ್ ಕಾರ್ಯಕರ್ತರಿಗೆಯೇ ವಾಪಸ್ ನೀಡಿದರು.

    ಕೆ.ಆರ್.ನಗರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ `ನೀವ್ ನಮ್ಮೂರಿಗೆ ಬರಲೇ ಬೇಕು. ಊರಿನ ಗೇಟ್‍ಗೆ ಬಂದ್ರೆ ಆಗಲ್ಲ. ಊರಿನ ಒಳಗಡೆ ಬರಲೇ ಬೇಕು’ ಎಂದು ನಿಖಿಲ್ ಕಾರು ಎದುರೇ ಜೆಡಿಎಸ್ ಕಾರ್ಯಕರ್ತರು ಕೂಗಾಡಿದ್ರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿಖಿಲ್ ಗ್ರಾಮಕ್ಕೆ ಹೋದರು. ಈ ವೇಳೆ ದಣಿವರಿಸಿಕೊಳ್ಳಲು ನಿಖಿಲ್‍ಗೆ ಕಾರ್ಯಕರ್ತರು ಎಳನೀರು ಕೊಟ್ಟರು.

    ಡಿಬಾಸ್ ಘೋಷಣೆ:
    ಮಂಡ್ಯ ಜಿಲ್ಲೆ ಕೆ ಆರ್ ನಗರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಿಖಿಲ್ ಪ್ರಚಾರ ಮುಗಿಸಿ ವಾಪಸ್ ತೆರಳುವ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಘೋಷಣೆ ಕೂಗಿದ್ರು. ನಿಖಿಲ್ ವಾಹನವನ್ನೇ ಹಿಂಬಾಲಿಸಿ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದು, ಈ ವೇಳೆ ಪೊಲೀಸರು ದರ್ಶನ್ ಅಭಿಮಾನಿಗಳನ್ನ ಚದುರಿಸಿದ ಘಟನೆಯೂ ನಡೆಯಿತು.

    ಕೆ.ಆರ್.ನಗರ ಪಟ್ಟಣ ಪ್ರದೇಶದಲ್ಲಿ ನಡೆದ ಪ್ರಚಾರದ ವೇಳೆ ನಿಖಿಲ್‍ಗೆ ಸಚಿವ ಸಾ.ರಾ ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಎಐಸಿಸಿ ವಕ್ತಾರೆ ಐಶ್ವರ್ಯ ಮಹಾದೇವ್ ಸಾಥ್ ನೀಡಿದ್ರು.

  • ಸುಮಲತಾ ಬೆಂಬಲಕ್ಕೆ ನಿಲ್ಲಲ್ಲ, ವೋಟ್ ಹಾಕಲ್ಲ – ಮಂಡ್ಯ ಮುಸ್ಲಿಮರಿಂದ ಬಹಿರಂಗ ಹೇಳಿಕೆ

    ಸುಮಲತಾ ಬೆಂಬಲಕ್ಕೆ ನಿಲ್ಲಲ್ಲ, ವೋಟ್ ಹಾಕಲ್ಲ – ಮಂಡ್ಯ ಮುಸ್ಲಿಮರಿಂದ ಬಹಿರಂಗ ಹೇಳಿಕೆ

    ಮಂಡ್ಯ: ಜಿಲ್ಲೆಯ ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ ಎಂದು ಮಂಡ್ಯ ಮುಸ್ಲಿಮರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮುಸ್ಲಿಂ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪ್ರಧಾನಿಯಾಗಿರುವ ನರೇಂದ್ರ ಮೋದಿಯವರೇ ಅಧಿಕೃತವಾಗಿ ಹೇಳಿದ್ದಾರೆ. ಸುಮಲತಾ ಅವರಿಗೆ ಆಶೀರ್ವಾದ ಮಾಡಿ. ಅಲ್ಲಿಗೆ ಅವರು ಬಿಜೆಪಿ ಅಭ್ಯರ್ಥಿ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಗೆ ನಾವು ವೋಟ್ ಹಾಕಲ್ಲ ಎಂದು ಹೇಳಿದ್ದಾರೆ.

    ಅಂಬರೀಶ್ ಅಭಿಮಾನಿಗಳಾಗಿರುವ ನಮಗೆ ಮೊದಲೇ ಗೊಂದಲ ಇತ್ತು. ಅಣ್ಣ ಚಿರಸ್ಮರಣೆ ಆಗಿದ್ದರೂ ಕೂಡ ಅವರು ನಮ್ಮ ಮನದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಅವರ ಮುಖಾಂತರ ನಾವು ಸುಮಲತಾ ಅವರಿಗೆ ಬೆಂಬಲ ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಇದೀಗ ಮೋದಿ ಕೊಟ್ಟಿರುವ ಹೇಳಿಕೆ ಗಮನಿಸಿದ್ರೆ ಅವರು ಬಿಜೆಪಿ ಕ್ಯಾಂಡಿಡೇಟ್ ಎಂದು ಖಚಿತವಾಗಿದೆ ಅಂದ್ರು. ಇದನ್ನೂ ಓದಿ: ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮುಸ್ಲಿಂ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಾರೆ. ಜಾತಿ ರಾಜಕೀಯ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಸ್ಲಿಂ ಜನಾಂಗ ಬಿಜೆಪಿಗೆ ವೋಟ್ ಹಾಕಲ್ಲ. ಇಲ್ಲಿ ನಾವು ವ್ಯಕ್ತಿ ನೋಡಲ್ಲ ನಾವು ಪಕ್ಷ ನೋಡುತ್ತೇವೆ. ನಮಗೆ ಮೊದಲು ಬೇಕಾಗಿರೋದು ದೇಶ, ನಂತರ ಪಕ್ಷ, ಆ ಬಳಿಕ ವ್ಯಕ್ತಿ ವಿನಃ ವ್ಯಕ್ತಿಯಿಂದ ಪಕ್ಷ ನೋಡಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ

    ಸುಮಲತಾ ಪಕ್ಷೇತರ ಆದ್ರೂ ನರೇಂದ್ರ ಮೋದಿಯವರೇ ಆಶೀರ್ವಾದ ಮಾಡಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ನಾವೇನು ದಡ್ಡರಲ್ಲ. ಯಾರು ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳುವಷ್ಟು ನಮಗೆ ಸಾಮಥ್ರ್ಯ ಇದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಸುಮಲತಾಗೆ ಬೆಂಬಲ ನೀಡಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ.

    ಒಟ್ಟಿನಲ್ಲಿ ಪ್ರಧಾನಿಯವರ ಸುಮಲತಾರನ್ನು ಬೆಂಬಲಿಸಿ ನನಗೆ ಶಕ್ತಿ ನೀಡಿ ಎಂಬ ಹೇಳಿಕೆಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆದ್ರಾ ಉಲ್ಟಾ ಅನ್ನೊ ಪ್ರಶ್ನೆ ಎದ್ದಿದೆ.  ಇದನ್ನೂ ಓದಿ: ನನಗೆ ಹೇಳೋಕೆ ಪದಗಳೇ ಬರುತ್ತಿಲ್ಲ, ಪ್ರಧಾನಿಯವರಿಗೆ ಹೃದಯಪೂರ್ವಕ ಥ್ಯಾಂಕ್ಸ್: ಸುಮಲತಾ