Tag: Lok Sabha Elections

  • ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

    ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

    2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 19 ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಚುನಾವಣೆಗೆ ಆಗುವ ಖರ್ಚು ಸಾವಿರಾರು ಕೋಟಿ ರೂ.ಗಳ ಗಡಿ ದಾಟಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ ಸುಮಾರು 10.45 ಕೋಟಿ ರೂ. ಖರ್ಚಾಗಿತ್ತು. ಆದ್ರೆ 2004ರ ಚುನಾವಣೆಯಿಂದ ಸಾವಿರ ಕೋಟಿ ರೂ.ಗಳ ಗಡಿ ದಾಟಿದೆ. ಈ ಬಾರಿ ಚುನಾವಣೆಗೆ ಒಟ್ಟು 7,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

    ಇದು ಜಗತ್ತಿನ ಅತಿ ವೆಚ್ಚದಾಯಕ ಚುನಾವಣೆಗಳಲ್ಲಿ ಒಂದಾಗಿದ್ದು, ಆಯೋಗದ ವೆಚ್ಚದ ಜೊತೆಗೆ ಅಭ್ಯರ್ಥಿಗಳ ಲೆಕ್ಕಕ್ಕೆ ಸಿಗದ ಚುನಾವಣಾ ಖರ್ಚನ್ನು ಲೆಕ್ಕ ಹಾಕಿದರೆ ಹತ್ತಾರು ಸಾವಿರ ಕೋಟಿ ರೂ. ವೆಚ್ಚದ ಬಾಬ್ತು ಹಿಗ್ಗುತ್ತದೆ. ಆದ್ರೆ ಚುನಾವಣಾಧಿಕಾರಿಗಳು ಜನರಿಗೆ ಆಮಿಷ ಒಡ್ಡುವುದನ್ನು ತಡೆಯಲು ಅಲ್ಲಲ್ಲಿ ಅಭ್ಯರ್ಥಿಗಳು ಹಂಚುವ ಹಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಪಾರದರ್ಶಕ ಚುನಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ನಗದು, ಮಧ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

    ಚುನಾವಣಾ ಪ್ರಚಾರ ತಂತ್ರ ಹೇಗೆ?
    ಮತದಾರರನ್ನು ತಲುಪಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರದ ಮೊರೆ ಹೋಗುತ್ತಾರೆ. ತಾರಾ ಪ್ರಚಾಕರನ್ನು ಕರೆತಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಬಿರುಸಿನ ಪ್ರಚಾರಕ್ಕಾಗಿ ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯಲ್ಲೇ ವಿನಿಯೋಗ ಆಗಬೇಕು. 2022ರ ಜ.6ರಿಂದ ಜಾರಿಯಲ್ಲಿರುವಂತೆ ಲೋಕಸಭೆ ಕ್ಷೇತ್ರದ ಪ್ರತಿ ಅಭ್ಯರ್ಥಿಯು ಗರಿಷ್ಠ 95 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದು. ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ. ಉಮೇದುವಾರಿಕೆ ಸಲ್ಲಿಸುವ ಸಮಯದಿಂದಲೇ ಅಭ್ಯರ್ಥಿಯ ವೆಚ್ಚದ ಲೆಕ್ಕ ಶುರುವಾಗುತ್ತದೆ. ಅಂದಿನಿಂದ ನಿತ್ಯ ಅವರು ಬಳಸುವ ವಾಹನದ ಇಂಧನ ವೆಚ್ಚ ಸೇರಿದಂತೆ ಇತರೆ ವೆಚ್ಚಗಳು ಅವರ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಚುನಾವಣಾ ವೆಚ್ಚವನ್ನು ಯೋಜಿತ ರೀತಿಯಲ್ಲಿ ನಿಭಾಯಿಸಿ ಲೆಕ್ಕ ತಪ್ಪದಂತೆ ಪ್ರಚಾರ ನಡೆಸಬೇಕಿದೆ.

    ತಾರಾ ಪ್ರಚಾರಕರ ವೆಚ್ಚ ಹೇಗೆ ನಡೆಯುತ್ತೆ?
    ಚುನಾವಣೆ ವೇಳೆ ಸಮಾವೇಶ, ರೋಡ್‌ ಶೋ, ರ‍್ಯಾಲಿ ಈ ರೀತಿ ಬೇರೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದ್ದರಿಂದ ಬೃಹತ್ ಸಮಾವೇಶ ಮತ್ತು ರೋಡ್‌ ಶೋಗಳು ಚುನಾವಣಾ ವೆಚ್ಚ ರಾಜಕೀಯ ಪಕ್ಷಗಳ ಲೆಕ್ಕಕ್ಕೇ ಸೇರುತ್ತದೆ. ಅಲ್ಲದೇ ತಾರಾ ಪ್ರಚಾರಕರೂ ಪಾಲ್ಗೊಳ್ಳುವ ಸಭೆ, ಸಮಾವೇಶ, ರೋಡ್‌ ಶೋಗಳಲ್ಲಿ ಅಭ್ಯರ್ಥಿಯ ಫೋಟೋ, ವೀಡಿಯೋಗಳು ಇಲ್ಲದೇ ಇದ್ದರೇ, ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರನ್ನೇ ಹೇಳದಿದ್ದರೆ ಅದರ ಸಂಪೂರ್ಣ ಖರ್ಚು ಸಹ ಪಕ್ಷದ ಲೆಕ್ಕಕ್ಕೇ ಬರುತ್ತದೆ. ಒಂದು ವೇಳೆ ತಾರಾ ಪ್ರಚಾರಕರೊಂದಿಗೆ ಅಭ್ಯರ್ಥಿಯೂ ಪಾಲ್ಗೊಂಡರೆ, ಅಭ್ಯರ್ಥಿಯ ಫೋಟೋ ವೀಡಿಯೋಗಳನ್ನು ಬಳಕೆ ಮಾಡಿಕೊಂಡರೆ, ಆ ವೆಚ್ಚವು ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಹಂಚಿಕೆಯಾಗುತ್ತದೆ. ಅಭ್ಯರ್ಥಿ ಪಾಲ್ಗೊಳ್ಳದೇ ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಿ ಪ್ರಚಾರ ನಡೆಸಿದರೆ, ವೆಚ್ಚದ ಅರ್ಧಪಾಲು ಅಭ್ಯರ್ಥಿಯ ಲೆಕ್ಕಕ್ಕೆ ಬರುತ್ತದೆ.

    ಅಲ್ಲದೇ ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕ, ಮತದಾನದ ಅವಧಿ ಮುಗಿಯುವವರೆಗಿನ ಅಭ್ಯರ್ಥಿಗಳ ವೆಚ್ಚ, ವಿವರವನ್ನು ಮೂರು ಬಾರಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಯು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ್ದರೆ, ವೀಡಿಯೋ ದಾಖಲೆ ಆಧರಿಸಿ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ.

    ಪಕ್ಷ ಬೇರೆ-ಅಭ್ಯರ್ಥಿ ಲೆಕ್ಕ ಬೇರೆ:
    ಪ್ರಚಾರ ದೃಷ್ಟಿಯಿಂದ ನಡೆಸುವ ಸಭೆ, ಸಮಾರಂಭ, ಸಮಾವೇಶ, ರೋಡ್‌ ಶೋಗೆ ತಗಲುವ ವೆಚ್ಚವನ್ನು ಅನುಮತಿ ಪಡೆಯುವ ಪಕ್ಷ ಹಾಗೂ ಅಭ್ಯರ್ಥಿಗೆ ಹಂಚಿಕೆ ಮಾಡಲು ನಿರ್ದಿಷ್ಟ ವರ್ಗೀಕರಣವಿದೆ. ಕಣದಲ್ಲಿರುವ ಅಭ್ಯರ್ಥಿಗಳು ನಿತ್ಯ ವಾಹನಗಳಿಗೆ ಬಳಸುವ ಇಂಧನ, ಇತರೇ ಖರ್ಚು ವೆಚ್ಚಗಳು ಅಭ್ಯರ್ಥಿಯ ಲೆಕ್ಕಕ್ಕೆ ಸೇರುತ್ತದೆ. ಜೊತೆಗೆ ರೋಡ್‌ ಶೋ, ರ‍್ಯಾಲಿ, ಸಮಾವೇಶಗಳಿಗೆ ಪಡೆಯುವ ಅನುಮತಿ ಆಧರಿಸಿ, ವೆಚ್ಚವನ್ನು ಲೆಕ್ಕ ಹಾಕಿ, ಪಕ್ಷ ಅಥವಾ ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಇರುವಂತೆ ಪಕ್ಷಕ್ಕೆ ಮಿತಿಯಿಲ್ಲ, ಅದ್ರೆ ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ಇವಿಎಂ ಬೆಲೆ ಏರಿಕೆಯ ಪರಿಣಾವೂ ಇದೆ:
    ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗಾಗಿ ಒಂದು ವರ್ಷದ ಮೊದಲೇ ಸಕಲ ಸಿದ್ಧತೆಗಳ ಪ್ರಕ್ರಿಯೆ ಆರಂಭಿಸುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹಿಡಿದು, ಚುನಾವಣೆ ಘೋಷಣೆ, ಮತದಾನಪೂರ್ಣಗೊಳ್ಳುವವರೆಗೆ ನಾನಾ ಹಂತಗಳಲ್ಲಿ ಆಯೋಗ ವೆಚ್ಚ ವಿನಿಯೋಗಿಸಬೇಕಾಗುತ್ತದೆ. ಇವಿಎಂ ಖರೀದಿಯೂ ಸಹ ಚುನಾವಣಾ ವೆಚ್ಚದ ಅಡಿಗೆ ಬರುತ್ತದೆ. ವರ್ಷದಿಂದ ವರ್ಷಕ್ಕೆ ಇವಿಎಂಗಳ ಬೆಲೆ ಏರಿಕೆಯಾಗುತ್ತಿರುವ ಕಾರಣ, ಚುನಾವಣಾ ವೆಚ್ಚದ ಬೆಲೆ ಏರಿಕೆ ಪರಿಣಾಮ ಬೀರುತ್ತಿದೆ ಎಂಬುದಾಗಿಯೂ ಮೂಲಗಳು ತಿಳಿಸಿವೆ.

    ಚುನಾವಣಾ ವೆಚ್ಚ ಯಾವ ವರ್ಷದಲ್ಲಿ ಎಷ್ಟಿತ್ತು? ಈ ವರ್ಷ ಎಷ್ಟು?
    ಪ್ರಸಕ್ತ ವರ್ಷ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಸಕ್ತ ವರ್ಷದ ಚುನಾವಣಾ ಪ್ರಕ್ರಿಯೆಗೆ 7000 ಕೋಟಿ ರೂ.ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಿದ್ದು, ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
    * 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ 10.45 ಕೋಟಿ ರೂ. ವೆಚ್ಚ ತಗುಲಿತ್ತು.
    * 2004ರಲ್ಲಿ ಚುನಾವಣಾ ವೆಚ್ಚ ಸಾವಿರ ಕೋಟಿ ಗಡಿ ದಾಟಿತ್ತು. ಆಗ 1,113 ಕೋಟಿ ರೂ. ಖರ್ಚಾಗಿತ್ತು.
    * 2009ರಲ್ಲಿ 1,483 ಕೋಟಿ ರೂ.ಗಳಷ್ಟು ಚುನಾವಣಾ ವೆಚ್ಚ ಖರ್ಚಾಗಿತ್ತು.
    * 2014ರ ಚುನಾವಣೆಯಲ್ಲಿ ಒಟ್ಟು 3,870 ಕೋಟಿ ರೂ. ವೆಚ್ಚವಾಗಿತ್ತು.
    * 2019ರ ಚುನಾವಣೆಯಲ್ಲಿ 4,000 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ 7,000 ಕೋಟಿ ರೂ. ವೆಚ್ಚ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

  • Lok Sabha Election 2024: 14 ಕ್ಷೇತ್ರ, 28 ಅಭ್ಯರ್ಥಿಗಳು – ಯಾರ ಆಸ್ತಿ ಎಷ್ಟಿದೆ? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    Lok Sabha Election 2024: 14 ಕ್ಷೇತ್ರ, 28 ಅಭ್ಯರ್ಥಿಗಳು – ಯಾರ ಆಸ್ತಿ ಎಷ್ಟಿದೆ? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    2024ರ ಲೋಕಸಭಾ ಚುನಾವಣೆಗೆ ದಿನಗಣನೆ ಬಾಕಿಯಿದೆ. ದೇಶಾದ್ಯಂತ 7 ಹಂತಗಳಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಏಪ್ರಿಲ್‌ 26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ಈ 14 ಕ್ಷೇತ್ರಗಳಲ್ಲಿ ಕಣದಲ್ಲಿರುವ 28 ಅಭ್ಯರ್ಥಿಗಳ ವೈಯಕ್ತಿಕ ಆಸ್ತಿ ವಿವರನ್ನು ಇಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಯಾರು ಹೆಚ್ಚು ಶ್ರೀಮಂತರು? ಯಾರ ಆಸ್ತಿ ಎಷ್ಟಿದೆ? ಯಾರು ಹೆಚ್ಚು ಚಿನ್ನದ ಒಡೆಯರಾಗಿದ್ದಾರೆ? ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ನೋಡಿ….

    1. ಡಿ.ಕೆ ಸುರೇಶ್‌

    2. ಡಾ.ಸಿ.ಎನ್‌ ಮಂಜುನಾಥ್‌

    3. ಶೋಭಾ ಕರಂದ್ಲಾಜೆ

    4. ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

    5. ವಿ. ಸೋಮಣ್ಣ

    6. ತೇಜಸ್ವಿ ಸೂರ್ಯ

    7. ಸುನೀಲ್‌ ಬೋಸ್‌

    8. ಸ್ಟಾರ್‌ ಚಂದ್ರು @ ವೆಂಕಟರಮಣೇಗೌಡ

    9. ಸೌಮ್ಯ ರೆಡ್ಡಿ

    10. ಶ್ರೇಯಸ್‌ ಪಟೇಲ್‌

    11. ರಕ್ಷಾ ರಾಮಯ್ಯ

    12. ಪ್ರಜ್ವಲ್‌ ರೇವಣ್ಣ

    13. ಪಿ.ಸಿ ಮೋಹನ್‌

    14. ಆರ್‌. ಪದ್ಮರಾಜ್‌

    15. ಎಂ.ವಿ ರಾಜೀವ್‌ಗೌಡ

    16. ಮುದ್ದಹನುಮೇಗೌಡ

    17. ಮನ್ಸೂರ್‌ ಅಲಿ ಖಾನ್‌

    18. ಮಲ್ಲೇಶ್‌ ಬಾಬು

    19. ಎಂ. ಲಕ್ಷ್ಮಣ್‌

    20. ಕೆ.ವಿ ಗೌತಮ್‌

    21. ಕೋಟ ಶ್ರೀನಿವಾಸ ಪೂಜಾರಿ

    22. ಡಾ.ಕೆ ಸುಧಾಕರ್‌

    23. ಜಯಪ್ರಕಾಶ್‌ ಹೆಗಡೆ

    24. ಹೆಚ್‌.ಡಿ ಕುಮಾರಸ್ವಾಮಿ

    25. ಗೋವಿಂದ ಕಾರಜೋಳ

    26. ಬ್ರಿಜೇಶ್‌ ಚೌಟ

    27. ಬಿ.ಎನ್‌ ಚಂದ್ರಪ್ಪ

    28. ಬಾಲರಾಜು

  • `ಲೋಕ’ ಅಖಾಡದಲ್ಲಿ ಮತ್ತೆ ಮೋದಿ-ಗೌಡರ ಜೋಡಿ ಕಮಾಲ್ – ಏ.20ಕ್ಕೆ ದೇವನಹಳ್ಳಿಯಲ್ಲಿ ಬೃಹತ್‌ ಮೈತ್ರಿ ಸಮಾವೇಶ

    `ಲೋಕ’ ಅಖಾಡದಲ್ಲಿ ಮತ್ತೆ ಮೋದಿ-ಗೌಡರ ಜೋಡಿ ಕಮಾಲ್ – ಏ.20ಕ್ಕೆ ದೇವನಹಳ್ಳಿಯಲ್ಲಿ ಬೃಹತ್‌ ಮೈತ್ರಿ ಸಮಾವೇಶ

    ಚಿಕ್ಕಬಳ್ಳಾಪುರ: ಈ ಬಾರಿ `ಲೋಕ’ಸಮರದಲ್ಲಿ (Lok Sabha Elections) ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮೈತ್ರಿ ಪಕ್ಷವು ಜಂಟಿಯಾಗಿ ಕಸರತ್ತು ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪ್ರಧಾನಿ ಮೋದಿ-ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD DeveGowda) ದಂಡಯಾತ್ರೆ ಮುಂದುವರಿಯಲಿದೆ.

    ಮೈಸೂರಿನಲ್ಲಿ ಅದ್ಧೂರಿ ಸಮಾವೇಶದ ಬಳಿಕ ಚಿಕ್ಕಬಳ್ಳಾಪುರ (Chikkaballapur) ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೈತ್ರಿ ಪಕ್ಷ ಪ್ರಚಾರ ನಡೆಸಲು ಪ್ಲ್ಯಾನ್‌ ಮಾಡಿದೆ. ಇದೇ ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರದ ದೇವನಹಳ್ಳಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲೂ ಪ್ರಧಾನಿ ಮೋದಿ-ಹೆಚ್‌ಡಿಡಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪ್ರಧಾನಿ ಮೋದಿ ಅಭಿವೃದ್ಧಿ ಮಂತ್ರ, ದೊಡ್ಡಗೌಡರ ಒಕ್ಕಲಿಗ ದಾಳವೇ ದೋಸ್ತಿಗೆ ಬಿಗ್ ಬೂಸ್ಟ್ ನೀಡಲಿದ್ದು, ರಾಜ್ಯದಲ್ಲಿ ಹೆಚ್ಚುಸ್ಥಾನಗಳಲ್ಲಿ ಜಯಭೇರಿ ಬಾರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಹಿಂದುತ್ವದ ಭದ್ರಕೋಟೆಯಲ್ಲಿ‌ ಮೋದಿ‌‌ ಕಮಾಲ್- ಫೋಟೋಗಳಲ್ಲಿ ನೋಡಿ

    ಸದ್ಯ ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿಯವರ (PM Modi) ಅದ್ಧೂರಿ ಪ್ರವೇಶವಾಗಿದೆ. ಒಂದೇ ದಿನ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಅಬ್ಬರಿದ್ದಾರೆ. ಇದರೊಂದಿಗೆ ಮೋದಿ ಇದ್ದ ವೇದಿಕೆಯಲ್ಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಾಣಿಸಿಕೊಂಡಿದ್ದು, ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

    ಸರ್ಕಾರದ ವಿರುದ್ಧ ಕಿಡಿ, ಮೋದಿ ಗುಣಗಾನ:
    ಮೋದಿ ಇದ್ದ ವೇದಿಕೆಯಲ್ಲಿ ದೇವೇಗೌಡರು ಕೂಡ ಆರ್ಭಟಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಫೋನ್ ಟ್ಯಾಪಿಂಗ್, ಒಕ್ಕಲಿಗರ ಮಠ ಒಡೆದ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ರೋಷಾವೇಶದಿಂದ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ದೋಸ್ತಿ ಪಕ್ಷಗಳ ಸಮಾವೇಶದಲ್ಲಿ ಪ್ರಧಾನಿ ಮೋದಿಯನ್ನು ಕೊಂಡಾಡಿದ ಮಾಜಿ ಪ್ರಧಾನಿ ದೇವೇಗೌಡರು, ದೇಶಕ್ಕೆ ಕೀರ್ತಿ ತಂದು ಕೊಟ್ಟ ನಾಯಕ ಮೋದಿ. ಬುದ್ದಿಯಿದ್ದೇ ಮೋದಿ ಜೊತೆ ಹೋಗಲು ಕುಮಾರಸ್ವಾಮಿಗೆ ಹೇಳಿದ್ದೇನೆ. 64 ವರ್ಷದ ರಾಜಕೀಯ ಜೀವನದಲ್ಲಿ ಇಂಥ ರಾಜ್ಯ ಸರ್ಕಾರವನ್ನು ನೋಡಿಲ್ಲ. ಎಲ್ಲಾ ಕಡೆ ಬಾಚೋದೇ ಬಾಚೋದು. ರಾಜ್ಯ ಆಳ್ತಿರೋ ಮಹಾನುಭಾವರು, ಪುಣ್ಯಾತ್ಮರಿಗೆ ನಮೋ ನಮಃ. ಮೋದಿ ಬಗ್ಗೆ ಕೇವಲವಾಗಿ ಮಾತಾಡ್ತಾರೆ. ಯಡಿಯೂರಪ್ಪ ಎಲ್ಲಿಗೇ ಪ್ರಚಾರಕ್ಕೆ ಕರೆದೂ ನಾನು ಬರ್ತೇನೆ. ರಾಜ್ಯದಲ್ಲಿ ಕನಿಷ್ಠ 24 ಸೀಟ್ ಗೆಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವ್ರೇ ನೀವು ಕರೆದಲ್ಲಿ ಬಂದು ಪ್ರಚಾರ ಮಾಡ್ತೀನಿ: ಹೆಚ್‍ಡಿಡಿ

  • ಕಾಂಗ್ರೆಸ್‌ಗೆ ಕೊಡುವ ಒಂದೊಂದು ಮತ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ: ಬಿಎಸ್‌ವೈ ಕಿಡಿ

    ಕಾಂಗ್ರೆಸ್‌ಗೆ ಕೊಡುವ ಒಂದೊಂದು ಮತ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ: ಬಿಎಸ್‌ವೈ ಕಿಡಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಕಾಂಗ್ರೆಸ್ ಪಕ್ಷಕ್ಕೆ ಕೊಡುವ ಒಂದೊಂದು ಮತವೂ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ ಆಗುತ್ತೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಕಿಡಿ ಕಾರಿದ್ದಾರೆ.

    ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ (BJP Office) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಡೆಯುತ್ತಿದೆ ಅನ್ನೋದನ್ನ ಕಾಂಗ್ರೆಸ್ ನಾಯಕರು ಮರೆತುಹೋಗಿದ್ದಾರೆ ಅನ್ನಿಸ್ತಿದೆ. ರಾಹುಲ್ (Rahul Gandhi) ನಾಯಕತ್ವ ವಿಫಲವಾಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ವಿಶ್ವಾಸ ಇಲ್ಲ, ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಆದ್ರೆ ನಾವು ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಹೇಳಲಿ? ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಎಕ್ಸ್ ಖಾತೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿ ಆಗ್ತಿದೆ ಅಷ್ಟೇ. ಒಂದೇ ಒಂದು ಉದ್ಯೋಗ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ.

    ಮೋದಿ ಅವರಿಗೆ 2 ಕೋಟಿ ಉದ್ಯೋಗ ಎಲ್ಲಿ ಎಂದು ಕೇಳ್ತಿದ್ದಾರೆ? ದೇಶದಲ್ಲಿ 7 ಕೋಟಿ ಹೊಸ ಉದ್ಯೋಗ ಭವಿಷ್ಯ ನಿಧಿ ಅಡಿ ಸೃಷ್ಟಿ ಆಗಿದೆ. ಹೆಚ್‌ಎಎಲ್ ಮುಚ್ಚಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದ್ರೆ ಅಲ್ಲಿ 84,000 ಕೋಟಿ ಕೆಲಸ ಆಗಿದೆ. ಈಗ 54,000 ಕೋಟಿ ರೂ. ವೆಚ್ಚದ ಕೆಲಸ ಅಲ್ಲಿ ನಡೆಯುತ್ತಿದೆ. ಈಗ ರಾಹುಲ್ ಗಾಂಧಿ ಕ್ಷಮೆ ಕೇಳ್ತಾರಾ? ಅಥವಾ ಡಿಕೆಶಿ ಅವರಿಂದ ಕ್ಷಮೆ ಕೇಳಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

    ಕಾಂಗ್ರೆಸ್ ದಿವಾಳಿ ಸರ್ಕಾರ:
    ಕಾಂಗ್ರೆಸ್ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಡಬೇಕಿರುವ ಹಣ ರೈತರಿಗೆ ಕೊಟ್ಟಿಲ್ಲ. ಇದು ದಿವಾಳಿಯಾಗಿರುವ ಸರ್ಕಾರ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊಡುವ ಮತ ಆರ್ಥಿಕ ದಿವಾಳಿತನಕ್ಕೆ ಕೊಡುವ ಮತ, ಕಾಂಗ್ರೆಸ್ ಗೆ ಕೊಡುವ ಮತ ಭ್ರಷ್ಟಾಚಾರಕ್ಕೆ ಕೊಡುವ ಮತ, ಕಾಂಗ್ರೆಸ್‌ಗೆ ಕೊಡುವ ಮತ ದೇಶದ ಅಭದ್ರತೆಗೆ ನೀಡುವ ಮತ ಆಗುತ್ತೆ ಅಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಬಿಎಸ್‌ವೈ, ಒಕ್ಕಲಿಗ ಸಿಎಂ ತೆಗೆದವರು ಯಾರೆಂದು ಸ್ವಾಮೀಜಿ ಅವರ ಹತ್ರ ಹೋಗಿ ಅವರೇ ಕೇಳಲಿ, ಅವರೇ ಹೇಳಲಿ. ಡಿ.ಕೆ.ಶಿವಕುಮಾರ್ ಇಂತದ್ದನ್ನ ಬಿಟ್ಟು ಬೇರೆನೂ ಹೇಳಲು ಸಾಧ್ಯ? ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿದ್ದಾರೆ, ನಮ್ಮ ಜೊತೆ ಇದ್ದಾರೆ ಎಂದು ತಿಳಿಸಿದ್ದಾರೆ.

    28 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ:
    ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆದ್ದು, ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಸಂಸದರನ್ನ ದೆಹಲಿಗೆ ಕರೆದುಕೊಂಡು ಹೋಗ್ತೀನಿ ಎಂದು ಸವಾಲ್ ಹಾಕಿದ್ದಾರೆ.

  • ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ʻZ’ ಕೆಟಗರಿ ಭದ್ರತೆ

    ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ʻZ’ ಕೆಟಗರಿ ಭದ್ರತೆ

    ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (CEC Rajiv Kumar) ಅವರ ಭದ್ರತೆಯನ್ನು Z ಕೆಟಗರಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳ ತಿಳಿಸಿವೆ. ಗುಪ್ತಚರ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯ, ಮುಖ್ಯ ಚುನಾವಣಾ ಆಯುಕ್ತರಿಗೆ Z ಕೆಟಗರಿ ಭದ್ರತೆಯನ್ನು ಒದಗಿಸಿದೆ.

    ರಾಜೀವ್ ಕುಮಾರ್ ಅವರ ರಕ್ಷಣೆಗೆ, ಭದ್ರತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ಸಮಗ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಆರ್‌ಪಿಎಫ್‌ ಕಮಾಂಡೋಗಳು ಸೇರಿದಂತೆ ಒಟ್ಟು 33 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರ ನಿವಾಸದಲ್ಲಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‍ಗಳನ್ನು ಇದು ಒಳಗೊಂಡಿರುತ್ತದೆ. ಇದನ್ನೂ ಓದಿ: ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

    6 ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‍ಒಗಳು) ಇಡೀ ದಿನದ ರಕ್ಷಣೆಯನ್ನು ಒದಗಿಸುತ್ತಾರೆ. 12 ಸಶಸ್ತ್ರ ಬೆಂಗಾವಲು ಕಮಾಂಡೋಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಹೆಚ್ಚುವರಿಯಾಗಿ, ಪ್ರತಿ ಶಿಫ್ಟ್‌ಗೆ ಇಬ್ಬರು ವೀಕ್ಷಕರು ಮತ್ತು ಮೂವರು ತರಬೇತಿ ಪಡೆದ ಚಾಲಕರು ಎಲ್ಲಾ ಸಮಯದಲ್ಲೂ ರಾಜೀವ್ ಕುಮಾರ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಲಿದ್ದಾರೆ.

    ತೃಣಮೂಲ ಕಾಂಗ್ರೆಸ್‍ನಂತಹ (Trinamool Congress) ವಿರೋಧ ಪಕ್ಷಗಳು ಚುನಾವಣಾ ಆಯೋಗದ (Election Commission )ವಿರುದ್ಧ ಪ್ರತಿಭಟಿಸುತ್ತಿವೆ. ಅಲ್ಲದೇ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಹಿನ್ನಲೆಯಲ್ಲಿ ರಾಜೀವ್ ಕುಮಾರ್ ಅವರ ಭದ್ರತಾ ಸ್ಥಾನಮಾನವನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ ಪ್ರಕರಣ- ಪ್ರಮುಖ ಆರೋಪಿ ಎನ್‍ಕೌಂಟರ್‌ಗೆ ಬಲಿ

  • ಚುನಾವಣಾ ಹೊತ್ತಲ್ಲೇ ಶಾಕ್ – ತೆನೆ ಹಿಡಿದ ಕಾಂಗ್ರೆಸ್ ಮಾಜಿ ಶಾಸಕ ನಿಂಗಪ್ಪ!

    ಚುನಾವಣಾ ಹೊತ್ತಲ್ಲೇ ಶಾಕ್ – ತೆನೆ ಹಿಡಿದ ಕಾಂಗ್ರೆಸ್ ಮಾಜಿ ಶಾಸಕ ನಿಂಗಪ್ಪ!

    ಬೆಂಗಳೂರು: ಕಾಂಗ್ರೆಸ್ ಪಕ್ಷದ ತುಮಕೂರಿನ ಮಾಜಿ ಶಾಸಕ ನಿಂಗಪ್ಪ (H Ningappa) ಅವರಿಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪಕ್ಷದ ಬಾವುಟ ನೀಡಿ ನಿಂಗಪ್ಪ ಅವರಿಗೆ ಸ್ವಾಗತ ಕೋರಿದರು.

    ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಿಂಗಪ್ಪ ಅವರು ನಮ್ಮ ಹಿರಿಯ ನಾಯಕರು. ಈ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದರು. ಅವರ ನಿಷ್ಠೆಗೆ ನಮ್ಮಿಂದಲ್ಲೆ ಸ್ವಲ್ಪ ಸಮಸ್ಯೆ ಆಗಿತ್ತು. ಅವರು ಮರಳಿ ಮನೆಗೆ ವಾಪಸ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ

    ತುಮಕೂರಿನಲ್ಲಿ (Tumkur) ಪಕ್ಷ ಕಟ್ಟಿದವರು ನಿಂಗಪ್ಪ ಅವರು 2004ರಲ್ಲಿ ಶಾಸಕರಾಗಿ ಕುಣಿಗಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರು. ಆ ಭಾಗದ ರೈತರ ಬದುಕಿಗೆ ಹಸಿರಿನ ಬದುಕು ಕೊಟ್ಟವರು. 2008ರ ನಂತರ ನಮ್ಮಲ್ಲಿ ಸ್ವಲ್ಪ ಗೊಂದಲದಿಂದ ಅವರಿಗೆ ನೋವಾಗಿತ್ತು. ಅವರು ಬೇರೆ ಪಕ್ಷದಲ್ಲಿ ಇದ್ದರೂ ಮನಸು ಇಲ್ಲೇ ಇತ್ತು. 2018 ರಲ್ಲಿ ಚುನಾವಣೆ ವೇಳೆಯೂ ಅವರ ಮನೆಗೆ ಹೋಗಿದ್ದೆ. ಅವರು ಯಾವತ್ತಿಗೂ ಷರತ್ತುಗಳನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.

    ಮಾಜಿ ಶಾಸಕ ಗೌರಿಶಂಕರ್ 2018 ರಲ್ಲಿ ಗೆಲ್ಲೋಕೆ ನಿಂಗಪ್ಪ ಸಹಾಯ ಮಾಡಿದ್ದು ಕಾರಣವಾಯ್ತು. ಚುನಾವಣೆ ಆದ ಮೇಲೆ ಗೌರಿಶಂಕರ್‌ಗೆ ನಿಂಗಪ್ಪ ಅವರನ್ನ ಚನ್ನಾಗಿ ನೋಡಿಕೊ, ವಿಶ್ವಾಸದಲ್ಲಿ ನೋಡಿಕೊ ಅಂತ ಹೇಳಿದ್ದೆ. ಆದರೆ ಮಾಡಿದ ಸಹಾಯವನ್ನೇ ನೆನಪು ಮಾಡಿಕೊಳ್ಳದ ಮನಸ್ಥಿತಿ ಗೌರಿಶಂಕರ್ ಅವರದ್ದು. 2023ರ ಚುನಾವಣೆಯಲ್ಲಿ ಗೌರಿಶಂಕರ್‌ಗೆ ಸರಿ ಮಾಡಿಕೋ ಅಂದೆ. ಆದರೆ ನಿಂಗಪ್ಪ ಬೇಡ ಅಂದ್ರು ಸೋತ್ರು ಅಂತಾ ಗೌರಿಶಂಕರ್ ವಿರುದ್ಧ ಕಿಡಿಕಾರಿದರು.

    ಎಂಎಲ್‌ಸಿ ಸ್ಥಾನಕ್ಕೆ ನಿಂಗಪ್ಪ ಅವರನ್ನ ನಿಲ್ಲಿಸಿ ಅಂತ ಹೇಳಿದ್ದೆ. ಅದೂ ಸಾಧ್ಯವಾಗಲಿ. ಆದಾಗ್ಯೂ ಯಾವುದೇ ಷರತ್ತು ವಿಧಿಸದೇ ನಿಂಗಪ್ಪ ಅವರು ಪ್ರೀತಿ ವಿಶ್ವಾಸ ಬೇಕು ಅಂತ ಕೇಳಿದ್ದಾರೆ. ನಮ್ಮ ಪಕ್ಷ ಅವರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತದೆ. ಶೀಘ್ರದಲ್ಲೇ ತುಮಕೂರಿನಲ್ಲಿ ಸಮಾವೇಶವನ್ನೂ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು – ಪಕ್ಷದ ಅಸಮಧಾನಿತರಿಗೆ ಅಮಿತ್ ಶಾ ವಾರ್ನಿಂಗ್

  • ಮತ್ತೆ ಮದುವೆಯಾಗಬೇಕಿದ್ದರೆ ಚುನಾವಣೆಗೆ ಮುಂಚೆಯೇ ಆಗಿಬಿಡಿ, ಇಲ್ಲಾಂದ್ರೆ ಜೈಲು ಗ್ಯಾರಂಟಿ; ಅಸ್ಸಾಂ ಸಿಎಂ ವಾರ್ನಿಂಗ್‌!

    ಮತ್ತೆ ಮದುವೆಯಾಗಬೇಕಿದ್ದರೆ ಚುನಾವಣೆಗೆ ಮುಂಚೆಯೇ ಆಗಿಬಿಡಿ, ಇಲ್ಲಾಂದ್ರೆ ಜೈಲು ಗ್ಯಾರಂಟಿ; ಅಸ್ಸಾಂ ಸಿಎಂ ವಾರ್ನಿಂಗ್‌!

    ಗುವಾಹಟಿ: ಲೋಕಸಭಾ ಚುನಾವಣಾ (Lok Sabha Elections) ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಸ್ಸಾಂ ಸಿಎಂ ಹಿಮಂತ ನಿಸ್ವಾ ಶರ್ಮಾ (Himanta Biswa Sarma) ಅವರು ಸಂಸದರೂ ಆಗಿರುವ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ಇಲ್ಲದಿದ್ದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಶನಿವಾರ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಆ ಕೆಲಸ ಮಾಡಬಲ್ಲೆ ಅದು ನನ್ನ ಶಕ್ತಿ ಅಷ್ಟೆ ಎಂಬ ಬದ್ರುದ್ದೀನ್ ಅಜ್ಮಲ್ (Badruddin Ajmal) ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಆಗ ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ. ಆಮೇಲೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ನಮಗೆ ಆಹ್ವಾನ ಕೊಟ್ಟರೆ ನಾವೂ ಹೋಗ್ತೀವಿ. ಏಕೆಂದರೆ ಈಗ ಅದು ಕಾನೂನು ಬಾಹಿರವಾಗಿಲ್ಲ. ನನಗೆ ತಿಳಿದಿರುವಂತೆ ಈಗಾಗಲೇ ಅವರಿಗೆ ಒಬ್ಬರು ಪತ್ನಿ ಇದ್ದಾರೆ. ಇನ್ನೂ ಎರಡು ಮೂರು ಮದುವೆ ಆಗುವುದಿದ್ದರೆ ಆಗಿಬಿಡಲಿ. ಚುನಾವಣೆಯ ನಂತರ ಬಹುಪತ್ನಿತ್ವ ನಿಲ್ಲಿಸುತ್ತೇವೆ. ಈಗಾಗಲೇ ಯುಸಿಸಿ ಜಾರಿಗೆ ತರಲು ಸಂಪೂರ್ಣ ಕರಡು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈಗಾಗಲೇ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗಿದೆ. ಈ ಕಾನೂನಿನ ಅನ್ವಯ ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧವಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ.

  • ಅಕ್ಕನ ಸಹಕಾರ ಕೋರಿದ್ದೇನೆ – ಸುಮಲತಾ ಭೇಟಿ ಬಳಿಕ ಹೆಚ್‌ಡಿಕೆ ರಿಯಾಕ್ಷನ್

    ಅಕ್ಕನ ಸಹಕಾರ ಕೋರಿದ್ದೇನೆ – ಸುಮಲತಾ ಭೇಟಿ ಬಳಿಕ ಹೆಚ್‌ಡಿಕೆ ರಿಯಾಕ್ಷನ್

    – ಡಿಕೆಶಿ ನನಗೆ ವೈರಿಯಲ್ಲ ಎಂದ ಮಾಜಿ ಸಿಎಂ

    ಬೆಂಗಳೂರು: ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance )ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಸಂಸದೆ ಸುಮಲತಾ (Sumalatha Ambareesh) ಅವರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಸುಮಲತಾರನ್ನ ಭೇಟಿಯಾಗಿ ಮೈತ್ರಿ ಬೆಂಬಲಿಸುವಂತೆ ಮಾತುಕತೆ ನಡೆಸಿದ್ದಾರೆ.

    ಸುಮಲತಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ (HD Kumaraswamy), ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ಆಗಿದೆ. ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    ಅಂಬರೀಷ್ ಮನೆ ನನಗೆ ಹೊಸದಲ್ಲ. ಸುಮಲತಾ ಅಕ್ಕ ಅವರ ಸಹಕಾರ ಕೋರಿದ್ದೇನೆ, ಮಂಡ್ಯದಲ್ಲಿ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ವಿಜಯೇಂದ್ರ ಅವರ ಜೊತೆ ಹಲವು ವಿಚಾರಗಳನ್ನ ಚರ್ಚಿಸಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚೆ ಮಾಡಿದ ಬಳಿಕ ನಿರ್ಧಾರ ಪ್ರಕಟಿಸುತ್ತೇನೆ. ಏಪ್ರಿಲ್ 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಡಿಕೆಶಿ ನನಗೆ ವೈರಿಯಲ್ಲ:
    ಇದೇ ವೇಳೆ ಡಿಕೆಶಿ ಕುರಿತು ಮಾತನಾಡಿದ ಹೆಚ್‌ಡಿಕೆ, ಡಿಕೆ ಶಿವಕುಮಾರ್ ನನಗೆ ವೈರಿಯಲ್ಲ, ಅವರು ನನ್ನ ದೊಡ್ಡ ಹಿತೈಷಿ. 5 ವರ್ಷ ಸರ್ಕಾರ ಸಂಪೂರ್ಣ ನಡೆಸಲಿ, 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ವಿ ಅಂತ ಪದೇ ಪದೇ ಹೇಳ್ತಿದ್ದಾರೆ. 5 ವರ್ಷ ನಾಮಕಾವಸ್ತೆಯಾಗಿ ಅಧಿಕಾರ ಕೊಟ್ಟಿದ್ದರು. ಒಂದು ದಿನವೂ ಅಧಿಕಾರ ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ. ಯಾರು ಶತೃ, ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.

  • ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    – ಬಿಜೆಪಿ ಗೆದ್ದು ಸಂವಿಧಾನ ಬದಲಾಯಿಸಿದ್ರೆ ದೇಶವೇ ಹೊತ್ತಿ ಉರಿಯುತ್ತದೆ ಎಂದ ಸಂಸದ

    ನವದೆಹಲಿ: ಮ್ಯಾಚ್‌ ಫಿಕ್ಸಿಂಗ್‌ (Match Fixing) ಇಲ್ಲದೇ ಬಿಜೆಪಿ ʻ400 ಪಾರ್‌ʼ ಘೋಷಣೆ ಸಾಧ್ಯವಿಲ್ಲ. 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ. ಮೋದಿ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆಗೆ ಕೆಲವು ಉದ್ಯಮಿಗಳೂ ಸೇರಿಕೊಂಡಿದ್ದಾರೆ ಎಂದು ಸಂಸದ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ED ಬಂಧನ ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ I.N.D.I.A. ಒಕ್ಕೂಟದ ʻಪ್ರಜಾಪ್ರಭುತ್ವ ಉಳಿಸಿʼ ಪ್ರತಿಭಟನಾ ರ‍್ಯಾಲಿಯನ್ನು ದ್ದೇಶಿಸಿ ಅವರು, ಬಿಜೆಪಿ ಗೆದ್ದು ಸಂವಿಧಾನವನ್ನ ಬದಲಾಯಿಸಿದ್ರೆ, ದೇಶವೇ ಹೊತ್ತಿ ಉರಿಯುತ್ತದೆ. ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ ಎಂದು ಆತಂಕಪಟ್ಟಿದ್ದಾರೆ.

    ಸಂವಿಧಾನ ಬದಲಾದ ದಿನವೇ ದೇಶ ಒಡೆಯುತ್ತದೆ:
    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿ ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ, ದೇಶದ ಸಂವಿಧಾನವನ್ನು ಬದಲಾಯಿಸುತ್ತದೆ. ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಬಡವರ ಹಣವನ್ನು ಕಸಿದುಕೊಳ್ಳುತ್ತಾರೆ, ಸಂವಿಧಾನ ಬದಲಾದ ದಿನವೇ ದೇಶ ಒಡೆದು ಹೋಗುತ್ತದೆ. ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಸುಮ್ಮನೆ ಹೇಳಿಲ್ಲ. ಜನರ ಪ್ರತಿಕ್ರಿಯೆಯನ್ನ ಪರೀಕ್ಷೆ ಮಾಡ್ತಿದ್ದಾರೆ. ಆದ್ದರಿಂದ ಇದು ಸಾಮಾನ್ಯ ಚುನಾವಣೆಯಲ್ಲ, ಭಾರತ ಮತ್ತು ಸಂವಿಧಾನ ಉಳಿಸುವ ಚುನಾವಣೆ, ಬಡವರ, ರೈತರ ಹಕ್ಕು ರಕ್ಷಿಸುವ ಚುನಾವಣೆ. ಇಂತಹ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ. ವಿಪಕ್ಷಗಳು ಚುನಾವಣೆ ಎದುರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ನ್ಯಾಯಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಮ್ಯಾಚ್‌ ಫಿಕ್ಸಿಂಗ್‌ ಆಗದಿದ್ದರೆ 180 ಸ್ಥಾನ ದಾಟಲ್ಲ:
    ಕ್ರಿಕೆಟ್‌ನಲ್ಲಿ ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿ, ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು (ಇಬ್ಬರು ಸಿಎಂ) ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷದ ನಾಯಕರ ಮೇಲೆ ಒತ್ತಡ ತರದಿದ್ದರೆ, ಮಾಧ್ಯಮಗಳನ್ನು ಖರೀದಿಸದಿದ್ದರೆ ಅವರು 180 ಸ್ಥಾನಗಳನ್ನೂ ದಾಟಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

    ದೇಶದಲ್ಲಿ ಕಾಂಗ್ರೆಸ್‌ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಆದ್ರೆ ಪಕ್ಷದ ಎಲ್ಲಾ ಖಾತೆಗಳನ್ನ ಸ್ಥಗಿತಗೊಳಿಸಲಾಗಿದೆ. ಇಬ್ಬರು ಸಿಎಂ ಗಳನ್ನ ಬಂಧಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ? ಎಂದು ಪ್ರಶ್ನಿಸಿದ್ದಾರೆ.

  • ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಬೆಂಗಳೂರು: ಮಂಡ್ಯದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ (BJP JDS Alliance) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಕೊನೆಗೂ ಮುನಿಸು ಮರೆತು ಸಂಸದೆ ಸುಮಲತಾ ಅವರನ್ನ ಭೇಟಿಯಾಗಿದ್ದು, ಊಹಾ-ಪೋಹಗಳಿಗೆ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಸುಮಲತಾರನ್ನ ಭೇಟಿಯಾಗಿದ್ದಾರೆ. ಇದೇ ವೇಳೆ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿರುವ ಸುಮಲತಾರ (Sumalatha Ambareesh) ನಿವಾಸಕ್ಕೆ ಭೇಟಿ ನೀಡುತ್ತಿದ್ದಂತೆ ಪುತ್ರ ಅಭಿಷೇಕ್ ಮತ್ತು ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕುಮಾರಸ್ವಾಮಿ ಅವರನ್ನ ಸ್ವಾಗತಿಸಿದರು. ಬಳಿಕ ಸುಮಲತಾ ಅವರು ಹೆಚ್‌ಡಿಕೆ ಅವರನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

    ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಬದಲಾದ ರಾಜಕೀಯದಲ್ಲಿ ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಸುಮಲತಾರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸುಮಲತಾ ನಿರ್ಧಾರ ಪ್ರಕಟಕ್ಕೂ ಮುನ್ನವೇ ಆಪ್ತನಿಂದ ಶಾಕ್ – ಹೆಚ್‍ಡಿಕೆ ಪರ ಪ್ರಚಾರಕ್ಕಿಳಿದ ಸಚ್ಚಿದಾನಂದ

    ಶನಿವಾರವಷ್ಟೇ ಸಂಸದೆ ಸುಮಲತಾ ಅಂಬರೀಷ್‌ ಬೆಂಗಳೂರಿನ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು. ಸಭೆಯಲ್ಲಿ ಬೆಂಬಲಿಗರು ಪಕ್ಷೇತರವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಸುಮಲತಾ ಅಂಬರೀಶ್ ನಾನು ನಿಮ್ಮ ಆಸೆಗೆ ವಿರುದ್ಧ ಹೋಗಲ್ಲ. ಯೋಚನೆ ಮಾಡಿ ಏ.3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸುಮಲತಾ ನಿವಾಸಕ್ಕೆ ತೆರಳಿ ತಮ್ಮ ಸ್ಪರ್ಧೆಗೆ ಬೆಂಬಲ ಕೋರಿದ್ದಾರೆ.