Tag: Lokopilot

  • ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ – ನಿವೃತ್ತ ಲೋಕೋಪೈಲೆಟ್ ಅರೆಸ್ಟ್

    ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ – ನಿವೃತ್ತ ಲೋಕೋಪೈಲೆಟ್ ಅರೆಸ್ಟ್

    ರಾಮನಗರ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಲೋಕೋಪೈಲೆಟ್ ಒಬ್ಬರು ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಘಟನೆ ರಾಮನಗರದ (Ramanagara) ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

    ನಿವೃತ್ತ ಲೋಕೋಪೈಲೆಟ್ ಶಿವಕುಮಾರ್ (71) ಬಂಧಿತ ಆರೋಪಿ. ರಾಮನಗರದ ಮಂಜುನಾಥ ಬಡಾವಣೆ ನಿವಾಸಿ ಶಿವಕುಮಾರ್, ನನಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗೊತ್ತು, ನಿಮ್ಮ ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸಾವಿತ್ರಮ್ಮ ಹಾಗೂ ಶಿವಣ್ಣ ಎಂಬುವವರಿಂದ 15 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿದ್ದರು. ಇದನ್ನೂ ಓದಿ: ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್

    ಬಳಿಕ ನಕಲಿ ಸೀಲು ಹಾಗೂ ಸೈನ್ ಬಳಸಿ ಹಣ ಕೊಟ್ಟವರಿಗೆ ಪತ್ರ ಬರೆದಿದ್ದ ಶಿವಕುಮಾರ್, ಇನ್ನೆರಡು ತಿಂಗಳಲ್ಲಿ ನೇಮಕಾತಿ ಪತ್ರ ಬರುತ್ತೆ ಎಂದು ಸುಳ್ಳು ಹೇಳಿದ್ದರು. ಎರಡು ತಿಂಗಳಾದರೂ ಯಾವುದೇ ನೇಮಕಾತಿ ಪತ್ರ ಬಾರದ ಹಿನ್ನೆಲೆ ಹಣ ಕೊಟ್ಟ ಸಾವಿತ್ರಮ್ಮ ಮತ್ತು ಶಿವಣ್ಣ ಅವರು ಶಿವಕುಮಾರ್‌ರನ್ನ ಸಂಪರ್ಕಿಸಲು ಮುಂದಾದಾಗ ಶಿವಕುಮಾರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಯೂಟ್ಯೂಬರ್‌ ಸಮೀರ್‌ ಅರೆಸ್ಟ್‌ ಸಾಧ್ಯತೆ

    ಈ ಬಗ್ಗೆ ವಿಚಾರಿಸಿದಾಗ ವಂಚನೆ ಆಗಿರೋದು ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಪೊಲೀಸರು, ಆರೋಪಿ ಶಿವಕುಮಾರ್‌ನನ್ನ ಬಂಧಿಸಿದ್ದಾರೆ.

  • ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್

    ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್

    ಬೆಳಗಾವಿ: ಜಿಲ್ಲೆಯ ಟಿಳಕವಾಡಿ ಬಳಿಯ ಗೇಟ್ ಬಳಿ ತಡರಾತ್ರಿ ಸಂಚರಿಸುತ್ತಿದ್ದ ರೈಲು ನಿಲ್ಲಿಸಿ ಚಾಲಕ ರೈಲ್ವೆ ಗೇಟ್ ನ ಗಾರ್ಡ್‍ನನ್ನು ಹುಡುಕಾಡಿದ ಘಟನೆ ನಡೆದಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ.

    ಏನಿದು ಘಟನೆ: ಶನಿವಾರ ತಡರಾತ್ರಿ ಕೋಲ್ಹಾಪುರ ದಿಂದ ಲೋಂಡಾ ಮಾರ್ಗದ ಕಡೆಗೆ ರೈಲು ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಟಿಳಕವಾಡಿ ಬಳಿಯ ಗೇಟ್ ಬಳಿ ಬಂದ ರೈಲಿಗೆ ಹಸಿರು ನಿಶಾನೆ ಸಿಗಲಿಲ್ಲ. ಇದರಿಂದ ರೈಲು ಚಾಲಕ ಅನುಮಾನಗೊಂಡು ರೈಲನ್ನು 10 ನಿಮಿಷ ನಿಲ್ಲಿಸಿ ಏನಾಗಿದೆ ಎಂದು ತಿಳಿಯಲು ಕೆಳಗಿಳಿದ್ದಾರೆ. ನಂತರ ಗೆಟ್ ಬಳಿ ಬಂದು ನೀಡಿದಾಗ ಗೇಟ್ ಗಾರ್ಡ್ ಕಂಠ ಪೂರ್ತಿ ಕುಡಿದು ಮಲಗಿದ್ದು ತಿಳಿದು ಬಂದಿದೆ.

    ನಂತರ ರೈಲು ಚಾಲಕ ಗಾರ್ಡ್ ನನ್ನು ಎಬ್ಬಿಸಿ ಹಸಿರು ನಿರಾಶೆ ಪಡೆದು ರೈಲನ್ನು ಚಾಲನೆ ಮಾಡಿದ್ದಾನೆ. ಗಾರ್ಡ್ ನ ಅಚಾಯುರ್ತಯದಿಂದ ನಡೆಯಬೇಕಿದ್ದ ಭಾರೀ ಅನಾಹುತವೊಂದು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ.

    ಈ ವಿಡಿಯೋವನ್ನು ಕಂಡ ಹಲವರು ಗಾರ್ಡ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳನ್ನು ಕೋರಿದ್ದಾರೆ. ಇನ್ನೂ ತಡರಾತ್ರಿ ಘಟನೆ ನಡೆದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.