Tag: LokSabha election

  • ಹಾಸನದಲ್ಲಿ ಇಂದಿನಿಂದ ಪ್ರಜ್ವಲ್ ಪ್ರಚಾರ- ಇತ್ತ ಬಿಜೆಪಿ ಸೇರ್ಪಡೆ ಬಗ್ಗೆ ಎ.ಮಂಜು ನಿರ್ಧಾರ

    ಹಾಸನದಲ್ಲಿ ಇಂದಿನಿಂದ ಪ್ರಜ್ವಲ್ ಪ್ರಚಾರ- ಇತ್ತ ಬಿಜೆಪಿ ಸೇರ್ಪಡೆ ಬಗ್ಗೆ ಎ.ಮಂಜು ನಿರ್ಧಾರ

    ಹಾಸನ: ಜಿಲ್ಲೆಯ ರಣಕಣ ಇಂದಿನಿಂದ ಮತ್ತಷ್ಟು ಕಾವೇರಲಿದೆ. ಹೊಳೆನರಸೀಪುರದ ಮೂಡಲಹಿಪ್ಪೆ ಮತ್ತು ಪಡವಲಹಿಪ್ಪೇ ಗ್ರಾಮಗಳಲ್ಲಿ ಪೂಜೆ ಸಲ್ಲಿಸಿದ ನಂತರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಸಂಭಾವ್ಯ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‍ಗೆ ತಾಯಿ ಭವಾನಿ ಸಾಥ್ ನೀಡಲಿದ್ದಾರೆ.

    ಮತ್ತೊಂದೆಡೆ ಮಾಜಿ ಸಚಿವ ಎ.ಮಂಜು ಇಂದು ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಬಿಎಸ್‍ವೈರನ್ನು ಹಲವು ಬಾರಿ ಭೇಟಿಯಾಗಿರುವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುವಂತೆ ತಮ್ಮ ಬೆಂಬಲಿಗರಿಗೂ ಸೂಚಿಸಿದ್ದಾರೆ ಎನ್ನಲಾಗ್ತಿದೆ.

    ಅಲ್ಲದೆ ಹಾಸನದ ಖಾಸಗಿ ಹೋಟೆಲ್ ನಲ್ಲಿ ಸೋಮವಾರವಷ್ಟೇ ಸಭೆ ನಡೆಸಿರುವ ಮಂಜು, ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟಿನಿಂದ ಕೆಲಸ ಮಾಡಲು ಸಲಹೆ ನೀಡಿದ್ದಾರೆ. ಜೆಡಿಎಸ್ ವಿರುದ್ಧ ಸಂಘಟಿತ ಹೋರಾಟ ನಡೆಸಲು ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಒಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಜಿದ್ದಾಜಿದ್ದಿ ಕ್ಷೇತ್ರವಾಗಿ ಹಾಸನ ಮಾರ್ಪಟ್ಟಿದೆ. ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕ ಬಾಗೂರು ಮಂಜೇಗೌಡ ಕೂಡ ಎ.ಮಂಜುಗೆ ಜೊತೆ ಸೇರಿಕೊಳ್ಳುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡ್ತಿಲ್ವೇ: ನಿಖಿಲ್ ಸ್ಪರ್ಧೆಗೆ ಸಿಎಂ ಪ್ರಶ್ನೆ

    ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡ್ತಿಲ್ವೇ: ನಿಖಿಲ್ ಸ್ಪರ್ಧೆಗೆ ಸಿಎಂ ಪ್ರಶ್ನೆ

    – ನಿಖಿಲ್ ಯಾಕೆ ಮಂಡ್ಯದಲ್ಲಿ ರಾಜಕಾರಣ ಮಾಡಬಾರದು?
    – ಯಡಿಯೂರಪ್ಪ ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಹೋಗಿಲ್ವೇ?

    ಬೆಂಗಳೂರು: ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿದ್ದೇನೆ. ಹಾಗಾದರೆ ನಿಖಿಲ್ ಯಾಕೆ ಮಂಡ್ಯದಿಂದ ರಾಜಕಾರಣ ಮಾಡಬಾರದು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಮಂಡ್ಯದಲ್ಲಿ ನಿಖಿಲ್ ಅವರು ಸ್ಪರ್ಧಿಸುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಚುನಾವಣೆ ಅಂದಮೇಲೆ ಎಲ್ಲಾ ಕಡೆ ಪರ ವಿರೋಧ ಇರುತ್ತೆ. ಇವತ್ತು ಎಲ್ಲೋ ಹುಟ್ಟಿ ಎಲ್ಲೋ ಸ್ಪರ್ಧೆ ಮಾಡಿ ಸದಸ್ಯರಾಗಿದ್ದಾರೆ. ಸದಾನಂದಗೌಡ ಮಂಗಳೂರಲ್ಲಿ ಹುಟ್ಟಿ ಬೆಂಗಳೂರು ಉತ್ತರದಲ್ಲಿ ಎಂಪಿ ಆಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರು ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಮಾಡ್ತಿಲ್ವೆ? ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿಲ್ಲವೇ? ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು ಎಂದು ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಮಂದಿಗೆ ತಿರುಗೇಟು ನೀಡಿದ್ದಾರೆ.

    ಸದ್ಯ ಮಂಡ್ಯ ಕ್ಷೇತ್ರದಲ್ಲಿ ಏನೇನು ನಡೆಯುತ್ತಿದೆ ಎಂಬುದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧ ಇದೆ. ಯಾರು ಅವರ ನಾಯಕರಾಗಬೇಕು ಎನ್ನುವ ತೀರ್ಮಾನ ಆ ಜಿಲ್ಲೆಯ ಜನರು ಮಾಡ್ತಾರೆ. ಇದನ್ನು ಯಾರೋ ಪಕ್ಷದ ಮುಖಂಡರು ತೀರ್ಮಾನ ಮಾಡುವುದಲ್ಲ. ಜನರ ಮುಂದೆ ಬರುತ್ತೇವೆ. ಜನರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    – ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು

    ಧಾರವಾಡ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ ಕೈಯಲ್ಲಿ ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಆಯುಧ ಪ್ರದರ್ಶಿಸಬಾರದು. ಆಯುಧ ಹಿಡಿದ ಫೋಟೋ ಕೂಡ ಸಾರ್ವಜನಿಕವಾಗಿ ಹಂಚಿಕೊಳ್ಳೋದು ಕೂಡ ತಪ್ಪು. ಆದ್ರೆ ಬಿಜೆಪಿ ಕಾರ್ಯಕರ್ತ, ಜೋಶಿ ಹಾಗೂ ಬೆಲ್ಲದ ತಲ್ವಾರ್ ಹಿಡಿದ ಫೋಟೋ ಹಾಕಿ ಮತ್ತೊಮ್ಮೆ ನಾವೇ ಗೆಲ್ಲೋದು ಎಂದು ಪೋಸ್ಟ್ ಮಾಡಿದ್ದಾರೆ.

    ಶಕ್ತಿ ಧಾರವಾಡ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಎರಡು ದಿನಗಳ ಹಿಂದೆ ಧಾರವಾಡದ ಅಶೋಕ ಹೊಟೇಲ್‍ಗೆ ಬಂದಾಗ ಜನಪ್ರತಿನಿಧಿಗಳು ತಲ್ವಾರ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಅದೇ ಫೋಟೋವನ್ನು ನೀತಿ ಸಂಹಿತೆ ಜಾರಿಯಾದ ಬಳಿಕ ಕಾರ್ಯಕರ್ತ ಪೋಸ್ಟ್ ಮಾಡಿ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿದ್ದಾರೆ.

    https://www.facebook.com/shakti.hiremath/posts/2113167555464960

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲ್ಲ: ಸಿದ್ದರಾಮಯ್ಯ

    ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲ್ಲ: ಸಿದ್ದರಾಮಯ್ಯ

    ನವದೆಹಲಿ: ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲ್ಲ. ಹಾಲಿ ಸಂಸದರಿರುವ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕೆಂದು ಹೈಕಮಾಂಡ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‍ಗೆ ಹಿನ್ನಡೆ ಆಗಿದೆ.

    ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, “ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಬೇಡಿ ಎಂದಿದ್ದೇನೆ. ವರಿಷ್ಠರಿಗೆ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಮಾತನಾಡಿದ್ದೇನೆ. ಸ್ಕ್ರೀನಿಂಗ್ ಸಮಿತಿ ಅಜೆಂಡಾ ಗೊತ್ತಿಲ್ಲ. ರಾಜ್ಯದಿಂದ ಪಟ್ಟಿ ಬಂದಿದೆ ಆ ಪಟ್ಟಿ ಆಧರಿಸಿ ಚರ್ಚೆ ನಡೆಸಿದ್ದೇನೆ. ಹಾಲಿ ಸಂಸದರ ಕ್ಷೇತ್ರಗಳು ಹೊರತು ಪಡಿಸಿ ಚರ್ಚೆ ಮಾಡುತ್ತೇವೆ. ಜೆಡಿಎಸ್‍ಗೆ ಕಾಂಗ್ರೆಸ್ ಹಾಲಿ ಸಂಸದರ ಸೀಟು ಕೊಡಬಾರದು ಎಂದು ಆಗಿದೆ. ಹಾಗಾಗಿ ಜೆಡಿಎಸ್ ಕೇಳಿದ್ದರೂ ನಾವು ಕೊಡುತ್ತೇವೆ ಎಂದು ಹೇಳಿಲ್ಲ” ಎಂದು ತಿಳಿಸಿದರು.

    ಬಳಿಕ ನಿಖಿಲ್ ಸ್ಪರ್ಧೆ ಬಗ್ಗೆ ಮಾತಾಡಿದ್ದ ಸಿದ್ದರಾಮಯ್ಯ, ಮಂಡ್ಯದಿಂದ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಜೆಡಿಎಸ್ ನವರಿಗೆ ಬಿಟ್ಟ ವಿಚಾರ. ಅವರಿಗೆ ನೀಡಲಾದ ಕ್ಷೇತ್ರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಜೆಡಿಎಸ್‍ನವರು ಹೇಳಲ್ಲ ಎಂದರು.

    ಸುಮಲತಾ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸುಮಲತಾ ಪರ ಯಾರು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿಲ್ಲ. ಸುಮಲತಾಗೆ ಟಿಕೆಟ್ ಸಿಗಲ್ಲ ಎಂದು ನಾನೇ ಹೇಳಿದ್ದೇನೆ. ಸುಮಲತಾ ಹಿಂದೆ ನಾನ್ಯಾಕೆ ನಿಂತುಕೊಳ್ಳಲಿ. ಡಿ.ಕೆ ಶಿವಕುಮಾರ್ ಮಂಡ್ಯ ನಾಯಕರ ಜೊತೆ ಸಭೆ ನಡೆಸಿದ್ದು ಗೊತ್ತಿಲ್ಲ. ಸುಮಲತಾ ಪರ ಪ್ರಚಾರ ಮಾಡಿರುವುದು ಗೊತ್ತಿಲ್ಲ ಎಂದರು.

    ಹಾಸನದಲ್ಲಿ ಎ. ಮಂಜು ಬಿಜೆಪಿಗೆ ಹೋಗುವುದಿಲ್ಲ. ಅಲ್ಲದೇ ದೇವೇಗೌಡ ಅವರ ಕುಟುಂಬ ರಾಜಕಾರಣದಿಂದ ಮೈತ್ರಿ ಸರ್ಕಾರ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ. ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ ವಿಷಯದ ಬಗ್ಗೆ ಮಾತನಾಡಿ, “ಸುಮಲತಾ ಬಗ್ಗೆ ಸಚಿವ ರೇವಣ್ಣ ಹಾಗೇ ಮಾತನಾಡಬಾರದಿತ್ತು” ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ದಾವಣಗೆರೆ: ಸೂರ್ಯ-ಚಂದ್ರರು ಇರೋದು ಎಷ್ಟು ಸತ್ಯನೋ, ಮತ್ತೆ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯುತ್ತೆ. ಏಕೆಂದರೆ ಮಹಾಘಟ್ ಬಂಧನ್‍ಗೆ ಯಾರು ನಾಯಕರು ಎನ್ನುವುದೇ ಗೊತ್ತಿಲ್ಲ. ದೇಶಾದ್ಯಂತ ಮೋದಿ ಪರ ಅಲೆ ಹಾಗೂ ಮೋದಿ ಆಡಳಿತ ಇಡೀ ಜಗತ್ತು ಮೆಚ್ಚಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬಳಿಕ ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬದುಕಿದ್ದಾಗ ಅಂಬರೀಶ್ ಅವರನ್ನು ಹೇಗೆ ಬಳಸಿಕೊಂಡರೋ, ಮರಣ ನಂತರ ಅವರಿಗೆ ಗೌರವ ಕೊಡಲಿಲ್ಲ. ಸುಮಲತಾಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿ ತಾಕತ್ ಇದ್ದರೆ ರೇವಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು.

    ಸಚಿವ ಸಂಪುಟದಿಂದ ಕೈಬಿಡದಿದ್ದರೆ ಜಿಡಿಎಸ್ ಸರ್ವನಾಶ ಶತಸಿದ್ಧ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ. ಅವರಿಗೆ ನಾಟಕ ಆಡುವುದು ಚನ್ನಾಗಿ ಗೊತ್ತು. ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಎಚ್.ಡಿ ರೇವಣ್ಣಗೆ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದರು. ಈ ವೇಳೆ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರದಿಂದ ನೀತಿಸಂಹಿತೆ ಜಾರಿಯಾಗಿದ್ದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ `ಮತ್ತೊಮ್ಮೆ ಮೋದಿ’ ಅಂತ ಬರೆಸಿ, ಕೆಲ ಬಿಜೆಪಿ ನಾಯಕರ ಫೋಟೋವನ್ನೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಿಂಟ್ ಹಾಕಿಸಿದ್ದರು. ಆದ್ರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ರಾಜಕೀಯ ಪಕ್ಷ ಪರವಾಗಿ ಪ್ರಚಾರ ಮಾಡುವಂತ ಮದುವೆ ಕಾರ್ಡ್ ಹಂಚುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಕಳೆದ ಹದಿನೈದು ದಿನಗಳಿಂದ ಲಗ್ನ ಪತ್ರಿಕೆಗಳನ್ನು ಬಸವರಾಜ ಹಂಚುತ್ತಿದ್ದರು. ಆದರೆ ಭಾನುವಾರ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಇಂದಿನಿಂದ ಲಗ್ನಪತ್ರಿಕೆ ಹಂಚಿಕೆ ಮಾಡದಿರುವಂತೆ ಚುನಾವಣಾ ಅಧಿಕಾರಿಗಳು ಬಸವರಾಜ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿರುವ ಆರ್‍ಓ ಅಧಿಕಾರಿ ಲಗ್ನಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಮುದ್ರಿತ ಪತ್ರಿಕೆಗಳ ಲೆಕ್ಕ ಕೂಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ಸೇನೆ, ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ

    ಇದೆ ಮಾರ್ಚ್ 24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಇಬ್ಬರ ಮದುವೆಗಳು ನಿಶ್ಚಯವಾಗಿದೆ. ಆದರಿಂದ ಬಿಜೆಪಿ ಕಾರ್ಯಕರ್ತ ಆಗಿರುವ ಬಸವರಾಜ ಮತ್ತೊಮ್ಮೆ ಮೋದಿ ಅಂತ ಪ್ರಿಂಟ್ ಮಾಡಿಸಿದ್ದ ತಮ್ಮ ಲಗ್ನಪತ್ರಿಕೆಯನ್ನು ಎಲ್ಲರಿಗೂ ಹಂಚುವ ಮೂಲಕ ಮದುವೆಯ ಆಮಂತ್ರಣದ ಜೊತೆಗೆ ಬಿಜೆಪಿ ಪರ ಪ್ರಚಾರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೋವನ್ನು ಕೂಡ ಹಾಕಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ನಾಯಕ ರಾಜುಗೌಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನ ಪ್ರಿಂಟ್ ಮಾಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಜೆಪಿ ವಿರುದ್ಧ ಅಖಾಡಕ್ಕಿಳಿಯುವ ಕಾಂಗ್ರೆಸ್-ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

    ಬಿಜೆಪಿ ವಿರುದ್ಧ ಅಖಾಡಕ್ಕಿಳಿಯುವ ಕಾಂಗ್ರೆಸ್-ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

    ಬೆಂಗಳೂರು:  ಲೋಕಸಭೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಹೀಗಾಗಿ ಯಾವ ಪಕ್ಷದಿಂದ ಯಾರು ಸಂಭವನೀಯ ಅಭ್ಯರ್ಥಿ..? ಯಾರಿಗೆ ಸಿಗಲಿದೆ ಟಿಕೆಟ್..? ಯಾರಿಗೆ ಗೇಟ್‍ಪಾಸ್ ಎಂಬ  ಎಕ್ಸ್ ಕ್ಲೂಸೀವ್ ವರದಿ ಇಲ್ಲಿದೆ.

    ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅಖಾಡಕ್ಕೆ ಇಳಿಯುವವರ ಪಟ್ಟಿ ಇಲ್ಲಿದೆ..
    1) ಬೀದರ್- ಈಶ್ವರ್ ಖಂಡ್ರೆ, ಸಿಎಂ ಇಬ್ರಾಹಿಂ, ವಿಜಯ್ ಸಿಂಗ್
    2) ಬಾಗಲಕೋಟೆ- ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ್
    3) ವಿಜಯಪುರ- ರಾಜು ಅಲಗೂರು, ಪ್ರಕಾಶ್ ರಾಠೋಡ್
    4) ಕೊಪ್ಪಳ- ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ
    5) ಬೆಳಗಾವಿ- ಅಂಜಲಿ ನಿಂಬಾಳ್ಕರ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್

    6) ಧಾರವಾಡ- ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ ಜಿ ಸನದಿ ಪುತ್ರ)
    7) ಹಾವೇರಿ- ಬಸವರಾಜ್ ಶಿವಣ್ಣವರ, ಸಲೀಂ ಅಹಮದ್, ಡಿ. ಆರ್. ಪಾಟೀಲ್
    8) ದಾವಣಗೆರೆ- ಎಸ್.ಎಸ್. ಮಲ್ಲಿಕಾರ್ಜುನ
    9) ಉತ್ತರ ಕನ್ನಡ- ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವಾ, ಭೀಮಣ್ಣ ನಾಯ್ಕ್
    10) ಉಡುಪಿ- ಚಿಕ್ಕಮಗಳೂರು- ಆರತಿ ಕೃಷ್ಣ, ಡಿ ಎಲ್ ವಿಜಯಕುಮಾರ್ ಪ್ರಮೋದ್ ಮಧ್ವರಾಜ್

    11) ಮಂಗಳೂರು- ರಮಾನಾಥ ರೈ, ಮೊಯಿದ್ದೀನ್ ಬಾವಾ
    12) ಬೆಂಗಳೂರು ಕೇಂದ್ರ- ರಿಜ್ವಾನ್ ಅರ್ಷದ್, ರೋಷನ್ ಬೇಗ್
    13) ಬೆಂಗಳೂರು ದಕ್ಷಿಣ- ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ
    14) ಬೆಂಗಳೂರು ಉತ್ತರ- ಸಿ. ನಾರಾಯಣ ಸ್ವಾಮಿ, ಎಂ. ಆರ್. ಸೀತಾರಾಂ, ಬಿ.ಎಲ್. ಶಂಕರ್/ ಜೆಡಿಎಸ್ ಹೆಚ್.ಡಿ.ದೇವೆಗೌಡ ಸಾಧ್ಯತೆ
    15) ಮೈಸೂರು- ವಿಜಯ್ ಶಂಕರ್, ಸೂರಜ್ ಹೆಗ್ಡೆ/ ಜೆಡಿಎಸ್ ಹೆಚ್.ಡಿ.ದೇವೇಗೌಡ ಸಾಧ್ಯತೆ.

    ಹಾಲಿ ಸಂಸದರು:
    16) ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ
    17) ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ
    18) ರಾಯಚೂರು – ಬಿ ವಿ ನಾಯಕ್
    19) ಬಳ್ಳಾರಿ -ವಿ ಎಸ್ ಉಗ್ರಪ್ಪ
    20) ಚಿತ್ರದುರ್ಗ- ಚಂದ್ರಪ್ಪ

    21) ತುಮಕೂರು- ಮುದ್ದ ಹನುಮೇಗೌಡ
    22) ಚಾಮರಾಜನಗರ – ಆರ್ ಧ್ರುವ ನಾರಾಯಣ್
    23) ಚಿಕ್ಕಬಳ್ಳಾಪುರ -ಡಾ ಎಂ ವೀರಪ್ಪ ಮೊಯ್ಲಿ
    24) ಕೋಲಾರ- ಕೆ ಎಚ್ ಮುನಿಯಪ್ಪ
    25) ಬೆಂಗಳೂರು ಗ್ರಾಮಾಂತರ – ಡಿ ಕೆ ಸುರೇಶ್

    ಸದ್ಯ ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವ ಮೂರು ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ವಿವರ
    26) ಹಾಸನ- ಪ್ರಜ್ವಲ್ ರೇವಣ್ಣ
    27) ಮಂಡ್ಯ – ನಿಖಿಲ್ ಕುಮಾರಸ್ವಾಮಿ
    28) ಶಿವಮೊಗ್ಗ- ಮಧು ಬಂಗಾರಪ್ಪ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆ- ಈ ಬಾರಿ ಎನ್‍ಡಿಎಗೆ 8 ಸೀಟುಗಳ ಕೊರತೆ..?

    ಲೋಕಸಭಾ ಚುನಾವಣೆ- ಈ ಬಾರಿ ಎನ್‍ಡಿಎಗೆ 8 ಸೀಟುಗಳ ಕೊರತೆ..?

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ಡೌಟ್ ಎನ್ನಲಾಗುತ್ತಿದೆ. ಯಾಕಂದ್ರೆ 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ 220 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ.

    2014ಕ್ಕೆ ಹೋಲಿಸಿದ್ರೆ 62 ಸ್ಥಾನಗಳು ಖೋತಾವಾಗಲಿದ್ದು ಬಹುಮತಕ್ಕೆ 52 ಸ್ಥಾನಗಳ ಕೊರತೆ ಉಂಟಾಗುತ್ತದೆ. ಸದ್ಯ ಲೋಕಸಭೆಯಲ್ಲಿ 305 ಸ್ಥಾನ ಹೊಂದಿರುವ ಎನ್‍ಡಿಎಗೆ 8 ಸೀಟುಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.

    300ರ ಗಡಿ ದಾಟಲು ಮೋದಿ ಮೂರು ದೈತ್ಯ ಪ್ರಾದೇಶಿಕ ಪಕ್ಷಗಳು ಕೈ ಹಿಡಿದರೆ ಬಲಿಷ್ಠ ಸರ್ಕಾರ ರಚನೆಗೆ ಲೆಕ್ಕಾಚಾರ ನಡೆದಿದೆ. ಹೀಗಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್, ಜಗನ್, ತೆಲಂಗಾಣ ಸಿಎಂ ಕೆಸಿಆರ್ ನತ್ತ  ಮೋದಿ ಚಿತ್ತ ನೆಟ್ಟಿದೆ. ಬಿಜೆಡಿ, ಟಿಆರ್ ಎಸ್, ವೈಎಸ್‍ಆರ್ ಕಾಂಗ್ರೆಸ್ ಬರೋಬ್ಬರಿ 36 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದು, ಆಗ ಎನ್‍ಡಿಎ ಬಲಾಬಲ 264+36 = 300 ಸೀಟುಗಳ ಗಡಿದಾಟುವ ನಿರೀಕ್ಷೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ.

    ನಡೆಯುತ್ತಾ ಮೂರರ ಮ್ಯಾಜಿಕ್..?
    ಆಂಧ್ರಪ್ರದೇಶ – ಯುವಜನ ಶ್ರಮಿಕ ರಿತು ಕಾಂಗ್ರೆಸ್ (ವೈಎಸ್‍ಆರ್) – 11( ಗೆಲ್ಲುವ ಸ್ಥಾನ)
    ತೆಲಂಗಾಣ – ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) – 16 (ಗೆಲ್ಲುವ ಸ್ಥಾನ)
    ಓಡಿಶಾ – ಬಿಜು ಜನತಾ ದಳ (ಬಿಜೆಡಿ) – 09(ಗೆಲ್ಲುವ ಸ್ಥಾನ)

    ವೈಎಸ್‍ಆರ್‍ಪಿ+ಟಿಆರ್ ಎಸ್+ಬಿಜೆಡಿ – 36
    ಎನ್‍ಡಿಎ ಗೆಲ್ಲಬಹುದಾದ ಸ್ಥಾನಗಳು- 264
    ಒಟ್ಟು – 300


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv