Tag: Lok Sabha Election 2024

  • ಕಾಂಗ್ರೆಸ್ ಇಲ್ಲಿ ಸಾಯ್ತಿದ್ರೆ ಪಾಕ್ ಅಲ್ಲಿ ಅಳುತ್ತಿದೆ: ಮೋದಿ

    ಕಾಂಗ್ರೆಸ್ ಇಲ್ಲಿ ಸಾಯ್ತಿದ್ರೆ ಪಾಕ್ ಅಲ್ಲಿ ಅಳುತ್ತಿದೆ: ಮೋದಿ

    – ರಾಹುಲ್ ಗಾಂಧಿ ಪ್ರಧಾನಿಯಾಗಲು ಪಾಕ್ ಪ್ರಾರ್ಥನೆ

    ಗಾಂಧಿನಗರ: ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪಕ್ಷ ಇಲ್ಲಿ ಸಾಯುತ್ತಿದ್ದರೆ, ಅಲ್ಲಿ ಪಾಕಿಸ್ತಾನ ಅಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಚೌದರಿ ರಾಹುಲ್‌ ಗಾಂಧಿ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದ್ದನ್ನು ಉಲ್ಲೇಖಿಸಿಸಿ  ಗುಜುರಾತ್‍ನ (Gujarat) ಆನಂದ್‍ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಯುವರಾಜ (ರಾಹುಲ್ ಗಾಂಧಿ) ಪ್ರಧಾನ ಮಂತ್ರಿಯಾಗಲಿ ಎಂದು ಪಾಕಿಸ್ತಾನ ಪ್ರಾರ್ಥಿಸುತ್ತಿದೆ. ಕಾಂಗ್ರೆಸ್ ಪಾಕಿಸ್ತಾನದ ಅನುಯಾಯಿ, ದುರ್ಬಲ ಸರ್ಕಾರ ಭಾರತದಲ್ಲಿ ಚುಕ್ಕಾಣಿ ಹಿಡಿಯಬೇಕೆಂದು ವಿಶ್ವದ ಕೆಲವು ಶಕ್ತಿಗಳು ಬಯಸುತ್ತವೆ. ನಾವು `ಲವ್ ಜಿಹಾದ್’ ಮತ್ತು `ಲ್ಯಾಂಡ್ ಜಿಹಾದ್’ ಬಗ್ಗೆ ಕೇಳಿದ್ದೇವೆ. ಆದರೆ ಐ.ಎನ್.ಡಿ.ಐ.ಎ ಮೈತ್ರಿಕೂಟದ ನಾಯಕರೊಬ್ಬರು ಈಗ `ವೋಟ್ ಜಿಹಾದ್’ಗೆ ಕರೆ ನೀಡಿದ್ದಾರೆ ಇದು ತುಷ್ಟೀಕರಣ ರಾಜಕೀಯದ ಒಂದು ಭಾಗ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಹೊಗಳಿದ ಪಾಕ್‌ ಮಾಜಿ ಸಚಿವ- ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

    ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲು ಅನುಕೂಲವಾಗುವಂತೆ ಸಂವಿಧಾನ ಬದಲಿಸಲು ಕಾಂಗ್ರೆಸ್ ಬಯಸಿದೆ. ಧಾರ್ಮಿಕತೆ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು (Constitution) ಬದಲಾಯಿಸುವುದಿಲ್ಲ. ಅದರ ಮಿತ್ರ ಪಕ್ಷಗಳ ಸರ್ಕಾರಗಳ ಮೂಲಕ ರಾಜ್ಯಗಳಲ್ಲಿ ಹಿಂಬಾಗಿಲಿನ ಮೂಲಕ ಮೀಸಲಾತಿ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಅವರು ಸವಾಲು ಹಾಕಿದ್ದಾರೆ.

    ನಾನು ಹಲವು ವರ್ಷಗಳ ಕಾಲ ಗುಜರಾತ್‍ನಲ್ಲಿ ಕೆಲಸ ಮಾಡಿದ್ದೇನೆ. 2014ರಲ್ಲಿ ನೀವು ನನ್ನನ್ನು ದೇಶ ಸೇವೆ ಮಾಡಲು ಕಳುಹಿಸಿದ್ದೀರಿ. ಇಲ್ಲಿ ಕೆಲಸ ಮಾಡುವಾಗ, ಗುಜರಾತ್‍ನ ಅಭಿವೃದ್ಧಿ ಭಾರತದ ಅಭಿವೃದ್ಧಿ ಎಂಬ ಮಂತ್ರವನ್ನು ಹೊಂದಿದ್ದೆವು. ನನಗೆ ಒಂದೇ ಒಂದು ಕನಸಿದೆ, 2047ರಲ್ಲಿ ನಾವು 100 ವರ್ಷಗಳ ಸ್ವಾತಂತ್ಯ ದಿನಾಚರಣೆ ಪೂರೈಸಿದಾಗ ಭಾರತವು `ವಿಕಸಿತ್ ಭಾರತ್’ ಆಗಬೇಕು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾನು 24×7 ಕೆಲಸ ಮಾಡುತ್ತೇನೆ. ಇದು ನನ್ನ ಭರವಸೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

  • ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ

    ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ

    ಬೆಳಗಾವಿ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ತುಷ್ಟೀಕರಣ ರಾಜಕೀಯದ ಪರಿಣಾಮ ಬೆಳಗಾವಿ (Belagavi) ವಂಟಮೂರಿಯಲ್ಲಿ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ಚಿಕ್ಕೋಡಿ ಜೈನ ಮುನಿ ಹತ್ಯೆ ಮತ್ತು ಹುಬ್ಬಳ್ಳಿ ನೇಹಾ ಹತ್ಯೆ ನಡೆಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣವಾಯಿತು. ಭಯೋತ್ಪಾದನೆಗೆ ಪ್ರೋತ್ಸಾಹಿಸುವ, ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ ಸಂಘಟನೆಯನ್ನು ನಾವು ನಿರ್ಬಂಧ ಮಾಡಿದೆವು. ನಮ್ಮ ಸ್ವಾತಂತ್ರ‍್ಯ ಹೋರಾಟವನ್ನು ಕಾಂಗ್ರೆಸ್‌ನವರು ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಈಗಲೂ ತುಷ್ಟೀಕರಣದ ಪಾಪವನ್ನು ಮುಂದುವರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕಾಂಗ್ರೆಸ್‌ನವರಿಗೆ ಖಾರವಾಗಿ ಚಾಟಿಬೀಸಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್‌ ಮಾಡಿ ಅಶೋಕ್‌ ಕಿಡಿ

    ಮೈಸೂರು ರಾಜರನ್ನ ದೇಶ ಗರ್ವದಿಂದ ನೋಡುತ್ತಿದೆ. ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದೆ. ರಾಜ ಮಹಾರಾಜರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಕಾಂಗ್ರೆಸ್ ಔರಂಗಜೇಬನನ್ನು ಗುಣಗಾನ ಮಾಡುವ ಪಾರ್ಟಿ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಕಾಂಗ್ರೆಸ್‌ಗೆ ನೆನಪಾಗಲ್ಲ. ನವಾಬ್, ಸುಲ್ತಾನ್ ವಿರುದ್ಧ ಒಂದೇ ಒಂದು ಅಕ್ಷರ ಕಾಂಗ್ರೆಸ್‌ನವರು ಮಾತನಾಡಲ್ಲ. ಕಾಂಗ್ರೆಸ್‌ನ ತುಷ್ಟೀಕರಣದ ನೀತಿ ಈಗ ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಗೆದ್ದು ಬರುತ್ತದೆ ಅಲ್ಲಿ ಅಭಿವೃದ್ಧಿ ಮಾಯವಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ನಿಂತಿವೆ. ರಸ್ತೆ, ನೀರಾವರಿ ಕೆಲಸ ಸ್ಥಗಿತವಾಗಿದೆ. ಎಲ್ಲಿ ಕಾಂಗ್ರೆಸ್ ಬಂತು ಅಲ್ಲಿ ಬರ್ಬಾದಿ ಬಂತು ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ – ತನಿಖಾ ವರದಿ ಬಂದ ಮೇಲೆ ಮಾತನಾಡ್ತೀನಿ ಎಂದ ಹೆಚ್‌ಡಿಕೆ

    ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ರೈತರಿಗೆ ವಿಶ್ವಾಸಘಾತ ಮಾಡಿದೆ. ರೈತರ ಖಾತೆಗೆ 4,000 ಹಣ ಜಮೆ ಆಗುತ್ತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ. ಈ ನಿಮ್ಮ ಸೇವಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ. ಅದೇ ಕಾಂಗ್ರೆಸ್‌ನ ಅಣ್ಣ- ತಂಗಿ ಓಡಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ

    ಕಾಂಗ್ರೆಸ್‌ನ ಎಕ್ಸ್‌ರೇಯಿಂದ ತಾಯಂದಿರ ಮಂಗಳಸೂತ್ರ ಉಳಿಯಲ್ಲ. ಮೋದಿ ಇರೋವರೆಗೂ ಕಾಂಗ್ರೆಸ್‌ನ ಹುನ್ನಾರ ಫಲಿಸುವುದಿಲ್ಲ. ನಿಮ್ಮ ಕನಸೇ ಮೋದಿ ಸಂಕಲ್ಪ ಆಗಿದೆ. ನಿಮ್ಮ ಕನಸು ಸಾಕಾರ ಮಾಡಲು ನಾನು ನನ್ನ ಕ್ಷಣಗಳನ್ನು ನಿಮಗಾಗಿ ಮೀಸಲಿಟ್ಟಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ಕೆಲಸ ಮಾಡುತ್ತೇನೆ. 2027ರವರೆಗೂ ನಾನು ಇರುವೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ಚಿಕ್ಕೋಡಿಯಲ್ಲಿ ಅಣ್ಣಾಸಾಹೆಬ್ ಜೊಲ್ಲೆಯನ್ನು ಗೆಲ್ಲಿಸಬೇಕು. ಕಮಲ ಚಿನ್ಹೆಗೆ ಮತ ಹಾಕಿದರೆ ನೇರವಾಗಿ ಮೋದಿಗೆ ಮತ ಬರಲಿದೆ. ಮೋದಿ ಗೆಲ್ಲಿಸಲು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ನಾವು ಗ್ಯಾರಂಟಿಗೆ ಹಣ ಕೇಳಿಲ್ಲ, ಕೇಳೋದು ಇಲ್ಲ – ರೈತರಿಗಾಗಿ ಹಣ ಕೇಳಿದ್ವಿ: ಬಿಜೆಪಿ ವಿರುದ್ಧ ಸಿಎಂ ಕಿಡಿ

    ಭಾರತದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಕಳೆದ 10 ವರ್ಷದಲ್ಲಿ ಬಡತನ ನಿರ್ಮೂಲನೆ ಆಗಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ದೇಶ ಹೇಳುತ್ತಿದೆ. ಕಾಂಗ್ರೆಸ್‌ನವರು ಸುಳ್ಳು ಹಬ್ಬಿಸಿದರು. ಕೊರೊನಾ ಸಂದರ್ಭದಲ್ಲಿ ವ್ಯಾಕ್ಸಿನ್ ಬಗ್ಗೆ ರಾಜಕೀಯ ಮಾಡಿದರು. ವಾಕ್ಸಿನ್ ಅನ್ನು ಬಿಜೆಪಿ ವ್ಯಾಕ್ಸಿನ್ ಎಂದರು. ಇವಿಎಂ ವಿಚಾರದಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡಿದರು. ಕಳೆದ 10 ವರ್ಷದಲ್ಲಿ ದೇಶ ಪ್ರಗತಿ ಸಾಧಿಸುತ್ತಿದೆ. ಕಾಂಗ್ರೆಸ್‌ನವರು ಮಾನಸಿಕವಾಗಿ ಬ್ರಿಟಿಷರ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆಗೆ ಬ್ರೇಕ್ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ಇರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: Prajwal Revanna Case: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಪರಮೇಶ್ವರ್‌

  • ಮದುವೆ ಸಂಭ್ರಮದ ನಡುವೆಯೂ ಮತ ಚಲಾಯಿಸಿದ ನಟ ಧನುಷ್

    ಮದುವೆ ಸಂಭ್ರಮದ ನಡುವೆಯೂ ಮತ ಚಲಾಯಿಸಿದ ನಟ ಧನುಷ್

    ‘ಗೀತಾ’ ಸೀರಿಯಲ್ (Geetha Serial) ಮೂಲಕ ಮನೆ ಮಾತಾದ ನಟ ಧನುಷ್ ಗೌಡ (Dhanush Gowda) ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ (Wedding) ಸಂಭ್ರಮದ ನಡುವೆಯೂ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ಈ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಹೊಸ ಜೋಡಿಯ ದಾಂಪತ್ಯಕ್ಕೆ ಶುಭಕೋರಿದ್ದಾರೆ.

    ಅತ್ತೆಯ ಮಗಳ ಜೊತೆ ಇಂದು (ಏ.26) ಧನುಷ್ ಮದುವೆಯಾಗಿದ್ದಾರೆ. ಧನುಷ್ ಮದುವೆ ಸಂಭ್ರಮದಲ್ಲಿ ಕಿರುತೆರೆಯ ನಟ-ನಟಿಯರು ಭಾಗವಹಿಸಿ ಶುಭಹಾರೈಸಿದ್ದಾರೆ. ಮದುವೆಯ ಶಾಸ್ತ್ರದ ನಡುವೆ ಮರಿಯದೇ ಧನುಷ್ ವೋಟ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.

    ಇನ್ನೂ ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ, ಸಂಗಾತಿಗೆ ಧನುಷ್ ಸಿಹಿಮುತ್ತು ಕೊಟ್ಟಿದ್ದಾರೆ. ವಧು ಭಾವುಕರಾಗಿದ್ದಾರೆ. ಇದನ್ನೂ ಓದಿ:ಹಕ್ಕು ಚಲಾಯಿಸಿದ್ದೇನೆ, ನೀವು ವೋಟು ಮಾಡಿ: ನಟ ರವಿಚಂದ್ರನ್

    ಧನುಷ್ ಮತ್ತು ಸಂಜನಾ ಅವರದ್ದು ಅರೇಂಜ್ ಮ್ಯಾರೇಜ್. ಧನುಷ್ ತಮ್ಮ ಅತ್ತೆಯ ಮಗಳನ್ನೇ ಮದುವೆಯಾಗಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ.
  • ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

    ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

    ಚಾಮರಾಜನಗರ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ವರ (Groom) ಮತದಾನ (Voting) ಮಾಡಿದ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

    ವಿವಾಹಕ್ಕೂ (Marriage) ಮೊದಲು ವರ ಚೇತನ್ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್ ಅವರ ವಿವಾಹ ನಿಗದಿಯಾಗಿತ್ತು. 9 ಗಂಟೆಗೆ ಧಾರಾ ಮುಹೂರ್ತ ಇದ್ದ ಹಿನ್ನೆಲೆ ಅದಕ್ಕೂ ಮೊದಲು ವರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 9.21% ಮತದಾನ – ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ವೋಟ್‌

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್, ನನ್ನ ಹಕ್ಕನ್ನು ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು. ತಾಳಿ ಕಟ್ಟುವ ಮುನ್ನ ಬಂದು ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು. ಇದನ್ನೂ ಓದಿ: ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

  • ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮದುಮಗಳಾಗಿ (Bride) ಅಲಂಕಾರಗೊಂಡು ಯುವತಿ ತನ್ನ ಬೂತ್‌ನಲ್ಲಿ ಮೊದಲ ಮತದಾನ (Voting) ಮಾಡಿ ಮದುವೆಗೆ ತೆರಳಿರುವ ಘಟನೆ ಚಿಕ್ಕಮಗಳೂರು (Chikkamagaluru)  ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಸಮೀಪದ ತಳವಾರ ಗ್ರಾಮದ ಸುಮಿಕ್ಷಾ ಎಂಬ ಯುವತಿಯ ಮದುವೆ (Marriage) ಕೊಪ್ಪ ಮೂಲದ ಸಂಜಯ್ ಎಂಬವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳುವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್‌ನಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಕಡ್ಡಾಯ ಮತದಾನ ಕಾನೂನು ತರಬೇಕು: ಸಿದ್ದಗಂಗಾ ಶ್ರೀ ಆಗ್ರಹ

    ಯುವತಿ ಕುಂದೂರು ಗ್ರಾಮದ ಬೂತ್ ನಂಬರ್ 86ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ 11 ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸುಮಿಕ್ಷಾ ಅವರಿಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿ ಕೂಡ ಶುಭಕೋರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಆರಂಭ : ತುಷಾರ್‌ ಗಿರಿನಾಥ್‌

  • ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು

    ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು

    ಚಾಮರಾಜನಗರ: ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿಯವರ (Kollegala MLA AR Krishnamurthy) ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಶಾಸಕರು, ಅವರ ಸಹಾಯಕ ಹಾಗೂ ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

    ಕೊಳ್ಳೇಗಾಲ ಕ್ಷೇತ್ರದಲ್ಲಿ ಚುನಾವಣಾ (Lok Sabha Election 2024) ಪ್ರಚಾರ ಮುಗಿಸಿ ಮಧ್ಯರಾತ್ರಿ ಮೈಸೂರಿಗೆ (Mysuru) ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆಕಸ್ಮಿಕವಾಗಿ ಶಾಸಕರ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಕಾರು ರಸ್ತೆಯ ಬದಿಗೆ ನುಗ್ಗಿ, ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಹಾಡು ನಿಲ್ಲಿಸಿದ ರಂಗನಾಯಕ – ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

    ರಾತ್ರಿ 11:50ರ ಸಮಯವಾದ್ದರಿಂದ ಆ ಸಮಯದಲ್ಲಿ ಬೇರೆ ವಾಹನಗಳ ಓಡಾಟ ಕಡಿಮೆಯಾಗಿದ್ದು, ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬರದಿಂದ ತರಕಾರಿ ದರ ಏರಿಕೆ – ಕ್ಯಾರೆಟ್ ಸೆಂಚುರಿ, ಬೀನ್ಸ್ ಡಬಲ್ ಸೆಂಚುರಿ

  • ಮೋದಿಗೆ ಜನರ ಸಂಕಷ್ಟದ ಅರಿವಿಲ್ಲ: ಪ್ರಿಯಾಂಕಾ ಗಾಂಧಿ

    ಮೋದಿಗೆ ಜನರ ಸಂಕಷ್ಟದ ಅರಿವಿಲ್ಲ: ಪ್ರಿಯಾಂಕಾ ಗಾಂಧಿ

    – ಸುಪ್ರೀಂ ಹೇಳಿದ ಮೇಲೆ ಮೋದಿ ಚಂದಾ ವಸೂಲಿ ಬಯಲಾಗಿದೆ

    ಚಿತ್ರದುರ್ಗ: ಪ್ರಧಾನಿ ಮೋದಿಗೆ (Narendra Modi) ಜನರ ಸಂಕಷ್ಟಗಳ ಬಗ್ಗೆ ಅರಿವಿಲ್ಲ. ದೇಶದ ಪ್ರಧಾನಿ ಜನರ ಮಧ್ಯೆ ಬಂದು ಸಂಕಷ್ಟ ಆಲಿಸುವ ಕಾಲವೊಂದಿತ್ತು. ಅಂತಹ ಪಿಎಂಗಳನ್ನು ದೇಶ ಕಂಡಿದೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೆ ಓರ್ವ ರೈತ ದೇಶದ ಪ್ರಧಾನಿ ಗಮನ ಸೆಳೆಯಬಹುದಿತ್ತು. ಆಗ ಆ ಪ್ರಧಾನಿ ರೈತನ ಕೆಲಸ ಮಾಡಿ ಕೊಡುವ ಭರವಸೆ ನೀಡುತ್ತಿದ್ದರು. ನೈತಿಕತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ. ದೇಶದ ಉನ್ನತ ಸ್ಥಾನದಲ್ಲಿರುವವರು ನಾಟಕ ಆಡ್ತಿದ್ದಾರೆ ಎಂದು ಅವರು ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮೋದಿ ಸ್ನೇಹಿತರಾದ ಇಬ್ಬರು ಬಂಡವಾಳಶಾಹಿಗಳ ಆಸ್ತಿ ದುಪ್ಪಟ್ಟಾಗಿದೆ. ಇದನ್ನೇ ದೇಶ ಮುಂದುವರೆದಿದೆ, ಜಗತ್ತಿನಲ್ಲೇ ಉನ್ನತಿಗೇರಿದೆ ಎಂದು ಬಿಜೆಪಿ ಹೇಳುತ್ತಿದೆ. ಕೇಂದ್ರ ಸರ್ಕಾರದಿಂದ ಯಾರಿಗಾದರು ಏನಾದರು ಸಿಕ್ಕಿದಿಯೇ? ಇವರ ಅವಧಿಯಲ್ಲಿ ಏಮ್ಸ್, ಐಎಟಿಗಳ ನಿರ್ಮಾಣ ಆಗಿದಿಯೇ? ಏನಾದರು ಅಭಿವೃದ್ಧಿ ಮಾಡಿ ಮತ ಕೇಳಿ, ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬಹಳ ದೂರದಿಂದ ನನ್ನ ಮಾತುಗಳನ್ನ ಕೇಳಲು ಬಂದಿದ್ದೀರಿ, ನನಗೆ ಇದು ಹೆಮ್ಮೆಯ ವಿಷಯ, ನನ್ನ ಅಜ್ಜಿ ಇಂದಿರಾಗಾಂಧಿ ಇದೇ ವೇದಿಕೆ ಮೇಲೆ ನಿಂತು ಮಾತನಾಡಿದ್ದರು. ನೀವೆಲ್ಲ ಕಷ್ಟ ಜೀವಿಗಳು, ಮಕ್ಕಳನ್ನು ದೊಡ್ಡವರನ್ನಾಗಿಸಿ, ಉತ್ತಮ ಭವಿಷ್ಯ ನಿರ್ಮಾಣ ಮಾಡುವವರು. ನಿಮ್ಮೆಲ್ಲರ ಕಷ್ಟ ಅರ್ಥವಾಗಲಿದೆ. ದೇಶವನ್ನು ಬಲಪಡಿಸುವ ಕೆಲಸ ಸಹ ನಿಮ್ಮದು ಎಂದಿದ್ದಾರೆ.

    ಹೊಲದಲ್ಲಿ ಕೆಲಸ ಮಾಡಿ, ಅನ್ನ ನೀಡುವ ಅನ್ನದಾತರು ನೀವು, ಎಲ್ಲರ ಜೀವನ ಸಂಘರ್ಷಮಯವಾದದ್ದು. ಈ ದೇಶದ ಉಜ್ವಲ ಭವಿಷ್ಯಕ್ಕೆ ಎಲ್ಲರ ಕೊಡುಗೆ ಮುಖ್ಯ ಇಂದು ಎಲ್ಲರು ಕಷ್ಟಪಟ್ಟು ದೇಶಕಟ್ಟುವ ಬಗ್ಗೆ ನಾನು ಮಾತನಾಡುತ್ತೇನೆ. ಈ ದೇಶದ ಭವಿಷ್ಯದ ಬಗ್ಗೆ ನಮಗೆಲ್ಲ ಚಿಂತೆ ಇದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಜನರಿಗೆ ತೀವ್ರ ಸಮಸ್ಯೆ ಎದುರಾಗಿದೆ. ದೇಶದ ವೈಭೋಗದ ಬಗ್ಗೆ ಮಾತನಾಡುವ ಮಾತು ಮಾಧ್ಯಮಗಳಲ್ಲಿ ಬರುತ್ತಿದೆ. ನಿರುದ್ಯೋಗ ವ್ಯಾಪಕವಾಗಿದೆ. 70 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

    ದೇಶದಲ್ಲಿ 30 ಕೋಟಿ ಉದ್ಯೋಗ ಖಾಲಿ ಇದೆ. ಪ್ರಧಾನಿ ನೀಡಿದ ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಈಡೇರಿಲ್ಲ. ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸಲು ಸಂಕಷ್ಟ ಎದುರಿಸುವಂತಾಗಿದೆ. ಪೆಟ್ರೋಲ್, ಚಿನ್ನ ಸೇರಿದಂತೆ ಎಲ್ಲಾ ಬೆಲೆ ಗಗನಕ್ಕೇರಿದೆ. ಜನರ ಸಮಸ್ಯೆ ಮಿತಿಮೀರಿದೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜಿಎಸ್‍ಟಿ ಬರೆ ಎಳೆದಿದೆ. ದೇಶದ ಎಲ್ಲಾ ಆಸ್ತಿಗಳು ಬಂಡವಾಳ ಶಾಹಿಗಳ ಪಾಲಾಗುತ್ತಿದೆ. ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮೋದಿ ಯಾರ್ಯಾರ ಬಳಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಸುಪ್ರಿಂ ಕೋರ್ಟ್ ಹೇಳಿದ ಬಳಿಕ ಗೊತ್ತಾಗಿದೆ. ದಾಳಿಯಾದ ಕಂಪನಿಗಳು ಬಿಜೆಪಿಗೆ ಚಂದಾ ನೀಡಿವೆ. ಭ್ರಷ್ಟ ಕಂಪನಿಗಳು ಬಿಜೆಪಿಗೆ ಚಂದಾ ನೀಡಿವೆ. ಈ ಪಟ್ಟಿ ಹೊರಬಂದ ಬಳಿಕ ಬಿಜೆಪಿಯ ಬಣ್ಣ ಬಯಲಾಗಿದೆ. ಇನ್ನೂ ನೋಟ್ ಬ್ಯಾನ್ ಮಾಡಿ ಎಲ್ಲಾ ಕಪ್ಪು ಹಣ ತುರುವುದಾಗಿ ಹೇಳಿದ್ದರು. ಆಗ ಜನ ಎಷ್ಟು ಕಷ್ಟ ಪಟ್ಟರು, ಆಗ ಹೇಳಿದಂತೆ ಕಪ್ಪು ಹಣ ತರಲಿಲ್ಲ. ಸರ್ಕಾರದ ಭ್ರಷ್ಟಾಚಾರ ಮುಚ್ಚಿಡಲು ವಿಪಕ್ಷದ ಎಲ್ಲಾ ನಾಯಕರನ್ನು ಭ್ರಷ್ಟರಂತೆ ಮೋದಿ ಸರ್ಕಾರ ಕಾಣುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

    ಅಂದಿನ ರಾಜಕಾರಣಿಗಳು ಸತ್ಯದ ಮೇಲೆ ನಡೆಯುವ ನಂಬಿಕೆಯಿತ್ತು. ಈಗ ಅಧಿಕಾರದ ದರ್ಪ, ವೈಭೋಗದ ಜೀವನ ಸಾಗಿಸ್ತಿದ್ದಾರೆ. ಸೇವಾ ಭಾವನೆ ಮರೆತು ಅಹಂನಿಂದ ನಡೆಯುತ್ತಿದ್ದಾರೆ. ಹಿಂದು ಪರಂಪರೆ, ರಾಜಪರಂಪರೆಯಲ್ಲಿ ರಾಜಸತ್ಯ ಹಾಗು ಸೇವಾ ಭಾವದಲ್ಲಿ ಸಾಗಬೇಕೆಂಬ ನಂಬಿಕೆ ಇದೆ. ಶ್ರೀರಾಮ ಸೇವಾ ಭಾವದಿಂದ ಸತ್ಯದ ದಾರಿಯಲ್ಲಿ ಸಾಗಿದ್ದರು. ಮೋದಿ ಸರ್ಕಾರ ಹತ್ತು ವರ್ಷದಲ್ಲಿ ಸುಳ್ಳಿನ ಸರಮಾಲೆ ಹಣೆದಿದ್ದಾರೆ ಎಂದು ಅವರು ಹೇಳಿದ್ದಾರೆ.

    ತಪ್ಪು ದಾರಿಯಲ್ಲಿ ಅಧಿಕಾರ ಹಿಡಿಯೋದು ಬಿಜೆಪಿ ಕೆಲಸವಾಗಿದೆ. ಅದನ್ನು ಮೋದಿ ಮಾಸ್ಟರ್ ಸ್ಟ್ರೋಕ್ ಎಂದು ಮಾದ್ಯಮ ತೋರಿಸುತ್ತಿವೆ. ಅಸಂವಿಧಾನಾತ್ಮಕವಾಗಿ ಸರ್ಕಾರ ಬೀಳಿಸಿದ್ದಾರೆಂದು ಯಾರು ಪ್ರಶ್ನಿಸ್ತಿಲ್ಲ. ನೂರಾರು ಕೋಟಿ ಹಣ ಕೊಟ್ಟು ಶಾಸಕರನ್ನ ಖರೀಸಿದಿ ಸರ್ಕಾರ ಬೀಳಿಸೋದನ್ನು ಮೋದಿ ಸ್ಟ್ರೋಕ್ ಅಂತಾರೆ. ಧರ್ಮ, ಜಾತಿ ಎಂದು ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸ್ತಿದ್ದಾರೆ. ಜಗತ್ತಿಗೆ ಮೋದಿ ಪ್ರಸಿದ್ಧ ಎಂದು ಹೊಗಳ್ತಾರೆ. ಅಹಂಕಾರದಿಂದ ಮೋದಿ ವೈಭೋಗ ಪ್ರದರ್ಶನ, ಮೋದಿ ಮನಸು ಮಾಡಿದ್ರೆ ಚಿಟಿಕೆ ಹೊಡೆಯೋದರಲ್ಲಿ ಯುದ್ಧ ನಿಲ್ಲಿಸುವ ಶಕ್ತಿ ಎಂದು ಪ್ರಚಾರ ನೀಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

  • ಗುಜರಾತ್‌ನ ಗಾಂಧೀನಗರ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

    ಗುಜರಾತ್‌ನ ಗಾಂಧೀನಗರ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

    ಗಾಂಧೀನಗರ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit Shah) ಅವರು ಮುಂಬರುವ ಲೋಕಸಭೆ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಗುಜರಾತ್ (Gujarat) ಸಿಎಂ ಭೂಪೇಂದ್ರ ಪಟೇಲ್ (Bhupendra Patel) ಸಾಥ್‌ ನೀಡಿದ್ದಾರೆ.

    ಅಮಿತ್‌ ಶಾ ಅವರು ಗಾಂಧೀನಗರ (Gandhinagar) ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಪಕ್ಷದ ಕಾರ್ಯದರ್ಶಿ ಸೋನಾಲ್ ಪಟೇಲ್ ಅವರನ್ನು ಗಾಂಧೀನಗರದಿಂದ ಕಣಕ್ಕಿಳಿಸಿದೆ. ಗುಜರಾತ್‌ನಲ್ಲಿ ಮೇ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನಕ್ಸಲರು ಶಸ್ತ್ರಾಸ್ತ್ರ ಎತ್ತಿದರೆ ತಕ್ಕ ಉತ್ತರ ಸಿಗಲಿದೆ: ಅಮಿತ್ ಶಾ ಎಚ್ಚರಿಕೆ

    2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರು 5,57,014 ಮತಗಳ ಅಂತರದಿಂದ ಮೊದಲ ಬಾರಿಗೆ ಸ್ಥಾನವನ್ನು ಗೆದ್ದಿದ್ದರು. ಅವರು 3,37,610 ಮತಗಳನ್ನು (26.26%) ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ ಸಿಜೆ ಚಾವ್ಡಾ ಅವರನ್ನು ಸೋಲಿಸಿದ್ದರು.

    2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಧೀಮಂತ ಮತ್ತು ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಆರನೇ ಬಾರಿಗೆ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಮೊದಲ ಹಂತದ ಮತದಾನ: 716 ಕೋಟಿ ಆಸ್ತಿ ಒಡೆಯ – ʻಕೈʼನಾಯಕ ನಂ.1 ಶ್ರೀಮಂತ ಅಭ್ಯರ್ಥಿ!

  • ನಾನ್ಯಾರು ಗೊತ್ತಿಲ್ಲ ಎಂದಿದ್ದ ರಾಧಾಮೋಹನ್ ನಮ್ಮ ಮನೆಗೆ ಬಂದಿದ್ರು: ಈಶ್ವರಪ್ಪ ತಿರುಗೇಟು

    ನಾನ್ಯಾರು ಗೊತ್ತಿಲ್ಲ ಎಂದಿದ್ದ ರಾಧಾಮೋಹನ್ ನಮ್ಮ ಮನೆಗೆ ಬಂದಿದ್ರು: ಈಶ್ವರಪ್ಪ ತಿರುಗೇಟು

    ಉಡುಪಿ: ನಾನ್ಯಾರು ಗೊತ್ತಿಲ್ಲ ಎಂದ ರಾಧಮೋಹನ್ ಅಗರ್ವಾಲ್‌ (Radha Mohan Das Agarwal) ನಮ್ಮ ಮನೆಗೆ ಬಂದಿದ್ದರು. ಅವರಿಗೆಲ್ಲೋ ಮರೆವು ಎಂದು ಮಾಜಿ ಸಚಿವ ಹಾಗೂ ಶಿವಮೊಗ್ಗದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ತಿರುಗೇಟು ಕೊಟ್ಟಿದ್ದಾರೆ.

    ಬೈಂದೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚೆಗೆ ಈಶ್ವರಪ್ಪ ಎಂಬ ಹೆಸರಿನವರ‍್ಯಾರು ನನಗೆ ಪರಿಚಯ ಇಲ್ಲ ಎಂದಿದ್ದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ವೇಳೆ ನನ್ನ ಮಾತು ಅಮಿತ್ ಶಾಗೆ ತಲುಪಿದೆ. ಇಂದು ಸಹ ನನಗೆ ಕರೆ ಬಂದಿದೆ. ಈ ವಿಚಾರ ತಿಳಿದು ಉತ್ತರ ಕೊಡಲು ಆಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

    ನನ್ನ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಗೀತಾ ಶಿವರಾಜ್‍ಕುಮಾರ್ ಯಡಿಯೂರಪ್ಪ ಹಾಕಿರುವ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ ಎಂದರು.

    ವಿಜಯೇಂದ್ರ ಇನ್ನೂ ಎಳಸು, ನನ್ನ ಸಾಧನೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ಏನೂ ಕೆಲಸ ಮಾಡಿಲ್ಲ ಎನ್ನಲಿ, ಆಗ ನಿಮಗೆ ಉತ್ತರ ಕೊಡುತ್ತೇನೆ. ತಪಸ್ಸಿಂದ ಕಟ್ಟಿದ ಪಕ್ಷ ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಕಂಪನಿ ಅಲ್ಲ. ನನಗೆ ಆರ್‍ಎಸ್‍ಎಸ್, ಸಂಘಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ. ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದ ಒಳಮರ್ಮ ಹೆಚ್‍ಡಿಕೆಗೆ ಬೇಗ ಅರ್ಥವಾಗಲಿ. ನಮ್ಮ ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಸೈನ್ಯಕ್ಕೆ ದ್ರೋಹವಾಗಿದೆ. ಬಿವೈವಿ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗ ಸಭೆಯಲ್ಲಿ ಕುಂಕುಮ ಒರೆಸಿದ ಗೀತಾ ಶಿವರಾಜ್‍ಕುಮಾರ್ ವಿಚಾರವಾಗಿ, ಇದು ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನವಾಗಿದೆ. ಇವರೆಲ್ಲ ಮುಸಲ್ಮಾನರನ್ನು ಸಂತೃಪ್ತಿ ಮಾಡಿಕೊಂಡಿರಲಿ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಬಾಳ್ವೆಯಿಲ್ಲ. ನಾನು, ನನ್ನ ಜೊತೆ ಬಂದವರು ತಾಯಿ ಭಾರತಿಯನ್ನು ನಂಬಿದವರು ಎಂದರು.

    ಚುನಾವಣೆಗೆ ಸಾಧು ಸಂತರನ್ನು ನಡುವೆ ತರುವುದು ನೋವಿನ ಸಂಗತಿಯಾಗಿದೆ. ಈ ವಿಚಾರವನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ

  • ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

    ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

    – 1962 ರ ವರೆಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಯೇ ನಡೆದಿರಲಿಲ್ಲ
    – ಕರ್ನಾಟಕದ ಏಕೈಕ ಮಹಿಳಾ ಅಭ್ಯರ್ಥಿಗೆ ಗೆಲುವು

    ಪಬ್ಲಿಕ್ ಟಿವಿ ವಿಶೇಷ
    ಸ್ವಾತಂತ್ರ್ಯ ಬಂದು ಎರಡು ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದರೂ ಭಾರತ ಹಲವಾರು ಸಮಸ್ಯೆಗಳನ್ನು ಹೊದ್ದುಕೊಂಡಿತ್ತು. ಬಳಿಕ ಬರುಬರುತ್ತಾ ಸಮಸ್ಯೆಗಳಿಗೆ ಒಂದೊಂದೇ ಪರಿಹಾರ ಕಂಡುಕೊಳ್ಳಲು ಶುರು ಮಾಡಿತು. ಎರಡು ಮತ್ತು ಮೂರನೇ ಸಾರ್ವತ್ರಿಕ ಚುನಾವಣೆ ಹೊತ್ತಿಗೆ (1957-1962) ‘ಗೋವಾ ವಿಮೋಚನೆ’ಯಾಯಿತು (ಅಲ್ಲಿಯವರೆಗೂ ಗೋವಾ ಪೋರ್ಚುಗೀಸರ ಆಡಳಿತದಲ್ಲಿತ್ತು). ನಾಗಾಲ್ಯಾಂಡ್ ರಾಜ್ಯ ರಚನೆಗೆ ಆಗಿನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತು. ಅಲ್ಲಿವರೆಗೂ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಮಾದರಿಯಂತೆಯೇ ನಾಗಲ್ಯಾಂಡ್ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲಾಗುತ್ತಿತ್ತು.

    3ನೇ ಸಾರ್ವತ್ರಿಕ ಚುನಾವಣೆ
    1962 ರ ಫೆಬ್ರುವರಿ 19 ರಿಂದ 25 ರವರೆಗೆ ಏಳು ದಿನಗಳ ಕಾಲ ಮೂರನೇ ಲೋಕಸಭಾ ಚುನಾವಣೆ (Lok Sabha Election 2024) ನಡೆಯಿತು. 494 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 18 ರಾಜ್ಯಗಳಿಂದ 1985 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 12,77,19,470 ಮತದಾರರು ಮತ ಚಲಾಯಿಸಿದರು. ಅವರಲ್ಲಿ ಪುರುಷರು 6,73,88,166 ಹಾಗೂ ಮಹಿಳಾ ಮತದಾರರು 6,03,31,304 ವೋಟ್ ಮಾಡಿದರು. 55.42% ಮತದಾನವಾಗಿತ್ತು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?

    ಚುನಾವಣಾಧಿಕಾರಿ ಯಾರು?
    ಸ್ವತಂತ್ರ ಭಾರತದ ಎರಡನೇ ಮತ್ತು ದೀರ್ಘಾವಧಿಯ ಮುಖ್ಯ ಚುನಾವಣಾ ಆಯುಕ್ತರಾಗಿ ಕೆವಿಕೆ ಸುಂದರಂ ಅವರು ಗುರುತಿಸಿಕೊಂಡರು. ಡಿಸೆಂಬರ್ 1958 ರಲ್ಲಿ ಸುಕುಮಾರ್ ಸೇನ್ ಅವರಿಂದ ಸುಂದರಂ ಅಧಿಕಾರ ವಹಿಸಿಕೊಂಡರು. ಇವರು ಮೂರು ಮತ್ತು ನಾಲ್ಕನೇ ಲೋಕಸಭೆ ಚುನಾವಣೆಗಳಲ್ಲಿ ಈ ಹುದ್ದೆಯನ್ನು ಅಲಂಕರಿಸಿದರು.

    27 ಪಕ್ಷಗಳು
    ಚುನಾವಣೆಯಲ್ಲಿ 27 ಪಕ್ಷಗಳು ಕಣದಲ್ಲಿದ್ದವು. ಅವುಗಳಲ್ಲಿ 6 ರಾಷ್ಟ್ರೀಯ ಪಕ್ಷಗಳಿದ್ದವು. ಮಾನ್ಯತೆ ಪಡೆದಿದ್ದ 11 ಹಾಗೂ ನೋಂದಾಯಿಸಿಕೊಂಡಿದ್ದ 10 ಪಕ್ಷಗಳು ಸ್ಪರ್ಧಿಸಿದ್ದವು. ಇದನ್ನೂ ಓದಿ: ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ: ಹೆಚ್‌ಡಿಡಿ ವಿರುದ್ಧ ಡಿಕೆಶಿ ಕಿಡಿ

    ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ
    ರಾಜಕೀಯವಾಗಿ ಪ್ರಬಲವಾಗಿದ್ದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿತು. ಜವಾಹರಲಾಲ್ ನೆಹರೂ ಅವರು ಮತ್ತೆ ಪ್ರಧಾನಿಯಾಗಿ ಹುದ್ದೆ ಅಲಂಕರಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 361 ಸ್ಥಾನಗಳನ್ನು ಗೆದ್ದು ಪೈಪೋಟಿಯಿಲ್ಲದೇ ಅಧಿಕಾರ ಉಳಿಸಿಕೊಂಡಿತು. ಆದರೆ ಕಳೆದ ಎರಡು ಚುನಾವಣೆಗಳಿಗಿಂತ ಗೆಲುವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟದಲ್ಲಿ ಕುಸಿತ ಕಂಡಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 29 ಸ್ಥಾನಗಳನ್ನು ಗೆದ್ದಿತು. ಭಾರತೀಯ ಜನಸಂಘ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡಂಕಿ ಮುಟ್ಟಿತು. ಸಮಾಜವಾದಿ ಪಕ್ಷ 18, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 12 ಸ್ಥಾನಗಳನ್ನು ಗೆದ್ದುಕೊಂಡವು. ತಮಿಳುನಾಡಿನ ಡಿಎಂಕೆ ಪಕ್ಷ 7 ಸ್ಥಾನಗಳನ್ನು ಗೆದ್ದು ಗಮನ ಸೆಳೆಯಿತು. 20 ಪಕ್ಷೇತರ ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು.

    ‘ಲೋಕ’ಸಮರದಲ್ಲಿ ಮಹಿಳಾಮಣಿಗಳು
    1985 ಒಟ್ಟು ಅಭ್ಯರ್ಥಿಗಳ ಪೈಕಿ 66 ಮಹಿಳೆಯರು ಕಣಕ್ಕಿಳಿದಿದ್ದರು. 31 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಆಗಿನ ಮೈಸೂರು ರಾಜ್ಯದಿಂದ ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಇದನ್ನೂ ಓದಿ: ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!

    1967 ರ ವರೆಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಯೇ ನಡೆದಿರಲಿಲ್ಲ!
    1952-62 ರವರೆಗೆ ಜಮ್ಮು-ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಯೇ ನಡೆದಿರಲಿಲ್ಲ. 1952 ರ ಸಂದರ್ಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಶೇಖ್ ಅಬ್ದುಲ್ಲಾ ಅವರು 10 ಮಂದಿಯನ್ನು ಆಯ್ಕೆ ಮಾಡಿ, ಅವರನ್ನು ಜಮ್ಮು-ಕಾಶ್ಮೀರದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರನ್ನಾಗಿ ಮಾಡಿದ್ದರು.

    ಕರ್ನಾಟಕದ ಏಕೈಕ ಮಹಿಳಾ ಅಭ್ಯರ್ಥಿಗೆ ಗೆಲುವು
    1962 ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ಸರೋಜಿನಿ ಮಹಿಷಿ ಗೆದ್ದು ಬೀಗಿದ್ದರು. ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಂದು ಕೇವಲ 10 ಸಾವಿರ ಖರ್ಚು ಮಾಡಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು.