Tag: Lok Sabha Election 2024

  • ಅಮೇಥಿಯಿಂದ ಕಣಕ್ಕಿಳಿಯುತ್ತಾರ ರಾಬರ್ಟ್ ವಾದ್ರಾ? – ಕುತೂಹಲ ಮೂಡಿಸಿದ ಗಾಂಧಿ ಕುಟುಂಬದ ಅಳಿಯನ ಹೇಳಿಕೆ

    ಅಮೇಥಿಯಿಂದ ಕಣಕ್ಕಿಳಿಯುತ್ತಾರ ರಾಬರ್ಟ್ ವಾದ್ರಾ? – ಕುತೂಹಲ ಮೂಡಿಸಿದ ಗಾಂಧಿ ಕುಟುಂಬದ ಅಳಿಯನ ಹೇಳಿಕೆ

    ನವದೆಹಲಿ: ಸೋನಿಯಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ (Robert Vadra) ಈಗ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುತ್ತಾ ಅವರು ಪರೋಕ್ಷವಾಗಿ ಅಮೇಥಿಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

    ಐದು ಅವಧಿಗೆ ರಾಯ್‌ಬರೇಲಿ ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿನಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದರು. ಸದ್ಯ ವಯನಾಡಿನಿಂದ ಸ್ಪರ್ಧಿಸಿರುವ ಅವರು ಅಮೇಥಿಯಿಂದ (Amethi) ಸ್ಪರ್ಧಿಸುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗೀ ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿಕೊಂಡಿರುವ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಕಾರ್ಯಕರ್ತರ‌ ನಂಬಿಕೆ ಪ್ರಕಾರ ಸೋನಿಯಾ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ (Priyanka Gandhi), ಅಮೇಥಿಯಿಂದ ರಾಹುಲ್ ಗಾಂಧಿ ಮತ್ತೆ ಕಣಕ್ಕಿಳಿಬಹುದು ಎಂದು ಅಂದಾಜಿಸಲಾಗಿದೆ. ಈ ಲೆಕ್ಕಚಾರದ ನಡುವೆ ರಾಬರ್ಟ್ ವಾದ್ರಾ ಹೇಳಿಕೆ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

    ರಾಯ್ ಬರೇಲಿ ಅಥವಾ ಅಮೇಥಿಯನ್ನು ಪ್ರತಿನಿಧಿಸುವವರು ಜನರ ಪ್ರಗತಿ, ಅವರ ಭದ್ರತೆಗಾಗಿ ಕೆಲಸ ಮಾಡಬೇಕು. ತಾರತಮ್ಯದ ರಾಜಕೀಯವನ್ನು ಮಾಡಬಾರದು. ಅಮೇಥಿಯ ಜನರು ತಮ್ಮ ಪ್ರಸ್ತುತ ಸಂಸದರ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಾರೆ. ಹಾಲಿ ಸಂಸದೆ ಸ್ಮೃತಿ ಇರಾನಿ ಗಾಂಧಿ ಕುಟುಂಬ ಈ ಕ್ಷೇತ್ರದಿಂದ ದೂರ ಉಳಿಯಲಿ ಎಂದು ಬಯಸುತ್ತಿದ್ದಾರೆ. ಆದರೆ ಅಮೇಥಿ, ರಾಯ್‌ಬರೇಲಿ, ಸುಲ್ತಾನ್‌ಪುರ ಮತ್ತು ಜಗದೀಶ್‌ಪುರದ ಜನರಿಗಾಗಿ ಗಾಂಧಿ ಕುಟುಂಬವು ವರ್ಷಗಳಿಂದ ಶ್ರಮಿಸಿದೆ. ಗಾಂಧಿ ಕುಟುಂಬದ ಸದಸ್ಯರು ಕ್ಷೇತ್ರಕ್ಕೆ ಮರಳಬೇಕು ಎಂದು ಜನರು ಬಯಸುತ್ತಾರೆ. ಒಂದು ವೇಳೆ ನಾನು ಸಂಸತ್ತಿನ ಸದಸ್ಯನಾಗಲು ನಿರ್ಧರಿಸಿದರೆ ನಾನು ಅವರ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ಜನರು ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಜನ್ಮದಿನವೂ ಆಚರಿಸುತ್ತಾರೆ ಎಂದು ರಾಬರ್ಟ್‌ ವಾದ್ರಾ ಹೇಳಿದ್ದಾರೆ.

    ಈ ಮೂಲಕ ರಾಬರ್ಟ್ ವಾದ್ರಾ ತಮ್ಮ‌ ಬಯಕೆಯನ್ನು ಜನರ ಅಭಿಪ್ರಾಯದಂತೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಹೇಳಿಕೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಗೊತ್ತಿಲ್ಲ. ಈಗಾಗಲೇ ಕುಟುಂಬ ರಾಜಕೀಯದ ಆರೋಪದಿಂದ ಸೊರಗಿರುವ ಗಾಂಧಿ ಕುಟುಂಬ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನ ಮಾಡುತ್ತದೆಯೇ ಎಂಬುದು ಕುತೂಹಲದ ಸಂಗತಿ. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ

  • ಬರ ಪರಿಹಾರ ನೀಡಿ ಗಂಡಸ್ತನ ತೋರಿಸಿ: ಸಿಎಂಗೆ ಬೊಮ್ಮಾಯಿ ಸವಾಲ್

    ಬರ ಪರಿಹಾರ ನೀಡಿ ಗಂಡಸ್ತನ ತೋರಿಸಿ: ಸಿಎಂಗೆ ಬೊಮ್ಮಾಯಿ ಸವಾಲ್

    – ಸಿದ್ದರಾಮ್ಯಯಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ

    ಹಾವೇರಿ: ಕರ್ನಾಟಕದ ಜನತೆ ಸಿದ್ದರಾಮಯ್ಯನವರನ್ನ (Siddaramaiah) ಅಧಿಕಾರಕ್ಕೆ ತಂದಿದ್ದಾರೆ. ಯಾರು ಅಧಿಕಾರಕ್ಕೆ ತಂದಿದ್ದಾರೋ ಅವರು ಈಗ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವ ಕೆಲಸ ಅವರದ್ದು. ಪ್ರವಾಹ ಬಂದಾಗ ನಾವು ಯಾರನ್ನೂ ಕಾಯದೆ ಎರಡು ಬಾರಿ ಪರಿಹಾರ ನೀಡಿ ನಮ್ಮ ಗಂಡಸ್ತನ ನಾವು ತೋರಿಸಿದ್ದೇವೆ. ಈಗ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ (BJP ) ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ಸವಾಲು ಹಾಕಿದ್ದಾರೆ.

    ಹಾನಗಲ್‍ನ ಆಡೂರು ಗ್ರಾಮದಲ್ಲಿ ಮತಯಾಚನೆ ವೇಳೆ ಮಾತಾಡಿದ ಅವರು, ನಾವು 17 ಲಕ್ಷ ಜನರಿಗೆ ಪರಿಹಾರ ನೀಡಿದ್ದೇವೆ. ಪರಿಹಾರ ನೀಡುವಾಗ ನಾವು ಯಾರ ಕಡೆಗೂ ಬೊಟ್ಟು ಮಾಡಿ ತೋರಿಸಿಲ್ಲ. ಅದು ನಿಜವಾದ ಗಂಡಸ್ತನ. ಮೊದಲು ರೈತರಿಗೆ ಪರಿಹಾರ ಕೊಡಲಿ, ಆ ಮೇಲೆ ಕೇಂದ್ರದಿಂದ ಪರಿಹಾರ ಬಂದೆ ಬರುತ್ತದೆ. ರೈತರಿಗೆ ಪರಿಹಾರ ಕೊಡಲು ಖಜಾನೆ ಖಾಲಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ನಾವು ರಾಮನ ಹೆಸರು ಹೇಳುತ್ತೇವೆ. ರಾಮರಾಜ್ಯವನ್ನ ಮಾಡುತ್ತೇವೆ. ಕರ್ನಾಟಕಕ್ಕೆ ಬರುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಅನ್ನ ನೀಡಿದ್ದು ನರೇಂದ್ರ ಮೋದಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಅವರಿಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಎಸ್‍ಡಿಪಿಐ ಕಾಂಗ್ರೆಸ್ (Congress) ಹುಟ್ಟುಹಾಕಿದ ಮರಿ. ಕಾಂಗ್ರೆಸ್‍ನ ರಾಜಕಾರಣದಿಂದ ಉದ್ಭವಿಸಿದ ಮರಿ. ಅವರು ಅದಕ್ಕೆ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀವು ಕಣ್ಣು ಮುಚ್ಚುವುದರಿಂದ ಜಗತ್ತು ಕತ್ತಲೆಯಾಗುವುದಿಲ್ಲ: ಮಮತಾ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

  • ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಮೈತ್ರಿ (ಬಿಜೆಪಿ-ಜೆಡಿಎಸ್)‌ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್‌ (C.N.Manjunath) ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಆಸ್ತಿ ವಿವರ ಘೋಷಿಸಿಕೊಂಡಿದ್ದು, 98.36 ಕೋಟಿ ಆಸ್ತಿ ಒಡೆಯರಾಗಿದ್ದಾರೆ.

    ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2023-24 ರ ಹಣಕಾಸು ವರ್ಷದಲ್ಲಿ 1.57 ಕೋಟಿ ಆದಾಯ ಬಂದಿದೆ. ಅದರಲ್ಲಿ 42,847 ರೂ. ಕೃಷಿಯಿಂದ ಬಂದ ಆದಾಯ. ಡಾ.ಮಂಜುನಾಥ್‌ ಪತ್ನಿ ಅನುಸೂಯ 1,57,01,260 ಕೋಟಿ ರೂ. ಆದಾಯ ಹೊಂದಿದ್ದಾರೆ. ಇದನ್ನೂ ಓದಿ: 62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

    ಮಂಜುನಾಥ್‌ ಅವರ ಕೈಯಲ್ಲಿ 1,97,622 ರೂಪಾಯಿ ಇದೆ. 4ಕೋಟಿ ಮೌಲ್ಯದ ಒಟ್ಟು 6.79 ಕೆ.ಜಿ ಚಿನ್ನ ಹೊಂದಿದ್ದಾರೆ. 55 ಲಕ್ಷ ರೂ. ಮೌಲ್ಯದ ಎರಡು ಕಾರು ಹೊಂದಿದ್ದಾರೆ. ಒಟ್ಟು 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. 3.74 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.

    ಹೆಂಡತಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಅವರ ಪತ್ನಿ ಕೈಯಲ್ಲಿ 3,04,706 ರೂ. ಇದೆ. ಒಟ್ಟು 11.02 ಕೋಟಿ ರೂ. ಸಾಲ ಮಾಡಿದ್ದಾರೆ. 13 ಲಕ್ಷ ಬೆಲೆಬಾಳುವ ಒಂದು ಕಾರು ಹೊಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆ!

    ಮಂಜುನಾಥ್‌ ಅವರ ಅವಿಭಕ್ತ ಕುಟುಂಬದ ಹೆಸರಲ್ಲಿ 75 ಲಕ್ಷ ರೂ. ಚರಾಸ್ತಿ ಮತ್ತು 1.32 ಕೋಟಿ ಸ್ಥಿರಾಸ್ತಿ ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ.

  • ಈ ಲೋಕಸಭಾ ಚುನಾವಣೆ ಅಪ್ಪ, ಮಕ್ಕಳು, ಮಗಳು, ಅಳಿಯ ಅಂತಲೇ ಆಗಿದೆ: ಯತ್ನಾಳ್

    ಈ ಲೋಕಸಭಾ ಚುನಾವಣೆ ಅಪ್ಪ, ಮಕ್ಕಳು, ಮಗಳು, ಅಳಿಯ ಅಂತಲೇ ಆಗಿದೆ: ಯತ್ನಾಳ್

    – ಬೊಮ್ಮಾಯಿ ಬದಲು ನನ್ನ ಸಿಎಂ ಮಾಡಿದ್ರೆ 103 ಸೀಟು ಗೆಲ್ಲಿಸ್ತಿದ್ದೆ ಎಂದ ಬಿಜೆಪಿ ಶಾಸಕ

    ಕಾರವಾರ: ಬೊಮ್ಮಾಯಿ (Basavaraj Bommai) ಬದಲು ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ ರಾಜ್ಯದಲ್ಲಿ 103 ಸೀಟುಗಳನ್ನು ಗೆಲ್ಲಿಸುತ್ತಿದ್ದೆ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

    ಕುಮಟಾದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ರಾಜಕಾರಣಿಗಳನ್ನು ಎಂದೂ ಮುಗಿಸಲು ಸಾಧ್ಯವಿಲ್ಲ. ಈಶ್ವರಪ್ಪನವರು ಹೇಳುವ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ನಾನು ವಿರೋಧ ಪಕ್ಷದ ನಾಯಕನಾಗುವ ಎಲ್ಲಾ ಅರ್ಹತೆ ಇತ್ತು. ನನ್ನನ್ನು ಮಾಡಲಿಲ್ಲ, ನನಗೆ ಅಸಮಾಧಾನ ಇಲ್ಲ. ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಇಡೀ ದೇಶದಲ್ಲಿ ಬಿಜೆಪಿ ಮುಕ್ತವಾಗಲಿದೆ ಎಂದು ನನಗೆ ಹೈಕಮಾಂಡ್ ಭರವಸೆ ನೀಡಿದೆ. ಹಿಂದೂಪರ ಮಾತನಾಡುವವರಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂದಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಾವಾಗಲೋ ಆಗಬೇಕಿತ್ತು. ಸುಧಾಕರ್ ಹಿಂದೆ ಸಚಿವರಾಗಿದ್ದಾಗ ಶಾಸಕರಿಗೆ ಸ್ಪಂದಿಸುತ್ತಿರಲಿಲ್ಲ. ಹಲವು ಶಾಸಕರು ಕಣ್ಣೀರು ಹಾಕಿದ್ದಾರೆ. ಪಕ್ಷ ಅಂತಹ ತಪ್ಪಿನಿಂದ ಸೋತಿದೆ. ಅವರ ತಪ್ಪಿನಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ. ಕೆಲವು ನಿರ್ಣಯ ಮಾಡಬೇಕಿತ್ತು, ಮಾಡದ ಕಾರಣ ಸೋತಿದೆ. ರಾಜ್ಯದಲ್ಲಿ ಅಪ್ಪ, ಮಕ್ಕಳು, ಮಾವ, ಅಳಿಯ ಇವರೇ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳಾಗಿದ್ದಾರೆ. ನಮ್ಮ ಪಕ್ಷದಲ್ಲೂ ಹಾಗೇ ಆಗಿದೆ. ನಮ್ಮ ಮಗಳಿಗೆ ಕೊಟ್ಟಿಲ್ಲ, ನನ್ನ ಮಗನಿಗೆ ಕೊಟ್ಟಿಲ್ಲ, ನನ್ನ ಮಗ ಸಮರ್ಥನಿದ್ದ ಎಂದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ. ಈ ಲೋಕಸಭೆ ಚುನಾವಣೆ ಅಪ್ಪ, ಮಕ್ಕಳು, ಅಳಿಯ ಮಗಳು ಎಂದೇ ಆಗಿದೆ. ಲೋಕಸಭೆಗೆ ಕಾಂಗ್ರೆಸ್ ಸಚಿವರು ಒಬ್ಬರೂ ನಿಲ್ಲಲಿಲ್ಲ. ಸೋತರೆ ಮಂತ್ರಿ ಸ್ಥಾನ ಹೋಗುತ್ತದೆ ಎಂದು ಯಾರೂ ಸ್ಪರ್ಧಿಸಿಲ್ಲ ಎಂದಿದ್ದಾರೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಆದಾಗ, ಕೆಜೆಹಳ್ಳಿ, ಡಿಜಿಹಳ್ಳಿಯಲ್ಲಿ ಗಲಭೆಯಾದಾಗ, ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ನಾಲ್ಕು ಎನ್‍ಕೌಂಟರ್ ಮಾಡಿದ್ರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಹಿಂದೂ ಕಾರ್ಯಕರ್ತರು ನಿರಾಸಕ್ತಿ ತೋರಿಸಿದ್ದಕ್ಕೆ ನಾವು ಸೋತಿದ್ದೇವೆ ಎಂದು ಅವರು ಹೇಳಿದ್ದಾರೆ.

    ಪಕ್ಷಕ್ಕೆ ಮುಜುಗರವಾಗದ ರೀತಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಲೋಕಸಭಾ ಚುನಾವಣೆಯಲ್ಲಿ  (Lok Sabha Election 2024) 28 ಕ್ಷೇತ್ರಗಳಲ್ಲಿ ಗೆಲ್ಲುವುದು ನಮ್ಮೆಲ್ಲರ ಗುರಿ. ನಿಮ್ಮ ನಿಮ್ಮ ವೈಯಕ್ತಿಕ ವಿಚಾರ ಬಿಟ್ಟು ದೇಶದ ವಿಚಾರದಲ್ಲಿ ಮೋದಿಯವರ ವಿಚಾರದಲ್ಲಿ ನಾವೆಲ್ಲ ಕೂಡಿ ಕೆಲಸ ಮಾಡೋಣ ಎಂದು ನಾನು ಹೈಕಮಾಂಡ್ ಹಾಗೂ ಯಾರೆಲ್ಲ ಅಸಮಾನಿತರು ಇದ್ದಾರೋ, ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

  • ಅಮಿತ್ ಶಾ ಅಪೇಕ್ಷೆ ನಾನು ಚುನಾವಣೆಯಲ್ಲಿ ಸ್ಪರ್ಧಿಸೋದೆ ಆಗಿತ್ತು: ಈಶ್ವರಪ್ಪ

    ಅಮಿತ್ ಶಾ ಅಪೇಕ್ಷೆ ನಾನು ಚುನಾವಣೆಯಲ್ಲಿ ಸ್ಪರ್ಧಿಸೋದೆ ಆಗಿತ್ತು: ಈಶ್ವರಪ್ಪ

    ಶಿವಮೊಗ್ಗ: ಅಮಿತ್ ಶಾ (Amit Shah) ಅವರ ಅಪೇಕ್ಷೆ ನಾನು ಚುನಾವಣೆಗೆ (Lok Sabha Election 2024) ಸ್ಪರ್ಧಿಸೋದೆ ಆಗಿತ್ತು ಎಂದು ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ದೊಡ್ಡ ಮನುಷ್ಯರು ದೆಹಲಿಗೆ ಕರೆದಾಗ ಗೌರವ ಕೊಟ್ಟು ಹೋಗಿದ್ದೆ. ಬಿಜೆಪಿಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಅಮಿತ್ ಶಾ ಮನೆಗೆ ಹೋಗಲು ಹೇಳಿದ್ದರು. ಅಮಿತ್ ಶಾ ಮನೆಯಲ್ಲಿ ಇರಲಿಲ್ಲ. ಅವರು ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಬಳಿಕ ದೆಹಲಿಯಿಂದ ವಾಪಸ್ ಹೋಗೋದಾ ಎಂದು ಕೇಳಿದೆ. ಹೌದು ವಾಪಸ್ ಹೋಗು ಎಂದರು. ಅವರ ಅಭಿಪ್ರಾಯ ನಾನು ಬಂದು ಚುನಾವಣೆಗೆ ಸ್ಪರ್ಧಿಸುವುದೇ ಆಗಿತ್ತು. ಅದಕ್ಕೆ ನನ್ನನ್ನು ಅವರು ಭೇಟಿಯಾಗಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ

    ಕೇಂದ್ರದಲ್ಲಿ ಕುಟುಂಬ ರಾಜಕಾರಣ ಕಿತ್ತು ಒಗೆಯಬೇಕು ಅಂತಿದ್ದಾರೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಬೆಳೆಯುತ್ತಿದೆ. ಕುಟುಂಬ ರಾಜಕಾರಣ ಕಿತ್ತೊಗೆಯಬೇಕು. ಅನೇಕ ಹಿಂದುತ್ವ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಈ ಹಿಂದೆಯೇ ಅವರ ಜೊತೆ ಪ್ರಸ್ತಾಪ ಮಾಡಿದ್ದೆ. ನಾನು ಎಲ್ಲಾ ಅಂಶಗಳನ್ನು ಅವರ ಜೊತೆ ಚರ್ಚೆ ಮಾಡುವವನಿದ್ದೆ. ನನ್ನ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಇರಲಿಲ್ಲ. ಹೀಗಾಗಿಯೇ ಅವರು ನನ್ನ ಮನವೊಲಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

    ನಾನು ನನ್ನ ನಿರ್ಧಾರದಂತೆ, ಕಾರ್ಯಕರ್ತರು ಬೆಂಬಲಿಗರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇವನು ಚುನಾವಣೆಗೆ ನಿಲ್ಲೋದೇ ಸೂಕ್ತ ಎಂದು ಅವರಿಗೆ ಅನ್ನಿಸಿದೆ. ಅವರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಮಿತ್ ಶಾ ಕರೆದಾಗ ಏನು ಕೇಳ್ತಾರೆ? ಏನು ಉತ್ತರ ಕೊಡಬೇಕು ಎಂದು ತಯಾರಿ ಆಗಿದ್ದೆ. ಅಮಿತ್ ಶಾ ತುಂಬಾ ಚಾಣಕ್ಷ ನಿರ್ಧಾರ ಕೈಗೊಂಡಿದ್ದಾರೆ. ಅವರ ನಿರ್ಧಾರ ಸ್ವಾಗತಿಸುತ್ತೇನೆ. ಅವರ ನಿರ್ಧಾರ ಅಭಿನಂದಿಸುತ್ತೇನೆ ಎಂದಿದ್ದಾರೆ.

    Amith

    ಜನರು ಇಡೀ ರಾಜ್ಯದಿಂದ ನಾಮಪತ್ರ ವಾಪಸ್ ತೆಗೆದುಕೊಳ್ಳಬೇಡಿ ಎಂದು ಕರೆ ಮಾಡ್ತಿದ್ದಾರೆ. ಹಿರಿಯರು ಹೇಳಿದ್ರೆ ವಾಪಸ್ ಪಡೆಯುತ್ತಾರೆ ಎನ್ನುವ ಅನುಮಾನ ಕಾರ್ಯಕರ್ತರದ್ದು. ಭಗವಂತನ ನಿರ್ಣಯ ಸಹ ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದೇ ಇದೆ ಎನಿಸುತ್ತದೆ. ಇದಕ್ಕಾಗಿ ನಾನು ಭಗವಂತನಿಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ.

    ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿವೈವಿ ಷಡ್ಯಂತ್ರ ರಾಜಕಾರಣ ಮಾಡುತ್ತಿದ್ದಾರೆ. ಅವರ ಅಣ್ಣ ಸೋಲುವ ಭೀತಿ ಕಾಡುತ್ತಿದೆ. ಹೀಗಾಗಿಯೇ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಮುಂದೆ ಯಾರು ಮನವೊಲಿಸುವ ಪ್ರಯತ್ನ ಮಾಡಲ್ಲ. ವಿಜಯೇಂದ್ರ ಪದೇ ಪದೇ ಮನವೊಲಿಸುತ್ತಾರೆ ಎಂದರೆ, ನಾನು ಬೇರೆ ಭಾಷೆಯಲ್ಲಿ ಹೇಳಬೇಕಾಗುತ್ತದೆ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ.

    ರಾಜೇಶ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ದಾಸ್ ಅಗರ್ವಾಲ್ ನಮ್ಮ ಮನೆಗೆ ಬಂದಿದ್ದರು. ಅವರಿಗೆ ನನ್ನ ಎಲ್ಲಾ ಸಮಸ್ಯೆ ತಿಳಿಸಿದೆ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಡಿ ಎಂದರು. ನಾನು ಪಕ್ಷ ಶುದ್ಧೀಕರಣಕ್ಕಾಗಿ ಸ್ಪರ್ಧೆ ಮಾಡುತ್ತೇನೆ. ಯತ್ನಾಳ್ ನನ್ನ ಬೇಡಿಕೆ ಸರಿ ಇದೆ ಎಂದಿದ್ದು, ಅವರೆಲ್ಲಾ ಅಪೇಕ್ಷೆಯಂತೆ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ ಎಂದಿದ್ದಾರೆ.

    ಕಾಂಗ್ರೆಸ್‍ನಿಂದ ಕಣಕ್ಕಿಳಿದ ಗೀತಾ ಶಿವರಾಜ್‍ಕುಮಾರ್ ನನ್ನ ಸಹೋದರಿ ಇದ್ದ ಹಾಗೆ. ಅವರ ಬಗ್ಗೆ ಯಾವುದೇ ವಿರೋಧವಿಲ್ಲ. ಯಡಿಯೂರಪ್ಪ ಹಾಗೂ ಅವರ ಮಕ್ಕಳು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಈ ಬಾರಿಯೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಈ ಹೊಂದಾಣಿಕೆ ರಾಜಕಾರಣ ಕೊನೆಯಾಗಬೇಕು. ನನಗೆ ಮತದಾರರೇ ಸ್ಟಾರ್ ಪ್ರಚಾರಕರು ಎಂದಿದ್ದಾರೆ.

    ಮೋದಿ ಭಾವಚಿತ್ರ ಬಳಕೆ ವಿಚಾರವಾಗಿ, ಮೋದಿ ಏನು ಅವರಪ್ಪನ ಮನೆ ಆಸ್ತಿನಾ? ಮೋದಿ ವಿಶ್ವನಾಯಕ, ನನ್ನ ಎದೆ ಬಗೆದರೆ ಮೋದಿ ಕಾಣ್ತಾರೆ. ಅವರ ಎದೆ ಬಗೆದರೆ ಯಾರು ಕಾಣ್ತಾರೆ? ನಾನು ಗೆದ್ದ ನಂತರ ಮೋದಿಯವರಿಗೆ ಕೈ ಎತ್ತುವವನೇ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

  • ಕಡಿಮೆ ಅಂತರದ ಗೆಲುವು-ಸೋಲು ಕಂಡ ‘ಧೃವ’ ತಾರೆ! ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದ ಧೃವನಾರಾಯಣ್

    ಕಡಿಮೆ ಅಂತರದ ಗೆಲುವು-ಸೋಲು ಕಂಡ ‘ಧೃವ’ ತಾರೆ! ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದ ಧೃವನಾರಾಯಣ್

    ಮೈಸೂರು: ಮೈಸೂರು ಭಾಗದ ಜನರ ಮನಸ್ಸಿನಲ್ಲಿ ಧೃವತಾರೆ ಆಗಿರುವ ದಿವಂಗತ ಆರ್.ಧೃವನಾರಾಯಣ್ (R.Dhruvanarayana) ಸೋಲು ಮತ್ತು ಗೆಲುವು ಎರಡಲ್ಲೂ ದಾಖಲೆ ಬರೆದಿದ್ದಾರೆ.

    ಈಗ ರದ್ದಾಗಿರುವ ಸಂತೇಮರಹಳ್ಳಿ ಕ್ಷೇತ್ರದಿಂದ ಆರ್.ಧ್ರುವನಾರಾಯಣ 2004 ರಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಗೆದ್ದು ದಾಖಲೆ ಮಾಡಿದ್ದರು. ಅಲ್ಲಿಂದ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಿರಲಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ

    2008 ರಲ್ಲಿ ಕೊಳ್ಳೇಗಾಲದಿಂದ ಶಾಸಕರಾಗಿದ್ದರು. 2009 ಹಾಗೂ 2014 ರಲ್ಲಿ ಚಾಮರಾಜನಗರದಿಂದ ಸಂಸದರಾಗಿದ್ದರು. ಆದರೆ 2019 ರಲ್ಲಿ ಧ್ರುವನಾರಾಯಣ್, ಶ್ರೀನಿವಾಸಪ್ರಸಾದ್ ಎದುರು ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಅಂತರ ಅಂದರೆ 1,817 ಮತಗಳ ಅಂತರದಿಂದ ಸೋತಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನಿಂದ ತಪ್ಪಿಸಿಕೊಂಡಿದ್ದಾರೆ.

     

    ಇದೇ ಕ್ಷೇತ್ರದಲ್ಲಿ ಎ.ಸಿದ್ದರಾಜು 1996, 1998 ರಲ್ಲಿ ಗೆದ್ದು, 1999 ರಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್‌ನಿಂದ ತಪ್ಪಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಎಸ್.ಎಂ.ಸಿದ್ದಯ್ಯ ಮೊದಲ ಹ್ಯಾಟ್ರಿಕ್, ವಿ. ಶ್ರೀನಿವಾಸಪ್ರಸಾದ್ ನಂತರ ಹ್ಯಾಟ್ರಿಕ್ ಗೆಲವು ದಾಖಲಿಸಿದವರು. ಶ್ರೀನಿವಾಸಪ್ರಸಾದ್ ಹಾಗೂ ಎಸ್.ಎಂ. ಸಿದ್ದಯ್ಯ (ದ್ವಿಸದಸ್ಯ ಕ್ಷೇತ್ರ ಮೈಸೂರು ಸೇರಿ) ಅವರು ಸತತ ನಾಲ್ಕು ಗೆಲುವು ದಾಖಲಿಸಿದವರು. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!

  • ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು

    ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು

    – ಬಿಜೆಪಿ ಕಾರ್ಯಕರ್ತರಿಗೆ ಕನ್ನಡ ಭಾವುಟ ತೋರಿಸಿ ತೆರಳಿದ ಡಿಕೆಸು

    ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bengaluru Rural Constituency) ಬಿಜೆಪಿ (BJP) ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ (Dr.CN Manjunath) ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ, ಅಶ್ವಥ್ ನಾರಾಯಣ್, ಮುನಿರತ್ನ ಹಾಗೂ ಡಾ.ಮಂಜುನಾಥ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲು ತಡವಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೆರವಣಿಗೆ ರದ್ದು ಮಾಡಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಂಜುನಾಥ್ ಅವರಿಗೆ ಅವರ ಪತ್ನಿ ಅನುಸೂಯ, ಎಮ್.ಕೃಷ್ಣಪ್ಪ ಹಾಗೂ ಚಿಂತಕಿ ಸುಧಾ ಬರಗೂರು ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ: ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವ್ರದ್ದು: ನಿಖಿಲ್

    ಮೆರವಣಿಗೆ ರದ್ದಾಗಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಆಗಮಿಸಿ ಮಂಜುನಾಥ್ ಅವರನ್ನು ಬೆಂಬಲಿಸಿದ್ದರು.

    ಈ ವೇಳೆ ಮಾತನಾಡಿದ ಅವರು, ಕಾರ್ಯಕರ್ತರ ಉತ್ಸಾಹ ನೋಡಿದರೆ, ಗೆಲುವು ಖಚಿತ ಎನ್ನಿಸುತ್ತಿದೆ. ಅಮಿತ್ ಶಾ ಕೂಡಾ ಆಗಮಿಸಿ ನನ್ನ ಪರ ರೋಡ್ ಶೋ ಮಾಡಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಹೃದಯ ಒಂದಾಗಿದೆ. ನನ್ನ ಗೆಲುವಿಗಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಮತದಾರರು ಯಾವುದೇ ತಂತ್ರ, ಕುತಂತ್ರಕ್ಕೆ ಮಣೆ ಹಾಕುವುದಿಲ್ಲ. ಜನ ಬುದ್ಧಿವಂತರಿದ್ದಾರೆ, ಆಮೀಷಗಳಿಗೆ ಬಲಿಯಾಗದೇ ನನ್ನನ್ನ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಡಾ.ಮಂಜುನಾಥ್ ಒಳಗೆ ಹೋಗುತ್ತಿದ್ದಂತೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಡಾ.ಮಂಜುನಾಥ್, ಅಶ್ವಥ್ ನಾರಾಯಣ್, ಮುನಿರತ್ನ ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಅವರನ್ನು ನೊಡಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕಾರ್‍ನಿಂದ ಹೊರ ಬಂದು ಕೈ ಮುಗಿದು ಕನ್ನಡ ಭಾವುಟ ತೋರಿಸಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಟಿಕೆಟ್ ಮಿಸ್ – ಲೋಕ ಜನಶಕ್ತಿ ಪಕ್ಷದ 22 ನಾಯಕರು ರಾಜೀನಾಮೆ

  • ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ

    ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ

    – ರಾಘವೇಂದ್ರ ಸೋಲಿಸಬೇಕು ಎನ್ನುವುದು ಅಮಿತ್ ಶಾ ಅಪೇಕ್ಷೆ ಎಂದ ಈಶ್ವರಪ್ಪ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ. ಭೇಟಿಗೆ ಗೃಹ ಸಚಿವರು ಸಿಗದೇ ಹೋದದ್ದು, ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ.

    ಬುಧವಾರ ಈಶ್ವರಪ್ಪ ದೆಹಲಿಗೆ ಬಂದಾಗ, ಅಮಿತ್ ಶಾ ಕಚೇರಿಯಿಂದ ದೂರವಾಣಿ ಕರೆ ಬಂದಿತು. ಗೃಹ ಸಚಿವರು ಭೇಟಿಯಾಗುವುದಿಲ್ಲ ಎಂಬ ಸಂದೇಶ ನೀಡಲಾಯಿತು. ಈ ಹಿನ್ನೆಲೆ ಬೆಂಗಳೂರಿಗೆ ಮರಳಲು ಈಶ್ವರಪ್ಪ ನಿರ್ಧಾರ ಮಾಡಿದ್ದಾರೆ.

    ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಈಶ್ವರಪ್ಪ, ಅಮಿತ್ ಶಾ ಭೇಟಿಯಾದರೂ, ಭೇಟಿಯಾಗದಿದ್ದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗ ಅಮಿತ್ ಶಾ ಭೇಟಿಯಾದಿರುವುದು ಚುನಾವಣೆಗೆ ಸ್ಪರ್ಧಿಸಲು ಸಂದೇಶ ನೀಡದಂತೆ ಎಂದು ತಿಳಿಸಿದ್ದಾರೆ.

    ಅಮಿತ್‌ ಶಾ ಹೇಳಿದರು ಅಂತಾ ದೆಹಲಿಗೆ ಬಂದೆ. ಅವರು ಸಿಗಲ್ಲ ಅಂತಾ ಹೇಳಿದರು. ಈಶ್ವರಪ್ಪ ನಿಲ್ಲಲಿ, ರಾಘವೇಂದ್ರ ಸೋಲಿಸಬೇಕು ಎನ್ನುವುದು ಅಮಿತ್ ಶಾ ಆಪೇಕ್ಷೆ. ನಾನು ಮೋದಿ, ಅಮಿತ್ ಶಾ ಆಶೀರ್ವಾದದಿಂದ ಗೆಲ್ಲುತ್ತೇನೆ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು, ಮೋದಿ ಕೈ ಬಲಪಡಿಸುತ್ತೇನೆ ಎಂದು ಹೇಳಿದ್ದಾರೆ.

    ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದೆವು. ಬಿಎಸ್‌ವೈ ಬೆನ್ನು ತಟ್ಟುವ ಬದಲು ಅಮಿತ್ ಶಾ ದೂರು ನೀಡಿದರು. ಅಮಿತ್ ಶಾ ಮಾತು‌ ಕೇಳಿ ಸಂಘಟನೆ ನಿಲ್ಲಿಸಿದೆ. ಬಿಎಸ್‌ವೈ ಕುಟುಂಬಕ್ಕೆ ಒಂದು ನೀತಿ, ನಮಗೆ ಒಂದು ನೀತಿನಾ? ಅವರ ಮನೆಯಲ್ಲಿ ಸಂಸದ, ಶಾಸಕ, ರಾಜ್ಯಾಧ್ಯಕ್ಷ ಆಗಿದ್ದಾರೆ. ನಮ್ಮ‌ ಮನೆಯಲ್ಲಿ ಶಾಸಕನೂ ಇಲ್ಲ ಸಂಸದನೂ ಇಲ್ಲ. ನಾನು ಶಾಸಕರಾಗಿ ನನ್ನ ಮಗನಿಗೆ ಟಿಕೆಟ್ ಕೇಳ್ತಿಲ್ಲ. ಬಿಜೆಪಿಯಲ್ಲಿ ನೀತಿ ನಿಯಮದ ಪ್ರಕಾರ ನಡೆದುಕೊಂಡು ಬಂದಿದ್ದೇನೆ ಎಂದು ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದಾರೆ.

    ನಾನು ಈಗಾಗಲೇ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿದ್ದೇನೆ. ಆದರೆ ಬೇಡ ಎಂದು ಅವರು ಮನವಿ ಮಾಡಿದರು. ಗೃಹ ಸಚಿವರು ನೀವೂ ಸೂಚನೆ ಕೊಡಿ ಎಂದು ಮನವಿ ಮಾಡಿದೆ. ಬಳಿಕ ದೆಹಲಿಗೆ ಬಂದು ಭೇಟಿ ಮಾಡುವಂತೆ ಹೇಳಿದ್ದರು ಎಂದು ನಿನ್ನೆಯ ಸಂದರ್ಭ ಕುರಿತು ಮಾತನಾಡಿದ್ದಾರೆ.

  • ರಾಹುಲ್‌ ಗಾಂಧಿ ಕೈಯಲ್ಲಿದೆ 55,000 ಕ್ಯಾಶ್‌ – ‘ಕೈ’ ಸಂಸದನ ಆಸ್ತಿ ಎಷ್ಟು ಗೊತ್ತಾ?

    ರಾಹುಲ್‌ ಗಾಂಧಿ ಕೈಯಲ್ಲಿದೆ 55,000 ಕ್ಯಾಶ್‌ – ‘ಕೈ’ ಸಂಸದನ ಆಸ್ತಿ ಎಷ್ಟು ಗೊತ್ತಾ?

    ತಿರುವನಂತಪುರಂ: ವಯನಾಡ್ ಲೋಕಸಭಾ ಕ್ಷೇತ್ರಕ್ಕೆ (Wayanad) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ 9.24 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

    ನಾಮಿನೇಷನ್‌ಗಾಗಿ ಚುನಾವಣಾಧಿಕಾರಿಯ ಮುಂದೆ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ 2022-23 ರ ಹಣಕಾಸು ವರ್ಷದಲ್ಲಿ 1.02 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದಾರೆ. ಬಾಡಿಗೆ, ಸಂಸದರ ವೇತನ, ರಾಯಲ್ಟಿ ಆದಾಯ, ಬ್ಯಾಂಕ್‌ಗಳಿಂದ ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್ ಮತ್ತು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಿಂದ ಬಂಡವಾಳದ ಲಾಭವನ್ನು ಪಡೆಯುತ್ತಾರೆ ಎಂದು ಅಫಿಡವಿಟ್ ಹೇಳಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ – ವಯನಾಡ್‌ನಿಂದಲೇ ಸ್ಪರ್ಧೆ ಯಾಕೆ?

    ಮಾರ್ಚ್ 15 ರ ವೇಳೆಗೆ ತಮ್ಮ ಕೈಯಲ್ಲಿ 55,000 ರೂಪಾಯಿ ನಗದು, ಉಳಿತಾಯ ಖಾತೆಯಲ್ಲಿ 26 ಲಕ್ಷ ರೂಪಾಯಿ ಇದೆ ಎಂದು ರಾಹುಲ್ ಗಾಂಧಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸಂಸದ ಈಕ್ವಿಟಿ ಷೇರುಗಳಲ್ಲಿ 4.33 ಕೋಟಿ ರೂ. ಹೂಡಿಕೆ ಮಾಡಿದ್ದರೆ, 3.81 ಕೋಟಿ ರೂ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಾಣಿಜ್ಯ ಕಟ್ಟಡಗಳು, ಕೃಷಿಯೇತರ ಮತ್ತು ಕೃಷಿ ಭೂಮಿ ಸೇರಿದಂತೆ 11.15 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

    ಕೇರಳದ ಎಲ್ಲಾ 20 ಸಂಸದೀಯ ಕ್ಷೇತ್ರಗಳ ಜೊತೆಗೆ ವಯನಾಡ್‌ನಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್‌ ಸಿಂಗ್‌

    ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ರಾಹುಲ್ ಗಾಂಧಿ ಬೃಹತ್‌ ರೋಡ್‌ಶೋ ನಡೆಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸ್ವರೂಪವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

  • ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್‌ ಸಿಂಗ್‌

    ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್‌ ಸಿಂಗ್‌

    ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ವಾರಗಳು ಬಾಕಿ ಇರುವ ಹೊತ್ತಲ್ಲೇ ಕಾಂಗ್ರೆಸ್‌ಗೆ (Congress) ಮತ್ತೊಂದು ಆಘಾತ ಎದುರಾಗಿದೆ. ಬಾಕ್ಸರ್ ವಿಜೇಂದರ್ ಸಿಂಗ್ (Vijender Singh) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ದೆಹಲಿಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ (BJP) ಸೇರಿದ್ದಾರೆ. ಒಲಿಂಪಿಯನ್ 2019 ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. ದಕ್ಷಿಣ ದೆಹಲಿ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ವಿಫಲರಾಗಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋತಿದ್ದರು.

    ಮಥುರಾ ಕ್ಷೇತ್ರದಿಂದ ಮತ್ತೊಮ್ಮೆ ಅಭ್ಯರ್ಥಿಯಾಗಿರುವ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ 38ರ ಹರೆಯದ ಬಾಕ್ಸರ್‌ನನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿತ್ತು ಎನ್ನಲಾಗಿದೆ. ಆದರೆ ವಿಜೇಂದರ್‌ ಸಿಂಗ್‌ ಬಿಜೆಪಿ ಸೇರಿದ್ದು, ಹರಿಯಾಣ ಮತ್ತು ಪಶ್ಚಿಮ ಯುಪಿಯಲ್ಲಿ ಪ್ರಮುಖವಾಗಿರುವ ಜಾಟ್ ಸಮುದಾಯದ ಮತಗಳನ್ನು ಕ್ರೋಢೀಕರಿಸಲು ಬಿಜೆಪಿಗೆ ಈ ಕ್ರಮವು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಾಕ್ಸರ್ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರ ವ್ಯಾಪಕ ಪ್ರಚಾರ ನಡೆಸುವ ನಿರೀಕ್ಷೆಯಿದೆ.

    2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಸಿಂಗ್. ಅವರು 2006 ಮತ್ತು 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಮತ್ತು 2010 ರ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳನ್ನು ಮತ್ತು 2009 ರ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.

    ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಜೇಂದರ್ ಸಿಂಗ್‌ಗೆ ಪದ್ಮಶ್ರೀ, ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.