ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ (Bidar) ಲೋಕಾಯುಕ್ತ ಪೊಲೀಸರು (Lokayukta Officers) ದಾಳಿ ನಡೆಸಿದ್ದು, ಬುಡಾ ಸೈಟ್ ರಿಲೀಸ್‌ಗಾಗಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಯುಕ್ತರು ಹಾಗೂ ಸದಸ್ಯರನ್ನು ಬಂಧಿಸಿದ್ದಾರೆ.
ಬುಡಾದಿಂದ (BUDA) (ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ) ಲೇಔಟ್ ಸೈಟ್‌ಗಳನ್ನು ರಿಲೀಸ್ ಮಾಡಲು 50 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬುಡಾ ಆಯುಕ್ತ ಶ್ರೀಕಾಂತ್ ಚಿಮ್ಮಕೊಡೆ ಹಾಗೂ ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಇದನ್ನೂ ಓದಿ: ಫ್ಯಾಷನ್ ಪ್ರಿಯರ ಮನಗೆದ್ದ ವೆಡ್ಡಿಂಗ್ ಜ್ಯುವೆಲ್ ಬ್ಲೌಸ್‌ಗಳು
ಬುಡಾ ಆಯುಕ್ತರ ಆದೇಶದ ಮೇರೆಗೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಿದ್ದು ಹೂಗಾರನನ್ನು ಲೋಕಾ ಪೊಲೀಸರು ಬೀದರ್‌ನ ಪ್ರತಾಪ್ ನಗರದ ಬಳಿ ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದು, ದಾಳಿ ವೇಳೆ 10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
10 ಲಕ್ಷ ರೂ. ಜಪ್ತಿ ಮಾಡಿಕೊಂಡು ಬಳಿಕ ಜಿಲ್ಲೆಯ ಹೋಟೆಲ್‌ವೊಂದರ ಬಳಿ ಬುಡಾ ಆಯುಕ್ತರನ್ನು ಬಂಧಿಸಿದ್ದಾರೆ.
ರಾಯಚೂರು: ಮುಡಾ ಪ್ರಕರಣ (MUDA Scam) ವಿಚಾರವಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರು ನನಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನೂ ಇಲ್ಲ ಎನ್ನುವುದನ್ನು ಸವಿವರವಾಗಿ ಹೇಳಿದ್ದೇನೆ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ್ (G Kumar Naik) ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಆಗಿದೆ. ರಾಯಚೂರು (Raichuru) ಜಿಲ್ಲಾಧಿಕಾರಿಯಾದ ಬಳಿಕ 2002 ರಿಂದ 2005ವರೆಗೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದೆ. 2005ರಲ್ಲಿ ಭೂ ಪರಿವರ್ತನೆ ಮಾಡಿರುವ ವಿಚಾರದಲ್ಲಿ ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ದೂರು ನೀಡುವವರಿಗೆ ಕಾನೂನಿನ ಆಯಾಮಗಳ ಮಾಹಿತಿ ಇದೆಯಾ? ಇಲ್ವಾ? ನನಗೆ ಗೊತ್ತಿಲ್ಲ. ಭೂ ಪರಿವರ್ತನೆ ಮಾಡಬೇಕಾದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ, ಕಾನೂನು ಪಾಲನೆ ಮಾಡಲಾಗಿದೆ ಯಾವುದೇ ತಪ್ಪು ಜರುಗಿಲ್ಲ ಎಂದರು.ಇದನ್ನೂ ಓದಿ: ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್
1997-98ರಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿದೆ. ಆಗ ಭೂ ಸಂತ್ರಸ್ತರಿಗೆ ಬೆಲೆ ನಿಗದಿ ಮಾಡಲಾಗಿತ್ತು. ಅವಾರ್ಡ್ ಪಾಸ್ ಮಾಡಿದ 45 ದಿನದ ಒಳಗಾಗಿ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡಿನೋಟಿಫೀಕೇಷನ್ ಆಗಿದ್ದರಿಂದ 1998ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿತ್ತು. ಲ್ಯಾಂಡ್ ರೆಕಾರ್ಡ್ ಅಪಡೇಟ್ ಮಾಡಲಿ, ಬಿಡಲಿ ಅದು ರೈತರಿಗೆ ಹೋಗುತ್ತದೆ. ನಂತರ ಜಮೀನು ಕೈ ಬದಲಾವಣೆಯಾಗಿದೆ. ಬಳಿಕ ಆರು ವರ್ಷದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಭೂ ಪರಿವರ್ತನೆಗೆ ಅರ್ಜಿ ಹಾಕುತ್ತಾರೆ. ಸಾಮಾನ್ಯವಾಗಿ ಇದು ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿರುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿಸಲು 120 ರಿಂದ 150 ದಿನ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಒತ್ತಡ ಇಲ್ಲ ಎಂಬುವುದು ಗೊತ್ತಾಗುತ್ತದೆ ಎಂದು ಹೇಳಿದರು.
ಡಿನೋಟಿಫಿಕೆಷನ್ ಆಗಿ ಆರು ವರ್ಷದ ನಂತರ ಭೂ ಪರಿವರ್ತನೆಗೆ ಬಂದಿತ್ತು. ವಸತಿ ಉದ್ದೇಶಕ್ಕಾಗಿ ಎಂದು ಮುಡಾದಿಂದ ಮಾಹಿತಿ ಪಡೆದ ನಂತರ ಪ್ರಕ್ರಿಯೆ ಮುಂದುವರೆಸಿದ್ದೇವೆ. ಜಿಲ್ಲಾಧಿಕಾರಿಯಾಗಿ ನನಗೆ ಅದನ್ನು ತಡೆಹಿಡಿಯಲು ಯಾವುದೇ ಕಾರಣ ಇರಲಿಲ್ಲ. ತಹಶೀಲ್ದಾರ ಸ್ಥಳ ಪರಿಶೀಲನೆ ಮಾಡಿದ್ದಾರೆ. ನಾನು ಸ್ಥಳ ಪರಿಶೀಲನೆ ಮಾಡಿದಾಗ ಯಾವುದೇ ಕುರುಹು ಕಂಡು ಬಂದಿರುವುದಿಲ್ಲ ಎನ್ನುವುದು ಕಡತದಲ್ಲಿದೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಹಗರಣದ ಹಣ ಬಳ್ಳಾರಿ, ರಾಯಚೂರು ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ನಿರಾಧಾರ ಆರೋಪ ಮಾಡುತ್ತಿದೆ. ಕೇಂದ್ರದ ಏಜನ್ಸಿ ಪರಿಶೀಲನೆ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಬುಡಕಟ್ಟಿನ ಪ್ರಕರಣ. ಆದರೆ ಅದೇ ಬುಡಕಟ್ಟು ಸಮಾಜದವನಾದ ನನ್ನ ಮೇಲೆ ಈ ರೀತಿ ಆರೋಪ ಮಾಡುವುದು ಅಮಾನವೀಯ. ಇದು ಕೇಂದ್ರದ ತನಿಖೆಯಲ್ಲಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.ಇದನ್ನೂ ಓದಿ: ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ
ಬೆಂಗಳೂರು: ರಾಜ್ಯಾದ್ಯಂತ 25ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಪೊಲೀಸರು (Lokayukta Police) ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ನಾಲ್ಕು ಎಫ್‍ಐಆರ್ ಸಂಬಂಧ 10 ಕಡೆ ದಾಳಿ ನಡೆಸಲಾಗಿದೆ.
ಮಹದೇವಪುರ ಬಿವಿಎಂಪಿ ವಲಯದ ಆರ್‍ಐ ನಟರಾಜ್‍ರ (RI Nataraj) ಬನಶಂಕರಿಯ ಅವಲಹಳ್ಳಿಯ ಮನೆ ಮೇಲೆ ದಾಳಿ ನಡೆದಿದೆ. ಆಗಸ್ಟ್ 4 ರಂದು 79 ಫ್ಲ್ಯಾಟ್ ಖಾತೆ ಮಾಡಲು 5 ಲಕ್ಷ ಹಣ ಪಡೆಯುವಾಗ ನಟರಾಜ್ ಟ್ರ್ಯಾಪ್ ಆಗಿದ್ದ. ಖಾಸಗಿ ವ್ಯಕ್ತಿ ಪವನ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ಬಗ್ಗೆ ಮಂಜುನಾಥ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ – ಅಪಾರ ಚಿನ್ನಾಭರಣ, ಹಣ ಪತ್ತೆ
ಪ್ರತಿ ಫ್ಲ್ಯಾಟ್‍ಗೆ 10 ಸಾವಿರದಂತೆ ಲಂಚ ಆರ್‍ಐ ನಟರಾಜ್ ಕೇಳಿದ್ದ ಅಲ್ಲದೆ 79 ಫ್ಲ್ಯಾಟ್‍ಗೆ 7 ಲಕ್ಷದ 90 ಸಾವಿರ ಲಂಚ ಕೇಳಿದ್ದ. 60 % ಹಣ ಅಡ್ವಾನ್ಸ್ ಅಂದ್ರೆ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ 5 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಆಗಿದ್ದ.