Tag: Lok Sabha Elections

  • ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯನ್ನ ಕಳುಹಿಸಿದ್ದಾ; ಸಿಎಂ ಪ್ರಶ್ನೆ

    ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯನ್ನ ಕಳುಹಿಸಿದ್ದಾ; ಸಿಎಂ ಪ್ರಶ್ನೆ

    ಬೆಂಗಳೂರು: ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯವರನ್ನ ಕಳುಹಿಸಿದ್ದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ (Siddaramaiah) ಪ್ರಶ್ನಿಸಿದ್ದಾರೆ.

    ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ʻಮಹಿಳಾ ಮೀಸಲಾತಿʼ (Women’s Reservation) ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಈ ಕುರಿತ ಮಾಹಿತಿಯನ್ನು ತಮ್ಮ ಟ್ವಿಟ್ಟರ್‌ (ಎಕ್ಸ್)‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಅನುಮಾನ. ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೇ ಇಷ್ಟೊಂದು ಅಡೆತಡೆಗಳನ್ನ ಹಾಕುತ್ತಿರಲಿಲ್ಲ. ಇದನ್ನೂ ಓದಿ: ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರುತ್ತದೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಯಾಗಿ ಜಾರಿ ಆಗುವ ಮೊದಲೇ ಅದರ ಆಯಸ್ಸು ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ.

    ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದ್ರೆ ಈ ರೀತಿ ಮಹಿಳೆಯರಿಗೆ ವಂಚನೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯವರನ್ನು ಕಳುಹಿಸಿದ್ದು? ಮಹಿಳಾ ಮೀಸಲಾತಿ ಬಿಲ್ ಸಿದ್ಧಪಡಿಸಿದ್ದು ಕಾಂಗ್ರೆಸ್, ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ 33% ಮಾತ್ರವಲ್ಲ, 50% ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಇದನ್ನೂ ಓದಿ: Asian Games 2023: ಭಾರತಕ್ಕೆ ಮೂರು ಬೆಳ್ಳಿ, ಎರಡು ಕಂಚಿನ ಪದಕ

    ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024ರಲ್ಲೂ ಜಾರಿ ಆಗುವುದಿಲ್ಲ. 2029ರಲ್ಲೂ ಜಾರಿ ಆಗುವುದಿಲ್ಲ, 2034ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ ಆಯಸ್ಸೇ ಮುಗಿದಿರುತ್ತದೆ. ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಿದ್ದರಿಂದ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಿದ್ದಾರೆ. ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡೀಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರೆಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ರಾಜಕೀಯ ವಿಶ್ಲೇಷಕ ಪ್ರೊ.ಮುಜಾಫರ್ ಅಸಾದಿ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೊಡ್ಡಗೌಡರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್‌ಸಿಂಹ

    ದೊಡ್ಡಗೌಡರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್‌ಸಿಂಹ

    ಮೈಸೂರು: ಇಲ್ಲಿನ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ವರಿಷ್ಟರಾದ ಹೆಚ್.ಡಿ ದೇವೇಗೌಡರನ್ನ ಭೇಟಿಯಾಗಿ, ಮಂಡಿಯೂರಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

    ಈ ಬಾರಿ ಲೋಕಸಭಾ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತವಾಗಿ ದೊಡ್ಡಗೌಡರೇ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಮೈಸೂರಿನ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಂಸದ ಪ್ರತಾಪ್ ಸಿಂಹ ಸಹ ಭೇಟಿಯಾಗಿ ದೊಡ್ಡಗೌಡರ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗ ದಿಕ್ಕು ತಪ್ಪಿಹೋಗಿದೆ, ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದಿದೆ – ಹಂಸಲೇಖ ವಿಷಾದ

    ಈ ಕುರಿತ ಚಿತ್ರಗಳು ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳನ್ನೂ ಹುಟ್ಟುಹಾಕಿದೆ. ಈಗಾಗಲೇ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: One Nation One Election: ಸಂವಿಧಾನದ 5 ಆರ್ಟಿಕಲ್‌ಗಳಿಗೆ ಮಾಡಬೇಕಾಗುತ್ತೆ ತಿದ್ದುಪಡಿ

    ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಸಿಎಂ ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕುಮಾರಸ್ವಾಮಿ ಮಂಡ್ಯ ಇಲ್ಲವೇ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ರಣತಂತ್ರ ರೂಪಿಸ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ಕಣಕ್ಕಿಳಿದರೂ ಒಗ್ಗಟ್ಟಿನಿಂದ ಎದುರಿಸುವುದು, ಒಂದೊಮ್ಮೆ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ನಟಿ ರಮ್ಯಾ ಅವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್‌ ಮಾಡುತ್ತಿದೆ. ಶಿವಮೊಗ್ಗದಲ್ಲಿ ಆಪರೇಷನ್ ಹಸ್ತದ ಮೂಲಕ ಕುಮಾರ್ ಬಂಗಾರಪ್ಪ ಸೆಳೆಯಲು ಕೈಪಡೆ ಮುಂದಾಗಿದೆ.

    ಈ ಮಧ್ಯೆ, ಇಂದು ಪದ್ಮನಾಭನಗರದ ಆರ್. ಅಶೋಕ್ ಆಪ್ತರು ಸಾರಿಗೆ ಸಚಿವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಶುಕ್ರವಾರ 8ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಈ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಆದ್ರೆ, ಅವ್ರೇ ಸ್ವಇಚ್ಛೆಯಿಂದ ಬರ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

    ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

    – ಬೆಂಗಳೂರಿನಲ್ಲಿಂದು ಜೆಡಿಎಸ್ ಮಹಾಸಭೆ

    ಬೆಂಗಳೂರು: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟ ಪಡ್ತಾರೆ. ಹಾಗೇ ಬಿಜೆಪಿ (BJP) ಕೂಡ ಬರುತ್ತಿದೆ. ಮೈತ್ರಿ ವಿಚಾರ ಚರ್ಚೆ ಹಂತದಲ್ಲಿದ್ದು, ಭಾನುವಾರ (ಇಂದು) ಕಾರ್ಯಕರ್ತರ ಮುಂದೆ ಚರ್ಚಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

    ಬೆಂಗಳೂರು ಅರಮನೆ ಮೈದಾನದಲ್ಲಿಂದು ಜೆಡಿಎಸ್ (JDS) ಪಕ್ಷದ ಮಹತ್ವದ ಸಭೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಜೆಡಿಎಸ್ ಹಾಲಿ, ಮಾಜಿ ಶಾಸಕರು, ಜಿಲ್ಲಾ, ತಾಲೂಕು, ಬೂತ್‌ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಮುಖರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ (BJP-JDS Alliance) ವಿಷಯವನ್ನ ಚರ್ಚಿಸಲು ವರಿಷ್ಟರು ಮುಂದಾಗಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇವತ್ತಿನ ಸಮಾವೇಶದಲ್ಲಿ ಪಕ್ಷ ಬಲ ಪಡಿಸುವ ಬಗ್ಗೆ ಚರ್ಚೆ ಮಾಡ್ತೀವಿ. ಪಕ್ಷದ ಮಟ್ಟದಲ್ಲಿ ದೋಸ್ತಿ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ. ನಮ್ಮ ಪಕ್ಷ ಉಳಿಯಬೇಕು. ರಾಜ್ಯಕ್ಕೆ 3ನೇ ಶಕ್ತಿ ಬೇಕು. ಬಡ ವರ್ಗ, ದಲಿತ ವರ್ಗಕ್ಕೆ ಒಂದು ಪಕ್ಷ ಬೇಕು. ಅದಕ್ಕಾಗಿ ಜಿಲ್ಲಾ ತಾಲೂಕು ಮಟ್ಟದ ಮುಖಂಡರು ಇವತ್ತಿನ ಸಭೆಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ರಾಪ್ತರಿಗೆ ಮದ್ಯ ಸಪ್ಲೈ – ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

    ಮೈತ್ರಿ ಬಗ್ಗೆ ಎಲ್ಲರೂ ಹೇಳ್ತಿದ್ದಾರೆ. ನಾವ್ಯಾರೂ ಇನ್ನೂ ಅದರ ಬಗ್ಗೆ ನಿರ್ಧಾರ ಮಾಡಿಲ್ಲ. ಪಕ್ಷದ ಪ್ರತಿಯೊಬ್ಬರಿಂದಲೂ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಬಿಜೆಪಿ ಅವರು ನಮಗೆ ಆಫರ್ ಕೊಡ್ತಿದ್ದಾರೆ. 4 ಸೀಟು ಅಂತ ನಾವು ಹೇಳಿಲ್ಲ, ಅವರೇ ಹೇಳ್ತಿದ್ದಾರೆ. ಆದ್ರೆ ದೋಸ್ತಿ ಬಗ್ಗೆ ನಾನು, ಕುಮಾರಸ್ವಾಮಿ ತೀರ್ಮಾನ ಮಾಡೋಕೆ ಸಾಧ್ಯವಿಲ್ಲ. ದೇವೇಗೌಡರು ಇದ್ದಾರೆ, ಕೋರ್ ಕಮಿಟಿ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಆರಂಭಿಕ ಹಂತದಲ್ಲಿದೆ: ಹೆಚ್.ಡಿ.ಕುಮಾರಸ್ವಾಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಡಿಯೂರಪ್ಪರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪ: ರೇಣುಕಾಚಾರ್ಯ

    ಯಡಿಯೂರಪ್ಪರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪ: ರೇಣುಕಾಚಾರ್ಯ

    ಬೆಂಗಳೂರು: ಯಡಿಯೂರಪ್ಪ (BS Yediyurappa) ಅವರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (Renukacharya) ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ನಡೆಯುತ್ತಿರುವ ಸಭೆಗಳಿಗೆ ಗೈರಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಹೋಗಿಲ್ಲ. ಆ ನೋಟಿಸ್ ವಾಪಸ್ ಪಡೆಯಬೇಕು ಅದಕ್ಕೆ ಸಭೆಗೆ ಹಾಜರಾಗ್ತಿಲ್ಲ. ನಾನು ಏನು ಹೇಳಬೇಕೊ ಅದನ್ನ ಹೇಳಿದ್ದೀನಿ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲಾ ನಷ್ಟನೂ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನ ನೇರವಾಗಿ ಹೇಳಿದ್ದೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    ಯಡಿಯೂರಪ್ಪ ಅವರಂತಹ ನಾಯಕರನ್ನ ಕಡೆಗಣಿಸಿದ್ದಾರೆ, ಇದು ಬಿಜೆಪಿಗೆ ಶಾಪವಾಗಿದೆ. ವರ್ಚಸ್ಸು ಇರುವವರನ್ನ ಬೆಳೆಯೋಕೆ ಬಿಡ್ತಿಲ್ಲ. ವಿಜಯೇಂದ್ರ ಅಂತಹವರನ್ನ ಮೂಲೆಗುಂಪು ಮಾಡ್ತಿದ್ದಾರೆ. ನಾನು ನೇರವಾಗಿಯೇ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತನಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ ಅಷ್ಟೇ. ಅದನ್ನ ನೇರವಾಗಿ ಖಂಡಿಸಿದ್ದೇನೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸುಧಾರಿಸಿದ ಹೆಚ್‌ಡಿಕೆ ಆರೋಗ್ಯ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ರಾಜಕೀಯ ಪಾರ್ಟಿ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ. ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಇದನ್ನ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಕೆಲವರು ದುರಹಂಕಾರ ಭ್ರಮೆ ಲೋಕದಲ್ಲಿವರಂತೆ ಆಡ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆಗೆ ಇದು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಅಂದ್ರೆ ನಮಗೆ ಭಯ – ಸತೀಶ್ ಜಾರಕಿಹೊಳಿ

    ಬಿಜೆಪಿ ಅಂದ್ರೆ ನಮಗೆ ಭಯ – ಸತೀಶ್ ಜಾರಕಿಹೊಳಿ

    ಚಾಮರಾಜನಗರ: ಬಿಜೆಪಿ (BJP) ಅಂದ್ರೆ ನಮಗೆ ಭಯ ಇದೆ, 24 ಗಂಟೆಯೂ ನಾವು ಎಚ್ಚರದಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 20 ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಶಾಸಕರ ಹೆಸರು ಪ್ರಸ್ತಾಪಿಸದೇ ಆಪರೇಷನ್ ಹಸ್ತದ ಗುಟ್ಟು ರಿವೀಲ್ ಮಾಡಿದ್ದಾರೆ. ಕಾಂಗ್ರೆಸ್ (Congress) ಪಕ್ಷದ ತತ್ವ ಸಿದ್ಧಾಂತಕ್ಕೆ ಒಪ್ಪಿ ಬರುವವರು ಖಂಡಿತಾ ಬರಬಹುದು ಅಂತಾ ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ – ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 106 ಅಡಿಗೆ ಕುಸಿತ

    ಸಹೋದರ ರಮೇಶ್ ಜಾರಕಿಹೊಳಿಯನ್ನ (Ramesh Jarkiholi) ಮತ್ತೆ ಕಾಂಗ್ರೆಸ್‌ಗೆ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಹಿರಿಯರು ಏನ್ ಹೇಳ್ತಾರೊ ಅದಕ್ಕೆ ನಾವು ಬದ್ಧ ಎಂದಿದ್ದಾರೆ.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪೆನ್‌ಡ್ರೈವ್ ವಿಚಾರಕ್ಕೆ ತಿರುಗೇಟು ನೀಡಿದ ಸಚಿವ, ಅದು ಮುಗಿದುಹೋದ ಅಧ್ಯಾಯ. ನಾನು ಅದರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಚಿತ್ರಕ್ಕೆ ಚಾಲನೆ

    ಇದೇ ವೇಳೆ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ, ಬೆಳಗಾವಿ ಜಿಲ್ಲೆ ದೇಶದಲ್ಲೇ ಅತಿ ದೊಡ್ಡ ಜಿಲ್ಲೆಯಾಗಿರುವುದರಿಂದ ಪ್ರತ್ಯೇಕ ಜಿಲ್ಲೆಯ ಅವಶ್ಯಕತೆಯಿದೆ. ತಮಿಳುನಾಡಿಗೆ ಕೆಆರ್‌ಎಸ್ ನಿಂದ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನ ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?

    `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?

    ಕಾರವಾರ: ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಪರೇಷನ್ ಹಸ್ತ ಶುರುವಾಗಿದೆ. ಗೆಲುವೊಂದೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ನಂಬರ್ ಗೇಮ್‌ನತ್ತ ಟಾರ್ಗೆಟ್ ಹಾಕಿಕೊಂಡಿದೆ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ (BJP-JDS) ಎಷ್ಟೇ ಜನ ಬಂದರೂ ಬಾಗಿಲು ಓಪನ್‌ಗೆ ಸೀಕ್ರೆಟ್ ಆಪರೇಷನ್‌ಗೆ ಮುಂದಾಗಿದೆ. ಜೊತೆಗೆ ಮೂಲ ಕಾಂಗ್ರೆಸ್ಸಿಗರನ್ನ ಪಕ್ಷಕ್ಕೆ ಕರೆತರುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

    ಈ ನಡುವೆ ಶಾಸಕ ಶಿವರಾಮ್‌ ಹೆಬ್ಬಾರ್‌ (Shivaram Hebbar) ಕೂಡ ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಕಮಲ ಬಿಟ್ಟು ಕೈ ಹಿಡಿಯಲು ಹೆಬ್ಬಾರ್, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಬೆಂಬಲಿಗರೊಂದಿಗೆ ಮುಂಡಗೋಡಿನಲ್ಲಿ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಆಗುವ ಅನುಕೂಲದ ಬಗ್ಗೆ ಚರ್ಚೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

    ಶಿವರಾಮ್‌ ಹೆಬ್ಬಾರ್ ಬೆಂಬಲಿಗರೂ ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಬೆಂಗಳೂರಿಗೆ ಹೋದ್ಮೇಲೆ ಮಾತಾಡ್ತೀನಿ ಅಂತಾ ಹೇಳಿದ್ದಾರೆ. ಸದ್ಯಕ್ಕೆ ಶಿವರಾಮ್‌ ಹೆಬ್ಬಾರ್ ನಡೆ ಕೂಡ ಸಸ್ಪೆನ್ಸ್ ಆಗಿದೆ. ಇದನ್ನೂ ಓದಿ: ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!

    ಈ ಸಂಬಂಧ ಶುಕ್ರವಾರ ಯಲ್ಲಾಪುರದಲ್ಲಿ ಮಾತನಾಡಿರುವ ಶಿವರಾಮ್‌ ಹೆಬ್ಬಾರ್, ನಾನು ಎಲ್ಲೂ ಸಭೆ ಮಾಡಿಲ್ಲ. ಕಾರ್ಯಕರ್ತರ ಜೊತೆ ಸಭೆ ಮಾಡುವುದು ನನ್ನ ಕರ್ತವ್ಯ ಮಾಡಿದ್ದೇನೆ. ಯಡಿಯೂರಪ್ಪ ನೇತ್ರತ್ವದಲ್ಲಿ ನಾವು ಪಕ್ಷಕ್ಕೆ ಬಂದಿದ್ದೇವೆ. ನಮ್ಮ ಅಹವಾಲನ್ನ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಮಗೆ ಇರುವ ಆತಂಕ ಹಂಚಿಕೊಂಡಿದ್ದೇವೆ. ಏನು ಹೇಳಬೇಕು ಅದನ್ನು ಹೇಳಿದ್ದೇವೆ. ಮುಚ್ಚಿಡುವುದು ಯಾವುದೂ ಇಲ್ಲ. ವರಿಷ್ಟರೇ ನಿರ್ಣಯ ಮಾಡಬೇಕು. ಯಡಿಯೂರಪ್ಪನವರು ಬೊಮ್ಮಾಯಿ ಸಹ ಅನ್ಯಾಯ ಮಾಡಿಲ್ಲ. ಪಕ್ಷದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು. ಕಾಂಗ್ರೆಸ್ ಪಕ್ಷದಿಂದ ಯಾರನ್ನೂ ಸಂಪರ್ಕ ಮಾಡಿಲ್ಲ, ಪಕ್ಷ ಸೇರುವ ಬಗ್ಗೆ ಚರ್ಚೆ ನಡೆದಿಲ್ಲ. ಈಗ ಪಕ್ಷದಲ್ಲೇ ಇದ್ದೀನಿ ಎಂದು ಮತ್ತೆ ಕುತೂಹಲ ಕೆರಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

    ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

    – MP ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಕುರಿತು ಇಂಗಿತ ವ್ಯಕ್ತಪಡಿಸಿದ MLC
    – ನಾನು ಹಿಡಿಯುವ ಪಕ್ಷದ ಧ್ವಜ ಬೇರೆಯಾಗಬಹುದು, ನನ್ನ ಅಂಜೆಂಡಾ ಬದಲಾಗಿಲ್ಲ

    ಬೆಳಗಾವಿ: ವಿಧಾನಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ (H Vishwanath) 2024ರ ಲೋಕಸಭಾ ಚುನಾವಣೆಗೆ (Lok Sabha Elections) ಕಾಂಗ್ರೆಸ್‌ ಪಕ್ಷದಿಂದ ಮೈಸೂರಿನಿಂದ ಸ್ಪರ್ಧೆ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲೇ (Congress) ಸಂಸದನಾಗಿದ್ದವನು. ಕಾಂಗ್ರೆಸ್ ಕಾರ್ಯಕರ್ತನಾಗಿ ಮೇಲೆ ಬಂದವನು. ಹಲವು ಕಾರಣಗಳಿಂದ ನಾನು ಹೊರ ಬಂದಿದ್ದೇನೆ. 40 ವರ್ಷ ಕಾಂಗ್ರೆಸ್ ನಲ್ಲೇ ಇದ್ದವನು ಎಂದಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ನಾನೀಗ ಯಾವ ಪಕ್ಷದ ಸದಸ್ಯನೂ ಅಲ್ಲ, ಸ್ವತಂತ್ರವಾಗಿದ್ದೇನೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ (JDS) ಸೇರಿ ರಾಜ್ಯಾಧ್ಯಕ್ಷ ಆದೆ. ಜೆಡಿಎಸ್ ಕಚೇರಿಯಲ್ಲೇ ನಾನು ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳಿದ್ದೇನೆ. ನಾನು ಹಿಡಿದುಕೊಳ್ಳುವ ಪಕ್ಷದ ಧ್ವಜ ಬೇರೆ ಬೇರೆಯಾಗಬಹುದು. ಆದ್ರೇ ನನ್ನ ಅಂಜೆಂಡಾ ಬದಲಾಗಿಲ್ಲ. ಎನ್ನುವ ಮೂಲಕ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

    ಪಕ್ಷ ರಾಜಕಾರಣ ಸತ್ತು ಹೋಗಿದೆ ವ್ಯಕ್ತಿ ರಾಜಕಾರಣ ಮೇಲೆದ್ದಿದೆ. ಪಕ್ಷ ರಾಜಕಾರಣ ಬಲವಾಗಿದ್ದಾಗ ಕಾಂಗ್ರೆಸ್, ಇಂದಿರಾಗಾಂಧಿ ಹೆಸರಲ್ಲಿ ಯಾರು ನಿಂತರೂ ಗೆದ್ದು ಬರುತ್ತಿದ್ದರು. ಆದ್ರೆ ಪಕ್ಷ ರಾಜಕಾರಣ ಹೋಗಿ ವ್ಯಕ್ತಿ ರಾಜಕಾರಣ ಬಂದಿದೆ. ಪಕ್ಷ ರಾಜಕಾರಣ ಸತ್ತು ಹೋದ ಬಳಿಕ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತು ನಾನು ಇನ್ನೂ ಮಾತಾಡಿಲ್ಲ. ಮತ್ತೊಂದು ಸಲ ನನಗೆ ಅವಕಾಶ ಕೊಡಿ ಅಂತಾ ಕೇಳಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಚುನಾವಣೆ, ಪಕ್ಷ ಸಂಘಟನೆಗಾಗಿ ನಾಳೆ ದೆಹಲಿಯಲ್ಲಿ ಸಭೆ- ಜಿ. ಪರಮೇಶ್ವರ್‌

    ಲೋಕಸಭೆ ಚುನಾವಣೆ, ಪಕ್ಷ ಸಂಘಟನೆಗಾಗಿ ನಾಳೆ ದೆಹಲಿಯಲ್ಲಿ ಸಭೆ- ಜಿ. ಪರಮೇಶ್ವರ್‌

    ಬೆಂಗಳೂರು: ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಯ ವಿಚಾರವಾಗಿ ಸಲಹೆ ಕೊಡಲು ಆಗಸ್ಟ್‌ 2ರಂದು ದೆಹಲಿಯಲ್ಲಿ ವರಿಷ್ಠರ ಸಭೆ ಇದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ದೆಹಲಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಸಭೆಯ ಅಜೆಂಡಾ ಏನು ಅಂತ ನನಗೆ ಗೊತ್ತಿಲ್ಲ. ಸಹಜವಾಗಿ ಇಂತಹ ಸಭೆಗಳನ್ನ ಹಿಂದೆಯೂ ಮಾಡಿದ್ದಾರೆ. ಹಿಂದೆ ಎಸ್‌.ಎಂ ಕೃಷ್ಣ ಅವರು ಸಿಎಂ ಇದ್ದಾಗ ನಾನು ಅವತ್ತು ಸಚಿವ ಆಗಿದ್ದಾಗಲೂ ಇಂತಹ ಸಭೆ ಮಾಡಿ ಜನಪರ ಆಡಳಿತ ಕೊಡೋಕೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಈ ಸಭೆಗೆ ಹಿಂದೆ ನಾವು ರಿಪೋರ್ಟ್ ‌ಕೂಡಾ ಕೊಡ್ತಿದ್ದೇವು. ಲೋಕಸಭೆ, ಪಕ್ಷ ಸಂಘಟನೆ ವಿಚಾರ ಇರಬಹುದು ಅಂತಾ ತಿಳಿಸಿದರು. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ

    ಸಚಿವರ ಮೌಲ್ಯಮಾಪನ ಏನು ಮಾಡೊಲ್ಲ. ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಅಂತ ಸಲಹೆ ಕೊಡಬಹುದು. ಕೆಪಿಸಿಸಿ ಪುನರ್ ರಚನೆ ಬಗ್ಗೆಯೂ ನನಗೆ ಗೊತ್ತಿಲ್ಲ. ಸಮನ್ವಯ ಸಮಿತ ರಚನೆ ಬಗ್ಗೆಯೂ ಗೊತ್ತಿಲ್ಲ. ನನಗೇನು ಗೊತ್ತಿಲ್ಲ. ನಾಳೆ ಸಭೆಯ ಬಳಿಕವೇ ಎಲ್ಲವೂ ಗೊತ್ತಾಗಲಿದೆ ಅಂತ ತಿಳಿಸಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

    ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್

    – ಲೋಕಸಭೆಗೆ ಬಿಜೆಪಿ ದೋಸ್ತಿ ಬಗ್ಗೆ ಹೆಚ್‌ಡಿಕೆ ಮುಕ್ತ ಮಾತು

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್‌ನಿಂದ ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಹಿರಂಗ ಸವಾಲ್ ಹಾಕಿದ್ದಾರೆ.

    ನಗರದಲ್ಲಿಂದು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಕಾಂಗ್ರೆಸ್‌ನಿಂದ (Congress) ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಒಗ್ಗಟ್ಟಿನ ರಣಕಹಳೆ- ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ

    ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದಾರೆ. 123 ಸೀಟು ಬಂದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಅಂತ ಮಾತಾಡಿದ್ದಾರೆ. ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ? ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದೆ. 123 ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು. 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10 ಸ್ಥಾನಕ್ಕೆ ಬಂದಿದ್ವಿ. ಅವರೂ ಸೋತಿದ್ದರು. ಆದ್ರೆ ನಾನು ಒಬ್ಬ ಏಕಾಂಗಿಯಾಗಿ 40 ಸ್ಥಾನಕ್ಕೆ ರೀಚ್ ಆಗಿದ್ದೇನೆ. ಸಿದ್ದರಾಮಯ್ಯರಿಂದ ಪಕ್ಷ ಕಟ್ಟೋದು ಹೇಳಿಸಿಕೊಳ್ಳಬೇಕಾಗಿಲ್ಲ. ಇವರು ಹಲವು ಭಾಗ್ಯ ಕೊಟ್ಟು ಸಾಧನೆ ಮಾಡಿದ್ದಾರೆ ಅಲ್ಲವೇ? ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ? ಎಂದು ಗುಡುಗಿದ್ದಾರೆ.

    ಬಿಜೆಪಿಯವರೇ ವಿರೋಧ ಪಕ್ಷ ನಾಯಕರಾಗಲಿ:
    ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ವಿಪಕ್ಷ ಸ್ಥಾನ ಕೊಡಿ ಅಂತ ಕೇಳಲ್ಲ. ಬಿಜೆಪಿಯಲ್ಲಿ (BJP) ಅನೇಕ ನಾಯಕರು ಸಮರ್ಥರಿದ್ದಾರೆ. ಅವರಲ್ಲಿ ಒಬ್ಬರನ್ನ ವಿಪಕ್ಷ ನಾಯಕ ಮಾಡಿ ಅಂತ ಸಲಹೆ ಕೊಡ್ತೀನಿ. ಬಿಜೆಪಿ ನಾಯಕರೇ ವಿರೋಧ ಪಕ್ಷದ ನಾಯಕ ಆಗಲಿ. ಈ ಬಗ್ಗೆ ನಾನೇ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

    ಎನ್‌ಡಿಎ ಜೊತೆಗಿನ ಮೈತ್ರಿ ವಿಚಾರ ಮಾತನಾಡಿದ ಹೆಚ್‌ಡಿಕೆ, ಎನ್‌ಡಿಎ ಸಭೆಗೆ ಕರೆದರೆ ಹೋಗ್ತೀನಿ. ನಾನು ಕೇಂದ್ರದ ಸ್ಥಾನವನ್ನು ಕೇಳಿಲ್ಲ. ಕೇಂದ್ರ ಸಚಿವ ಸ್ಥಾನ, ವಿರೋಧ ಪಕ್ಷದ ಸ್ಥಾನ ನನಗೆ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡೋದಿಲ್ಲ. ಸೀಟಿನ ಬಗ್ಗೆ ಡಿಮ್ಯಾಂಡ್ ಆಗಿಲ್ಲ. ಸಭೆಗೆ ಕರೆದರೆ ಗೌರವ ಕೊಟ್ಟು ಹೋಗಿ ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ.

    ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರು ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ದ. ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆಗೆ ಜೊತೆಗೆ ಹೋಗೋ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡ್ತೀವಿ ಎಂದು ಮೈತ್ರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ಅಲ್ಲದೇ ಎನ್‌ಡಿಎ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗೋದಿಲ್ಲ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ

    UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ

    ನವದೆಹಲಿ/ಬೆಂಗಳೂರು: UPA ಮೈತ್ರಿಕೂಟದ ಮಹತ್ವದ ಸಭೆ ಜುಲೈ 17 ಹಾಗೂ 18 ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.

    ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಪಾಟ್ನಾದಲ್ಲಿ ನಡೆದ ಸಭೆ 6 ಜನ ಮುಖ್ಯಮಂತ್ರಿಗಳೂ ಸೇರಿ 15 ಪಕ್ಷಗಳ 32 ನಾಯಕರನ್ನ ಒಳಗೊಂಡಿತ್ತು. ಈ ಬಾರಿ 24 ಪಕ್ಷದ 40ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪ್ರಮುಖ ನಾಯಕರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯುಪಿಎ ಮೈತ್ರಿಕೂಟದ ನಾಯಕರಿಗೆ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಔತಣಕೂಟ ಏರ್ಪಡಿಸಿದ್ದಾರೆ. ಅಲ್ಲಿ ಮೈತ್ರಿಕೂಟದ ಮೊದಲ ಅನೌಪಚಾರಿಕ ಸಭೆ ನಡೆಯಲಿದೆ. ಜುಲೈ 18 ರಂದು ಯುಪಿಎ ಮೈತ್ರಿ ಕೂಟದ ಅಧಿಕೃತ ಮಹತ್ವದ ಸಭೆ ನಡೆಯಲಿದೆ.

    ಭಾಗವಹಿಸುವ ಪಕ್ಷಗಳು:
    ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐಎಂ, ಸಿಪಿಐ, ಆರ್‌ಜೆಡಿ, ಜೆಡಿಯು, ಡಿಎಂಕೆ, ಸಮಾಜವಾದಿ ಪಾರ್ಟಿ, ಶಿವಸೇನೆ ಉದ್ದವ್ ಠಾಕ್ರೆ, ಎಎಪಿ, ಜೆಎಂಎಂ, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರೆಟಿಕ್‌ ಪಾರ್ಟಿ, ಸಿಪಿಐಎಂಎಲ್‌, ಎಂಡಿಕೆ, ಆರ್‌ಎಸ್‌ಪಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್‌ನ ಎರಡೂ ಬಣಗಳು (ಜೋಸೇಫ್ ಮತ್ತು ಮಣಿ) ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ ಎನ್ನಲಾಗಿದೆ. ಇದನ್ನೂ ಓದಿ: ನಿಯಮ ಮೀರಿ ಹುದ್ದೆ ನೀಡಿದ ಆರೋಪ- ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಸರ್ಕಾರಕ್ಕೆ ಪತ್ರ

    ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು:
    ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಹೇಮಂತ್ ಸೊರೇನ್, ಎಂ.ಕೆ ಸ್ಟಾಲಿನ್‌, ನಿತೀಶ್ ಕುಮಾರ್, ಶರದ್ ಪವಾರ್, ಸುಪ್ರಿಯಾ ಸುಳೆ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಮೆಹಬೂಬಾ ಮುಫ್ತಿ, ಲಾಲು ಪ್ರಸಾದ್ ಯಾದವ್, ಡಿ. ರಾಜಾ, ಸೀತಾರಾಂ ಯೆಚೂರಿ, ಒಮರ್ ಅಬ್ದುಲ್ಲಾ ಮೊದಲಾದ ನಾಯಕರು ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?

    ಸಭೆಯ ಪ್ರಮುಖ ಅಜೆಂಡ ಏನು….?
    * 24 ಪಕ್ಷಗಳು ಸೇರಿ ಒಟ್ಟು 150 ಲೋಕಸಭಾ ಸದಸ್ಯರನ್ನ ಹೊಂದಿವೆ ಅದನ್ನ ಹೆಚ್ಚಿಸಿಕೊಳ್ಳುವುದು ಮೈತ್ರಿ ಕೂಟದ ಲೆಕ್ಕಾಚಾರ..
    * ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ ಸಾಧ್ಯತೆ
    * ಲೋಕಸಭಾ ಸೀಟು ಹಂಚಿಕೆ ಸಂಬಂಧವೂ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ.
    * 150 ಸ್ಥಾನಕ್ಕಿಂತ ಹೆಚ್ಚುವರಿ ಎಷ್ಟು ಸ್ಥಾನ ಗಳಿಸಬಹುದು ಎಂಬುದನ್ನ ಸಭೆಯಲ್ಲಿ ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡಲು ನಿರ್ಧಾರ
    * ಮೈತ್ರಿಕೂಟದ ನಾಯಕತ್ವ ಯಾರದ್ದು ಎಂಬುದು ಸಹಾ ತೀರ್ಮಾನ ಆಗುವ ಸಾಧ್ಯತೆ
    * ಪಾಟ್ನಾ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದು. ಈ ಬಾರಿ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]