Tag: Lok Sabha Election 2024

  • ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

    ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

    – ಆದಿಚುಂಚನಗಿರಿ ಶ್ರೀಗಳನ್ನು ರಾಜಕೀಯಕ್ಕೆ ಎಳೆದು ತರಲ್ಲ, ಅವರ ಬಗ್ಗೆ ಗೌರವವಿದೆ

    ಬೆಂಗಳೂರು: ಪಾಪ ಕುಮಾರಸ್ವಾಮಿಯವರು (H.D Kumaraswamy) ಸ್ವಾಮೀಜಿಯವರ (Adichunchanagiri Sri) ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಆಪರೇಷನ್ ಮುಗಿದು ಹೋಗಿತ್ತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಯವರಿಗೂ ಒಕ್ಕಲಿಗ ಒಬ್ಬ ಸಿಎಂ ಆಗಿದ್ದಾನೆ ಎಂದು ಅಭಿಮಾನ ಇತ್ತು. ನಮಗೂ ಅಭಿಮಾನ, ನಿಮಗೂ ಅಭಿಮಾನ ಅಲ್ವಾ? ಅದಕ್ಕೆ ಯಾರು ಸರ್ಕಾರ ತೆಗೆದರೋ ಅವರನ್ನೇ ಜೊತೆಗೆ ಹಾಕಿಕೊಂಡು ಓಡಾಡಿದ್ರೆ ಹೇಗೆ ಎಂದು ಹೆಚ್‍ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024- ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಳೆ ನಾಮಪತ್ರ ಸಲ್ಲಿಕೆ

    ಚೆಲುವರಾಯಸ್ವಾಮಿ ಹಾಗೂ ಕೃಷ್ಣ ಭೈರೇಗೌಡರು ಸಹ ಸ್ವಾಮೀಜಿ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡರು. ಹಿರಿಯರ ಆಶೀರ್ವಾದ ಬೇಕಲ್ಲ, ಅದರಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಆಶೀರ್ವಾದ ಕೇಳಿದ್ರಲ್ಲಿ ತಪ್ಪಿಲ್ಲ. ಮಂಜುನಾಥ್ ಆಶೀರ್ವಾದ ಕೇಳಿದರೂ ತಪ್ಪು ಎಂದು ನಾನು ಹೇಳಲ್ಲ. ಬೆನ್ನಿಗೆ ಚೂರಿ ಹಾಕಿದ್ರಲ್ಲ ಅವರನ್ನು ಕರೆದುಕೊಂಡು ಹೋದ್ರೆ, ಯಾರು ಸರ್ಕಾರ ತೆಗೆದ್ರಲ್ಲ ಅವರನ್ನೆಲ್ಲ ಕರೆದುಕೊಂಡು ಹೋದ್ರೆ, ಸಮಾಜಕ್ಕೆ ಏನೆಂದು ಉತ್ತರ ಕೊಡ್ತಾರೆ ಎಂದು ಕುಟುಕಿದ್ದಾರೆ.

    ಎಸ್.ಟಿ ಸೋಮಶೇಖರ್ ಸ್ಥಳೀಯ ವಿಚಾರಗಳ ಮೇಲೆ ನಿಂತಿದ್ದಾರೆ. ಅವರನ್ನು ನಾನು ಇದುವರೆಗೆ ಕಾಂಗ್ರೆಸ್‍ಗೆ ಸೇರಿಸಿಕೊಂಡಿಲ್ಲ. ಯಾರು ಸರ್ಕಾರ ಬೀಳಿಸುವಾಗ ಕಾಂಗ್ರೆಸ್‍ನಿಂದ ಶಾಸಕರನ್ನು ಕಳಿಸಿದ್ದು ಎಂದು ಅಶ್ವತ್ಥ ನಾರಾಯಣ ಅವರೇ ಹೇಳಲಿ. ಇಲ್ಲಿ ನಾನು ಸ್ವಾಮೀಜಿಗಳನ್ನು ಎಳೆದು ತರುತ್ತಿಲ್ಲ. ಆದಿಚುಂಚನಗಿರಿ ಶ್ರೀಗಳ ಬಗ್ಗೆ ನನಗೆ ಗೌರವವಿದೆ. ನಾನು ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ಅವರು ಉತ್ತರ ಕೊಡಲಿ ಎಂದು ಕೇಳುತ್ತಿಲ್ಲ. ಒಕ್ಕಲಿಗರ ಸರ್ಕಾರ ಎಂದು ಅಭಿಮಾನ ಇದ್ದೇ ಇರುತ್ತದೆ. ಅವರವರ ಜಾತಿ ಅವರವರ ಧರ್ಮ ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.

    ಹುಟ್ಟುವಾಗ ಜಾತಿ ಇರದೇ ಇರಬಹುದು, ಸಾಯುವಾಗ ಜಾತಿ ಬಂದೇ ಬರುತ್ತದೆ. ನಾವ್ಯಾರೂ ಜಾತಿ ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ಅಪ್ಪ-ಅಮ್ಮ, ಧರ್ಮ ಜಾತಿ ಬಂದೇ ಬರುತ್ತದೆ. ನಾಮಕರಣ ಮಾಡುವುದೂ ಒಂದು ಧರ್ಮವೇ, ಕಿವಿ ಚುಚ್ಚುವುದೂ ಒಂದು ಧರ್ಮವೇ, ಮೂಗು ಚುಚ್ಚುವುದೂ ಒಂದು ಧರ್ಮವೇ. ಒಕ್ಕಲಿಗರು ಯಾರೂ ದಡ್ಡರಲ್ಲ, ಯಾವ ಜಾತಿಯವರೂ ದಡ್ಡರಲ್ಲ. ವೀರಶೈವ ಇರಬಹುದು, ಎಸ್.ಸಿ, ಎಸ್.ಟಿ ಇರಬಹುದು ಯಾವುದೇ ಜಾತಿಯವರೂ ದಡ್ಡರಲ್ಲ. ಅವರವರ ಲಾಭ ಏನೂ ಎಂದು ನೋಡ್ತಾರೆ. ದೇಶಕ್ಕೆ ರಾಜ್ಯಕ್ಕೆ ನನಗೆ ಏನು ಒಳ್ಳೆಯದಾಗುತ್ತದೆ ಎಂದು ನೋಡ್ತಾರೆ. ಭಾವನೆ ನೋಡುವುದಿಲ್ಲ, ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

    ರಾಹುಲ್ ಗಾಂಧಿ ಹೆಸರಲ್ಲಿ ಕಾಂಗ್ರೆಸ್‍ನವರು ಮತ ಕೇಳ್ತಿಲ್ಲ ಎಂಬ ಬಿಎಸ್‍ವೈ ಹೇಳಿಕೆ ವಿಚಾರಕ್ಕೆ, ಮೋದಿನೇ ಅವರ ಹೆಸರಲ್ಲಿ ಮತ ಕೇಳಿಲ್ಲ, ಶಿವಮೊಗ್ಗಕ್ಕೆ ಬಂದಾಗ ರಾಘವೇಂದ್ರ ಯಡಿಯೂರಪ್ಪ ಹೆಸರಲ್ಲಿ ಮತ ಕೇಳಿದ್ದು, ಅಲ್ಲಿನ ಎಂಪಿ ಮೋದಿ ಹೆಸರಲ್ಲಿ ಮತ ಕೇಳ್ತಿದ್ದಾರೆ. ಮೋದಿ ಅಲೆ ಹೊರಟೋಗಿದೆ. ಗಾಳಿ ಎಲ್ಲಾದ್ರು ಇದೆಯಾ ನೋಡಿ. ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮುಗಿಸ್ತಿದ್ದಾರೆ. ಜೆಡಿಎಸ್ ಈಗ ಎಲ್ಲಿದೆ? ಜೆಡಿಎಸ್‍ಗೆ ಮುಕ್ತಿ ಕೊಟ್ಟಿದ್ದಾರೆ. ಪಕ್ಷ ವಿಸರ್ಜನೆ ಮಾಡುವ ಹಂತದಲ್ಲಿದ್ದಾರೆ. ಆ ಪಕ್ಷ ಇರಬೇಕು ಎಂಬುದ ನನ್ನ ಅಭಿಪ್ರಾಯ ಎಂದಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಹಿಂದೆಯೇ ಎಫ್‌ಸಿ ಮುಗಿದಿದ್ದ ಶಾಲಾ ಬಸ್‌ ಪಲ್ಟಿ – 6 ಮಕ್ಕಳ ದಾರುಣ ಸಾವು!

  • ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!

    ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!

    ಮೈಸೂರು: ತಾಲೂಕು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ಸಂಸತ್‌ಗೆ ಹೋಗಲು ಸಿದ್ದರಾಮಯ್ಯ (Siddaramaiah) ಯತ್ನಿಸಿದ್ದರು. ನಂತರ ಕೊಪ್ಪಳದಿಂದಲೂ (Koppal) ಎರಡನೇ ಪ್ರಯತ್ನ ನಡೆಸಿದ್ದರು. ಎರಡೂ ವಿಫಲವಾದವು.

    1978 ರಲ್ಲಿ ಸಿದ್ದರಾಮಯ್ಯ ಅವರು ಮೈಸೂರು (Mysuru) ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. 1980 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರಿಗೆ ಬಂದ ಮತ 8,327 ಮಾತ್ರ! 1,95,724 ಮತಗಳನ್ನು ಪಡೆದ ಕಾಂಗ್ರೆಸ್-ಐನ ಎಂ.ರಾಜಶೇಖರಮೂರ್ತಿ ಆಗ ಗೆದ್ದಿದ್ದರು. ಇದನ್ನೂ ಓದಿ: 2019 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಬಂದ ಮತ ಎಷ್ಟು?

    ಇದಾದ ನಂತರ ಸಿದ್ದರಾಮಯ್ಯ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ‘ತಕ್ಕಡಿ’ ಗುರುತಿನಲ್ಲಿ ಸ್ಪರ್ಧಿಸಿ, ಪ್ರಥಮ ಬಾರಿಗೆ ಚುನಾಯಿತರಾದರು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾದರು. ನಂತರ ಹೆಗಡೆ ಅವರು ಸಂಪುಟಕ್ಕೆ ತೆಗೆದುಕೊಂಡು ರೇಷ್ಮೆ ಖಾತೆ ನೀಡಿದರು.

     

    1985 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಕ್ರಮವಾಗಿ ಪಶುಸಂಗೋಪನೆ, ಸಾರಿಗೆ ಸಚಿವರಾಗಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಇದನ್ನೂ ಓದಿ: ರಾಜರೂರಿನವರು ಮಂತ್ರಿಗಳೇ ಆಗಲಿಲ್ಲ!

    ಆಗ 1991 ರಲ್ಲಿ ಲೋಕಸಭಾ ಚುನಾವಣಾ ಎದುರಾದಾಗ ಸಿದ್ದರಾಮಯ್ಯ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್‌ ಬಸವರಾಜ್ ಪಾಟೀಲ್ ಅನ್ವರಿ 2,41.176 ಮತಗಳನ್ನು ಪಡೆದು ಚುನಾಯಿತರಾದರು. ಸಿದ್ದರಾಮಯ್ಯ 2,29,979 ಮತಗಳನ್ನು ಪಡೆದು, 11,197 ಮತಗಳ ಅಂತರದಿಂದ ಸೋತರು. ಇದಾದ ನಂತರ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.

  • 2019 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಬಂದ ಮತ ಎಷ್ಟು?

    2019 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಬಂದ ಮತ ಎಷ್ಟು?

    ಮೈಸೂರು: 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇತ್ತು. ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಗುರುತಿನೊಂದಿಗೆ ಸಿ.ಹೆಚ್.ವಿಜಯಶಂಕರ್ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವಾರು ಸಿಕ್ಕ ಮತಗಳ ಡಿಟೈಲ್ಸ್ ಇಲ್ಲಿದೆ.

    ಮಡಿಕೇರಿ- ಕೆ.ಜಿ. ಬೋಪಯ್ಯ (ಬಿಜೆಪಿ)
    ಬಿಜೆಪಿ – 1,02,161
    ಕಾಂಗ್ರೆಸ್ – 58,185

    ವೀರಾಜಪೇಟೆ- ಎಂ.ಪಿ. ಅಪ್ಪಚ್ಚು ರಂಜನ್ (ಬಿಜೆಪಿ)
    ಬಿಜೆಪಿ – 96,235
    ಕಾಂಗ್ರೆಸ್- 54,738

    ಪಿರಿಯಾಪಟ್ಟಣ- ಕೆ. ಮಹದೇವ್ (ಜೆಡಿಎಸ್)
    ಬಿಜೆಪಿ – 77,242
    ಕಾಂಗ್ರೆಸ್ – 53,465

    ಹುಣಸೂರು- ಎಚ್. ವಿಶ್ವನಾಥ್ (ಜೆಡಿಎಸ್)
    ಕಾಂಗ್ರೆಸ್ – 82,784
    ಬಿಜೆಪಿ – 78,986

    ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ (ಜೆಡಿಎಸ್)
    ಕಾಂಗ್ರೆಸ್- 89,215
    ಬಿಜೆಪಿ – 1,11,365

    ಕೃಷ್ಣರಾಜ-ಎಸ್.ಎ. ರಾಮದಾಸ್ (ಬಿಜೆಪಿ)
    ಬಿಜೆಪಿ – 96,100
    ಕಾಂಗ್ರೆಸ್ – 44,026

    ಚಾಮರಾಜ- ಎಲ್. ನಾಗೇಂದ್ರ (ಬಿಜೆಪಿ)
    ಬಿಜೆಪಿ – 90,531
    ಕಾಂಗ್ರೆಸ್ – 44,480

    ನರಸಿಂಹರಾಜ- ತನ್ನೀರ್ ಸೇತ್ (ಕಾಂಗ್ರೆಸ್)
    ಕಾಂಗ್ರೆಸ್ – 98,24 1
    ಬಿಜೆಪಿ – 56,262

  • ಮಂಡ್ಯ `ಕೈ’ಗೆ ರಮ್ಯಾ ಬಲ – ಸ್ಯಾಂಡಲ್‍ವುಡ್ ಕ್ವೀನ್ ನೇತೃತ್ವದಲ್ಲಿ ಬೃಹತ್ ರೋಡ್ ಶೋಗೆ ಸಿದ್ಧತೆ

    ಮಂಡ್ಯ `ಕೈ’ಗೆ ರಮ್ಯಾ ಬಲ – ಸ್ಯಾಂಡಲ್‍ವುಡ್ ಕ್ವೀನ್ ನೇತೃತ್ವದಲ್ಲಿ ಬೃಹತ್ ರೋಡ್ ಶೋಗೆ ಸಿದ್ಧತೆ

    ಮಂಡ್ಯ: ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗೆ (H.D Kumaraswamy) ಸಂಸದೆ ಸುಮಲತಾ (Sumalatha) ಬೆಂಬಲ ಸೂಚಿಸಿದ ಬೆನ್ನಲ್ಲೇ, ಕಾಂಗ್ರೆಸ್ (Congress) ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಾಜಿ ಸಂಸದೆ, ನಟಿ ರಮ್ಯಾ (Ramya)  ಪ್ರಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ಸಂಸದರಾಗಿದ್ದ 6 ತಿಂಗಳಲ್ಲೇ ಜನಮನ ಗೆದ್ದಿದ್ದ ರಮ್ಯ ಅವರನ್ನು ಪ್ರಚಾರಕ್ಕೆ ಕರೆಸಿ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ರಮ್ಯಾ ಜೊತೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದು, ಮಂಡ್ಯ ಕ್ಷೇತ್ರದ ಕ್ಯಾಂಪೇನ್‍ಗೆ ಬರಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ವಾರ ಅಭ್ಯರ್ಥಿ ಜೊತೆ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಂಗ್ರೆಸ್ ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ

    ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಎಂಟ್ರಿ ಕೊಡಲಿದ್ದಾರೆ. ಏಪ್ರಿಲ್ 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಚ್‍ಡಿಕೆ ವಿರುದ್ಧ ತಂತ್ರ ಹೆಣೆದು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

    ಇದರ ನಡುವೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ, ಮಂಡ್ಯ ಲೋಕಾಸಭಾ ಕ್ಷೇತ್ರದ ಕೆ.ಆರ್ ನಗರ, ಕೆ.ಆರ್ ಪೇಟೆಯಲ್ಲಿ ಮತಯಾಚನೆ ನಡೆಯಲಿದೆ. ಇನ್ನೊಂದು ದಿನ ಡಿಸಿಎಂ ಡಿ.ಕೆ ಶಿವಕುಮಾರ್ ಮಂಡ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಮಂಡ್ಯವನ್ನ ಸಾಕಷ್ಟು ಪ್ರತಿಷ್ಠೆಯ ಕ್ಷೇತ್ರವಾಗಿ ಕಾಂಗ್ರೆಸ್ ತೆಗೆದುಕೊಂಡಿದೆ.

    ಮತ್ತೊಂದೆಡೆ ಮೈತ್ರಿ ಬಲ ಹೆಚ್ಚಿಸಿರುವ ಸಂಸದೆ ಸುಮಲತಾ, ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಸ್ಥಳೀಯ ನಾಯಕರೊಂದಿಗೆ ಪ್ರಚಾರ ನಡೆಸಲು ಮಾತುಕತೆ ನಡೆದಿದ್ದು, ಈ ಮೂಲಕ ಸುಮಲತಾ ಬೆಂಬಲಿಗರು ಹಾಗೂ ಮಹಿಳಾ ಮತದಾರರನ್ನು ಸೆಳೆಯಲು ದೋಸ್ತಿ ನಾಯಕರ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್‌ ಕೇರ್ – ಏ.23 ರವರೆಗೆ‌ ಜೈಲೇ ಗತಿ

  • ಕಾಂಗ್ರೆಸ್ ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ

    ಕಾಂಗ್ರೆಸ್ ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ

    ಲಕ್ನೋ: ಜಗತ್ತು ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ನಡುವೆ, ಭಾರತಕ್ಕೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸಾಬೀತು ಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಉತ್ತರಪ್ರದೇಶದ (Uttar Pradesh) ಪಿಲಿಭಿತ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ಗುರಿ ಎಷ್ಟೇ ಕಠಿಣವಾಗಿದ್ದರೂ, ಅದನ್ನು ಸಾಧಿಸಲು ಭಾರತ ಸಂಕಲ್ಪ ಮಾಡಿದರೆ, ಅದು ಖಂಡಿತವಾಗಿಯೂ ಸಾಧಿಸುತ್ತದೆ. ಇಂದು ಈ ಸ್ಫೂರ್ತಿ ಮತ್ತು ಶಕ್ತಿಯೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ (Congress) ಸರ್ಕಾರವು ವಿಶ್ವದಿಂದ ಸಹಾಯವನ್ನು ಕೇಳುತ್ತಿದ್ದ ಸಮಯವಿತ್ತು. ಈಗ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಭಾರತದಿಂದ ಇಡೀ ಜಗತ್ತಿಗೆ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್‌ ಕೇರ್ – ಏ.23 ರವರೆಗೆ‌ ಜೈಲೇ ಗತಿ

    ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾದಾಗ, ಜನ ಅದರ ಬಗ್ಗೆ ಹೆಮ್ಮೆಪಡುತ್ತಾರೆ ಅಲ್ಲವೇ? ನಮ್ಮ ಚಂದ್ರಯಾನವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ನೀವು ಹೆಮ್ಮೆ ಪಟ್ಟಿದ್ದೀರಿ ಅಲ್ಲವೇ? ದೇಶ ಬಲಿಷ್ಠವಾದಾಗ ಜಗತ್ತು ನಮ್ಮ ಮಾತನ್ನು ಕೇಳುತ್ತದೆ ಎಂದಿದ್ದಾರೆ.

    ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸಹರಾನ್‍ಪುರ, ಕೈರಾನಾ, ಮುಜಾಫರ್‍ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್ ಮತ್ತು ಪಿಲಿಭಿತ್‍ನಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ʻZ’ ಕೆಟಗರಿ ಭದ್ರತೆ

  • ಕರ್ನೂರು ಚೆಕ್‍ಪೋಸ್ಟ್ ಬಳಿ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಸೀಜ್

    ಕರ್ನೂರು ಚೆಕ್‍ಪೋಸ್ಟ್ ಬಳಿ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಸೀಜ್

    ಬೆಂಗಳೂರು: ಹೊಸೂರು ಸಮೀಪದ ಕರ್ನೂರು ಚೆಕ್‍ಪೋಸ್ಟ್ (Karnoor Checkpost‌) ಬಳಿ ಸೂಕ್ತ ದಾಖಲೆಗಳಿಲ್ಲದೇ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಹಣವನ್ನು (Money) ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಹೊಸೂರಿನಿಂದ ಕರ್ನೂರು ಮಾರ್ಗವಾಗಿ ರಾಜೇಂದ್ರನ್ ಎಂಬವರು ಬೈಕ್‍ನಲ್ಲಿ ಹಣ ತರುತ್ತಿದ್ದರು. ಈ ವೇಳೆ ಅಧಿಕಾರಿಗಳು ಬೈಕ್ ತಡೆದು ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಸೂಕ್ತ ದಾಖಲೆಗಳಿಲ್ಲದೇ ಇರುವ 25 ಲಕ್ಷ ರೂ. ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

    ಇತ್ತೀಚೆಗೆ ಬಳ್ಳಾರಿಯ ಬ್ರೂಸ್ ಪೇಟೆಯಲ್ಲೂ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನು ಪೊಲೀಸರು (Police) ಜಪ್ತಿ ಮಾಡಿಕೊಂಡಿದ್ದರು. ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದಿದ್ದರು.

    ಚುನಾವಣೆಯಲ್ಲಿ (Lok Sabha Election 2024) ಅಕ್ರಮ ನಡೆಯದಂತೆ, ಚುನಾವಣೆ ಘೋಷಣೆಯಾದ ಬಳಿಕ ಅಧಿಕಾರಿಗಳು ವಾಹನ ತಪಾಸಣೆ ಹಾಗೂ ಇನ್ನಿತರೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಕೋಲಾರ ಗಡಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಿಎಂ ಕಾರನ್ನು ಸಹ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: 3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್‌ – ಸೈಬರ್‌ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ

  • ರಾಜ್ಯದಲ್ಲಿ 53 ನಾಮಪತ್ರ ವಾಪಸ್‌; ‘ಲೋಕ’ ಕಣದಲ್ಲಿ 247 ಅಭ್ಯರ್ಥಿಗಳು

    ರಾಜ್ಯದಲ್ಲಿ 53 ನಾಮಪತ್ರ ವಾಪಸ್‌; ‘ಲೋಕ’ ಕಣದಲ್ಲಿ 247 ಅಭ್ಯರ್ಥಿಗಳು

    – ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ? ಪುರುಷರು, ಮಹಿಳಾ ಅಭ್ಯರ್ಥಿಗಳೆಷ್ಟು?

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಣ ರಂಗೇರಿದೆ. ಸೋಮವಾರ 53 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದ 8 ನಾಮಪತ್ರ ವಾಪಸ್ – ರಣಕಣದಲ್ಲಿ 14 ಅಭ್ಯರ್ಥಿಗಳು

    ನಾಮಪತ್ರ ಹಿಂಪಡೆಯಲು ಇಂದು (ಏ.8) ಕೊನೆ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 6ನೇ ತಾರೀಖಿನಂದು ಒಬ್ಬರು ಹಾಗೂ ಇಂದು 52 ಮಂದಿ ಸೇರಿದಂತೆ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಕಣದಲ್ಲಿ ಈಗ 247 ಅಭ್ಯರ್ಥಿಗಳಿದ್ದು, ಅವರ ಪೈಕಿ ಪುರುಷರು 226 ಹಾಗೂ ಮಹಿಳಾ ಅಭ್ಯರ್ಥಿಗಳು 21 ಮಂದಿ ಚುನಾವಣೆ ಎದುರಿಸಲಿದ್ದಾರೆ.

    ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ?
    ಉಡುಪಿ-ಚಿಕ್ಕಮಗಳೂರು: 10
    ಹಾಸನ: 15
    ದಕ್ಷಿಣ ಕನ್ನಡ: 9
    ಚಿತ್ರದುರ್ಗ: 20
    ತುಮಕೂರು: 18
    ಮಂಡ್ಯ: 14
    ಮೈಸೂರು: 18
    ಚಾಮರಾಜನಗರ: 14
    ಬೆಂಗಳೂರು ಗ್ರಾಮೀಣ: 15
    ಬೆಂಗಳೂರು ಉತ್ತರ: 21
    ಬೆಂಗಳೂರು ಕೇಂದ್ರ: 24
    ಬೆಂಗಳೂರು ದಕ್ಷಿಣ: 22
    ಚಿಕ್ಕಬಳ್ಳಾಪುರ: 29
    ಕೋಲಾರ: 18

  • ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

    ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

    ಸೋಮವಾರ ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅಭ್ಯರ್ಥಿ ರಕ್ಷಾರಾಮಯ್ಯ (Raksha Ramaiah) ಅವರಿಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

    ನಾನು ಲೋಕಸಭಾ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಹೈಕಮಾಂಡ್‌ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡಲಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು. ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ. ಚಿಕ್ಕಬಳ್ಳಾಪುರದ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದು ಅಭ್ಯರ್ಥಿಗೆ ಸಾಕಷ್ಟು ದೊಡ್ಡ ಶಕ್ತಿಯಾಗಿದೆ. ನಾನು ಸ್ಪರ್ಧಿಸುವಾಗ ಇಷ್ಟೊಂದು ಬೆಂಬಲ ಇರಲಿಲ್ಲ. ಆದರೆ ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ. ನಿಮಗೆ ಸಾಕಷ್ಟು ಸೌಭಾಗ್ಯ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಕಾಂಗ್ರೆಸ್ ಭದ್ರಕೋಟೆ ಇಲ್ಲಿ ಗೆದ್ದರೆ ಇಡೀ ಜ್ಯಾತ್ಯತೀತ ಗೆಲ್ಲಲಿದೆ. ಈಗ ಸ್ಥಳೀಯ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಬೇರೆ ಬೇರೆ ಚಟುವಟಿಕೆ ನಡೆಸುತ್ತಾರೆ. ಆದರೆ ನಾವೆಲ್ಲಾ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ರಾತ್ರಿ ಹಗಲು ಶ್ರಮಿಸಬೇಕು ಎಂದು ಕರೆ ನೀಡಿದರು.

    ನನಗೆ ಲೋಕಸಭಾ ಅಭ್ಯರ್ಥಿ ಸ್ಥಾನದಿಂದ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಯಾಕೆಂದರೆ ಸಂಸದರ ಸ್ಥಾನ ಯಾರೂ ಬಿಡಲ್ಲ. ಆದರೆ ಹೈಕಮಾಂಡ್ ತೀರ್ಮಾನದಂತೆ ನೂರಕ್ಕೆ ನೂರರಷ್ಟು ಬೆಂಬಲ ಸೂಚಿಸಲಿದ್ದೇನೆ. ಮುಖ್ಯಮಂತ್ರಿ ಆದರೂ ನಿಷ್ಠಾವಂತನಾಗಿದ್ದರೆ ಅದು ನಾನು ಮಾತ್ರ. ಸಾಯುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. 10 ವರ್ಷದಿಂದ ನಡೆಯದಿರುವ ಕೆಲಸ ನೀವು ಐದು ವರ್ಷದಲ್ಲಿ ಮಾಡಬೇಕಿದೆ. 2 ವರ್ಷದಲ್ಲಿ ಎತ್ತಿನಹೊಳೆ ನೀರು ಬರಲು ಹೋರಾಡಬೇಕು.‌ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಲಸೆ ಹೋಗುತ್ತಾರೆ ಎಂದು ವರದಿಯಾಗಿತ್ತು. ಬಾಗೇಪಲ್ಲಿ ಬಳಿ ಫ್ಲೋರೈಡ್‌ ಇತ್ತು. ಇದನ್ನೆಲ್ಲ ಹೋಗಲಾಡಿಸಲು ನಾನು ಶ್ರಮವಹಿಸಿದ್ದೆ. ಅದೇ ರೀತಿ ನೀನು ಮಾಡಬೇಕು. ಇದು ನನ್ನ ಕನಸಿನ ಕೂಸು ಎಂದು ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಕೆಲವು ಸೂಚನೆಗಳನ್ನು ‌ಮೊಯ್ಲಿ ನೀಡಿದರು. ಇದನ್ನೂ ಓದಿ: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

    ಎಲ್‌.ಕೆ.ಅಡ್ವಾಣಿ ಪ್ರಧಾನಿಯಾಗಬೇಕಿತ್ತು, ಆದರೆ ಆಗಲಿಲ್ಲ. ಆ ಸಮಯದಲ್ಲಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಎಂದು ಹೇಳಿದ್ದರು. ಆದರೆ ಮೋದಿ ಇಂದಿಗೂ ಸಹಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಪುಲ್ವಾಮಾ ದಾಳಿ ನಡೆಸುತ್ತಾರೆ. ಇನ್ನೂ ಚುನಾವಣೆ ಒಳಗೆ ಮತ್ತೆ ಏನಾದ್ರು ಮಡ್ತಾರೆ ಕಾಯ್ತಾ ಇರೀ. ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳು‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ. ಆದರೆ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. 2004 ರಲ್ಲಿ ಕಾರ್ಗಿಲ್ ಯುದ್ಧವಾಯ್ತು. ಆಗ ಶೈನಿಂಗ್ ಇಂಡಿಯಾ ಎಂದು ಬಿಜೆಪಿ ಹೇಳಿತ್ತು, ಆದರೆ ಸೋತಿತ್ತು. ಆದರೆ ಅದೇ ರೀತಿ ಈಗ ಬಿಜೆಪಿ ಸೋಲುತ್ತೆ. ಈಗ ಅಭಿವೃದ್ಧಿ ಇಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಯುವಜನತೆ ಎದ್ದು ನಿಲ್ಲುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸ್ಥಳೀಯ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರು ಸುರಿಸಿದ್ದು ಇದೇ ವಿಚಾರಕ್ಕೆ ಎಂದು ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಅವರು ಮಾಡಿದ ಪಾಪ ಕಣ್ಣೀರಿನ ಮೂಲಕ ಬಂದಿದೆ. ಅದು ಸಾಕಾಗಲ್ಲ. ಅವರಿಗೆ ರಕ್ತ ಕಣ್ಣೀರು ಬರಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಬರೀ ಸೌಂಡ್ ಬಾಕ್ಸ್, ಅಬ್ಬರ ಮಾಡುತ್ತೆ ಅಷ್ಟೇ: ಅಶ್ವಥ್ ನಾರಾಯಣ್

  • ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

    ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರದಲ್ಲಿ ತೊಡಗಿದ್ದ ವೇಳೆ ವ್ಯಕ್ತಿಯೊಬ್ಬ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿದ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಗನ್ ಇಟ್ಟುಕೊಂಡು ಕ್ಯಾಂಟರ್ ಏರಿ ಸಿಎಂಗೆ ವ್ಯಕ್ತಿಯೊಬ್ಬ ಹಾರ ಹಾಕಿ ಅಲ್ಲಿಂದ ತೆರಳಿದ್ದಾನೆ. ಆತನ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ.

    ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಆತ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್, ರಿಯಾಜ್ ಕಾಂಗ್ರೆಸ್‍ನ ಕಾರ್ಯಕರ್ತ, ನಾಲ್ಕೈದು ವರ್ಷಗಳ ಹಿಂದೆ ಅವನ ಮೇಲೆ ಅಟ್ಯಾಕ್ ಆಗಿತ್ತು. ಇದರಿಂದ ಗನ್ ಲೈಸೆನ್ಸ್ ಪಡೆದುಕೊಂಡು, ಇಟ್ಟುಕೊಂಡಿದ್ದಾನೆ ಅನ್ಸುತ್ತೆ. ಅವನೇನು ರೌಡಿ ಅಲ್ಲ ಎಂದಿದ್ದಾರೆ.

    ಸಿಎಂ ಬಳಿ ಗನ್ ತೆಗೆದುಕೊಂಡ ಹೋದ ವ್ಯಕ್ತಿ ಮೇಲೆ ಅನುಮಾನ ಮೂಡಿದ್ದು, ಚುನಾವಣಾ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶ ಇಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಈ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶವಿದೆ. ಕಮಿಷನರ್ ಅವರಿಂದ ಅನುಮತಿ ಸಿಕ್ಕರೆ ಮಾತ್ರ ಗನ್ ಇಟ್ಟುಕೊಳ್ಳಬಹುದು. ಬ್ಯಾಂಕ್ ಸಿಬ್ಬಂದಿ, ವಿಜ್ಞಾನಿಗಳು ತೀರಾ ಅವಶ್ಯಕತೆ ಇದ್ದವರಿಗೆ ಮಾತ್ರ ಗನ್ ಇಟ್ಟುಕೊಳ್ಳಲು ಅವಕಾಶವಿದೆ.

    ಇದು ಪೊಲೀಸ್ ಭದ್ರತಾ ವೈಫಲ್ಯನಾ? ಲೈಸೆನ್ಸ್ ಹೊಂದಿದ ವ್ಯಕ್ತಿ ಆದ್ರೂ, ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಬಹುದಾ? ಗನ್ ತಂದಿದ್ದ ವ್ಯಕ್ತಿಯನ್ನ ಪೊಲೀಸರು ಯಾಕೆ ಪರಿಶೀಲನೆ ಮಾಡಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಹೈಕೋರ್ಟ್‍ನಲ್ಲಿ ವಾದ ಮಂಡಿಸಿದ ಶ್ರವಣ ದೋಷದ ವಕೀಲೆ ಸಾರಾ ಸನ್ನಿ

  • ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪ್ರೀತಂಗೌಡ ಬೆಂಬಲಿಗರು ಬಿಗ್ ಶಾಕ್ ಕೊಟ್ಟಿದ್ದಾರೆ.

    ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರೀತಂಗೌಡ ಯಾವುದೇ ಸೂಚನೆ ನೀಡದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಭೇಟಿಯಾಗಿದ್ದಾರೆ. ಈ ಮೂಲಕ ಪ್ರೀತಂಗೌಡ ಆಪ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದು, ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಒಳಪೆಟ್ಟು ಬೀಳುವ ಆತಂಕ ಎದುರಾಗಿದೆ.

    ಪ್ರೀತಂಗೌಡ (Preetham Gowda) ಹಾಗೂ ಅವರ ಬೆಂಬಲಿಗರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ತಿರುಗಿಬಿದ್ದಿದ್ದು, ಬಹಿರಂಗವಾಗಿಯೇ ಶ್ರೇಯಸ್ ಪಟೇಲ್ ಪರ ಪ್ರಚಾರಕ್ಕಿಳಿದಿದ್ದಾರೆ. ಇದೀಗ ಹಾಸನ ಕ್ಷೇತ್ರದಲ್ಲಿ (Hassan Lok Sabha constituency) ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೂ ಪ್ರೀತಂಗೌಡ ಹಾಗೂ ಅವರ ಬೆಂಬಲಿಗರ ನಡೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

    ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಮೈತ್ರಿ ಆದಾಗಿನಿಂದ ಪ್ರೀತಂಗೌಡ ಹಾಗೂ ಅವರ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದರು. ಇಬ್ಬರ ನಡುವಿನ ಅಸಮಾಧಾನ ಶಮನಗೊಳಿಸಲು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸಿದ್ದರು. ಅಸಮಾಧಾನ ಬಗೆಹರಿಯದ ಹಿನ್ನೆಲೆ ಪ್ರೀತಂಗೌಡ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಬಹಿರಂಗವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ.