Tag: Lok Sabha Elections

  • ಲೋಕಸಭೆ ಚುನಾವಣೆ 2024 – ಶಾಸಕರು, ಮಾಜಿ ಸಚಿವರಿಗೆ ಟಿಕೇಟ್ ನೀಡಲು SP ಪ್ಲ್ಯಾನ್

    ಲೋಕಸಭೆ ಚುನಾವಣೆ 2024 – ಶಾಸಕರು, ಮಾಜಿ ಸಚಿವರಿಗೆ ಟಿಕೇಟ್ ನೀಡಲು SP ಪ್ಲ್ಯಾನ್

    ಲಕ್ನೋ: ಸಚಿವರು, ಪ್ರಮುಖ ಶಾಸಕರನ್ನು ಲೋಕಸಭೆ ಚುನಾವಣೆಗೆ (Lok Sabha Elections) ಕಣಕ್ಕಿಳಿಸುವ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು ಇಂತಹದೇ ಪ್ರಯತ್ನವನ್ನು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (Samajwadi Party) ಕಾರ್ಯರೂಪಕ್ಕೆ ತರಲು ತಯಾರಿ ಆರಂಭಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಪ್ರಮುಖ ಶಾಸಕರನ್ನು ಸ್ಪರ್ಧಿಸಲು ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಸೂಚಿಸಿದ್ದಾರೆ.

    ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಅಖಿಲೇಶ್ ಯಾದವ್ ಈ ಸೂಚನೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿರುವಷ್ಟು ಸ್ಥಾನಗಳನ್ನು ಕಾಂಗ್ರೆಸ್‌ಗೆ (Congress) ನೀಡಲಾಗುವುದು, ಬಾಕಿ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗುವುದು ಇಲ್ಲಿ ಶಾಸಕರ ಹೆಸರನ್ನು ಪರಿಗಣಿಸಲಾಗುವುದು, ಸ್ಪರ್ಧೆಗೆ ತಯಾರಿ ಇರುವಂತೆ ಅಖಿಲೇಶ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ವಿಗ್ರಹ ಕೆತ್ತನೆ ಕಾರ್ಯ ಯಶಸ್ವಿ- ಚಿತ್ರದುರ್ಗದ ಶಿಲ್ಪಿ ಮನೆಯಲ್ಲಿ ಸಂಭ್ರಮಾಚರಣೆ

    ಚುನಾವಣೆ ಅವಧಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಹರಿಸುವಂತೆ ಅಖಿಲೇಶ್ ತಮ್ಮ ನಾಯಕರಿಗೆ ಸಲಹೆ ನೀಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಬಿಜೆಪಿ ಅಸ್ತ್ರಕ್ಕೆ ಸಿಲುಕಿಕೊಳ್ಳಬಾರದು ಎಂದರು. ಮುಚ್ಚಿದ ಲಕೋಟೆಯಲ್ಲಿ ಶಾಸಕರಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದ ಸಲಹೆಗಳನ್ನು ಸಹ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಅದರ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ: ನಿಖಿಲ್

    ಮಾಯಾವತಿ ನನಗಿಂತ ಹಿರಿಯರು ಎಂದು ಅಖಿಲೇಶ್ ಯಾದವ್ ಅವರು, ಮಹಾನ್ ನಾಯಕಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸಬೇಕು. ಮೂಲಗಳ ಪ್ರಕಾರ, ಸಭೆಯಲ್ಲಿ ಹಲವು ಶಾಸಕರು ಸ್ವಾಮಿ ಪ್ರಸಾದ್ ಮೌರ್ಯ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ದೂರಿದರು. ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ಗುಜುರಾತ್‌ನಲ್ಲಿ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಠಿ – ಗೌತಮ್ ಅದಾನಿ ಘೋಷಣೆ 

  • ಅನಿವಾರ್ಯತೆ ಬಂದ್ರೆ ಲೋಕಸಭೆಗೆ ಸಚಿವರೂ ಸ್ಪರ್ಧೆ ಮಾಡ್ಬೇಕು: ಜಿ.ಪರಮೇಶ್ವರ್‌

    ಅನಿವಾರ್ಯತೆ ಬಂದ್ರೆ ಲೋಕಸಭೆಗೆ ಸಚಿವರೂ ಸ್ಪರ್ಧೆ ಮಾಡ್ಬೇಕು: ಜಿ.ಪರಮೇಶ್ವರ್‌

    ಬೆಂಗಳೂರು: ಅನಿವಾರ್ಯತೆ ಬಂದರೆ ಸಚಿವರು ಸಹ ಸ್ಪರ್ಧೆ ಮಾಡಬೇಕಾಗುತ್ತದೆ ಅಂತ ಸುರ್ಜೇವಾಲ ತಿಳಿಸಿದ್ದಾರೆಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwara) ತಿಳಿಸಿದ್ದಾರೆ.

    ಲೋಕಸಭೆ ಚುನಾವಣೆಗೆ (Lok Sabha Elections) ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯ ಸಭೆಯಲ್ಲಿ ಆ ವಿಚಾರ ಚರ್ಚೆ ಆಗಿಲ್ಲ. ಆದರೆ ಸಚಿವರು ಸ್ಪರ್ಧೆ ಮಾಡೋ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಕಳೆದ ಬಾರಿ ಕೃಷ್ಟಭೈರೇಗೌಡ ಸ್ಪರ್ಧೆ ಉದಾಹರಣೆ ಕೊಟ್ಟು ಹೇಳಿದ್ದಾರೆ ಅನ್ನೋ ಮೂಲಕ ಸಚಿವರ ಸ್ಪರ್ಧೆಗೆ ಸಂದೇಶ ಬಂದಿದೆ ಅನ್ನೋ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ

    28 ಸಚಿವರನ್ನ ದೆಹಲಿಗೆ ಬರೋದಕ್ಕೆ ಹೈಕಮಾಂಡ್ (Congress High Command) ನಾಯಕರು ಹೇಳಿದ್ದಾರೆ. ಜನವರಿ 11ಕ್ಕೆ ಎಲ್ಲರು ಹೋಗ್ತೀವಿ‌. ಒಬ್ಬಬ್ಬ ಸಚಿವರಿಗೆ ಒಂದೊಂದು ಲೋಕಸಭೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲನ್ನು ಕರೆದು ಸಲಹೆ ಸೂಚನೆ ಕೊಡ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರೋದಕೆ ಹೇಳಿದ್ದಾರೆ. ನಮ್ಮ ಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕೊಡ್ತೀವಿ. ಅಂತಿಮವಾಗಿ ಹೈಕಮಾಂಡ್ ಯಾರು ಅಭ್ಯರ್ಥಿ ಅಂತ ನಿರ್ಧಾರ ಮಾಡುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

    ಲೋಕಸಭೆಗೆ ಅಭ್ಯರ್ಥಿಗಳ ಪಟ್ಟಿ ಯಾವಾಗ ರಿಲೀಸ್ ಆಗುತ್ತೆ ಗೊತ್ತಿಲ್ಲ. ಹೈಕಮಾಂಡ್ ಅದನ್ನ ತೀರ್ಮಾನ ಮಾಡುತ್ತೆ. ಆದಷ್ಟು ಬೇಗ ಪಟ್ಟಿ ರಿಲೀಸ್ ಮಾಡಿ ಅಂತ ಮನವಿ ಮಾಡ್ತೀವಿ. ಅಭ್ಯರ್ಥಿಗಳ ಘೋಷಣೆಯಾದ್ರೆ, ಹೆಚ್ಚಿನ ಪ್ರಚಾರ ಮಾಡಬಹುದು. ಆದ್ದರಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿ ಅಂತ ಮನವಿ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ 

  • ಡಿಕೆಶಿ ಅಧಿಕಾರದ ಮದದಿಂದ ಮಾತನಾಡ್ತಿದ್ದಾರೆ – ಬಿಎಸ್‌ವೈ ಗುಡುಗು

    ಡಿಕೆಶಿ ಅಧಿಕಾರದ ಮದದಿಂದ ಮಾತನಾಡ್ತಿದ್ದಾರೆ – ಬಿಎಸ್‌ವೈ ಗುಡುಗು

    ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಇದು ಅವರಿಗೆ ಗೌರವ ತರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ತಿಳಿಸಿದ್ದಾರೆ.

    ಲೋಕಸಭೆ ಚುನಾವಣೆಯ ಪೂರ್ವತಯಾರಿಗಳ ಕುರಿತು ಚರ್ಚಿಸಲು ಬಿಜೆಪಿ ಯಲಹಂಕದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಹೈವೋಲ್ಟೇಜ್ ಸಭೆ ಹಮ್ಮಿಕೊಂಡಿದೆ. ಸಭೆಯಲ್ಲಿ ಬಿಎಸ್‌ವೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh), ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ್ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

    ಈ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಫೇಕ್ ಅಂತಿರೋದು ಸಂಗೀತಾ, ಪ್ರತಾಪ್ : ಮೈಕಲ್ ಫಸ್ಟ್ ರಿಯ್ಯಾಕ್ಷನ್

    ಡಿಜೆ ಹಳ್ಳಿ/ಕೆಜಿ ಹಳ್ಳಿ ಪ್ರಕರಣದ ಆರೋಪಿಗಳ ವಿಚಾರದಲ್ಲಿ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದನ್ನೆಲ್ಲ ನೋಡಿದ್ದೀನಿ. ಅಧಿಕಾರ ಮದದಿಂದ ಅವರು ಏನೇನೋ ಮಾತಾಡ್ತಿದಾರೆ, ಅದು ಅವರಿಗೆ ಗೌರವ ತರೋದಿಲ್ಲ ಎಂದು ಅಸಮಾಧಾ ಹೊರಹಾಕಿದ್ದಾರೆ.

    ಬಳಿಕ ಇಂದಿನ ಸಭೆಯಲ್ಲಿ ಲೋಕಸಭಾ ಚುನಾವಣೆಯ ಪೂರ್ವತಯಾರಿಯ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಸಂಘಟನೆ ಬಲಪಡಿಸಲು ಪ್ರಮುಖರನ್ನು ಕರೆದಿದ್ದೇನೆ. ಅನೇಕ ಸಂಗತಿಗಳು ಅನೇಕ ಸಂಗತಿಗಳು ಚರ್ಚೆ ಆಗಲಿವೆ. ಲೋಕಸಭೆ ಸಿದ್ಧತೆ ಸೇರಿದಂತೆ ಎಲ್ಲದರ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿಸಿದ್ದಾರೆ.

    ಸಭೆಗೆ ಮಾಜಿ ಸಚಿವ ಸಿ.ಟಿ ರವಿ, ಶಾಸಕ ಸುನೀಲ್ ಕುಮಾರ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ವಿಶ್ವನಾಥ್ ಸೇರಿದಂತೆ ಮತ್ತಿರರು ಆಗಮಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ – ದಾಖಲೆ ಜಯದೊಂದಿಗೆ ಸತತ 5ನೇ ಬಾರಿಗೆ ಮರು ಆಯ್ಕೆ

  • ಸುಮಲತಾ ಬಿಜೆಪಿ ಪರವಾಗಿದ್ದರೇ ಭೇಟಿಯಾಗಿ ಮಾತುಕತೆ ನಡೆಸ್ತೇವೆ: ಹೆಚ್‌ಡಿಕೆ

    ಸುಮಲತಾ ಬಿಜೆಪಿ ಪರವಾಗಿದ್ದರೇ ಭೇಟಿಯಾಗಿ ಮಾತುಕತೆ ನಡೆಸ್ತೇವೆ: ಹೆಚ್‌ಡಿಕೆ

    ಬೆಂಗಳೂರು: ಸಂಸದೆ ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯೋದಾದ್ರೆ, ಬಿಜೆಪಿ ಪರವಾಗಿದ್ದರೆ ಅವರನ್ನು ಭೇಟಿಯಾಗಿ ಲೋಕಸಭಾ ಚುನಾವಣೆ (Lok Sabha Elections) ಸಿದ್ಧತೆಗಳ ಕುರಿತು ಮಾತುಕತೆ ನಡೆಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ಸುಮಲತಾರ ಆಪ್ತ ಸಚ್ಚಿದಾನಂದ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಲತಾರನ್ನೂ (Sumalatha Ambareesh) ಭೇಟಿ ಆಗ್ತೀವಿ. ಅವರು ಬಿಜೆಪಿಯಲ್ಲಿ (BJP) ಮುಂದುವರಿಯೋದಾದ್ರೆ, ಬಿಜೆಪಿ ಪರವಾಗಿದ್ದರೆ ಅವರನ್ನು ಭೇಟಿ ಮಾಡ್ತೀವಿ. ನಾವೇನು ಇಂತಹ ಕ್ಷೇತ್ರದಿಂದಲೇ ನಿಲ್ತೀವಿ ಅಂತ ಹೇಳಿಲ್ಲ. ಮತ್ತೊಬ್ಬರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕೂ ಅಂತಲೂ ಇಲ್ಲ. ಯಾವುದು ಸಹ ಇನ್ನೂ ಚರ್ಚೆಯಾಗಿಲ್ಲ. ಪ್ರಾರಂಭಿಕ ಹಂತದ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ-ಜೆಡಿಎಸ್‌ನವರು ಸೌಹಾರ್ದಯುತವಾಗಿ ಕೆಲಸ ಮಾಡೋದಕ್ಕೆ ಎಲ್ಲರ ಜೊತೆಗೂ ಮಾತುಕತೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ದೇವೇಗೌಡರು ಶತ್ರುಗಳಿಗೂ ಶಾಪ ಹಾಕಿಲ್ಲ: ಇನ್ನೂ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ದೇವೇಗೌಡರ ಬಗ್ಗೆ ಮಾತಾಡೋರು ಏನೇನು ಮಾಡಿದ್ದಾರೆ ಅಂತ ನೋಡಿಕೊಂಡು ಬಂದಿದ್ದೇನೆ. ಜೆಡಿಎಸ್ ಮುಗಿಸಬೇಕು ಅನ್ನೋದೇ ಅವರ ಅಜೆಂಡಾ. ಕ್ಷೇತ್ರದ ಕೆಲಸಕ್ಕೆ ಹೋದರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬನ್ನಿ ಏನ್ ಬೇಕೋ ಅದನ್ನ ಮಾಡಿಕೊಡ್ತೀನಿ ಅಂತಾರೆ. ಎಷ್ಟು ಕೋಟಿ ಬೇಕೋ ಅಷ್ಟು ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂತಾರೆ. ಯಾವ ಕಾರಣಕ್ಕೆ ಇದನ್ನ ಮಾಡ್ತಿದ್ದಾರೆ? ಜೆಡಿಎಸ್ ಮುಗಿಸಬೇಕು ಅಂತ ಮಾಡ್ತಿದ್ದಾರಾ? ಯಾವ ಪಕ್ಷದಿಂದ ಬೆಳೆದುಕೊಂಡು ಬಂದ್ರಿ, ಯಾರ ನಾಯಕತ್ವದಲ್ಲಿ ಈ ಹಂತಕ್ಕೆ ಬಂದಿದ್ದೀರಿ? ಯಾವುದಕ್ಕೂ ನಿಮ್ಮ ಪ್ರತಿಕ್ರಿಯೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ದೇವೇಗೌಡರು ಶತ್ರುಗಳಿಗೂ ಶಾಪ ಹಾಕಿಲ್ಲ. ಅವರು ಈಗ ರಾಜ್ಯದಲ್ಲಿ ನಡೆಯುತ್ತಿರೋ ದಬ್ಬಾಳಿಕೆ, ಅಕ್ರಮಗಳಿಂದ ಜನರೇ ಅವರನ್ನು ಸಮಾಪ್ತಿ ಮಾಡ್ತಾರೆ ಅಂತ ಹೇಳಿದ್ದಾರೆ. ಡಿಕೆಶಿ 135 ವರ್ಷದ ಪಕ್ಷ ಅಂತಾರೆ. ಗಾಂಧೀಜಿ ಇದ್ದಾಗ ಇತಿಹಾಸ ಬೇರೆ. ಈಗ ಇವರ ಇತಿಹಾಸ ಏನು? ಸ್ವಾತಂತ್ರ‍್ಯ ತರೋವಾಗ ಇತಿಹಾಸ ಬೇರೆ ಇತ್ತು. ಮನೆ ಆಸ್ತಿ ಮಾರಿ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಇವರು ಮಾಡ್ತಿರೋದು ಏನು? ಈಸ್ಟ್ ಇಂಡಿಯಾ ಕಂಪನಿ ಮಾಡಿದ ದರೋಡೆ ಇವರು ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಬೇಕಾದಷ್ಟು ಉದಾಹರಣೆ ಮುಂದಿಡಬಹುದು ಅಂತ ಕಿಡಿಕಾರಿದ್ದಾರೆ.

  • ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ – ಈಶ್ವರಪ್ಪ

    ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ – ಈಶ್ವರಪ್ಪ

    ಬೆಳಗಾವಿ: ಮುಂದಿನ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೇ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಮುಂದಿನ ಚುನಾವಣೆಗೆ ನನ್ನ ಮಗ ಕಾಂತೇಶ್‌ಗೆ ಟಿಕೆಟ್ ಪಡೆಯಬೇಕು ಅಂತ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲಿಸುತ್ತೇನೆ. ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡ್ತಾನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಅಹಿಂದ ಅಂತ ಹೋಗುತ್ತಿದ್ದರು. ಆದ್ರೆ ಹಿಂದುಳಿದವರು, ದಲಿತರು ಕೈಬಿಟ್ಟರು, ಇನ್ನು ಉಳಿದಿರೋದು ಅಲ್ಪಸಂಖ್ಯಾತರು (Muslims) ಮಾತ್ರ. ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನೋದು ಸಿದ್ದರಾಮಯ್ಯರ ಲೆಕ್ಕ. ದೇಶದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಹೊಸವರ್ಷಾಚರಣೆಗೆ ಕ್ಷಣಗಣನೆ – ಇಂದು ರಾತ್ರಿಯಿಂದಲೇ ಬೆಂಗ್ಳೂರಿನ ಪ್ರಮುಖ ಫ್ಲೈಓವರ್‌ಗಳು ಬಂದ್‌!

    ರಾಮಮಂದಿರ ಆಗಬಾರದು ಅಂತಾ ಕೋರ್ಟಿಗೆ ಹೋದವರು ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನದವರು ಮೋದಿಯಂತಹ ಪ್ರಧಾನಿ ನಮಗೆ ಇರಬೇಕಿತ್ತು ಅಂತಾರೆ. ಆದ್ರೆ ಹಿಂದೂ ಮುಸ್ಲಿಂ ಒಟ್ಟಾಗಬಾರದು ಅನ್ನೋದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

    ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದೊಂದೇ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕವಾಯಿತು. ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದ್ರು, ಇದೀಗ ಅದೆಲ್ಲವೂ ಸಾರ್ಥಕವಾಗುತ್ತಿದೆ ಎಂದು ತಿಳಿಸಿದ್ದಾರೆ.

    ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಸ್ಟಂಟ್ ಮಾಡ್ತಿದೆ. ಮೊದಲು ಬಿಜೆಪಿಯವರು ರಾಮಮಂದಿರ ಕಟ್ಟಿಲ್ಲ ಅನ್ನುತ್ತಿದ್ದರು. ಈಗ ಪ್ರಿಯಾಂಕ್ ಖರ್ಗೆಯವರು ರಾಮಮಂದಿರ ಕಟ್ಟಾಯಿತು, ರಾಮರಾಜ್ಯ ಯಾವಾಗ? ಅಂತಾರೆ. ಇಂತಹ ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

  • ಲೋಕಸಭೆ ಚುನಾವಣೆ 2024 – ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ

    ಲೋಕಸಭೆ ಚುನಾವಣೆ 2024 – ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ

    ನವದೆಹಲಿ: 2024ರ ಲೋಕಸಭಾ ಚುನಾವಣೆಗೆ (Lok Sabha Elections) ತಯಾರಿ ಶುರು ಮಾಡಿರುವ ಕಾಂಗ್ರೆಸ್‌ (Congress) ಪಕ್ಷವು ಹಿರಿಯ ನಾಯಕ ಪಿ.ಚಿದಂಬರಂ ನೇತೃತ್ವದಲ್ಲಿ 16 ಜನರ ಪ್ರಣಾಳಿಕೆ ಸಮಿತಿಯನ್ನ ಪ್ರಕಟ ಮಾಡಿದೆ. ಪ್ರಣಾಳಿಕೆಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗಿದೆ.

    ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್ ಸಿಂಗ್‌ದೇವ್ ಅವರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಶಶಿ ತರೂರ್, ಜೈರಾಮ್ ರಮೇಶ್, ಆನಂದ್ ಶರ್ಮಾ, ರಂಜಿತ್ ರಂಜನ್, ಜಿಗ್ನೇಶ್ ಮೇವಾನಿ ಸೇರಿದಂತೆ ಹಲವು ನಾಯಕರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

    ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆಯ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಅವರು, ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಲು ಪಕ್ಷವು ಶೀಘ್ರದಲ್ಲೇ ಸಮಿತಿಗಳನ್ನು ರಚಿಸಲಿದೆ ಎಂದು ಹೇಳಿದ್ದರು. ಲೋಕಸಭೆ ಸ್ಥಾನಕ್ಕೆ ವೀಕ್ಷಕರನ್ನು ನೇಮಿಸುವುದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷವು ಸ್ಕ್ರೀನಿಂಗ್ ಸಮಿತಿ ಸಹ ರಚಿಸುವುದಾಗಿ ಅವರು ತಿಳಿಸಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರ್ತಾರಾ ಜನಾರ್ದನ ರೆಡ್ಡಿ?

  • ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಶುರು – ಗುರುವಾರ ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ

    ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಶುರು – ಗುರುವಾರ ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ

    ನವದೆಹಲಿ: 2024ರ ಲೋಕಸಭಾ ಚುನಾವಣೆಗೆ (Lok Sabha Elections) ಕಾಂಗ್ರೆಸ್‌ ಈಗಿನಿಂದಲೇ ತಯಾರಿ ಶುರು ಮಾಡಿದೆ. ಅದಕ್ಕಾಗಿ ಗುರುವಾರ (ಡಿ.21) ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಾರ್ಯಕಾರಿಣಿ ಸಭೆ ಕರೆದಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಭಾಗಿಯಾಗಲಿದ್ದಾರೆ. ಇದರೊಂದಿಗೆ ಎಲ್ಲಾ ರಾಜ್ಯಗಳ ಪ್ರಮುಖ ನಾಯಕರು ಹಾಗೂ ರಾಜ್ಯಾಧ್ಯಕ್ಷರು ಭಾಗಿಯಾಗಲಿದ್ದಾರೆ.

    ಮಂಗಳವಾರ (ಡಿ.19) ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸಭೆ ನಡೆಯಲಿದ್ದು, ಇತ್ತಿಚೇಗೆ ಮುಕ್ತಾಯಗೊಂಡ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಚುನಾವಣೆಯಲ್ಲಿ (Five States Elections) ಕಾಂಗ್ರೆಸ್‌ ಸೋಲಿನ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ತೆಲಂಗಾಣ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.

    ರಾಜ್ಯವಾರು ನಾಯಕರಿಗೆ ಹೈಕಮಾಂಡ್ ಟಾರ್ಗೆಟ್‌?
    2024ರ ಲೋಕಸಭಾ ಚುವಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ರಾಜ್ಯವಾರು ನಾಯಕರಿಗೆ ಟಾರ್ಗೆಟ್‌ ನೀಡಲು ಮುಂದಾಗಿದೆ. INDIA ಒಕ್ಕೂಟ ನೆರವಿನೊಂದಿಗೆ ಬಿಜೆಪಿ ವಿರುದ್ಧ ಅಜೆಂಡಾ ರೂಪಿಸುವುದು, ಈ ಮೂಲಕ ಕಾಂಗ್ರೆಸ್‌ ಬಲಿಷ್ಠ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌‌ ಸರ್ಕಾರ ಸ್ಥಾಪಿನೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಕೈ ನಾಯಕರು ಇಟ್ಟುಕೊಂಡಿದ್ದಾರೆ. ಆದ್ದರಿಂದ ಉತ್ತರ ಭಾರತದಲ್ಲಿ ಜನಾದೇಶ ಗಳಿಸಲು ವಿಫಲವಾಗಿರುವ ಕಾಂಗ್ರೆಸ್‌ ಪಕ್ಷವನ್ನು ಮೇಲೆತ್ತುವ ಬಗ್ಗೆಯೂ ವರ್ಕಿಂಗ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

  • ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ರಣತಂತ್ರ ಎಣೆಯುತ್ತಿವೆ. ಬಿಡದಿ ತೋಟದ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (H.D.Kumaraswamy) ಅವರನ್ನು ಭೇಟಿಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

    ಬಿಡದಿ ಮನೆಯಲ್ಲಿ ಕುಮಾರಸ್ವಾಮಿ-ವಿಜಯೇಂದ್ರ ದೋಸ್ತಿ ಮಾತುಕತೆ ನಡೆಸಿದ್ದಾರೆ, ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಪ್ಲ್ಯಾನ್ ಸಿದ್ಧವಾಗಿದೆ. ಅಲ್ಲದೇ ದೋಸ್ತಿ ಕ್ಷೇತ್ರಗಳ ಸೀಟು ಹಂಚಿಕೆಗಳ ಬಗ್ಗೆಯೂ ಪ್ರಾಥಮಿಕ ಸಭೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    ಕುಮಾರ-ವಿಜಯ ಮೀಟಿಂಗ್ ಇನ್ ಸೈಡ್ ಸ್ಟೋರಿ ಏನು?
    ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸೀಟು ಹಂಚಿಕೆ ಬಗ್ಗೆ ಪ್ರಾಥಮಿಕ ಚರ್ಚೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಬಳಿ ಇಟ್ಟಿರೋ ಸೀಟು ಹಂಚಿಕೆ, ಫಾರ್ಮುಲಾ ಬಗ್ಗೆ ಚರ್ಚೆ, ಲೋಕಸಭೆ ಚುನಾವಣೆಯಲ್ಲಿ 4-6 ಸ್ಥಾನದ ಬೇಡಿಕೆ ಬಗ್ಗೆ ಕುಮಾರಸ್ವಾಮಿರಿಂದ ವಿಷಯ ಪ್ರಸ್ತಾಪವಾಗಿದೆ ಎಂಬುದು ಸದ್ಯದ ಮಾಹಿತಿ. ಇದನ್ನೂ ಓದಿ: ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ

    ಅಲ್ಲದೇ ಲೋಕಸಭೆ ಚುನಾವಣೆ ಎಲ್ಲೆಲ್ಲಿ ಜಂಟಿ ಸಮಾವೇಶ ನಡೆಸಬೇಕು? ಬೆಳಗಾವಿ ಅಧಿವೇಶನದಲ್ಲಿ (Belagavi Session) ಸರ್ಕಾರದ ಯಾವ ರೀತಿ ಹೋರಾಟಗಳನ್ನ ನಡೆಸಬೇಕು? ಅದಕ್ಕೆ ರೂಪುರೇಷೆಗಳು ಹೇಗಿರಬೇಕು? ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದರೊಂದಿಗೆ ಸಚಿವ ಜಮೀರ್ ಅಹ್ಮದ್‌ ಖಾನ್‌ ತೆಲಂಗಾಣ ಚುನಾವಣಾ ಪ್ರಚಾರದ ಬಗ್ಗೆ ನೀಡಿದ ಹೇಳಿಕೆ, ಸಿಎಂ ಪುತ್ರ ಯತೀಂದ್ರ ವಿಡಿಯೋ ವಿಚಾರ, ರೈತರಿಗೆ ಅನ್ಯಾಯ, ಗ್ಯಾರಂಟಿಗಳ ವೈಫಲ್ಯದ ಜಂಟಿ ಹೋರಾಟ ರೂಪಿಸಬೇಕು. ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದಿರೋ ಪ್ರಕರಣದಲ್ಲಿ ಮೊದಲ ದಿನದಿಂದಲೇ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

  • ಜನ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್‌ ಸರ್ಕಾರ 5 ವರ್ಷ ನಡೆಯಲಿ – ಶ್ರೀರಾಮುಲು

    ಜನ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್‌ ಸರ್ಕಾರ 5 ವರ್ಷ ನಡೆಯಲಿ – ಶ್ರೀರಾಮುಲು

    ಕೋಲಾರ: ರಾಜ್ಯದ ಜನ ಕಾಂಗ್ರೆಸ್‌ಗೆ (Congress) ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡೆಯಲಿ ಬಿಡಿ. ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು (Sriramulu) ಹೇಳಿದ್ದಾರೆ.

    ಕೋಲಾರದ (Kolar) ಮುಳಬಾಗಿಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Elections) ನಂತರ ಕಾಂಗ್ರೆಸ್‌ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡಿಯಲಿ ಬಿಡಿ. ಇನ್ನೂ ಯಾವುದೇ ಆಪರೇಷನ್ ಕಮಲ ಮಾಡುವುದಕ್ಕೆ ಹೋಗುವುದಿಲ್ಲ, ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ನುಡಿದಿದ್ದಾರೆ.

    ಡಿಕೆಶಿ ಸಿಬಿಐ ಕೇಸ್‌ ವಾಪಸ್‌ ವಿಚಾರ ಕುರಿತು ಮಾತನಾಡಿದ ಅವರು, ಸಿಬಿಐ ತನಿಖೆ (CBI Investigation) ಆಗಬೇಕಿದ್ದ ಡಿಕೆ ಶಿವಕುಮಾರ್ ಅವರ ಪ್ರಕರಣವನ್ನ ಕ್ಯಾಬಿನೆಟ್‌ ವಾಪಸ್ ಪಡೆಯಲು ಅನುಮತಿ ನೀಡಿರುವುದು ನಮಗೆ ಭಯವಾಗಿದೆ. ಸರ್ಕಾರವನ್ನ ಬೊಂಬೆಯಂತೆ ಅವರು ನಡೆಸಿಕೊಳ್ಳುತ್ತಿದ್ದು, ಸರ್ಕಾರವೇ ಅವರಿಗೆ ತಲೆಬಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

    ಡಿಕೆಶಿ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದಿದ್ದರೇ, ಪ್ರಕರಣದಿಂದ ನ್ಯಾಯಯುತವಾಗಿ ಹೊರಬರುವ ವಿಶ್ವಾಸ ಇದ್ದಿದ್ದರೇ ಈ ರೀತಿಮಾಡುತ್ತಿರಲಿಲ್ಲ. ಕ್ಯಾಬಿನೆಟ್ ನಲ್ಲಿ ಈ ರೀತಿಯ ವಿಚಾರಗಳೇ ಚರ್ಚೆಗೆ ಬರುವುದಿಲ್ಲ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂತಹ ವಿಷಯ ಚರ್ಚೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಇದೇ ವೇಳೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಬಗ್ಗೆ ಹಿರಿಯ ನಾಯಕರಲ್ಲಿ ಅಸಮಾಧಾನ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಹಿರಿಯರು ಸೇರಿ ವಿಜಯೇಂದ್ರ ಅವರಿಗೆ ಅಧಿಕಾರ ಕೊಟ್ಟಿದ್ದಾರೆ, ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಪಕ್ಷ ಮುನ್ನಡೆಸುವ ಕೆಲಸ ಮಾಡುತ್ತೇವೆ. ಅಸಮಾಧಾನ ಆಗಿರುವ ಯತ್ನಾಳ್ ಸೋಮಣ್ಣ ಅವರೂ ಸಮಧಾನ ಆಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಕಿಯ ಅಚ್ಚರಿ ಬದುಕು- 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸ್ತಿದ್ದಾಳೆ ಈಕೆ!

    ಇನ್ನೂ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಅವರು ಪಕ್ಷಕ್ಕೆ ಬರುವುದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ನನ್ನ ಅವರ ಮಧ್ಯೆ ಇರುವುದು ವೈಯಕ್ತಿಕ. ಆದ್ರೆ ರಾಜಕೀಯವಾಗಿ ನನ್ನ ಅವರ ನಡುವೆ ಏನೂ ದ್ವೇಷವಿಲ್ಲ ಎಂದು ತಿಳಿಸಿದ್ದಾರೆ.

  • ಲೋಕಸಭೆ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ – ಆರ್. ಅಶೋಕ್

    ಲೋಕಸಭೆ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ – ಆರ್. ಅಶೋಕ್

    ಬೆಂಗಳೂರು: ಸದಾನಂದಗೌಡ ಹಿರಿಯ ನಾಯಕರು ಅವರು ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು ಅಂತ ಮಾಜಿ ಡಿಸಿಎಂ, ಶಾಸಕ ಅಶೋಕ್ (R. Ashoka) ತಿಳಿಸಿದ್ದಾರೆ. ಸದಾನಂದಗೌಡ (DV SadanandaGowda) ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದಾನಂದಗೌಡರು ಹಿರಿಯ ನಾಯಕರು ಅವರು ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು. 6-7 ತಿಂಗಳಿಂದ ಅವರು ನಿವೃತ್ತಿ ಬಗ್ಗೆ ಮಾತಾಡುತ್ತಿದ್ದರು‌. ಈಗ ನಿರ್ಧಾರ ಮಾಡಿದ್ದಾರೆ. ಅದು ಅವರ ವಯಕ್ತಿಕ ನಿರ್ಧಾರ. ಹೈಕಮಾಂಡ್ ಸೇರಿ ಅವರಿಗೆ ಯಾರು ಒತ್ತಡ ಹಾಕಿಲ್ಲ. ಅವರ ಸ್ವಂತ ನಿರ್ಧಾರ ಮಾಡಿದ್ದಾರೆ. ಅಂತ ತಿಳಿಸಿದರು.

    ಬೆಂಗಳೂರು ಉತ್ತರ ಲೋಕಸಭೆ ‌ಕ್ಷೇತ್ರಕ್ಕೆ (Bengaluru MP Constituency) ಯಾರಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ.ಹೈಕಮಾಂಡ್ ‌ನಿರ್ಧಾರಕ್ಕೆ ನಾನು ಬದ್ದ. ನಾನು‌ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದೇ ಫೈನಲ್ ಯಾರಿಗೆ ಟಿಕೆಟ್ ಕೊಟ್ರು ನಾನು ನಾನು ಸ್ವಾಗತ ಮಾಡ್ತೀನಿ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲಿಸ್ತಾರೆ ವಿಜಯೇಂದ್ರ: ನೂತನ ಅಧ್ಯಕ್ಷರಿಗೆ HDK, ರೇಣುಕಾಚಾರ್ಯ ವಿಶ್‌

    ಪಕ್ಷದ ವಿರುದ್ದ ಅಸಮಾಧಾನಗೊಂಡಿರೋ ಸೋಮಶೇಖರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ‌ ಅವರು, ಸೋಮಶೇಖರ್ ಪಕ್ಷ ಬಿಟ್ಟು ಹೋಗಿಲ್ಲ ಅವರ ಜೊತೆ ನಾನೇ ಮಾತಾಡಿದ್ದೇನೆ. ಈಶ್ವರಪ್ಪ ಹೇಳಿದ್ದಕ್ಕೆ ನಾನು‌ ಹಾಗೆ ಹೇಳಿದೆ ಅಂತ ಸೋಮಶೇಖರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೋಮಶೇಖರ್ ಹೋಗೊಲ್ಲ ಅಂತ ಸ್ಪಷ್ಟಪಡಿಸಿದರು.

    ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ ಗೆ ಬರ್ತಾರೆ ಎಂಬ ಡಿಕೆ ಶಿವಕುಮಾರ್ (DK Shivakumar) ‌ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಕಾಂಗ್ರೆಸ್ ನಲ್ಲಿ‌ ದೊಡ್ಡ ಗೊಂದಲ ಇದೆ. ಗೊಂದಲ‌ ಇರೋದಕ್ಕೆ ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿ ಸಭೆ ಮಾಡಿದ್ದು. ಅಧಿಕಾರಕ್ಕಾಗಿ ಸಿಎಂ, ಡಿಸಿಎಂ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನೂರಾರು ಗೊಂದಲ ಇದೆ. ಅದನ್ನ ಮುಚ್ಚಿ ಹಾಕಿಕೊಳ್ಳಲು ಆಪರೇಷನ್ ಕಮಲ ಅಂತ ಹೇಳ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ‌ಮಾಡ್ತಿಲ್ಲ. ಮಾಡೋದು ಇಲ್ಲ.ಕಾಂಗ್ರೆಸ್ ಬಳಿ ಆಪರೇಷನ್ ಕಮಲದ ಬಗ್ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ ಅಂತ ಸವಾಲ್ ಹಾಕಿದ್ರು.

    ಲೋಕಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ದೊಡ್ಗ ಬದಲಾವಣೆ ಆಗುತ್ತೆ. ಕಾಂಗ್ರೆಸ್ ‌ಶಾಸಕರು ಲೋಕಸಭೆ ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಫಲಿತಾಂಶ ಬಂದ ಮೇಲೆ ದೊಡ್ಡ ಬದಲಾವಣೆ ರಾಜ್ಯದಲ್ಲಿ ಆಗುತ್ತೆ ಅಂತ ಭವಿಷ್ಯ ನುಡಿದರು.

    ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ದ ಸಿಎಂ, ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡೋದು ಬಿಟ್ಟು ಬರ ಪರಿಹಾರ ಕೊಡಲಿ. ಬಿಜೆಪಿ‌ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೇ ಬರ ಪರಿಹಾರ ಕೊಟ್ಟಿತ್ತು. ಎರಡು ಪಟ್ಟು ಪರಿಹಾರ ಹೆಚ್ಚಳ‌ ಮಾಡಿದ್ವಿ.ಇವರು ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಮೇಲೆ ನೊಣ ಬಿದ್ದಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಅದಕ್ಕೆ ಹಣ ಇಲ್ಲ. ಹೀಗಾಗಿ ಕೇಂದ್ರದ ಮೇಲೆ ಬೊಟ್ಟು ಮಾಡ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: PSI Scam: ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಆದೇಶ – ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ

    ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನದ ಆಯ್ಕೆ ಆದಷ್ಟು ಬೇಗ ಆಗಲಿದೆ. ಜೆಡಿಎಸ್ ಮೈತ್ರಿ ಮತ್ತು ಪಂಚರಾಜ್ಯ ಚುನಾವಣೆ ಬ್ಯುಸಿಯಿಂದ ಸ್ವಲ್ಪ ತಡ ಆಗಿದೆ.ಆದಷ್ಟು ಬೇಗ ಕೇಂದ್ರದ ನಾಯಕರು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದಾರೆ ಅಂತ ಸ್ಪಷ್ಟಪಡಿಸಿದರು.