Tag: Lok Sabha Elections

  • Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

    Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

    – ಕೇರಳದಲ್ಲೇ ಘಟಾನುಘಟಿಗಳ ಸ್ಪರ್ಧೆ

    ನವದೆಹಲಿ: 2024ರ ಲೋಕಸಮರಕ್ಕೆ ಕಾಂಗ್ರೆಸ್‌ ಮೊದಲ ಅಭ್ಯರ್ಥಿಗಳ ಪಟ್ಟಿ (Congress 1st Lok Sabha List) ಬಿಡುಗಡೆ ಆಗಿದ್ದು, ಈ ಬಾರಿಯೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    ಇತ್ತೀಚೆಗಷ್ಟೇ ಉತ್ತರ ಪ್ರದೇಶದ (Uttar Pradesh) ಕಾಂಗ್ರೆಸ್‌ ಭದ್ರಕೋಟೆ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಹಾಗೂ ಅಮೇಥಿ ಕ್ಷೇತ್ರದಿಂದ ಮತ್ತೆ ರಾಹುಲ್‌ ಗಾಂಧಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ರಾಹುಲ್‌ ಗಾಂಧಿ ಬಿಗ್‌ ಫೈಟ್‌ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ಟ್‌ ಟ್ವಿಸ್ಟ್‌ ಕೊಟ್ಟಿದ್ದು, ರಾಹುಲ್‌ ಗಾಂಧಿ ಅವರಿಗೆ ಕೇರಳದ ವಯನಾಡಿನಿಂದಲೇ ಟಿಕೆಟ್‌ ಘೋಷಣೆ ಮಾಡಲಾಗಿದೆ. 2ನೇ ಪಟ್ಟಿಯಲ್ಲಿ ಪ್ರಿಯಾಂಕ ಗಾಂಧಿ ಅವರಿಗೆ ಕ್ಷೇತ್ರ ನಿಗದಿಪಡಿಸುವ ವಿಶ್ವಾಸವನ್ನು ಕಾಂಗ್ರೆಸ್‌ ನಾಯಕರು ವ್ಯಕ್ತಪಡಿಸಿದ್ದಾರೆ.

    4 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದುಬೀಗಿದ್ದ ರಾಗಾ:
    2019ರ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ 10,92,197 ಮತಗಳನ್ನು ಪಡೆದುಕೊಂಡಿದ್ದರು. ಈ ಮೂಲಕ 4,31,770 ಮತಗಳ ಅಂತರದಿಂದ (ಶೇಕಡವಾರು ಮತ 39.5%) ಗೆಲುವು ಸಾಧಿಸಿದ್ದರು. ಕೇರಳದ ಜತೆ ಮೇಲೆ ವಿಶ್ವಾಸ ಇಟ್ಟಿರುವ ರಾಗಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಲ್ಲದೇ ಕೇರಳದ ಅಲಪ್ಪುಳ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal), ತಿರುವನಂತಪುರಂನಿಂದ ಡಾ.ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಅವರನ್ನು ರಾಜನಾನಂದಗಾಂವ್‌ನಿಂದ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ.

    ಕರ್ನಾಟದಲ್ಲಿ ಯಾರ್ಯಾರಿಗೆ ಟಿಕೆಟ್‌?
    ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ತುಮಕೂರಿನಿಂದ ಮುದ್ದ ಹನುಮೇಗೌಡ, ವಿಜಯಪುರದಿಂದ ಎಸ್.ಆರ್. ಅಲಗೂರ, ಹಾವೇರಿಯಿಂದ ಆನಂದಸ್ವಾಮಿ ಗಡ್ಡದವೇರಮಠ, ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ ಸುರೇಶ್ ಹಾಗೂ ಹಾಸನದಿಂದ ಶ್ರೇಯಸ್ ಪಟೇಲ್, ಮಂಡ್ಯದಿಂದ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಹೆಸರನ್ನು ಪಕ್ಷ ಫೈನಲ್‌ ಮಾಡಿದೆ. ಇದನ್ನೂ ಓದಿ: Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ಉಳಿದಂತೆ ಛತ್ತೀಸಗಢ 6, ಕೇರಳ- 16, ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಕ್ಷೇತ್ರಗಳಿಂದ ತಲಾ 1, ಮೇಘಾಲಯ 2, ತೆಲಂಗಾಣದಿಂದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

    ಮೊದಲ ಪಟ್ಟಿ ಪ್ರಕಟಿಸಿದ ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ 15 ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಒಟ್ಟು 24 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!

  • Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!

    Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!

    – ಮೊದಲ ಪಟ್ಟಿಯಲ್ಲಿ ಕರ್ನಾಟದ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

    ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (Congress 1st Lok Sabha List) ಶುಕ್ರವಾರ ಬಿಡುಗಡೆಗೊಳಿಸಿದೆ.

    ರಾಹುಲ್ ಗಾಂಧಿ (Rahul Gandhi), ಕೆ.ಸಿ ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಒಟ್ಟು 9 ರಾಜ್ಯಗಳ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ.

    ನಿರೀಕ್ಷೆಯಂತೆ ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಅವರಿಗೆ ಟಿಕೆಟ್ ನೀಡಲಾಗಿದ್ದು, ಶಿವಮೊಗ್ಗದಿಂದ ಕಣಕ್ಕಿಳಿಯಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ ಸುರೇಶ್ (DK Suresh) ಮತ್ತೆ ಕಣಕ್ಕಿಳಿಯಲಿದ್ದು, ಬಿಜೆಪಿ ನಡುವೆ ಪ್ರಬಲ ಪೈಪೋಟಿಯ ನಿರೀಕ್ಷೆಯಿದೆ.

    ಯಾವ ಕ್ಷೇತ್ರದಿಂದ ಯಾರು ಕಣಕ್ಕೆ?
    ವಿಜಯಪುರ (SC) – ಹೆಚ್.ಆರ್. ಅಲ್ಗೂರು (ರಾಜು)
    ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ
    ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
    ಹಾಸನ – ಎಂ. ಶ್ರೇಯಸ್ ಪಟೇಲ್
    ತುಮಕೂರು – ಎಸ್.ಪಿ ಮುದ್ದಹನುಮೇಗೌಡ
    ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
    ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್

  • ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಶೋಕ್, ಅಶ್ವಥ್ ನಾರಾಯಣ್ ಸಮರ್ಥರು – ಸಿಪಿವೈ ಅಚ್ಚರಿ ಹೇಳಿಕೆ

    ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಶೋಕ್, ಅಶ್ವಥ್ ನಾರಾಯಣ್ ಸಮರ್ಥರು – ಸಿಪಿವೈ ಅಚ್ಚರಿ ಹೇಳಿಕೆ

    ನವದೆಹಲಿ: ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರಕ್ಕೆ ಅಭ್ಯರ್ಥಿಗಳ ಕೊರತೆ ಇಲ್ಲ. ಪಕ್ಷದಲ್ಲಿ ಸಾಕಷ್ಟು ಪ್ರಬಲ ನಾಯಕರಿದ್ದಾರೆ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಸ್ಪರ್ಧೆ ಮಾಡಬಹುದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿದ್ದಾರೆ.

    ಕ್ಷೇತ್ರದಲ್ಲಿ ನಡೆದ ಮೈತ್ರಿ ಮಾತುಕತೆ ಸಂಬಂಧ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಾ.ಮಂಜುನಾಥ್ (Dr. CN Manjunath) ಅವರ ಹೆಸರು ಪ್ರಸ್ತಾಪಿಸಿದ್ದೇನೆ, ಅವರನ್ನು ಒಪ್ಪಿಸುವ ಜವಬ್ದಾರಿ ನನ್ನದು ಎಂದು ಹೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಈ ಚುನಾವಣೆಯನ್ನು (Elections) ಸವಾಲಾಗಿ ಸ್ವೀಕರಿಸಿದ್ದೇವೆ, ನಾನು ರಾಜ್ಯ ರಾಜಕಾರಣದಲ್ಲಿ ಇರಬೇಕು ಅಂತ ಅಂದುಕೊಂಡಿದ್ದೇನೆ. ಹೀಗಾಗೀ ನಾನು ಸ್ಪರ್ಧಿಸುವ ಆಸಕ್ತಿ ಇಲ್ಲ. ನಾನು ಮಂಜುನಾಥ್ ಹೆಸರು ಪ್ರಸ್ತಾಪಿಸಿದ್ದೇನೆ, ಕೆಲವು ನಾಯಕರು ನಾನು ಸ್ಪರ್ಧಿಸಿದರೆ ಕಠಿಣ ಪೈಪೊಟಿ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ

    ಮಂಜುನಾಥ್ ಅವರನ್ನು ಹೊರತುಪಿಡಿಸದರೂ ಅಶ್ವಥ್ ನಾರಾಯಣ್ ಡಿಸಿಎಂ ಆಗಿದ್ದವರು, ಉಸ್ತುವಾರಿ ಸಚಿವರಾಗಿದರು, ಆರ್.ಅಶೋಕ್ ವಿರೋಧ ಪಕ್ಷದ ನಾಯಕರು ಸ್ಪರ್ಧಿಸಲು ಸಮರ್ಥರಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣಹತ್ಯೆ ಮತ್ತೆ ಬೆಳಕಿಗೆ- ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ 74 ಗರ್ಭಪಾತ

  • ರಾಜಕೀಯ ಕರ್ತವ್ಯದಿಂದ ನನ್ನನ್ನು ಮುಕ್ತಗೊಳಿಸಿ – ರಾಜಕೀಯ ನಿವೃತ್ತಿ ಸುಳಿವು ನೀಡಿದ ಗಂಭೀರ್‌

    ರಾಜಕೀಯ ಕರ್ತವ್ಯದಿಂದ ನನ್ನನ್ನು ಮುಕ್ತಗೊಳಿಸಿ – ರಾಜಕೀಯ ನಿವೃತ್ತಿ ಸುಳಿವು ನೀಡಿದ ಗಂಭೀರ್‌

    ನವದೆಹಲಿ: ಅಚ್ಚರಿ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ (Gautam Gambhir) ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

    ಈ ಕುರಿತು ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಗೌತಮ್‌ ಗಂಭೀರ್‌, ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಜೀ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸುತ್ತೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಜೀ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೊದಲ 100 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆಗಳೂ ನಡೆಯುತ್ತಿವೆ. ಈ ನಡುವೆ ಗಂಭೀರ್‌ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. 2019ರಲ್ಲಿ ಬಿಜೆಪಿ ಸೇರಿದ್ದ ಗೌತಮ್‌ ಗಂಭೀರ್‌ ಅವರು, ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಸ್ಥಾನದಿಂದ ಸ್ಪರ್ಧಿಸಿ 6,95,109 ಮತಗಳ ಅಂತರದಿಂದ ಗೆದ್ದಿದ್ದರು.

    ಈ ನಡುವೆ ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ಇದೀಗ ಕೆಕೆಆರ್‌ ತಂಡಕ್ಕೆ ಮೆಂಟರ್‌ ಆಗಿ ಮರಳಿದ್ದಾರೆ. ಈ ಹಿಂದೆ ಗಂಭೀರ್‌ ನಾಯಕನಾಗಿದ್ದ ಕೆಕೆಆರ್‌ (ಕೋಲ್ಕತ್ತಾ ನೈಟ್‌ರೈಡರ್ಸ್‌) ತಂಡ ಎರಡು ಬಾರಿ ಚಾಂಪಿಯನ್‌ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು.

    2011ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಟೀಂ ಇಂಡಿಯಾದ ಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್‌ಗಳ ಪೈಕಿ ಒಬ್ಬರಾಗಿದ್ದರು. ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ‌ಪಂದ್ಯದಲ್ಲಿ 97 ರನ್‌ ಗಳಿಸುವ ಮೂಲಕ 28 ವರ್ಷಗಳ ನಂತರ ಭಾರತ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಮತ್ತೆ ಅವರು ಕ್ರಿಕೆಟ್‌ ಲೋಕದತ್ತ ಸಂಪೂರ್ಣ ಗಮನಹರಿಸುವ ಆಸಕ್ತಿ ತೋರಿದ್ದಾರೆ.

  • ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಮೂರು ಟಿಕೆಟ್ ಕೇಳಿದ್ದೇವೆ – ಜಮೀರ್ ಅಹಮದ್

    ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಮೂರು ಟಿಕೆಟ್ ಕೇಳಿದ್ದೇವೆ – ಜಮೀರ್ ಅಹಮದ್

    ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಜನಸಂಖ್ಯೆಗೆ ಅನುಗುಣವಾಗಿ 3 ಸ್ಥಾನ ಮುಸ್ಲಿಮರಿಗೆ ಕೊಡಬೇಕು ಅಂತ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಜಮೀರ್ ಅಹಮದ್ ಖಾನ್‌ (Zameer Ahmed Khan)  ತಿಳಿಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮುಸ್ಲಿಮರಿಗೆ (Muslims) 3 ಸ್ಥಾನ ಕೇಳಿದ್ದೇವೆ. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ಕೇಳಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ನಮಗೆ ಟಿಕೆಟ್ (Election Ticket) ಕೇಳಿದ್ದೇವೆ ಅನ್ನೋದಕ್ಕಿಂತ ಗೆಲ್ಲಬೇಕು ಅನ್ನೋದು ಮುಖ್ಯ ಎಂದರು. ಇದನ್ನೂ ಓದಿ: ಬಿಜೆಪಿಯವರು ನಮಗೆ ದೇಶಭಕ್ತಿ ಹೇಳಿಕೊಡಬೇಕಿಲ್ಲ – ಎಫ್‌ಎಸ್‌ಎಲ್ ವರದಿ ಬಗ್ಗೆ ಸಿಎಂ ಹೇಳಿದ್ದೇನು?

    27 ಜನ ಸಂಸದರು ರಾಜ್ಯಕ್ಕಾಗಿ ದನಿ ಎತ್ತುತ್ತಿಲ್ಲ:
    ಈಗ ನಮ್ಮಲ್ಲಿ ಒಬ್ಬರು ಸಂಸದರು ಮಾತ್ರ ಇದ್ದಾರೆ. ಅವರಿಗೆ ಧ್ವನಿ ಎತ್ತಲು ಅವಕಾಶ ಕೊಡ್ತಿಲ್ಲ. ‌ಬಿಜೆಪಿಯ 25, ಸುಮಲಾ ಹಾಗೂ ಪ್ರಜ್ವಲ್‌ ರೇವಣ್ಣ ಅವರೂ ಎನ್‌ಡಿಎ ಭಾಗವಾಗಿರೋದ್ರಿಂದ ಅವರೂ ಬಿಜೆಪಿ ಜೊತೆಗಿದ್ದಾರೆ. ಒಟ್ಟು 27 ಜನ ಸಂಸದರು ಇದ್ದಾರೆ. 27 ಜನ ಸಂಸದರು ಕರ್ನಾಟಕ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರಾ? ನಮ್ಮ ಪಕ್ಷದವರು ಸಂಸತ್‌ನಲ್ಲಿದ್ದರೆ ಧ್ವನಿ ಎತ್ತಲು ಅನುಕೂಲವಾಗುತ್ತದೆ. ನಮ್ಮವರು ಜಾಸ್ತಿ ಇದ್ದರೆ ಧ್ವನಿ ಎತ್ತಬಹುದು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನಮ್ಮ ರಾಜ್ಯದಿಂದ ನಮ್ಮವರು ಜಾಸ್ತಿ ಇದ್ದರೆ ಒಳ್ಳೆಯದು ಎಂದರು.

    ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುತ್ತೆ, ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯವಾದ ರಿಸಲ್ಟ್ ಬರುತ್ತದೆ. ಕನಿಷ್ಟ 20-22 ಸ್ಥಾನ ಲೋಕಸಭೆಯಲ್ಲಿ ಗೆಲ್ತೀವಿ. ವಿಧಾನಸಭೆಯಲ್ಲೂ 135 ಸ್ಥಾನ ಬರುತ್ತೆ ಅಂತ ಹೇಳಿದ್ದೆ. ಯಾರೂ ನಂಬಲಿಲ್ಲ, ಆದ್ರೆ 136 ಸ್ಥಾನ ಬಂತು. ಲೋಕಸಭೆಯಲ್ಲೂ ಖಂಡಿತಾ 20-22 ಸ್ಥಾನ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬಾರದು: ಒಕ್ಕಲಿಗರ ಸಮಿತಿ ಎಚ್ಚರಿಕೆ

    ಅಚ್ಛೇದಿನ ಬೇಡ-ಹಳೆಯ ದಿನ ಕೊಡಿ:
    ಬಿಜೆಪಿಯವರು ರಾಮಮಂದಿರ, ಹಿಂದೂ ಮುಸ್ಲಿಂಮರು ಅನ್ನೋದಷ್ಟೆ ಹೇಳ್ತಾರೆ. ಕಾಂಗ್ರೆಸ್‌ನವರು ಅಭಿವೃದ್ಧಿ ಕೆಲಸಗಳ ಮೇಲೆಯೇ ಮತ ಕೇಳ್ತೀವಿ, ಅಭಿವೃದ್ಧಿ ಮೇಲೆ ಗೆಲ್ತೀವಿ ಎಂದರು. ಇದೇ ವೇಳೆ ಮೋದಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಹಾಕ್ತೀನಿ ಅಂದರು ಹಾಕಿದ್ರಾ? ಗ್ಯಾಸ್ ಬೆಲೆ, ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟು ಏರಿಕೆ ಆಗಿದೆ. ಅಚ್ಛೇದಿನ ಅಂದ್ರು, ಎಲ್ಲಿ ಬಂತು ಅಚ್ಛೇದಿನ? ನಮಗೆ ಅಚ್ಛೇದಿನ ಬೇಡ ಹಳೆಯ ದಿನವನ್ನೇ ಕೊಡಿ ಅಂತ ಜನ ಕೇಳ್ತಿದ್ದಾರೆ. ಸಬ್ ಕಾ ಸಾತ್‌, ಸಬ್ ಕಾ ವಿಕಾಸ್ ಅಂದ್ರೆ ಇದೇ ನಾ ಎಂದು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: 

  • ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

    ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

    – ಕಾಂಗ್ರೆಸ್‌ ಪಕ್ಷದಲ್ಲಿ ಒಂದು ಕುಟುಂಬ ಮಾತ್ರ ಬೆಳೆಯುತ್ತಿದೆ ಎಂದ ಗೀತಾ ಕೋರಾ

    ರಾಂಚಿ: ಲೋಕಸಭಾ ಚುನಾವಣೆಗೆ (Lok Sabha Elections) ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಪ್ರಮುಖ ಶಾಸಕರು, ಸಂಸದರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಶಾಸಕಿ ಎಸ್‌.ವಿಜಯಧರಣಿ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ (Jharkhand) ಕಾಂಗ್ರೆಸ್‌ ಸಂಸದೆ ಬಿಜೆಪಿ ಸೇರಿದ್ದಾರೆ.

    ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡಾ ಅವರ ಪತ್ನಿ ಹಾಗೂ ಸಿಂಗ್‌ಭೂಮ್ (ST ಮೀಸಲು) ಕ್ಷೇತ್ರದ ಕಾಂಗ್ರೆಸ್ ಸಂಸದೆ ಗೀತಾ ಕೋಡಾ (Geeta Kora) ಅವರು ಸೋಮವಾರ ಇಲ್ಲಿನ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಬಳಿಕ ಮಾತನಾಡಿರುವ ಗೀತಾ ಕೋಡಾ, ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್‌ ಈ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದಕ್ಕಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: TMC ಪ್ರಭಾವಿ ಶೇಖ್ ಷಹಜಹಾನ್ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ

    ಒಂದು ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುತ್ತದೆ ಎಂದು ಹೇಳುತ್ತಾರೆ. ಆದ್ರೆ ಕಾಂಗ್ರೆಸ್‌ ಒಂದು ಕುಟುಂಬವನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    2019ರ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್‌ನ 14 ಸಂಸದೀಯ ಸ್ಥಾನಗಳ ಪೈಕಿ ಬಿಜೆಪಿ-ಎಜೆಎಸ್‌ಯು ಮೈತ್ರಿಕೂಟ 12ರಲ್ಲಿ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಧ್ರುವ್‌ ರಥೀ ವಿಡಿಯೋ ಪೋಸ್ಟ್‌ ಮಾಡಿ ತಪ್ಪು ಮಾಡಿದ್ದೇನೆ – ಸುಪ್ರೀಂನಲ್ಲಿ ಕೇಜ್ರಿವಾಲ್‌ ತಪ್ಪೊಪ್ಪಿಗೆ

  • ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಾರ್ಟಿ – ಸಿ.ಟಿ ರವಿ ವಾಗ್ದಾಳಿ

    ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಾರ್ಟಿ – ಸಿ.ಟಿ ರವಿ ವಾಗ್ದಾಳಿ

    ಚಿಕ್ಕಮಗಳೂರು: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಾರ್ಟಿ (Criminal Party) ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯ ಕಚೇರಿ (Lok Sabha Elections Office) ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಹುಂಡಿಯ ಹಣಕ್ಕೂ ಕೈ ಹಾಕಿದ್ದಾರೆ. ಇವರು ನಿಜವಾಗಿಯೂ ಜಾತ್ಯತೀತರಾ? ಕಾಂಗ್ರೆಸ್‌ ನಿಜವಾಗಿಯೂ ಜಾತ್ಯತೀತವಾಗಿದ್ದರೆ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬಶೀರ್‌ ಸ್ಪಿನ್‌ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್‌ಗೆ 134 ರನ್‌ಗಳ ಮುನ್ನಡೆ

    ತಮ್ಮ ಹೆಸರಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಅನ್ನೋದು ನಿಜವಾದರೆ ಭಕ್ತರ ಹುಂಡಿಗೆ ಕೈ ಹಾಕುತ್ತಿರಲಿಲ್ಲ. ಜಾತ್ಯತೀತರೇ ಆಗಿದ್ದರೆ ಮಸೀದಿ, ಚರ್ಚ್ ಎಲ್ಲದರಲ್ಲೂ 10% ಎಂದು ಹೇಳುತ್ತಿದ್ದರು. ಮಸೀದಿ-ಚರ್ಚ್ ಬಿಟ್ಟು ಕೇವಲ ಮಂದಿರದ ಹಣಕ್ಕೆ ಮಾತ್ರ ಕೈ ಹಾಕಿದ್ದಾರೆ. ಇವರು ಕಮ್ಯುನಲ್‌ ಮತ್ತು ಕ್ರಿಮಿನಲ್‌ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿಗರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಚೆನ್ನಾಗಿ ಗೊತ್ತಿದೆ. ಸೋಲೋದಕ್ಕೆ ಏಕೆ ಚುನಾವಣೆಗೆ ನಿಲ್ಲುತ್ತಾರೆ? ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸೋದಕ್ಕೆ ಯೋಚನೆ ಮಾಡುತ್ತಿದ್ದರು. ಈಗ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌!

    ಇದೇ ವೇಳೆ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ. ಬರದಿಂದ ಜನ ಕಂಗಾಲಾಗಿದ್ದಾರೆ. ಕುಡಿಯೋಕೆ ನೀರಿಲ್ಲ‌. ಹಾಗಾಗಿ ಅವನು ಸಿಎಂ, ಇವನು ಸಿಎಂ ಅನ್ನೋದ ಬಿಟ್ಟು ಜನರಿಗೆ ಕುಡಿಯೋಕೆ ನೀರು ಕೊಡಿಸುವ ಕೆಲಸ ಮಾಡಲಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ. ಮೊದಲು ಅದನ್ನ ತಡೆಯಿರಿ. ದನ-ಕರುಗಳಿಗೆ ಕುಡಿಯೋಕೆ ನೀರಿಲ್ಲ, ಮೇವಿಲ್ಲ ಅದನ್ನ ನಿರ್ವಹಿಸುವ ಕೆಲಸ ಮಾಡಿಲಿ.‌ ರಾಜ್ಯದ ಜನ ಕಷ್ಟದಲ್ಲಿರುವಾಗ ನಾನ್ ಸಿಎಂ, ನೀನ್‌ ಸಿಎಂ ಅಂತ ಕಿತ್ತಾಡೋಕೆ ಆಗುತ್ತಾ? ಎಂದು ಕಿಡಿ ಕಾರಿದ್ದಾರೆ.

  • ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅಂತಾರೆ – ರಾಗಾ ವಿರುದ್ಧ ಮೋದಿ ಕೆಂಡಾಮಂಡಲ

    ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅಂತಾರೆ – ರಾಗಾ ವಿರುದ್ಧ ಮೋದಿ ಕೆಂಡಾಮಂಡಲ

    ಗಾಂಧಿನಗರ: ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅನ್ನುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

    ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾರಣಾಸಿಯಲ್ಲಿ ಮದ್ಯ ಸೇವಿಸಿ ರಸ್ತೆಯಲ್ಲೇ ಜನರು ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂಬ ರಾಹುಲ್‌ ಗಾಂಧಿ (Rahul Gandhi) ಹೇಳಿಕೆ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ನ ʻಶಾಹಿ ಪರಿವಾರದ ಯುವರಾಜʼ ವಾರಣಾಸಿಯ (Varanasi) ಜನರನ್ನು ಅವರ ಸ್ವಂತ ನೆಲದಲ್ಲಿ ಅವಮಾನಿಸಿದ್ದಾರೆ. ತಲೆ ಕೆಟ್ಟವರು ಮಾತ್ರ ನನ್ನ ಜನರನ್ನು ಕುಡುಕರು ಅನ್ನುತ್ತಾರೆ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.

    ಮೋದಿಯನ್ನು ನಿಂಧಿಸುತ್ತಾ ಎರಡು ದಶಕ ಕಳೆದಿದ್ದಾರೆ. ಅದು ಫಲಿಸಲಿಲ್ಲ ಅಂತಾ ಈಗ ತಮ್ಮ ಹತಾಶೆಯುನ್ನು ಉತ್ತರ ಪ್ರದೇಶದ ಜನರ ಮೇಲೆ‌ ತೋರಿಸುತ್ತಿದ್ದಾರೆ. ಇದು ಅವರ ವಾಸ್ತವ. ಕುಟುಂಬ ಆರಾಧಕರು ಯುವಕರ ಪ್ರತಿಭೆಗೆ ಹೀಗೆ ಹೆದರುತ್ತಾರೆ. ಅದೇನೆ ಇರಲಿ ಉತ್ತರ ಪ್ರದೇಶದ ಯುವ ಜನತೆಗೆ I.N.D.I.A ಒಕ್ಕೂಟ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ

    ಅಲ್ಲದೇ I.N.D.I.A ಒಕ್ಕೂಟದಲ್ಲಿ ಅಶಾಂತಿಗೆ ಮತ್ತೊಂದು ಕಾರಣವೂ ಇದೆ. ಕಾಶಿ ಮತ್ತು ಅಯೋಧ್ಯೆಗೆ ಹೊಸ ರೂಪ ಬಂದಿರುವುದೇ ಅವರ ಅಶಾಂತಿಗೆ ಕಾರಣ. ಪರಿವಾರವಾದ ಹಾಗೂ ತುಷ್ಟೀಕರಣ ರಾಜಕೀಯದಿಂದಾಗಿ ಉತ್ತರ ಪ್ರದೇಶವು ಹಲವು ದಶಕಗಳಿಂದ ಹಿಂದುಳಿದಿತ್ತು. ಆದರೀಗ ಬದಲಾಗಿದೆ ಎಂದರು.

    ಇದೇ ವೇಳೆ 2024ರ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಈ ಬಾರಿ ಇಡೀ ದೇಶ ಮೋದಿಯವರತ್ತ ಒಲವು ತೋರುತ್ತಿದೆ. ಉತ್ತರ ಪ್ರದೇಶದ ಎಲ್ಲಾ ಸ್ಥಾನಗಳು ಎನ್‌ಡಿಎ ಪಾಲಾಗುತ್ತವೆ. ಇಂಡಿಯಾ ಒಕ್ಕೂಟಕ್ಕೆ ಅದೇ ಚಿಂತೆಯಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತ – IT ವಿರುದ್ಧ ಗಂಭೀರ ಆರೋಪ

  • ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್‌

    ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್‌

    – ರಾಮರಾಜ್ಯದ ಪರಿಕಲ್ಪನೆ ಕಾಂಗ್ರೆಸ್‌ನದ್ದು ಎಂದ ಸಚಿವೆ
    – ಪ್ರಹ್ಲಾದ್‌ ಜೋಶಿ ಸೋಲಿಸಲು ಸೂಕ್ತ ಅಭ್ಯರ್ಥಿ ನಿಲ್ಲಿಸುತ್ತೇವೆ

    ಹುಬ್ಬಳ್ಳಿ: ಬಿಜೆಪಿಯವರು ಅಗತ್ಯವಿದ್ದಾಗ ಮಾತ್ರ ಜಾತ್ಯತೀತತೆ ಬಗ್ಗೆ ಮಾತನಾಡ್ತಾರೆ. ʻಕೈಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸಿʼ ಅನ್ನೋದು ಎರಡೂ ಒಂದೇ ಅಂತ ಹೇಳುವ ಮೂಲಕ ವಸತಿ ಶಾಲೆಗಳ (Residential Schools) ದ್ವಾರದಲ್ಲಿದ್ದ ಬರಹ ಬದಲಾವಣೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಸಮರ್ಥಿಸಿಕೊಂಡರು.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಞಾನ ದೇಗುಲಕ್ಕೆ ಜ್ಞಾನ ತೆಗೆದುಕೊಳ್ಳಲು ಬನ್ನಿ. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಧೈರ್ಯದಿಂದ ಜೀವನ ಸಾಗಿಸಿ, ಇದರ ಬಗ್ಗೆ ನಾನು ಜಾಸ್ತಿ ಹೇಳಿದ್ರೆ ಪರ ವಿರುದ್ಧದ ಹೇಳಿಕೆಗಳು ಹೆಚ್ಚಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ

    ಏನಿದು ವಿವಾದ?
    ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Residential School) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೀಡಾದ ಘಟನೆ ನಡೆದಿದೆ. ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಆಡಳಿತ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಚರ್ಚಗೆ ಗ್ರಾಸವಾಗಿದೆ. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ

    ರಾಮರಾಜ್ಯದ ಪರಿಕಲ್ಪನೆ ಕಾಂಗ್ರೆಸ್‌ನದ್ದು:
    ಇನ್ನೂ ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮಮಂದಿರ ಕಟ್ಟಿಲ್ಲ ಎಂಬ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸೂಕ್ತ ಉತ್ತರ ಸಿಗಬೇಕಂದ್ರೆ ನೀವು ಸಂತೋಷ್ ಲಾಡ್ ಅವರನ್ನೇ ಕೇಳಿ. ನಾವು ರಾಮ ರಾಜ್ಯದ ಪರಿಕಲ್ಪನೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಮನುಷ್ಯ ನಿಧನವಾದ ನಂತರ ರಾಮ ನಾಮ ಜಪಿಸುತ್ತೇವೆ. ಆ ಸದ್ಗತಿ ಸಿಗಲಿ ಅನ್ನೋದೇ ರಾಮರಾಜ್ಯ ಪರಿಕಲ್ಪನೆ. ರಾಮ ರಾಜ್ಯದಲ್ಲಿ ಎಲ್ಲರೂ ಸಂತೋಷವಾಗಿರಬೇಕು. ಈ ಪರಿಕಲ್ಪನೆ ತಂದವರೇ ಕಾಂಗ್ರೆಸ್‌ನವರು ಎಂದು ಬೀಗಿದರು.

    ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸುವ ಕುರಿತು ಮಾತನಾಡಿ, ಶೀಘ್ರವೇ ಅಭ್ಯರ್ಥಿಯ ಹೆಸರು ಅಂತಿಮವಾಗಲಿದೆ. ನಮ್ಮ ಎದುರಾಳಿ ಪ್ರಹ್ಲಾದ್ ಜೋಶಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಜೋಶಿ ಹಿಂದೆ 4 ಬಾರಿ ಆಯ್ಕೆಯಾದವರು ಮತ್ತು ಕೇಂದ್ರದಲ್ಲಿ ಸಚಿವರಾದವರು. ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ ಎಂದರು.

    ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ ಶಕ್ತಿ ಪ್ರದರ್ಶನ ವಿಚಾರ ಕುರಿತು ಮಾತನಾಡಿ, ರಜತ್ ನನ್ನ ಅಳಿಯ ಅನ್ನೋ ಕಾರಣಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಎಲ್ಲರ ಅಭಿಪ್ರಾಯ ಪಡೆದ ನಂತರವೇ ಅಭ್ಯರ್ಥಿಯನ್ನ ಅಂತಿಮಗೊಳಿಸಲಾಗುತ್ತೆ. ಇಡೀ ರಾಜ್ಯದಲ್ಲಿ ಯುವಕರಿಗೆ ಮತ್ತು ಹಿರಿಯರಿಗೆ ಇಬ್ಬರಿಗೂ ಅವಕಾಶ ಕೊಡಲಾಗುತ್ತೆ.

    ಮುಂದಿನ ಲೋಕಸಭಾ ಚುನಾವಣೆಗೆ ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಕೊಟ್ಟಿದ್ದಾನೆ. ಟಿಕೆಟ್ ಕೊಡಲೇಬೇಕು ಅಂತ ನಾನು ಎಲ್ಲಿಯೂ ಒತ್ತಾಯಿಸಿಲ್ಲ ಹೈಕಮಾಂಡ್ ಮತ್ತು ಜಿಲ್ಲೆಯ ಮುಖಂಡರ ತೀರ್ಮಾನಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ಟಿಪ್ಪುಸುಲ್ತಾನ್ ಕಟೌಟ್ ತೆರವಿಗೆ ನೋಟಿಸ್- DYFI ಮುಖಂಡರು ಆಕ್ರೋಶ

  • ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    – ರಾಯ್ ಬರೇಲಿ ಜನತೆ ನೆನೆದು ಗಾಂಧಿ ಭಾವುಕ ಪತ್ರ
    – ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ

    ನವದೆಹಲಿ: ಅನಾರೋಗ್ಯ ಕಾರಣದಿಂದ ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಘೋಷಿಸಿದ್ದಾರೆ. ರಾಜಸ್ಥಾನದಿಂದ ಬುಧವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿದ್ದಾರೆ. ಈ ಬೆಳವಣಿಗೆಯ ಒಂದು ದಿನದ ನಂತರ ಲೋಕಸಭೆಗೆ (Lok Sabha Elections) ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ್ದಾರೆ.

    ಈ ಕುರಿತು ಅಧಿಕೃತ ಪ್ರಕಟಣೆ ಹಂಚಿಕೊಂಡಿರುವ ಅವರು, ಹೆಚ್ಚುತ್ತಿರುವ ವಯಸ್ಸಿನ ಕಾರಣ ಹಾಗೂ ಅನಾರೋಗ್ಯದಿಂದಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ನಿರ್ಧಾರದ ನಂತರ, ನೇರವಾಗಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಗುವುದಿಲ್ಲ. ಆದ್ರೆ ಖಂಡಿತವಾಗಿಯೂ, ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

    ರಾಯ್‌ ಬರೇಲಿ ಕ್ಷೇತ್ರದ ಜನರೊಂದಿಗಿನ ಅವಿನಾಭಾವ ಸಂಬಂಧ ಬಹಳ ಹಳೆಯದ್ದು. ರಾಯ್ ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯಾ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಫಿರೋಜ್ ಗಾಂಧಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿದ್ದರು. ನಂತರ ಇಂದಿರಾ ಗಾಂಧಿ ಅವರನ್ನು ಗೆಲ್ಲಿಸಿದರು. ಅಲ್ಲಿಂದ, ಇಲ್ಲಿಯವೆರೆಗೆ ಇಲ್ಲಿನ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಬಲವಾಗಿದೆ ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.

    ಈ ಪ್ರಕಾಶಮಾನ ಹಾದಿಯಲ್ಲಿ ನಡೆಯಲು ನೀವು ನನಗೆ ಜಾಗ ಕೊಟ್ಟಿದ್ದೀರಿ. ನನ್ನ ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಂತರ, ನಿಮ್ಮ ಬಳಿಗೆ ಬಂದೆ, ಆಗ ನೀವು ಪ್ರೀತಿಯ ಅಪ್ಪುಗೆ ನೀಡಿದಿರಿ. ಕಳೆದೆರಡು ಚುನಾವಣೆಗಳಲ್ಲಿ ಕಷ್ಟದ ಸಂದರ್ಭದಲ್ಲೂ ಬಂಡೆಯಂತೆ ನಿಂತೆ. ಇದನ್ನು ಮರೆಯಲು ಸಾಧ್ಯವೇ ಇಲ್ಲ, ಇಂದು ನಾನು ಏನಾಗಿದ್ದರೂ ನಿಮ್ಮಿಂದಲೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ ಎಂದು ಭಾವುರಾಗಿ ಪತ್ರದಲ್ಲಿ ಬರೆದಿದ್ದಾರೆ.

    ಬುಧವಾರ ಜೈಪುರದಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ: ಸುಪ್ರೀಂ ಕೋರ್ಟ್‌

    ಇದೇ ವೇಳೆ ಇಂದಿರಾ ಗಾಂಧಿ ಅವರು 1999 ರಲ್ಲಿ ಅಮೇಥಿಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂಸತ್‌ ರಾಜಕೀಯ ಪ್ರವೇಶಿಸಿದ್ದರು. ಆ ನಂತರ ನಿರಂತರ ಕಾರ್ಯಚಟುವಟಿಕೆಗಳಿಂದ ವಿರೋಧ ಪಕ್ಷದ ನಾಯಕಿಯಾದರು. 2004ರ ಚುನಾವಣೆಯಲ್ಲಿ ರಾಯ್‌ ಬರೇಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಫಿರೋಜ್‌ ಗಾಂಧಿ ಅವರು 1952, 1957ರಲ್ಲಿ ರಾಯ್‌ ಬರೇಲಿಯಿಂದ ಎರಡು ಬಾರಿ ಜಯಗಳಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರ ಅವರ ಮೊಮ್ಮಗ ಅರುಣ್‌ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ, ನೆಹರು ನಾದಿನಿ ಶೀಲಾ ಕೌಲ್‌ 1989, 1991ರಲ್ಲಿ ಗೆದ್ದಿದ್ದರು ಎಂಬುದನ್ನು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.