Tag: Lok Sabha Elections

  • ಲೋಕಸಭಾ ಚುನಾವಣೆ ವೇಳೆ ಹಣ ದುರ್ಬಳಕೆ – ಹರಿಹರ ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್

    ಲೋಕಸಭಾ ಚುನಾವಣೆ ವೇಳೆ ಹಣ ದುರ್ಬಳಕೆ – ಹರಿಹರ ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್

    ದಾವಣಗೆರೆ: ಕಳೆದ ಲೋಕಸಭಾ ಚುನಾವಣೆ (Lok Sabha Elections) ವೇಳೆ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಹರಿಹರ ನಗರಸಭೆ ವ್ಯವಸ್ಥಾಪಕಿಯನ್ನು (Harihar Municipal Corporation) ಅಮಾನತುಗೊಳಿಸಲಾಗಿದೆ.

    ಹೆಚ್.ನಿರಂಜನಿ ಅಮಾನತಾದ ಅಧಿಕಾರಿಯಾಗಿದ್ದಾರೆ. ಇವರ ಮೇಲೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಹಣ ದುರುಪಯೋಗ ಮಾಡಿರುವ ಆರೋಪವಿದೆ. ಅಲ್ಲದೇ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ಇರುವುದು, ಸಾರ್ವಜನಿಕರ ಕೆಲಸ ಮಾಡದಿರುವುದು ಹಾಗೂ ಇನ್ನಿತರೆ ಕರ್ತವ್ಯ ಲೋಪ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ರಹೀಂ ಹತ್ಯೆ| ಇಬ್ಬರು ಪರಿಚಯಸ್ಥರು ಸೇರಿ 15 ಮಂದಿ ವಿರುದ್ಧ ಎಫ್‌ಐಆರ್‌

    ಹೊನ್ನಾಳಿಯ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ ಹಣ ದುರುಪಯೋಗವಾಗಿದೆ. ಹರಿಹರ ನಗರಸಭೆಯ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡ ಅವಧಿಯಲ್ಲಿಯೂ ಪ್ರಭಾರಿ ಕಂದಾಯ ಅಧಿಕಾರಿಯಾಗಿ ಬಿ ಖಾತಾ ವಿತರಣೆಯಲ್ಲಿ, ದಾಖಲೆ ಕೊಠಡಿ ನಿರ್ವಹಣೆಯಲ್ಲಿನ ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಹೀಂ ಹತ್ಯೆ| ಮಂಗಳೂರು-ಬಂಟ್ವಾಳ ರಸ್ತೆಯಲ್ಲಿರುವ ನೂರಾರು ಅಂಗಡಿಗಳು ಬಂದ್

  • ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

    ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

    ಜೈಪುರ: ಬಿಜೆಪಿ (BJP) ನಾಯಕ ಕಿರೋಡಿ ಲಾಲ್ ಮೀನಾ (Kirodi Lal Meena) ಅವರು ರಾಜಸ್ಥಾನ (Rajasthan) ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷವು ತನ್ನ ಉಸ್ತುವಾರಿಯ ಕ್ಷೇತ್ರಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

    ಕಿರೋಡಿ ಮೀನಾ ಅವರು 10 ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ಕೃಷಿ, ಗ್ರಾಮೀಣಾಭಿವೃದ್ಧಿ, ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರಾಗಿ ಕ್ಯಾಬಿನೆಟ್ ಖಾತೆಯನ್ನು ಹೊಂದಿದ್ದ ಮೀನಾ ಅವರು, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ ಏಳು ಸ್ಥಾನಗಳಲ್ಲಿ ಬಿಜೆಪಿ ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಾಗ್ದಾನ ಮಾಡಿದ್ದರು.

    ಪೂರ್ವ ರಾಜಸ್ಥಾನದ ದೌಸಾ, ಭರತ್‌ಪುರ, ಧೋಲ್‌ಪುರ್, ಕರೌಲಿ, ಅಲ್ವಾರ್, ಟೋಂಕ್-ಸವಾಯಿ ಮಾಧೋಪುರ್ ಮತ್ತು ಕೋಟಾ-ಬುಂಡಿಯಲ್ಲಿ ಪ್ರಚಾರ ಮಾಡಿದ್ದರು. ಈ ಪೈಕಿ ಕೋಟಾ ಮತ್ತು ಅಲ್ವಾರ್ ಲೋಕಸಭಾ ಸ್ಥಾನಗಳನ್ನು ಮಾತ್ರ ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದನ್ನೂ ಓದಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಹೆಚ್‍ಡಿಕೆಗೆ ಸ್ಥಾನ

  • ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ, ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ: ಸಿಎಂ

    ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ, ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ: ಸಿಎಂ

    ಬೆಂಗಳೂರು: ಈ ಚುನಾವಣೆಯಿಂದ ರಾಹುಲ್ ಗಾಂಧಿ (Rahul Gandhi) ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಆದ್ರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

    ಬೆಂಗಳೂರಿನ (Bengaluru) ಗೃಹಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ ರಾಜ್ಯದಲ್ಲಿ ಚುನಾವಣೆ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ ಅಧಿಕಾರಿಗಳು ಮತ್ತು ರಾಜ್ಯದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

    ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ನಿರೀಕ್ಷೆ ಮಾಡಿದ ಸ್ಥಾನಗಳನ್ನು ಗೆಲ್ಲಲು ಆಗಲಿಲ್ಲ. 15-20 ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರ ಇತ್ತು. ನಮ್ಮ ಲೆಕ್ಕಾಚಾರದಂತೆ ಆಗಲಿಲ್ಲ. ಆದರೆ 2019 ರಲ್ಲಿ ನಾವು ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ವೋಟಿಂಗ್ ಶೇರ್ ಸಹ ನಮಗೆ 45.34% ಬಂದಿದೆ. ಬಿಜೆಪಿಗೆ 46.04% ವೋಟ್ ಶೇರ್ ಬಂದಿದೆ. 2019ರಲ್ಲಿ ಅವರಿಗೆ 51.38%, ನಮಗೆ 31.88% ಬಂದಿತ್ತು. ಈ ಬಾರಿ ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ (BJP JDA Alliance) ವೋಟ್ ಶೇರ್ ಕಡಿಮೆ ಬಂದಿದೆ. ಜೆಡಿಎಸ್ 5.72% ವೋಟ್ ಶೇರ್ ಪಡೆದಿದೆ. ಕಳೆದ ಸಲ ಜೆಡಿಎಸ್‌ಗೆ 9.67% ವೋಟ್ ಶೇರ್ ಸಿಕ್ಕಿತ್ತು ಎಂದು ವಿವರಿಸಿದರು.

    ಮೋದಿ ಜನಪ್ರಿಯತೆ ಕುಗ್ಗಿದೆ:
    ಬಿಜೆಪಿ ಅಧಿಕಾರದಲ್ಲಿದೆ ಅಂತ ಮೋದಿ ಅವರ ಮುಖ ನೋಡಿ ಮತ ಕೇಳುತ್ತಿದ್ದರು. 2019ರಲ್ಲಿ ಬಿಜೆಪಿಗೆ 303 ಸ್ಥಾನ ಬಂದಿತ್ತು. 2014ರಲ್ಲಿ 282 ಸ್ಥಾನ ಪಡೆದಿತ್ತು. ಈ ಸಲ 246 ಸ್ಥಾನಗಳನ್ನ ಬಿಜೆಪಿಗೆ ಗೆದ್ದಿದೆ. ಅಂದ್ರೆ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಎಲ್ಲಿಯೂ ಮೋದಿ ಅಲೆ ಇಲ್ಲ. ಮೋದಿ ಜನಪ್ರಿಯತೆ ಕುಗ್ಗಿದೆ ಅನ್ನೋದು ಫಲಿತಾಂಶ ನೋಡಿದಾಗ ಸ್ಪಷ್ಟವಾಗುತ್ತದೆ. ಸರ್ಕಾರ ಅವರು ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಬಹುಮತ ಬಿಜೆಪಿಗೆ ಬಂದಿಲ್ಲ ಎಂದು ಒತ್ತಿ ಹೇಳಿದರು.

    ದೇಶದಲ್ಲಿ ಮೋದಿ ಅಲೆ ಇಲ್ಲ ಅನ್ನೋದು ಗೊತ್ತಾಗಿಯೇ ಅವರು ಕೊನೆಕೊನೆಗೆ ಧರ್ಮ, ಜಾತಿ ಹೆಸರಲ್ಲಿ ಮತ ಕೇಳಲು ಶುರು ಮಾಡಿದರು. ಮುಸ್ಲಿಮರ ವಿರುದ್ಧ ನೇರ ವಾಗ್ದಾಳಿ ನಡೆಸಲು ಶುರು ಮಾಡಿದರು. ಸೋಲ್ತೀವಿ ಅಂತ ಗೊತ್ತಾಗಿಯೇ ಮೋದಿ ಇದೆಲ್ಲವನ್ನ ಮಾಡಿದರು. ಇದ್ಯಾವುದೂ ಕೈಗೂಡಲಿಲ್ಲ. ಕೋಮುವಾದ ಸುಳ್ಳುಗಳ ಮೇಲೆ ಮತ ಕೇಳಿದ್ದು ವರ್ಕೌಟ್ ಆಗಲಿಲ್ಲ ಎಂದು ತಿರುಗೇಟು ನೀಡಿದರು.

    ಬಿಜೆಪಿಗೆ ದೊಡ್ಡ ಹಿನ್ನಡೆ:
    ಒಟ್ಟಾರೆಯಾಗಿ ಈ ಚುನಾವಣೆಯಿಂದ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ, ನ್ಯಾಯ್ ಯಾತ್ರೆಗಳು ಕೈ ಹಿಡಿದಿವೆ. ಹಾಗಾಗಿಯೇ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸ್ಥಾನ ಬಂದಿವೆ. ಅದಕ್ಕಾಗಿ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

  • Elections Results: ಶಿವಮೊಗ್ಗದಲ್ಲಿ 4ನೇ ಬಾರಿಗೆ ರಾಘವೇಂದ್ರ ಜಯಭೇರಿ – ಠೇವಣಿ ಕಳೆದುಕೊಂಡ ಈಶ್ವರಪ್ಪ

    Elections Results: ಶಿವಮೊಗ್ಗದಲ್ಲಿ 4ನೇ ಬಾರಿಗೆ ರಾಘವೇಂದ್ರ ಜಯಭೇರಿ – ಠೇವಣಿ ಕಳೆದುಕೊಂಡ ಈಶ್ವರಪ್ಪ

    ಶಿವಮೊಗ್ಗ: ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಹೈವೋಲ್ಟೇಜ್‌ ಕ್ಷೇತ್ರವಾದ ಶಿವಮೊಗ್ಗದಲ್ಲಿ (Shivamogga) ಬಿ.ಎಸ್‌ ಯಡಿಯೂರಪ್ಪ ಅವರ‌ ಪುತ್ರ ಬಿ.ವೈ ರಾಘವೇಂದ್ರ (BY Raghavendra) ಗೆದ್ದು ಬೀಗಿದ್ದಾರೆ.

    7,78,721 ಮತಗಳನ್ನು ಪಡೆದುಕೊಂಡಿರುವ ರಾಘವೇಂದ್ರ ಅವರು 2,43,715 ಮತಗಳ ಅಂತರದಿಂದ 4ನೇ ಬಾರಿಗೆ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮಾವ ಖರ್ಗೆ ಸೋಲಿಗೆ ಸೇಡು ತೀರಿಸಿಕೊಂಡ ರಾಧಾಕೃಷ್ಣ ದೊಡ್ಡಮನಿ

    ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ (Geetha Shivarajkumar) 5,35,006 ಮತಗಳನ್ನ ಪಡೆದುಕೊಂಡು 2,43,715 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಇದು ಅವರ 2ನೇ ಸೋಲು ಸಹ ಆಗಿದೆ. ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಎಸ್‌ ಈಶ್ವರಪ್ಪ (KS Eshwarappa) ಕೇವಲ 30,050 ಮತಗಳನ್ನ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

    ಅಂಚೆ ಮತದಲ್ಲೂ ರಾಘವೇಂದ್ರಗೆ ಮೇಲುಗೈ:
    ಅಂಚೆ ಮತದಾನದಲ್ಲೂ ಮುನ್ನಡೆ ಕಾಯ್ದುಕೊಂಡ ಬಿ.ವೈ ರಾಘವೇಂದ್ರ ಅವರು ಒಟ್ಟು ಚಲಾವಣೆಯಾದ 5,199 ಮತಗಳ ಪೈಕಿ 2,290 ಮತಗಳನ್ನು ಪಡೆದುಕೊಂಡರು. ಇನ್ನೂ ಪ್ರತಿಸ್ಪರ್ಧಿ ಗೀತಾ ಶಿವರಾಜ್‌ ಕುಮಾರ್‌ 1,384 ಮತಗಳನ್ನು ಪಡೆದುಕೊಂಡರೆ, ಪಕ್ಷೇತರ ಅಭ್ಯರ್ಥಿ ಕೆ.ಎಸ್‌ ಈಶ್ವರಪ್ಪ ಕೇವಲ 91 ಮತಗಳನ್ನು ಪಡೆದರು. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌; ಜನರ ಹೃದಯ ಗೆದ್ದ ಡಾಕ್ಟರ್‌ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್‌?

    ಗೆಲುವಿನ ನಾಗಾಲೋಟ:
    2009ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ರಾಘವೇಂದ್ರ 4,82,783 ಮತಗಳನ್ನು ಪಡೆದು ಚೊಚ್ಚಲ ಗೆಲುವು ಕಂಡಿದ್ದರು. 2014ರಲ್ಲಿ ಬಿ.ಎಸ್‌ ಯಡಿಯೂರಪ್ಪ ಅವರು ಸ್ಪರ್ಧಿಸಿದ್ದಾರೂ, ಪುನಃ 2019ರಲ್ಲಿ ಕಣಕ್ಕಿಳಿದ ರಾಘವೇಂದ್ರ 7,29,872 ಮತಗಳಿಂದ ಗೆದ್ದಿದ್ದರು. ಇದಕ್ಕೂ ಮುನ್ನ 2018ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ 5,43,306 ಮತಗಳಿಂದ ಜಯಭೇರಿ ಬಾರಿಸಿದ್ದರು. ಇದೀಗ 2024ರಲ್ಲಿ ಗೆಲುವು ಸಾಧಿಸುವ ಮೂಲಕ ತವರು ಕೇತ್ರದಲ್ಲಿ 4ನೇ ಬಾರಿಗೆ ಗೆಲುವು ಸಾಧಿಸಿದ ಹೆಗ್ಗಳಿಗೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೊಸೆಗೆ ಗೆಲುವು

  • ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸೋಲು

    ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸೋಲು

    ದೊಡ್ಮನೆ ಸೊಸೆ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಸೋಲು ಕಂಡಿದ್ದಾರೆ. ಶಿವಮೊಗ್ಗ (Shimoga) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ, ಪ್ರತಿ ಸ್ಪರ್ಧಿ ಬಿ.ವೈ ರಾಘವೇಂದ್ರ ಎದುರು ಸೋಲು ಒಪ್ಪಿಕೊಂಡಿದ್ದಾರೆ. ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ.

    ಬಾಲಿವುಡ್ ನಟಿ ಕಂಗನಾಗೆ ಗೆಲುವು

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ (Loksabha Election 2024) ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಂಗನಾ ರಣಾವತ್ (Kangana Ranaut) ಮೊದಲ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 70000 ಮತಗಳಿಂದ ನಟಿ ಗೆದ್ದಿದ್ದಾರೆ. ಮೂಲಕ ನಟಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಟಫ್ ಫೈಟ್ ಕೊಟ್ಟು ನಟಿ ಗೆದ್ದಿರೋದಕ್ಕೆ ನಟಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.‌

     

    ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆದ್ದಿದ್ದಾರೆ. ಅಂದಹಾಗೆ, ಲೋಕಸಭಾ ಚುನಾವಣೆ ಗೆದ್ದರೆ ಬಾಲಿವುಡ್ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಇದೀಗ ಚರ್ಚೆ ಶುರುವಾಗಿದೆ.

  • NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

    NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

    ನವದೆಹಲಿ: 2024ರ ಲೋಕಸಭಾ ಚುನಾವಣೆಯ (Lok Sabha Elections) ಮತ ಎಣಿಕೆಯಲ್ಲಿ ಸದ್ಯ ಎನ್‌ಡಿಎ ಹಾಗೂ ಇಂಡಿಯಾ (NDA vs I.N.D.I.A) ಒಕ್ಕೂಟದ ನಡುವೆ ಟಫ್‌ ಫೈಟ್‌ ಶುರುವಾಗಿದೆ.

    ಬೆಳಗ್ಗೆ 9:45ರ ವೇಳೆಗೆ ಎನ್‌ಡಿಎ 295, ಇಂಡಿಯಾ ಒಕ್ಕೂಟ 214 ಹಾಗೂ ಇತರೇ ಪಕ್ಷಗಳು 29 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ಅಂಚೆ ಮತದಾನದಲ್ಲಿ ಎನ್‌ಡಿಎ 304, ಇಂಡಿಯಾ ಕೂಟ 167, ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ

    ಉತ್ತರ ಪ್ರದೇಶದ (Uttar Pradesh) ಹೈವೋಲ್ಟೇಜ್‌ ಕ್ಷೇತ್ರಗಳಾಗಿದ್ದ ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರು ಸತತವಾಗಿ ಹಿನ್ನಡೆ ಅನುಭವಿಸಿದ್ದರೆ, ರಾಯ್‌ ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಯುಪಿನಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಗುಜಜರಾತ್‌, ರಾಜಸ್ಥಾನ, ಹರಿಯಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ಎನ್‌ಡಿಎ ಆರಂಭಿಕ ಮುನ್ನಡೆಯಲ್ಲಿದ್ದು, ಇಂಡಿಯಾ ಕೂಟ ಸಹ ಟಫ್‌ ಫೈಟ್‌ ನೀಡುತ್ತಿದೆ.

    ಕರ್ನಾಟಕದಲ್ಲಿ (Karnataka) ಬಿಜೆಪಿ 19, ಜೆಡಿಎಸ್‌ 3 ಹಾಗೂ ಕಾಂಗ್ರೆಸ್‌ 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಸಾಕ್ಷ್ಯಗಳಿದ್ದ 9 ಫೋನ್‌ ನಾಶ – ಸ್ಟಾರ್‌ ಹೋಟೆಲ್‌ನಲ್ಲಿ 10 ಲಕ್ಷ ರೂ. ಮೌಲ್ಯದ ರೂಮ್‌ನಲ್ಲಿ ವಾಸ!

  • `400 ಪಾರ್ vs 295′ – ಯಾರಾಗ್ತಾರೆ ಭಾರತದ ಅಧಿಪತಿ?

    `400 ಪಾರ್ vs 295′ – ಯಾರಾಗ್ತಾರೆ ಭಾರತದ ಅಧಿಪತಿ?

    – ಗೆಲ್ಲುವ ವಿಶ್ವಾಸ, ವಿಕಸಿತ ಭಾರತಕ್ಕೆ ಮೋದಿ ಕಾರ್ಯಸೂಚಿಯೂ ರೆಡಿ!

    ನವದೆಹಲಿ: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ (Lok Sabha Elections Result) ಮಂಗಳವಾರ ಹೊರಬೀಳಲಿದೆ. ಜೂನ್ 4ರ ಆ ಕ್ಷಣಕ್ಕಾಗಿ ಇಡೀ ದೇಶ ಕೌತುಕದಿಂದ ಕಾಯುತ್ತಿದೆ.

    ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆಲ್ಲಾ ದೆಹಲಿ ಗದ್ದುಗೆ ಯಾರ ಪಾಲಾಗಲಿದೆ? ಭಾರತ ದೇಶದ ಅಧಿಪತಿ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವೂ ಸಿಗಲಿದೆ. ಇದನ್ನೂ ಓದಿ: 40 ಜೀವಂತ ಗುಂಡುಗಳ ಸಮೇತ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟ ಕರುಣಾಸ್

    ಎಕ್ಸಿಟ್ ಪೋಲ್ (Exit Poll) ಅಂಕಿ ಅಂಶ ಹೊರಬೀಳುತ್ತಿದ್ದಂತೆ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ 100 ದಿನದ ಕಾರ್ಯಸೂಚಿಗಳನ್ನೂ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಇಂಡಿಯಾ ಒಕ್ಕೂಟ ಸಹ 295 ಸ್ಥಾನ ಬರೋದಂತೂ ಗ್ಯಾರಂಟಿ ಅಂತ ಹೇಳಿಕೊಂಡಿದೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ ಸುತ್ತ ಸೆಕ್ಷನ್‌ 144 ಜಾರಿ; ಡ್ರೋನ್‌ ಹಾರಾಟ, ಲೇಸರ್‌ ಲೈಟ್‌ ಚಟುವಟಿಕೆಗೂ ನಿಷೇಧ – ಕಾರಣ ಏನು?

    ಅಲ್ಲದೇ ಮಂಗಳವಾರ ಸಂಭ್ರಮಾಚರಣೆಯ ರೂಪು-ರೇಷೆಗಳ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ನಿವಾಸದಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಿದೆ. ಅಷ್ಟೇ ಅಲ್ಲ, ಈಗಾಗಲೇ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಈಗಾಗಲೇ ಅನಧಿಕೃತವಾಗಿ ಸಿದ್ಧತೆಗಳನ್ನೂ ಆರಂಭಿಸಿದೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಪ್ರಧಾನಿ ಮೋದಿ ಮುಂದಿನ 125 ದಿನದ ಆಡಳಿತ ಹೇಗಿರಬೇಕೆಂಬ ಬಗ್ಗೆ ರೋಡ್ ಮ್ಯಾಪ್ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ಭಾನುವಾರ (ಜೂ.2) ಸರಣಿ ಸಭೆಗಳನ್ನೂ ನಡೆಸಿದ್ದಾರೆ.

    ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಯಾತ್ರೆ ಮುಗಿಸಿದ ಮೋದಿಯವರು ತಮ್ಮಲ್ಲಿ ಈಗ ಅನಂತ ಶಕ್ತಿ ಪ್ರವಹಿಸುತ್ತಿದೆ, ಹೊಸ ಸಂಕಲ್ಪಗಳಿಗೆ ದಾರಿ ತೋರಿಸುತ್ತಿದೆ ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ವಿಕಸಿತ ಭಾರತಕ್ಕಾಗಿ ಮುಂದಿನ 25 ವರ್ಷ ಕಷ್ಟ ಪಡೋಣ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಈ ಮೂಲಕ ತಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುವ ಅದಮ್ಯ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

    ಲೋಕಸಮರ ಗೆದ್ದರೇ ಮೋದಿಯ ಕಾರ್ಯಸೂಚಿ ಹೀಗಿದೆ..

    * ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ
    * ಒಂದು ದೇಶ ಒಂದು ಚುನಾವಣೆ ಪದ್ದತಿ ಜಾರಿ
    * ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯುವ ನಿಟ್ಟಿನಲ್ಲಿ ಕಾರ್ಯ
    * ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ಗೆ ಏರಿಕೆ ಮಾಡುವ ಗುರಿ
    * ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡುವ ಗುರಿ
    * ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಪಡೆಯಲು ಒತ್ತು
    * ದೇಶದ ಪ್ರಮುಖ ಪಾರಂಪರಿಕ ಧಾರ್ಮಿಕ ಕೇಂದ್ರಗಳ ಪುನರುತ್ಥಾನ
    * ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ತರುವುದು
    * ಸೋರಿಕೆ ತಡೆಗೆ ರಾಜ್ಯಗಳ ಹಣಕಾಸು ಸ್ವಾಯತ್ತತೆ ಮೇಲೆ ನಿಯಂತ್ರಣ

  • ದೆಹಲಿ ಏರ್‌ಪೋರ್ಟ್‌ ಸುತ್ತ ಸೆಕ್ಷನ್‌ 144 ಜಾರಿ; ಡ್ರೋನ್‌ ಹಾರಾಟ, ಲೇಸರ್‌ ಲೈಟ್‌ ಚಟುವಟಿಕೆಗೂ ನಿಷೇಧ – ಕಾರಣ ಏನು?

    ದೆಹಲಿ ಏರ್‌ಪೋರ್ಟ್‌ ಸುತ್ತ ಸೆಕ್ಷನ್‌ 144 ಜಾರಿ; ಡ್ರೋನ್‌ ಹಾರಾಟ, ಲೇಸರ್‌ ಲೈಟ್‌ ಚಟುವಟಿಕೆಗೂ ನಿಷೇಧ – ಕಾರಣ ಏನು?

    ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಆವರಣದಲ್ಲಿ ಡ್ರೋನ್‌ ಹಾರಾಟ ಹಾಗೂ ಲೇಸರ್‌ ಕಿರಣಗಳ ಚಟುವಟಿಕೆಗಳನ್ನು ನಡೆಸದಂತೆ ದೆಹಲಿ ಪೊಲೀಸರು (Delhi Police) ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ಮುಂದಿನ ಪ್ರಧಾನ ಮಂತ್ರಿಗಳ (Prime Minister) ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಇರುವುದರಿಂದ ಏರ್‌ಪೋರ್ಟ್‌ನಲ್ಲಿ (Delhi Airport) ವಿವಿಐಪಿ ವಿಮಾನಗಳು ಚಲಿಸಲಿವೆ. ಆದ್ದರಿಂದ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆದೇಶವು ಜುಲೈ 30ರ ವರೆಗೆ ಜಾರಿಯಲ್ಲಿರುತ್ತದೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

    ಐಜಿಐ ವಿಮಾನ ನಿಲ್ದಾಣದಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಮತ್ತು ಲೇಸರ್‌ ಕಿರಣಗಳಿಂದ (Laser Beams) ಪೈಲಟ್‌ಗಳ ದೃಷ್ಟಿ ವಿಚಲಿತಗೊಳ್ಳುವ ಘಟನೆಗಳು ಬೆಳಕಿಗೆ ಬಂದಿವೆ. ವಿಮಾನಗಳ ಲ್ಯಾಂಡಿಂಗ್‌ ಸಂದರ್ಭದಲ್ಲಿ ಹೀಗೆ ಪೈಲಟ್‌ಗಳ ದೃಷ್ಟಿಯು ವಿಚಲಿತಗೊಳ್ಳವುದರಿಂದ ಸಿಬ್ಬಂದಿ ಹಾಗೂ ವಿಮಾನದ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

    ಅಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತ ಮನೆಗಳು, ಹೋಟೆಲ್‌ ರೆಸ್ಟೋರೆಂಟ್‌ಗಳು ಇದ್ದು, ಲೇಸರ್‌ ಹಾಗೂ ಲೈಟಿಂಗ್ಸ್‌ ಗಳನ್ನು ಬಳಸಲಾಗುತ್ತದೆ. ಇವು ಪೈಲಟ್‌ಗಳು ವಿಮಾನ ಲ್ಯಾಡಿಂಗ್‌ ಮಾಡುವ ಸಂದರ್ಭದಲ್ಲಿ ದೃಷ್ಟಿ ವಿಚಲನಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಲೇಸರ್‌ ಕಿರಣಗಳ ಬಳಕೆ ನಿಯಂತ್ರಿಸಲು ಯಾವುದೇ ಪರ್ಯಾಯ ಕ್ರಮಗಳು ಇಲ್ಲದ ಕಾರಣ, ಜೀವಹಾನಿ ಮತ್ತು ವಿಮಾನ ಸುರಕ್ಷತೆಗಳ ಕಾರಣಕ್ಕೆ ಲೇಸರ್‌ ಚಟುವಟಿಕೆಗಳಿಗೆ ನಿಷೇಧಾಜ್ಞೆ (Section 144) ವಿಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್

    ಡ್ರೋನ್‌ ಹಾರಾಟಕ್ಕೂ ನಿಷೇಧ:
    ವಿವಿಐಪಿಗಳ ಓಡಾಟ ಹೆಚ್ಚಾಗಿರುವ ಸಂದರ್ಭಗಳಲ್ಲಿ ಡ್ರೋನ್‌ಗಳು (Drones), ಪ್ಯಾರಾಗ್ಲೈಡರ್‌ ಹಾಗೂ ಮಾನವ ರಹಿತ ಡ್ರೋನ್‌ಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಮಾಹಿತಿಗಳು ಗುಪ್ತಚರ ಇಲಾಖೆಗೆ ಆಗಾಗ್ಗೆ ಬಂದಿವೆ. ಈ ಕಾರಣಗಳಿಂದ ವಿಮಾನ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಂದ ಡ್ರೋನ್‌ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಐಪಿಸಿ ಸೆಕ್ಷನ್‌ 188 ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಸಿದ್ದಾರೆ.

  • 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

    64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

    – ನಗದು, ಮದ್ಯ ಡ್ರಗ್ಸ್‌ ಸೇರಿ 10,000 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

    ನವದೆಹಲಿ: ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿಗೂ ಅಧಿಕ ಜನರು ಮತದಾನ ಮಾಡಿದ್ದು, ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission Of India) ತಿಳಿಸಿದೆ.

    2024ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನವೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಪಿ.ರಾಜೀವ್‌ ಕುಮಾರ್‌ (P Rajiv Kumar) ಈ ಬಾರಿ 64.2 ಕೋಟಿಗೂ ಅಧಿಕ ಮತದಾರರು (Voters) ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಮಹಿಳೆಯರೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ದೇಶಾದ್ಯಂತ 64.2 ಕೋಟಿಗೂ ಅಧಿಕ ಜನ ಹಕ್ಕು ಚಲಾಯಿಸಿದ್ದಾರೆ. ಇದು G7 ರಾಷ್ಟ್ರಗಳಿಗಿಂತ 1.5 ಪಟ್ಟು ಹಾಗೂ 27 ಯುರೋಪಿಯನ್‌ ರಾಷ್ಟ್ರಗಳಿಗಿಂತಲೂ (European Nations) 2.5 ಪಟ್ಟು ಹೆಚ್ಚಾಗಿದೆ. ಅಲ್ಲದೇ ದೇಶದಲ್ಲಿ 31 ಕೋಟಿ ಮಹಿಳಾ ಮತದಾರರು ಮತ ಚಲಾಯಿಸಿದ್ದು, ಇದೇ ಮೊದಲಬಾರಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಪಿ.ರಾಜೀವ್‌ ಕುಮಾರ್‌ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಆಯೋಗದ ಅಧಿಕಾರಿಗಳು ಎದ್ದುನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.

    2024ರ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಣೆಗೆ ಸುಮಾರು 4 ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ. 39 ಕೇಂದ್ರಗಳಲ್ಲಿ ಮಾತ್ರವೇ ಮರುಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರವು ಕಳೆದ 4 ದಶಕಗಳಲ್ಲಿ ದಾಖಲೆಯ ಶೇ.58.58 ಮತ್ತು ಕಾಶ್ಮೀರದಲ್ಲಿ ಶೇ.51.05 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ಈ ಬಾರಿ ಡ್ರಗ್ಸ್‌, ನಗದು, ಚಿನ್ನಾಭರಣ ಸೇರಿ ದಾಖಲೆಯ 10,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ಇದರ ಪ್ರಮಾಣ 3,500 ಕೋಟಿ ರೂ.ಗಳಷ್ಟಿತ್ತು.

  • `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್‌’ ಖಾತೆ ಮಾಡಿಸಲು ಮಹಿಳೆಯರ ಕ್ಯೂ

    `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್‌’ ಖಾತೆ ಮಾಡಿಸಲು ಮಹಿಳೆಯರ ಕ್ಯೂ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ (GPO) ಕಳೆದ ಎರಡು ದಿನಗಳಿಂದ ಬೆಳ್ಳಂ ಬೆಳಗ್ಗೆ ಆಗಮಿಸಿ ಅಂಚೆ ಖಾತೆ ತೆರೆಯಲು ಮುಗಿಬಿದ್ದಿದ್ದರು.

    ಪ್ರತಿ ತಿಂಗಳು ಖಾತೆಗೆ 8 ಸಾವಿರ ರೂ. ಹಣ ಜಮೆಯಾಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಮಹಿಳೆಯರು ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (IPPB) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆ ಬೆಂಗಳೂರು ಕಚೇರಿಯಲ್ಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಅಕೌಂಟ್‌ (Post Office Accounts) ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು. ಇದರಿಂದ ಮಹಿಳೆಯರು ಪೋಸ್ಟ್‌ ಆಫೀಸ್‌ಗಳಿಗೆ ಮುಗಿ ಬಿದ್ದಿದ್ದರು.

    ಎರಡು ವರ್ಷಗಳ ಹಿಂದೆಯೇ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಅಕೌಂಟ್‌ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಉಳಿತಾಯ ಖಾತೆಯಾಗಿರುತ್ತದೆ. ಆದರೆ ಈಗ ವದಂತಿ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಖಾತೆ ತೆರೆಯಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಖಾತೆ ಮಾಡಿಸಲು ದಾಂಗುಡಿಯಿಡುತ್ತಿದ್ದು, ಬೆಂಗಳೂರು ಅಂಚೆ ಕಚೇರಿ ಸಿಬ್ಬಂದಿ ಸಂಪೂರ್ಣ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಟೋಕನ್ ಪಡೆದು ಖಾತೆ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಚೇರಿ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಮಹಿಳೆಯರನ್ನ ಕೇಳಿದ್ರೆ `ಅಕ್ಕಪಕ್ಕದವರು ಅಕೌಂಟ್‌ಗೆ ಹಣ ಬರುತ್ತೆ ಅಂತ ಹೇಳಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಣ ನೀಡುತ್ತಾರಂತೆ. ಅದಕ್ಕಾಗಿ ಖಾತೆ ಮಾಡಿಸಲು ಕ್ಯೂನಲ್ಲಿ ನಿಂತಿದ್ದೇವೆ’ ಅಂತಾ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, 8,500 ರೂ. ಖಾತೆಗೆ ಬರುವ ಯಾವ್ದೇ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ, ಇದೆಲ್ಲವೂ ವದಂತಿ ಎಂದು ಹೇಳಿದ್ದಾರೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಅಂಚೆ ಕಚೇರಿ ಸಿಬ್ಬಂದಿಗೆ ಹೇಳಿದ್ದಾರೆ.