Tag: loksabha elections2019

  • ಕಾಂಗ್ರೆಸ್ ಬೆನ್ನಿಗೆ ಇರೀತಾ ದೋಸ್ತಿ ಜೆಡಿಎಸ್ – ಬಿಜೆಪಿಗೆ ವೋಟ್ ಹಾಕುವಂತೆ ಹಣ ಹಂಚಿದ್ರಾ ಜೆಡಿಎಸ್ ಮುಖಂಡ!

    ಕಾಂಗ್ರೆಸ್ ಬೆನ್ನಿಗೆ ಇರೀತಾ ದೋಸ್ತಿ ಜೆಡಿಎಸ್ – ಬಿಜೆಪಿಗೆ ವೋಟ್ ಹಾಕುವಂತೆ ಹಣ ಹಂಚಿದ್ರಾ ಜೆಡಿಎಸ್ ಮುಖಂಡ!

    ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.

    ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.

    ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಮತ ಹಾಕುವಂತೆ ಹೇಳಿ ಮಂಜುನಾಥ್ ಅವರು ಪ್ರತಿ ಬೂತ್‍ಗೆ 35 ಸಾವಿರ ರೂಪಾಯಿ ಹಂಚಿದ್ದಾರೆ. ಮುಖಂಡನ ಮಾತು ಕೇಳಿ ಜನರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಾಗಿ ಚಾಮರಾಜನಗರದ ಕಾಂಗ್ರೆಸ್ ಆರ್.ಧ್ರುವನಾರಾಯಣ್‍ಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.

    ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ನನ್ನ ಮೇಲೆ ಸುಳ್ಳು ಆರೋಪ ಕೇಳಿಬರುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಅವರು ಹನೂರು ಅಸೆಂಬ್ಲಿಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದರು.

  • ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.

    ವಿಜೇಂದರ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷ ಸೋಮವಾರ ಘೋಷಣೆ ಮಾಡಿದೆ. ಹೀಗಾಗಿ ಬಿಜೆಪಿಯ ರಮೇಶ್ ಬಿಧುರಿ ಹಾಗೂ ಆಮ್ ಆದ್ಮಿ ಪಕ್ಷದ ರಾಘವ್ ಚಂದ್ರ ವಿರುದ್ಧ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

    ಈ ಬಗ್ಗೆ ವಿಜೇಂದರ್ ಕೂಡ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷ ಕೊಟ್ಟ ಅವಕಾಶ ಹಾಗೂ ಜವಾಬ್ದಾರಿಗಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    20 ವರ್ಷಗಳ ವೃತ್ತಿಪರ ಬಾಕ್ಸಿಂಗ್‍ನಲ್ಲಿ ಸದಾ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದ್ದೇನೆ. ಇದೀಗ ದೇಶದ ಜನರಿಗಾಗಿ ಕೊಡುಗೆ ಹಾಗೂ ಸೇವೆ ಸಲ್ಲಿಸಲು ಒಳ್ಳೆಯ ಸಂದರ್ಭ ಒದಗಿಬಂದಿದೆ. ಒಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಹೊಸ ಜವಾಬ್ದಾರಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಧುರಿ ಅವರು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದರು. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ ನಡೆಯಲಿದ್ದು, 23ಕ್ಕೆ ಫಲಿತಾಂಶ ಹೊರಬೀಳಲಿದೆ.

  • ವ್ಯಕ್ತಿ ಪೂಜೆ ಒಳ್ಳೆಯದಲ್ಲವೆಂದ್ರು ಕಲ್ಲಡ್ಕ ಭಟ್- ಮೋದಿ ವಿರುದ್ಧ ತಿರುಗಿಬಿತ್ತಾ ಆರ್‌ಎಸ್‌ಎಸ್?

    ವ್ಯಕ್ತಿ ಪೂಜೆ ಒಳ್ಳೆಯದಲ್ಲವೆಂದ್ರು ಕಲ್ಲಡ್ಕ ಭಟ್- ಮೋದಿ ವಿರುದ್ಧ ತಿರುಗಿಬಿತ್ತಾ ಆರ್‌ಎಸ್‌ಎಸ್?

    ಮಡಿಕೇರಿ: ಮಂಗಳೂರಲ್ಲಿ ಏ.18ರಂದು ಮತದಾನ ನಡೆದಿದೆ. ಈ ಸಲ ಮಂಗಳೂರಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಲೆ ಇದ್ದಿದ್ರಿಂದ ಮೋದಿಯವರೇ ಬಿಜೆಪಿ ಪ್ರಚಾರದ ಟಾಪಿಕ್ ಆಗಿದ್ದರು. ಅವರನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡಿ ಮತ ಕೇಳಿತ್ತು.

    ಆದ್ರೆ ಈ ಬಗ್ಗೆ ಶನಿವಾರ ಮಡಿಕೇರಿಯಲ್ಲಿ ಮತನಾಡಿರುವ ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ಅಭ್ಯರ್ಥಿಗಳು ಬರೀ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣಾ ಯಾಚನೆ ನಡೆಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮೋದಿ ಅವರ ಸಾಧನೆ ಹೆಸರಿನಲ್ಲಿ ಮತ ಕೇಳುವುದಕ್ಕಿಂತ ಆಯಾ ಕ್ಷೇತ್ರದ ಅಭ್ಯರ್ಥಿ ತಾನು ಮಾಡಿದ ಹಾಗೂ ಮಾಡಲಿರುವ ಸಾಧನೆಯನ್ನು ಹೇಳಿಕೊಂಡು ಮತ ಕೇಳುವುದು ಸೂಕ್ತ. ಮೋದಿ ಅವರ ಸಹಕಾರದಿಂದ ತಾನು ಕ್ಷೇತ್ರದ ಜನತೆಗಾಗಿ ಮಾಡಿರುವ ಸಾಧನೆ ಏನು ಎನ್ನುವುದನ್ನು ಅಭ್ಯರ್ಥಿಗಳು ಬಿಂಬಿಸಿಕೊಳ್ಳುವ ಮೂಲಕ ಮತ ಯಾಚಿಸಬೇಕು ಎಂದರು.

    ಓರ್ವ ವ್ಯಕ್ತಿಯ ಸಾಧನೆಗಳನ್ನು ಬಿಂಬಿಸಿಕೊಂಡು ಮತ ಕೇಳುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ವ್ಯಕ್ತಿ ಪೂಜೆ ನಮ್ಮ ಸಂಸ್ಕೃತಿಯಲ್ಲ ಎಂದೂ ಹೇಳಿದರು.

    ಬಿಜೆಪಿಯಲ್ಲಿ ಮೋದಿ ಅವರನ್ನೇ ಮುಂದಿನ ಪ್ರಧಾನಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಮಹಾಘಟಬಂಧನ್ ನಲ್ಲಿ ರಾಹುಲ್ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ ಸೇರಿದಂತೆ ಯಾರು ಪ್ರಧಾನಿ ಎಂದೇ ಬಿಂಬಿಸುತ್ತಿಲ್ಲ. ಇದು ಮಹಾಘಟಬಂಧನ್ ನಾಯಕರ ಹತಾಶೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಟೀಕಿಸಿದರು.

    ಒಟ್ಟಿನಲ್ಲಿ ಪ್ರಭಾಕರ್ ಭಟ್ ಹೇಳಿಕೆಯಿಂದ ಲೋಕ ಸಮರದ ಹೊತ್ತಲ್ಲಿಯೇ ಆರ್‍ಎಸ್‍ಎಸ್ ಮೋದಿ ವಿರುದ್ಧ ತಿರುಗಿಬಿತ್ತಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

  • ಬಿಜೆಪಿಗೆ ಬಂದಿದ್ದು ತಪ್ಪಾಗಿದೆ ಹೇಳಿಕೆಗೆ ಜಾಧವ್ ಸ್ಪಷ್ಟನೆ

    ಬಿಜೆಪಿಗೆ ಬಂದಿದ್ದು ತಪ್ಪಾಗಿದೆ ಹೇಳಿಕೆಗೆ ಜಾಧವ್ ಸ್ಪಷ್ಟನೆ

    ಕಲಬುರಗಿ: ಬಿಜೆಪಿ ಪಕ್ಷಕ್ಕೆ ಬಂದಿರುವುದು ತಪ್ಪಾಗಿದೆ ಎಂಬ ಹೇಳಿಕೆಗೆ ಅಭ್ಯರ್ಥಿ ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.

    ಗಂಡ ಹೆಂಡ್ತಿ ಮದುವೆಯಾದ ಬಳಿಕ ಸೆಟ್ ಆಗಲು ಸ್ವಲ್ಪ ದಿನ ಬೇಕಾಗುತ್ತದೆ. ಹೀಗಾಗಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ರು.

    ನಾನು ತುಂಬಾ ಸಂತೋಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನೀವು 10 ಸಲ ಬೇಕಾದ್ರೆ ರಿವೈಂಡ್ ಮಾಡಿ ನೋಡಿ. ನಾನು ಬಿಜೆಪಿ ಸೇರಿ ತಪ್ಪು ಮಾಡಿದ್ದೇನೆ ಎಂದು ಎಲ್ಲಿ ಕೂಡ ಹೇಳಿಲ್ಲ. ನಾನು ಇನ್ನು ಪಕ್ಷದಲ್ಲಿ ಸೆಟ್ ಆಗುತ್ತಿದ್ದೇನೆ ಎಂದು ಮಾತ್ರ ಹೇಳಿದ್ದೇನೆ ಅಂದ್ರು.

    ಮೂರು ದಿನದ ಹಿಂದೆ ಖುದ್ದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಹ ಭಾಷಣದ ಭರಾಟೆಯಲ್ಲಿ ಎಡವಿದ್ದರು. ರಾಜೀವ್ ಗಾಂಧಿ ತುಂಡು ತುಂಡಾಗಿ ಹತ್ಯೆ ಎಂದು ಹೇಳುವ ಬದಲು ರಾಹುಲ್ ಗಾಂಧಿ ಹತ್ಯೆ ಎಂದು ಹೇಳಿದ್ದರು. ಸ್ವಲ್ಪ ಕಮ್ಯೂನಿಕೇಷನ್ ಗ್ಯಾಪ್‍ನಿಂದ ಹೀಗಾಗುತ್ತದೆ ಎಂದು ಹೇಳುವ ಮೂಲಕ ತನ್ನ ತಪ್ಪನ್ನು ಸಮರ್ಥಿಸಿಕೊಂಡರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

  • ಮೋದಿ ದೇವರ ಭಕ್ತ, ರಾಹುಲ್ ಎಲೆಕ್ಷನ್ ಭಕ್ತ- ಬಿ.ಎಲ್ ಸಂತೋಷ್

    ಮೋದಿ ದೇವರ ಭಕ್ತ, ರಾಹುಲ್ ಎಲೆಕ್ಷನ್ ಭಕ್ತ- ಬಿ.ಎಲ್ ಸಂತೋಷ್

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ದೇವರ ಭಕ್ತರಾಗಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಭಕ್ತ ಎಂದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಶಕ್ತಿ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದೇಟಿಗೆ ಎರಡು ಹಕ್ಕಿಯನ್ನ ಹೊಡೆಯಲು ಕರೆ ನೀಡಿದರು. ಅಲ್ಲದೆ ನೀವು ಒಂದು ಮತ ಹಾಕಿದ್ರೆ ಎರಡು ಸರ್ಕಾರ ಬರುತ್ತದೆ. ನೀವು ಒಂದು ಮತ ಹಾಕಿದ್ರೆ ಡೈರೆಕ್ಟ್ ಮೋದಿ ಸರ್ಕಾರ ಸಿಗತ್ತದೆ. ಇನ್ನೊಂದು ವಿಧಾನಸಭೆಯಲ್ಲಿ ನಮ್ಮ ಸರ್ಕಾರ ಸಿಗತ್ತದೆ ಎಂದು ತಿಳಿಸಿದ್ದಾರೆ.

    ನೀವು ಸಂಗಣ್ಣ ಕರಡಿ 2 ಲಕ್ಷ ಮತಗಳ ಆಂತರದಿಂದ ಗೆಲ್ಲಿಸಬೇಕು. ಕರ್ನಾಟಕದಲ್ಲಿ ಒಂದು ವೋಟಿಗೆ ಎರಡು ಸರ್ಕಾರ ಸ್ಕೀಮ್ ಜಾರಿಗೆ ತರುತ್ತಿದ್ದೇವೆ. ಸಾಲಮನ್ನಾ ಹೆಸರಲ್ಲಿ ನೋಟಿಸ್ ಕೊಡುವ ಸರ್ಕಾರವನ್ನ ಬೀಳಿಸಬೇಕು ಎಂದು ಸಂತೋಷ್ ಕರೆ ನೀಡಿದರು.

    ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದ್ರೆ ಜೋಕರ್ ಹೋದಂಗೆ ಆಗುತ್ತದೆ. ಗಂಡ ಇದ್ರೂ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದಿನ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಎಲೆಕ್ಷನ್ ಗಾಗಿ ಹಣೆ ಮೇಲೆ ತಿಲಕ ಕಾಣ್ತಿದೆ ಎಂದು ವ್ಯಂಗ್ಯವಾಡಿದ್ರು.

  • ಜಗದೀಶ್ ಶೆಟ್ಟರ್ ಹೇಳಿಕೆ ನನಗೆ ನೋವುಂಟು ಮಾಡಿದೆ – ಎಚ್‍ಡಿಕೆ

    ಜಗದೀಶ್ ಶೆಟ್ಟರ್ ಹೇಳಿಕೆ ನನಗೆ ನೋವುಂಟು ಮಾಡಿದೆ – ಎಚ್‍ಡಿಕೆ

    ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ಹೇಳಿಕೆಯಿಂದ ನನಗೆ ನೋವುಂಟಾಗಿದೆ. ಅವರು ನನ್ನ ತಾಯಿಯನ್ನು ರಾಜಕೀಯಕ್ಕೆ ಎಳೆದಿದ್ದಾರೆ. ಚೆನ್ನಮ್ಮ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಿ ಎಂದಿದ್ದಾರೆ. ಈ ಮೂಲಕ ನನ್ನ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹಾಗೂ ಕುಮಾರಸ್ವಾಮಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಟೀಕೆ ಆರೋಪಗಳನ್ನು ನಾನು ಗಮನಿಸಿದ್ದೇನೆ. ಅವರಿಗೆ ಮತದಾರರು ಮೇ 23 ರಂದು ಉತ್ತರ ಕೊಡಲಿದ್ದಾರೆ. ಜಗದೀಶ್ ಶೆಟ್ಟರ್ ಅವರು ನಮ್ಮ ತಾಯಿಯನ್ನು ರಾಜಕೀಯಕ್ಕೆ ಎಳೆಯುವ ಮೂಲಕ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ದೇಶದ ಪ್ರಧಾನಿ ತಮ್ಮ ತಪ್ಪು ಮಾಹಿತಿಯಿಂದ ಮಾತನಾಡಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಜನ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಶುಕ್ರವಾರ ಅಸಮರ್ಥ ಸರ್ಕಾರ ಎಂದಿದ್ದಾರೆ. ನಮ್ಮದು ಸಮರ್ಥ ಸರ್ಕಾರ ಎಂದು ಮೋದಿ ಅವರು ಮೊದಲು ತಿಳಿದುಕೊಳ್ಳಲಿ. ನಮ್ಮ ಸರ್ಕಾರ ಉತ್ತರ ಕರ್ನಾಟಕದ ಜನ ಗುಳೆ ಹೋಗದಿರಲಿ ಎಂದು ಹಲವಾರು ಯೋಜನೆಗಳನ್ನು ತಂದಿದೆ. ನರೇಗಾ ಯೋಜನೆಯ 1500 ಕೋಟಿ ರೂಪಾಯಿ ಹಣವನ್ನು ಕೊಟ್ಟಿಲ್ಲ. ಮೋದಿ ಸರ್ಕಾರ ದಿವಾಳಿ ಸರ್ಕಾರ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

    ಕೇಂದ್ರದ ನರೇಗಾ ಯೋಜನೆಯ ಹಣವನ್ನು ಕೊಟ್ಟಿದ್ದೇನೆ. ಬಾಗಲಕೋಟೆಯನ್ನು ನಾವೂ ನೋಡಿದ್ದೇವೆ. ನಾವು ಬಾಲಕೋಟ್ ನೋಡಿಲ್ಲ, ನೀವು ಮಾತ್ರ ಗಡಿಯನ್ನು ನೋಡಿದವರು. ಇವರೇ ಹೋಗಿ ಏರ್ ಸ್ಟ್ರೈಕ್, ಪಾಕಿಸ್ತಾನದಲ್ಲಿ ಯುದ್ಧ ಮಾಡಿದ ಹಾಗೆ ಮಾತನಾಡುತ್ತಾರೆ. ನಿಮ್ಮ ಸರ್ಕಾರಕ್ಕೆ ದೇಶದ ಜನರಿಗೆ ಉದ್ಯೋಗ ಕೊಡಲು ಆಗಲಿಲ್ಲ ಎಂದು ಕಿಡಿಕಾರಿದ್ರು.

    ಮಳವಳ್ಳಿ ಯೋಧನ ಕುಟುಂಬವನ್ನು ನೋಡಿ ನಾನು ಕಣ್ಣೀರು ಹಾಕಿದ್ದೇನೆ. ಕೆಲಸ ಸಿಗದೇ ಜನ ಸೈನ್ಯಕ್ಕೆ ಸೇರುತ್ತಾರೆ ಎಂದು ನಾ ಹೇಳಿದ್ದೆ. ಆದ್ರೆ ನನ್ನ ಮಾತನ್ನು ತಿರುಚಿ ಬೇರೆಯೇ ಹೇಳಿಕೆ ನೀಡುತ್ತಾರೆ. ಸಾಲ ಮನ್ನಾ ಬಗ್ಗೆ ಮೋದಿ ಮಾತನಾಡುತ್ತಾರೆ. ಧಾರವಾಡ ಜಿಲ್ಲೆಯೊಂದರಲ್ಲಿ 54 ಸಾವಿರ ಕುಟುಂಬಕ್ಕೆ ಸಾಲ ಮನ್ನಾ ಮಾಡಲಾಗಿದೆ. ನಾನು ಕಿಸಾನ್ ಸಮ್ಮನ್ ಯೋಜನೆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳುತ್ತಾರೆ. ರಾಜ್ಯ ಸರ್ಕಾರ ರೈತರ ಸಂಪೂರ್ಣ ಮಾಹಿತಿ ನೀಡಿದೆ. ನಾನು ಮೋದಿಯಂತೆ ದಾಖಲೆ ಇಲ್ಲದೆ ಮಾತನಾಡುವವನಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ರು.

  • ಚುನಾವಣೆ ಬಳಿಕ ಇವ್ರೆಲ್ಲಾ ಎಲ್ಲಿರ್ತಾರೆ ನೋಡ್ಬೇಕು – ಹೆಗ್ಡೆಗೆ ಎಚ್‍ಡಿಕೆ ಟಾಂಗ್

    ಚುನಾವಣೆ ಬಳಿಕ ಇವ್ರೆಲ್ಲಾ ಎಲ್ಲಿರ್ತಾರೆ ನೋಡ್ಬೇಕು – ಹೆಗ್ಡೆಗೆ ಎಚ್‍ಡಿಕೆ ಟಾಂಗ್

    ಕಾರವಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಈಗ ಎಲ್ಲಿದ್ದೀಯಪ್ಪಾ ಆನಂದ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರ್ತಾರೆ ನೋಡಬೇಕು ಎಂದು ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ರು.

    ಕುಮುಟಾದಲ್ಲಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಗುರುವಾರ ಪ್ರಚಾರ ನಡೆಸಿದ ಸಿಎಂ ಕುಮಾರಸ್ವಾಮಿ, ಅನಂತ್‍ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಹಿಂದೂ ಧರ್ಮವನ್ನ ಉಳಿಸುವವನು ನಾನೇ ಎಂದು ಹೇಳುವ ವ್ಯಕ್ತಿ ಅನಂತ್ ಕುಮಾರ್, ದೇವಸ್ಥಾನಕ್ಕೆ ಹೋದಾಗ ನಿಂಬೆಹಣ್ಣು ಕೊಡ್ತಾರೆಂದ್ರು. ಏ.18ರ ನಂತರ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಈಗ ಎಲ್ಲಿದ್ದೀಯಪ್ಪಾ ಆನಂದ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರ್ತಾರೆ ನೋಡಬೇಕು. ಮೇ.23ರ ನಂತರ ಎಲ್ಲಿದ್ದೀಯಪ್ಪಾ ಅನಂತ್‍ಕುಮಾರ್ ಎಂದು ಕೇಳಬೇಕಾಗುತ್ತದೆ ಎಂದು ಅನಂತ್‍ಕುಮಾರ್ ಹೇಳಿಕೆಗೆ ಟಾಂಗ್ ನೀಡಿದರು.

    ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದು ಇದೇ ವೇಳೆ ಎಚ್‍ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ಕೇವಲ ಸುಮಲತಾ, ಮಂಡ್ಯವನ್ನ ಮಾತ್ರ ತೋರಿಸುತ್ತಿದ್ದಾರೆ. ಹೀಗಾಗಿ ಕಳೆದೆರಡು ತಿಂಗಳಿನಿಂದ ನರೇಂದ್ರ ಮೋದಿ ಕಳೆದು ಹೋಗಿದ್ದಾರೆ. ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡು ಮತ ಕೇಳಲು ಹೋಗಬೇಕು ಎಂದು ಗರಂ ಆದ್ರು.

     

  • ಸುಳ್ಳು ಸುದ್ದಿಗೆ ನಟ ಅಭಿಷೇಕ್ ಅಂಬರೀಶ್ ಬೇಸರ

    ಸುಳ್ಳು ಸುದ್ದಿಗೆ ನಟ ಅಭಿಷೇಕ್ ಅಂಬರೀಶ್ ಬೇಸರ

    ಮಂಡ್ಯ: ತಮ್ಮ ವಿರುದ್ಧದ ಸುದ್ದಿ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಬಗ್ಗೆ ನಟ ಅಭಿಷೇಕ್ ಅಂಬರೀಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಸುಳ್ಳು ಸುದ್ದಿ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅಭಿಷೇಕ್, ಉದ್ದೇಶಪೂರ್ವಕವಾಗಿ ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವ ಬಗ್ಗೆ ನಾವು ಮೊದಲೇ ಜನರಿಗೆ ತಿಳಿಸಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಪ್ಲಾನ್ ಗಳು ನಡೆಯುತ್ತಲೇ ಇರುತ್ತವೆ. ಚುನಾವಣೆ ಮುಗಿದ ಮಾರನೇ ದಿನ(ಇಂದು) ಮಂಡ್ಯದ ಮಹಾವೀರ ಸರ್ಕಲ್‍ನಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯುತ್ತಾ ಕುಳಿತಿರುತ್ತೇನೆ. ಯಾರೂ ಬೇಕಾದ್ರು ಬಂದು ನನ್ನನ್ನು ಭೇಟಿ ಮಾಡಬಹುದು. ಆಗ ಸಿಂಗಾಪುರದಲ್ಲಿದ್ದೀನಾ, ಯುಎಸ್‍ಎನಲ್ಲಿದ್ದೇನಾ ಅಥವಾ ಮಂಡ್ಯದಲ್ಲೇ ಇದ್ದೇನಾ ಎಂಬುದನ್ನು ಜನನೇ ನೋಡಲಿ ಎಂದು ಹೇಳಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಟಿಕೆಟ್‍ನಲ್ಲಿ ನನ್ನ ಹೆಸರು ಕೂಡ ತಪ್ಪಿದೆ. ಒಟ್ಟಿನಲ್ಲಿ ಜನ ಯೋಚನೆ ಮಾಡಿ ಅವರಾಗಿಯೇ ತೀರ್ಮಾನ ಮಾಡಲಿ. ಜನರಲ್ಲಿ ಗೊಂದಲ ಮೂಡಿಸಲು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಅಭಿಷೇಕ್ ಆಕ್ರೋಶ ವ್ಯಕ್ತಪಡಿಸಿದರು.

    ಸುಳ್ಳು ಸುದ್ದಿ ಏನು?
    ಚುನಾವಣೆ ಮುಗಿದ ಬಳಿಕ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಏ. 19(ಇಂದು) ಸಿಂಗಾಪುರಕ್ಕೆ ಹೋಗುತ್ತಾರೆ. ಸಿಂಗಾಪರಕ್ಕೆ ತೆರಳಲು ಈಗಾಗಲೇ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎನ್ನಲಾದ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಮೈಸೂರು: ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಮತದಾನ ಜಾಗೃತಿಗಳು ಮೂಡಿ ಬಂದಿದೆ. ಆದ್ರೆ ಮೈಸೂರಿನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ದಂತ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕಿಟೆಕ್ ಡೆಂಟಲ್ ಕ್ಲಿನಿಕ್ ನಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.


    ಮೈಸೂರಿನ ಅನಿಫೌಂಡೇಶನ್ ವತಿಯಿಂದ ಈ ವಿಶಿಷ್ಟ ಅಭಿಯಾನ ನಡೆದಿದೆ. ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಮಾಡಿ ಬಂದು ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

    ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೆ ಅಲ್ಲಿವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂಬುದಾಗಿ ತಿಳಿದುಬಂದಿದೆ.

  • ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ನಿಮ್ಮ ಒಂದು ಮತ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುತ್ತಿದೆ. ಹೀಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

    ನಗರದ ಬಸವನಗುಡಿಯಲ್ಲಿರುವ ವಾಸವಿ ವಿದ್ಯಾನಿಕೇತನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾನು ಹಾಗೂ ಕುಟುಂಬದ ಸದಸ್ಯರೆಲ್ಲರೂ ಅನಂತ್ ಕುಮಾರ್ ಜೊತೆಯೇ ಬಂದು ಮತದಾನ ಮಾಡುತ್ತಿದ್ದೆವು. ಆ ಒಂದು ಸಂದರ್ಭ ಇದೀಗ ನನಗೆ ನೆನಪಾಗುತ್ತಿದೆ ಎಂದು ತನ್ನ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

    ದೇಶದ ಸುಭದ್ರತೆ ಹಾಗೂ ಅಭಿವೃದ್ಧಿಗೆ ಇಂದು ನಾವು ಮತ ಹಾಕಲೇ ಬೇಕು. ದೇಶಕ್ಕಾಗಿ ಕೆಲಸ ಮಾಡಿರುವಂತಹ ಹಿರಿಯರ ಕುಟುಂಬದ ಸದಸ್ಯರಾಗಿ ದೇಶದ ಹಿತಕ್ಕಾಗಿಯೇ ಇಂದು ನಾವು ಮತ ನೀಡಿದ್ದೇವೆ ಎಂದರು.

    ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ವಿಶೇಷವಾಗಿ ಯುವಕ, ಯುವತಿ ಹಾಗೂ ಹಿರಿಯರ ಜವಾಬ್ದಾರಿಯಾಗಿದೆ. ನಮಗೆ ಇದು 5 ವರ್ಷಕ್ಕೊಮ್ಮೆ ಸಿಗುವ ಅವಕಾಶವಾಗಿದೆ. ನಮ್ಮ ಒಂದು ಮತಕ್ಕೆ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುವ ಶಕ್ತಿಯಿದೆ. ಆ ದೃಷ್ಟಿಯಿಂದ ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬಳಸಿಕೊಳ್ಳಬೇಕು ಎಂದು ತಿಳಿಸಿದ್ರು.