– 8 ನಿವೇಶನಗಳು, 5 ವಾಸ ಮನೆ, 19 ಎಕ್ರೆ ಜಮೀನಿನ ಆಸ್ತಿ ಪತ್ರ ಜಪ್ತಿ
ಬೆಂಗಳೂರು: ಸಚಿವ ಬೈರತಿ ಸುರೇಶ್ (Byrathi Suresh) ಪಿಎಸ್ (ವೈಯಕ್ತಿಕ ಕಾರ್ಯದರ್ಶಿ) ಮನೆಯ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ಮಧ್ಯಾಹ್ನ ಮಾರುತಿ ಬಗಲಿ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದೆ. ಈವರೆಗೆ 8 ನಿವೇಶನಗಳು, 5 ವಾಸ ಮನೆ, 19 ಎಕ್ರೆ ಜಮೀನಿನ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ
ಬಾಗಲಕೋಟೆ/ಗದಗ: ಇಂದು ಬೆಳಿಗ್ಗೆ ಬಾಗಲಕೋಟೆ (Bagalkote) ಹಾಗೂ ಗದಗ (Gadag) ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು (Lokayuktha Officers) ದಾಳಿ ನಡೆಸಿದ್ದಾರೆ.
ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನೆಯ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ್ ವಸಂದ್ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಜಮಖಂಡಿ ಹಾಗೂ ಖಜ್ಜಿಡೋಣಿ ಗ್ರಾಮದಲ್ಲಿರುವ ಅಶೋಕ್ ಅವರ ಎರಡು ನಿವಾಸದ ಮೇಲೆಯೂ ಲೋಕಾ ದಾಳಿ ನಡೆಸಿ, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್
ಗದಗ ನಗರ ಠಾಣಾ ಸಿಪಿಐ ಆಗಿರುವ ಡಿ.ಬಿ.ಪಾಟೀಲ್ ಅವರ ಮನೆಯ ಗದಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ಮಾಡಲಾಗಿದೆ. ಡಿ.ಬಿ ಪಾಟೀಲ್‌ಗೆ ಸಂಬಂಧಿಸಿದ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಶಿವಾನಂದ ನಗರದ ಬಾಡಿಗೆ ಮನೆ, ಶಹರ ಪೊಲೀಸ್ ಠಾಣೆ ಕಚೇರಿ, ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ಮಾಡಲಾಗಿದೆ.
ಇಂಚಿಂಚು ಪರಿಶೀಲನೆ ನಡೆಸಿದ ಅಧಿಕಾರಿಗಳು, ಶೌಚಾಲಯದೊಳಗೆ ಕುಳಿತಿದ್ದ ಸಿಪಿಐ ಮೊಬೈಲ್‌ನಲ್ಲಿ ಯಾರ ಜೊತೆಯಾದರೂ ಕದ್ದು ಮಾತಾಡುತ್ತಿದ್ದಾನಾ ಎಂದು ಬಾಗಿಲಿಗೆ ಕಿವಿಗೊಟ್ಟು ಕೇಳಿಸಿಕೊಂಡಿದ್ದಾರೆ. ಬಾಗಿಲು ತಟ್ಟಿ ಹೊರಗೆ ಬರುವಂತೆ ಸೂಚಿಸಿದ್ದ ಅಧಿಕಾರಿಗಳ ನಡೆಯನ್ನು ಕಂಡು ಡಿ.ಬಿ ಪಾಟೀಲ್ ಬೆಚ್ಚಿ ಬಿದ್ದಿದ್ದಾರೆ.
– ಅನ್ನಪೂರ್ಣೇಶ್ವರಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಕಿರುಕುಳ ಆರೋಪ – 4 ಕೋಟಿ ಮೌಲ್ಯದ ಮನೆಯನ್ನ 60 ಲಕ್ಷಕ್ಕೆ ಹೇಳಿದವರಿಗೆ ಕೊಡುವಂತೆ ಕಿರುಕುಳ – ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ
ಬೆಂಗಳೂರು: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್‌ಪೆಕ್ಟರ್(Police Inspector) ಕುಮಾರ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ, ಇನ್ಸ್‌ಪೆಕ್ಟರ್ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಆರೋಪ ಏನು?
ಸುಳ್ಳು ಕೇಸ್ ಹಾಕಿ ಚೆನ್ನೇಗೌಡರ 4 ಕೋಟಿ ರೂ. ಮೌಲ್ಯದ ಮನೆಯನ್ನ ಹೇಳಿದವರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್‌ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಇವರಿಬ್ಬರಿಗೂ ಇನ್ಸ್‌ಪೆಕ್ಟರ್ ಕಿರುಕುಳ ಕೊಟ್ಟಿದ್ದರು.
ಈ ಹಿಂದೆ ದಾಖಲಾಗಿದ್ದ ಕೇಸ್ ಒಂದನ್ನು ಬಿ ರಿಪೋರ್ಟ್‌ಗೆ ಹಾಕುತ್ತೇನೆ. ಮನೆಯನ್ನು ಬರೆದುಕೊಡಿ ಎಂದು ಇನ್ಸ್‌ಪೆಕ್ಟರ್ ಕುಮಾರ್ ಅವರು ಚೆನ್ನೇಗೌಡ ಅವರ ಮನೆಗೆ ಕೆಲ ಪುಂಡರನ್ನ ನುಗ್ಗಿಸಿ ದಾಂಧಲೆ ಮಾಡಿಸಿದ್ದರು. ಪುಂಡರ ದಾಂಧಲೆಯನ್ನು ಚೆನ್ನೇಗೌಡ ಅವರು ವಿಡಿಯೋ ಮಾಡಿಕೊಂಡಿದ್ದರು. ಇದನ್ನೂ ಓದಿ: ತವರಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುತ್ತಾ ಆರ್‌ಸಿಬಿ?
ಪೊಲೀಸ್ ಇನ್ಸ್‌ಪೆಕ್ಟರ್, ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಗೆ ಮನೆ ಕೊಡಿಸಲು ಪ್ಲ್ಯಾನ್ ಮಾಡಿದ್ದರು. 4 ಕೋಟಿ ರೂ. ಮೌಲ್ಯದ ಮನೆಯನ್ನ 60 ಲಕ್ಷ ರೂ.ಗೆ ಕೊಡುವಂತೆ ಚೆನ್ನೇಗೌಡ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮನೆ ನೋಡಿಕೊಂಡು ಬರಲು ಠಾಣೆಯ ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರ ಜೊತೆ ಅವರ ಸಂಬಂಧಿಕರನ್ನ ಕಳುಹಿಸಿದ್ದರು.
ಇನ್ಸ್‌ಪೆಕ್ಟರ್ ಸೂಚನೆಯಂತೆ ಇಬ್ಬರು ವ್ಯಕ್ತಿಗಳೊಂದಿಗೆ ಮನೆ ನೋಡಬೇಕೆಂದು ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರು ಚೆನ್ನೇಗೌಡ ಅವರ ಮನೆಗೆ ನುಗ್ಗಿದ್ದರು. ಮಾ. 18ರಂದು ಸಮಯ 3:25 ನಿಮಿಷಕ್ಕೆ ಕೆಂಪು ಬಣ್ಣದ ಕೆಎ 42 ಪಿ 0919 ನೋಂದಣಿಯ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಚೆನ್ನೇಗೌಡ ಅವರು ವಿಡಿಯೋ ಸಹ ಮಾಡಿದ್ದರು. ಈ ವೇಳೆ ಸ್ಟೇಷನ್‌ನಿಂದ ಕಾರು ಸಮೇತ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ ಎಂದು ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರು ಅಲ್ಲಿಂದ ಎಸ್ಕೇಪ್ ಆಗಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪೋಷಕರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ – ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿದ ವಿದ್ಯಾರ್ಥಿನಿ ಸಾವು
ಮತ್ತೊಂದಡೆ ನಾಗರಭಾವಿಯ ಖಾಸಗಿ ಹೊಟೇಲ್‌ನಲ್ಲಿ ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ ನಡೆಸಿದೆ. ಹೆಡ್ ಕಾನ್ಸ್ಟೇಬಲ್ ಉಮೇಶ್, ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಠಾಣೆಯ ಸಿಬ್ಬಂದಿಗಳನ್ನ ಹಾಗೂ ಸಿಕ್ಕಿಬಿದ್ದ ಸಿಬ್ಬಂದಿಗಳನ್ನು ಗುರುವಾರ ಸಂಜೆ 5 ಗಂಟೆಯಿಂದ ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.