Tag: Lok Sabha Elections

  • 3 ವಲಯ, 3 ಪ್ರತ್ಯೇಕ ಸಭೆ – ಲೋಕಸಭಾ ಚುನಾವಣೆಗೆ ತಯಾರಾದ ಬಿಜೆಪಿ

    3 ವಲಯ, 3 ಪ್ರತ್ಯೇಕ ಸಭೆ – ಲೋಕಸಭಾ ಚುನಾವಣೆಗೆ ತಯಾರಾದ ಬಿಜೆಪಿ

    ನವದೆಹಲಿ: ವಿರೋಧ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಪ್ರಧಾನಿ ಮೋದಿ (PM Narendra Modi) ಅವರನ್ನು ಸೋಲಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಬಿಜೆಪಿ (BJP) ಸಂಘಟನಾ ಅನುಕೂಲಕ್ಕಾಗಿ ಮೂರು ವಲಯಗಳನ್ನಾಗಿ ವಿಂಗಡಿಸಿ ಸಭೆ ನಡೆಸಲು ಮುಂದಾಗಿದೆ.

    ಉತ್ತರ, ದಕ್ಷಿಣ ಮತ್ತು ಪೂರ್ವ ವಲಯಗಳನ್ನು ಗುರುತಿಸಲಾಗಿದ್ದು ಈ ಪ್ರದೇಶಗಳ ಪ್ರತ್ಯೇಕ ಸಭೆಗಳು ಜುಲೈ 6, 7 ಮತ್ತು 8 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ರಾಜಸ್ಥಾನ, ಗುಜರಾತ್, ದಮನ್ ದಿಯು-ದಾದ್ರಾ ಮತ್ತು ನಗರ ಹವೇಲಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಹರ್ಯಾಣವನ್ನು ಉತ್ತರ ವಲಯದಲ್ಲಿ ಇರಿಸಲಾಗಿದೆ. ಜುಲೈ 7 ರಂದು ದೆಹಲಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

    ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳು ಪೂರ್ವ ವಲಯದಲ್ಲಿದ್ದು ಇದರ ಸಭೆ ಜುಲೈ 6 ರಂದು ಗುವಾಹಟಿಯಲ್ಲಿ ನಡೆಯಲಿದೆ.  ಇದನ್ನೂ ಓದಿ: ಸೋಲಿನ ಅಶಾಂತಿಯಿಂದ ಬಿಜೆಪಿಯೊಳಗೆ ಶಾಂತಿ ಸಭೆ – ಶಿಸ್ತಿನ ಗೆರೆ ಎಳೆದ ಬಿಜೆಪಿ ನಾಯಕರು

    ಕೇರಳ, ತಮಿಳುನಾಡು, ಪುದುಚೇರಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದಕ್ಷಿಣ ವಲಯದಲ್ಲಿದ್ದು, ಈ ರಾಜ್ಯಗಳ ಸಭೆ ಜುಲೈ 8 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

     

    ಈ ಸಭೆಗಳಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಂಘಟನಾ ಕಾರ್ಯದರ್ಶಿ ಸೇರಿದಂತೆ ಆ ಭಾಗದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಈ ಸಭೆಗಳಲ್ಲಿ ಆಯಾ ರಾಜ್ಯಗಳ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು, ಶಾಸಕರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಸಹ ಭಾಗವಹಿಸಲಿದ್ದಾರೆ.

    ರಾಷ್ಟ್ರೀಯ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡಿ ವಿಭಿನ್ನ ಕಾರ್ಯತಂತ್ರ ನಡೆಸಲು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಸಭೆಗಳಲ್ಲಿ ಸಂಬಂಧಪಟ್ಟ ಮುಖಂಡರಿಗೆ ಬಿಜೆಪಿ ಹೊಸ ಜವಾಬ್ದಾರಿಗಳನ್ನೂ ನೀಡಲಿದೆ ಎಂದು ವರದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಬಿಜೆಪಿಯವರೇ ಕಾರಣ ಅಂತಾರೆ- ಈಶ್ವರಪ್ಪ ಲೇವಡಿ

    ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಬಿಜೆಪಿಯವರೇ ಕಾರಣ ಅಂತಾರೆ- ಈಶ್ವರಪ್ಪ ಲೇವಡಿ

    ಕೊಪ್ಪಳ: ಕಾಂಗ್ರೆಸ್‌ನವರು ಎಲ್ಲದಕ್ಕೂ ಬಿಜೆಪಿ (BJP) ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್‌ನವರ (Congress) ಮನೆಯಲ್ಲಿ ಮಗು ಹುಟ್ಟಿದ್ರೂ ಅದಕ್ಕೆ ಬಿಜೆಪಿಯವರೇ ಕಾರಣ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ.

    ಕೊಪ್ಪಳದಲ್ಲಿ (Koppal) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಕೆಟ್ಟ ಕನಸು ಎಂದು ಭಾವಿಸಿ, ಈ ರಾಜ್ಯದ ಜನ ಮೋದಿಯವರನ್ನ (Narendra Modi) ಮತ್ತೊಮ್ಮೆ ಪ್ರಧಾನಿ ಮಾಡೋಕೆ ರೆಡಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ನಾವು ಅಣಿಯಾಗುತ್ತಿದ್ದೆವೆ. 7 ತಂಡಗಳಾಗಿ ರಾಜ್ಯ ಪ್ರವಾಸ ಮಾಡ್ತಿದ್ದೀವಿ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ಸಾದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನ ಕೇಳಬೇಕಿತ್ತು – ಬರಾಕ್ ಒಬಾಮಾ

    ಮೋದಿ ಸೋಲಿಸೋಕೆ ಆಗಲ್ಲ:
    ಬಿಜೆಪಿ ಸೋಲಿಸಲು ವಿರೋಧಪಕ್ಷಗಳ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಮೊದಲೆನಲ್ಲಾ, ಅವರು ಏನೇ ಸಭೆ ಮಾಡಿದರೂ ಮೋದಿ ಸೋಲಿಸೋಕೆ ಆಗೋದಿಲ್ಲ. ಹಿಂದಿನ ತಪ್ಪು ನಾವೇ ಸರಿಪಡಿಸಬೇಕು. ಅದೊಂದು ಕೆಟ್ಟ ಕನಸು ಪದೇ-ಪದೇ ಯಾಕೆ ನೆನಪು ಮಾಡಿಕೊಳ್ಳಬೇಕು. ಯಾರೋ ಒಬ್ಬರು ಹೇಳಿಕೆ ಕೊಟ್ರು ಅಂತಾ ತಲೆಕೆಡಿಸಿಕೊಳ್ಳೋದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬಂದಿದ್ದ ಗ್ರಾಮ ಪಂಚಾಯ್ತಿ ಸದಸ್ಯೆಯರ ಕಿಡ್ನಾಪ್!

    ಕುಡಿಯುವ ನೀರಿಗೆ ಸಮಸ್ಯೆಯಾಗ್ತಿದೆ
    ಲೋಕಸಭೆಗೆ (Lok Sabha Elections) ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದನ್ನ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಸರಿಯಾಗಿ ಜಾರಿ ಮಾಡ್ತಿಲ್ಲ. ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರಿಗೆ ಸಮಸ್ಯೆಯಾಗ್ತಿದೆ. ಅದರ ಬಗ್ಗೆ ಈ ಸರ್ಕಾರ ಗಮನ ಹರಿಸ್ತಿಲ್ಲ. ಸರ್ವರ್ ಹ್ಯಾಕ್ ಮಾಡಿದ್ರು ಅಂತಾ ಮಂತ್ರಿ ಹೇಳ್ತಾರೆ, ಇದು ನೀತಿಗೆಟ್ಟ ರಾಜಕೀಯ. ಇವಾಗ ಅಕ್ಕಿ ಕೊಡಲಿಲ್ಲ ಅಂತಾ ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ. ಎಲ್ಲದಕ್ಕೂ ಬಿಜೆಪಿ ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರು ಅದಕ್ಕೆ ಕಾರಣ ಬಿಜೆಪಿಯವರು ಅಂತಾರೆ, ಇದು ತಾತ್ಕಾಲಿಕ ಎಂದು ಲೇವಡಿ ಮಾಡಿದ್ದಾರೆ.

  • ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ನವದೆಹಲಿ: ತೀವ್ರ ನಿರ್ಣಾಯಕ ಎನಿಸಿರುವ 2024 ರ ಲೋಕಸಭೆ ಚುನಾವಣೆ ಗೆಲ್ಲಲು ವಿರೋಧ ಪಕ್ಷಗಳು ತಯಾರಿ ಆರಂಭಿಸಿವೆ. ಇದರ ಭಾಗವಾಗಿ ಜೂನ್ 23 ರಂದು ಪಾಟ್ನಾದಲ್ಲಿ ಎಲ್ಲ ವಿಪಕ್ಷಗಳನ್ನು ಒಗ್ಗೂಡಿಸಿ ಸಮಾನ ಮನಸ್ಕ ವೇದಿಕೆ ಸೃಷ್ಟಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಪ್ರಯತ್ನಿಸುತ್ತಿದ್ದು, ಸದ್ಯ ಈ ಪ್ರಯತ್ನಕ್ಕೆ ಹಿನ್ನಡೆಯಾಗುವ ಲಕ್ಷಣಗಳು ಕಂಡು ಬಂದಿವೆ.

    ನಿತೀಶ್ ಕುಮಾರ್ ಕರೆದಿರುವ ಸಭೆಯಿಂದ ದೂರ ಉಳಿಯಲು ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (BRS), ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) ಮತ್ತು ಒಡಿಶಾದ ಬಿಜು ಜನತಾ ದಳ (BJD) ನಿರ್ಧರಿಸಿವೆ. ಸಭೆಯಲ್ಲಿ ಭಾಗಿಯಾದರೂ ಕಾಂಗ್ರೆಸ್ (Congress) ಜೊತೆಗೆ ಕೈ ಜೋಡಿಸುವುದಿಲ್ಲ ಎನ್ನುವ ಸಂದೇಶವನ್ನು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರವಾನಿಸಿದ್ದಾರೆ.

    ಆಪ್ ಸರ್ಕಾರ ಮಣಿಸಲು ಸುಪ್ರೀಂಕೋರ್ಟ್ ನಿರ್ಧಾರದ ವಿರುದ್ಧ ತಂದಿರುವ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ನೀಡದಂತೆ ವಿಪಕ್ಷಗಳನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಇದರ ಭಾಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೆ ಅವರು ಪ್ರಯತ್ನಿಸಿದ್ದು ಭೇಟಿಗೆ ಸಮಯ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕೇಜ್ರಿವಾಲ್ ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದು ಕಾಂಗ್ರೆಸ್ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿದ್ದಾರೆ.

    ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೈತ್ರಿಗೆ ಷರತ್ತು ವಿಧಿಸಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಎದುರಾಳಿಗಳಾದ ಎಡ ಪಕ್ಷಗಳಿಂದ ಕಾಂಗ್ರೆಸ್ ಮೈತ್ರಿ ಮುರಿದುಕೊಂಡರೆ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳವ ಬಗ್ಗೆ ಪರಿಶೀಲಿಸಬಹುದು ಎಂದು ಹೇಳಿದ್ದಾರೆ. ಜೂನ್ 23 ಪಾಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಸೀತರಾಮ್ ಯೆಚೂರಿ ಭಾಗಿಯಾಗಲಿದ್ದು ಅಂದಿನ ಮಾತುಕತೆ ಕುತೂಹಲ ಮೂಡಿಸಿದೆ.

    ರಾಜ್ಯದಲ್ಲಿನ ಅಸ್ತಿತ್ವ ಮತ್ತು ಹಿತಾಸಕ್ತಿಯ ಕಾರಣಕ್ಕೆ ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (BRS), ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) ಮತ್ತು ಒಡಿಶಾದ ಬಿಜು ಜನತಾ ದಳ (BJD) ನಿರ್ಧರಿಸಿವೆ. ಮುಂಬರುವ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ನಾವು ಸ್ಪರ್ಧಿಸಲಿದ್ದೇವೆ ಎಂದು ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇತ್ತೀಚೆಗೆ ಅವರ ಒಂದು ಭಾಷಣದಲ್ಲಿ ಕಾಂಗ್ರೆಸ್ ಅನ್ನು ಬಂಗಾಳ ಕೊಲ್ಲಿಯಲ್ಲಿ ಎಸೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್‌ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ

    ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜೊತೆಗಿನ ಮೈತ್ರಿಯನ್ನು ನವೀಕರಿಸುವ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡಾ ಮೈತ್ರಿಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಮೊದಲಿನಿಂದಲೂ ಎರಡು ರಾಷ್ಟ್ರೀಯ ಪಕ್ಷಗಳಿಂದ ಪಟ್ನಾಯಕ್ ಅಂತರ ಕಾಯ್ದುಕೊಂಡಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲಿ ಬಿಜೆಡಿಗೆ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾಗಿದೆ. ಇನ್ನು ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷವನ್ನು (BSP) ಪಾಟ್ನಾ ಸಭೆಗೆ ಆಹ್ವಾನಿಸಲಾಗಿಲ್ಲ.

    ಸುಮಾರು 125 ಲೋಕಸಭೆಯನ್ನು ಹೊಂದಿರುವ ಪಂಜಾಬ್, ದೆಹಲಿ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ‘ಒಂದು ಸ್ಥಾನ, ಒಬ್ಬ ವಿರೋಧ ಪಕ್ಷದ ಅಭ್ಯರ್ಥಿ’ ಸೂತ್ರದ ಮೇಲೆ ಒಪ್ಪಂದ ಮಾಡಿಕೊಳ್ಳಲು ನಿತೀಶ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತಿಪಕ್ಷಗಳ ಷರತ್ತುಗಳು ಕಾಂಗ್ರೆಸ್ ನಿರ್ಧಾರವನ್ನು ಅವಲಂಬಿಸಿದ್ದು ಸಭೆ ಯಶಸ್ವಿಯಾಗಬಲ್ಲದೇ ಕಾದು ನೋಡಬೇಕು. ಇದನ್ನೂ ಓದಿ: ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ

  • ಮುಂದಿನ ಚುನಾವಣೆಗೆ ಸ್ಪರ್ಧಿಸೋದು ಡೌಟ್? – ರಾಜಕಾರಣ ಬೇಕೋ ಬೇಡ್ವೋ ಎನಿಸಿದೆ ಎಂದ ಡಿಕೆ ಸುರೇಶ್

    ಮುಂದಿನ ಚುನಾವಣೆಗೆ ಸ್ಪರ್ಧಿಸೋದು ಡೌಟ್? – ರಾಜಕಾರಣ ಬೇಕೋ ಬೇಡ್ವೋ ಎನಿಸಿದೆ ಎಂದ ಡಿಕೆ ಸುರೇಶ್

    ತುಮಕೂರು: ನನಗೆ ರಾಜಕಾರಣ ಬೇಕೋ ಬೇಡ್ವೋ ಅನ್ನಿಸಿಬಿಟ್ಟಿದೆ ಎಂದು ಸಂಸದ ಡಿಕೆ ಸುರೇಶ್ (DK Suresh) ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ (Lok Sabha Elections) ನಾನು ಸ್ಪರ್ಧಿಸಬೇಕೋ ಬೇಡ್ವೋ ಎಂಬ ಗೊಂದಲ್ಲಿ ಇದ್ದೇನೆ ಎಂದು ಸುರೇಶ್ ಹೇಳಿದ್ದಾರೆ.

    ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ನಡೆದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವರು ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಂತ್ಕೋತೀನೋ ಇಲ್ಲವೋ ಇನ್ನೂ ತೀರ್ಮಾನ ಮಾಡಿಲ್ಲ. ನಾನು ಇನ್ನೂ ಗೊಂದಲದಲ್ಲಿ ಇದ್ದೀನಿ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರಜ್ಞಾ ಠಾಕೂರ್‌ನೊಂದಿಗೆ ಕೇರಳ ಸ್ಟೋರಿ ಸಿನಿಮಾ ವೀಕ್ಷಿದ ಯುವತಿ ನಾಪತ್ತೆ- ಮುಸ್ಲಿಂ ಯುವಕನೊಂದಿಗೆ ಪರಾರಿ?

    ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆದು ಮುಂದುವರಿಯುತ್ತೇನೆ ಎಂದಿದ್ದಾರೆ. ಇದೀಗ ಸಂಸದ ಡಿಕೆ ಸುರೇಶ್‌ರ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!

  • ವೇದಿಕೆಯಲ್ಲೇ ಎಂ.ಬಿ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತ MBP

    ವೇದಿಕೆಯಲ್ಲೇ ಎಂ.ಬಿ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತ MBP

    ಬೆಂಗಳೂರು: ವೇದಿಕೆಯಲ್ಲೇ ಸಚಿವ ಎಂ.ಬಿ ಪಾಟೀಲ್‌ಗೆ (MB Patil) ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಗದರಿದ ಪ್ರಸಂಗ ಇಂದು ನಡೆದಿದೆ.

    ನೂತನ ಕಟ್ಟಡ ಇಂದಿರಾ ಭವನದಲ್ಲಿ ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಡಿಕೆಶಿ ಭಾಷಣ ಮಾಡುವಾಗ ವೇದಿಕೆ ಮೇಲೆ ಕುಳಿತಿದ್ದ ಎಂ.ಬಿ ಪಾಟೀಲ್ ಅವರು ಸಿದ್ದರಾಮಯ್ಯ (Siddaramaiah) ಜೊತೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಡಿಕೆಶಿ `ಡೋಂಟ್ ಡಿಸ್ಟರ್ಬ್, ಡೋಂಟ್ ಡಿಸ್ಟರ್ಬ್’ ಎಂದು ಎಂ.ಬಿ ಪಾಟೀಲ್‌ಗೆ ಗದರಿದ್ದಾರೆ. ಅದಕ್ಕೆ ಎಂಬಿಪಿ ಸಮಜಾಯಿಷಿ ನೀಡಲು ಮುಂದಾದಾಗ ಇರಲಿ ಡೋಂಟ್ ಡಿಸ್ಟರ್ಬ್, ಇಲ್ಲಿ ಕೆಲವು ಹೊಸ ವಿಚಾರ ಹೇಳ್ತಿದ್ದೀನಿ ಎಂದು ಡಿಕೆಶಿ ಹೇಳಿದರು. ಇದರಿಂದ ಎಂಬಿಪಿ ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತರು.

    ಬಳಿಕ ಮಾತು ಮುಂದುವರಿಸಿದ ಡಿಕೆಶಿ, ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂಬಿಪಿ ಹೀಗಂದ್ರು ಅಂತಾ ಚಾಡಿ ಹೇಳಿ ತಂದು ಹಾಕಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ ಸಿದ್ದರಾಮಯ್ಯ ಮನೆ ನನ್ನ ಮನೆ ಸುತ್ತುತ್ತಾ ಇರಬೇಡಿ. ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ ಬೂತ್ ಸಿದ್ದಪಡಿಸಿ. ಸಂಸತ್‌ಗೂ ವಿಧಾನಸಭೆಗೂ ವ್ಯತ್ಯಾಸ ಇರುತ್ತೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

    ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ಬಗ್ಗೆ ನಾವು ಮಾತನಾಡೋಕ್ಕಾಗಲ್ಲ. ನಮ್ಮ ಇಬ್ಬರಿಗೂ ಏನು ಹೇಳಬೇಕೋ ಅದನ್ನ ಹೈಕಮಾಂಡ್ ನಾಯಕರು ಹೇಳಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು.

    ನಾನು ಬಂಗಾರಪ್ಪನ ಶಿಷ್ಯ, ಎಸ್.ಎಂ ಕೃಷ್ಣರ ಶಿಷ್ಯ ಅಲ್ಲ. ನಾನು ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು ಎಂದ ಡಿಕೆಶಿ ವೀರೇಂದ್ರ ಪಾಟೀಲ್‌ರನ್ನ ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಲಾಯಿತು ಅನ್ನೋದರ ಬಗ್ಗೆ ಸ್ಪಷ್ಟನೆ ನೀಡಿದರು. ಎಲ್ಲರೂ ವೀರೇಂದ್ರ ಪಾಟೀಲ್ ಅವರನ್ನ ಕೆಳಗಿಳಿಸಿದ್ರು ಅಂತಾರೆ. ಆದ್ರೆ ಆವತ್ತು ಅವರ ಆರೋಗ್ಯ ಸ್ಥಿತಿ ಹಾಗಿತ್ತು, ಆದ್ದರಿಂದ ತೀರ್ಮಾನ ಕೈಗೊಂಡರು. ಅಂದು ವಿರೇಂದ್ರ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದಾಗ, ಅವರೇ ಸಿಎಂ ಆಗಿದ್ದರು ಎಂದು ಹೇಳಿದರು.

  • ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸ್ವಾಭಿಮಾನದ ಹೆಸರಿನಲ್ಲಿ ನನಗೆ ಮತ ನೀಡಿ ಎಂದು ಸೆರಗೊಡ್ಡಿ ಜೆಡಿಎಸ್‌‌ನ್ನು (JDS) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಮಣಿಸಿದ್ದರು. ಇದೀಗ ಇದೇ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (Shivarame Gowda) ಮುಂದಾಗಿದ್ದಾರೆ. ಈ ಮೂಲಕ ಮಂಡ್ಯ (Mandya) ಜಿಲ್ಲೆಯಲ್ಲಿ ಮತ್ತೊಂದು ಸ್ವಾಭಿಮಾನದ ಕದನಕ್ಕೆ ರಂಗ ಸಿದ್ಧವಾಗುತ್ತಿದೆ.

    ಕಳೆದ ಲೋಕಸಭಾ ಚುನಾವಣೆಯ ವೇಳೆ ಇಡೀ ದೇಶದ ಕಣ್ಣು ಮಂಡ್ಯ ಜಿಲ್ಲೆಯ ಮೇಲೆ ಇತ್ತು. ಇದಕ್ಕೆ ಕಾರಣವಾಗಿದ್ದು ಜೆಡಿಎಸ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ ನಡುವಿನ ಫೈಟ್ ಆಗಿತ್ತು. ಈ ವೇಳೆ ಸ್ವಾಭಿಮಾನಿ ಕಹಳೆ ಊದಿದ್ದ ಸುಮಲತಾ ಅಂಬರೀಶ್ ಬಹಿರಂಗ ಸಭೆಯಲ್ಲಿ ಸ್ವಾಭಿಮಾನಿ ಮತದಾರರೇ ನನಗೆ ಮತ ನೀಡಿ ಗೆಲ್ಲಿಸಿ ಎಂದು ಭಾವುಕರಾಗಿ ಹೇಳಿದ್ದರು. ಇದಾದ ನಂತರ ಮಂಡ್ಯ ಜಿಲ್ಲೆಯ ಜನರು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಉಘೇ ಉಘೇ ಎಂದು ಗೆಲ್ಲಿಸುವ ಮೂಲಕ ಜೆಡಿಎಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಹಾದಿಯನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತುಳಿದಿದ್ದಾರೆ.

    ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ‌ ಪೈಕಿ ನಾಗಮಂಗಲ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗಲಿದೆ. ಈ ಕ್ಷೇತ್ರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.‌ ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ ಬಳಿಕ ನಾಗಮಂಗಲ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಶಿವರಾಮೇಗೌಡ, ಇದೀಗ ಸ್ವಾಭಿಮಾನದ ಹೆಸರ ಮೂಲಕ ಜನರ ಮುಂದೆ ಹೊಗುತ್ತಿದ್ದಾರೆ.

    ನಾಗಮಂಗಲ ಕ್ಷೇತ್ರದ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್.ಆರ್.ಎಸ್ ಸ್ವಾಭಿಮಾನಿ ಪರ್ವ ಎಂಬ ಕಾರ್ಯಕ್ರಮದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ನಾಗಮಂಗಲದ ರಣಕಣದಲ್ಲಿ ಜೆಡಿಎಸ್ ವಿರುದ್ಧ ಶಿವರಾಮೇಗೌಡ ಕಹಳೆ ಊದಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಪತ್ನಿ ಸ್ವಾಭಿಮಾನದಿಂದ ನಿಮ್ಮ ಬಳಿ ಮತ ಕೇಳಿದರು. ಆಗ ಯಾರನ್ನು ನೋಡದೇ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೀರಾ. ಈಗ ನಾನು ಸಹ ನಿಮ್ಮ ಮುಂದೆ ಟವಲ್‌ವೊಡ್ಡಿ ಭಿಕ್ಷೆ ಬೇಡುತ್ತಿದ್ದೇನೆ, ನನ್ನ ಗೆಲ್ಲಿಸಿ ಎಂದು ನಾಗಮಂಗಲದ ಕದಬಹಳ್ಳಿಯ ಸ್ವಾಭಿಮಾನಿ ಪರ್ವ ಕಾರ್ಯಕ್ರಮದಲ್ಲಿ‌ ಶಿವರಾಮೇಗೌಡ ಭಾವುಕರಾಗಿ ಹೇಳಿದ್ದಾರೆ.

    ಇದೇ ಸ್ವಾಭಿಮಾನಿ ಪರ್ವದಲ್ಲಿ ಒಂದು ಕಡೆ ನನ್ನ ಕೈ ಹಿಡಿಯಿರಿ ಎಂದು ಜನರ ಬಳಿ ಮನವಿ ಮಾಡಿರುವ ಶಿವರಾಮೇಗೌಡ ಇನ್ನೊಂದು ಕಡೆ ನನಗೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ 2018ರ ಮಂಡ್ಯ ಲೋಕಸಭಾ ಉಪಚುನಾವಣೆಗಾಗಿ ನನ್ನಿಂದ‌ 32 ಕೋಟಿ ರೂ. ಖರ್ಚು ಮಾಡಿಸಿದ್ದಾರೆ. ಆದರೆ ನನಗೆ 5 ತಿಂಗಳು ಮಾತ್ರ ಸಂಸದರನ್ನಾಗಿ ಮಾಡಿದರು. 5 ತಿಂಗಳಿಗೆ 32 ಕೋಟಿ‌ ಖರ್ಚು ಮಾಡಿಸಿ ನನ್ನ ಸಾಲಗಾರನನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು.

    ತಮ್ಮ ಮಗನನ್ನು ಸಂಸದನನಾಗಿ ಮಾಡವುದಾಗಿ ಹೇಳಿ ನನಗೆ ಮೋಸ ಮಾಡಿದರು. ನಾನು ಏನು ದ್ರೋಹ ಮಾಡಿದ್ದೆ ಕುಮಾರಸ್ವಾಮಿ ಅವರೇ ನಿಮಗೆ ಎಂದು ಜೆಡಿಎಸ್‌ನಲ್ಲಿ ತಮಗೆ ಅನ್ಯಾಯವಾಗಿದೆ. ನಾನು ಈ ಚುನಾವಣೆಯಲ್ಲಿ ಗೆದ್ದು ಅವರಿಗೆ ನಾನ್ಯಾರು ಎಂದು ತೋರಿಸುತ್ತೇನೆ ಎಂದು ಶಿವರಾಮೇಗೌಡ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ಒಟ್ಟಾರೆ ಎಂಪಿ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ಮೂಲಕ ಜೆಡಿಎಸ್‌ಗೆ ಪಾಠ ಕಲಿಸಿದರು. ಇದೀಗ ನಾಗಮಂಗಲದಲ್ಲಿ ಶಿವರಾಮೇಗೌಡ ಸ್ವಾಭಿಮಾನದ ಮೂಲಕ ದಳಪತಿಳಿಗೆ ಟಕ್ಕರ್‌ ನೀಲು ಮುಂದಾಗಿದ್ದು, ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಕಹಳೆ ಮುಳುವಾಗುತ್ತಾ ಎಂದು‌ ಕಾದುನೋಡಬೇಕಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಹೊಸ ರಾಷ್ಟ್ರೀಯ ಪಕ್ಷ ಘೋಷಿಸಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್

    ಹೊಸ ರಾಷ್ಟ್ರೀಯ ಪಕ್ಷ ಘೋಷಿಸಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್

    ನವದೆಹಲಿ: 2024ರ ಲೋಕಸಭೆ ಚುನಾವಣೆ (Lok Sabha Elections) ಸನಿಹವಾಗುತ್ತಿರುವ ಹಿನ್ನೆಲೆ ಹಲವು ರಾಜಕೀಯ ಪಕ್ಷಗಳು ತಂತ್ರಗಾರಿಕೆ ಆರಂಭಿಸಿದ್ದು, ಇದರ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrasekhar Rao) ಹೊಸ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

    ಅಕ್ಟೋಬರ್ 5 ರಂದು ಸಂಜೆ ಏಳು ಗಂಟೆಗೆ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದು, ಡಿಸೆಂಬರ್ 9 ರಂದು ದೆಹಲಿಯಲ್ಲಿ (NewDelhi) ದೊಡ್ಡ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ರಾಷ್ಟ್ರೀಯ ಅಜೆಂಡಾವನ್ನು ಚಂದ್ರಶೇಖರ್ ರಾವ್ ಜನರಿಗೆ ತಿಳಿಸಲಿದ್ದಾರೆ. ಇದನ್ನೂ ಓದಿ: ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?

    ಮೂಲಗಳ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿ (TRS) ಅನ್ನು ಭಾರತೀಯ ರಾಷ್ಟ್ರ ಸಮಿತಿ (BRS) ಆಗಿ ಮರು ನಾಮಕರಣ ಮಾಡಲು ಚಂದ್ರಶೇಖರ್ ರಾವ್ ಪಕ್ಷದ ಇತರೆ ನಾಯಕರಿಂದ ಅನುಮತಿ ಪಡೆದುಕೊಂಡಿದ್ದಾರೆ. ಪಕ್ಷದ ಹೆಸರು ಮಾತ್ರ ಬದಲಾಗಲಿದ್ದು, ಚಿಹ್ನೆ ಹಾಗೂ ಧ್ವಜ ಮುಂದುವರಿಯಲಿದೆ. ಇದನ್ನೂ ಓದಿ : ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು. ಕೆಲವು ರಾಜಕೀಯ ಪಕ್ಷಗಳು ಬಿಆರ್‌ಎಸ್‍ನೊಂದಿಗೆ ವಿಲೀನಗೊಳ್ಳಬಹುದು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಆರ್‌ಎಸ್‍ನೊಂದಿಗೆ ಕೆಲಸ ಮಾಡಲು ಸಿದ್ಧರಿರುವ ಇತರ ನಾಯಕರೂ ಪಕ್ಷ ಸೇರಬಹುದು ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

    2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

    ಹೈದರಾಬಾದ್: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೇಳಿದ್ದಾರೆ.

    ನಿಜಾಮಾಬಾದ್‍ನಲ್ಲಿ ಸಮಗ್ರ ಜಿಲ್ಲಾ ಕಚೇರಿ ಸಂಕೀರ್ಣ ಹಾಗೂ ಟಿಆರ್‌ಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್‌ಗಳನ್ನು ಅಳವಡಿಸುವಂತೆ ರೈತರಿಗೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿದರು.  ಇದನ್ನೂ ಓದಿ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯುವಕ ಮರ್ಡರ್

    2024ರ ಲೋಕಸಭೆ ಚುನಾವಣೆಯ ನಂತರ ಈ ದೇಶದ ಎಲ್ಲ ರೈತರು ಬಿಜೆಪಿಯೇತರ ಬಾವುಟ ಹಾರಿಸಲಿದ್ದಾರೆ. ನಾವು ಈ ಬಡವರ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಮತ್ತು ನಮ್ಮದೇ ಸರ್ಕಾರ ದೆಹಲಿಯಲ್ಲಿ ಕೂಡ (ರಾಷ್ಟ್ರೀಯ ಮಟ್ಟದಲ್ಲಿ) ಅಧಿಕಾರಕ್ಕೆ ಬರಲಿದೆ. ನಾನು ಈ ದೇಶದ ರೈತರಿಗೆ ಸಹಿ ಸುದ್ದಿಯನ್ನು ನೀಡುತ್ತಿದ್ದೇನೆ. ನೀವು ಬಿಜೆಪಿಯೇತರ ಸರ್ಕಾರವನ್ನು ಆರಿಸಿದರೆ, ತೆಲಂಗಾಣದಂತೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಒಲ್ಲದ ವಿವಾಹ – ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ

    ರೈತರು ಸೇರಿದಂತೆ ಎಲ್ಲರಿಗೂ 24/7 ವಿದ್ಯುತ್ ನೀಡುವ ಯಾವುದೇ ರಾಜ್ಯ ಈ ದೇಶದಲ್ಲಿ ಇಲ್ಲ ಮತ್ತು ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು ನೀಡುವ ಏಕೈಕ ರಾಜ್ಯ ತೆಲಂಗಾಣವಾಗಿದೆ ಎಂದು ಹೇಳಿದರು. ಜೊತೆಗೆ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಸರ್ಕಾರವು ಈಗ ರಸಗೊಬ್ಬರ, ಡೀಸೆಲ್ ಮತ್ತು ಇತರ ಇನ್‍ಪುಟ್‍ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕೆಲಸ ಕಷ್ಟಕರ ಎಂಬಂತೆ ರೈತರಿಗೆ ತೋರಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಕೃಷಿ ಭೂಮಿಯನ್ನು ಕಿತ್ತುಕೊಂಡು ಕಾರ್ಪೋರೇಟ್‍ ಕಂಪನಿಗೆ ನೀಡಬಹುದು ಎಂದು ಆರೋಪಿಸಿದರು.

    ಅನುತ್ಪಾದಕ ಆಸ್ತಿ (ಎನ್‍ಪಿಎ) ಹೆಸರಿನಲ್ಲಿ 12 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಮನ್ನಾ ಮಾಡಿರುವ ಕೇಂದ್ರವು ದೇಶದ ಎಲ್ಲ ರೈತರಿಗೆ 1.45 ಲಕ್ಷ ಕೋಟಿ ವೆಚ್ಚದ ಉಚಿತ ವಿದ್ಯುತ್ ನೀಡಲು ಇಚ್ಛಿಸುತ್ತಿಲ್ಲ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಹೃದಯಗಳ ರಾಣಿ ಮಮತಾ ಲೋಕಸಭೆ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಲಿದ್ದಾರೆ: ಶತ್ರುಘ್ನ ಸಿನ್ಹಾ

    ಹೃದಯಗಳ ರಾಣಿ ಮಮತಾ ಲೋಕಸಭೆ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗಲಿದ್ದಾರೆ: ಶತ್ರುಘ್ನ ಸಿನ್ಹಾ

    ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿಜವಾದ ಗೇಮ್ ಚೇಂಜರ್ ಆಗಲಿದ್ದಾರೆ ಎಂದು ಸಂಸದ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ನಡೆದ ಉಪಚುನಾವಣೆಯಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರವನ್ನು ಗೆದ್ದ ಶತ್ರುಘ್ನ ಸಿನ್ಹಾ ಮಾಧ್ಯಮದ ಜೊತೆ ಮಾತನಾಡಿ, ನಾನು ಹೃದಯಗಳ ರಾಣಿ ಮಮತಾ ಬ್ಯಾನರ್ಜಿ ಅವರಿಂದ ಪ್ರಭಾವಿತನಾಗಿದ್ದೇನೆ. ಅವರು ಎಲ್ಲರೂ ಗೌರವಿಸಲ್ಪಡುವ ನಾಯಕಿಯಾಗಿದ್ದಾರೆ. 2024ರ ಚುನಾವಣೆಯಲ್ಲಿ ಅವರು ನಿಜವಾದ ಆಟ ಬದಲಾಯಿಸುವವರು ಎಂಬುದನ್ನು ನೋಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್

    ರಾಜಕೀಯದಲ್ಲಿ ತಮ್ಮ ಪ್ರಯಾಣದ ಕುರಿತು ಮಾತನಾಡಿದ ಅವರು, ನನ್ನ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣರಿಂದ ಪ್ರಭಾವಿತನಾಗಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

    ಇದಲ್ಲದೆ ಬಿಜೆಪಿಯು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವವಾಗಿ ಮಾರ್ಪಟ್ಟಿರುವುದರಿಂದ ಬಿಜೆಪಿಯನ್ನು ತೊರೆದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‍ಗೆ ಸೇರಿದ್ದೇನೆ ಎಂದು ಹೇಳಿದರು.

    ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವರು, ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿಯವರಿದ್ದಾಗ ಬಿಜೆಪಿ ಪ್ರಜಾಸತ್ತಾತ್ಮಕ ಪಕ್ಷವಾಗಿತ್ತು. ಆದರೆ ಪ್ರಧಾನಿ ಮೋದಿ ನಡೆಸುತ್ತಿರುವ ಇಂದಿನ ಬಿಜೆಪಿ ನಿರಂಕುಶ ಪ್ರಭುತ್ವವಾಗಿದೆ ಎಂದು ದೂರಿದರು.

    ಉಪಚುನಾವಣೆಯಲ್ಲಿ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಶತ್ರುಘ್ನ ಸಿನ್ಹಾ ಸೋಲಿಸಿದ್ದರು. ಈ ಹಿಂದೆ ಪಶ್ಚಿಮ ಬಂಗಾಳದ ಅಸನ್ಸೋಲ್‍ನಲ್ಲಿ ಟಿಎಂಸಿ ಹಿಂದೆಂದೂ ಗೆದ್ದಿರಲಿಲ್ಲ.

  • ಕೈ ಪಡೆಗೆ ಪ್ರಶಾಂತ್ ಕಿಶೋರ್ ಶಕ್ತಿ – ಹಿರಿಯ ನಾಯಕರಿಗೆ ನೀಡಿದ ಸಲಹೆ ಏನು?

    ಕೈ ಪಡೆಗೆ ಪ್ರಶಾಂತ್ ಕಿಶೋರ್ ಶಕ್ತಿ – ಹಿರಿಯ ನಾಯಕರಿಗೆ ನೀಡಿದ ಸಲಹೆ ಏನು?

    ನವದೆಹಲಿ: ಪಂಚರಾಜ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದೆ. ಈ ಸಂಬಂಧ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಆರಂಭಿಸಿದೆ.

    ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇಂದು ಮೂರನೇ ಹಂತದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್, ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಅಂಬಿಕಾ ಸೋನಿ, ಎಕೆ ಆಂಟನಿ, ರಣದೀಪ್ ಸುರ್ಜೆವಾಲಾ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಭಾರತ ಶ್ರೇಷ್ಠ ವೈವಿಧ್ಯತೆ ದೇಶ, ಎಲ್ಲರ ಬಗ್ಗೆಯೂ ಸಹಿಷ್ಣುತೆ ಹೊಂದಬೇಕು – ಅಲಹಾಬಾದ್ ಹೈಕೋರ್ಟ್

    ಒಂದೇ ವಾರದಲ್ಲಿ ನಡೆಯುತ್ತಿರುವ ಮೂರನೇ ಸಭೆ ಇದಾಗಿದೆ. ಇದಕ್ಕೂ ಮೊದಲು ಏಪ್ರಿಲ್ 16 ಮತ್ತು 18 ರಂದು ಸೋನಿಯಾಗಾಂಧಿ ಜೊತೆಗೆ ಪ್ರಶಾಂತ್ ಕಿಶೋರ್ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಇನ್ನೆರಡು ಸಭೆಗಳು ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

    ಪ್ರಶಾಂತ್ ಕಿಶೋರ್ 2024ರ ಚುನಾವಣೆಗೆ ಸಂಬಂಧಿಸಿದಂತೆ ಪವರ್ ಪಾಯಿಂಟ್ ನೀಡಿದ್ದು ಇಂದು ಹೊಸ ಅಂಶಗಳೊಂದಿಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ಏನು ಎಂದು ಇನ್ನೊಂದು ವಾರದಲ್ಲಿ ತಿಳಿಯಲಿದೆ ಎಂದು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮೆರವಣಿಗೆಗೂ ಮುನ್ನ ಆಯೋಜಕರಿಂದ ಅಫಿಡವಿಟ್ ಕಡ್ಡಾಯ

    ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಬೇಕು. ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 370 ಕ್ಷೇತ್ರಗಳ ಮೇಲೆ ಪ್ರಶಾಂತ್ ಕಿಶೋರ್ ಗಮನಹರಿಸಿದ್ದಾರೆ.