Tag: Loksabha election result

  • ಲೋಕಸಭೆ ಚುನಾವಣೆ ಫಲಿತಾಂಶ 2024 LIVE Updates

    ಲೋಕಸಭೆ ಚುನಾವಣೆ ಫಲಿತಾಂಶ 2024 LIVE Updates

    1 year agoJune 4, 2024 6:23 pm

    ನಾವು ಬಿಜೆಪಿಯ ಬೆನ್ನು ಮುರಿದಿದ್ದೇವೆ: ಮಮತಾ ಬ್ಯಾನರ್ಜಿ

    ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಕಳೆದುಕೊಂಡಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು. ನಾನು ಇಂಡಿಯಾ ಒಕ್ಕೂಟದ ಭಾಗ. ಪವಾರ್, ಉದ್ಧವ್ ಮತ್ತು ಆಪ್ ಜೊತೆಗೆ ಮಾತನಾಡಿದ್ದೇನೆ. ನಾಳೆಯ ಸಭೆಯಲ್ಲಿ ಭಾಗಿಯಾಗುತ್ತೇನೆ

    1 year agoJune 4, 2024 4:49 pm

    ಶಿವರಾಜ್‌ ಸಿಂಗ್‌ ಭರ್ಜರಿ ಜಯ

    ಮಧ್ಯಪ್ರದೇಶದ ವಿಧಿಶಾದಿಂದ 8.2 ಲಕ್ಷ ಮತಗಳ ಅಂತರದಿಂದ ಗೆದ್ದ ಶಿವರಾಜ್‌ ಸಿಂಗ್‌ ಚೌಹಾಣ್‌

    1 year agoJune 4, 2024 3:35 pm

    ಟಿಡಿಪಿ, ಜೆಡಿಯು ಬೆಂಬಲ ಕೇಳಿದ ಶರದ್‌ ಪವಾರ್‌

    ಸರ್ಕಾರ ರಚನೆ ಸಂಬಂಧ ಚಂದ್ರಬಾಬು ನಾಯ್ಡ್‌ ಮತ್ತು ನಿತೀಶ್‌ ಕುಮಾರ್‌ಗೆ ಕರೆ ಮಾಡಿ ಬೆಂಬಲ ಕೇಳಿದ ಎನ್‌ಸಿಪಿ ನಾಯಕ ಶರದ್‌ ಪವಾರ್‌

    1 year agoJune 4, 2024 3:16 pm

    ವಿಧಾನಸಭೆಯಲ್ಲಿ ಸೋತು ಲೋಕಸಭೆಯಲ್ಲಿ ಗೆದ್ದವರು

    ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ ವಿ.ಕ್ಷೇತ್ರ) – ಚಿಕ್ಕಬಳ್ಳಾಪುರ

    ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ ವಿ.ಕ್ಷೇತ್ರ) – ಬೆಳಗಾವಿ

    ವಿ ಸೋಮಣ್ಣ (ವರುಣಾ, ಚಾಮರಾಜನಗರ) – ತುಮಕೂರು

    ಗೋವಿಂದ ಕಾರಜೋಳ(ಮುಧೋಳ) – ಚಿತ್ರದುರ್ಗ

    1 year agoJune 4, 2024 3:07 pm

    ದಕ್ಷಿಣ ಕನ್ನಡಕ್ಕೆ ಕ್ಯಾಪ್ಟನ್‌

    ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಗೆಲುವು. ಕಾಂಗ್ರೆಸ್ಸಿನ ಪದ್ಮರಾಜ್‌ ವಿರುದ್ಧ ಚೌಟಗೆ ಗೆಲುವು

    1 year agoJune 4, 2024 2:50 pm

    ಎನ್‌ಡಿಎ ಪಕ್ಷಗಳಿಗೆ ಅಮಿತ್‌ ಶಾ ಕರೆ

    ಬುಧವಾರ ದೆಹಲಿಯಲ್ಲಿ ಎನ್‌ಡಿಎ ಅಂಗಪಕ್ಷಗಳ ಸಭೆ. ನಾಯಕರಿಗೆ ಕರೆ ಮಾಡಿ ಅಹ್ವಾನ ಮಾಡಿದ ಅಮಿತ್‌ ಶಾ

    1 year agoJune 4, 2024 2:42 pm

    ಸಿಎಂ, ಡಿಸಿಎಂಗೆ ಸೋಲು

    ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಇಬ್ಬರಿಗೂ ಸೋಲಿನ ಕಹಿ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು, ಡಿಸಿಎಂ ಡಿಕೆ ಶಿವಕುಮಾರ್‌ ತವರು ಬೆಂಗಳೂರು ಗ್ರಾಮಾಂತರದಲ್ಲಿ ಸೋಲು

    1 year agoJune 4, 2024 2:24 pm

    ಪಿಸಿ ಮೋಹನ್‌ಗೆ ಗೆಲುವು

    ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಗೆ ಗೆಲುವು – ಕಾಂಗ್ರೆಸ್ಸಿನ ಮನ್ಸೂರ್‌ ಆಲಿಖಾನ್‌ಗೆ ಸೋಲು.

    1 year agoJune 4, 2024 1:14 pm

    ಮಂಜುನಾಥ್‌ಗೆ ಗೆಲುವು

    ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ಗೆ ಗೆಲುವು. ಡಿಕೆ ಸುರೇಶ್‌ಗೆ ಸೋಲು

    1 year agoJune 4, 2024 1:09 pm

    ತೇಜಸ್ವಿ ಸೂರ್ಯಗೆ ಗೆಲುವು

    ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ಗೆಲುವು. ಸೌಮ್ಯ ರೆಡ್ಡಿಗೆ ಸೋಲು

    1 year agoJune 4, 2024 12:58 pm

    ಜೆಡಿಯು ಮೊದಲ ಪ್ರತಿಕ್ರಿಯೆ

    ಎನ್‌ಡಿಎ ಪರ ಜನಾದೇಶ ಬಂದಿದೆ. ನಾವು ಎನ್‌ಡಿಎ ಪರ ನಿಲ್ಲುತ್ತೇವೆ.

    1 year agoJune 4, 2024 12:36 pm

    ಕುಮಾರಸ್ವಾಮಿಗೆ ಗೆಲುವು

    ಮಂಡ್ಯದಲ್ಲಿ ಕುಮಾರಸ್ವಾಮಿಗೆ ಗೆಲುವು, ಸ್ಟಾರ್‌ ಚಂದ್ರುಗೆ ಸೋಲು. ಅಧಿಕೃತ ಘೋಷಣೆ ಮಾತ್ರ ಬಾಕಿ

    1 year agoJune 4, 2024 12:34 pm

    ಹಾಸನದಲ್ಲಿ ಕಾಂಗ್ರೆಸ್‌ ಗೆಲುವು

    ಶ್ರೇಯಸ್‌ ಪಾಟೀಲ್‌ಗೆ ಜಯ, ಪ್ರಜ್ವಲ್‌ ರೇವಣ್ಣಗೆ ಸೋಲು

    1 year agoJune 4, 2024 11:57 am

    ಕೋಲಾರದಲ್ಲಿ ಜೆಡಿಎಸ್‌ ಗೆಲುವು

    45 ಸಾವಿರ ಮತಗಳಿಂದ ಮಲ್ಲೇಶ್‌ ಬಾಬುಗೆ ಜಯ

    1 year agoJune 4, 2024 11:39 am

    ಚಾಮರಾಜನಗರದಲ್ಲಿ ಕಾಂಗ್ರೆಸ್‌ ಮುನ್ನಡೆ

    ಸುನೀಲ್‌ ಬೋಸ್‌ಗೆ 1 ಲಕ್ಷ ಮತಗಳ ಮುನ್ನಡೆ,

    1 year agoJune 4, 2024 11:25 am

    ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್‌ ಮುನ್ನಡೆ

    ಪಿಸಿ ಮೋಹನ್‌ಗೆ 34,729 ಮತಗಳ ಹಿನ್ನಡೆ, ಮನ್ಸೂರು ಅಲಿ ಖಾನ್‌ಗೆ ಮುನ್ನಡೆ

    1 year agoJune 4, 2024 11:10 am

    ಎನ್‌ಡಿಎ ವರ್ಸಸ್‌ ಇಂಡಿಯಾ

    ಎನ್‌ಡಿಎ 293, ಇಂಡಿ 226, ಇತರರು 24 ಕ್ಷೇತ್ರಗಳಲ್ಲಿ ಮುನ್ನಡೆ

    1 year agoJune 4, 2024 10:55 am

    ಉತ್ತರ ಪ್ರದೇಶದಲ್ಲಿ ಹಾವು ಏಣಿ ಆಟ

    ಎಸ್‌ಪಿ 36, ಬಿಜೆಪಿ 34,ಕಾಂಗ್ರೆಸ್‌ 7, ಆರ್‌ಎಲ್‌ಡಿ 2 ಕ್ಷೇತ್ರಗಳಲ್ಲಿ ಮುನ್ನಡೆ

    1 year agoJune 4, 2024 10:47 am

    ಕೇರಳದ 2 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ತ್ರಿಶ್ಯೂರಿನಲ್ಲಿ ಸುರೇಶ್‌ ಗೋಪಿ, ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ ಮುನ್ನಡೆ

    1 year agoJune 4, 2024 10:46 am

    ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ

    ಮಧ್ಯಪ್ರದೇಶದ ಎಲ್ಲಾ 29 ಕ್ಷೇತ್ರಗಳಲ್ಲಿ ಮುನ್ನಡೆ

    1 year agoJune 4, 2024 10:21 am

    ಸುರೇಶ್‌ ಗೋಪಿಗೆ ಮುನ್ನಡೆ

    ಕೇರಳದ ತ್ರಿಶ್ಯೂರಿನಲ್ಲಿ ಸುರೇಶ್‌ ಗೋಪಿಗೆ 18,454 ಮತಗಳಿಂದ ಮುನ್ನಡೆ

    1 year agoJune 4, 2024 9:49 am

    ಬೀದರ್‌ನಲ್ಲಿ ಕಾಂಗ್ರೆಸ್‌ ಮುನ್ನಡೆ

    ಮೂರನೇಯ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ..

    ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ – 74359

    ಬಿಜೆಪಿ ಅಭ್ಯರ್ಥಿ ಭಗವತ್ ಖೂಬಾ – 62983

    ಕಾಂಗ್ರೆಸ್ ಅಭ್ಯರ್ಥಿ 11376 ಮತಗಳಿಂದ ಮುನ್ನಡೆ

    1 year agoJune 4, 2024 9:47 am

    ಉತ್ತರ ಪ್ರದೇಶದಲ್ಲಿ ಹಾವು ಏಣಿ ಆಟ

    ಎನ್‌ಡಿಎ 39, ಇಂಡಿಯಾ 39, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ

    1 year agoJune 4, 2024 9:43 am

    ಎನ್‌ಡಿಎ vs ಇಂಡಿಯಾ ಮಧ್ಯೇ ಭಾರೀ ಸ್ಪರ್ಧೆ

    ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಭಾರೀ ಸ್ಪರ್ಧೆ

    ಡಾ.ಮಂಜುನಾಥ್‌ಗೆ ಮುನ್ನಡೆ

    48 ಸಾವಿರ ಮತಗಳಿಂದ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್‌ ಮುನ್ನಡೆ. ಡಿಕೆ ಸುರೇಶ್‌ ಹಿನ್ನಡೆ

    1 year agoJune 4, 2024 9:13 am

    ತುಮಕೂರಿನಲ್ಲಿ ಸೋಮಣ್ಣ ಮುನ್ನಡೆ

    ಬಿಜೆಪಿ -13453
    ಕಾಂಗ್ರೆಸ್ – 12296
    ಬಿಜೆಪಿ ಮುನ್ನಡೆ -1157

    1 year agoJune 4, 2024 8:56 am

    300 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ

    ಎನ್‌ಡಿಎ 310, INDIA 172, ಇತರರು 30 ಕ್ಷೇತ್ರಗಳಲ್ಲಿ ಮುನ್ನಡೆ

    1 year agoJune 4, 2024 8:47 am

    ಡಾ.ಮಂಜುನಾಥ್‌ಗೆ ಮುನ್ನಡೆ

    ಬೆಂಗಳೂರು ಗ್ರಾಮಾಂತರ ಮೊದಲ ಸುತ್ತಿನಲ್ಲಿ ಡಾ. ಮಂಜುನಾಥ್‌ಗೆ 3319 ಮತಗಳ ಮುನ್ನಡೆ. ಡಿಕೆ ಸುರೇಶ್‌ಗೆ ಹಿನ್ನಡೆ

    1 year agoJune 4, 2024 8:40 am

    ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಮುನ್ನಡೆ

    ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 4448 ಮತ,
    ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 3428 ಮತ
    1020 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮುನ್ನಡೆ

    1 year agoJune 4, 2024 8:34 am

    ಕೋಲಾರದಲ್ಲಿ ಕಾಂಗ್ರೆಸ್‌ ಮುನ್ನಡೆ

    ಕಾಂಗ್ರೆಸ್‌ನ ಗೌತಮ್‌ಗೆ ಮುನ್ನಡೆ, ಜೆಡಿಎಸ್‌ ಮಲ್ಲೇಶ್‌ ಬಾಬುಗೆ ಹಿನ್ನಡೆ

    1 year agoJune 4, 2024 8:30 am

    ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ

    44 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಲಕ್ನೋದಲ್ಲಿ ರಾಜನಾಥ್‌ ಸಿಂಗ್‌ ಮುನ್ನಡೆ

    1 year agoJune 4, 2024 8:28 am

    ಕಾಗೇರಿ ಮುನ್ನಡೆ

    ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ

    1 year agoJune 4, 2024 8:25 am

    ಡಾ.ಮಂಜುನಾಥ್‌ಗೆ ಮುನ್ನಡೆ

    ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್‌ಗೆ 1 ಸಾವಿರ ಮತಗಳ ಮುನ್ನಡೆ. ಡಿಕೆ ಸುರೇಶ್‌ಗೆ ಆರಂಭಿಕ ಹಿನ್ನಡೆ

    1 year agoJune 4, 2024 8:21 am

    ಅಣ್ಣಾಮಲೈಗೆ ಹಿನ್ನಡೆ

    ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಅಂಚೆ ಮತದಾನದಲ್ಲಿ ಹಿನ್ನಡೆ

    1 year agoJune 4, 2024 8:16 am

    ರಾಹುಲ್‌ ಮುನ್ನಡೆ

    ಕೇರಳದ ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ರಾಹುಲ್‌ ಗಾಂಧಿ ಮುನ್ನಡೆ

    1 year agoJune 4, 2024 8:15 am

    ದೆಹಲಿಯಲ್ಲಿ ಬಿಜೆಪಿ ಮುನ್ನಡೆ

    ದೆಹಲಿಯ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ

    1 year agoJune 4, 2024 8:05 am

    ಜೆಡಿಎಸ್‌ ಮುನ್ನಡೆ, ಕರಾವಳಿಯಲ್ಲಿ ಬಿಜೆಪಿ ಮುನ್ನಡೆ

    ಅಂಚೆ ಮತದಾನದಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ, ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್‌ ಚೌಟ, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಮುನ್ನಡೆ

    ಅಂಚೆ ಮತದಾನದಲ್ಲಿ ಬಿಜೆಪಿ ಮುನ್ನಡೆ

    1 year agoJune 4, 2024 7:57 am

    ಬಾಗಲಕೋಟೆಯಲ್ಲಿ ಗದ್ದಿಗೌಡರ್, ಬೆಂಗಳೂರು ಕೇಂದ್ರದಲ್ಲಿ ಪಿಸಿ ಮೋಹನ್‌, ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್‌ ಮುನ್ನಡೆ

    1 year agoJune 4, 2024 6:56 am

    ವಿಶ್ವದಾಖಲೆ ಬರೆದ ಮತದಾನ

    • ದೇಶದ 64.2 ಕೋಟಿ ಜನರಿಂದ ಈ ಬಾರಿ ಮತದಾನ. ಜಗತ್ತಿನಲ್ಲಿ ಇವರೆಗೂ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿಲ್ಲ
    • ಈ ಬಾರಿ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು, 33 ಕೋಟಿ ಪುರುಷರಿಂದ ಮತದಾನ
    1 year agoJune 4, 2024 6:28 am

    ಬೆಳಗ್ಗೆ 8.00 ಗಂಟೆಗೆ ಅಂಚೆ ಮತ ಎಣಿಕೆ ಶುರು – 8.30ರಿಂದ ಇವಿಎಂ ಮತ ಎಣಿಕೆ ಪ್ರಕ್ರಿಯೆ ಶುರು

    1 year agoJune 4, 2024 6:25 am

    ಲೋಕಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟ

    ಲೋಕಸಭೆ ಚುನಾವಣೆ ಫಲಿತಾಂಶ – ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರು

  • ಭಾರತದ ಮಹಾ ತೀರ್ಪಿಗೆ ಕ್ಷಣಗಣನೆ- ಮಹಾಫಲಿತಾಂಶಕ್ಕೆ ಕಾಯುತ್ತಿದೆ ಜಗತ್ತು 

    ಭಾರತದ ಮಹಾ ತೀರ್ಪಿಗೆ ಕ್ಷಣಗಣನೆ- ಮಹಾಫಲಿತಾಂಶಕ್ಕೆ ಕಾಯುತ್ತಿದೆ ಜಗತ್ತು 

    ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಮಹಾತೀರ್ಪಿಗೆ (Loksabha Election Result 2024) ಇದೀಗ ಕ್ಷಣಗಣನೆ ಆರಂಭವಾಗಿದೆ. 7 ಹಂತಗಳಲ್ಲಿ ನಡೆದ ಚುನಾವಣಾ ಹಬ್ಬದ ಮಹಾ ಫಲಿತಾಂಶಕ್ಕಾಗಿ ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿದೆ.
    ಮತ ಎಣಿಕೆಗೆ ಅಂತಿಮ ಹಂತದ ಸಿದ್ದತೆಗಳು ಎಲ್ಲಾ ಕಡೆ ಮುಗಿದಿವೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮೊದಲಿಗೆ ಅಂಚೆ ಮತಗಳು ಮತ್ತು ಹಿರಿಯ ಮತದಾರರ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅರ್ಧ ಗಂಟೆ ನಂತರ ಇವಿಎಂ ಮತಗಳ ಎಣಿಕೆ ಕಾರ್ಯ ಶುರುವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ನಿಖರ ಟ್ರೆಂಡ್ ಗೊತ್ತಾಗುವ ನಿರೀಕ್ಷೆ ಇದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಸೆಂಟ್ ಜೋಸೆಫ್ ಕಾಲೇಜಿಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜಿನಲ್ಲಿ ನಡೆಯಲಿದೆ.
    ಬೆಂಗಳೂರು ಗ್ರಾಮಾಂತರದ ಮತ ಎಣಿಕೆ ರಾಮನಗರದಲ್ಲಿ, ಬೆಳಗಾವಿ ಮತ ಎಣಿಕೆ ಬೆಳಗಾವಿಯಲ್ಲಿ, ಚಿಕ್ಕೋಡಿ ಮತ ಎಣಿಕೆ ಚಿಕ್ಕೋಡಿಯಲ್ಲಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಉಡುಪಿಯಲ್ಲಿ, ಮೈಸೂರು-ಮಡಿಕೇರಿ ಕ್ಷೇತ್ರದ ಮತ ಎಣಿಕೆ ಮೈಸೂರಿನಲ್ಲಿ ಇನ್ನುಳಿದಂತೆ ಆಯಾ ಕ್ಷೇತ್ರಗಳ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟ ಆಗಲಿದೆ.
    ಈಗಾಗಲೇ ಎಕ್ಸಿಟ್ ಪೋಲ್‍ಗಳಲ್ಲಿ ಎನ್‍ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಅಂತ ಹೇಳುತ್ತಿದ್ದರೂ, ಐಎನ್‍ಡಿಐಎ ಮೈತ್ರಿಕೂಟದ ಉತ್ಸಾಹವೇನೂ ಕುಗ್ಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಹ್ಯಾಟ್ರಿಕ್ ರಾಜ್ಯಭಾರದ ನಿರೀಕ್ಷೆಯಲ್ಲಿದ್ದಾರೆ. 27 ಪಕ್ಷಗಳ ಮೈತ್ರಿಕೂಟ ಕಟ್ಟಿಕೊಂಡಿರೋ ಇಂಡಿ ಒಕ್ಕೂಟ ಕೂಡ ಅಧಿಕಾರದ ಹಿಡಿಯುವ ನಂಬಿಕೆಯಲ್ಲಿದೆ.
    ಇದೇ ಹೊತ್ತಲ್ಲಿ ಸೋಮವಾರ ಕೇಂದ್ರ ಚುನಾವಣಾ ಆಯೋಗ ವಿಶೇಷ ಸುದ್ದಿಗೋಷ್ಠಿ ನಡೆಸಿದೆ. ಚುನಾವಣೆ ಮುಗಿಯುವ ಹೊತ್ತಲ್ಲಿ ಚುನಾವಣಾ ಆಯೋಗ ಹೀಗೆ ಸುದ್ದಿಗೋಷ್ಠಿ ನಡೆಸಿರೋದು ದೇಶದ ಚುನಾವಣಾ ಇತಿಹಾಸದಲ್ಲಿಯೇ ಇದೇ ಮೊದಲು.. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ವಿವರ ನೀಡಿದ್ರು.
    ಮತ ಹಬ್ಬದ ವಿಶೇಷ: 96.88 ಕೋಟಿ ಮತದಾರರ ಪೈಕಿ 64.2 ಕೋಟಿ ಮಂದಿ ಮತದಾನ ಮಾಡಿದ್ದಾರೆ. 31.2 ಕೋಟಿ ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. 10.5 ಲಕ್ಷ ಮತಗಟ್ಟೆಗಳಲ್ಲಿ 1.5 ಕೋಟಿ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. 135 ಪ್ರತ್ಯೇಕ ರೈಲು ಸೇರಿ 4 ಲಕ್ಷ ವಾಹನಗಳ ಬಳಕೆ ಮಾಡಲಾಗಿದೆ. 27 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಮರುಮತದಾನ ನಡೆದಿಲ್ಲ. ಈ ಬಾರಿ ಕೇವಲ 39 ಕಡೆ ಮಾತ್ರ ಮರುಮತದಾನ ನಡೆದಿದೆ.
    2019ರಲ್ಲಿ 540 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿತ್ತು. ಕಳೆದ ನಾಲ್ಕು ದಶಕಕ್ಕೆ ಹೋಲಿಸಿದ್ರೆ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಮತದಾನವಾಗಿದೆ. (ಜಮ್ಮು ಕಾಶ್ಮೀರದಲ್ಲಿ 58.58ರಷ್ಟು ಮತದಾನ.. ಕಣಿವೆಯಲ್ಲಿ 51.05ರಷ್ಟು ಮತದಾನ). ಹಿಂಸಾಚಾರಪೀಡಿತ ಮಣಿಪುರದಲ್ಲಿಯೂ 61.84%ರಷ್ಟು ಮತದಾನ ನಡೆದಿದೆ. ನಗದು ಪ್ರವಾಹಕ್ಕೆ ಆಯೋಗ ತಡೆ ನೀಡಿದ್ದು, 10 ಸಾವಿರ ಕೋಟಿ ಮೌಲ್ಯದ (4391 ಕೋಟಿ ಮೌಲ್ಯದ ಡ್ರಗ್ಸ್, 1054 ಕೊಟಿ ನಗದು.. 898 ಕೋಟಿ ಮೌಲ್ಯದ ಮದ್ಯ, 1459 ಕೋಟಿ ಮೌಲ್ಯದ ಚಿನ್ನಾಭರಣ..2198 ಕೋಟಿ ಮೌಲ್ಯದ ಗಿಫ್ಟ್) ವಸ್ತುಗಳು ಸೀಜ್ ಆಗಿದೆ.
    2019ರಲ್ಲಿ 3500 ಕೋಟಿ ಮೌಲ್ಯದ ವಸ್ತುಗಳು ಸೀಜ್ ಮಾಡಲಾಗಿತ್ತು. ಸಿ-ವಿಜಿಲ್ ಆಪ್ ಮೂಲಕ 4.56 ಲಕ್ಷ ದೂರು ಸ್ವೀಕಾರ.. 99.9% ದೂರುಗಳಿಗೆ ಪರಿಹಾರ ನೀಡಲಾಗಿದೆ. ಮತದಾನ ದಿನಗಳಲ್ಲಿ ಚುನಾವಣೆ ಬಗ್ಗೆ 62 ಕೋಟಿ ಜನ ಗೂಗಲ್ ಸರ್ಚ್ ಮಾಡಿದ್ದಾರೆ.
  • ನಾನು ಮಾತನಾಡಲ್ಲ – ಮಾಧ್ಯಮಗಳ ಪ್ರಶ್ನೆಗೆ ಮೌನಕ್ಕೆ ಶರಣಾದ ಸಿಎಂ

    ನಾನು ಮಾತನಾಡಲ್ಲ – ಮಾಧ್ಯಮಗಳ ಪ್ರಶ್ನೆಗೆ ಮೌನಕ್ಕೆ ಶರಣಾದ ಸಿಎಂ

    ಬೆಂಗಳೂರು: ಇಂದು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿಎಂ ಮೌನಕ್ಕೆ ಜಾರಿದ್ದು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ತಮ್ಮ ಮುನಿಸನ್ನು ಮುಂದುವರಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಸಿಎಂ ಅವರ ಪ್ರತಿಕ್ರಿಯೆ ಕೇಳಿದ್ದಾಗ ಕೈಯಲ್ಲೇ ಸನ್ನೇ ಮಾಡಿ ಮಾತನಾಡಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ಮೇಲೆ ಸಿಎಂ ಮುನಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಂಡ್ಯ ರಾಜಕಾರಣದ ಬಗ್ಗೆ ಪ್ರಶ್ನಿಸಿದ್ದಾಗಲೂ ಕೂಡ ಸಿಎಂ ಗರಂ ಆಗಿದ್ದರು. ಮಾಧ್ಯಮಗಳಿಗೆ ಈಗ ಉತ್ತರ ನೀಡಲ್ಲ. ಮೇ 23ಕ್ಕೆ ಉತ್ತರ ನೀಡುತ್ತೇನೆ. ಮಂಡ್ಯ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೀರಿ. ನೀವು ನಮ್ಮ ಕುಟುಂಬ ಹಾಗೂ ನಮ್ಮ ಹೇಳಿಕೆಗಳನ್ನು ಹಿಡಿದು ವ್ಯಂಗ್ಯವಾಡುತ್ತೀರ. ನಿಮಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹರಿಹಾಯ್ದಿದ್ದರು. ಹಾಗೆಯೇ ಇಂದು ಕೂಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಮೌನಕ್ಕೆ ಶರಣಾಗಿದ್ದಾರೆ.

    ಸಿಎಂ ಹೇಳಿದ್ದೇನು?
    ಈ ಹಿಂದೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಂಡ್ಯ ಕ್ಷೇತ್ರ ಹಾಗೂ ಅಲ್ಲಿನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿ ಬರೀ ಸುಮಲತಾ, ಮೋದಿ ಎಂದು ತೋರಿಸುತ್ತಿದ್ದೀರಾ. ನಿಮಗೆ ನಾನು ಈಗ ಉತ್ತರ ನೀಡಲ್ಲ. ಮೇ 23ಕ್ಕೆ ಉತ್ತರ ನೀಡುತ್ತೇನೆ. ಮಂಡ್ಯ ರಾಜಕಾರಣ, ಅಲ್ಲಿನ ಜನ ಏನು ಎಂದು ನನಗೆ ಗೊತ್ತು. ನೋಡುತ್ತಿರಿ ಮೇ 23ಕ್ಕೆ ಜನ ಏನು ಎಂದು ತೋರಿಸುತ್ತಾರೆ. ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ಮಾಧ್ಯಮಗಳಲ್ಲೂ ಬರೀ ಸುಮಲತಾ, ಸುಮಲತಾ ಎಂದು ಹೇಳಿದ್ದೀರಾ. ಇದಕ್ಕೆಲ್ಲಾ ಮೇ 23ರ ನಂತರ ಉತ್ತರ ಸಿಗುತ್ತೆ. ಆಗ ಮಾತನಾಡುತ್ತೇನೆ ಎಂದು ಕಿಡಿಕಾರಿದ್ದರು.

    ಬಳಿಕ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಮಂಡ್ಯ ಚುನಾವಣೆ ಬಗ್ಗೆ ಕೇಳಲಾದ ಮಾಧ್ಯಮಗಳ ಪ್ರಶ್ನೆಗೆ ಸಿಎಂ ಸಿಟ್ಟಿಗೆದ್ದಿದ್ದರು. ನಾನು ಮಾಧ್ಯಮದವರ ಜೊತೆ ಉತ್ತಮ ಸ್ನೇಹ ಇಟ್ಟುಕೊಂಡ ವ್ಯಕ್ತಿ. ಕೆಲ ದಿನಗಳ ಹಿಂದೆ ಮಾಧ್ಯಮದವರ ಸಹವಾಸವೇ ಡೇಂಜರ್ ಅಂತಾ ದೂರ ಉಳಿದುಕೊಂಡಿದ್ದೇನೆ. ನಾನು ಮಾಧ್ಯಮದಿಂದ ಬದುಕಿಲ್ಲ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಬದುಕಿದ್ದೇನೆ. ಮಾತು ಎತ್ತಿದರೆ ಸಿಎಂ ಕುರ್ಚಿ ಗಢ ಗಢ ಅಂತಾ ಶುರು ಮಾಡಿಕೊಳ್ಳುತ್ತಾರೆ. ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಟೈಮ್ ಫಿಲ್ ಮಾಡಿಕೊಳ್ಳೋಕೆ ನಾವು ಹೇಳಿರದ ವಿಷಯಗಳನ್ನು ಅರ್ಧ ಗಂಟೆ ಎಪಿಸೋಡ್ ಮಾಡ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ವಿಷಯದ ಬಗ್ಗೆ ಅರ್ಧ ಗಂಟೆ ಸಂಚಿಕೆ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದರು.

    ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ತರಲು ಚರ್ಚೆ ನಡೆಸಿದ್ದೇವೆ. ಕೆಲವೊಂದು ವಾಹಿನಿಗಳು ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿಸುತ್ತಾರೆ. ನಾವೇನು ಬಿಟ್ಟಿ ಸಿಕ್ಕಿದ್ದೇವಾ? ನಮ್ಮ ಪ್ರತಿಯೊಂದು ಹೇಳಿಕೆಗಳನ್ನು ವ್ಯಂಗ್ಯವಾಗಿ ತೋರಿಸುವ ಅಧಿಕಾರವನ್ನು ಮಾಧ್ಯಮಗಳಿಗೆ ಯಾರು ನೀಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈ ಸಮ್ಮಿಶ್ರ ಸರ್ಕಾರ ಸದೃಢವಾಗಿದ್ದು, ಅಷ್ಟೊಂದು ಸುಲಭವಾಗಿ ಹೋಗಲ್ಲ ಎಂದು ಗುಡುಗಿದ್ದರು.

    ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆಗಿನ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ನಿಮ್ಮಲ್ಲಿನ ಚರ್ಚೆ ಹಾಗೂ ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಆಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ಸಿಟ್ಟಿನಿಂದಲೇ ತೆರಳಿದ್ದರು.

    ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡುತ್ತೀರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದರು.

    ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • ಜನರನ್ನ ವಶೀಕರಣ ಮಾಡ್ಕೊಂಡು ಮೋದಿ ಗೆದ್ದಿದ್ದಾರೆ – ದೋಸ್ತಿ ವಿರುದ್ಧ ಆಂಜನೇಯ ಕಿಡಿ

    ಜನರನ್ನ ವಶೀಕರಣ ಮಾಡ್ಕೊಂಡು ಮೋದಿ ಗೆದ್ದಿದ್ದಾರೆ – ದೋಸ್ತಿ ವಿರುದ್ಧ ಆಂಜನೇಯ ಕಿಡಿ

    ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲವೆಂದು ಮಾಜಿ ಸಚಿವ ಹಾಗೂ ಸಿದ್ದರಾಮಯ್ಯನವರ ಆಪ್ತ ಹೆಚ್. ಆಂಜನೇಯ ಅವರು ದೋಸ್ತಿ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ.

    ಚಿತ್ರದುರ್ಗ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಮಾಜಿ ಸಂಸದ ಚಂದ್ರಪ್ಪನೊಂದಿಗೆ ಇಂದು ಆಂಜನೇಯ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಆಂಜನೇಯ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಎರಡು ಪಕ್ಷಗಳ ಮೈತ್ರಿ ಕೇವಲ ಸರ್ಕಾರಕ್ಕೆ ಸೀಮಿತವಾಗಬೇಕಿತ್ತು. ಲೋಕಸಭಾ ಚುನಾವಣೆಗೆ ಈ ಮೈತ್ರಿ ಅಗತ್ಯವಿರಲಿಲ್ಲ. ಮೈತ್ರಿಯಿಂದ ಕಾಂಗ್ರೆಸ್ಸಿಗೆ ಆಗಲಿ, ಜೆಡಿಎಸ್‍ಗೆ ಆಗಲಿ ಯಾವುದೇ ಫಲ ಸಿಕ್ಕಿಲ್ಲ ಎಂದು ಕಿಡಿಕಾರಿದರು.

    ಈ ಮೈತ್ರಿ ಕೇವಲ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳ ವರಿಷ್ಟರ ಮಟ್ಟದಲ್ಲಿ ಮಾತ್ರ ಆಗಿದೆಯೇ ಹೊರತು, ಎರಡು ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರ ಮಟ್ಟದಲ್ಲಿ ಮೈತ್ರಿಯಾಗಿಲ್ಲ. ಹೀಗಾಗಿ ನಾವು ಈ ಚುನಾವಣೆಯಲ್ಲಿ ಸೋತಿದ್ದೇವೆ. ಆದ್ದರಿಂದ ಎರಡು ಪಕ್ಷಗಳು ಪರಸ್ಪರ ಅವಲೋಕನ ಮಾಡಿಕೊಳ್ಳಬೇಕಿದ್ದು, ಈ ಮೈತ್ರಿಯಿಂದ ಎರಡೂ ಪಕ್ಷಗಳ ಮೇಲು ಎಫೆಕ್ಟ್ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.

    ಇದೇ ವೇಳೆ ಪ್ರಧಾನಿ ಗೆಲುವಿನ ನಾಗಲೋಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಜನರನ್ನು ಮೋದಿ ವಶೀಕರಣ ಮಾಡಿಕೊಂಡು ಈ ಚುನಾವಣೆ ಗೆದ್ದಿದ್ದಾರೆ. ಇದು ನಿಜವಾದ ಗೆಲುವಲ್ಲ. ಈ ಕೇಂದ್ರ ಸರ್ಕಾರ 2014ರಲ್ಲಿ ಕೊಟ್ಟ ಭರವಸೆಗಳನ್ನೇ ಈಡೇರಿಸಿಲ್ಲ. ಆದರೆ ಈ ಚುನಾವಣೆಯಲ್ಲಿ ಬಂಡವಾಳ ಶಾಹಿಗಳ ಹಣದಿಂದ ಮಾರ್ಕೆಟಿಂಗ್ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿದೆ ಅಂತ ಆರೋಪಿಸಿದರು.

    ಬಣ್ಣ ಬಣ್ಣದ ಮಾತುಗಳನ್ನು ಆಡಿ ಗೆದ್ದಿರೋ ಮೋದಿ, ತಾವು ಪ್ರಚೋದನೆ ಮಾಡಲು ಮಾತನಾಡಿದಂತೆ ಆಡಳಿತ ನಡೆಸಲಿ. ರಾಜಕೀಯಕ್ಕಾಗಿ ದೇಶದ ಜನರನ್ನ ಪ್ರಚೋದಿಸಿದರೆ ಸರಿಯಿರಲ್ಲ ಎಂದು ಆಂಜನೇಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

  • ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ ಪಾಟೀಲ್  ರಾಜೀನಾಮೆ

    ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ರಾಜೀನಾಮೆ

    ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮೈತ್ರಿ ಪಾಳಯದಲ್ಲಿ ರಾಜೀನಾಮೆ ಕೂಗೂ ಹೆಚ್ಚಾಗುತ್ತಿದೆ. ಈ ನಡುವೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಕೆ ಪಾಟೀಲ್ ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಮತದಾರರಿಗೆ ಧನ್ಯವಾದಗಳು. ಜನ ಏನು ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾವು ತಲೆಬಾಗುತ್ತೇವೆ. ಈ ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಈ ರೀತಿಯಲ್ಲಿ ಸೋಲಿಗೆ ಮೈತ್ರಿ ಮಾಡಿಕೊಂಡದ್ದು ಒಂದು ಕಾರಣ ಇರಬಹುದು. ಆದರೆ ಅದೇ ಮುಖ್ಯ ಕಾರಣ ಅಲ್ಲ. ಈ ಸೋಲು ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ. ಅದನ್ನು ನಮ್ಮ ಹಿರಿಯ ನಾಯಕರು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 352 ಸ್ಥಾನ ಗಳಿಸಿದ್ದರೆ, ಯುಪಿಎ 87 ಹಾಗೂ ಇತರೇ 103 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ.

  • ದೇವೇಗೌಡ್ರು ಸೋತಿದ್ದರಿಂದ ಪ್ರಜ್ವಲ್ ಗೆಲುವಿನ ಸಂಭ್ರಮಾಚರಣೆಯಿಲ್ಲ: ಭವಾನಿ ರೇವಣ್ಣ

    ದೇವೇಗೌಡ್ರು ಸೋತಿದ್ದರಿಂದ ಪ್ರಜ್ವಲ್ ಗೆಲುವಿನ ಸಂಭ್ರಮಾಚರಣೆಯಿಲ್ಲ: ಭವಾನಿ ರೇವಣ್ಣ

    ಹಾಸನ: ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗಿದೆ. ಹೀಗಾಗಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಪ್ರಚಂಡ ಗೆಲುವನ್ನು ಸಾಧಿಸಿದ್ದರೂ ನಾವು ಸಂಭ್ರಮಾಚರಣೆ ಮಾಡಿಲ್ಲ ಎಂದು ಭವಾನಿ ರೇವಣ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದರು ನಾವು ಸಂಭ್ರಮ ಪಟ್ಟಿಲ್ಲ. ದೇವೇಗೌಡರು ಸೋಲನ್ನು ಕಂಡಿರುವುದು ನಮಗೆ ನೋವಾಗಿದೆ. ಇದರಿಂದ ಕಾರ್ಯಕರ್ತರು ಕೂಡ ಬೇಸರಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗೆಲುವನ್ನು ಸಂಭ್ರಮಿಸಲು ಪ್ರಜ್ವಲ್ ಹಾಗೂ ಕಾರ್ಯಕರ್ತರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತುಮಕೂರಿನಲ್ಲಿ ಆದ ಸೋಲಿನಿಂದ ಎಲ್ಲರಿಗೂ ನೋವಾಗಿದೆ. ನಾವು ಯಾರೂ ಕೂಡ ಗೆಲುವನ್ನು ಆಚರಿಸಿಲ್ಲ ಎಂದರು. ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ!

    ಇನ್ನೊಂದೆಡೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನು ನಮ್ಮ ನಾಯಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಗೊತ್ತಿಲ್ಲ. ಯಾರಿಗೂ ಕೇಳದೆ ನಾನು ಇದನ್ನು ಮಾಡಿದೆ ಎಂದು ಹೇಳಬೇಡಿ. ಗೌಡರು ನಮ್ಮ ಪಕ್ಷದ ಬೇರು. ದೇವೇಗೌಡರ ಆಶೀರ್ವಾದದೊಂದಿಗೆ ನಾನು ರಾಜೀನಾಮೆ ಕೊಟ್ಟು ಗೌಡರಿಗೆ ಈ ಜಿಲ್ಲೆಯನ್ನು ಬಿಟ್ಟುಕೊಡುತ್ತೇನೆ. ಅವರ ಶಕ್ತಿ ರಾಜ್ಯಕ್ಕೆ ಬೇಕಿದೆ ಎಂದು ಹೇಳಿದ್ದಾರೆ.

    ದೇವೇಗೌಡರನ್ನು ರಾಜಕೀಯದಲ್ಲಿ ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನಾನು ಇಂದು ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಿಸಬೇಕಿದೆ ಎಂದು ಹೇಳುವ ಮೂಲಕ ರಾಜೀನಾಮೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

    ಪ್ರಜ್ವಲ್ ಗೆಲುವು:
    ಅಜ್ಜ ದೇವೇಗೌಡರು ತ್ಯಾಗ ಮಾಡಿದ್ದ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ದಾರೆ. ಪ್ರಜ್ವಲ್ ರೇವಣ್ಣ 1,42,123 ಮತಗಳ ಅಂತರದಿಂದ ಬಿಜೆಪಿಯ ಮಂಜು ಅವರನ್ನು ಸೋಲಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರು 6,75,512 ಮತಗಳನ್ನು ಪಡೆದಿದ್ದರೆ, ಎ.ಮಂಜು 5,33,389 ಮತಗಳನ್ನು ಗಳಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿವೆ. 16,29,587 ಮತದಾರರಿದ್ದು, ಅವರಲ್ಲಿ 12,73,219 ಮತದಾನ ಮಾಡಿದ್ದರು.

    ದೇವೇಗೌಡ್ರಿಗೆ ಸೂಲು:
    ಇತ್ತ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಳೆದು-ತೂಗಿ ಕೊನೆಯದಾಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದ್ದರು. ಆದರೆ ಇಂದಿನ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ದೇವೇಗೌಡರ ವಿರುದ್ಧ 12,887 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ- ಆರ್‌ಎಸ್‌ಎಸ್

    ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ- ಆರ್‌ಎಸ್‌ಎಸ್

    ನವದೆಹಲಿ: ಲೋಕಸಮರದಲ್ಲಿ ಸ್ಪಷ್ಟ ಬಹುಮತ ಪಡೆದು ಭರ್ಜರಿ ಗೆಲುವನ್ನು ಬಿಜೆಪಿ ಸಾಧಿಸಿರುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ. ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ ಎಂದು ಆರ್‌ಎಸ್‌ಎಸ್ ವಿಭಿನ್ನವಾಗಿ ಬಣ್ಣಿಸಿದೆ.

    ಕಮಲದ ಈ ಭರ್ಜರಿ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಆರ್‌ಎಸ್‌ಎಸ್ ಶುಭಾಶಯ ತಿಳಿಸಿದೆ. ಈ ಫಲಿತಾಂಶ ಪ್ರಜಾಪ್ರಭುತ್ವದ ಆತ್ಮ ಮತ್ತು ಅದರ ತತ್ವಗಳನ್ನು ಜಗತ್ತಿಗೆ ತೋರಿಸಿದೆ. ಈ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇದು ದೇಶ ರಕ್ಷಣೆ ಮಾಡುವ ಶಕ್ತಿಗಳ ಗೆಲುವು ಎಂದು ಆರ್‌ಎಸ್‌ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಬಣ್ಣಿಸಿ ಬಿಜೆಪಿ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಮಾನವೀಯತೆಯ ಗೆಲುವನ್ನು ಇಲ್ಲಿ ಕಾಣಬಹುದಾಗಿದೆ. ಬಿಜೆಪಿ ಈ ಗೆಲುವಿನಿಂದ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಲೋಕಸಭಾ ಫಲಿತಾಂಶ ನೋಡುವುದಾದರೆ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

  • ಶಿವಕುಮಾರ ಉದಾಸಿ ಹ್ಯಾಟ್ರಿಕ್ ಸಾಧನೆ

    ಶಿವಕುಮಾರ ಉದಾಸಿ ಹ್ಯಾಟ್ರಿಕ್ ಸಾಧನೆ

    ಹಾವೇರಿ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ 1,40,882 ಮತಗಳ ಅಂತರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

    ಶಿವಕುಮಾರ ಉದಾಸಿ ಅವರು 6,83.660 ಮತಗಳನ್ನು ಪಡೆದಿದ್ದು, ಡಿ.ಆರ್.ಪಾಟೀಲ್ 5,42,778 ಮತಗಳನ್ನು ಗಳಿಸಿದ್ದಾರೆ. ಹಾವೇರಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಒಟ್ಟು 17,02,618 ಮತದಾರರ ಪೈಕಿ 12,63,209 ಮಂದಿ ಮತದಾನ ಮಾಡಿದ್ದರು.

    ಗೆಲುವಿಗೆ ಕಾರಣವಾದ ಅಂಶಗಳು ಏನು?
    ಹಾವೇರಿ ಬಿಜೆಪಿ ಶಾಸಕ ಇರುವ ಕ್ಷೇತ್ರ. ತನ್ನದೆಯಾದ ಶಕ್ತಿ ಹೊಂದಿರುವ ಶಾಸಕ ನೆಹರು ಓಲೇಕಾರ ಹಾಗೂ ಶಿವರಾಜ್ ಸಜ್ಜನ್ ಕ್ಷೇತ್ರದಲ್ಲಿ ಹಿಡಿತವನ್ನ ಸಾಧಿಸಿದ್ದಾರೆ. ಹೀಗಾಗಿ ಲಿಂಗಾಯತರು ಸಮುದಾಯ ಅಧಿಕವಾಗಿ ಮತದಾನ ಮಾಡಿದೆ. ಬ್ಯಾಡಗಿಯಲ್ಲಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಣ್ಣನವರ್ ಶಾಸಕರಾಗಿದ್ದರು. ಅವರಿಗೆ ಟಿಕೆಟ್ ತಪ್ಪಿಸಿ ಎಸ್.ಆರ್.ಪಾಟೀಲಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯಲ್ಲಿ ಹೊಸಮುಖ ಕ್ಷೇತ್ರದ ವ್ಯಕ್ತಿ ವಿರುಪಾಕ್ಷಪ್ಪ ಗೆಲವು ಪಡೆದಿದ್ದರು. ತಮ್ಮ ಪಂಚಮಸಾಲಿ ಸಮುದಾಯದ ಹೆಚ್ಚು ಮತ ಬಿಜೆಪಿಗೆ ಬಿದ್ದಿವೆ.

    ಹಿರೇಕೆರೂರು ಕ್ಷೇತ್ರದಲ್ಲಿ ಯು.ಬಿ.ಬಣಕಾರ ಕೇವಲ 550 ಮತಗಳಿಂದ ಸೋಲುಕಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಾದರಲಿಂಗಾಯತ ಮತಗಳು ಹೆಚ್ಚು ಇದ್ದು ಮೋದಿ ಅಲೆ ಹಾಗೂ ಯಡಿಯೂರಪ್ಪ ಲಿಂಗಾಯತ ಮತಗಳನ್ನ ಸೆಳೆದಿದ್ದರು. ಇನ್ನೂ ಹಾನಗಲ್ ಕ್ಷೇತ್ರದಲ್ಲಿ ತನ್ನದೆಯಾದ ಹಿಡಿತ ಸಾಧಿಸಿದ್ದ ಶಾಸಕ ಸಿ.ಎಂ.ಉದಾಸಿ ಲಿಂಗಾಯತ ಮತಗಳು ಹಾಗೂ ಮೋದಿ ಮತಗಳನ್ನು ಪಡೆದುಕೊಂಡಿದ್ದಾರೆ.

    ರಾಣೇಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಶಾಸಕರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬೆಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನ ಗಳಿಸಿದ್ದರು. ಕುರುಬ ಸಮುದಾಯದ ಮತಗಳನ್ನ ಪಡೆಯುದಲ್ಲದೆ ಮೋದಿ ಅಲೆ ಇರೋ ಹಿನ್ನೆಲೆ, ವೈಯುಕ್ತಿಕ ವರ್ಚಸ್ಸು ಹಾಗೂ ಹಾಲಿ ಶಾಸಕ ಬೆಂಬಲ ಪಡೆದ ಬಿಜೆಪಿ ಕುರುಬ ಸಮುದಾಯದ ಮತ ಪಡೆಯುವಲ್ಲಿ ಉದಾಸಿ ಯಶಸ್ವಿಯಾಗಿದ್ದಾರೆ.

    ಶಿರಹಟ್ಟಿ ಕ್ಷೆತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಕ್ಷ ಸಂಘಟನೆ ಹಾಗೂ ತನ್ನದೆಯಾದ ಸ್ವಂತ ವರ್ಚಸ್ಸುಯನ್ನ ಶಾಸಕ ರಾಮಣ್ಣ ಲಂಬಾಣಿ ಹೊಂದಿದ್ದಾರೆ. ಹೀಗಾಗಿ ಲಂಬಾಣಿ ಸಮುದಾಯದ ಮತಗಳನ್ನ ಪಡೆದಿದ್ದಾರೆ. ರೋಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ತನ್ನದೆಯಾದ ಹಿಡಿದವನ್ನ ಇಟ್ಟುಕೊಂಡಿದ್ದಾರೆ. ಮೋದಿ ಅಲೆ ಹಾಗೂ ಅವರು ಗೆದ್ದ ಅಂತರದ ಲೀಡನ್ನ ತಮ್ಮ ಪಕ್ಷದ ಅಭ್ಯರ್ಥಿಗೆ ಕೊಡಿಸುವ ಯಶಸ್ವಿಯಾಗಿದ್ದಾರೆ.

    ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಆಡಳಿತದಲ್ಲಿದೆ. ಆದರೆ ಮಾಜಿ ಶಾಸಕ ಸಿ.ಸಿ.ಪಾಟೀಲ ಕ್ಷೇತ್ರದಲ್ಲಿ ತನ್ನದೆಯಾದ ವರ್ಚಸ್ಸು ಹೊಂದಿದ್ದಾರೆ. ಇಲ್ಲಿಯ ಲಿಂಗಾಯತ ಹಾಗೂ ಹಿಂದುಳಿದ ಸಮುದಾಯ ಮತಗಳು ಬಿಜೆಪಿಗೆ ಬಿದ್ದಿದೆ.

  • ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್‍ಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಭರ್ಜರಿ ಜಯ ಗಳಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ರಾಜಾ ಅಮರೇಶ್ವರ ನಾಯಕ್ 4,83,552 ಮತಗಳನ್ನು ಗಳಿಸಿದ್ದರೆ, ಬಿ.ವಿ ನಾಯಕ್ 3,97,138 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡಿದ್ದಾರೆ.

    ಬಿಜೆಪಿ ಗೆಲ್ಲಲು ಕಾರಣವೇನು?
    ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಹಿಂದಿಕ್ಕಲು ಜಿಲ್ಲೆಯಲ್ಲಿರುವ ಮೋದಿ ಹವಾನೇ ಮುಖ್ಯ ಕಾರಣವಾಗಿದೆ. ಸಂಭಾವಿತ ರಾಜಕಾರಣಿ ಅನ್ನೋ ಹೆಗ್ಗಳಿಕೆ, ಎರಡು ಬಾರಿ ಸಚಿವರಾಗಿ ಆಯ್ಕೆಯಾಗಿದ್ದ ಅನುಭವ, ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿರುವುದು ಹಾಗೂ ಯಾವುದೇ ವಿವಾದಗಳಲ್ಲಿ ಸಿಕ್ಕಾಕಿಕೊಳ್ಳದೇ ಇರುವ ಪರಿಣಾಮವೇ ಜನರು ರಾಜಾ ಅಮರೇಶ್ವರ ನಾಯಕ್ ಅವರನ್ನು ಗೆಲುವಿನ ಗದ್ದುಗೆಗೆ ಏರಿಸಿದ್ದಾರೆ.

    ಆದರೆ ಹಾಲಿ ಸಂಸದರಾದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸ ಮಾಡದಿದ್ದಕ್ಕೆ ಈ ಬಾರಿ ಬಿ.ವಿ ನಾಯಕ್ ಸೋಲು ಕಂಡಿದ್ದಾರೆ. ಕ್ಷೇತ್ರದ ಜನರ ಸಂಪರ್ಕದಿಂದ ಬಹು ದೂರ ಉಳಿದುಕೊಂಡು ಮತಗಳನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ. ಹಾಗೆಯೇ ಜೆಡಿಎಸ್ ಜೊತೆಗಿನ ಮೈತ್ರಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿಲ್ಲ. ಕೇಂದ್ರದ ಯೋಜನೆಗಳನ್ನ ಕ್ಷೇತ್ರದ ಜನರಿಗೆ ಮುಟ್ಟಿಸುವಲ್ಲಿ ಬಿ.ವಿ ನಾಯಕ್ ವಿಫಲವಾಗಿದ್ದಾರೆ. ಅಲ್ಲದೆ ಯಾದಗಿರಿ, ಸುರಪುರ, ಶಹಪುರ ಕ್ಷೇತ್ರಗಳ ಜೊತೆ ಸಂಪರ್ಕ ಅತ್ಯಂತ ಕಡಿಮೆ ಇರುವುದೇ ಅವರನ್ನು ಗೆಲುವಿನಿಂದ ದೂರಮಾಡಿದೆ.

  • ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಕೋಲಾರ: ಸತತ 7 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮೋದಿ ಅಲೆಯಿಂದಾಗಿ ಸೋತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಳೆದ 7 ಬಾರಿ ಗೆಲುವನ್ನು ಸಾಧಿಸಿದಂತೆ ಈ ಬಾರಿ ಕೂಡ ಜಯವನ್ನು ಸಲೀಸಾಗಿ ಪಡೆಯಬಹುದು ಎಂದುಕೊಂಡಿದ್ದ ಮುನಿಯಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮುನಿಯಪ್ಪ ಅವರ ವಿರೋಧಿ ಅಲೆ ಹಾಗೂ ಮೋದಿ ಅಲೆಯಿಂದ ಎಸ್. ಮುನಿಸ್ವಾಮಿ 2,09,704 ಮತಗಳ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಮುನಿಸ್ವಾಮಿ ಅವರು 7,07,863 ಮತಗಳನ್ನು ಗಳಿಸಿದ್ದರೆ, ಮುನಿಯಪ್ಪ ಅವರು 4,98,159 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ.

    ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಬೆಂಬಲಿಗರ ಲೆಕ್ಕಾಚಾರದ ಪ್ರಕಾರ ಎಂದಿನಂತೆ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದರು. ಪ್ರತಿ ಬಾರಿ ಇದೆ ರೀತಿಯ ಪೈಪೋಟಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನಡೆಯುತ್ತಿತ್ತು. ಮೈತ್ರಿ ನಾಯಕರ ಪ್ರಕಾರ ಕೆ.ಎಚ್. ಮುನಿಯಪ್ಪ ಗೆಲುವು ನಿಶ್ಚಯವಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 1 ಲಕ್ಷದವರೆಗೂ ಲೀಡ್ ಬರುವ ಅತಿಯಾದ ಆತ್ಮ ವಿಶ್ವಾಸದಲ್ಲಿದ್ದರು.

    ಮುನಿಯಪ್ಪ ಸೋಲು ಕಂಡಿದ್ದು ಯಾಕೆ?
    ಕೆಜೆಎಫ್ ಬಿಜಿಎಂಎಲ್ ಸಮಸ್ಯೆಯನ್ನು 18 ವರ್ಷಗಳಿಂದ ಜೀವಂತವಾಗಿಟ್ಟಿರುವುದು, ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಶುಂಕುಸ್ಥಾಪನೆ ಬಿಟ್ಟರೆ ಉಳಿದಂತೆ ಯಾವುದೇ ಕಾಮಗಾರಿ ನಡೆಯದೆ ಇರುವುದು ಮುನಿಯಪ್ಪ ಸೋಲಿಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ನೀರಾವರಿ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದೇ ಇರುವುದು, ಕ್ಷೇತ್ರದಲ್ಲಿ ಈ ಬಾರಿ ದಲಿತ ಮುಖಂಡರ ಮತ್ತು ಜನಪ್ರತಿನಿಧಿಗಳ ವಿರೋಧವಾಗಿರುವುದರಿಂದ ಈ ಬಾರಿ ಸೋಲನ್ನು ಅನುಭವಿಸುವಂತಾಗಿದೆ.

    ಮುನಿಯಪ್ಪ ಅವರ ಇದೇ ಮೈನಸ್ ಪಾಯಿಂಟ್ ಬಿಜೆಪಿ ಅಭ್ಯರ್ಥಿಗೆ ಗೆಲುವಿನತ್ತ ಸಾಗಲು ದಾರಿ ಮಾಡಿಕೊಟ್ಟಿದೆ. ಅಲ್ಲದೆ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ನಾಯಕರು ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದು ಹಾಗೂ 7 ಬಾರಿ ಗೆದ್ದವನಿಗೆ 8ನೇ ಗೆಲ್ಲುವುದು ಕಷ್ಟವೇನಲ್ಲ ಎಂಬ ಅತೀಯಾದ ವಿಶ್ವಾಸವೇ ಬಿಜೆಪಿಗೆ ಜಯ ತಂದುಕೊಟ್ಟಿದೆ.