Tag: Lok Sabha Elections

  • ನಾನು‌ ಪಕ್ಷದ ಶಿಸ್ತಿನ ಸಿಪಾಯಿ, ಬೆಂಗ್ಳೂರು ಉತ್ತರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ: ಅಶೋಕ್‌

    ನಾನು‌ ಪಕ್ಷದ ಶಿಸ್ತಿನ ಸಿಪಾಯಿ, ಬೆಂಗ್ಳೂರು ಉತ್ತರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ: ಅಶೋಕ್‌

    ಬೆಂಗಳೂರು: ಜಿಲ್ಲೆಯ ಉತ್ತರ ಲೋಕಸಭಾ ‌ಕ್ಷೇತ್ರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ. ನನ್ನ ಪುತ್ರ, ಕಾರ್ಯಕರ್ತ ಯಾರಿಗೆ ಟಿಕೆಟ್ ಕೊಟ್ಟರೂ ನಾನೂ ಕೆಲಸ ಮಾಡ್ತೀನಿ ಅಂತಾ ಮಾಜಿ ಸಚಿವ ಆರ್‌.ಅಶೋಕ್ ತಿಳಿಸಿದರು.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಲೋಕಸಭಾ ‌ಕ್ಷೇತ್ರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ. ನನ್ನ ಪುತ್ರ, ಕಾರ್ಯಕರ್ತ ಯಾರಿಗೆ ಟಿಕೆಟ್ ಕೊಟ್ಟರೂ ನಾನೂ ಕೆಲಸ ಮಾಡ್ತೀನಿ. ಹೈಕಮಾಂಡ್ ‌ನಿರ್ಧಾರಕ್ಕೆ ನಾನು ಬದ್ಧ. ನಾನು‌ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಾ ಸ್ಪಷ್ಟಪಡಿಸಿದರು.

    ಸದಾನಂದಗೌಡ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದಾನಂದಗೌಡ ಹಿರಿಯ ನಾಯಕರು, ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು. 6-7 ತಿಂಗಳಿಂದ ನಿವೃತ್ತಿ ಬಗ್ಗೆ ಮಾತಾಡುತ್ತಿದ್ದರು, ಈಗ ನಿರ್ಧಾರ ಮಾಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಹೈಕಮಾಂಡ್ ಸೇರಿ ಅವರಿಗೆ ಯಾರೂ ಒತ್ತಡ ಹಾಕಿಲ್ಲ. ಅವರೇ ಸ್ವಂತ ನಿರ್ಧಾರ ಮಾಡಿದ್ದಾರೆ ಎಂದರು.

    ಪಕ್ಷದ ವಿರುದ್ಧ ಅಸಮಾಧಾನಗೊಂಡಿರೋ ಸೋಮಶೇಖರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ‌ ಅವರು, ಸೋಮಶೇಖರ್ ಪಕ್ಷ ಬಿಟ್ಟು ಹೋಗಿಲ್ಲ ಅವರ ಜೊತೆ ನಾನೇ ಮಾತಾಡಿದ್ದೇನೆ. ಈಶ್ವರಪ್ಪ ಹೇಳಿದ್ದಕ್ಕೆ ನಾನು‌ ಹಾಗೆ ಹೇಳಿದೆ ಅಂತ ಸೋಮಶೇಖರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೋಮಶೇಖರ್‌ ಹೋಗಲ್ಲ ಅಂತ ಹೇಳಿದರು.

    ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂಬ ಡಿಕೆಶಿವಕುಮಾರ್ ‌ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಕಾಂಗ್ರೆಸ್ ನಲ್ಲಿ‌ ದೊಡ್ಡ ಗೊಂದಲ ಇದೆ. ಗೊಂದಲ‌ ಇರೋದಕ್ಕೆ ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿ ಸಭೆ ಮಾಡಿದ್ದು. ಅಧಿಕಾರಕ್ಕಾಗಿ ಸಿಎಂ, ಡಿಸಿಎಂ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನೂರಾರು ಗೊಂದಲ ಇದೆ. ಅದನ್ನ ಮುಚ್ಚಿ ಹಾಕಿಕೊಳ್ಳಲು ಆಪರೇಷನ್ ಕಮಲ ಅಂತ ಹೇಳ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ‌ಮಾಡ್ತಿಲ್ಲ, ಮಾಡೋದೂ ಇಲ್ಲ. ಕಾಂಗ್ರೆಸ್ ಬಳಿ ಆಪರೇಷನ್ ಕಮಲದ ಬಗ್ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ ಅಂತ ಸವಾಲ್ ಹಾಕಿದರು.

    ಲೋಕಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ. ಕಾಂಗ್ರೆಸ್ ‌ಶಾಸಕರು ಲೋಕಸಭೆ ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಫಲಿತಾಂಶ ಬಂದ ಮೇಲೆ ದೊಡ್ಡ ಬದಲಾವಣೆ ರಾಜ್ಯದಲ್ಲಿ ಆಗುತ್ತೆ ಅಂತ ಭವಿಷ್ಯ ನುಡಿದರು.

    ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ, ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡೋದು ಬಿಟ್ಟು ಬರ ಪರಿಹಾರ ಕೊಡಲಿ. ಬಿಜೆಪಿ‌ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೇ ಬರ ಪರಿಹಾರ ಕೊಟ್ಟಿತ್ತು. ಎರಡು ಪಟ್ಟು ಪರಿಹಾರ ಹೆಚ್ಚಳ‌ ಮಾಡಿದ್ದೆವು. ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಮೇಲೆ ನೊಣೆ ಬಿದ್ದಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಅದಕ್ಕೆ ಹಣ ಇಲ್ಲ. ಹೀಗಾಗಿ ಕೇಂದ್ರದ ಮೇಲೆ ಬೊಟ್ಟು ಮಾಡ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದರು.

    ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನದ ಆಯ್ಕೆ ಆದಷ್ಟು ಬೇಗ ಆಗಲಿದೆ. ಜೆಡಿಎಸ್ ಮೈತ್ರಿ ಮತ್ತು ಪಂಚರಾಜ್ಯ ಚುನಾವಣೆ ಬ್ಯುಸಿಯಿಂದ ಸ್ವಲ್ಪ ತಡ ಆಗಿದೆ. ಆದಷ್ಟು ಬೇಗ ಕೇಂದ್ರದ ನಾಯಕರು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದಾರೆ ಅಂತ ಸ್ಪಷ್ಟಪಡಿಸಿದರು.

  • ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಕಾಂಗ್ರೆಸ್‌ ಚಿಂತನೆ

    ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಕಾಂಗ್ರೆಸ್‌ ಚಿಂತನೆ

    ನವದೆಹಲಿ: ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ಬಳಿಕ, ಲೋಕಸಭಾ ಚುನಾವಣೆಗೂ (Lok Sabha Elections) ಮುನ್ನವೇ ಕಾಂಗ್ರೆಸ್‌ 2ನೇ ಹಂತದ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಡಿಸೆಂಬರ್‌ ತಿಂಗಳಿಂದ ಫೆಬ್ರವರಿ ನಡುವೆ ಯಾವುದೇ ಸಮಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

    ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲೇ 2ನೇ ಹಂತದ ಭಾರತ್ ಜೋಡೊ ಮುಂದುವರಿಯಲಿದ್ದು, ಹೈಬ್ರಿಡ್ ಮೋಡ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಕಾರ್ಯಕ್ರದಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಮೆರವಣಿಗೆ ಅಥವಾ ವಾಹನಗಳನ್ನು ಬಳಸಬಹುದಾಗಿದೆ. ಆದ್ರೆ ರಾಹುಲ್‌ ಗಾಂಧಿ ಈ ಮೊದಲಿನಂತೆ ಕಾಲ್ನಡಿಗೆಯಲ್ಲೇ ಯಾತ್ರೆ ಮಾಡಲಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಘೋಷಣೆ – ರಾಜ್ಯ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಜವಾಬ್ದಾರಿ ಹಂಚಿಕೆ

    ಭಾರತ್‌ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಿಂದ ಜನವರಿ 2023ರವರೆಗೂ ನಡೆಯಿತು. ತಮಿಳುನಾಡಿನ (TamilNadu) ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಸರಿಸುಮಾರು 4,080 ಕಿಮೀ ಗಳಷ್ಟು ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯನ್ನ ಮುಕ್ತಾಯಗೊಳಿಸಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳಲ್ಲಿ ಸಾಗಿತು, ಇದು ಭಾರತದ ಸುದೀರ್ಘ ಪಾದಯಾತ್ರೆಯಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಯಾತ್ರೆಯಲ್ಲಿ ಭಾಗವಹಿಸುವ ಇತರರು ಆಯಾ ರಾಜ್ಯಗಳಲ್ಲಿ ತಳಮಟ್ಟದ ಜನಸಂಖ್ಯೆಯೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಜನಾಂದೋಲನದ ಪ್ರಾಥಮಿಕ ಉದ್ದೇಶವು ಕಾಂಗ್ರೆಸ್‌ನಿಂದ ಪ್ರಚಾರ ಮಾಡಲ್ಪಟ್ಟಿದೆ. ಜನರ ಜೊತೆಗೆ ರಾಹುಲ್ ಗಾಂಧಿ ಅವರೂ ಸಹ ಸಂವಾದ ನಡೆಸಿ, ಸಮಸ್ಯೆಗಳನ್ನು ಆಲಿಸಿದ್ದರು. ಕೇಂದ್ರ ಸರ್ಕಾರದ ಆಡಳಿತ, ಬಿಜೆಪಿ ವಿಭಜಕ ರಾಜಕೀಯದ ವಿರುದ್ಧ ಭಾರತವನ್ನು ಒಂದುಗೂಡಿಸುವುದು. ನಿರುದ್ಯೋಗ ಮತ್ತು ಅಸಮಾನತೆಯಂತಹ ಇತರ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಬಗ್ಗೆ ರಾಹುಲ್ ಗಾಂಧಿ ಚರ್ಚಿಸಿದ್ದರು.

    ಕಳೆದ ಸೆಪ್ಟೆಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪಕ್ಷವು 2ನೇ ಹಂತದ ಭಾರತ್‌ ಜೋಡೋ ಯಾತ್ರೆ ಯೋಜಿಸುತ್ತಿದೆ. ಯೋಜನೆಯು ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ರಾಹುಲ್ ಗಾಂಧಿ ಅವರನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಕೇಜ್ರಿವಾಲ್ ಜೈಲಿಗೆ ಹೋದರೂ ಅವರೇ ಸಿಎಂ ಆಗಿ ಮುಂದುವರಿಯಬೇಕು: ದೆಹಲಿ ಸಚಿವೆ

  • ಕೇಂದ್ರದ ಬಿಜೆಪಿ ನಾಯಕರು ರಾಜ್ಯಕ್ಕೆ ಬರುತ್ತಿದ್ದದ್ದು ಕಲೆಕ್ಷನ್ ಮಾಡೋದಕ್ಕಾ – ಪರಮೇಶ್ವರ್ ಪ್ರಶ್ನೆ

    ಕೇಂದ್ರದ ಬಿಜೆಪಿ ನಾಯಕರು ರಾಜ್ಯಕ್ಕೆ ಬರುತ್ತಿದ್ದದ್ದು ಕಲೆಕ್ಷನ್ ಮಾಡೋದಕ್ಕಾ – ಪರಮೇಶ್ವರ್ ಪ್ರಶ್ನೆ

    ಬೆಂಗಳೂರು: ಬಿಜೆಪಿ (BJP) ಅಧಿಕಾರದಲ್ಲಿದ್ದಾಗ ಕೇಂದ್ರದ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದರು. ಅವರು ಕಲೆಕ್ಷನ್‌ ಮಾಡೋಕೆ ಬರ್ತಿದ್ರಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G. Parameshwara) ಪ್ರಶ್ನಿಸಿದರು.

    ಸುರ್ಜೇವಾಲ ಮತ್ತು ವೇಣುಗೋಪಾಲ್‌ (KC Venugopal) ಅವರು ಕಲೆಕ್ಷನ್ ಮಾಡಲು ಬಂದಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರ ತಿರುಗೇಟು ಕೊಟ್ಟ ಅವರು, ಬಿಜೆಪಿಯವರು ಅದನ್ನೇ ಹೇಳಬೇಕು. ಅದು ಬಿಟ್ಟು ಬೇರೇನು ಹೇಳಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರ ಕಾರ್ಯದರ್ಶಿಗಳು ರಾಜ್ಯಕ್ಕೆ ಬರ್ತಿದ್ದರು. ಹಾಗಾದ್ರೆ ಅವರೂ ಕಲೆಕ್ಷನ್ ಮಾಡೋಕೆ ಬರುತ್ತಿದ್ದರಾ? ಅವರು ಪದೇ ಪದೇ ಬರ್ತಿದ್ದರು. ಈಗ ನಾವು ಅವರೂ ಕೂಡ ಕಲೆಕ್ಷನ್‌ಗೆ ಬರ್ತಿದ್ದರು ಅಂತ ಹೇಳೋಣವಾ? ಅಂತ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಕ್ರಿಕೆಟ್‌ ದೇವರಿಗೆ ವಿಶೇಷ ಗೌರವ – ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್‌ ಪ್ರತಿಮೆ ಅನಾವರಣ

    ಬುಧವಾರ (ನ.1) ಸುರ್ಜೇವಾಲ ಮತ್ತು ವೇಣುಗೋಪಾಲ್ ರಾಜ್ಯಕ್ಕೆ ಬಂದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಗೆ (Lok Sabha Elections) ಆದಷ್ಟು ಬೇಗ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಬೇಕು ಅಂತ ಹೈಕಮಾಂಡ್ ಹೇಳಿರುವುದಾಗಿ ತಿಳಿಸಿದರು.

    ಸುರ್ಜೇವಾಲ ಮತ್ತು ವೇಣುಗೋಪಾಲ್ ಯಾರೂ ನಮ್ಮನ್ನ ಭೇಟಿ ಮಾಡಿಲ್ಲ. ಅಧ್ಯಕ್ಷರು ಮತ್ತು ಸಿಎಂ ಅವರನ್ನ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ಯಾವುದರ ಬಗ್ಗೆ ಅವರು ಚರ್ಚೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಲೋಕಸಭೆ ಸಂಭಾವ್ಯ ಅಭ್ಯರ್ಥಿ ಪಟ್ಟಿ ನೀಡಲು ವಿಳಂಬ ಆಗಿದೆ. ಆದಷ್ಟು ಬೇಗ ಸಂಭಾವ್ಯರ ಪಟ್ಟಿ ಕೊಡಬೇಕು ಅಂತ ನಿನ್ನೆ ಹೇಳಿದ್ದಾರೆ. ಅಧ್ಯಕ್ಷರು ಅದರ ಬಗ್ಗೆ ಗಮನ ಕೊಡ್ತಾರೆ ಎಂದರು. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    ಶಾಸಕರು ಬಹಿರಂಗವಾಗಿ ಮಾತಾಡಬಾರದು ಅನ್ನೋ ಹೈಕಮಾಂಡ್ ಸಂದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರು ಮಾತಾಡಬಾರದು ಅಂತ ಹೇಳಿದ್ದಾರೆ. ಸರ್ಕಾರದ ಪರ ಮಾತಾಡೋರು ಮಾತಾಡಬಹುದು. ಸರ್ಕಾರದ ವಿರುದ್ಧ, ಗೊಂದಲದ ಹೇಳಿಕೆ ಕೊಡಬಾರದು ಅಂತ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಾನು ಇದನ್ನ ನೋಡಿದ್ದೇನೆ. ನನಗೇನು ಅ ಬಗ್ಗೆ ಗೊತ್ತಿಲ್ಲ. ನಮ್ಮನ್ನ ಯಾರನ್ನು ಅವರು ಕರೆಸಿ ಮಾತಾಡಿಲ್ಲ ಅಂತ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‌ನಲ್ಲಿ 50 ಜನ ಸಿಎಂ ಅಭ್ಯರ್ಥಿಗಳಿದ್ದಾರೆ, ಯಾರು ಸಿಎಂ ಆದ್ರೂ ತಪ್ಪಿಲ್ಲ: ಚೆನ್ನಾರೆಡ್ಡಿ ಪಾಟೀಲ್

    ಕಾಂಗ್ರೆಸ್‌ನಲ್ಲಿ 50 ಜನ ಸಿಎಂ ಅಭ್ಯರ್ಥಿಗಳಿದ್ದಾರೆ, ಯಾರು ಸಿಎಂ ಆದ್ರೂ ತಪ್ಪಿಲ್ಲ: ಚೆನ್ನಾರೆಡ್ಡಿ ಪಾಟೀಲ್

    ಯಾದಗಿರಿ: ಕಾಂಗ್ರೆಸ್‌ನಲ್ಲಿ (Congress) 50 ಮಂದಿ ಸಿಎಂ ಅಭ್ಯರ್ಥಿಗಳಿದ್ದಾರೆ. ಯಾರೂ ಸಿಎಂ ಆದರೂ ತಪ್ಪಿಲ್ಲ ಎಂದು ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ (Channareddy Patil Tunnur) ತಿಳಿಸಿದ್ದಾರೆ.

    ಸತೀಶ್ ಜಾರಕಿಹೊಳಿ (Satish Jarakiholi) ಸಿಎಂ ಆದ್ರೆ ತಪ್ಪಿಲ್ಲ ಎನ್ನುವ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಶಾಸಕರು, 50 ಜನ ಸಿಎಂ ಆಗುವಂತ ಅಭ್ಯರ್ಥಿಗಳಿದ್ದಾರೆ, ಯಾರೂ ಸಿಎಂ ಆದ್ರೂ ತಪ್ಪಿಲ್ಲ. ಎಲ್ಲರಿಗೂ ಸಿಎಂ ಆಗುವ ಆಸೆ ಆಕಾಂಕ್ಷೆ ಇದ್ದೆ ಇರುತ್ತೆ. ಯಾರ್ಯಾರು ಪ್ರಯತ್ನ ಮಾಡ್ತಿದ್ದಾರೆ ಒಳಗೊಳಗೆ ಮಾಡ್ತಿರಬೇಕು. ಆದ್ರೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.

    ಇನ್ನೂ ಸರ್ಕಾರ ಬದಲಾವಣೆ ಮಾಡುವ ಶಕ್ತಿ ನಮಗಿದೆ ಎನ್ನುವ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿಕೆ ವಿಚಾರ ಕುರಿತು ಮಾತನಾಡಿ, ಅವರು ಜೋಶ್‌ನಲ್ಲಿ ಹೇಳಿರಬಹುದು. ಸಮಾಜ ಸಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂದು ಜಾರಿಕೊಂಡಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು!

    20 ತಿಂಗಳಲ್ಲಿ ಸಚಿವರು ಬದಲಾವಣೆ ಆಗ್ತಾರೆ ಎನ್ನುವ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ನನಗೆ ಅನ್ನಿಸಿದಂತೆ ವೈಯಕ್ತಿಕವಾಗಿ ಸಚಿವರ ಬದಲಾವಣೆ ಆಗುವುದಿಲ್ಲ. ಲೋಕಸಭೆ ಚುನಾವಣೆವರೆಗೂ ಬದಲಾವಣೆ ಇಲ್ಲ. ಆದ್ರೆ ಹೈಕಮಾಂಡ್ ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಅಂತಾ ಹೇಳಿದೆ. ಅದನ್ನು ನಾನೂ ಒಪ್ಪುತ್ತೇನೆ. ಆದ್ದರಿಂದ ಈ ಬಾರಿ ಹೊಸಬಹರಿಗೆ ಸಚಿವ ಸ್ಥಾನ ಸಿಗಬಹುದು. ಹೊಸಬರಿಗೆ ಅವಕಾಶ ಕೊಟ್ಟಷ್ಟೂ ಒಳ್ಳೆಯದಾಗುತ್ತದೆ. ಆದ್ರೇ ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 19 ಬಸ್ ಜೊತೆಗೆ ಲಕ್ಷ-ಲಕ್ಷ ಹಣವೂ ಬೆಂಕಿಗಾಹುತಿ ಆಯ್ತಾ? – ಪೊಲೀಸರು ಹೇಳಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುತ್ತಿಗೆದಾರರಿಂದ ಲೂಟಿ ಮಾಡಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಸರ್ಕಾರ – ವಿಜಯೇಂದ್ರ ವಾಗ್ದಾಳಿ

    ಗುತ್ತಿಗೆದಾರರಿಂದ ಲೂಟಿ ಮಾಡಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಸರ್ಕಾರ – ವಿಜಯೇಂದ್ರ ವಾಗ್ದಾಳಿ

    – ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾದರೂ ನಯಾ ಪೈಸೆ ಅನುದಾನ ಕೊಟ್ಟಿಲ್ಲ ಎಂದು ಶಾಸಕ ಕಿಡಿ

    ರಾಯಚೂರು: ಮಂತ್ರಿಗಳ ನೇತೃತ್ವದಲ್ಲಿ ಗುತ್ತಿದಾರರು ಮತ್ತು ಇತರ ಮೂಲಗಳಿಂದ ಲೂಡಿ ಮಾಡಿ ಚುನಾವಣೆಗೆ ಹಣ ಸಂಗ್ರಹಿಸುವ ಕೆಲಸವನ್ನು ರಾಜ್ಯ ಸರ್ಕಾರ (Government Of Karnataka) ಮಾಡುತ್ತಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ.

    ರಾಯಚೂರಿನ (Raichur) ಲಿಂಗಸುಗೂರಿನಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ಶರನ್ನವರಾತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳು ಕಳೆದಿದೆ. ಆದರೆ ಈವರೆಗೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

    ಎಲ್ಲರೂ ಗ್ಯಾರಂಟಿ (Congress Guarantee) ಕಡೆಗೆ ತೋರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ರೈತರು ಪರದಾಡುತ್ತಿದ್ದಾರೆ, ಬರಗಾಲ ಪರಸ್ಥಿತಿಯಿದೆ. ರಾಜ್ಯ ಸರ್ಕಾರ ಎಚ್ಚೆತ್ತು ಹೊರರಾಜ್ಯದಿಂದ ವಿದ್ಯುತ್ ಖರೀದಿ ಮಾಡಿ ರೈತರಿಗೆ ಸ್ಪಂದಿಸಬೇಕು. ಆದ್ರೆ ಇದು ರೈತರ ಬಗ್ಗೆ ಕಾಳಜಿಯಿಲ್ಲದ ಸರ್ಕಾರ, ಬರಗಾಲದಲ್ಲೂ ಅದೇ ರೀತಿ ಮುಂದುವರಿದಿರುವುದು ದುರದೃಷ್ಟ. ಬರಗಾಲದ ಸಂದರ್ಭದಲ್ಲೂ ಮಂತ್ರಿಗಳಿಗೆ ಹೊಸ ಕಾರು ಖರೀದಿ ಮಾಡುತ್ತಿದ್ದಾರೆ. ರಾಜ್ಯದ ಜನ ನರಳಾಡುತ್ತಿರುವಾಗ ಸರ್ಕಾರದ ಇಂತಹ ವರ್ತನೆ ಖಂಡನೀಯವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೆಚ್ಚು ಅಭಿಮಾನಿಗಳನ್ನು ಗಳಿಸುವ ಹುಚ್ಚು – 5 ಮಕ್ಕಳ ತಾಯಿಯಾಗಿದ್ದ ಬಾಡಿ ಬಿಲ್ಡರ್ ಮಹಿಳೆ ಸಾವು

    ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತರ ಶಕ್ತಿಯ ಮೇಲೆ ನಿಂತಿರುವ ಪಕ್ಷ. ಯಾರೋ ಒಬ್ಬರು ಇಬ್ಬರು ನಾಯಕರು ಪಕ್ಷ ಬಿಟ್ಟು ಹೋದರೆ ಹಿನ್ನಡೆಯಾಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಗೆಲ್ಲುವ‌ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಐಟಿ ದಾಳಿಯಾದಾಗ ನೂರಾರು ಕೋಟಿ ರೂಪಾಯಿ ಹಣ ಸೀಜ್ ಮಾಡಿದ್ದಾರೆ. ಸಿಎಂ‌, ಡಿಸಿಎಂ ದಾಳಿಯನ್ನ ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಇದು ಸಿಎಂ ಸ್ವಾಗತ ಮಾಡಬೇಕಾದ ವಿಚಾರ. ಒಂದು ಕಡೆ ಕೊಳ್ಳೆಹೊಡೆಯುತ್ತಿರುವಂತ ಸರ್ಕಾರ ಇದು ಅಂತ ಜನರೇ ಮಾತನಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BJP-JDS ಮೈತ್ರಿಗೆ ಕೇರಳ ನಾಯಕರು ಒಪ್ಪಿದ್ದಾರೆ ಎಂದು ನಾನು ಹೇಳಿಲ್ಲ: ಹೆಚ್.ಡಿ ದೇವೇಗೌಡ

    BJP-JDS ಮೈತ್ರಿಗೆ ಕೇರಳ ನಾಯಕರು ಒಪ್ಪಿದ್ದಾರೆ ಎಂದು ನಾನು ಹೇಳಿಲ್ಲ: ಹೆಚ್.ಡಿ ದೇವೇಗೌಡ

    ತಿರುವನಂತಪುರಂ: ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ (BJP-JDS Alliance) ಕೇರಳ ನಾಯಕರು ಒಪ್ಪಿಕೊಂಡಿದ್ದಾರೆ ಎಂಬುದಾಗಿ ನಾನು ಹೇಳಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Deve Gowda) ಸ್ಪಷ್ಟನೆ ನೀಡಿದ್ದಾರೆ.

    ಕೇರಳ ನಾಯಕರು ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಸಹಮತ ಸೂಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿರುವುದಾಗಿ ಕೇಳಿಬಂದಿತ್ತು. ಆದ್ರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೇವೇಗೌಡರ ಹೇಳಿಕೆ ಸುಳ್ಳು ಮತ್ತು ಅಸಂಬದ್ಧ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ದೇವೇಗೌಡರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೇರಳ ನಾಯಕರು ಒಪ್ಪಿಕೊಂಡಿದ್ದಾರೆ ಎಂಬುದಾಗಿ ನಾನು ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

    ಸಿಪಿಎಂ ಕುರಿತ ನನ್ನ ಹೇಳಿಕೆಯ ಬಗ್ಗೆ ಕೆಲವು ಗೊಂದಲಗಳಿವೆ. ನನ್ನ ಕಮ್ಯುನಿಸ್ಟ್ ಸ್ನೇಹಿತರು ನಾನು ಹೇಳಿದ್ದನ್ನು ಅಥವಾ ನಾನು ಹೇಳಿದ ಸಂದರ್ಭವನ್ನು ತಪ್ಪಾಗಿ ಗ್ರಹಿಸಿದ್ದಾರೆ. ಕೇರಳದ CPM ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುತ್ತದೆ ಎಂದು ನಾನು ಹೇಳಿಲ್ಲ. ಕೇರಳದಲ್ಲಿ ನನ್ನ ಪಕ್ಷದ ಘಟಕವು 1/2 ರೊಂದಿಗೆ ಒಪ್ಪಿಕೊಂಡಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡರ ಹೇಳಿಕೆ ಸುಳ್ಳು: ಕೇರಳ ಸಿಎಂ

    ಕೇರಳ ಸಿಎಂ ಹೇಳಿದ್ದೇನು?
    ಪಿಣರಾಯಿ ವಿಜಯನ್ (Pinarayi Vijayan), ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೇರಳ ನಾಯಕರು ಒಪ್ಪಿಕೊಂಡಿದ್ದಾರೆ ಎಂಬ ದೇವೇಗೌಡರ ಹೇಳಿಕೆ ಸುಳ್ಳು ಮತ್ತು ಅಸಂಬದ್ಧ. ಅವರು ತಮ್ಮ ರಾಜಕೀಯ ಮೇಲಾಟಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಗಾದಿಯನ್ನು ಕೊಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷದ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: Cash for Query – ಪಾಸ್‌ವರ್ಡ್‌ ಶೇರ್‌ ಆಗಿತ್ತು: ಸಂಸದೆ ಮೊಯಿತ್ರಾ ಜೊತೆ ನಂಟು ಒಪ್ಪಿಕೊಂಡ ಉದ್ಯಮಿ

    ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ಗೆ (ಎಲ್‌ಡಿಎಫ್) ಜೆಡಿಎಸ್ ದೀರ್ಘಕಾಲದ ಮಿತ್ರಪಕ್ಷವಾಗಿದೆ. ರಾಷ್ಟ್ರೀಯ ನಾಯಕತ್ವವು ವಿಭಿನ್ನ ನಿಲುವು ಪ್ರಕಟಿಸಿದಾಗಲೂ ಎಲ್‌ಡಿಎಫ್‌ಗೆ ತಮ್ಮ ಬದ್ಧತೆ ಉಳಿಸಿಕೊಂಡಿದೆ. ಆದ್ರೆ ಜೆಡಿಎಸ್‌ನ ಆಂತರಿಕ ವಿಚಾರದಲ್ಲಿ ತಾನಾಗಲಿ, ಸಿಪಿಐ(ಎಂ) ಆಗಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು (Women’s Reservation Bill) ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಬೆನ್ನಲ್ಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

    7 ಲೋಕಸಭೆ ಕ್ಷೇತ್ರಗಳ ಪೈಕಿ ಮೀನಾಕ್ಷಿ ಲೇಖಿ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು 2ಕ್ಕೆ ಏರಿಸಲು ಚರ್ಚೆಗಳು ಆರಂಭಗೊಂಡಿವೆ. ಕಳೆದ ವರ್ಷ ನಡೆದ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯು 137 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷ 140 ಮಹಿಳೆಯರಿಗೆ ಟಿಕೆಟ್‌ ನೀಡಿ ಕೌಂಟರ್ ಕೊಟ್ಟಿತ್ತು. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    ದೆಹಲಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಸಭೆ ಚುನಾವಣೆಗೆ ಕೆಲಸ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪಕ್ಷದ ನಾಯಕತ್ವ ಉತ್ಸುಕವಾಗಿದೆ. ಆದರೆ ಎಲ್ಲವೂ ಗೆಲುವಿನ ಮಾನದಂಡದ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ (BJP) ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಂತದಲ್ಲಿ ನಾವು ಗಮನಾರ್ಹವಾದ ಅನುಯಾಯಿಗಳನ್ನು ಹೊಂದಿರುವ ದೆಹಲಿಯ ಸಕ್ರೀಯ ಪಕ್ಷದ ಕಾರ್ಯಕರ್ತರನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ

    ದೆಹಲಿಯಲ್ಲಿ 7 ಲೋಕಸಭೆ ಕ್ಷೇತ್ರಗಳಿದ್ದು, 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ನವದೆಹಲಿ ಕ್ಷೇತ್ರವನ್ನು ನಾಕ್ಷಿ ಲೇಖಿ, ಚಾಂದಿನಿ ಚೌಕ್ ಕ್ಷೇತ್ರವನ್ನು ಹರ್ಷವರ್ಧನ್, ಈಶಾನ್ಯ ದೆಹಲಿಯನ್ನು ನಟ-ರಾಜಕಾರಣಿ ಮನೋಜ್ ತಿವಾರಿ, ಪೂರ್ವದಿಂದ ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್, ವಾಯುವ್ಯ ದೆಹಲಿಯಿಂದ ಗಾಯಕ-ರಾಜಕಾರಣಿ ಹನ್ಸ್ ರಾಜ್ ಹನ್ಸ್, ಪಶ್ಚಿಮ ದೆಹಲಿಯಿಂದ ಜಾಟ್ ನಾಯಕ ಪರ್ವೆಸ್ ವರ್ಮಾ ಮತ್ತು ಗುಜ್ಜರ್ ನಾಯಕ ರಮೇಶ್ ಬಿಧುರಿ ದಕ್ಷಿಣ ದೆಹಲಿವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಮಹಿಳೆಯರಿಗೆ 2 ಸ್ಥಾನಗಳನ್ನು ಬಿಟ್ಟು ಕೊಡುವುದಾದರೆ ಓರ್ವ ಸಂಸದ ಕ್ಷೇತ್ರ ಬಿಟ್ಟುಕೋಡಬೇಕಾಗುತ್ತಿದೆ. ಕಳೆದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಕೊವೀಡ್ ಸಂದರ್ಭದಲ್ಲಿ ಕೆಲಸ‌ ಮಾಡಿದ್ದ ಆರೋಗ್ಯ ಸಚಿವ ಹರ್ಷವರ್ಧನ ರಾಜೀನಾಮೆ‌ ನೀಡಿದ್ದರು. ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ರಮೇಶ್ ಬಿಧುರಿ ಅವರ ನಿರಂತರ ವಿವಾದಗಳು ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿವೆ. ಹನ್ಸ್ ರಾಜ್ ಹನ್ಸ್ ಕೂಡ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ದೂರು ಬಿಜೆಪಿ ನಾಯಕತ್ವದ ಕಿವಿಗೆ ತಲುಪಿದೆ ಎಂದು ವರದಿಯಾಗಿದೆ. ಯಾರ ಕ್ಷೇತ್ರ ಖಾಲಿಯಾಗಲಿದೆ ಎನ್ನುವ ಕುತೂಹಲ ಮೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಸ್.ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿ.ಪಿ ಯೋಗೇಶ್ವರ್

    ಎಸ್.ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿ.ಪಿ ಯೋಗೇಶ್ವರ್

    ರಾಮನಗರ: ಎಸ್‌.ಟಿ ಸೋಮಶೇಖರ್‌ ಅವರು ಬಿಜೆಪಿಯಿಂದ (BJP) ಹೊರಹೋಗುವ ತೀರ್ಮಾನ ಮಾಡಿದ್ದರೇ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿಗೆ (BJP JDS Alliance) ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ವಿರೋಧ ವ್ಯಕ್ತಪಡಿಸಿದ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

    ಎಸ್.ಟಿ ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದಮೇಲೆ ಮಂತ್ರಿಯಾಗಿ ಪ್ರಬಲ ಖಾತೆ ಪಡೆದರು, ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರವಿಲ್ಲವೆಂದು ಹೀಗೆ ಮಾತನಾಡುತ್ತಾರೆ. ಡಿಕೆಶಿ (DK Shivakumar) ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು, ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದು ವೇಳೆ ಹೊರಹೋಗುವ ತೀರ್ಮಾನ ಮಾಡಿದ್ದರೆ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ. ಅಧಿಕಾರವಿದ್ದಾಗ ಅನುಭವಿಸಿ ಈಗ ಪಕ್ಷದ ವಿರುದ್ಧ ಮಾತನಾಡುವುದು ಶೋಭೆಯಲ್ಲ ಎಂದ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

    ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧವಿದ್ದ ಕ್ಷೇತ್ರ ಚನ್ನಪಟ್ಟಣ. ನಾವು, ಕುಮಾರಸ್ವಾಮಿ ವಿರುದ್ಧ ರಾಜಕೀಯ ಮಾಡಿಕೊಂಡು ಬಂದೆವು. ಆದ್ರೆ ಹೊಂದಾಣಿಕೆ ಅನ್ನೋದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು. ಹಾಗಾಗಿ ಮೈತ್ರಿಯ ಅನಿವಾರ್ಯತೆ ಏನೆಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡೂ ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!

    ಇನ್ನೂ ಮೈತ್ರಿಗೆ ಕಾರ್ಯಕರ್ತರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, 100% ಮೈತ್ರಿಗೆ ನಮ್ಮ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್‌ನ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ‌ ಎಂಎಲ್ಎ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹಾಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿಪಿವೈ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭಾ ಚುನಾವಣೆಗೆ ಸಂಸದ ಅನಂತ್‌ಕುಮಾರ್ ಹೆಗಡೆ ಬಿಜೆಪಿ ಅಭ್ಯರ್ಥಿ: ಕಾಗೇರಿ

    ಲೋಕಸಭಾ ಚುನಾವಣೆಗೆ ಸಂಸದ ಅನಂತ್‌ಕುಮಾರ್ ಹೆಗಡೆ ಬಿಜೆಪಿ ಅಭ್ಯರ್ಥಿ: ಕಾಗೇರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸಂಸದ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಈ ಬಾರಿ ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಅವರೇ ಮತ್ತೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿ ಆಗಲಿದ್ದಾರೆ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದ್ದಾರೆ.

    ಶಿರಸಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಗೆ (Lok Sabha Elections) ಹಾಲಿ ಸಂಸದ ಅನಂತ್‌ಕುಮಾರ್ ಹೆಗಡೆ ಅವರೇ ಅಭ್ಯರ್ಥಿಯಾಗಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ ಯಾರೇ ನಿಂತರು ಗೆಲ್ಲಿಸಿ ತರುತ್ತೇವೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿಯೇ ಮತಯಾಚನೆ ಮಾಡುತ್ತೇವೆ. ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು‌ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್‌ ಕಾರಿನ ಮೇಲೆ ಕುಳಿತು ಮಹಿಳೆಯ ಭರ್ಜರಿ ಡಾನ್ಸ್‌ – ರೀಲ್ಸ್‌ಗಾಗಿ ಕಾರು ಕೊಟ್ಟ ಅಧಿಕಾರಿ ಅಮಾನತು

    ಇದೇ ವೇಳೆ ಕಾವೇರಿ ಹೋರಾಟ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು. ಕನ್ನಡ ನಾಡಿನ ಹಿತ ಕಾಪಾಡಬೇಕು ಮತ್ತು ರಾಜ್ಯಕ್ಕೆ ನ್ಯಾಯ ಸಿಗಬೇಕು. ಬಿಜೆಪಿ-ಜೆಡಿಎಸ್ ಪಕ್ಷಗಳು ಸೇರಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದರಲ್ಲದೇ, ಕಾವೇರಿ ನೀರಿನ ವಿಚಾರದಲ್ಲಿ ಅಧಿಕಾರದ ದುರ್ಬಳಕೆಯಾಗುತ್ತಿದೆ. INDIA (ಇಂಡಿಯಾ) ಮೈತ್ರಿಗಾಗಿ ರಾಜ್ಯದ ಹಿತವನ್ನ ಬಲಿ ಕೊಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಧಗ ಧಗ – ಬೆಂಕಿ ನಂದಿಸಲು ಹರಸಾಹಸ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ಹಾಸನ: 2024ರ ಲೋಕಸಭಾ ಚುನಾವಣಾ (Lok Sabha Elections) ದೃಷ್ಟಿಯಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಹಾಸನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ (Cauvery Issue) ಸರ್ಕಾರ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ. ಟ್ರಿಬ್ಯೂನಲ್ (ನ್ಯಾಯಾಧಿಕರಣ) ಮುಂದೆ ನೀರಿಲ್ಲ ಅನ್ನುತ್ತಾರೆ, ಹೊರಗೆ ಬಂದು ಒಳಹರಿವು 10,000 ಕ್ಯೂಸೆಕ್ ಇದೆ ಅಂತ ಹೇಳ್ತಿದ್ದಾರೆ. CWRC ತೀರ್ಪು ಬರುವ ಮುಂಚೆಯೇ ಒಳಹರಿವಿನ ಬಗ್ಗೆ ಹೇಳ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತಮಿಳುನಾಡಿನವರಿಗೆ ಕೀ ಕೊಟ್ಟು ಇವರು ಏನು ತೀರ್ಮಾನ ಮಾಡ್ತಾರೆ? ಕುಡಿಯಲು ನೀರಿಲ್ಲ ಎಂದು ಜನ ದಂಗೆ ಏಳುತ್ತಿದ್ದಾರೆ. 4 ತಿಂಗಳು ಗ್ಯಾರಂಟಿ ಕೊಡಲು ಹೋಗಿ ನೀರು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ಕಡೆ ಗ್ಯಾರಂಟಿ ಕೊಡಲು ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ರಾಜ್ಯದ ಹಿತದೃಷ್ಟಿಯಿಂದ, ನೆಲ-ಜಲಕ್ಕೋಸ್ಕರ ಯಾವುದೇ ಸಂಘಟನೆ ಬಂದ್ ಮಾಡಿದ್ರು ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

    ಅಲ್ಲದೇ 135 ಶಾಸಕರು ಸಾಕಾಗಲ್ಲ ಅಂತ ಕೆಲವು ಪಕ್ಷಗಳ ಮುಖಂಡರನ್ನ ಸೆಳೆಯುವಲ್ಲಿ ಕೆಲವರು ಮಗ್ನರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಕರ್ನಾಟಕ ಸರ್ಕಾರ, ತಮಿಳುನಾಡಿನ ಸರ್ಕಾರದ ಪಾದಕ್ಕೆ ರಾಜ್ಯವನ್ನ ಅಡ ಇಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನೀರಿನ ವಿಚಾರದಲ್ಲಿ `ಆಪರೇಷನ್ ಐಎನ್‌ಡಿಐಎ’ ಮಾಡುತ್ತಿದೆ. ಇದರಿಂದ ಕರ್ನಾಟಕದ ರೈತರ ಮನೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಜೊತೆ ಸೇರಿದರೂ ನಮ್ಮ ಸಿದ್ಧಾಂತ ಬಿಡಲ್ಲ. ಕಾಂಗ್ರೆಸ್‌ನವರು ಬೇಕಾದಾಗ ನಮ್ಮ ಹತ್ರ ಕೋಮುವಾದಿ ದೂರ ಇಡಬೇಕು ಅಂತ ಬರ್ತಾರೆ. ಅಧಿಕಾರ ಬಂದ ಮೇಲೆ ನಮ್ಮನ್ನ ಯಾವ ರೀತಿ ಟ್ರೀಟ್ ಮಾಡ್ತಿದ್ದಾರೆ ಎಂದು ಸಮಯ ಬಂದಾಗ ಹೇಳ್ತಿನಿ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]