Tag: lokdown

  • ಬಾಂಗ್ಲಾದೇಶದಲ್ಲಿ ದಿಢೀರ್ ಕೊರೊನಾ ಹೆಚ್ಚಳ – 1 ವಾರ ಲಾಕ್‍ಡೌನ್ ಜಾರಿ

    ಬಾಂಗ್ಲಾದೇಶದಲ್ಲಿ ದಿಢೀರ್ ಕೊರೊನಾ ಹೆಚ್ಚಳ – 1 ವಾರ ಲಾಕ್‍ಡೌನ್ ಜಾರಿ

    ಢಾಕಾ: ಕೋವಿಡ್ 19 ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 5 ರಿಂದ ಒಂದು ವಾರಗಳ ಕಾಲ ದೇಶವ್ಯಾಪಿ ಲಾಕ್‍ಡೌನ್ ಮಾಡಲು ಬಾಂಗ್ಲಾದೇಶ ಸರ್ಕಾರ ಮುಂದಾಗಿದೆ.

    ಈ ಸೋಮವಾರದಿಂದ 7 ದಿನಗಳ ಲಾಕ್‍ಡೌನ್ ಜಾರಿ ಇರಲಿದ್ದು, ಈ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಬಾಂಗ್ಲಾದೇಶ ಸಾರಿಗೆ ಸಚಿವ ಒಬೇದುಲ್ ಖಾದರ್ ಅವರು ಲಾಕ್‍ಡೌನ್ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.

    ಕಳೆದ 7 ದಿನಗಳಿಂದ ಬಾಂಗ್ಲಾದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹೊಸ ಸೋಂಕಿತರ ಪ್ರಮಾಣದಲ್ಲಿ ಏಕಾಏಕಿ ಶೇ.23.28ರಷ್ಟು ಏರಿಕೆಯಾಗಿದೆ.

    ಶುಕ್ರವಾರ ಬಾಂಗ್ಲಾದೇಶದಲ್ಲಿ 6,830 ಕೊರೊನಾ ಪ್ರಕರಣ ವರದಿಯಾಗಿತ್ತು. ಒಟ್ಟು ಸೋಂಕಿತರ ಸಂಖ್ಯೆ 6,30,277ಕ್ಕೆ ಏರಿಕೆಯಾಗಿದ್ದು, 9,213 ಮಂದಿ ಮೃತಪಟ್ಟಿದ್ದಾರೆ. ಒಟ್ಟು 5,49,775 ಮಂದಿ ಗುಣಮುಖರಾಗಿದ್ದಾರೆ.