Tag: loksabha elections 2019

  • ಮಂಡ್ಯ `ಕೈ’ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

    ಮಂಡ್ಯ `ಕೈ’ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

    ಬೆಂಗಳೂರು/ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯ 2 ಕ್ಷೇತ್ರಗಳ ಫಲಿತಾಂಶದ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಫಲಿತಾಂಶ ಮೈತ್ರಿ ಪರವಾದ್ರೆ ಮಾತ್ರ ಸರ್ಕಾರಕ್ಕೆ ಭವಿಷ್ಯವಿದೆ. ಸ್ಪರ್ಧೆ ಮಾಡಿದ ಜೆಡಿಎಸ್‍ಗಿಂತ ಬೆಂಬಲ ನೀಡಿದ ಕಾಂಗ್ರೆಸ್ ಅಲ್ಲಿ ಗೆಲ್ಲಬೇಕಿದೆ. ಹೀಗಾಗಿ ಕೈ ಹೈಕಮಾಂಡ್ 2 ಕ್ಷೇತ್ರಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ವಹಿಸಿದೆ. ಆ ಎರಡೂ ಕ್ಷೇತ್ರಗಳ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹೈಕಮಾಂಡ್ ಹಾಕಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಿ ಎಂದು ಮಂಡ್ಯ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಆಗಿ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳು ತಿಳಿಸಿವೆ.

    ಗೌಡರ ಮೊಮ್ಮಕ್ಕಳು ಕಣದಲ್ಲಿರೋ ಮಂಡ್ಯ, ಹಾಸನ ಗೆಲ್ಲಲೇಬೇಕು. ಆ 2 ಕ್ಷೇತ್ರದಲ್ಲಿ ಪ್ರಜ್ವಲ್ ಹಾಗೂ ನಿಖಿಲ್ ಸೋತರೆ ಮೈತ್ರಿಗೆ ಕಂಟಕ ಅನ್ನೋ ಆತಂಕ ಆರಂಭವಾಗಿದೆ. ಈ ಕಾರಣದಿಂದ ಒಟ್ಟಾಗಿ ಕೆಲಸ ಮಾಡಿ ಇಬ್ಬರನ್ನು ಗೆಲ್ಲಿಸಿ ಎಂದು ಹೈಕಮಾಂಡ್ ಖುದ್ದಾಗಿ ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.

    ಹೈಕಮಾಂಡ್ ಸೂಚನೆಯಂತೆ ಮಂಡ್ಯ ಕಾಂಗ್ರೆಸ್ ಅಸಮಾಧಾನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮುಖಂಡರ ಸಭೆ ನಡೆಸಿದ್ರು. ತಡರಾತ್ರಿ ಮಂಡ್ಯ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಾಜಿ ಶಾಸಕ ಚೆಲುವರಾಯ ಸ್ವಾಮಿ, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

    ಅಲ್ಲದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಫರ್ಧೆ ಖಚಿತವಾದ ಮೇಲೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ನಿಖಿಲ್‍ಗೆ ಬೆಂಬಲ ನೀಡಲ್ಲ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡ್ತೆವೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಈ ವಿಚಾರವನ್ನೂ ಕೂಡ ಸಭೆಯಲ್ಲಿ ಚರ್ಚಿಸಲಾಯಿತು.

    ಒಟ್ಟಿನಲ್ಲಿ ಬಂಡಾಯ ಶಮನದ ಹೊಣೆ ಹೊತ್ತ ಸಿದ್ದರಾಮಯ್ಯ ಅವರಿಗೆ ಸರ್ಕಾರದ ಉಳಿವಿಗಾಗಿ ಪಣ ತೊಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.

  • ದೇಶಕ್ಕಾಗಿ ರಾಹುಲ್ ಗಾಂಧಿ ಸತ್ತಿದ್ದಾರೆ- ಹೊಗಳುವ ಭರದಲ್ಲಿ ಸಿಎಂ ಇಬ್ರಾಹಿಂ ಎಡವಟ್ಟು

    ದೇಶಕ್ಕಾಗಿ ರಾಹುಲ್ ಗಾಂಧಿ ಸತ್ತಿದ್ದಾರೆ- ಹೊಗಳುವ ಭರದಲ್ಲಿ ಸಿಎಂ ಇಬ್ರಾಹಿಂ ಎಡವಟ್ಟು

    ಬಾಗಲಕೋಟೆ: ವಿರೋಧೀಗಳನ್ನ ಸದಾ ಏಕವಚನದಲ್ಲೇ ಟೀಕೆ ಮಾಡುವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ತಮ್ಮ ಪಕ್ಷದ ನಾಯಕರನ್ನ ಹೊಗಳುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.

    ಪಕ್ಷದ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಬಿಜೆಪಿಯವರು ಯಾರೂ ಸತ್ತಿಲ್ಲ. ಕಾಂಗ್ರೆಸ್‍ನ ಇಂದಿರಾ ಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಸತ್ತಿದ್ದಾರೆ ಎಂದು ರಾಹುಲ್ ಹೆಸರು ಹೇಳಿದ್ರು. ಇದರಿಂದ ಸಭಿಕರೆದುರು ಇಬ್ರಾಹಿಂ ನಗೆಪಾಟಲೀಗೀಡಾದ್ರು.

    ಬಳಿಕ ಮಾತನಾಡಿದ ಸಿದ್ದರಾಮಯಯ್ಯ, ಮೋದಿಗೆ ಸೋಲುವ ಕೇಡುಗಾಲ ಬಂದಿದೆ. ಇತ್ತ ಬಿಎಸ್‍ವೈ ರನ್ನ ಚುನಾವಣೆ ನಂತರ ಉಪ್ಪಿನಕಾಯಿ ತರ ಬಳಸಿ ಬಿಸಾಕ್ತಾರೆ ಎಂದು ಟೀಕೆ ಮಾಡಿದ್ರು. ಅಲ್ಲದೆ ನನ್ನ ಎದುರಾಳಿ ಯಾರೂ ಇಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಕೇಡುಗಾಲ ಬಂದಾಗ ಹಾಗೆನ್ನುತ್ತಾರೆ ಎಂದು ಕುಟುಕಿದ್ರು. ಕಾಂಗ್ರೆಸ್ ಒಂದೇ ಪಕ್ಷ 150 ಸ್ಥಾನ ಗೆಲ್ಲುತ್ತದೆ ಅಂದಿದ್ದೇನೆ. ನಮ್ಮದು ಅಲಿಯನ್ಸ್ ಇದೆ. ಎಲ್ಲ ಸೇರಿ ಒಟ್ಟು 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂದ್ರು.

    ಸಿದ್ದರಾಮಯ್ಯ ಕುರುಬ ಅಲ್ಲ, ಅವರ ಮೈಯಲ್ಲಿ ಕುರುಬರ ರಕ್ತ ಹರಿಯುತ್ತಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿ, ಈಶ್ವರಪ್ಪನಿಗೆ ನಾಚಿಕೆಯಾಗಬೇಕು. ಅವನು ಬಿಜೆಪಿಯಲ್ಲಿರೋದೆ ದಂಡ. ಒಬ್ಬ ಕುರುಬ ಸಮುದಾಯದವನಿಗೆ ಟಿಕೆಟ್ ಕೊಡಿಸೋಕೆ ಆಗಲಿಲ್ಲ ಅವನಿಗೆ ಎಂದು ಏಕ ವಚನದಲ್ಲಿ ಕಿಡಿಕಾರಿದ್ರು.

    ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಅವರು ಸಾಂಕೇತಿಕವಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಗದ್ದಿಗೌಡರ್‍ಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಎಂ ಎಲ್ ಸಿ ಹನುಮಂತ ನಿರಾಣಿ, ಮಾಜಿ ಶಾಸಕ ಪಿ ಹೆಚ್ ಪೂಜಾರ ಸಾಥ್ ನೀಡಿದ್ರು. ಇವರು ಏಪ್ರಿಲ್ 4ರಂದು ಬೃಹತ್ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಆರ್ ರಾಮಚಂದ್ರನ್ ಗೆ ನಾಮಪತ್ರ ಸಲ್ಲಿಸಲಿದ್ದಾರೆ.

  • ಆಯುಧಗಳ ಜೊತೆ ಫೋಟೋ ಇರೋ ಏನು ತಿಳಿಯದ ಹುಡ್ಗನಿಗೆ ಬಿಜೆಪಿ ಟಿಕೆಟ್: ನಟಿ ಅಭಿನಯ

    ಆಯುಧಗಳ ಜೊತೆ ಫೋಟೋ ಇರೋ ಏನು ತಿಳಿಯದ ಹುಡ್ಗನಿಗೆ ಬಿಜೆಪಿ ಟಿಕೆಟ್: ನಟಿ ಅಭಿನಯ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮಚ್ಚು, ಲಾಂಗ್ ಜೊತೆ ಫೋಟೋ ಇರುವ ಹುಡುಗನಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ನಟಿ ಅಭಿನಯ ಹೇಳಿದ್ದಾರೆ.

    ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಮತ ಪ್ರಚಾರದ ಅಖಾಡಕ್ಕಿಳಿದಿರುವ ಇವರು, ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಏನೂ ತಿಳಿಯದ ಯುವಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ಬಿಜೆಪಿ ಒಬ್ಬ ಉತ್ತಮ ಮಹಿಳೆಗೆ ಟಿಕೆಟ್ ತಪ್ಪಿಸಿದೆ. ಅದನ್ನು ಮಹಿಳೆಯೇ ತಿಳಿದುಕೊಳ್ಳಬೇಕು. ಅವರು ಕಷ್ಟಪಟ್ಟಿರುವ ಹೆಣ್ಣುಮಗಳು. ಹೀಗಾಗಿ ಅವರಿಗೆ ಮೋಸ ಮಾಡಿ ಆಯುಧಗಳನ್ನು ಹಿಡಿದುಕೊಂಡು ಕುಳಿತಿರುವ ಹಾಗೂ ಏನೂ ತಿಳಿಯದಿರುವ ಯುವಕನಿಗೆ ಈ ಬಾರಿ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಇದನ್ನು ಮನಗಂಡು ಮತದಾರರು ದಯವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

    ನೀವು ತಪ್ಪು ಮಾಡಿ 5 ವರ್ಷ ಸುಳ್ಳು ಹೇಳುವವರಿಗೆ ಮತ ಹಾಕಿದ್ದೀರಿ. ಈಗಲಾದರೂ ತಾವು ಅದನ್ನು ಅರಿತು, ನಮಗೆ ಆ ಪಕ್ಷ ಬೇಡ, ನಮಗೆ ಕಾಂಗ್ರೆಸ್ ಸರಿ ಎಂದು ದಯವಿಟ್ಟು ಈ ಬಾರಿ ಕಾಂಗ್ರೆಸ್ಸನ್ನು ಗೆಲ್ಲಿಸಿ. ನಮ್ಮ ದೇಶಕ್ಕೆ ಹಿತ ಆಗುವಂತೆ ಮಾಡಿ ಎಂದು ಮತದಾರರಲ್ಲಿ ಕೇಳಿಕೊಂಡರು.

    ಇದೇ ವೇಳೆ ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಪ್ರಚಾರಕ್ಕೆ ಇಳಿದಿದ್ದಾರೆ. ಗಾಂಧೀಜಿ, ವಿವೇಕಾನಂದ ಹಾಗೂ ಕೆಂಪೇಗೌಡ ಪ್ರತಿಮೆಗೆ ಹೂವಿನ ಹಾರ ಹಾಕಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೊರಟಿದ್ದೇವೆ ಅಂದ್ರು.

    ಬಸವನಗುಡಿ ಕ್ಷೇತ್ರದ ಗುಟ್ಟಲ್ಲಿ, ರಾಮಕೃಷ್ಣ ಆಶ್ರಮ ಗಾಂಧಿ ಬಜಾರ್ ಸುತ್ತಮುತ್ತ ಪ್ರಚಾರ ನಡೆಯುತ್ತಿದ್ದು, ನೂರಾರು ಕಾರ್ಯಕರ್ತರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಹರಿಪ್ರಸಾದ್ ಪರ ಘೋಷಣೆ ಕೂಗುವ ಮೂಲಕ ಭರ್ಜರಿ ಪ್ರಚಾರ ನಡೆಯುತ್ತಿದೆ.

    ತೇಜಸ್ವಿ ಸೂರ್ಯ ಹೇಳಿದ್ದು ಏನು?
    ಕತ್ತಿಗಳ ಜೊತೆ ತನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ತೇಜಸ್ವಿ ಸೂರ್ಯ, ಆಯುಧ ಪೂಜೆ ಸಮಯದಲ್ಲಿ ನಮ್ಮ ಕಾಫಿ ಎಸ್ಟೇಟ್ ನಲ್ಲಿ ಇರುವ ಆಯುಧಗಳ ಜೊತೆ ಕುಳಿತುಕೊಂಡ ಫೋಟೋವನ್ನು ನನ್ನ ಫೇಸ್‍ಬುಕ್ ನಿಂದ ಡೌನ್‍ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದರು.

    https://twitter.com/Tejasvi_Surya/status/885775335383379968

  • ಸುಮಲತಾರ ಅಲೆಗೆ ಸಿಎಂ ಹೆದ್ರಿದ್ದಾರೆ- ನಿಖಿಲ್ ನಾಮಪತ್ರ ರದ್ದಾಗಲಿದೆ: ಬಿಎಸ್‍ವೈ

    ಸುಮಲತಾರ ಅಲೆಗೆ ಸಿಎಂ ಹೆದ್ರಿದ್ದಾರೆ- ನಿಖಿಲ್ ನಾಮಪತ್ರ ರದ್ದಾಗಲಿದೆ: ಬಿಎಸ್‍ವೈ

    ಬೆಳಗಾವಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರ ಅಲೆ ಜೋರಾಗಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಹೆದರಿದ್ದಾರೆ. ಮಗನ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.

    ನಿಖಿಲ್ ನಾಮಪತ್ರ ರದ್ದು:
    ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ಸುಮಲತಾರ ಅಲೆಗೆ ಹೆದರಿ, ತಮ್ಮ ಪುತ್ರನ ಸೋಲಿನ ಭೀತಿಯಿಂದ ಸಿಎಂ ಹತಾಶರಾಗಿದ್ದಾರೆ. ನಿಖಿಲ್ ಅವರ ನಾಮಪತ್ರ ರದ್ದಾಗಲಿದೆ. ಈಗ ಆಗದೇ ಇದ್ರೆ ಮುಂದೆ ಕೋರ್ಟ್‍ನಲ್ಲಿ ರದ್ದಾಗುತ್ತೆ. ಸಿಎಂ ಅವರ ಅಧಿಕಾರವನ್ನು ಉಪಯೋಗಿಸಿಕೊಂಡು ನಾಮಪತ್ರದಲ್ಲಾದ ಲೋಪಗಳನ್ನು ಸರಿಪಡಿಸಿದ್ದಾರೆ. ಮಂಡ್ಯ ಚುನಾವಣಾ ಅಧಿಕಾರಿಯನ್ನ ತಕ್ಷಣ ವರ್ಗಾವಣೆ ಮಾಡಬೇಕು. ಅಲ್ಲಿ ದಕ್ಷ ಅಧಿಕಾರಿಯನ್ನ ನೇಮಿಸಿ, ಈ ವಿಚಾರದ ಬಗ್ಗೆ ತನಿಖೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.


    ಕತ್ತಿ ಸಹೋದರರ ಭೇಟಿ:
    ಬಳಿಕ ಕತ್ತಿ ಸಹೋದರರ ರೆಬಲ್ ವಿಚಾರ ಪ್ರತಿಕ್ರಿಯಿಸಿ, ಚಿಕ್ಕೋಡಿ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದವಿಲ್ಲ. ಈ ವಿಚಾರದಲ್ಲಿ ಸಂಧಾನ ಏನಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಉಮೇಶ್ ಕತ್ತಿ, ರಮೇಶ್ ಕತ್ತಿ ಸೇರಿ ಚಿಕ್ಕೋಡಿ ಕ್ಷೇತ್ರ ಗೆಲುವಿಗೆ ಪ್ರಯತ್ನಿಸುತ್ತಾರೆ. ಇಂದು ಅವರಿಬ್ಬರನ್ನು ಬಿಜೆಪಿ ನಾಯಕರು ಭೇಟಿಯಾಗಲಿದ್ದೇವೆ ಎಂದರು. ಕೆಎಲ್‍ಇ ಗೆಸ್ಟ್ ಹೌಸ್‍ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬಿಜೆಪಿ ಸಭೆ ನಡೆಯಲಿದೆ.

    ರಾಹುಲ್ ಗಾಂಧಿ ಬಚ್ಚಾ:
    ಬಳಿಕ ಡೈರಿ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಜೆಂಟಲ್‍ಮ್ಯಾನ್ ಅಂದುಕೊಂಡಿದ್ದೆ. ಆದ್ರೆ ಅವರೊಬ್ಬ ಬೇಜವಾಬ್ದಾರಿ ಮನುಷ್ಯ. ನಾನು ಡೈರಿಯಲ್ಲಿ ಎಲ್.ಕೆ ಅಡ್ವಾಣಿ ಹಣ ಕೊಟ್ಟಿದ್ದೇನೆ ಎಂದು ಬರೆದಿದ್ದನಂತೆ. ಈ ಬಗ್ಗೆ ಅವರು ಸಾಕ್ಷಿ ನೀಡಿ ನಿರೂಪಿಸಲಿ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ಹಾಗೆಯೇ ಕಾಂಗ್ರೆಸ್ ಅಧ್ಯಕ್ಷರಿಗೆ ಅಪಪ್ರಚಾರ ಶೋಭೆ ತರಲ್ಲ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಬಚ್ಚಾ ಅವರ ಮಾತಿಗೆ ಕಿಮ್ಮತ್ತಿಲ್ಲ. ಮೋದಿ ಅವರು ಈಗಲೂ ಪ್ರಧಾನಿ, ಮುಂದೆ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ 300ಕ್ಕೂ ಅಧಿಕ ಸೀಟು ಗೆದ್ದು ಮತ್ತೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ದೋಸ್ತಿ ಸಮಾವೇಶಕ್ಕೆ ಆರಂಭದಲ್ಲೇ ವಿಘ್ನ!

    ದೋಸ್ತಿ ಸಮಾವೇಶಕ್ಕೆ ಆರಂಭದಲ್ಲೇ ವಿಘ್ನ!

    – ಸಿದ್ದರಾಮಯ್ಯ ಫೋಟೋವಿಲ್ಲದ ಫ್ಲೆಕ್ಸ್ ಧರೆಗೆ
    – ಕೆಲಕಾಲ ಟ್ರಾಫಿಕ್ ಜಾಂ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಸಮೀಪ ಇರೋ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶ ಆಯೋಜಿಸಿದ್ದು, ಇದೀಗ ಕಾರ್ಯಕ್ರಮಕ್ಕೆ ಮುನ್ನವೇ ವಿಘ್ನವೊಂದು ಎದುರಾಗಿದೆ.

    ಹೌದು. ಕಾರ್ಯಕ್ರಮದ ಅಂಗವಾಗಿ ದೋಸ್ತಿ ನಾಯಕರ ಫೊಟೋಗಳಿರುವ ಬೃಹತ್ ಗಾತ್ರದ ಫ್ಲೆಕ್ಸ್ ಗಾಳಿಯಿಂದಾಗಿ ಧರೆಗೆ ಉರುಳಿದೆ. ಸುಮಾರು ಅರ್ಧಗಂಟೆಯಿಂದ ಫ್ಲೆಕ್ಸ್ ರಸ್ತೆಯಲ್ಲಿ ಬಿದ್ದಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

    ಸಿದ್ದರಾಮಯ್ಯ ಫೋಟೋ ಇಲ್ಲ:
    ಬೃಹತ್ ಸಮಾವೇಶದ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ. ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್‍ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ.

  • ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

    ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ, ಉತ್ತರ ಪ್ರದೇಶದ ಅಮೇಥಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

    ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ನಾಯಕರಾದ ರಣ್‍ದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

    ರಾಹುಲ್ ಗಾಂಧಿಯವರ ಸ್ಪರ್ಧೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರು ನಿಮ್ಮನ್ನು ತಿರಸ್ಕರಿಸಿದ್ದು, ಇಲ್ಲಿಯ ಸಿಂಹಾಸನ ಖಾಲಿ ಮಾಡಿ ಎಂದು ಭಾಗ್ ರಾಹುಲ್ ಭಾಗ್ ಎಂದು ವ್ಯಂಗ್ಯ ಮಾಡಿದ್ದರು. ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎ.ಕೆ.ಆಂಟನಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಹಾಗಾದ್ರೆ ಅಂದು ಮೋದಿ ಅವರಿಗೆ ಗುಜರಾತಿನಲ್ಲಿ ಸೋಲಿನ ಭೀತಿ ಕಾಣಿಸಿತ್ತಾ? ಎರಡು ಕ್ಷೇತ್ರಗಳಲ್ಲಿ ಗೆಲುವಿನ ಬಳಿಕ ಗುಜರಾತ್ ಕ್ಷೇತ್ರವನ್ನು ತೊರೆದರು. ಸ್ಮೃತಿ  ಇರಾನಿ ಅವರನ್ನು ದೆಹಲಿಯ ಚಾಂದಿನಿ ಚೌಕ್ ಮತ್ತು ಅಮೇಥಿಯ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಮೃತಿ  ಇರಾನಿ ಸೋಲು ಕಾಣಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಕಾಣುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

    ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದರು.

    ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದರು.

  • ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ಬೆಂಗಳೂರು: ದೋಸ್ತಿ ಸರ್ಕಾರದ ಇಂದಿನ ಬೃಹತ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಡೆಗಣಿಸಲಾಗಿದ್ಯಾ ಎನ್ನುವ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರುವ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿವೆ. ಈ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ.

    ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂದಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆ ದೋಸ್ತಿ ಸರ್ಕಾರಕ್ಕಿದೆ.

  • ಇಂದು ರಾಜ್ಯದಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ – ಬೆಂಗ್ಳೂರಲ್ಲಿ ರಣಕಹಳೆ ಮೊಳಗಿಸ್ತಾರೆ ರಾಹುಲ್, ಗೌಡ್ರು

    ಇಂದು ರಾಜ್ಯದಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ – ಬೆಂಗ್ಳೂರಲ್ಲಿ ರಣಕಹಳೆ ಮೊಳಗಿಸ್ತಾರೆ ರಾಹುಲ್, ಗೌಡ್ರು

    – 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆ

    ಬೆಂಗಳೂರು: ಕರುನಾಡಲ್ಲಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕ ಸಮರದ ಕಹಳೆ ಮೊಳಗಿಸಲಿದ್ದಾರೆ. ರಾಜ್ಯಕ್ಕೆ ಬರ್ತಿರೋ ರಾಹುಲ್ ಗಾಂಧಿ, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರೋ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಆಯೋಜಿಸಿರೋ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ವಿರುದ್ಧ ಘರ್ಜಿಸಲಿದ್ದಾರೆ.

    ದೋಸ್ತಿಗಳ ರ‍್ಯಾಲಿಯಾದ ಕಾರಣ ವೇದಿಕೆಯಲ್ಲಿ ರಾಹುಲ್ ಜೊತೆಗೆ ಜೆಡಿಎಸ್ ವರಿಷ್ಠರಾದ ಹೆಚ್‍ಡಿ ದೇವೇಗೌಡರು, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವರು ಪಾಲ್ಗೊಂಡು, ದೇಶಕ್ಕೆ ಮಹಾಘಟಬಂಧನ್ ಸಂದೇಶ ರವಾನಿಸಲಿದ್ದಾರೆ.

    ಇಂದಿನ ಸಮಾವೇಶ ದೊಡ್ಡ ಮಟ್ಟದ ಶಕ್ತಿ ಪ್ರದರ್ಶನದ ವೇದಿಕೆಯಾಗಿದ್ದು, ಆ ವೇದಿಕೆ ಮೂಲಕವೇ ವಿಪಕ್ಷ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಲು ದೋಸ್ತಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಜಂಟಿ ಸಮಾವೇಶದ ಮೂಲಕ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಹೊಸ ಸಂದೇಶ ರವಾನಿಸುವ ಗುರಿ ದೋಸ್ತಿ ನಾಯಕರದ್ದಾಗಿದೆ. ಬೆಂಗಳೂರಿನಲ್ಲಿ ಆದ ದೋಸ್ತಿ, ಬೂತ್ ಮಟ್ಟದಲ್ಲಿ ಆಗಿಲ್ಲ ಎಂಬ ಆತಂಕವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿದೆ.

    ಎರಡು ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ಜಂಟಿ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಕ್ಷೇತ್ರವಾರು ಮುಖಂಡರುಗಳ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಕೂಡ ಈ ಸಭೆ ನೆರವಾಗಲಿದೆ ಎನ್ನುವುದು ದೋಸ್ತಿಗಳ ನಿರೀಕ್ಷೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಫೈಟ್ ನೀಡುತ್ತೆ ಎನ್ನುವ ರಾಜಕೀಯ ವಾತಾವರಣ ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಅಂದಾಜು 5 ಲಕ್ಷ ಜನರನ್ನ ಸೇರಿಸಿ ಶಕ್ತಿ ಪ್ರದರ್ಶನದ ಮೂಲಕ ಕಾರ್ಯಕರ್ತರಲ್ಲಿ ಜೋಶ್ ತುಂಬುವ ಪ್ರಯತ್ನವು ಇದಾಗಿದೆ.

    ಹಳೆ ಮೈಸೂರು ಭಾಗದಲ್ಲಿ ಎರಡು ಪಕ್ಷಗಳಿಗೆ ಈ ಸಮಾವೇಶದ ಮೂಲಕ ಹೊಸ ಹುರುಪು ಬರಬಹುದು. ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿರುವ ಉತ್ತರ ಕರ್ನಾಟಕದ ಭಾಗದಲ್ಲಿ ಸಹ ಜೆಡಿಎಸ್ ಕಾಂಗ್ರೆಸ್ ಜಂಟಿ ಪ್ರಚಾರಕ್ಕೆ ಸಮಾವೇಶದ ಮೂಲಕ ದೋಸ್ತಿ ನಾಯಕರು ಸಂದೇಶ ರವಾನಿಸಲಿದ್ದಾರೆ. ವಿಶೇಷವಾಗಿ ಹಾಸನ ಹಾಗೂ ಮಂಡ್ಯದಲ್ಲಿನ ಕಾಂಗ್ರೆಸ್ ನಾಯಕರ ಭಿನ್ನರಾಗವು ಈ ಸಮಾವೇಶದ ನಂತರ ಸರಿಯಾಗಬಹುದು ಎಂಬುದು ಮುಖಂಡರ ನಿರೀಕ್ಷೆಯಾಗಿದೆ. ಇಂದಿನ ಸಮಾವೇಶದ ನಂತರ ಜೆಡಿಎಸ್ ಕಾಂಗ್ರೆಸ್ ನಾಯಕರು ಎಲ್ಲಾ 28 ಕ್ಷೇತ್ರದಲ್ಲೂ ಜೊತೆ ಜೊತೆಯಲ್ಲಿ ಹೆಜ್ಜೆ ಇಡಲು ಇದು ಆರಂಭಿಕ ಹೆಜ್ಜೆಯಾಗಲಿದೆ.

    ರಾಹುಲ್ ಗಾಂಧಿ ಹಾಗೂ ದೇವೇಗೌಡರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಖಂಡರ ಹಾಗೂ ಕಾರ್ಯಕರ್ತರ ಅನುಮಾನಗಳನ್ನು ದೂರ ಮಾಡುವ ಗುರಿ ದೋಸ್ತಿ ನಾಯಕರದ್ದಾಗಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವೇದಿಕೆ ಹಂಚಿಕೊಳ್ಳುವ ಮೂಲಕ ಹಳೆತನವನ್ನ ನಾವು ಮರೆತಿದ್ದೇವೆ. ನೀವು ಮರೆಯಿರಿ ಎನ್ನುವ ಸಂದೇಶ ರವಾನಿಸಲು ತೀರ್ಮಾನಿಸಿದ್ದಾರೆ. ಹೀಗೆ ಲೋಕಸಭಾ ಚುನಾವಣೆಗೆ ದೋಸ್ತಿಗಳ ಅಧಿಕೃತ ರಣಕಹಳೆಯಾಗಿ ಇಂದು ಮೊಳಗಲಿದೆ.

  • ಯಾದಗಿರಿಯಲ್ಲಿ ನಡೀತು ವಿಭಿನ್ನ ರೀತಿಯ ಮತದಾನ ಜಾಗೃತಿ

    ಯಾದಗಿರಿಯಲ್ಲಿ ನಡೀತು ವಿಭಿನ್ನ ರೀತಿಯ ಮತದಾನ ಜಾಗೃತಿ

    ಯಾದಗಿರಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರಿಗೆ ಅರಿವು ಮೂಡಿಸಲು ಇಂದು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲಾಯಿತು.

    ಯಾದಗಿರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ಯಾರಾಗ್ಲೈಡಿಂಗ್ ಮೂಲಕ ಸಂಚರಿಸಿ ಪ್ರಚಾರ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಪ್ಯಾರಾಗ್ಲೈಡಿಂಗ್ ಗೆ ಚಾಲನೆ ನೀಡಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಏಪ್ರಿಲ್ 23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತಾದನದಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರನೂ ಕೂಡ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಇಂದು ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು. ವಿಶೇಷವಾಗಿ ಈ ಬಾರಿ ವಿಕಲಚೇತನರೆಲ್ಲರೂ ಕೂಡ ಮತದಾನದಲ್ಲಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಸರಿಸುಮಾರು 8 ಸಾವಿರದ 900 ಮಂದಿ ವಿಕಲಚೇತನರನ್ನು ಈಗಾಗಲೇ ಗುರುತಿಸಿದ್ದೇವೆ. ಅವರೆಲ್ಲರಿಗೂ ವಿಶೇಷ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ಯಾರಾಗ್ಲೈಡಿಂಗ್ ನಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಓ ಕವಿತಾ ಮನ್ನಿಕೇರಿ ಹಾಗೂ ಎಸ್ ಪಿ ಋಷಿಕೇಸ್ ಭಗವಾನ್ ಸಂಚಾರ ಮಾಡಿದ್ರು. ಇದು ನಗರದೆಲ್ಲೆಡೆ ಸುಮಾರು 200 ಮೀಟರ್ ಎತ್ತರದಲ್ಲಿ ಸಂಚಾರ ಮಾಡಿತು. ಒಟ್ಟಿನಲ್ಲಿ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ `ನಿಮ್ಮ ಮತ ನಿಮ್ಮ ಹಕ್ಕು. ತಪ್ಪದೆ ನೈತಿಕವಾಗಿ ಹಕ್ಕು ಚಲಾಯಿಸಿ’ ಎನ್ನುವ ಜಾಗೃತಿ ಬರಹದೊಂದಿಗೆ ಪ್ರಚಾರ ಕೈಗೊಳ್ಳಲಾಯಿತು.

  • ಗದ್ದೆಗಿಳಿದು ನಾಟಿ ಮಾಡಿದ ಸಿಎಂ ಪುತ್ರ ನಿಖಿಲ್!

    ಗದ್ದೆಗಿಳಿದು ನಾಟಿ ಮಾಡಿದ ಸಿಎಂ ಪುತ್ರ ನಿಖಿಲ್!

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯ ಬಳಿಕ ಇದೀಗ ಅವರ ಪುತ್ರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಗದ್ದೆಗಿಳಿದು ನಾಟಿ ಮಾಡಿದ್ದಾರೆ.

    ಹೌದು. ಮಂಡ್ಯ ಜಿಲ್ಲೆಯ ಆತಗೂರಲ್ಲಿ ಟಿ.ರಾಮಯ್ಯ ಅನ್ನೋರ ಗದ್ದೆಯಲ್ಲಿ ನಿಖಿಲ್ ಇಂದು ನಾಟಿ ಮಾಡಿದ್ದಾರೆ. ಈ ಹಿಂದೆ ಸಿಎಂ ಕುಮಾರಸ್ವಾಮಿ ಕೂಡಾ ಮಂಡ್ಯ ಗದ್ದೆಯಲ್ಲಿ ನಾಟಿ ಮಾಡಿದ್ದರು. ಈ ಮೂಲಕ ನಾವು ಕೂಡ ರೈತರ ಮಕ್ಕಳೆಂದು ರೈತರನ್ನು ಮತ್ತಷ್ಟು ಸೆಳೆಯುವ ಯತ್ನ ಎನ್ನಲಾಗುತ್ತಿದೆ.

    ನಿಖಿಲ್ ಮದ್ದೂರು ಭಾಗದಲ್ಲಿ ಇಂದು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಪ್ರಚಾರ ಮಾಡುತ್ತಿದ್ದ ಪಕ್ಕದ ಗದ್ದೆಯಲ್ಲಿ ರೈತರು ಗದ್ದೆ ನಾಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ನಿಖಿಲ್ ತಾವೂ ಅವರೊಂದಿಗೆ ಸೇರಿ ನಾಟಿ ಮಾಡಿದ್ದಾರೆ. ಹೈಫೈ ಜೀವನದಲ್ಲಿದ್ದರೂ ಕೂಡ ರೈತರ ಜೊತೆ ಗದ್ದೆಗಿಳಿದು ಬೇಸಾಯ ಮಾಡಲು ಸೈ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಟಿ ಮಾಡುವಾಗ ರೈತರ ಜೊತೆ ತಮಾಷೆಯಾಗಿ ಮಾತನಾಡಿದ್ದಾರೆ. ಅಲ್ಲದೆ ಅವರ ಜೊತೆ ಮಾತುಕತೆ ನಡೆಸಿ, ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳು ಹೇಗಾದ್ರೂ ಮಾಡಿ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ.