Tag: Lok Sabha Election 2024

  • ನನ್ನ ಮಗನಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು ಬಿಎಸ್‍ವೈ: ಎಂ.ಚಂದ್ರಪ್ಪ

    ನನ್ನ ಮಗನಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು ಬಿಎಸ್‍ವೈ: ಎಂ.ಚಂದ್ರಪ್ಪ

    ಚಿತ್ರದುರ್ಗ: ಪುತ್ರ ರಘುಚಂದನ್‍ಗೆ ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಲು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರೇ ಕಾರಣ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ (M.Chandrappa) ಆಕ್ರೋಶ ಹೊರಹಾಕಿದ್ದಾರೆ.

    ರಾಜ್ಯದ 27 ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆಯಾದರೂ ಸಹ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಮಾತ್ರ ಬಾಕಿಯಾಗಿತ್ತು. ಇದೀಗ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ (BJP) ಮಣೆ ಹಾಕಿದೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ್ದು, ಇದಕ್ಕೆ ಬಿಎಸ್‍ವೈ ಕಾರಣ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿಂಧೆ ಬಣದ ಶಿವಸೇನೆ ಸೇರಿದ ನಟ ಗೋವಿಂದ್

    ಗೋವಿಂದ ಕಾರಜೋಳ ಜೊತೆ ಅದೇನು ಹೊಂದಾಣಿಕೆ ಇದೆಯೋ ಗೊತ್ತಿಲ್ಲ. ಹೀಗಾಗಿ ಅವರಿಗೆ ಟಿಕೆಟ್ ನೀಡದಿದ್ರೆ ನಾನು ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ದಂಬಾಲು ಬಿದ್ದು, ಕಾರಜೋಳ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ನಾನು ಯಡಿಯೂರಪ್ಪ ಕುಟುಂಬಕ್ಕೆ ತೋರಿದ ನಿಷ್ಠೆ ಸಾರ್ಥಕವೆನಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

    ರಘುಚಂದನ್ ಸಹ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಪದೇ ಪದೇ ವಲಸಿಗ ಅಭ್ಯರ್ಥಿಗಳಿಗೆ ಚಿತ್ರದುರ್ಗದಲ್ಲಿ ರಾಷ್ಡ್ರೀಯ ಪಕ್ಷಗಳು ಮಣೆ ಹಾಕುತ್ತಿವೆ. ವಿವಿಧ ಕ್ಷೇತ್ರಗಳ ಚುನಾವಣೆಗಳಲ್ಲಿ ಸೋತು ಸುಣ್ಣವಾದ ನಿರಾಶ್ರಿತರ ಆಶ್ರಯ ತಾಣ ಚಿತ್ರದುರ್ಗ ಕ್ಷೇತ್ರವಾಗಿದೆ. ಪಕ್ಷದ ಕೆಲ ಹಿರಿಯ ನಾಯಕರು ನನಗೆ ಟಿಕೆಟ್ ತಪ್ಪಿಸಲು ಕಳ್ಳಾಟದ ಕೆಲಸ ಮಾಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಶುಕ್ರವಾರ ಬೆಂಬಲಿಗರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಘೋಷಿಸಿರುವುದನ್ನು ವಿರೋಧಿಸಿ ರಘುಚಂದನ್ ಬೆಂಬಲಿಗರು ಗೋ ಬ್ಯಾಕ್ ಕಾರಜೋಳ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿ 4 ದಿನ ವಿಸ್ತರಣೆ

  • ಇವಿಎಂ ಯಂತ್ರದಿಂದ ಮೋದಿ ಚುನಾವಣೆ ಗೆಲ್ಲುತ್ತಿದ್ದಾರೆ: ಸಿ.ಎಂ ಇಬ್ರಾಹಿಂ

    ಇವಿಎಂ ಯಂತ್ರದಿಂದ ಮೋದಿ ಚುನಾವಣೆ ಗೆಲ್ಲುತ್ತಿದ್ದಾರೆ: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಇವಿಎಂ ಯಂತ್ರದಿಂದ (EVM) ಮೋದಿ (Narendra modi) ಗೆಲ್ತಿರೋದು, ಮೊದಲು ಇವಿಎಂ ಮಿಷನ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ಮಾಡಬೇಕು ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ ಇಬ್ರಾಹಿಂ (C.M Ibrahim) ಇಂಡಿಯಾ ಕೂಟಕ್ಕೆ ಸಲಹೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ, ಐಟಿ, ಸಿಬಿಐ, ವೋಟಿಂಗ್ ಮಿಷನ್ ಈ 4 ಬಿಜೆಪಿಯವರಿಗೆ ದೊಡ್ಡ ಅಸ್ತ್ರವಾಗಿದೆ. ವಿಪಕ್ಷಗಳು ಬ್ಯಾಲೆಟ್ ಪೇಪರ್ ಬೇಕು ಎಂದು ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಮನೆಯಲ್ಲಿ ಇವರೇ ಮಿಷನ್ ಒತ್ತುತ್ತ ಕೂತುಕೊಳ್ಳಬೇಕು. ಪ್ರಪಂಚದ ಯಾವುದೇ ದೇಶದಲ್ಲಿ ಇವಿಎಂ ಮಿಷನ್ ಇಲ್ಲ. ಎಲ್ಲಾ ಕಡೆ ಬ್ಯಾಲೆಟ್ ಪೇಪರ್ ಇದೆ. ವಿಪಕ್ಷಗಳು ಸೀಟು ಕಿತ್ತಾಟ ಬಿಟ್ಟು ಇವಿಎಂ ಮಿಷನ್ ಬೇಡ ಎಂದು ಬೀದಿಗಿಳಿದು ಹೋರಾಟ ಮಾಡಬೇಕು. ಇವಿಎಂ ಮಿಷನ್ ಇದ್ದರೆ ಚುನಾವಣೆ ಎದುರಿಸದೇ ಬಾಯ್ಕಾಟ್ ಮಾಡಬೇಕು. ಆಗ ದೇಶದಾದ್ಯಂತ ಸುದ್ದಿ ಆಗುತ್ತದೆ. ಚುನಾವಣಾ ಆಯೋಗಕ್ಕೆ ಏಕೆ ಇವಿಎಂ ಮೇಲೆ ಅಷ್ಟು ಪ್ರೀತಿ? ಚುನಾವಣಾ ಆಯುಕ್ತರು ಯಾಕೆ ರಾಜೀನಾಮೆ ಕೊಟ್ಟರು ಎಂದು ಅವರು ಪ್ರಶ್ನಿಸಿದ್ದಾರೆ.

    ಮೋದಿ ಬಾರಿ ಬುದ್ಧಿವಂತರು, ಎಲ್ಲಾ ವಿಷಯಕ್ಕೂ ಕೈ ಹಾಕೋದಿಲ್ಲ. ಆಯ್ದ ಸೀಟುಗಳಲ್ಲಿ ಮಾತ್ರ ಹ್ಯಾಕ್ ಮಾಡ್ತಾರೆ. 2004 ರಿಂದಲೂ ಇವಿಎಂ ಹ್ಯಾಕ್ ಆಗ್ತಿತ್ತು. ಆಗ ಕಾಂಗ್ರೆಸ್ ಗೆಲ್ಲುತ್ತಿತ್ತು. ಅದಕ್ಕೆ ಅವರು ಮಾತಾಡ್ತಿರಲಿಲ್ಲ. ಈಗ ಅವರಿಗೆ ಇವಿಎಂ ಹ್ಯಾಕ್ ಮಾಡಬಹುದು ಎಂದು ಅರಿವಾಗಿದೆ. ಅದಕ್ಕೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್‍ಬೇಕು ಎಂದು ಕಾಂಗ್ರೆಸ್ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದ್ದಾರೆ.

    ಮೋದಿ ಅಹಂ ಬ್ರಹ್ಮಾಸ್ಮಿ ಆಗಿದ್ದಾರೆ. ಆರ್‍ಎಸ್‍ಎಸ್‍ನ್ನು ಮೀರಿ ಅವರು ಹೋಗ್ತಿದ್ದಾರೆ. ಹೀಗಾಗಿಯೇ ಆರ್‍ಎಸ್‍ಎಸ್‍ನವರು ಚುನಾವಣಾ ಬಾಂಡ್ ವಿರುದ್ಧವಾಗಿ ಮಾತಾಡ್ತಿದ್ದಾರೆ. ಆರ್‍ಎಸ್‍ಎಸ್‍ನಲ್ಲೂ ಒಳ್ಳೆಯವರಿದ್ದಾರೆ. ಮೋದಿ ಇಂದು ಆರ್‍ಎಸ್‍ಎಸ್ ಮೀರಿ ಬೆಳೆದಿದ್ದೇನೆ ಎನ್ನುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.

  • ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ

    ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ

    – ರಾಮನಗರದಲ್ಲಿ ಡಿಕೆ ಬ್ರದರ್ಸ್ ಶಕ್ತಿ ಪ್ರದರ್ಶನ
    – ಅಣ್ಣ, ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಡಿ.ಕೆ.ಸುರೇಶ್

    ರಾಮನಗರ: ಲೋಕಸಭಾ ಚುನಾವಣೆಗೆ ರಣಕಣ ರಂಗೇರಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ (D.K.Suresh) ಗುರುವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಮನಗರದಲ್ಲಿ (Ramanagara) ಬೃಹತ್ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶಿಸಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ಮನೆದೇವರಿಗೆ ಡಿ.ಕೆ.ಸುರೇಶ್ ಪೂಜೆ ಸಲ್ಲಿಸಿದರು. ಬೆಳಗ್ಗೆ 9 ಗಂಟೆಗೆ ಕನಕಪುರದ ಕೆಂಕೆರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ರಾಮನಗರದ ಚಾಮುಂಡೇಶ್ವರಿ ದೇವರ ದರ್ಶನ ಪಡೆದರು. ನಗರದ ಪ್ರಮುಖ ಮಸೀದಿ, ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಮನೆಯಲ್ಲಿ ಅಣ್ಣ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ

    ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಡಿ.ಕೆ.ಸುರೇಶ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮಟೆ, ವಾದ್ಯ, ಪಟ್ಟದ ಕುಣಿತ, ವೀರಗಾಸೆ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್‌ಗೆ ಸ್ವಾಗತ ಕೋರಿದರು.

    ನಂತರ ಬೃಹತ್ ಮೆರವಣಿಗೆ ಹೊರಟರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಡಿ.ಕೆ.ಸುರೇಶ್‌ಗೆ ಸಚಿವ ರಾಮಲಿಂಗಾರೆಡ್ಡಿ, ಎಂಎಲ್‌ಸಿ ರವಿ, ಕುಣಿಗಲ್ ಶಾಸಕ ರಂಗನಾಥ್, ಶಾಸಕ ಬಾಲಕೃಷ್ಣ ಸಾಥ್ ನೀಡಿದರು. ಇದನ್ನೂ ಓದಿ: ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ

    ಮೆರವಣಿಗೆ ಡಿಸಿ ಕಚೇರಿ ವರೆಗೂ ಸಾಗಿತು. ನಂತರ ಚುನಾವಣಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರಗೆ ಡಿ.ಕೆ.ಸುರೇಶ್ ಎರಡು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಬಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಆನೆಕಲ್ ಶಾಸಕ ಶಿವಣ್ಣ ಸಾಥ್ ನೀಡಿದರು.

  • ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

    ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

    ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅಗತ್ಯವಿರುವಷ್ಟು ಹಣ ನನ್ನ ಬಳಿ ಇಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹೇಳಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಆಯ್ಕೆಯನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿಕ ಹಣವಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿಯ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಒಂದು ವಾರ ಅಥವಾ ಹತ್ತು ದಿನಗಳ ಕಾಲ ಯೋಚಿಸಿದ ನಂತರ ಈ ನಿರ್ಧಾರ ತಿಳಿಸಿದ್ದೇನೆ. ಸ್ಪರ್ಧಿಸಲು ನನ್ನ ಬಳಿ ಅಷ್ಟು ಹಣವಿಲ್ಲ. ಅದು ಆಂಧ್ರಪ್ರದೇಶ ಅಥವಾ ತಮಿಳುನಾಡೇ ಆಗಿರಲಿ. ನನಗೂ ಸಮಸ್ಯೆ ಇದೆ. ಇದು ಅವರು ಬಳಸುವ ಹಲವಾರು ಇತರ ಗೆಲುವಿನ ಮಾನದಂಡಗಳ ಪ್ರಶ್ನೆಯಾಗಲಿದೆ ಮಾತನಾಡಿದ್ದಾರೆ.

    ಅವರು ನನ್ನ ನಿಲುವನ್ನು ಒಪ್ಪಿಕೊಂಡಿದ್ದಾರೆ ಎಂದು ನಾನು ತುಂಬಾ ಕೃತಜ್ಞಳಾಗಿದ್ದೇನೆ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ದೇಶದ ಹಣಕಾಸು ಸಚಿವರ ಬಳಿ ಚುನಾವಣೆಯಲ್ಲಿ ಹೋರಾಡಲು ಏಕೆ ಸಾಕಷ್ಟು ಹಣವಿಲ್ಲ ಎಂಬ ಪ್ರಶ್ನೆ ಕೇಳಿಬಂದಾಗ, ಭಾರತದ ಕನ್ಸಾಲಿಡೇಟೆಡ್ ಫಂಡ್ ತನಗೆ ಸೇರಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ನನ್ನ ಸಂಬಳ, ನನ್ನ ಗಳಿಕೆ ಮತ್ತು ನನ್ನ ಉಳಿತಾಯ ನನ್ನದೇ ಹೊರತು ಭಾರತದ ಕನ್ಸಾಲಿಡೇಟೆಡ್ ಫಂಡ್ ಅಲ್ಲ. ನಾನು ಇತರೆ ಅಭ್ಯರ್ಥಿಗಳ ಪ್ರಚಾರ ನಡೆಸುತ್ತೇನೆ. ಬಹಳಷ್ಟು ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ರಾಜೀವ್ ಚಂದ್ರಶೇಖರ್ ಅವರ ಪ್ರಚಾರಕ್ಕೆ ಹೋಗುತ್ತೇನೆ. ನಾನು ಪ್ರಚಾರದ ಹಾದಿಯಲ್ಲಿರುತ್ತೇನೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

    ಏಪ್ರಿಲ್ 19 ರಿಂದ ಪ್ರಾರಂಭವಾಗುವ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸಿದೆ. ಇವರಲ್ಲಿ ಪಿಯೂಷ್ ಗೋಯಲ್, ಭೂಪೇಂದರ್ ಯಾದವ್, ರಾಜೀವ್ ಚಂದ್ರಶೇಖರ್, ಮನ್ಸುಖ್ ಮಾಂಡವಿಯಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದ್ದಾರೆ. ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.

  • ‘ಲೋಕ’ಸಮರಕ್ಕೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು – ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಂಧಾನ ಸಭೆ

    ‘ಲೋಕ’ಸಮರಕ್ಕೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು – ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಂಧಾನ ಸಭೆ

    ಕೋಲಾರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರದ ಐದು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬುಧವಾರ ದಿನವಿಡೀ ರಾಜ್ಯದಲ್ಲಿ ಹೈಡ್ರಾಮದ ಜೊತೆಗೆ ಹೈಕಮಾಂಡ್‌ಗೆ ಕೋಲಾರ ಕಾಂಗ್ರೆಸ್ ಆಭ್ಯರ್ಥಿ ಆಯ್ಕೆ ವಿಚಾರ ತಲೆಬಿಸಿ ತಂದಿದೆ. ಬಂಡಾಯ ಶಮನಕ್ಕೆ ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದು, ಇಂದು ಸಂಧಾನ ಸಭೆ ನಡೆಸಲಿದ್ದಾರೆ.

    ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಆಯ್ಕೆ ಸಂಬಂಧ ದೊಡ್ಡ ಹೈಡ್ರಾಮ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಹೆಸರು ಬಹುತೇಕ ಅಂತಿಮವಾದ ಹಿನ್ನೆಲೆ ಕೋಲಾರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಬಂಡಾಯವೆದ್ದು ರಾಜೀನಾಮೆ ನೀಡುವುದಾಗಿ ಹೇಳಿ ಹೈಡ್ರಾಮ ನಡೆಸಿದ್ದರು. ಈ ಹೊತ್ತಿನಲ್ಲಿ ತವರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ ತಕ್ಷಣ ಬಂಡಾಯ ನಾಯಕರಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಬಳಿಕ ಸಂಧಾನ ಮಾತುಕತೆಯ ಸೂಚನೆ ನೀಡಿದ್ದರು.

    ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ಚಿಂತಾಮಣಿಯ ಸಚಿವರಾದ ಡಾ. ಎಂ.ಸಿ.ಸುಧಾಕರ್ ಸೇರಿದಂತೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ಅನಿಲ್ ಕುಮಾರ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ಹಿಡಿದು ಸ್ಪೀಕರ್ ಅವರಿಗೆ ನೀಡಲು ಮುಂದಾದ ಘಟನೆಯೂ ನಡೆದಿದೆ.

    ಸ್ಪೀಕರ್ ಯು.ಟಿ.ಖಾದರ್ ಮಂಗಳೂರಿನಲ್ಲಿದ್ದ ಕಾರಣ ಶಾಸಕರು ಫ್ಲೈಟ್‌ನಲ್ಲಿ ಮಂಗಳೂರಿಗೆ ಹೋಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ತಮ್ಮ ಮನೆಗೆ ಕೆರೆಸಿಕೊಂಡು ಶಾಸಕರ ಮನವೊಲಿಕೆಗೆ ಪ್ರಯತ್ನ ಪಟ್ಟರು. ಇದಕ್ಕೆ ಜಗ್ಗದ ಶಾಸಕರು ವಿಧಾನಸೌಧಕ್ಕೆ ಬಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ಈ ಮಧ್ಯೆ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡಿ ಟಿಕೆಟ್ ಇನ್ನೂ ಯಾರಿಗೂ ಘೋಷಣೆಯಾಗಿಲ್ಲ. ಅಲ್ಲಿಯವರೆಗೂ ಎಲ್ಲರೂ ಸಮಾಧಾನವಾಗಿ ಇರುವಂತೆ ತಿಳಿಸಿದ ಮೇಲೆ ರಾಜೀನಾಮೆ ಪ್ರಹಸನಕ್ಕೆ ಶಾಸಕರು ತೆರೆ ಎಳೆದಿದ್ದಾರೆ. ನಮ್ಮಲ್ಲಿ ಯಾವುದೇ ಗುಂಪು, ಭಿನ್ನಮತ ಇಲ್ಲ ಎಂಬುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾತು.

    ಕೋಲಾರ ಲೋಕಸಭಾ ಕಾಂಗ್ರೆಸ್ ಟಿಕೆಟ್‌ಗೆ ಸಂಬಂಧಿಸಿದಂತೆ ಕಳೆದ ಹದಿನೈದು ದಿನಗಳಿಂದ ಹೈಕಮಾಂಡ್‌ಗೆ ತಲೆಬಿಸಿ ಮಾಡಿತು. ಕೋಲಾರದ ಬಣ ರಾಜಕೀಯದಿಂದ ಟಿಕೆಟ್ ವಿಷಯಕ್ಕೆ ಹಗ್ಗಜಗ್ಗಾಟ ನಡೆಯುತ್ತಲೇ ಬರುತ್ತಿತ್ತು. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ದೊಡ್ಡ ಫೈಟ್ ನಡೆಯುತ್ತಲೇ ಬರುತ್ತಿದೆ. ಕೆ.ಹೆಚ್.ಮುನಿಯಪ್ಪ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.

    ಇದರಿಂದ ಆತಂಕಗೊಂಡ ಹೈಕಮಾಂಡ್ ಕೂಡಲೇ ಆಭ್ಯರ್ಥಿ ಆಯ್ಕೆ ವಿಚಾರವನ್ನು ತಡೆ ಹಿಡಿದಿದ್ದಾರೆ. ಇನ್ನು ನಿನ್ನೆ ರಾತ್ರಿ 10 ಗಂಟೆಗೆ ಬಂಡಾಯ ಶಾಸಕರ ಜೊತೆ ಮಾತನಾಡಲು ಸಭೆಯನ್ನು ಕರೆದಿದ್ದ ಸಿಎಂ ಸಿದ್ದರಾಮಯ್ಯ ಮೈಸೂರಿನಿಂದ ಬಾರದ ಕಾರಣ ಸಭೆ ಇಂದು (ಗುರುವಾರ) ನಡೆಯಲಿದೆ. ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ಯಾವುದೇ ಬಣಕ್ಕೂ ನೀಡಿದರೂ ಬಂಡಾಯ ಖಚಿತವೆನ್ನುತ್ತಿದೆ ಕೋಲಾರ ಬಣ ರಾಜಕೀಯ.

  • ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ

    ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ

    ಮಂಡ್ಯ: ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ (BJP-JDS Alliance) ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಇಷ್ಟು ದಿನ ಇತ್ತು. ಇದೀಗ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಎಂದು ಖಚಿತವಾಗಿದೆ. ಇದೀಗ ಬಿಜೆಪಿ-ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ರಣತಂತ್ರ ಮಾಡಲು ಮುಂದಾಗಿದ್ದಾರೆ. ಈ ರಣತಂತ್ರದ ಆರಂಭಿಕ ಭಾಗ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವುದಾಗಿದೆ. ಹೀಗಾಗಿ ಇಂದು ಮಂಡ್ಯದಲ್ಲಿ (Mandya) ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಲಿದೆ.

    ಈಗಾಗಲೇ ಕುಮಾರಸ್ವಾಮಿ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು, ಮಂಡ್ಯದಲ್ಲಿ ಕೆಲ ನಾಯಕರಲ್ಲಿ ಇದ್ದ ಭಿನ್ನಮತವನ್ನು ಶಮನ ಮಾಡುವಲ್ಲಿ ಮುಂದಾಗಿದ್ದಾರೆ. ಮಾಜಿ ಸಚಿವ ನಾರಾಯಣಗೌಡ ಅವರು ಈ ಮೈತ್ರಿ ವಿರೋಧಿಸಿ ಕಾಂಗ್ರೆಸ್‌ಗೆ ಹೋಗ್ತಾರೆ ಎಂದು ಹೇಳಲಾಗಿತ್ತು. ಈ ವಿಚಾರವನ್ನು ಸ್ವತಃ ಸಚಿವ ಚಲುವರಾಯಸ್ವಾಮಿಯೇ ಖಾತ್ರಿಪಡಿಸಿದ್ದರು. ಇದೀಗ ಕುಮಾರಸ್ವಾಮಿ ಅವರೇ ನಾರಾಯಣಗೌಡ ಅವರ ಮನೆಗೆ ಹೋಗಿ ಇಷ್ಟು ದಿನ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿದ್ದಾರೆ. ಇದೀಗ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಇಂದು ಸಮನ್ವಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯೂ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ‌ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ನೇತೃತ್ವದಲ್ಲಿ ನಡೆಯಲಿದ್ದು, ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಪುಟ್ಟರಾಜು, ತಮ್ಮಣ್ಣ, ಸಾ.ರಾ.ಮಹೇಶ್, ನಾರಾಯಣಗೌಡ ಸೇರಿದಂತೆ ಮಾಜಿ ಶಾಸಕರು ಹಾಗೂ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ ಅವರ ಗೆಲುವಿಗೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದ್ದು, ಆಯಾಯ ಭಾಗದ ನಾಯಕರು ಮುಖಂಡರಿಗೆ ಕೆಲ ಟಾಸ್ಕ್ ಸಹ ನೀಡಲಾಗುತ್ತದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮಾ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ಮುಂದೂಡಿಕೆ

    ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಏನೋ ನಡೆಯುತ್ತೆ. ಆದರೆ ಬಿಜೆಪಿ ಬೆಂಬಲಿತ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಏನು ಮಾಡ್ತಾರೆ ಎಂದು ಇದುವರೆಗೆ ತಿಳಿದು ಬಂದಿಲ್ಲ. ಮಂಡ್ಯವನ್ನು ಜೆಡಿಎಸ್‌‌ಗೆ ಬಿಜೆಪಿ ಬಿಟ್ಟುಕೊಟ್ಟಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಇಂದಿನ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಸುಮಲತಾ ಅವರು ಕಾಣಿಸಿಕೊಳ್ತಾರಾ? ಅಥವಾ ಸುಮಲತಾ ಅವರ ರಾಜಕೀಯ ನಡೆ ಬೇರೆಯಾಗಿ ಅವರು ಸಭೆಗೆ ಬರುವುದೇ ಇಲ್ವಾ ನೋಡಬೇಕಿದೆ.

    ಒಟ್ಟಾರೆ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ.‌ ಇದೀಗ ದಳಪತಿಯ ಗೆಲುವಿಗಾಗಿ ದೋಸ್ತಿಗಳು ಕಾಂಗ್ರೆಸ್ ವಿರುದ್ಧ ಚುನಾವಣೆಯ ಹೋಂವರ್ಕ್ ಆರಂಭಿಸಿದ್ದು, ಈ ಹೋಂವರ್ಕ್‌ನ ರಣತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

  • ಅಂಬರೀಶ್‌ ಬದುಕಿದ್ದಾಗ ಜೊತೆಗೆ ಊಟ ಮಾಡಿದ್ದೀವಿ.. ಸುಮಲತಾ ನನಗೆ ಊಟ ಬಡಿಸಿದ್ದಾರೆ: ಹೆಚ್‌ಡಿಕೆ

    ಅಂಬರೀಶ್‌ ಬದುಕಿದ್ದಾಗ ಜೊತೆಗೆ ಊಟ ಮಾಡಿದ್ದೀವಿ.. ಸುಮಲತಾ ನನಗೆ ಊಟ ಬಡಿಸಿದ್ದಾರೆ: ಹೆಚ್‌ಡಿಕೆ

    – ರಾಮಾಂಜನೇಯ ಯುದ್ಧವೇ ಆಗಿದೆ, ನಮ್ಮಲ್ಲಿ ಯುದ್ಧ ಆಗಲ್ವಾ ಎಂದ ಮಾಜಿ ಸಿಎಂ

    ಬೆಂಗಳೂರು: ಸಮಯ ಬಂದಾಗ ಸುಮಲತಾ ಅಂಬರೀಶ್ (Sumalatha) ಜೊತೆಗೂ ಮಾತುಕತೆ ನಡೆಸುತ್ತೇನೆ. ರಾಮಾಂಜನೇಯ ಯುದ್ದವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೊಲ್ಲವಾ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಮಾತನಾಡಿದರು.

    ನಾರಾಯಣಗೌಡರಂತೆ ಸುಮಲತಾ ಜೊತೆಯೂ ಮಾತುಕತೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಜೊತೆಗೆ ಮಾತುಕತೆಗೆ ಸಿದ್ದ ಎಂದು ಸಂದೇಶ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ

    ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿರುತ್ತವೆ. ಆ ಸಂದರ್ಭದಲ್ಲಿ ಹಲವಾರು ರೀತಿ ಚರ್ಚೆಗಳು ಆಗಿರುತ್ತದೆ. ಅದನ್ನ ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

    ಅಂಬರೀಶ್ ಅವರು ಬದುಕಿದ್ದಾಗ ಜೊತೆಗೂಡಿಯೇ ಊಟ ಮಾಡಿದ್ದೇವೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದಾರೆ. ಅಂಬರೀಶ್ ಜೊತೆ ಊಟ ಮಾಡೋವಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆ ದಿನಗಳು ಇವೆ ಎಂದು ನೆನಪು ಮೆಲುಕು ಹಾಕಿದರು. ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿ ಚರ್ಚಿಸಿದ ನಟಿ ಕಂಗನಾ

    ರಾಜಕೀಯದಲ್ಲಿ ಕೆಲವು ಸನ್ನಿವೇಶಗಳಲ್ಲಿ ಇಂತಹ ಸಂಘರ್ಷಗಳು ಆಗಿರುತ್ತವೆ. ರಾಮಾಂಜನೇಯ ಯುದ್ದವೇ ಆಗಿ ಹೋಗಿದೆ. ಇನ್ನು ನಾವು ಹುಲು ಮಾನವರು. ನಮ್ಮಲ್ಲಿ ಯುದ್ದ ಆಗದೇ ಇರುತ್ತದೆಯಾ? ದೊಡ್ಡ ಮಟ್ಟದಲ್ಲಿ ಅದನ್ನೇ ಸಾಧಿಸಿಕೊಂಡು ಹೋಗೋ ಅವಶ್ಯಕತೆ ಇಲ್ಲ. ಸಮಯ ಬಂದಾಗ ಸುಮಲತಾ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

  • ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು

    ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು

    ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ (Srikantadatta Narasimharaja Wadiyar) ಕೇಂದ್ರದಲ್ಲಿ ಮಂತ್ರಿ ಆಗಬೇಕು ಎಂಬ ಮಹದಾಸೆ ಇತ್ತು. ಆದರೆ ನಾಲ್ಕು ಬಾರಿ ಗೆದ್ದರೂ ಅವರಿಗೆ ಮಂತ್ರಿ ಆಗುವ ಯೋಗವೇ ಬರಲಿಲ್ಲ.

    ಒಡೆಯರ್ 1984, 1989, 1996 ಹಾಗೂ 1999 ಹೀಗೆ ನಾಲ್ಕು ಬಾರಿ ಗೆದ್ದರೂ ಕೇಂದ್ರದಲ್ಲಿ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಮೊದಲ ಬಾರಿ ಗೆದ್ದಾಗ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ ಒಡೆಯರ್ ಮೊದಲ ಬಾರಿ ಎಂಬ ಕಾರಣಕ್ಕೆ ಮಂತ್ರಿ ಸಿಗಲಿಲ್ಲ. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು

    1989 ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. 1996 ರಲ್ಲಿ ಮೂರನೇ ಬಾರಿ ಗೆದ್ದಾಗ ಹೆಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳಿದ್ದವು. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!

     

    1999 ರಲ್ಲಿ ಗೆದ್ದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ. 2004 ರಲ್ಲಿ ಡಾ. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಮೈಸೂರಿನಲ್ಲಿ ಒಡೆಯರ್ ಸೋತಿದ್ದರು. ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಅವರಿಗೆ ಸಿಗಲಿಲ್ಲ. ಹೀಗಾಗಿ ಕೇಂದ್ರದಲ್ಲಿ ಮಂತ್ರಿ ಆಗುವ ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು.

  • ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

    ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂವ ಕೌತುಕ ರಾಜಕೀಯ ವಲಯದಲ್ಲಿ ಮೂಡಿತ್ತು. ಇಂದು (ಮಂಗಳವಾರ) ಈ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ.

    ಇಷ್ಟು ದಿನಗಳ ಕಾಲ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ (H.D.Kumaraswamy) ಆಗ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿ ಆಗುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ನಾನು ಈಗ ಮಧುಮಗ ಇದ್ದಂತೆ, ಕಾರ್ಯಕರ್ತರು ನನ್ನ ಪೋಷಕರು: ಬಿಎನ್ ಚಂದ್ರಪ್ಪ

    ಮಂಡ್ಯ ಜಿಲ್ಲೆಯ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಏರಿದಾಗಲೇ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ರು. ಆದರೆ ರಾಮನಗರ ಜಿಲ್ಲೆಯ ಮುಖಂಡರು‌ ಹಾಗೂ ಕಾರ್ಯಕರ್ತರು ಮಂಡ್ಯ ಸ್ಪರ್ಧೆ ಬೇಡಾ. ರಾಮನಗರದಲ್ಲಿಯೇ ಕುಮಾರಸ್ವಾಮಿ ಇರಬೇಕು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಹೇಳಿದ್ರು. ಹೀಗಾಗಿ ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ವಿಚಾರದಲ್ಲಿ ಸ್ವಲ್ಪ ಗೊಂದಲದಲ್ಲಿ‌ ಇದ್ದರು.

    ನಿನ್ನೆ ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆದು ಕುಮಾರಸ್ವಾಮಿ ಮಾತನಾಡಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆ ಬಗ್ಗೆ ಕಾರ್ಯಕರ್ತರಿಗೆ ಹೆಚ್‌ಡಿಕೆ ತಿಳಿಸಿದ್ದಾರೆ. ಬಳಿಕ ರಾಮನಗರ ಜಿಲ್ಲೆಯ ಜನರು ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಪಕ್ಕ ಆಗಿದೆ. ಇದನ್ನೂ ಓದಿ: ದೋಸ್ತಿ ಪಕ್ಷದ ಪವರ್‌ ಸೆಂಟರ್‌ ಆಗಿ ಬದಲಾಯ್ತು ಹೆಚ್‌ಡಿಕೆ ನಿವಾಸ!

    ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧೆ ಮಾಡೋದು ಕನ್ಫರ್ಮ್‌ ಆಗಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಇದೀಗ ಕುಮಾರಸ್ವಾಮಿ ಸ್ಪರ್ಧೆಯ ವಿರುದ್ಧ ಕಾಂಗ್ರೆಸ್ ಯಾವ ದಾಳ ಉರುಳಿಸುತ್ತೆ ಎನ್ನುವುದು ಕುತೂಹಲ.

  • ಹೀನಾಯವಾಗಿ ಸೋತಿದ್ದ ಒಡೆಯರ್; ರಾಜ ಮನೆತನಕ್ಕೆ ಅಂದು ಆಗಿತ್ತು ಭಾರಿ ಮುಖಭಂಗ!

    ಹೀನಾಯವಾಗಿ ಸೋತಿದ್ದ ಒಡೆಯರ್; ರಾಜ ಮನೆತನಕ್ಕೆ ಅಂದು ಆಗಿತ್ತು ಭಾರಿ ಮುಖಭಂಗ!

    ಮೈಸೂರು: ಲೋಕಸಭೆಗೆ (Lok Sabha Election 2024) 14ನೇ ಸಾರ್ವತ್ರಿಕ ಚುನಾವಣೆ 2004 ರಲ್ಲಿ ನಡೆಯಿತು. ಮೈಸೂರು (Mysuru) ಹಾಗೂ ಚಾಮರಾಜನಗರ (Chamarajanagara) ಎರಡೂ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು. ಮೈಸೂರಿನಲ್ಲಿ ಹಾಲಿ ಸಂಸದರಾಗಿದ್ದ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸೋತಿದ್ದಲ್ಲದೆ ಮೂರನೇ ಸ್ಥಾನಕ್ಕೆ ಕುಸಿದರು.

    ಬಿಜೆಪಿಯ ಸಿ.ಹೆಚ್.ವಿಜಯಶಂಕರ್ (C.H.Vijayashankar) ಗೆದ್ದರು. ಒಡೆಯರ್ ಅವರಿಗೆ ಇದು ಎರಡನೇ ಸೋಲು. 1991 ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. ಕಾಂಗ್ರೆಸ್‌ನಿಂದ 1984, 1989, 1996 ಹಾಗೂ 1999- ಹೀಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಮರಳಿ ‘ಕೈ’ ಹಿಡಿದು ಮತ್ತೆ ಗೆದ್ದ ಒಡೆಯರ್!

    ಮೈಸೂರಿನಲ್ಲಿ (Mysuru Lok Sabha) ಜನತಾ ಪರಿವಾರ ಈವರೆಗೆ ಗೆದ್ದಿಲ್ಲ. 1996 ರಂತೆ ಈ ಚುನಾವಣೆಯಲ್ಲಿಯೂ ಆ ಪಕ್ಷದ ಅಭ್ಯರ್ಥಿ ಎ.ಎಸ್.ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸೋತ ಒಡೆಯರ್!

     

    ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ 9,57,267 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ಸಿ.ಹೆಚ್‌.ವಿಜಯಶಂಕರ್ 3,16,442 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಎ.ಎಸ್.ಗುರುಸ್ವಾಮಿ- 3,06,292, ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್- 2,99,227 ಮತಗಳನ್ನು ಪಡೆದರು.