Tag: loksabha Elections2019. jds

  • ಮಂಡ್ಯದ ಮೂವರು ಶಾಸಕರಿಗೆ ಸಿಎಂ ಫುಲ್ ಕ್ಲಾಸ್!

    ಮಂಡ್ಯದ ಮೂವರು ಶಾಸಕರಿಗೆ ಸಿಎಂ ಫುಲ್ ಕ್ಲಾಸ್!

    ಮಂಡ್ಯ: ಲೋಕಸಭಾ ಕ್ಷೇತ್ರದ ಹೈವೋಲ್ಟೇಜ್ ವಾರ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲ್ತಾರಾ ಅನ್ನೋ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ. ಯಾಕಂದ್ರೆ ಮಂಡ್ಯ ವ್ಯಾಪ್ತಿಯ ಮೂವರು ಶಾಸಕರಿಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

    ಕಳೆದ ರಾತ್ರಿ ಮೂರು ಕ್ಷೇತ್ರಗಳ ಶಾಸಕರಿಗೆ ಮುಖ್ಯಮಂತ್ರಿಯವರು ಕರೆ ಮಾಡಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಸೋಲುಂಟಾದರೆ ನೀವೇ ಹೊಣೆ. ನೀವು ಸ್ಥಳೀಯರು ಸೇರಿ ಕಾಂಗ್ರೆಸ್ಸಿಗರ ವಿಶ್ವಾಸ ಪಡೆದಿಲ್ಲ ಎಂದು ಶಾಸಕರ ವಿರುದ್ಧ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಗುಪ್ತಚರ ಇಲಾಖೆ ವರದಿಯಲ್ಲಿ ಈ ಮೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಹಿನ್ನಡೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸಿಎಂ ತರಾಟೆ ವಿಚಾರದ ಬಗ್ಗೆ ಮಂಡ್ಯದಲ್ಲಿ ಇದೀಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.  ಇದನ್ನೂ ಓದಿ: 45 ಸಾವಿರ ಮತಗಳ ಅಂತರದಲ್ಲಿ ಸುಮಲತಾಗೆ ಗೆಲುವು – ಬಿಜೆಪಿ ವರದಿ ಸಲ್ಲಿಕೆ