Tag: LokSabha election

  • ಬುಧವಾರ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿಎಸ್‌ವೈ

    ಬುಧವಾರ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿಎಸ್‌ವೈ

    ಶಿವಮೊಗ್ಗ: ರಾಜ್ಯದ 28 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬುಧವಾರ ಬಿಡುಗಡೆಯಾಗಲಿದೆ ಎಂದು ಮಾಜಿ‌ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ತಿಳಿಸಿದರು.

    ಜಿಲ್ಲೆಯ ಸಾಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಇಲ್ಲವಾಗಿದೆ.‌ ಆದರೆ ನಾಳೆ (ಬುಧವಾರ) ಬಿಡುಗಡೆಯಾಗುವ ಎರಡನೇ ಪಟ್ಟಿಯಲ್ಲಿ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಹೆಸರು ಇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತನ ಕೇಸನ್ನೇ ಮುಚ್ಚಿ ಹಾಕಿದ್ದರು: ಸಿಎಂ

    ದೆಹಲಿಯಲ್ಲಿ ನಾಳೆ ಚುನಾವಣಾ ಸಮಿತಿ ಮೀಟಿಂಗ್ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳ ಫೈನಲ್ ಮಾಡುವ ಮೀಟಿಂಗ್ ನಡೆಯಲಿದೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ತೀರ್ಮಾನ ಆಗಲಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.‌ ಪಟ್ಟಿ ಬಿಡುಗಡೆಯ ಬಗ್ಗೆ ಪ್ರಧಾನಿ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Amitshah) ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

    ಇದೇ ವೇಳೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಎಫ್ಎಸ್ಎಲ್ ವರದಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಆರೋಪಿಗಳ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಿಲ್ಲ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದರು.

  • ಚುನಾವಣೆಯಲ್ಲಿ ಮೈ ಮರೆತ್ರೆ ವಿಧಾನಸೌಧದ ಗೋಪುರ ಗುಂಬಜ್ ಆಗುತ್ತೆ: ಪ್ರತಾಪ್ ಸಿಂಹ

    ಚುನಾವಣೆಯಲ್ಲಿ ಮೈ ಮರೆತ್ರೆ ವಿಧಾನಸೌಧದ ಗೋಪುರ ಗುಂಬಜ್ ಆಗುತ್ತೆ: ಪ್ರತಾಪ್ ಸಿಂಹ

    ಮಡಿಕೇರಿ: ರಾಜ್ಯದ ಜನರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈ ಮರೆತರೆ ವಿಧಾನಸೌಧದ ಗೋಪುರ ಗುಂಬಜ್ ಆಗುತ್ತೆ. ಮೈಕ್ ಇಟ್ಟು ಆಜಾನ್ ಕೂಗುತ್ತಾರೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಹೊಸ ಬಾಂಬ್ ಸಿಡಿಸಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್ (Congress) ಸರ್ಕಾರದಿಂದ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಾನು ಜನರಿಗೆ ಬಹಳ ಸ್ಪಷ್ಟವಾಗಿ ಹೇಳಿದೆ. ನೀವು ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ರೆ ಕನ್ನಡಿಗರ ಸರ್ಕಾರ ಅಲ್ಲ, ತಾಲಿಬಾನ್ ಸರ್ಕಾರ ರಚನೆ ಅಗುತ್ತದೆ ಎಂದು ಹೇಳಿದ್ದೆ. ಇವತ್ತು ತಾಲಿಬಾನ್ ಸರ್ಕಾರ ಅಳ್ವಿಕೆ ನಡೆಸುತ್ತಿರುವುದಕ್ಕೆ ಟ್ರಯಲ್ ಗಳು ಕಾಣಿಸುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ. ಕಾಂಗ್ರೆಸ್ ಅವರು ಲಜ್ಜೆಗೆಟ್ಟು ಸಮರ್ಥನೆ ಕೊಟ್ಟಿಕೊಂಡು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಹೊಸದು ಅಲ್ಲ. ಕಾಂಗ್ರೆಸ್ ಈ ಹಿಂದಿನ 2013 ರಿಂದ 18ರ ವರೆಗೆ ಅಧಿಕಾರದಲ್ಲಿ ಇರುವಾಗಲೂ ಕೊಡಗಿನಲ್ಲಿ ಮಹಿಳೆಯರ ಮೇಲೆಯೂ ರೌಡಿಶೀಟರ್ ಓಪನ್ ಮಾಡಿದ್ರು. ಈಗ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದ ಹುಬ್ಬಳ್ಳಿ ವ್ಯಕ್ತಿಯನ್ನು ಜೈಲಿಗೆ ಕಳಿಸುವಂತಹ ಪ್ರಯತ್ನ ಮಾಡಿದ್ರು. ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ (Hanuma Flag) ಹಾರಿಸಿದಕ್ಕೆ ಅದನ್ನು ಇಳಿಸುವಂತಹ ಕೆಲಸ ಮಾಡಿದ್ರು. ಈಗ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಅಗುತ್ತಿದೆ ಎಂದರು. ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್‌ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ

    ಚುನಾವಣೆ (Loksabha Election) ಹತ್ತಿರ ಬಂದಿರುವುದರಿಂದ ನಮ್ಮ ಕಾರ್ಯಕರ್ತರನ್ನ ಎದೆಗುಂದುವ ಹಾಗೆ ಮಾಡಿ ಅವರನ್ನು ಸುಮ್ಮನೆ ಕೂರಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಗೆಲುವು ಸಾಧಿಸಬೇಕು ಎಂದು ವ್ಯವಸ್ಥಿತ ಸಂಚು ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಅಲ್ಪಸಂಖ್ಯಾತ ಓಲೈಕೆ ಬಿಟ್ಟು ಬೇರೆ ಯಾವ ಅಜೆಂಡಾ ಇಲ್ಲ, ಅದು ಅವರು ಕಳೆದ 8 ತಿಂಗಳಿಂದ ನಡೆದುಕೊಳ್ಳುತ್ತಿರುವ ರೀತಿಯಲ್ಲೇ ಗೊತ್ತಾಗುತ್ತಿದೆ. ಯಾವ ದಲಿತರು ಮತ ಹಾಕಿದ್ರು. ಹಿಂದೂ ವಿರೋಧಿ, ದಲಿತರ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಇದೆ ಎಂದು ರಾಜ್ಯ ಸರ್ಕಾರ ವಿರುದ್ಧ ಪ್ರತಾಪ್ ಸಿಂಹ ಅಕ್ರೋಶ ಹೊರಹಾಕಿದ್ದಾರೆ.

  • ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್‌ನ ಹೈ ಪ್ರೊಫೈಲ್ ಕ್ಷೇತ್ರ ಗುರುದಾಸ್‌ಪುರದಿಂದ ಸ್ಪರ್ಧಿಸುವ ವಿಚಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ತಳ್ಳಿಹಾಕಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಂಗ್‌, ನಾನು ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ.  ನನ್ನ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದಾಗಿದೆ. ನನ್ನ ಫೌಂಡೇಶನ್ ಮೂಲಕ ನಾನು ಅದನ್ನು ಮುಂದುವರಿಸುತ್ತೇನೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಟ್ಟಿಗೆ ಕೆಲಸ ಮುಂದುವರಿಸೋಣ ಎಂದಿದ್ದಾರೆ.

    ಬಿಜೆಪಿಯು ಲೋಕಸಭೆ ಚುನಾವಣೆಗೆ (Lokabha Election) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಯುವರಾಜ್‌ ಸಿಂಗ್ ಸ್ಪರ್ಧಿಸಬಹುದು ಎಂಬುದು ವರದಿಯಾಗಿತ್ತು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

    ಗುರುದಾಸ್‌ಪುರವು ಪ್ರಸಿದ್ಧ ಸಂಸದರ ಇತಿಹಾಸವನ್ನು ಹೊಂದಿದೆ. ಸನ್ನಿ ಡಿಯೋಲ್ (Sunny Deol) ಅವರಿಗಿಂತ ಮೊದಲು , ಈ ಕ್ಷೇತ್ರವನ್ನು ದಿವಂಗತ ನಟ ವಿನೋದ್ ಖನ್ನಾ ಅವರು 1998, 1999, 2004 ಮತ್ತು 2014 ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಡಿಯೋಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖರ್ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ಜಾಖರ್ ನಂತರ ಮೇ 2022 ರಲ್ಲಿ ಬಿಜೆಪಿ ಸೇರಿದರು.

  • ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ

    ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ

    ಮಂಡ್ಯ: ಲೋಕಸಭಾ ಚುನಾವಣೆ (Loksabha Election 2024) ಹೊಸ್ತಿಲಲ್ಲಿಯೇ ಸಂಸದೆ ಸುಮಲತಾಗೆ ಶಕ್ತಿ ದೇವಿಯಿಂದ ಶುಭ ಸೂಚನೆ ಸಿಕ್ಕಿದೆ.

    ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದಲ್ಲಿ (Nimishambha Temple) ಸುಮಲತಾ ಅಂಬರೀಶ್ ಅವರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುತ್ತಿರುವಾಗ ದೇವಿಯು ಬಲಭಾಗದಲ್ಲಿ ಹೂ ನೀಡುವ ಮೂಲಕ ಶುಭ ಸೂಚನೆ ನೀಡಿದ್ದಾಳೆ.

    ದೇವಿ ಬಲಗಡೆ ಹೂ ನೀಡಿದ್ರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ದೇವಿಯ ಶುಭ ಸೂಚನೆಯಿಂದ ಸುಮಲತಾ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ನಿಮಿಷಾಂಬ ದೇಗುಲಕ್ಕೆ ಬಂದ್ರೆ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದು ಸಂಸದೆ ಹೇಳಿದರು.

  • ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಅಖಾಡ ರಂಗೇರಿದೆ. ಅಂದು 2019ರ ಲೋಕಸಭಾ ಚುನಾವಣೆ (Loksabha Election) ವೇಳೆ ಸುಮಲತಾ-ನಿಖಿಲ್ ಕುಮಾರಸ್ವಾಮಿ ಮಧ್ಯೆ ಲೋಕ ಯುದ್ಧ ಜೋರಾಗಿ ನಡೆದಿತ್ತು. ನಿಖಿಲ್ ಪರ ಅವರ ತಂದೆ ಆಗಿನ ಸಿಎಂ ಕುಮಾರಸ್ವಾಮಿ, ಮಂತ್ರಿ ಮಂಡಲದ ಮಂತ್ರಿಗಳು ಸೇರಿದಂತೆ ಹಲವು ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು. ಇನ್ನೊಂದೆಡೆ ಸುಮಲತಾ ಅಂಬರೀಶ್ ಪರವಾಗಿ ಜೋಡೆತ್ತಿನ ರೀತಿ ಅಬ್ಬರದ ಪ್ರಚಾರ ಮಾಡಿದ್ದು ದರ್ಶನ್ (Darshan) ಮತ್ತು ಯಶ್ (Yash). ಸುಮಲತಾ ಅಂಬರೀಶ್ (Sumalatha Ambareesh) ಅವರ ಗೆಲುವಿನ ಹಿಂದೆ ಕೇವಲ ದರ್ಶನ್ ಮತ್ತು ಯಶ್ ಅವರ ಪಾತ್ರದ ಜೊತೆಗೆ ಬ್ಯಾಕ್ ಬೋನ್ ಆಗಿ ಇಂದಿನ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಕೆಲಸ ಮಾಡಿದ್ರು.

    ಇಂಡುವಾಳು ಸಚ್ಚಿದಾನಂದ (Indavalu Sacchidananda) ಅವರು ಸುಮಲತಾರನ್ನು ಗೆಲ್ಲಿಸಲು ಎಲ್ಲಾ ನಾಯಕರನ್ನು ಒಗ್ಗೂಡಿಸಿ ಚುನಾವಣೆಯ ರಣ ತಂತ್ರವನ್ನು ಹೆಣೆದಿದ್ದರು. ಸುಮಲತಾ ಅವರ ಗೆಲುವಿಗೆ ಈ ಅಂಶವು ಪ್ರಮುಖ ಕಾರಣವಾಗಿತ್ತು. ಇದಾದ ಬಳಿಕ ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಸಚ್ಚಿದಾನಂದ ಪರ ಸುಮಲತಾ ಅವರು ನಾಮಿನೇಶನ್ ಫೈಲ್ ಹಾಗೂ ಒಂದು ದಿನದ ಪ್ರಚಾರದಲ್ಲಿ ಅಷ್ಟೇ ಕಾಣಿಸಿಕೊಂಡಿದ್ದರು. ಇದು ಸಚ್ಚಿದಾನಂದ ಅವರಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ.  ಇದನ್ನೂ ಓದಿ: ಗಂಗಾವತಿಯಲ್ಲಿ ‘ಗಾಲಿ’ಗೆ ಗಾಳ ಹಾಕಿದ ‘ಕೈ’ ಪಡೆ

    ಮೊನ್ನೆ ಬೆಂಗಳೂರಿನ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆದ ಸಭೆಯಗೆ ನಟ ದರ್ಶನ್ ಕೋರಿಕೆ ಮೇರೆಗೆ ಸಚ್ಚಿದಾನಂದ ಹೋಗಿದ್ರು. ಈ ವೇಳೆ ಸುಮಲತಾ ಹಾಗೂ ಸಚ್ಚಿದಾನಂದ ಅವರ ನಡುವೆ ರಾಜಿ ಸಂಧಾನವೂ ಸಹ ಆಗಿದೆ. ಈ ಬಳಿಕ ಸಚ್ಚಿದಾನಂದ ಎಲ್ಲಾ ಮರೆತಿದ್ದಾರೆ ಎನ್ನಲಾಗಿತ್ತು. ನಿನ್ನೆ ಸುಮಲತಾ ಅಂಬರೀಶ್ ಸಚ್ಚಿದಾನಂದ ಅವರ ಶ್ರೀರಂಗಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಲತಾ ಅವರು ಕೆಲ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ನಿನ್ನೆ ಮಂಡ್ಯದಲ್ಲಿ ಇದ್ದ ಸಚ್ಚಿದಾನಂದ ಅಲ್ಲಿ ಕಾಣಿಸಿಕೊಂಡಿಲ್ಲ. ಈ ಮೂಲಕ ಸಚ್ಚಿದಾನಂದ ಸುಮಲತಾ ಅವರ ನಡುವಿನ ಮನಸ್ತಾಪ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

    ಒಟ್ಟಾರೆ 2019ರ ಚುನಾವಣೆಯಲ್ಲಿ ಸುಮಲತಾ ಅವರ ಬ್ಯಾಕ್ ಬೋನ್ ಆಗಿ ಕೆಲಸ ಮಾಡಿದ್ದ ಸಚ್ಚಿದಾನಂದ ಈಗ ಅಂತರ ಕಾಯ್ದು ಕೊಂಡಿದ್ದಾರೆ. ಇದನ್ನು ಸುಮಲತಾ ಅವರು ಹೇಗೆ ಶಮನ ಮಾಡ್ತಾರೆ ಎನ್ನೋದನ್ನು ಕಾದು ನೋಡಬೇಕಿದೆ.

  • ಕೈ ನಾಯಕರ ಮಧ್ಯೆ ಲೋಕಸಭಾ ಟಿಕೆಟ್ ಫೈಟ್- ಹೈಕಮಾಂಡ್ ವಿರುದ್ಧ ಉಗ್ರಪ್ಪ ಅಸಮಾಧಾನ

    ಕೈ ನಾಯಕರ ಮಧ್ಯೆ ಲೋಕಸಭಾ ಟಿಕೆಟ್ ಫೈಟ್- ಹೈಕಮಾಂಡ್ ವಿರುದ್ಧ ಉಗ್ರಪ್ಪ ಅಸಮಾಧಾನ

    ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿರುವ ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ (Loksabha Election 2024) ಕಾವು ರಂಗೇರುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಪಕ್ಷಗಳ ಸಾಧನೆ ಪಟ್ಟಿ ಹಿಡಿದು ಆಯಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾಯಕರು, ಮುಖಂಡರು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.

    ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಶಾಸಕರ ಪುತ್ರಿ, ಸಚಿವರ ಸಹೋದರ, ಮಾಜಿ ಸಂಸದರು, ಕಾಂಗ್ರೆಸ್ ನಾಯಕರು ಸೇರಿ ಅನೇಕರು ಟಿಕೆಟ್‍ಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇನ್ನಿಲ್ಲದ ಲಾಬಿಯಲ್ಲಿ ನಿರತರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹಾಲಿ ಶಾಸಕ ಈ ತುಕಾರಾಂ ಅವರು ಹೊಸ ದಾಳ ಉರುಳಿಸಿದ್ದು, ನನಗೆ ಹೈಕಮಾಂಡ್ ಟಿಕೆಟ್ ಕೊಡುವುದಾಗಿ ಹೇಳಿದೆ. ಆದರೆ ನಾನು, ನನಗೆ ಬೇಡ ನನ್ನ ಮಗಳಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿರುವೆ. ಅಲ್ಲದೆ ಕಾಂಗ್ರೆಸ್ ನಡೆಸಿದ ಪ್ರತಿ ಸಮೀಕ್ಷೆಯಲ್ಲಿ ನನ್ನ ಪರವಾದ ಒಲವು ಮೂಡಿದೆ, ಹೀಗಾಗಿ ನನಗೆ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಿದೆ ಎಂದಿದ್ದಾರೆ.

    ಮಾಜಿ ಲೋಕಸಭಾ ಸದಸ್ಯ ಉಗ್ರಪ್ಪ (Ugrappa) ಅವರು ತುಕಾರಾಂ ಅವರ ಈ ಹೇಳಿಕೆಗೆ ಕೆಂಡಾಮಂಡಲ ಆಗಿದ್ದಾರೆ. ಹೈಕಮಾಂಡ್ ನನಗೆ ಟಿಕೆಟ್ ನಿರಾಕರಿಸಲು ಏನು ಕಾರಣ ಇದೆ? ನಾನು ಅಸಮರ್ಥನಾ? ಅಥವಾ ನಾನು ಆಕ್ಟಿವ್ ಆಗಿಲ್ಲವಾ? ನಾನು ಪಾರ್ಲಿಮೆಂಟ್ ಅಲ್ಲಿ ಪರ್ಫಾರ್ಮೆನ್ಸ್ ಕೊಟ್ಟಿಲ್ಲವಾ? ಯಾವುದಕ್ಕೆ ಟಿಕೆಟ್ ನಿರಾಕರಿಸುತ್ತಾರೆ? ಕಾರಣ ಕೊಡಿ ಎಂದು ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: ಮಂಡ್ಯ ಲೋಕಸಭೆ ಟಿಕೆಟ್‌ ಜೆಡಿಎಸ್‌ಗೆ ಕನ್ಫರ್ಮ್‌: ಜಿ.ಟಿ.ದೇವೇಗೌಡ

    ಒಟ್ಟಾರೆ ಕಾಂಗ್ರೆಸ್ ಟಿಕೆಟ್‍ಗಾಗಿ ಹಾಲಿ ಹಾಗೂ ಮಾಜಿಗಳ ನಡುವೆ ವಾಕ್ ಸಮರ ನಡೆಯುತ್ತಿದೆ. ಇದರ ಮಧ್ಯೆ ಬಿಜೆಪಿ ಲೋಕಸಭಾ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಭರ್ಜರಿ ತಯಾರಿ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ನಿಂದ ಯಾರು ಟಿಕೆಟ್ ಪಡೆಯುತ್ತಾರೆ, ಯಾರು ಜಯ ಗಳಿಸುತ್ತಾರೆ ಕಾದು ನೋಡಬೇಕು.

  • ಗಿಫ್ಟ್ ಪಾಲಿಟಿಕ್ಸ್- ಕ್ಷೇತ್ರದ ಮತದಾರರಿಗೆ ಕುಕ್ಕರ್, ಡಿನ್ನರ್ ಸೆಟ್ ಹಂಚಿದ ಕಾಂಗ್ರೆಸ್‌

    ಗಿಫ್ಟ್ ಪಾಲಿಟಿಕ್ಸ್- ಕ್ಷೇತ್ರದ ಮತದಾರರಿಗೆ ಕುಕ್ಕರ್, ಡಿನ್ನರ್ ಸೆಟ್ ಹಂಚಿದ ಕಾಂಗ್ರೆಸ್‌

    ರಾಮನಗರ: ಲೋಕಸಭಾ ಚುನಾವಣೆ (Loksabha Election) ಸಮೀಪ ಹಿನ್ನೆಲೆ ರಾಮನಗರದಲ್ಲೂ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ ಗೆ (Congress Gift Politics) ಮುಂದಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಉಡುಗೊರೆ ನೀಡುವುದಾಗಿ ಗಿಫ್ಟ್ ಕೂಪನ್ ನೀಡಿದ್ದ ಕಾಂಗ್ರೆಸ್‌, ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡುತ್ತಿದೆ. ಈ ಮೂಲಕ ಒಂದೇ ಗಿಫ್ಟ್ ಮೂಲಕ ಎರಡೂ ಚುನಾವಣೆಗಳ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡ್ತಿದೆ. ಇದನ್ನೂ ಓದಿ: ಜೋಕಾಲಿ ಆಡುವಾಗ ಹಗ್ಗಕ್ಕೆ ಕುತ್ತಿಗೆ ಸಿಲುಕಿ ಬಾಲಕ ದರ್ಮರಣ

    ಗಿಫ್ಟ್ ಬಾಕ್ಸ್ ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ‌.ಕೆ.ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರಗಳನ್ನ ಹಾಕಿ ಕುಕ್ಕರ್, ತವಾ, ಡಿನ್ನರ್ ಸೆಟ್ ಗಳ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡಲಾಗ್ತಿದೆ. ಗಿಫ್ಟ್ ಬಾಕ್ಸ್ ನೀಡಿ ಕಾಂಗ್ರೆಸ್ ಗೆ ವೋಟ್ ಹಾಕುವಂತೆ ತಾಕೀತು ಮಾಡಲಾಗ್ತಿದೆ ಎಂದು ಕಾಂಗ್ರೆಸ್ ನಾಯಕರ ಗಿಫ್ಟ್ ಪಾಲಿಟಿಕ್ಸ್ ಗೆ ಬಿಜೆಪಿ-ಜೆಡಿಎಸ್ (BJP- JDS) ಮುಖಂಡರು ಕಿಡಿಕಾರಿದ್ದಾರೆ‌.

    ಈ ಬಗ್ಗೆ ಚುನಾವಣಾ ಆಯೋಗ (Election Commission) ಕ್ರಮವಹಿಸಬೇಕು‌. ಮತದಾರರಿಗೆ ಆಮಿಷ ಒಡ್ಡುತ್ತಿರುವ ಕಾಂಗ್ರೆಸ್ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

  • Loksabha Election: ದೆಹಲಿಯಲ್ಲಿ ಕಾಂಗ್ರೆಸ್‌, ಎಎಪಿ ನಡುವೆ ಸೀಟು ಹಂಚಿಕೆ ಫೈನಲ್‌

    Loksabha Election: ದೆಹಲಿಯಲ್ಲಿ ಕಾಂಗ್ರೆಸ್‌, ಎಎಪಿ ನಡುವೆ ಸೀಟು ಹಂಚಿಕೆ ಫೈನಲ್‌

    ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯು (Loksabha Election 2024) ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಚುನಾವಣೆಗೆ ದೆಹಲಿಯಲ್ಲಿ ಎಎಪಿ (AAP) ಮತ್ತು ಕಾಂಗ್ರೆಸ್ (Congress) ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ.

    ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ (Mukul Wasnik), ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಆಮ್‌ ಆದ್ಮಿ ಪಕ್ಷವು 4 ಹಾಗೂ ಕಾಂಗ್ರೆಸ್‌ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯಲ್ಲಿ ಎಎಪಿ ಸ್ಪರ್ಧೆ ಮಾಡಲಿದ್ದು, ಚಾಂದಿನಿ ಚೌಕ್‌, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ

    ಗುಜರಾತ್‌ನಲ್ಲಿ ಕಾಂಗ್ರೆಸ್ 24 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಎಪಿಯು ಭಾವನಗರ ಮತ್ತು ಭರೂಚ್ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ. ಚಂಡೀಗಢದಲ್ಲಿ ಮತ್ತು ಗೋವಾದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಂಜಾಬ್‌ಗೆ ಯಾವುದೇ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಲಾಗಿಲ್ಲ. ಆದರೆ ಎಎಪಿ ಅಲ್ಲಿನ ಎಲ್ಲಾ 13 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮೊದಲೇ ಹೇಳಿತ್ತು. ಎಎಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ತಮ್ಮ ಚಿಹ್ನೆಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲಿವೆ. ಮೈತ್ರಿಗೆ ದೇಶ ಮುಖ್ಯ ಮತ್ತು ಯಾವುದೇ ಪಕ್ಷವಲ್ಲ ಎಂದು ಹೇಳಿದರು.

    ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ. ರೈತರು ದೌರ್ಜನ್ಯ ಎದುರಿಸುತ್ತಿದ್ದಾರೆ. ನಾವು ಬಿಜೆಪಿಯ ತಂತ್ರವನ್ನು ಬುಡಮೇಲು ಮಾಡುತ್ತೇವೆ. ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ನಾವು ಇಂಡಿಯಾ ಒಕ್ಕೂಟದ ಅಡಿಯಲ್ಲಿ ಜಂಟಿಯಾಗಿ ಹೋರಾಡುತ್ತೇವೆ ಎಂದು ವಾಸ್ನಿಕ್ ಹೇಳಿದರು.

    ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ವಾಸ್ನಿಕ್, ಅರವಿಂದರ್ ಸಿಂಗ್ ಲವ್ಲಿ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಎಎಪಿಯನ್ನು ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಸಂದೀಪ್ ಪಾಠಕ್ ಪ್ರತಿನಿಧಿಸಿದ್ದರು.ʼ

  • ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ

    ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ

    ನವದೆಹಲಿ: ಲೋಕಸಭಾ ಚುನಾವಣೆ (Loksabha Election 2024) ಕಾವು ದೇಶದಲ್ಲಿ ದಿನದಿನಕ್ಕೆ ಹೆಚ್ಚಾಗ್ತಿದೆ. ಅಮೇಥಿಯಲ್ಲಿ ಮಂಗಳವಾರವೂ ಯಾತ್ರೆ ನಡೆಸಿದ್ದ ರಾಹುಲ್ ಗಾಂಧಿ, ರಾತ್ರಿಹೊತ್ತು ಮದ್ಯ ಸೇವಿಸುವವರಿಂದ ಉತ್ತರಪ್ರದೇಶ ಭವಿಷ್ಯ ನರ್ತನ ಮಾಡ್ತಿದೆ ಅಂತಾ ವಿಮರ್ಶೆ ಮಾಡಿದ್ರು. ಅಷ್ಟೇ ಅಲ್ಲ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಾಡಹಗಲೇ ಕುಡಿದುಬಿದ್ದಿದ್ದ ವ್ಯಕ್ತಿಗಳನ್ನು ಕಂಡೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಕೌಂಟರ್ ನೀಡಿದ್ದಾರೆ.

    ರಾಹುಲ್ (Rahul Gandhi) ಮಾತು ಕೇಳಿದ್ರೆ ಅವರ ಮನಸ್ಸಲ್ಲಿ ಎಷ್ಟು ವಿಷ ತುಂಬಿಕೊಂಡಿದೆ ಎನ್ನುವುದು ಗೊತ್ತಾಗ್ತಿದೆ. ತಮ್ಮ ಮಗನನ್ನು ಚೆನ್ನಾಗಿ ಬೆಳೆಸಲಾಗದಿದ್ರೆ ಹೋಯ್ತು.. ಕನಿಷ್ಠ ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಲಿ ಎಂದು ಸೋನಿಯಾ ಗಾಂಧಿಗೆ ಸ್ಮೃತಿ ಇರಾನಿ ಸಲಹೆ ನೀಡಿದ್ರು. ರಾಹುಲ್ ತಮ್ಮ ಮಾತಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತಗೊಳಿಸಿದೆ – IT ವಿರುದ್ಧ ಗಂಭೀರ ಆರೋಪ

    ಈ ಮಧ್ಯೆ ಎಂಪಿ ಎಲೆಕ್ಷನ್ ಹೇಗೆ ನಡೆಯುತ್ತದೆ ಎಂಬುದಕ್ಕೆ ಚಂಡೀಗಢ ಮೇಯರ್ ಚುನಾವಣೆಯೇ ಉದಾಹರಣೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಎಸಗಲು ಬಿಜೆಪಿ ಸಜ್ಜಾಗಿದೆ ಎಂದು ಪರೋಕ್ಷವಾಗಿ ಆಪಾದನೆ ಮಾಡಿದ್ರು. I.N.D.I.A ಕೂಟದ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಲು ರಾಹುಲ್ ಗಾಂಧಿ 5 ದಿನ ನ್ಯಾಯಯಾತ್ರೆಯನ್ನು ಸ್ಥಗಿತ ಮಾಡಲಿದ್ದಾರೆ. ಈ ಐದು ದಿನದಲ್ಲಿ 2 ದಿನಗಳನ್ನು ಇಂಗ್ಲೆಂಡ್‍ನ ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ ನೀಡೋದಕ್ಕೆ ರಾಹುಲ್ ಗಾಂಧಿ ಮೀಸಲಿಟ್ಟಿದ್ದಾರೆ ಎನ್ನುವುದು ವಿಶೇಷ.

  • ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ: ಖರ್ಗೆ ಭವಿಷ್ಯ

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ: ಖರ್ಗೆ ಭವಿಷ್ಯ

    ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ. ಈ ಮೂಲಕ ಸೋಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭವಿಷ್ಯ ನುಡಿದಿದ್ದಾರೆ.

    ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ (Narendra Modi) 400 ಸೀಟುಗಳ ಯೋಜನೆ ಸಾಕಾರಗೊಳ್ಳುವುದಿಲ್ಲ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಬಿಜೆಪಿ ಹೇಳಿಕೊಂಡರೂ 100 ಸ್ಥಾನಗಳನ್ನು ದಾಟಲು ಸಾಧ್ಯವಾಗಲ್ಲ. ಈ ಬಾರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ.

    ಕಾಂಗ್ರೆಸ್ (Congress) ಅಧಿಕಾರಾವಧಿಯಲ್ಲಿ ಅಮೇಥಿಯಲ್ಲಿ ಕೋಟ್ಯಂತರ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ ಅವುಗಳಲ್ಲಿ ಹೆಚ್ಚಿನವು ಬಾಕಿ ಉಳಿದಿವೆ. ಯೋಜನೆಗಳು ಇನ್ನೂ ಏಕೆ ಅಪೂರ್ಣವಾಗಿವೆ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಅಮೇಥಿ ಮತ್ತು ರಾಯಬರೇಲಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಯಾಕೆಂದರೆ ಅವರು ಯೋಜನೆಗಳನ್ನು ಮುಗಿಸಿದ್ದಾರೆ ಎಂದರು.

    ಇದು ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi) ಅವರು ಶ್ರಮಿಸಿದ ನೆಲ. ಅಮೇಥಿಯ ಜನರು ಗಾಂಧಿ ಕುಟುಂಬದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಖರ್ಗೆ ಹೇಳಿದರು. ಇದನ್ನೂ ಓದಿ: ಶಾಲೆಯಲ್ಲಿ ಧರ್ಮ ಅವಹೇಳನ ಆರೋಪ- ಮೀಡಿಯಾಗೆ ಹೇಳಿಕೆ ಕೊಟ್ಟ ಶಿಕ್ಷಕಿ ವಜಾ, ವಿದೇಶದಿಂದ ಬೆದರಿಕೆ