Tag: Loksabha Election 2024

  • ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ

    ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ

    -ಮೋದಿ ಸಂಪುಟದಲ್ಲಿ 2ನೇ ಬಾರಿ ಮಂತ್ರಿ ಸ್ಥಾನ

    ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪ್ರಲ್ಹಾದ್ ಜೋಶಿಯವರು‌ (Pralhad Joshi) ಮತ್ತೆ ಮೋದಿ ಸಂಪುಟದಲ್ಲಿ (Modi Cabinet 2024) ಪ್ರಮಾಣ ವಚನ ಸ್ವೀಕರಿಸಿದರು.

    ಜೋಶಿಯವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 2004ರಿಂದಲೂ ಧಾರವಾಡ ಲೋಕಸಭೆ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಲೇ ಬಂದಿರುವ ಅವರು ಪ್ರಸ್ತುತ 5ನೇ ಬಾರಿ ಸಂಸದರಾಗಿ ಚುನಾಯಿತರಾಗಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

    2019ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಪ್ರಲ್ಹಾದ್ ಜೋಶಿಯವರು ಪ್ರಧಾನಿ ಮೋದಿ ಸಂಪುಟದಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಮೋದಿ ಅವರ ಮೂರನೇ ಅವಧಿಯ ಎನ್‍ಡಿಎ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿಯವರು, ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಎರಡನೇ ಬಾರಿ ಕೇಂದ್ರ ಸಚಿವನಾಗುತ್ತಿರುವುದು ಬಹಳ ಹೆಮ್ಮೆ ಹಾಗೂ ಸಂತಸ ತಂದಿದೆ. ವಿಕಸಿತ ಭಾರತ ನಿರ್ಮಾಣದಲ್ಲಿ ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸಲು ಮತ್ತೆ ಅವಕಾಶ ನೀಡಿದ ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಪಕ್ಷದ ವರಿಷ್ಠರಿಗೆ, ಕಾರ್ಯಕರ್ತರಿಗೆ ಹಾಗೂ ಚುನಾಯಿಸಿದ ಮತದಾರರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

    ಇದೇ ವೇಳೆ ರಾಜ್ಯ ಬಿಜೆಪಿ (BJP) ವರಿಷ್ಠ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮತ್ತಿತರರು ಜೋಶಿ ಅವರಿಗೆ ಶುಭ ಹಾರೈಸಿದ್ದಾರೆ.

    ಪ್ರಲ್ಹಾದ್ ಜೋಶಿಯವರು ಕೇಂದ್ರ ಸಚಿವರಾಗಿ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಧಾರವಾಡದಲ್ಲಿ ಅವರ ಕುಟುಂಬದವರು ಹಾಗೂ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಂಭ್ರಮಪಟ್ಟಿದ್ದಾರೆ.

  • ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕೆ. ಸುಧಾಕರ್‌ (K sudhakar) ಗೆಲುವಿನ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಹೆಸರಿನ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಂಬಂಧ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಇದೊಂದು ನಕಲಿ ಪತ್ರ. ಆ ಪತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಿಡಿಗೇಡಿಗಳು ನಕಲಿ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ರಾಜೀನಾಮೆ ನೀಡ್ತೀನಿ ಅಂದಿದ್ದ ಶಾಸಕರು: ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ ಒಂದು ಮತ ಹೆಚ್ಚಿಗೆ ಲೀಡ್ ಪಡೆದರೆ ನಾನು ರಾಜೀನಾಮೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಜೊತೆಯಲ್ಲಿ ಇದನ್ನ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಸವಾಲಾಗಿ ಸ್ವೀಕರಿಸಬೇಕು ಎಂಬ ಆಗ್ರಹವನ್ನು ಕೂಡ ಮಾಡಿದ್ದರು. ಆದರೆ ಪ್ರದೀಪ್ ಈಶ್ವರ್ ಸವಾಲಿಗೆ ಡಾಕ್ಟರ್ ಕೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದನ್ನೂ ಓದಿ: ಎರಡಂಕಿ ಫಲಿತಾಂಶ ಬರದಿರಲು ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ – ಸತೀಶ್ ಜಾರಕಿಹೊಳಿ

    ಇತ್ತ ಕೆಲವು ಕಡೆ ಪ್ರದೀಪ್ ಈಶ್ವರ್ (Pradeep Eshwar) ತಮ್ಮ ಹಳೆಯ ಹೇಳಿಕೆಯನ್ನೇ ಮರು ಉಚ್ಚರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಹೇಳಿಕೆಯನ್ನು ಸಹ ಕೊಟ್ಟಿದ್ದರು. ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ಕೆ ಸುಧಾಕರ್ 20,941 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡಬೇಕು ಅಂತ ಹಲವರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇಂದು ನಕಲಿ ರಾಜೀನಾಮೆ ಪತ್ರವೊಂದು ಸಾಕಷ್ಟು ವೈರಲ್ ಆಗಿ ಚರ್ಚೆಗೀಡಾಗಿದೆ.

  • ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ- ಪತ್ನಿ ಸೋಲಿನ ಬಳಿಕ ಶಿವಣ್ಣ ರಿಯಾಕ್ಷನ್

    ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ- ಪತ್ನಿ ಸೋಲಿನ ಬಳಿಕ ಶಿವಣ್ಣ ರಿಯಾಕ್ಷನ್

    ಲೋಕಸಭಾ ಚುನಾವಣಾ ಫಲಿತಾಂಶ (Loksabha Election 2024) ಹೊರಬಿದ್ದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪತ್ನಿ ಗೀತಾ (Geetha Shivrajkumar) ಸೋಲು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗದಲ್ಲಿ ಕಣಕ್ಕೆ ನಿಂತಿದ್ದ ಗೀತಾ ಸೋಲಾಗಿದೆ. ಈ ಬೆನ್ನಲ್ಲೇ, ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ ಎಂದು ಪತ್ನಿಯ ಸೋಲಿನ ಬಳಿಕ ನಟ ರಿಯಾಕ್ಟ್ ಮಾಡಿದ್ದಾರೆ.

    ಧನ್ಯವಾದಗಳು.. ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತಾ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಶಿವಣ್ಣ (Shivarajkumar) ಪೋಸ್ಟ್ ಮಾಡಿದ್ದಾರೆ.

    ಅಂದಹಾಗೆ, ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದು ಜಯ ಸಾಧಿಸಿದರು. 2,43,715 ಮತಗಳ ಅಂತರದಲ್ಲಿ ಅವರು ವಿನ್ ಆದರು. ಗೀತಾ ಶಿವರಾಜ್‌ಕುಮಾರ್ ಅವರು 5,35,006 ಮತಗಳನ್ನು ಪಡೆದರು.  ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ.

  • ಅಹಂಕಾರ ಪಂಕ್ಚರ್ ಮಾಡಿ ಸ್ಥಾನ ತೋರಿಸಿದ್ದಕ್ಕೆ ಧನ್ಯವಾದಗಳು ಎಂದ ಪ್ರಕಾಶ್ ರಾಜ್

    ಅಹಂಕಾರ ಪಂಕ್ಚರ್ ಮಾಡಿ ಸ್ಥಾನ ತೋರಿಸಿದ್ದಕ್ಕೆ ಧನ್ಯವಾದಗಳು ಎಂದ ಪ್ರಕಾಶ್ ರಾಜ್

    ಲೋಕಸಭಾ ಚುನಾವಣೆ (Loksabha Election 2024) ಫಲಿತಾಂಶ ಹೊರಬಿದ್ದಿದೆ. ಸದ್ಯ ಎನ್‌ಡಿಎ ಬಹುಮತ ಪಡೆದರೂ ಇಂಡಿಯಾ ಒಕ್ಕೂಟದ ಅತ್ಯುತ್ತಮ ಸಾಧನೆ ಮಾಡಿದೆ. ಈ ಬೆನ್ನಲ್ಲೇ ಪ್ರಕಾಶ್ ರಾಜ್ (Prakash Raj) ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಹಂಕಾರ ಪಂಕ್ಚರ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ಚಕ್ರವರ್ತಿ ಬೆತ್ತಲಾಗಿದ್ದಾನೆ. ಅವನು ಈಗ ಅನಿವಾರ್ಯವಾಗಿ ಬೇರೊಬ್ಬನ ಬೆಂಬಲದೊಂದಿಗೆ ಮುನ್ನಡೆಯಬೇಕಿದೆ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಇಂಡಿಯಾ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ಅಹಂಕಾರ ಪಂಕ್ಚರ್ ಮಾಡಿ ಅವರ ಸ್ಥಾನ ತೋರಿಸಿದ್ದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ. ನಾನು ನಮ್ಮ ದೇಶಕ್ಕಾಗಿ ಚೆನ್ನಾಗಿ ಹೋರಾಡುತ್ತಿದ್ದೇವೆ. ನಾವು ಹೀಗೆ ಮುಂದುವರಿಯುತ್ತೇವೆ ಎಂದು ಪ್ರಕಾಶ್ ರಾಜ್ ಚುನಾವಣೆ ಫಲಿತಾಂಶದ ಬಳಿಕ ತಮ್ಮದೇ ಶೈಲಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಟನ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

  • ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಕ್ಷೇತ್ರದ ಲೋಕಸಭಾ ಚುನಾವಣೆಯ ಫಲಿತಾಂಶ (Loksabha Election Result) ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆದ್ದಿದ್ದಾರೆ.

    ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಹಾಗೂ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ  ಆಡಳಿತ ನಡೆಸಿರುವ ಅನುಭವವಿರುವ ಗೋವಿಂದ ಕಾರಜೋಳ ಅವರು ರಾಜ್ಯದ ಹಿರಿಯ ರಾಜಕಾರಣಿಯೂ ಹೌದು. ಇದೀಗ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಅವರ ವಿರುದ್ಧ 48,121 ಮತಗಳ ಅಂತರದಿಂದ ಗೆದ್ದಿದ್ದಾರೆ. ಗೋವಿಂದ ಕಾರಜೋಳ ಅವರಿಗೆ 6,84,890 ಮತಗಳು ಬಿದ್ದರೆ, ಬಿ.ಎನ್ ಚಂದ್ರಪ್ಪ ಅವರಿಗೆ 6,36,769 ಮತಗಳು ಬಿದ್ದಿವೆ.

    ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಅವರು, ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇನೆ. ನಾನು ನೇರವಾಗಿ ನಾಮಪತ್ರ ಸಲ್ಲಿಕೆಗೆ ದುರ್ಗಕ್ಕೆ ಬಂದಂತಾಗಿದೆ. ಮೋದಿಯವರ 10 ವರ್ಷದ ಆಡಳಿತ, ಎರಡು ಪಕ್ಷಗಳ ಅಧ್ಯಕ್ಷರು,ಕಾರ್ಯಕರ್ತರ ಶ್ರಮದ ಫಲವೇ ಗೆಲುವಾಗಿದೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಚಿತ್ರದುರ್ಗಕ್ಕೆ ನೀರು ತರುವ ಕೆಲಸ ಸಚಿವ, ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದು ಗಮನಿಸಿ ಮತ ನೀಡಿದ್ದಾರೆ ಎಂದರು.  ಇದನ್ನೂ ಓದಿ: ಹಾವೇರಿಯಲ್ಲಿ ಬೊಮ್ಮಾಯಿಗೆ ಗೆಲುವು

    ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮೋಸದಾಟ ಮಾಡಿದೆ. ಜಿಲ್ಲಾಸಚಿವರು, ಬೋರ್ಡ್ ಛೇರ್ಮನ್, ಶಾಸಕರನ್ನು ಹಿಂದಿಟ್ಟು ಬಿಜೆಪಿ ಕಾರ್ಯಕರ್ತರು ನನ್ನ ಗೆಲ್ಲಿಸಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ಮತ್ತೆ ಅಧಿಕಾರ ಹಿಡಿಯಲಿದೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆದ್ಯತೆ. ಎನ್ ಡಿಎ ಅಧಿಕಾರಕ್ಕೆ ಬಂದರೆ ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ ಎಂದು ಹೇಳಿದರು.

  • ಮಂಡಿಯಲ್ಲಿ ‘ಕ್ವೀನ್’ ಕಂಗನಾ

    ಮಂಡಿಯಲ್ಲಿ ‘ಕ್ವೀನ್’ ಕಂಗನಾ

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ (Loksabha Election 2024) ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಂಗನಾ ರಣಾವತ್ (Kangana Ranaut) ಮೊದಲ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 70000 ಮತಗಳಿಂದ ನಟಿ ಗೆದ್ದಿದ್ದಾರೆ. ಈ ಮೂಲಕ ನಟಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಟಫ್ ಫೈಟ್ ಕೊಟ್ಟು ನಟಿ ಗೆದ್ದಿರೋದಕ್ಕೆ ನಟಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.‌ ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಪ್ರಭಾಸ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್

    ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆದ್ದಿದ್ದಾರೆ.

    ಅಂದಹಾಗೆ, ಲೋಕಸಭಾ ಚುನಾವಣೆ ಗೆದ್ದರೆ ಬಾಲಿವುಡ್‌ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್‌ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಇದೀಗ ಚರ್ಚೆ ಶುರುವಾಗಿದೆ.

  • ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್‌ (BJP- JDS) ಮೈತ್ರಿ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿ ಬಹುತೇಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

    ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಗೆಲುವು ಬಹುತೇಕ ಖಚಿತವಾಗಿದೆ. ಮತಎಣಿಕೆ ಆರಂಭವಾದಿಗಿನಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.

    ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಎನ್‌ಡಿಎ ಅಭ್ಯರ್ಥಿ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು ನಡುವೆ ಇಲ್ಲಿ ಫೈಟ್‌ ಇತ್ತು. ಇದೀಗ ಸ್ಟಾರ್ ಚಂದ್ರು ವಿರುದ್ಧ ಹೆಚ್‌ಡಿಕೆ ಗೆಲುವು ಸಾಧಿಸಿದರೂ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಆಗಬೇಕಷ್ಟೇ.

    ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದರು. ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‌ ಕಣಕ್ಕಿಳಿದು ನಿಖಿಲ್‌ ವಿರುದ್ಧ ಭರ್ಜರಿ ಜಯಗಳಿಸಿದ್ದರು. ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗ್ತಿತ್ತು. ಈ ನಡುವೆ ಸುಮಲತಾ ಅಂಬರೀಶ್‌ ಕೂಡ ಬಿಜೆಪಿಯಿಂದ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಕೊನೆಗೆ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರೇ ಸ್ವತಃ ಕಣಕ್ಕಿಳಿದಿದ್ರು.

    ವಿಜಯೋತ್ಸವಕ್ಕೆ ಬ್ರೇಕ್: ವಿಜಯೋತ್ಸವ, ಸಂಭ್ರಮಾಚರಣೆ, ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಮಂಡ್ಯ ಜಿಲ್ಲಾಡಳಿತ ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ ಮಂಡ್ಯ ನಗರ ವ್ಯಾಪ್ತಿಯಲ್ಲಿ ಜೂನ್ 3ರ ಸಂಜೆ 6 ಗಂಟೆಯಿಂದ 5 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

  • ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

    ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

    ಚಿಕ್ಕಬಳ್ಳಾಪುರ: ಲೊಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಈ ನಡುವೆ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ರಾಜೀನಾಮೆಗೆ ಒತ್ತಾಯ ಕೇಳಿ ಬರುತ್ತಿದೆ.

    ಸದ್ಯ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ (K sudhakar) ಅವರು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಅವರಿಂದ ಸುಮಾರು 7,2180 ಅಂತರಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

    ಈ ಹಿಂದೆ ಕೆ ಸುಧಾಕರ್‌ ವಿರುದ್ಧ ಸವಾಲೆಸೆದಿದ್ದ ಪ್ರದೀಪ್‌ ಈಶ್ವರ್‌, ಒಂದು ವೋಟ್‌ ಲೀಡ್‌ ಬಂದರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಇದೀಗ ಸುಧಾಕರ್‌ ಅವರು ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಇಂದೇ ಪ್ರದೀಪ್‌ ಈಶ್ವರ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ.

  • ಸುಧಾಕರ್‌ಗೆ ಒಂದು ವೋಟು ಜಾಸ್ತಿ ಬಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಪ್ರದೀಪ್ ಈಶ್ವರ್

    ಸುಧಾಕರ್‌ಗೆ ಒಂದು ವೋಟು ಜಾಸ್ತಿ ಬಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಪ್ರದೀಪ್ ಈಶ್ವರ್

    ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್ ಅವರು ಒಂದೇ ಒಂದು ವೋಟು ಜಾಸ್ತಿ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ (Pradeep Eshwar) ಸವಾಲೆಸೆದಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಅವರು ಒಂದು ಮತ ಜಾಸ್ತಿ ಪಡೆಯಲಿ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಎಸ್‍ಎಸ್‍ಎಲ್‍ಸಿ (SSLC) ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ಹತ್ತನೇ ತರಗತಿಯ ಪರೀಕ್ಷೆಯ ಸಂದರ್ಭದಲ್ಲಿ ಭಾರೀ ಸ್ಟ್ರಿಕ್ಟ್ ಮಾಡಿಸಿದ್ದಾರೆ. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಿದ್ದಾರೆ. ಮಾಸ್ ಕಾಪಿ ಹೊಡೆಯೋಕೆ ಕಡಿವಾಣ ಹಾಕಿದ್ದಾರೆ. ಹಿಂದೆಲ್ಲಾ ಮಾಸ್ ಕಾಪಿ ನಡೆಯುತ್ತಿತ್ತು. ಆದರೆ ಈ ಭಾರಿ ಮಾಸ್ ಕಾಪಿ ನಡೆದಿಲ್ಲ ಎಂದರು. ಇದನ್ನೂ ಓದಿ: ಎಂಎಲ್‌ಸಿ ಆಯ್ಕೆಗೆ ಹೈ ಪವರ್ ಕಮಿಟಿ ನೇಮಿಸಿ ಸಲಹೆ ಪಡೆಯಬೇಕಿತ್ತು: ಪರಮೇಶ್ವರ್‌

    ಫಲಿತಾಂಶ ಕುಸಿದಿದೆ ಅಂತ ಹೇಳಬೇಡಿ. ಕಳೆದ ಬಾರಿ ಚಿಕ್ಕಬಳ್ಳಾಪುರ 5ನೇ ಸ್ಥಾನದಲ್ಲಿ ಇತ್ತು. ಈ ಬಾರಿ ಅದನ್ನು ನಾನು ಎರಡನೇ ಸ್ಥಾನಕ್ಕೆ ತಂದಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 6 ತಾಲೂಕು ಬರುತ್ತದೆ. ಬೇರೆಡೆ ಡೌನ್ ಆದ್ರೆ ಅದಕ್ಕೆ ನಾನು ಕಾರಣನಾ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

    ಈಶ್ವರಪ್ಪನವರು ಬ್ಯಾಕ್ವರ್ಡ್ ಕ್ಲಾಸ್‍ನವರು. ಅಂತವರನ್ನೂ ನೀವು ಮೂಲೆ ಗುಂಪು ಮಾಡಿದ್ರಿ. ಇದರ ಬಗ್ಗೆ ನೀವು ಮಾತನಾಡಿ. ವಿಜಯೇಂದ್ರ ತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ. ಅವರ ತಲೆಯಲ್ಲಿರೋದೆಲ್ಲ ಮುಗಿದು ಹೋಗಿದೆ. ಅದಕ್ಕೆ ಇಂತಹ ವೈಯುಕ್ತಿಕ ವಿಷಯ ಮಾತನಾಡ್ತಿದ್ದಾರೆ ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

  • ವೋಟ್‌ ಮಾಡುವುದು ನಮ್ಮ ಹಕ್ಕು, ನಮ್ಮ ಜವಾಬ್ದಾರಿ- ರಿಷಬ್‌ ಶೆಟ್ಟಿ

    ವೋಟ್‌ ಮಾಡುವುದು ನಮ್ಮ ಹಕ್ಕು, ನಮ್ಮ ಜವಾಬ್ದಾರಿ- ರಿಷಬ್‌ ಶೆಟ್ಟಿ

    ‘ಕಾಂತಾರ’ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ‘ಕಾಂತಾರ’ ಪಾರ್ಟ್‌ 1 (Kantara 1) ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ ಮಾಡಿದ್ದಾರೆ. ರಿಷಬ್ ಹುಟ್ಟುರಾದ ಬೈಂದೂರಿನ ಕೆರಾಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಇದನ್ನೂ ಓದಿ:ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

    ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕೆ, ವೋಟ್ ಮಾಡುವುದು ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಇದೀಗ ನಾನು ಮತ ಚಲಾಯಿಸಿದ್ದೇನೆ ಎಂದು ರಿಷಬ್ ಮಾತನಾಡಿದ್ದಾರೆ. ಎಲ್ಲರೂ ಮತ ಚಲಾಯಿಸುವಂತೆ ರಿಷಬ್‌ ಮನವಿ ಮಾಡಿದ್ದಾರೆ. ಮತ ಚಲಾಯಿಸಿದ ನಂತರ ರಿಷಬ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲರೊಂದಿಗೆ ಬೆರತು ಮಾತನಾಡಿ ಸೆಲ್ಫಿ ನೀಡಿ ನಟ ರಿಷಬ್ ತೆರಳಿದ್ದಾರೆ.

    ಈ ವೇಳೆ, ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿರುವ ಬಗ್ಗೆ ರಿಷಬ್ ಮಾತನಾಡಿ, ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟ ಆಡಲು ದೊಡ್ಡ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.