– ಮೋದಿ ಕಾಲಘಟ್ಟದಲ್ಲಿ ಅವಕಾಶ ಸಿಕ್ಕಿರೋದು ಜನ್ಮ-ಜನ್ಮಗಳ ಸೌಭಾಗ್ಯ – ಬಿಜೆಪಿ-ಜೆಡಿಎಸ್ ಹಾಲು, ಜೇನಿನಂತೆ ಬೆರೆತು ಕೆಲಸ ಮಾಡ್ತೀವಿ ಎಂದ ಸುಧಾಕರ್
ಬೆಂಗಳೂರು: ನನ್ನ ಕ್ಷೇತ್ರವನ್ನು ವಿಶ್ವದಲ್ಲೇ ಮಾದರಿ ಕ್ಷೇತ್ರ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ (Dr.K Sudhakar) ಹೇಳಿದ್ದಾರೆ.
ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರನ್ನು (H.D Kumaraswamy) ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ (BJP) ಹೈಕಮಾಂಡ್ ನಾಯಕರು, ಮೋದಿ, ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಕುಮಾರಸ್ವಾಮಿಯವರ ಸಹಕಾರದಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇನೆ. ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಹೇಳುತ್ತೇನೆ. ಮಾಜಿ ಶಾಸಕರಾದ ಎಂಟಿಬಿ ನಾಗರಾಜ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಜೆಡಿಎಸ್ ಮುಖಂಡರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೋದಿಯವರ ಕಾಲಘಟ್ಟದಲ್ಲಿ ನನಗೆ ಅವಕಾಶ ಸಿಕ್ಕಿರುವುದು ಜನ್ಮ ಜನ್ಮಗಳ ಸೌಭಾಗ್ಯ ಎಂದಿದ್ದಾರೆ. ಇದನ್ನೂ ಓದಿ: ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ‘ಮಂಡಿ’ ಅಖಾಡದಲ್ಲಿ ಕಂಗನಾ
ಹಾಲು-ಜೇನಿನಂತೆ ಬೆರೆತು ಕೆಲಸ ಮಾಡ್ತೀವಿ:
ನಮ್ಮ ಕ್ಷೇತ್ರದಲ್ಲಿ 20 ಲಕ್ಷ ಮತದಾರರಿದ್ದಾರೆ. ಅವರಿಗೆ ಮನವಿ ಮಾಡ್ತೀನಿ. ನನ್ನ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನೋಡಿ. ಈ ಅಭಿವೃದ್ಧಿಯನ್ನ ಇಡೀ ಲೋಕಸಭಾ ಕ್ಷೇತ್ರಕ್ಕೆ ವಿಸ್ತರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಸ್ವಾಭಾವಿಕ ಮೈತ್ರಿಯಾಗಿದ್ದು, ಎರಡೂ ಪಕ್ಷಗಳ ನಡುವೆ ಯಾವತ್ತೂ ವೈರತ್ವ ಇರುವ ಪಕ್ಷಗಳಲ್ಲ. ಸ್ಥಳೀಯ ಕಾರ್ಯಕರ್ತರು, ನಾಯಕರಿಗೆ ಒಟ್ಟಾಗಿ ಕೆಲಸ ಮಾಡ್ತಾರೆ. ಇದು ಸ್ವಾಭಾವಿಕ ಮೈತ್ರಿ. ಇಡೀ ರಾಜ್ಯದಲ್ಲಿ ಹಾಲು ಜೇನಿನಂತೆ ಬೆರತು ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತೇವೆ. ಒಳ್ಳೆಯ ಫಲಿತಾಂಶಕ್ಕಾಗಿ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಜನ ಮತ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವನಾಥ್ ಭದ್ರ ಕೋಟೆ ಕಟ್ಟಿದ್ದಾರೆ:
ಶಾಸಕ ಎಸ್.ಆರ್ ವಿಶ್ವನಾಥ್ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ವಿಶ್ವನಾಥ್ ಅವರ ಜೊತೆ ಮಾತನಾಡುತ್ತೇನೆ. ಅವರು ಹಿರಿಯರು, ಅವರ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಭದ್ರಕೋಟೆ ಕಟ್ಟಿದ್ದಾರೆ. ನಾವಿಬ್ಬರು ಮೊದಲೇ ಮಾತಾಡಿಕೊಂಡಿದ್ದೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗೆ ಕೆಲಸ ಮಾಡಬೇಕು. ಹೊರಗಡೆಯವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಚರ್ಚಿಸಿದ್ದೆವು. ಅದಕ್ಕೆ ಹೈಕಮಾಂಡ್ ಮನ್ನಣೆ ಕೊಟ್ಟಿದೆ. ವಿಶ್ವನಾಥ್ ಪ್ರಬಲ ನಾಯಕರು. ಅವರ ಪಡೆ ಸಂಘಟನೆ ಉತ್ತಮವಾಗಿದೆ. ಪಕ್ಷಕ್ಕೆ ಪೂರಕವಾಗಿ ಅವರ ನಿರ್ಣಯ ಇರಲಿದೆ. ಅವರು ಪಕ್ಷದ ಪರ ಇದ್ದು, ನನಗೆ ಸಹಕಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ
ಈರೋಡ್: ತಮಿಳುನಾಡಿನ (Tamil Nadu) ಈರೋಡ್ ಕ್ಷೇತ್ರದ ಹಾಲಿ ಎಂಡಿಎಂಕೆ (MDMK) ಸಂಸದ ಎ.ಗಣೇಶಮೂರ್ತಿ (76) (Ganeshamoorthy) ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024 )ಟಿಕೆಟ್ ಕೈತಪ್ಪಿದ್ದಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಈರೋಡ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ತಪಾಸಣೆಗೆ ಒಳಪಡಿಸಿದ ಬಳಿಕ ಐಸಿಯುಗೆ ದಾಖಲಿಸಿ, ವೆಂಟಿಲೇಟರ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವೈಕೋ ನಾಯಕತ್ವದ ಎಂಡಿಎಂಕೆ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ ತನ್ನ ಮಿತ್ರಪಕ್ಷಕ್ಕೆ ಈರೋಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಅಲ್ಲಿಂದ ಎಂಡಿಎಂಕೆ ಅಭ್ಯರ್ಥಿ ಗಣೇಶಮೂರ್ತಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಡಿಎಂಕೆ ತನ್ನದೇ ಅಭ್ಯರ್ಥಿ ಕೆ.ಇ ಪ್ರಕಾಶ್ ಅವರಿಗೆ ಟಿಕೆಟ್ ನೀಡಿದೆ. ಎಂಡಿಎಂಕೆಗೆ ತಿರುಚಿರಾಪಳ್ಳಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ವಿಜಯಪುರ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ – 1 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿಯು (BJP) ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್ (Jagadeesh Shettar), ರಾಯಚೂರು- ರಾಜಾ ಅಮರೇಶ್ವರ ನಾಯಕ್, ಉತ್ತರ ಕನ್ನಡ- ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri), ಚಿಕ್ಕಬಳ್ಳಾಪುರದಿಂದ ಡಾ. ಕೆ.ಸುಧಾಕರ್ (Dr.K.Sudhakar) ಅವರಿಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಕೈಗಾರಿಕೋದ್ಯಮಿ, ಕಾಂಗ್ರೆಸ್ ಮಾಜಿ ಸಂಸದ ನವೀನ್ ಜಿಂದಾಲ್ ಬಿಜೆಪಿಗೆ ಸೇರ್ಪಡೆ
ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ಕಾಯ್ದಿರಿಸಿದೆ. ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹಾಲಿ ಸಂಸದ ಎ.ನಾರಾಯಣ ಸ್ವಾಮಿ ವರ್ಸಸ್ ಜನಾರ್ದನ ಸ್ವಾಮಿ ಮಧ್ಯೆ ತೀವ್ರ ಪೈಪೋಟಿ ಇದೆ. ಜನಾರ್ದನ ಸ್ವಾಮಿ ಪರ ಸಂಘ ಪರಿವಾರ ನಿಂತಿದೆ. ಇದರ ಮಧ್ಯೆ ಗೋವಿಂದ ಕಾರಜೋಳ ಹೆಸರು ಕೂಡ ಕೇಳಿಬರುತ್ತಿದೆ. ಹೀಗಾಗಿ ಪಕ್ಷದ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇತ್ತ ಉತ್ತರ ಕನ್ನಡ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಮಿಸ್ ಆಗಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರಿಂದಲೇ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಅವರ ಬದಲಿಗೆ ವಿಧಾನಸಭಾ ಮಾಜಿ ಸಭಾಧ್ಯಕ್ಷ ಕಾಗೇರಗೆ ಈ ಬಾರಿ ಪಕ್ಷ ಮಣೆ ಹಾಕಿದೆ. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ ಆಗುತ್ತೆ: ರಾಜನಾಥ್ ಸಿಂಗ್ ಭರವಸೆ
ಚಿಕ್ಕಬಳ್ಳಾಪುರಕ್ಕೆ ಹೈಕಮಾಂಡ್ ಕೋಟಾದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಡಾ. ಕೆ.ಸುಧಾಕರ್‌ಗೆ ಟಿಕೆಟ್ ಹೈಕಮಾಂಡ್ ಕೋಟಾದಲ್ಲಿ ನೀಡಿದೆ ಎನ್ನಲಾಗಿದೆ. ಸ್ಥಳೀಯವಾಗಿ ಸುಧಾಕರ್ ಪ್ರಭಾವ ಮತ್ತು ಬಿಜೆಪಿ ಕೋಟೆ ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ನೀಡಲಾಗಿದೆ.
ಇನ್ನು ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ ಬದಲು ಜಗದೀಶ್ ಶೆಟ್ಟರ್‌ಗೆ ಪಕ್ಷ ಮಣೆ ಹಾಕಿದೆ. ಸ್ಥಳೀಯರ ವಿರೋಧದ ಮಧ್ಯೆಯೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ ಆಗಿದ್ದ ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಟಿಕೆಟ್ ನೀಡಲಾಗಿದೆ. ಯಡಿಯೂರಪ್ಪ ಒತ್ತಾಯದ ಮೇರೆಗೆ ಶೆಟ್ಟರ್‌ಗೆ ಟಿಕೆಟ್ ಸಿಕ್ಕಿದೆ. ಸ್ಥಳೀಯ ನಾಯಕರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಸಮಾಲೋಚನೆಗೆ ನಿರ್ಧಾರ ಮಾಡಿದ್ದಾರೆ. ಮುಂದಿನ ವಾರವೇ ಬೆಳಗಾವಿ ಸಂಧಾನ ಕಸರತ್ತು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಲ್ಲೇ ಕೈಗಾರಿಕೋದ್ಯಮಿ ಮತ್ತು ಕಾಂಗ್ರೆಸ್ ಮಾಜಿ ನಾಯಕ ನವೀನ್ ಜಿಂದಾಲ್ (Naveen Jindal) ಭಾನುವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನಾನು 10 ವರ್ಷಗಳ ಕಾಲ ಕುರುಕ್ಷೇತ್ರ ಕ್ಷೇತ್ರದಿಂದ ಸಂಸದನಾಗಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದೇನೆ. ನಾನು ಕಾಂಗ್ರೆಸ್ ನಾಯಕತ್ವ ಮತ್ತು ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಂದಾಲ್ ತಿಳಿಸಿದ್ದಾರೆ.
– ಹೆಚ್‌ಡಿಕೆ ಆರೋಗ್ಯ ಸರಿಯಿಲ್ಲ.. ಅವರು ಬೇಗ ಗುಣಮುಖರಾಗಲಿ – ಕೋವಿಡ್ ವೇಳೆ ಇಡೀ ರಾಜ್ಯವೇ ಮಲಗಿದ್ದಾಗ ನಾನೊಬ್ಬನೇ ಓಡಾಡಿದ್ದೇನೆ
ಬೆಂಗಳೂರು: ಕುಮಾರಸ್ವಾಮಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದೇ ಅವರ ಉದ್ಯೋಗ ಎಂದು ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟರು.
ಲೋಕಸಭಾ ಚುನಾವಣೆ ಹಿನ್ನೆಲೆ ‘ಪಬ್ಲಿಕ್ ಟಿವಿ’ ಜೊತೆ ಮಾಡಿದ ಅವರು, ಜೆಡಿಎಸ್ ನಾಯಕರ ಮನೆಗೆ ಹೋಗುವುದು, ಪಕ್ಷಕ್ಕೆ ಅವರನ್ನು ಸೆಳೆಯುವುದು, ಬೆದರಿಕೆ ಹಾಕುವ ಅಭ್ಯಾಸ ಡಿ.ಕೆ.ಶಿವಕುಮಾರ್‌ಗಾಗಲಿ ಅಥವಾ ಡಿ.ಕೆ.ಸುರೇಶ್‌ಗಾಗಲಿ ಇಲ್ಲ. ಆರೋಪ ಮಾಡುವುದು ರಾಜಕೀಯದ ಹುಟ್ಟು ಗುಣ. ಹೆಚ್.ಡಿ.ಕುಮಾರಸ್ವಾಮಿ ಅವರು ವೈದ್ಯಕೀಯ ಸೇವೆಯಲ್ಲಿದ್ದಾರೆ. ಆರೋಗ್ಯ ಸರಿಯಿಲ್ಲ. ಅವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: Exclusive: ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತು.. ಡಾ.ಮಂಜುನಾಥ್ ಮಿಡಿತ ಬೇಕಾಗಿಲ್ಲ: ಡಿ.ಕೆ.ಸುರೇಶ್
ಭಯ ಅನ್ನೋದು ಭಗವಂತನ ಸೃಷ್ಟಿ. ಜನ ನನ್ನ ಹಿಂದೆ ಇರೋವರೆಗೂ ಯಾರಿಗೂ ಹೆದರುವ ಪ್ರಶ್ನೆ ಇಲ್ಲ ಎಂದರು. ಕುಕ್ಕರ್, ಸೀರೆ ಹಂಚುವ ಆರೋಪ ಕುರಿತು ಮಾತನಾಡಿ, ಅದನ್ನು ಯಾರು ಹಂಚಿದ್ದಾರೆ ಎಂಬುದನ್ನು ನೀವೇ ಕೇಳಿಕೊಳ್ಳಬೇಕು. ಕೆಲವರು ಹಂಚುತ್ತಿರುತ್ತಾರೆ. ಕೆಲವರು ಒಳಗೊಳಗೆ ಏನೇನೊ ಮಾಡ್ತಿರುತ್ತಾರೆ. ಕುಮಾರಸ್ವಾಮಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದೇ ಅವರ ಉದ್ಯೋಗ ಎಂದು ತಿರುಗೇಟು ನೀಡಿದರು.
100% ಗ್ಯಾರಂಟಿ ನಮ್ಮ ಕೈ ಹಿಡಿಯುತ್ತೆ. ಮಹಿಳೆಯರಷ್ಟೇ ಅಲ್ಲ, ಕುಟುಂಬದ ಎಲ್ಲಾ ಸದಸ್ಯರು ನಮ್ಮ ಪರ ನಿಲ್ಲುತ್ತಾರೆ. 5 ಗ್ಯಾರಂಟಿಗಳು ರಾಜ್ಯದ ಮುಂದಿನ ಚಿತ್ರಣವನ್ನು ಬದಲಾಯಿಸುತ್ತೆ. ಯಾವ ರೀತಿ ಆರ್ಥಿಕ ಬದಲಾವಣೆ ಆಗುತ್ತೆ ಎಂಬುದನ್ನ ನೀವೇ ನೋಡ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.
ಮುನಿರತ್ನ ಅವರು ನನ್ನ ಜೊತೆ ಇದ್ದ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಸಿಕೊಟ್ಟಿದ್ದೇನೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ನೂರಾರು ಕೋಟಿ ಅನುದಾನ ಅವರಿಗೆ ಸಿಗುವಂತೆ ಮಾಡಿದ್ದೇನೆ. ಇವತ್ತೇನಾದರು ಮುನಿರತ್ನ ಅವರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಂಡರೆ, ಅದರಲ್ಲಿ ನನ್ನ 50% ಪಾಲಿದೆ. ನಾನು ಅವರ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದೇನೆ. ಅದು ಕಾಂಗ್ರೆಸ್ ಕೊಟ್ಟ ಕೊಡುಗೆ. ಮುನಿರತ್ನ ಅವರ ವೈಯಕ್ತಿಕ ಅಲ್ಲ. ನಾನು ಕೂಡ ಅದರಲ್ಲಿ ಪಾಲುದಾರ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯ ಮಲಗಿತ್ತು. ಈ ಡಿ.ಕೆ.ಸುರೇಶ್ ಒಬ್ಬನೇ ರಸ್ತೆಯಲ್ಲಿ ಓಡಾಡುತ್ತಿದ್ದದ್ದು. ದೇಶದಲ್ಲಿ ಎಲ್ಲರೂ ತಮ್ಮ ಭಾಷಣಗಳನ್ನು ಆನ್‌ಲೈನ್ ಮುಖಾಂತರ ಮಾಡುತ್ತಾ ಅವರ ಕೆಲಸ ಕಾರ್ಯ ನಿರ್ವಹಿಸುತ್ತಿದ್ದರು. ನಾನು ರೈತರು, ರೋಗಿಗಳ ಪರ ನಿಂತಿದ್ದೇನೆ. ನನ್ನ ಜೀವ ಹೋದರೂ ಚಿಂತೆಯಿಲ್ಲ ಅಂತಾ ಐಸಿಯುಗೆ ಹೋಗಿ ರೋಗಿಗಳ ಕಷ್ಟ ಆಲಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಾನು ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆ ಇದೆ ಎಂದು ಕರಾಳ ಸನ್ನಿವೇಶದಲ್ಲಿ ತಮ್ಮ ಬದ್ಧತೆ ನೆನಪಿಸಿಕೊಂಡರು.
ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಗೆ (Lok Sabha Election 2024) ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆಯುವಂತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸಂಸದ ಡಿ.ಕೆ.ಸುರೇಶ್ (D.K.Suresh) ವಿರುದ್ಧ ವೈದ್ಯಲೋಕದಲ್ಲಿ ಖ್ಯಾತನಾಮರಾದ ಡಾ. ಸಿ.ಎನ್.ಮಂಜುನಾಥ್ (Dr. C.N.Manjunath) ಕಣಕ್ಕಿಳಿದಿದ್ದಾರೆ. ಜಿದ್ದಾಜಿದ್ದಿ ಕಣದ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ‘ಹಾಟ್ ಸೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಬಲ ವ್ಯಕ್ತಿ ನನ್ನ ವಿರುದ್ಧ ಸ್ಪರ್ಧಿಸುತ್ತಾರೆ ಅಂದುಕೊಂಡಿದ್ದೆ. ಆದರೆ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಇಡೀ ಕ್ಷೇತ್ರದ ಜನರ ಮಿಡಿತ ನನಗೆ ಗೊತ್ತು. ಮಂಜುನಾಥ್ ಅವರ ಮಿಡಿತ ನನಗೆ ಬೇಕಾಗಿಲ್ಲ. ಅವರನ್ನ ನಾನು ವೈದ್ಯರಾಗಿ ನೋಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮಗ-ಮಗಳು, ಸೊಸೆ-ಅಳಿಯ, ಅಣ್ಣ ಎಲ್ಲಾ ಇದ್ದಾರೆ; ಕುಟುಂಬ ರಾಜಕಾರಣ ಆರೋಪಕ್ಕೆ ಡಾ.ಮಂಜುನಾಥ್ ತಿರುಗೇಟು
ರಾಜಕೀಯ ಬಂದಾದ ಮೇಲೆ ಚುನಾವಣೆಗಳು ಸಹಜ. ಯಾವತ್ತಿನಿಂದ ಜನರು ನನ್ನನ್ನು ಆಶೀರ್ವದಿಸಿ ಕಳುಹಿಸಿಕೊಟ್ಟರೋ ಅವತ್ತಿನಿಂದ ಜನರ ಸೇವೆಯಲ್ಲಿದ್ದೇನೆ. ಹೀಗಾಗಿ ನನಗೆ ಚುನಾವಣೆ ಹೊಸದೇನಲ್ಲ. ಚುನಾವಣೆ ಕಾವು ಏರಿದೆ ಅಂತ ನನಗೆ ಅನಿಸುತ್ತಿಲ್ಲ. ಚುನಾವಣೆ ಇದೆ ಅಂತ ನಾನು ತಯಾರಿ ಆಗಲ್ಲ. ಗೆದ್ದಾದ ಮೇಲೆ ಅವತ್ತಿನಿಂದ ನನ್ನ ಕಾರ್ಯಕ್ರಮ ಪ್ರಾರಂಭವಾಗುತ್ತೆ. ಒಬ್ಬ ಅಭ್ಯರ್ಥಿಯಾಗಿ ನನ್ನ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನಷ್ಟೇ ಮಾಡ್ತೀನಿ ಎಂದು ಹೇಳಿದರು.
ಡಿ.ಕೆ.ಸುರೇಶ್ ಸೈಲೆಂಟಾಗಿದ್ದಾರೆ ಅಂತ ಏನು ಇಲ್ಲ. ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಕಾದು ನೋಡುತ್ತಿದ್ದೇನೆ. ನಾನು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಕ್ಷೇತ್ರದ ಉದ್ದಗಲಕ್ಕೂ ನನ್ನದೇ ರೀತಿಯಲ್ಲಿ ರೈತರ ಸಮಸ್ಯೆ, ಯುವಕರು, ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಒಂದಷ್ಟು ಕೆಲಸಕಾರ್ಯ ಮಾಡಿದ ತೃಪ್ತಿ ನನಗಿದೆ. ಆ ನಿಟ್ಟಿನಲ್ಲಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವಂತೆ ಕೇಳುತ್ತಿದ್ದೇನೆ ಎಂದು ಮಾತನಾಡಿದರು. ಇದನ್ನೂ ಓದಿ: ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನ ನಂಬುತ್ತೇವೆ: ಡಿಕೆಶಿ
2013 ರಲ್ಲಿ ದೇವೇಗೌಡರ ಸೊಸೆ ವಿರುದ್ಧ ಸ್ಪರ್ಧಿಸಿ ಗೆಲುವು, 2024 ರಲ್ಲಿ ದೇವೇಗೌಡರ ಅಳಿಯನ ಜೊತೆ ಫೈಟ್ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್, ಇದು ಹೊಸದಲ್ಲ. 1985 ರಿಂದಲೂ ನಡೆದುಕೊಂಡು ಬಂದಿರುವಂಥದ್ದು. ದೇವೇಗೌಡರ ಕುಟುಂಬದ ಜೊತೆಗಿನ ಜಿದ್ದಾಜಿದ್ದಿ ನಿರೀಕ್ಷಿಸಿರಲಿಲ್ಲ. ಇದನ್ನ ಅವರು ಮುಂದುವರಿಸುತ್ತಿದ್ದಾರೆ. ಬಹಳ ಸಂತೋಷದಿಂದ ಅದನ್ನು ಸ್ವಾಗತಿಸುತ್ತೇನೆ ಎಂದರು.
– ಡಿ.ಕೆ.ಸುರೇಶ್ ವಿರುದ್ಧ ಡಾ. ಸಿ.ಎನ್.ಮಂಜುನಾಥ್ ಕಣಕ್ಕೆ; ಗ್ರಾಮಾಂತರ ಯಾರ ವಶಕ್ಕೆ?
ಲೋಕಸಭೆ ಚುನಾವಣೆಗೆ (Lok Sabha Election 2024) ಅಖಾಡ ಸಿದ್ಧವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ (Congress) ಲೋಕಸಭೆಗೆ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಸಾರ್ವತ್ರಿಕ ಚುನಾವಣೆ ಅಖಾಡಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ‘ಕೈ’ ಹಿಡಿದಿದ್ದು ಬೆಂಗಳೂರು ಗ್ರಾಮಾಂತರ ಏಕೈಕ ಕ್ಷೇತ್ರ ಮಾತ್ರ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ (D.K.Suresh) ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ 3 ಬಾರಿ ಡಿ.ಕೆ.ಸುರೇಶ್ ಆಯ್ಕೆಯಾಗಿದ್ದಾರೆ. ಡಿಕೆ ಬ್ರದರ್ಸ್ ಭದ್ರಕೋಟೆಯನ್ನು ಹೇಗಾದರು ಮಾಡಿ ಭೇದಿಸಬೇಕು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಪಣ ತೊಟ್ಟಂತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಡಾ. ಸಿ.ಎನ್.ಮಂಜುನಾಥ್ (Dr. C.N.Manjunath) ಅವರನ್ನು ಮೈತ್ರಿ ಪಕ್ಷಗಳು ಕಣಕ್ಕಿಳಿಸಿದೆ. ಇದನ್ನೂ ಓದಿ: Raichuru Lok Sabha 2024: ರಾಜರ ಊರಲ್ಲಿ ಪಟ್ಟಕ್ಕೇರೋದು ಯಾರು?
ಕ್ಷೇತ್ರ ಪರಿಚಯ
ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರ 2008 ರಲ್ಲಿ ರಚನೆಯಾಯಿತು. ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾಯಿತು. ಕನಕಪುರ ವಿಧಾನಸಭಾ ಕ್ಷೇತ್ರದಿಂದ ಬೇರ್ಪಟ್ಟು 2009 ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಸಂಸದರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ 2013 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಪ್ರಪ್ರಥಮ ಬಾರಿಗೆ ಸ್ಪರ್ಧೆಗಿಳಿದಿದ್ದ ಡಿ.ಕೆ.ಸುರೇಶ್ ಗೆಲುವು ದಾಖಲಿಸಿದ್ದರು. 1.27 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ನಂತರ 2014 ಮತ್ತು 2019 ರಲ್ಲಿ ನಡೆದ ಚುನಾವಣೆಯಲ್ಲೂ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದರು.
ಒಟ್ಟು ಮತದಾರರು ಎಷ್ಟು?
ಈ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 27,63,910 ಇದೆ. ಅವರ ಪೈಕಿ ಪುರುಷರು 14,06,042 ಹಾಗೂ 13,57,547 ಮಹಿಳಾ ಮತದಾರರಿದ್ದಾರೆ. ತೃತೀಯಲಿಂಗಿ ಮತದಾರರು 321 ಮಂದಿ ಇದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ ಗೆಲುವು ದಾಖಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಈ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಚುನಾವಣೆ ಎದುಸಿದ್ದವು. ಡಿ.ಕೆ.ಸುರೇಶ್ 2,06,870 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ಧ ಬಿಜೆಪಿಯಿಂದ ಅಶ್ವಥ್ ನಾರಾಯಣಗೌಡ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?
ಡಿ.ಕೆ.ಸುರೇಶ್ ‘ಕೈ’ ಅಭ್ಯರ್ಥಿ
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನಿಂದ ಮತ್ತೆ ಡಿ.ಕೆ.ಸುರೇಶ್ ಕಣಕ್ಕಿಳಿದಿದ್ದಾರೆ. ಅವರನ್ನು ಸೋಲಿಸಲು ತಂತ್ರ ಹೆಣೆಯಲಾಗುತ್ತಿದೆ.
ಡಿಕೆ ಬ್ರದರ್ಸ್ ಪಾರುಪತ್ಯ
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಡಿಕೆ ಬ್ರದರ್ಸ್ ಎಂದೇ ಖ್ಯಾತಿಯಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಪಾರುಪತ್ಯ ಜೋರಾಗಿದೆ. ರಾಮನಗರದಲ್ಲೂ ಕಾಂಗ್ರೆಸ್ ಬಲಿಷ್ಠವಾಗಿದೆ. ಈಗ ತಮ್ಮದೇ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಮತ್ತಷ್ಟು ಬಲತುಂಬಿದಂತಾಗಿದೆ. ಕಾಂಗ್ರೆಸ್ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪ್ಲಸ್ ಆಗಬಹುದು ಎಂಬ ಲೆಕ್ಕಾಚಾರವೂ ಇದೆ. ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?
ಡಾ. ಸಿ.ಎನ್.ಮಂಜುನಾಥ್‌ಗೆ ಮೈತ್ರಿ ಟಿಕೆಟ್
ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಮೈತ್ರಿ ಪಕ್ಷಗಳು ಕಣಕ್ಕಿಳಿಸಿವೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಸಿ.ಎನ್.ಮಂಜುನಾಥ್ ಅವರು ಟಿಕೆಟ್ ಗಿಟ್ಟಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಿಕೆಟ್ ಸಿಕ್ಕ ಬಳಿಕ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಮೈತ್ರಿಯಿಂದ ಬಿಜೆಪಿಗೆ ಲಾಭ?
ಕಾಂಗ್ರೆಸ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ-ಜೆಡಿಎಸ್ ರಣತಂತ್ರ ರೂಪಿಸಿವೆ. ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ಖಾತೆ ತೆರೆದಿಲ್ಲ. ಆದರೆ ಬಿಜೆಪಿಗೆ ತನ್ನದೇ ಆದ ಮತಬ್ಯಾಂಕ್ ಈ ಕ್ಷೇತ್ರದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುತ್ತಲೇ ಬಂದಿತ್ತು. ಆದರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ʼಕಮಲʼಕ್ಕೆ ಇದು ವರದಾನವಾಗುವ ಸಾಧ್ಯತೆಯಿದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಡಿ.ಕೆ.ಸುರೇಶ್ ಹೆಚ್ಚು ಅಂತರದಿಂದ ಗೆದ್ದಿರಲಿಲ್ಲ. ಗ್ರಾಮಾಂತರದಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ಗೆ ಈ ಸಲ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2009: ಹೆಚ್.ಡಿ.ಕುಮಾರಸ್ವಾಮಿ – ಜೆಡಿಎಸ್ (1,30,275 ಗೆಲುವಿನ ಅಂತರ)
2013: ಡಿ.ಕೆ.ಸುರೇಶ್ – ಕಾಂಗ್ರೆಸ್ (1,37,007 )
2014: ಡಿ.ಕೆ.ಸುರೇಶ್ – ಕಾಂಗ್ರೆಸ್ (2,31,480)
2019: ಡಿ.ಕೆ.ಸುರೇಶ್ – ಕಾಂಗ್ರೆಸ್ (2,06,870)
ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು – 7.10 ಲಕ್ಷ
ಎಸ್‌ಸಿ/ಎಸ್‌ಟಿ – 5.20 ಲಕ್ಷ
ಲಿಂಗಾಯತರು – 2.6 ಲಕ್ಷ
ಕುರುಬರು – 1 ಲಕ್ಷ
ಮುಸ್ಲಿಂ – 2.5 ಲಕ್ಷ
ಇತರೆ – 4 ಲಕ್ಷ
2008 ರಲ್ಲಿ ಅಸ್ತಿತ್ವಕ್ಕೆ ಬಂದ ಲೋಕಸಭಾ ಕ್ಷೇತ್ರ ಬೆಂಗಳೂರು ಕೇಂದ್ರ (Bengaluru Central). ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದು ಬಿಜೆಪಿ ವಶದಲ್ಲಿದೆ. ಈಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್ (P.C.Mohan) ಬಿಗಿ ಹಿಡಿತ ಸಾಧಿಸಿದ್ದಾರೆ. ಅಲ್ಪಸಂಖ್ಯಾತ ಮತದಾರರ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಭಾಷಾ ಮತ್ತ ಧಾರ್ಮಿಕ ಅಲ್ಪಸಂಖ್ಯಾತರ ಬೆಂಬಲ ಪಡೆಯುವುದು ಇಲ್ಲಿ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಗೆ ಸವಾಲಿನ ವಿಷಯವಾಗಿದೆ. ಅದೇ ಲೆಕ್ಕಾಚಾರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ 2024 ರ ಸಾರ್ವತ್ರಿಕ ಚುನಾವಣೆಯು ಜಿದ್ದಾಜಿದ್ದಿನ ಕಣವಾಗಿದೆ. ಇದನ್ನೂ ಓದಿ: Bengaluru South Lok Sabha 2024: ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?
ಕ್ಷೇತ್ರ ಪರಿಚಯ
2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಅಸ್ತಿತ್ವಕ್ಕೆ ಬಂತು. ಆಗಿನಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಬಿಗಿ ಹಿಡಿತ ಸಾಧಿಸಿದೆ. 2009 ರಲ್ಲಿ ಕ್ಷೇತ್ರಕ್ಕೆ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪಿ.ಸಿ.ಮೋಹನ್ ಗೆಲುವು ದಾಖಲಿಸಿದ್ದರು. ಮತ್ತೆ 2014, 2019 ರ ಚುನಾವಣೆಯಲ್ಲೂ ಜಯಸಿ ಹ್ಯಾಟ್ರಿಕ್ ಸರದಾರ ಎನಿಸಿಕೊಂಡಿದ್ದಾರೆ.
ವಿಧಾನಸಭಾ ಕ್ಷೇತ್ರಗಳೆಷ್ಟು?
ಈ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಸರ್ವಜ್ಞನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿ ನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ (ಎಸ್‌ಸಿ) ವಿಧಾನಸಭಾ ಕ್ಷೇತ್ರಗಳಿವೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಅಂತಹದ್ದೇನು ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಕಾಂಗ್ರೆಸ್ 5 ಹಾಗೂ ಬಿಜೆಪಿ 3 ಸ್ಥಾನ ಗಳಿಸಿದೆ. ಇದನ್ನೂ ಓದಿ: Bengaluru North Lok Sabha 2024: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಮತದಾರರು ಎಷ್ಟಿದ್ದಾರೆ?
ಬೆಂಗಳೂರೂ ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟು 23,98,910 ಮತದಾರರಿದ್ದಾರೆ. ಅವರ ಪೈಕಿ 12,36,897 ಪುರುಷ ಹಾಗೂ 11,61,548 ಮಹಿಳಾ ಮತದಾರರಿದ್ದಾರೆ. 465 ತೃತೀಯಲಿಂಗಿ ಮತದಾರರು ಇದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿ ಸ್ಪರ್ಧಿಸಿದ್ದ ಪಿ.ಸಿ.ಮೋಹನ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ (Rizwan Arshad) ಎರಡನೇ ಬಾರಿಯೂ ಸೋತಿದ್ದರು. ಬಿಜೆಪಿ 70,968 ಮತಗಳ ಅಂತರದಿಂದ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?
ಪಿ.ಸಿ.ಮೋಹನ್‌ಗೆ 4ನೇ ಬಾರಿ ಬಿಜೆಪಿ ಟಿಕೆಟ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಕ್ಷೇತ್ರದಲ್ಲಿ ನಡೆದ ಮೂರು ಚುನಾವಣೆಯಲ್ಲೂ ಸತತವಾಗಿ ಗೆದ್ದಿರುವ ಪಿ.ಸಿ.ಮೋಹನ್‌ಗೆ ಬಿಜೆಪಿ ಮತ್ತೆ ಮಣೆ ಹಾಕಿದೆ.
ಕಾಂಗ್ರೆಸ್‌ನಿಂದ ರಿಜ್ವಾನ್ ಅರ್ಷದ್ ಪುತ್ರ ಕಣಕ್ಕೆ
ಮುಸ್ಲಿಂ ಮತದಾರರ ಬಾಹುಳ್ಯವಿರುವ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರ ಪುತ್ರ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ (Mansoor Ali Khan) ಅವರನ್ನು ಹುರಿಯಾಳಾಗಿಸಿದೆ. ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರೀಸ್ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಗಿಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?
ಜಾತಿವಾರು ಲೆಕ್ಕಾಚಾರ
ಮುಸ್ಲಿಂ- 6,00,000
ಕ್ರೈಸ್ತರು- 2,00,000
ಎಸ್‌ಸಿ- 4,00,000
ಇತರೆ- 6,00,000
ಮೈಸೂರು: ಲೋಕಸಭೆಗೆ 9ನೇ ಸಾರ್ವತ್ರಿಕ ಚುನಾವಣೆ 1989ರಲ್ಲಿ ನಡೆಯಿತು. ಮೈಸೂರು (Mysuru Lok Sabha) ಸಾಮಾನ್ಯ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸತತ ಎರಡನೇ ಬಾರಿಗೆ ಗೆದ್ದಿದ್ದರು.
ಆ ಸಂದರ್ಭದಲ್ಲಿ ಜನತಾ ಪಕ್ಷ ವಿಭಜನೆಯಾಗಿತ್ತು. ಜನತಾದಳ ಹಾಗೂ ಜನತಾಪಕ್ಷ (ಜೆಪಿ) ಎಂದು ಇಬ್ಬಣಗಳಾಗಿ ಕಣದಲ್ಲಿತ್ತು. ಇದರಿಂದ ಕಾಂಗ್ರೆಸ್‌ಗೆ (Congress) ಸುಲಭ ಜಯ ಸಿಕ್ಕಿತು. ಮೈಸೂರು ಕ್ಷೇತ್ರದಲ್ಲಿ 10,52,491 ಮತದಾರರ ಪೈಕಿ ಶೇ.69.74 ರಷ್ಟು ಮತದಾನವಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡಯರ್ 3,84,888 ಮತಗಳು ಪಡೆದು ಬಹು ದೊಡ್ಡ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
ಒಡೆಯರ್ ಸಮೀಪದ ಪ್ರತಿಸ್ಪರ್ಧಿ ಜನತಾಪಕ್ಷ (ಜೆಪಿ) ಅಭ್ಯರ್ಥಿ ಡಿ. ಮಾದೇಗೌಡ- 1,35,524, ಜನತಾದಳದ ಪ. ಮಲ್ಲೇಶ್- 1,31,905, ಬಿಜೆಪಿಯ ತೋಂಟದಾರ್ಯ- 25,398, ಪಕ್ಷೇತರರಾದ ಡಿ. ಕಾಳಸ್ವಾಮಿ- 7,013, ಪತ್ರಕರ್ತರಾಗಿದ್ದ ಶಫಿ ಅಹ್ಮದ್ ಷರೀಫ್ – 4,230, ಮೈಸೂರು ಗ್ರಾಹಕ ಪಂಚಾಯತ್ ಭಾಮಿ ವಿ. ಶೆಣೈ- 2,644 ಮತಗಳನ್ನು ಪಡೆದಿದ್ದರು. ಒಡೆಯರ್ ಅವರ ಈ ಗೆಲುವು ಅವತ್ತಿನ ಮಟ್ಟಿಗೆ ದಾಖಲೆ.
ಮುಂಬೈ: ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆ ತಂತ್ರಗಾರಿಕೆಯನ್ನು ಅನೇಕ ರಾಜ್ಯಗಳು ಅನುಸರಿಸುತ್ತಿವೆ. ಕರ್ನಾಟಕ ಮಾದರಿಯ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಮಿಳುನಾಡಿನ (Tamil Nadu) ಎಐಎಡಿಎಂಕೆ (AIADMK) ಪಕ್ಷ ಮುಂದಾಗಿದೆ.
ಲೋಕಸಭಾ ಚುನಾವಣೆಗೆ (Lok Sabha Election 2024) ಪಕ್ಷ ಸಿದ್ಧವಾಗುತ್ತಿದ್ದು, ಪ್ರಾಣಳಿಕೆ ಬಿಡುಗಡೆ ಮಾಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್
ಬಡ ಕುಟುಂಬಗಳ ಯಜಮಾನಿಗೆ ಮಾಸಿಕ 3,000 ರೂ. ಹಣ ನೀಡಲಾಗುವುದು. ಪ್ರಣಾಳಿಕೆಯು ಆರ್ಥಿಕ ಅಸಮಾನತೆಗಳನ್ನು ಪರಿಹರಿಸುವ ಬದ್ಧತೆ ಹೊಂದಿದೆ ಎಂದು ಪಕ್ಷವು ತಿಳಿಸಿದೆ.