Tag: Lok Sabha Election 2024

  • ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

    ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

    – ಸಿಪಿವೈ ಪುತ್ರಿ ನಿಶಾ ಭೇಟಿ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯೆ

    ಬೆಂಗಳೂರು: ಸಿ.ಪಿ ಯೋಗೇಶ್ವರ್ (C.P Yogeshwar) ಪುತ್ರಿ ನಿಶಾ (Nisha Yogeshwar) ನನ್ನ ಹಾಗೂ ನನ್ನ ತಮ್ಮನನ್ನು ಭೇಟಿ ಮಾಡಿದ್ದರು. ಅಪ್ಪ ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಗಳ ವಿಚಾರ ಸರಿ ಹೋಗಬಹುದು. ಅವಳು ಇನ್ನೂ ಮದುವೆಯಾಗಬೇಕು, ತಂದೆ ಹಾಲು ಎರೆಯಬೇಕು, ಅಕ್ಷತೆ ಕಾಳು ಹಾಕಬೇಕು. ನನಗೆ ಅವಳ ಬಗ್ಗೆ ಹಾಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಎಲ್ಲಾ ಗೊತ್ತು ಅವರ ಅಮ್ಮನೂ ನನಗೆ ಪರಿಚಯವಿದ್ದಾರೆ. ಯೋಗೇಶ್ವರ್ ಅವರ ಈಗಿನ ಸಂಸಾರದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

    ಆ ಹೆಣ್ಣು ಮಗಳು ಬಹಳ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಸೇರುತ್ತೇನೆ ಎಂದರೆ ನಮ್ಮ ಪಕ್ಷದ ಸ್ಥಳಿಯ ನಾಯಕರ ಜೊತೆ ಮಾತನಾಡುತ್ತೇನೆ. ನಿಶಾ ಯೋಗೇಶ್ವರ್ ಧೈರ್ಯವಂತ ಹೆಣ್ಣು ಮಗಳು, ಏನೋ ಧೈರ್ಯ ಮಾಡಿದ್ದಾಳೆ. ನಾಳೆ ಜನ ಅಪ್ಪ ಮಗಳನ್ನು ಯಾಕೆ ದೂರ ಮಾಡಿದೆ ಎಂದು ನನ್ನನ್ನು ಪ್ರಶ್ನೆ ಮಾಡ್ತಾರೆ. ಅದಕ್ಕಾಗಿ ನಾನು ಸುಮ್ಮನಿದ್ದೇನೆ. ಮದುವೆಯಾಗಿ ಅವರದೇ ಕುಟುಂಬ ಇದ್ದಿದ್ದರೆ ವಿಚಾರ ಬೇರೆಯಾಗುತ್ತಿತ್ತು ಎಂದಿದ್ದಾರೆ.

    ರಾಜರಾಜೇಶ್ವರಿಗೆ ಹೋಗಿ ಒಂದು ಕೈ ಮುಗಿಯಬೇಕು. ಅಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಡಿ.ಕೆ ಸುರೇಶ್ ಮಾಡಿದ ಕೆಲಸ ಜನರಿಗೆ ಈಗ ಅರ್ಥವಾಗಿದೆ. ಮಾನವೀಯತೆ, ನಮ್ಮ ತಮ್ಮ ಎನ್ನುವುದನ್ನು ಪಕ್ಕಕ್ಕೆ ಇಡಿ. ಕೋವಿಡ್ ಸಂದರ್ಭದಲ್ಲಿ ಯಾರು ಆಚೆಗೆ ಬರಲಿಲ್ಲ. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ತರಕಾರಿಗೆ ಬೆಲೆ ಸಿಗಬೇಕು ಎಂದು ಹೋರಾಡಿದ್ದರು. ಮನೆ ಮನೆಗೆ ಹೋಗಿ ಸುರೇಶ್ ಕೆಲಸ ಮಾಡಿದ್ದರು. ಈಗ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು, ಆಗ ಏನು ಕೆಲಸ ಮಾಡಿದ್ರು? ಕೆಲಸ ಮಾಡದವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಏಕಾಏಕಿ ಡ್ರಾಪ್ ಮಾಡಿ ವೀಕ್ ಸ್ಟ್ಯಾಟರ್ಜಿಯನ್ನು ಬಿಜೆಪಿ ಮಾಡಿದೆ. ನಾವು ಯುವಕರಿಗೆ ಮಣೆ ಹಾಕಿದ್ದೇವೆ. ಬಿಜೆಪಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಒಂದು ಮಾಡಲು ರೋಡ್ ಶೋ ಮಾಡುತ್ತಿದ್ದಾರೆ. ದಿನಪ್ರತಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಕಾರ್ಯಕರ್ತರ ಒಂದಾಗಿ ಯಾಕೆ ಸಭೆ ಮಾಡಲಿಲ್ಲ. ಇವರಿಬ್ಬರ ಮೈತ್ರಿ ನೋಡಿ ನಾಚಿಕೆಯಾಗುತ್ತಿದೆ. ಆ ದಿನ ಸುಮಲತಾ ಮನೆಗೆ ಹೋಗಬೇಡ ಎಂದವರು ಇವತ್ತು ಸುಮಲತಾ ಮನೆಗೆ ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆದವರ ಜೊತೆಗೆ ತಬ್ಬಾಡುತ್ತಿದ್ದಾರೆ. ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿಗೆ? ನಾನು ವಿಷ ಹಾಕಿದ್ದೆ ಎನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಎನ್ನುತ್ತಿದ್ದಾರೆ. ಸರ್ಕಾರ ಉಳಿಸಲು ನಾನು ಮಳೆ-ಬಿಸಿಲಲ್ಲಿ ನಿಂತು ಹೋರಾಡಿದ್ದೆ ಎಂದಿದ್ದಾರೆ.

    ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬ ಶಾಮನೂರು ಹೇಳಿಕೆ ವಿಚಾರವಾಗಿ, ಹೆಣ್ಣು ಕುಟುಂಬದ ಕಣ್ಣು, ಪಾಪ ಅವರಿಗೆ ವಯಸ್ಸಾಗಿದೆ. ಆರು ಜನ ಮಹಿಳೆಯರಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ಹೆಣ್ಣು ಮಕ್ಕಳಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಶಾಮನೂರು ಹೇಳಿಕೆ ಖಂಡನೀಯ ಎಂದಿದ್ದಾರೆ. ಇದನ್ನೂ ಓದಿ: ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

  • ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

    ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

    ಮೈಸೂರು: ಲೋಕಸಭಾ ಕ್ಷೇತ್ರ (Lok Sabha Election 2024) ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ ನಾಲ್ಕು ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು (Mysuru) ಸೀಮೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.

    28 ವರ್ಷಗಳಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ನಡೆಯುತ್ತಿತ್ತು. 2019 ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವೆ ನೇರ ಹೋರಾಟ. ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹೊಂದಾಣಿಕೆ ಮಾಡಿಕೊಂಡು ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಇದಕ್ಕೆ ಕಾರಣ. 1962 ರಿಂದ ಮೈಸೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹೆಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರಕ್ಕೆ ಸೀಮಿತವಾಗಿದ್ದ ಕ್ಷೇತ್ರ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ

    2009 ರಿಂದ ಮೈಸೂರಿನ ಆರು ಹಾಗೂ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆ ಮುಂಚೆ ಮಂಗಳೂರು ಕ್ಷೇತ್ರಕ್ಕೆ ಸೇರಿತ್ತು. 1952 ರಲ್ಲಿ ಕಿಸಾನ್ ಮಜೂರ್ ಪ್ರಜಾಪಾರ್ಟಿಯ (ಕೆಎಂಪಿಪಿ) ಎಂ.ಎಸ್. ಗುರುಪಾದಸ್ವಾಮಿ ಗೆದ್ದಿದ್ದನ್ನು ಹೊರತುಪಡಿಸಿದರೆ 1996 ರವರೆಗೆ ಮೈಸೂರು ಕಾಂಗ್ರೆಸ್ಸಿನ ಭದ್ರಕೋಟೆ. 1998, 2004, 2014, 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಛಿದ್ರ ಮಾಡಿ, ‘ಕಮಲ’ ಅರಳಿಸಿದೆ. 1998 ರಿಂದ 2014 ರವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಣ್ಣಾಮುಚ್ಚಾಲೆ ನಡೆದಿದೆ. ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಕಾಂಗ್ರೆಸ್ ಎಂಬಂತೆ ಈ ನಾಲ್ಕು ಅವಧಿಯಲ್ಲಿ ಫಲಿತಾಂಶ ಬಂದಿತ್ತು. ಆದರೆ 2019 ರಲ್ಲಿ ಬಿಜೆಪಿ ಸತತ ಎರಡನೇ ಗೆಲವು ದಾಖಲಿಸಿತು.

    ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ರಲ್ಲಿ ರಾಜಕಾರಣ ಪ್ರವೇಶ ಮಾಡಿದ ನಂತರ ರಾಜರ ಕೋಟೆಯಾಗಿತ್ತು. ಕಾಂಗ್ರೆಸ್ ಹಾಗೂ ರಾಜರ ಕೋಟೆಗೆ ಲಗ್ಗೆ ಹಾಕುವುದರಲ್ಲಿ ಬಿಜೆಪಿ ನಾಲ್ಕು ಬಾರಿ ಯಶಸ್ವಿಯಾಗಿದೆ. 1998 ರವರೆಗೆ ಆ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗುತ್ತಿರಲಿಲ್ಲ ಎಂಬುದು ಗಮನಾರ್ಹ. ತೋಂಟದಾರ್ಯ ಕಾಯಂ ಅಭ್ಯರ್ಥಿ ಎಂಬಂತೆ ಆಗಿದ್ದರು. ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಜನತಾ ಪರಿವಾರ ಈ ಕ್ಷೇತ್ರದಲ್ಲಿ ಈವರೆಗೆ ಖಾತೆ ತೆರೆದಿಲ್ಲ. 1996 ರವರೆಗೆ ಆ ಪಕ್ಷಕ್ಕೆ ಎರಡನೇ ಸ್ಥಾನ ಕಾಯಂ. 1998, 1999, 2009 ಹಾಗೂ 2014 ರಲ್ಲಿ ತೃತೀಯ ಸ್ಥಾನಕ್ಕೆ ಕುಸಿಯಿತು. 1984 ರಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 1996, 2004 ರಲ್ಲಿ ಕ್ರಮವಾಗಿ ಜನತಾ ಪರಿವಾರದ ಜಿ.ಟಿ. ದೇವೇಗೌಡ, ಎ.ಎಸ್, ಗುರುಸ್ವಾಮಿ ಜಯದ ಹೊಸ್ತಿಲಿಗೆ ಬಂದು, ಸೋತರು. ಇದನ್ನೂ ಓದಿ: ‘ಲೋಕ’ಸಮರಕ್ಕೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್‌ ಬಾಬು

    ಈವರೆಗೆ ಗೆದ್ದಿರುವವರು
    1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)
    1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)
    1962- ಎಂ. ಶಂಕರಯ್ಯ ( ಕಾಂಗ್ರೆಸ್)
    1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
    1971- ಎಚ್.ಡಿ. ತುಳಸಿದಾಸ್ ( ಕಾಂಗ್ರೆಸ್)
    1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
    1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)
    1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
    1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
    1991- ಚಂದ್ರಪ್ರಭ ಅರಸು ( ಕಾಂಗ್ರೆಸ್)
    1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
    1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)
    1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
    2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)
    2009- ಎಚ್. ವಿಶ್ವನಾಥ್ (ಕಾಂಗ್ರೆಸ್)
    2014- ಪ್ರತಾಪ್‌ ಸಿಂಹ (ಬಿಜೆಪಿ)
    2019 – ಪ್ರತಾಪ್ ಸಿಂಹ (ಬಿಜೆಪಿ)

  • ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

    ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

    ತಿರುವನಂತಪುರಂ: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ.

    ಶಾಸನಬದ್ಧ ಅವಶ್ಯಕತೆಗಳ ಭಾಗವಾಗಿ, ಸುರೇಂದ್ರನ್ ಅವರು ಇತ್ತೀಚೆಗೆ ತಮ್ಮ ಪ್ರಕರಣಗಳ ವಿವರಗಳನ್ನು ಮೂರು ಪುಟಗಳಲ್ಲಿ ಪ್ರಕಟಿಸಿದ್ದರು. ಸುರೇಂದ್ರನ್‌ ಬಿಜೆಪಿ ರಾಜ್ಯಾಧ್ಯಕ್ಷರೂ ಹೌದು. ಅದೇ ರೀತಿ, ಬಿಜೆಪಿ ಪಕ್ಷದ ಎರ್ನಾಕುಲಂ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ರಾಧಾಕೃಷ್ಣನ್ ವಿರುದ್ಧ ಸುಮಾರು 211 ಪ್ರಕರಣಗಳಿವೆ.

    ಹೆಚ್ಚಿನ ಪ್ರಕರಣಗಳು 2018 ರಲ್ಲಿ ನಡೆದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿವೆ. ಈ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಪಕ್ಷದ ಮುಖಂಡರು ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ತಿಳಿಸಿದ್ದಾರೆ.

    ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಏತನ್ಮಧ್ಯೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶುಕ್ರವಾರ ಸುರೇಂದ್ರನ್, ರಾಧಾಕೃಷ್ಣನ್, ಪಕ್ಷದ ಅಲಪ್ಪುಳದ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ವಟಕರ ಅಭ್ಯರ್ಥಿ ಪ್ರಫುಲ್ ಕೃಷ್ಣ ವಿರುದ್ಧದ ಪ್ರಕರಣಗಳ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ರಾಷ್ಟ್ರೀಯವಾದಿಯಾಗುವುದು ಕಷ್ಟ ಎಂದು ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಬಿಜೆಪಿ ರಾಜ್ಯ ಮುಖ್ಯಸ್ಥರ ವಿರುದ್ಧದ ಪ್ರಕರಣಗಳ ವಿವರವನ್ನು ನೀಡಿದ ಕುರಿಯನ್, ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ 237 ಮತ್ತು ಕೇರಳದಲ್ಲಿ ವಿವಿಧ ಆಂದೋಲನಗಳಿಗೆ ಸಂಬಂಧಿಸಿದಂತೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

  • ‘ಲೋಕ’ಸಮರಕ್ಕೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್‌ ಬಾಬು

    ‘ಲೋಕ’ಸಮರಕ್ಕೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್‌ ಬಾಬು

    ಬೆಂಗಳೂರು: ಲೋಕಸಭಾ ಚುನಾವಣೆಗೆ ಕೊನೆಗೂ ಜೆಡಿಎಸ್‌ (JDS) ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ. ಮೂವರು ಅಭ್ಯರ್ಥಿಗಳನ್ನು ಪಕ್ಷ ಅಖಾಡಕ್ಕೆ ಇಳಿಸಿದೆ.

    ಮಂಡ್ಯದಿಂದ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy), ಹಾಸನ- ಪ್ರಜ್ವಲ್‌ ರೇವಣ್ಣ (Prajwal Revanna) ಹಾಗೂ ಕೋಲಾರದಿಂದ ಮಲ್ಲೇಶ್‌ ಬಾಬು (Mallesh Babu) ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ಮಲ್ಲೇಶ್ ಬಾಬು ಅವರು ಈ ಬಾರಿ ಬಂಗಾರಪೇಟೆಯಿಂದ ಕಣಕ್ಕೆ ಇಳಿದು ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮುಂದೆ ಸೋತಿದ್ದರು. ಪ್ರಜ್ವಲ್‌ ರೇವಣ್ಣ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಈಗ ಎರಡನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ.

    ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ. ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ

  • ಲೋಕಸಭಾ ಚುನಾವಣೆ ಘೋಷಣೆ ಬಳಿಕ 79,000ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆ ದೂರು

    ಲೋಕಸಭಾ ಚುನಾವಣೆ ಘೋಷಣೆ ಬಳಿಕ 79,000ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆ ದೂರು

    ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024) ಘೋಷಣೆಯಾದ ಬಳಿಕ ಶುಕ್ರವಾರದವರೆಗೆ ದೇಶದಾದ್ಯಂತ ಸಿ-ವಿಜಿಲ್ ಆಪ್ (C-Vigil App) ಮೂಲಕ 79,000ಕ್ಕೂ ಹೆಚ್ಚು ಮಾದರಿ ನೀತಿ ಸಂಹಿತೆ (Model code of conduct) ಉಲ್ಲಂಘನೆ ದೂರುಗಳು ದಾಖಲಾಗಿವೆ. ಇದರಲ್ಲಿ 99%ಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ ಮತ್ತು ಈ ದೂರುಗಳಲ್ಲಿ 89% ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ತಿಳಿಸಿದೆ.

    ಭಾರತೀಯ ಚುನಾವಣಾ ಆಯೋಗದ ಸಿ-ವಿಜಿಲ್ ಅಪ್ಲಿಕೇಶನ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಹಿತಿ ಹಂಚಿಕೊಳ್ಳಲು ಜನರಿಗೆ ಪರಿಣಾಮಕಾರಿ ಸಾಧನವಾಗಿದೆ. ಅಕ್ರಮ ಹೋಡಿರ್ಂಗ್‍ಗಳು ಮತ್ತು ಬ್ಯಾನರ್‌ಗಳ ವಿರುದ್ಧ 58,500ಕ್ಕೂ ಹೆಚ್ಚು ದೂರುಗಳು (73% ದೂರುಗಳು) ಸ್ವೀಕರಿಸಲಾಗಿದೆ. ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1400ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಬಂದ 535 ದೂರುಗಳಲ್ಲಿ 529ನ್ನು ಈಗಾಗಲೇ ಪರಿಹರಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    1,000 ದೂರುಗಳು ನಿಷೇಧಿತ ಅವಧಿಯನ್ನು ಮೀರಿ ಪ್ರಚಾರಕ್ಕಾಗಿ ದಾಖಲಾಗಿದೆ. ಇದರಲ್ಲಿ ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ ಸೇರಿದೆ. ಅಲ್ಲದೇ 2454 ದೂರುಗಳು ಆಸ್ತಿಗಳ ಹಾನಿಗೆ ಸಂಬಂಧಿಸಿದ್ದಾಗಿದೆ.

    2024ರ ಸಾರ್ವತ್ರಿಕ ಚುನಾವಣೆಯ ಘೋಷಣೆಯ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾಗರಿಕರು ಜಾಗರೂಕರಾಗಿರಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಿಗೆ ಯಾವುದೇ ರೀತಿಯ ಪ್ರಚೋದನೆ, ವಿತರಣೆಯನ್ನು ದೂರು ನೀಡಲು ಅಪ್ಲಿಕೇಶನ್‍ನ್ನು ಬಳಸಬೇಕು ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ

  • ಸಿದ್ದರಾಮಯ್ಯಗೆ ಅಧಿಕಾರದ ಮದ ಏರಿದೆ.. ಅವರ ಗರ್ವಭಂಗ ಆಗಬೇಕು: ಹೆಚ್‌ಡಿಡಿ

    ಸಿದ್ದರಾಮಯ್ಯಗೆ ಅಧಿಕಾರದ ಮದ ಏರಿದೆ.. ಅವರ ಗರ್ವಭಂಗ ಆಗಬೇಕು: ಹೆಚ್‌ಡಿಡಿ

    – ದೇಶದಲ್ಲಿ ಮೋದಿ ಅವರಂತಹ ನಾಯಕ ಮತ್ತೊಬ್ಬರಿಲ್ಲ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರ ಗರ್ವಭಂಗ ಆಗಬೇಕು. ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಸೋಲಿಸಿ ಎಂದು ಮೈತ್ರಿ ನಾಯಕರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸೂಚನೆ ನೀಡಿದರು.

    ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು-ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ ಜಿ.ಟಿ.ದೇವೇಗೌಡರೇ. ಸಿದ್ದರಾಮಯ್ಯನವರ ಗರ್ವಭಂಗ ಆಗಬೇಕು. ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಕರೆ ಕೊಟ್ಟರು. ಅದಕ್ಕೆ ಜಿಟಿಡಿ, ಆಯ್ತು ಅಲ್ಲಿಂದಲೇ ಗೆಲುವು ಶುರು ಮಾಡೋಣ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ

    ಕೋರ್ಟ್ಗೆ ಕೇಂದ್ರದ ವಿರುದ್ಧ ಅರ್ಜಿ ಹಾಕಿದ್ದಾರೆ ಸ್ಟ್ರಾಂಗೆಸ್ಟ್‌ ಸಿಎಂ. ಇಂಥ ಮಹಾನುಭಾವ ಸಿಎಂ ನಮ್ಮ ರಾಜ್ಯದಲ್ಲಿ ಇದ್ದಾರೆ, ನಮೋ ನಮಃ. ಜೆಡಿಎಸ್ ಎಲ್ಲಿದೆ ಅಂತ ಸಿದ್ದರಾಮಯ್ಯ ಕೇಳ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಜೆಡಿಎಸ್ ಇದೆ. ಎಲ್ಲಿದೆ ಅಂತ ತೋರಿಸುವ ಸಾಮರ್ಥ್ಯ 91 ವರ್ಷದ ಈ ದೇವೇಗೌಡಗೆ ಇದೆ. ನಾನು ಯಾರಿಗೂ ಅಂಜಲ್ಲ, ಯಾರ ಭಯವೂ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ಪರಸ್ಪರ ಸಹಕಾರ, ಒಗ್ಗಟ್ಟಿಗೆ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಹಿಂದೆ ಆಗಿದ್ದೆಲ್ಲ ಮರೆತುಬಿಡಿ, ಕಾಲ ಕ್ಷಣಿಕ. ನಮ್ಮ ವಿರೋಧಿಗಳು ಪ್ರಬಲರಾಗಿದ್ದಾರೆ. ಕಾಂಗ್ರೆಸ್‌ನ ಸೋಲಿಸೋದು ಅಷ್ಟು ಸುಲಭ ಅಲ್ಲ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಮೋದಿಯವರ ಜತೆ ಕೈಜೋಡಿಸಲು ಹಲವು ಕಾರಣಗಳಿವೆ. ಅರವತ್ತು ವರ್ಷ ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ನನಗೆ ಎಲ್ಲದರ ಅರಿವು ಇದೆ. ಮೋದಿ ಹೆಸರು ಮಾತ್ರವೇ ಈ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್ ಆಗಿದೆ. ಚುನಾವಣೆಯಲ್ಲಿ ಮೋದಿಯವರ ಹೆಸರಿನ ಬಲ ಮುಖ್ಯವಾಗಲಿದೆ. ನಮ್ಮ ಕಾರ್ಯಕರ್ತರು ಹಳೆಯ ಘಟನೆಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿ. ದೇಶದಲ್ಲಿ ಮೋದಿಯವರಂಥ ನಾಯಕ ಮತ್ತೊಬ್ಬರು ಇಲ್ಲ ಎಂದು ಬಣ್ಣಿಸಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್‌ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?

    ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಸಮಯ ಕಡಿಮೆ ಇದೆ, ಕೆಲಸ ಮಾಡಿ ಎಲ್ಲ ಕ್ಷೇತ್ರ ಗೆಲ್ಲಿಸಿ. ಕಳೆದ ಅರವತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಅವರು ಎಷ್ಟು ಹಣ ಚುನಾವಣೆಯಲ್ಲಿ ಸುರೀತಿದ್ದಾರೆ? ಅವರು ಸಂಪನ್ಮೂಲ ಸಂಗ್ರಹ ಮಾಡಿದ್ದೇ ಅಕ್ರಮ ಮಾರ್ಗದಲ್ಲಿ. ಅವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದರು. ಆದರೂ ಸೋಕಾಲ್ಡ್ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸೋಲ್ತು. ಅವರು ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು. ಹಣ ಸುರಿಯುವ ಕಾಂಗ್ರೆಸ್ ಸೋಲಿಸೋದು ಸುಲಭವಲ್ಲ. ಆದರೆ ಜನ ನಮ್ಮ ಪರ ಇದ್ದಾರೆ. ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತೀ ಕ್ಷೇತ್ರಗಳಲ್ಲೂ ಮೈತ್ರಿಗೆ ಸ್ವಂತ ಬಲ ಇದೆ ಎಂದು ಆಶಯ ವ್ಯಕ್ತಪಡಿಸಿದರು.

    ನನ್ನನ್ನ ತುಮಕೂರಿನಲ್ಲಿ ಸೋಲಿಸಿದ್ದು ಕಾಂಗ್ರೆಸ್. ಯಾವ ಸಂದರ್ಭದಲ್ಲಿ ಏನಾಗಿದೆ ಅಂತಾ ಹೇಳ್ತೇನೆ ಯಡಿಯೂರಪ್ಪನವರೇ. ನನ್ನನ್ನೇ ತುಮಕೂರಿನಲ್ಲಿ ಸೋಲಿಸ್ತಾರೆ. ಯಾವ ಸಮಾಜಕ್ಕೆ ನಾನು ಏನು ಮಾಡಿದ್ದೇನೆ ಅಂತಾ ಇಲ್ಲಲ್ಲ ಬೇರೆ ಮಾತಾಡ್ತೀನಿ ಯಡಿಯೂರಪ್ಪನವರೇ. ನಾನು ಯಾವ ಕ್ಷೇತ್ರಕ್ಕಾದ್ರೂ ಹೋಗ್ತೀನಿ. ನನಗೆ ನನ್ನ ಮಂಡಿ ನೋವು ಇದ್ದರೂ ಪರವಾಗಿಲ್ಲ. ನನ್ನ ತಲೆ ಎನ್‌ಸೈಕ್ಲೋಪೀಡಿಯಾ, ಎಲ್ಲವೂ ನೆನಪಿದೆ. ಆದರೆ ಮಂಡಿಗಳೆರಡೂ ಸಹಕರಿಸಲ್ಲ ಎಂದು ತಮ್ಮ ಅನಾರೋಗ್ಯದ ಕುರಿತು ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಅನ್ಸಾರಿ ಸಾವು – ಸುಪ್ರೀಂ ಕೋರ್ಟ್‌ ತನಿಖೆಗೆ ಆಗ್ರಹಿಸಿದ ಅಖಿಲೇಶ್‌ ಯಾದವ್‌

  • ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ

    ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ

    ಬೆಂಗಳೂರು: ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿದ್ದೇನೆ. ಕೋಲಾರದಲ್ಲಿ ನನಗೆ ಅನುಭವ ಇದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ತಿಳಿಸಿದರು.

    ಎರಡು ಬಣದವರು ಒಟ್ಟಾಗಿ ಕೆಲಸ ಮಾಡುತ್ತೇವೆ. ಯಾರಿಗಾದರು ಟಿಕೆಟ್ ಕೊಡಿ ಅಂತ ರಮೇಶ್ ಕುಮಾರ್ ಹೇಳಿದ್ದರು. ವೇಣುಗೋಪಾಲ್, ಸುರ್ಜೆವಾಲ, ಖರ್ಗೆ ಅವರು ಸಮಚಿತ್ತದಿಂದ ತೋರಿದ್ದಾರೆ. ನಾವು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಗೆಲ್ಲಬೇಕು. ಸಿಎಂ, ಡಿಸಿಎಂಗೂ ನಾನು ಮನವಿ ಮಾಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಬ್ಬರನ್ನೂ ಒಪ್ಪಲ್ಲ. ಸೋಲಲಿ ಅಥವಾ ಗೆಲ್ಲಲಿ ಬೇರೆ ಕ್ಯಾಂಡಿಡೇಟ್ ಕೊಡ್ತೀವಿ ಎಂದು ಕೈ ತೊಳೆದುಕೊಳ್ಳುವುದು ಸರಿಯಲ್ಲ. ಅವರದು ಬೇಡ, ನಿಮ್ಮದು ಬೇಡ ಅಂದರೆ ಬಂದವರಿಗೆ ಕಷ್ಟ ಆಗುತ್ತೆ. ಪಾಪ ಅವರನ್ನ ಕಷ್ಟಕ್ಕೆ ಸಿಲುಕಿಸುವುದು ಬೇಡ ಎಂದು ಎಚ್ಚರಿಕೆ ಮಾತನಾಡಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್‌ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?

    ಒಮ್ಮತದ ಅಭ್ಯರ್ಥಿ ಆದರೆ ಎಲ್ಲರೂ ಸೇರಿ ಕೆಲಸ ಮಾಡಬಹುದು. ನಾನು ಅಘಾದವಾದ ನೋವಲ್ಲಿ ಇದ್ದೇನೆ. ಆದರೆ ಪಕ್ಷ ಮುಖ್ಯ. ಎಡಗೈ ಬಲಗೈ ಎಲ್ಲ ಇಲ್ಲ. ಎಲ್ಲಾ ವರ್ಗದ ಜನ ವೋಟ್ ಹಾಕಿದ್ದಕ್ಕೆ 30 ವರ್ಷ ಪಾರ್ಲಿಮೆಂಟ್‌ಗೆ ಹೋಗಿದ್ದೇನೆ ನಾನು. ಅವರು ಯಾರಿಗೆ ಕೊಟ್ಟರೂ ಒಪ್ಪಿಕೊಳ್ಳುತ್ತೇನೆ. ನನ್ನ ಸಮುದಾಯ ಕಟ್ಟಿಕೊಂಡು ಹಣೆಬರಹ ಬರೆದುಕೊಳ್ಳೋಕೆ ಆಗಲ್ಲ. ಯಾವುದೇ ಸಮುದಾಯಕ್ಕೆ ಟಿಕೆಟ್ ಕೊಟ್ರೂ ಒಪ್ಪಿಕೊಳ್ಳುವೆ. ಆದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ ವೋಟ್ ಕೇಳಬೇಕು ಎಂದು ಹೇಳಿದರು.

    ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ, ಎಂಎಲ್‌ಸಿ ಎಲ್ಲಾ ಹಂತದಲ್ಲಿ ಕೆಲಸ ಮಾಡಿ ಕೋಲಾರವನ್ನ ಕಾಂಗ್ರೆಸ್ ಭದ್ರಕೋಟೆ ಮಾಡಿದ್ದೇನೆ. ಸಾಕಷ್ಟು ಶಾಸಕರು ಪರಿಷತ್ ಸದಸ್ಯರನ್ನ ಬೆಳೆಸಿದ್ದೇನೆ. ರಮೇಶ್ ಕುಮಾರ್ ಹಾಗೂ ನಾವೆಲ್ಲಾ ಒಟ್ಟಿಗೆ ಕುಳಿತು ಮಾತನಾಡಿದ್ದೆವು. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡೋಣ ಅಂತ ಮಾತನಾಡಿದ್ದೆವು. ನಾನು ಮತ್ತೊಮ್ಮೆ ಮನವಿ ಮಾಡಿದ್ದೇನೆ. ನನಗೆ ಅವಕಾಶ ಮಾಡ್ಕೊಡಿ ಅಂತ. ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರ್ತೇನೆ ಅಂತ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ನನ್ನ ಭಾವನೆ. ರಮೇಶ್ ಕುಮಾರ್ ಹಿರಿಯರು, ಅವರೂ ಕೂಡ ನಿನ್ನೆ ಹಾಜರಿರಲಿಲ್ಲ. ನಾವು ಎಲ್ಲರೂ ಒಟ್ಟಿಗೆ ಸೇರಿದಾಗ ರಮೇಶ್ ಕುಮಾರ್ ಎಲ್ಲ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡ್ತೇವೆ ಅಂದಿದ್ದರು. ಅವರೇ ಈ ಮಾತನ್ನು ಹೇಳಿದ್ದರು. ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ – ಐಟಿ ಇಲಾಖೆಯಿಂದ 1,700 ಕೋಟಿ ಮೊತ್ತದ ಡಿಮ್ಯಾಂಡ್‌ ನೋಟಿಸ್‌

    ನನ್ನ ಮನಸ್ಸಲ್ಲಿ ಆಘಾತ ಇದೆ ನೋವಿದೆ. ನಾವೆಲ್ಲರೂ ಸ್ವಪ್ರತಿಷ್ಟೆ ಬಿಟ್ಟು ಕೆಲಸ ಮಾಡೋಣ. ನಾನು ಬಹಳ ನೋವಲ್ಲಿದ್ದೇನೆ. ನನ್ನ ನೋವು ದೊಡ್ಡದಲ್ಲ, ಕಾಂಗ್ರೆಸ್ ದೊಡ್ಡದು. ಮೂರನೇ ಅಭ್ಯರ್ಥಿ ಬಗ್ಗೆ ಯೋಚನೆ ನಾನು ಮಾಡಿಯೇ ಇಲ್ಲ. ನಾನು ಯಾರಿಗೂ ಪ್ರಪೋಸಲ್ ಮಾಡಿಲ್ಲ. ನಾನು ಎಡಗೈ ಬಲಗೈ ವಿಷಯ ಮಾತ್ರ ಹೇಳ್ತಿಲ್ಲ. ನಾನು ಅದಕ್ಕಿಂತ ಮೇಲಿದ್ದೇನೆ. ನಾನು ರಮೇಶ್ ಕುಮಾರ್ ಮನೆ ಹತ್ರ ಹೋಗಿದ್ದೆ ಅವರೇ ಸಿಗಲಿಲ್ಲ. ನಾನೇ ಕಾಂಗ್ರೆಸ್ ಉಳಿಬೇಕು ಅಂತ ಅವರ ಮನೆಗೆ ಹೋದೆ. ಕಾಂಗ್ರೆಸ್ ಆಫೀಸಲ್ಲೇ ಮಾತಾಡಿದೆ, ಅವರೇ ಎಲ್ಲವನ್ನೂ ಬಿಟ್ಟುಬಿಡೋಣ ಅಂತ ಮಾತನಾಡಿದರು. ನಾನು ಕಾಂಗ್ರೆಸ್‌ಗಾಗಿ ಸ್ವಪ್ರತಿಷ್ಠೆ ಮಾಡೋದು ಒಳ್ಳೆಯದಲ್ಲ, ಪ್ರತಿಷ್ಠೆ ಮಾಡುತ್ತಿಲ್ಲ. ರಮೇಶ್ ಕುಮಾರ್ ಕೂರಿಸಿಕೊಂಡು ಸಿಎಂ ಮಾತನಾಡಲಿ. ನಾನು ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿ ಅಂತಲೇ ಕೇಳಿದ್ದೇನೆ ಎಂದರು.

    ಬೇರೆ ಕಡೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ಕೋಲಾರದ್ದು ಮಾತ್ರ ಯಾಕೆ ಬಗೆಹರಿಯುತ್ತಿಲ್ಲ? ಸಿಎಂ, ಡಿಸಿಎಂಗೆ ಕೋಲಾರದ ಸಮಸ್ಯೆ ಬಗೆಹರಿಸಬೇಕಾದ ದೊಡ್ಡ ಜವಾಬ್ದಾರಿ ಇದೆ. ಯಾರು ಸಮಸ್ಯೆ ಬಗೆಹರಿಸಬೇಕಿತ್ತೋ ಅವರ ಮನಸ್ಸು ಸ್ವಲ್ಪ ದೊಡ್ಡದಾದರೆ ಸಮಸ್ಯೆ ಬಗೆಹರಿಯುತ್ತದೆ. ಎಲ್ಲ ಕಡೆಯದ್ದೂ ಸಂಧಾನ ಆಗುತ್ತದೆ. ಕೋಲಾರದ್ದು ಮಾತ್ರ ಯಾಕೆ ಸಂಧಾನ ಆಗ್ತಿಲ್ಲ ಎಂದು ಪರೋಕ್ಷವಾಗಿ ಸಿಎಂ, ಡಿಸಿಎಂಗೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು: ಸಿದ್ದೇಶ್ವರ್ ಪತ್ನಿ ವಿರುದ್ಧ ಶಾಮನೂರು ಹೇಳಿಕೆ

  • ಒಂದೇ ಕ್ಷೇತ್ರದಲ್ಲಿ ‘ಪನ್ನೀರಸೆಲ್ವಂ’ ಹೆಸರಿನ ಐವರು ಕಣಕ್ಕೆ – ಮಾಜಿ ಸಿಎಂ ಪನ್ನೀರಸೆಲ್ವಂಗೆ ಪೀಕಲಾಟ!

    ಒಂದೇ ಕ್ಷೇತ್ರದಲ್ಲಿ ‘ಪನ್ನೀರಸೆಲ್ವಂ’ ಹೆಸರಿನ ಐವರು ಕಣಕ್ಕೆ – ಮಾಜಿ ಸಿಎಂ ಪನ್ನೀರಸೆಲ್ವಂಗೆ ಪೀಕಲಾಟ!

    – ತಮಿಳುನಾಡಿನ ರಾಮನಾಥಪುರಂ ‘ಪನ್ನೀರಸೆಲ್ವಂ’ ಹೆಸರಲ್ಲಿ 5 ನಾಮಪತ್ರ ಸಲ್ಲಿಕೆ

    ಚೆನ್ನೈ: ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯನ್ನು ಸೋಲಿಸಲು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಲು ತಂತ್ರಗಳನ್ನು ಹೆಣೆಯುವುದು ಸಾಮಾನ್ಯ. ಅದೇ ರೀತಿ, ತಮಿಳುನಾಡು (Tamil Nadu) ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ (Panneerselvam) ಅವರನ್ನು ಮಣಿಸಲು ತಂತ್ರ ರೂಪಿಸಲಾಗಿದೆ.

    ತಮಿಳುನಾಡಿನ ಮಾಜಿ ಸಿಎಂ ಓ. ಪನ್ನೀರಸೆಲ್ವಂ ಅವರು ಲೋಕಸಭಾ ಚುನಾವಣೆಗೆ ರಾಮನಾಥಪುರಂ (Ramanathapuram) ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ‘ಪನ್ನೀರಸೆಲ್ವಂ’ ಎಂದೇ ಹೆಸರಿರುವ ಈತರೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ಪರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬ್ಯಾಟಿಂಗ್‌

    ಈಗ ಮಾಜಿ ಸಿಎಂ ಪನ್ನೀರಸೆಲ್ವಂ ಅವರು ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೇ, ತಮ್ಮದೇ ಹೆಸರಿನ ಇತರ ನಾಲ್ವರ ವಿರುದ್ಧ ಚುನಾವಣಾ ಕಣದಲ್ಲಿ ಹೋರಾಡಬೇಕಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಇತರ ನಾಲ್ಕು ನಾಮಪತ್ರಗಳು ಮಧುರೈನ ಉಸಿಲಂಪಟ್ಟಿ, ದಕ್ಷಿಣ ಕತ್ತೂರ್, ವಾಗೈಕುಲಂ ಗ್ರಾಮ ಮತ್ತು ಮಧುರೈ ಚೋಲೈ ಅಜಕುಪುರಂನಿಂದ ಸಲ್ಲಿಕೆಯಾಗಿವೆ.

    ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಎಐಎಡಿಎಂಕೆ ಸ್ವಯಂಸೇವಕ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ರಾಮನಾಥಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಕೈತಪ್ಪಿ ಹೋಗಿರುವ ಎಲ್ಲ ಯೋಜನೆಗಳನ್ನು ಮರಳಿ ತರಲು ಶ್ರಮಿಸುತ್ತೇನೆ. ಅಷ್ಟೇ ಅಲ್ಲ, ಪ್ರತಿನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಮೀನುಗಾರರ ರಕ್ಷಣೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋಗುತ್ತೇನೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಭರವಸೆ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌, ಯುಪಿ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಹೃದಯಾಘಾತದಿಂದ ಸಾವು

    ಎಐಎಡಿಎಂಕೆಯಿಂದ ಉಚ್ಚಾಟನೆ ವಿರುದ್ಧ ಕಾನೂನು ಹೋರಾಟ ಮುಂದುವರಿಸಿರುವ 74 ವರ್ಷದ ಮಾಜಿ ಸಿಎಂ, ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

    ರಾಮನಾಥಪುರದಲ್ಲಿ ಒಟ್ಟು 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಮನಿರ್ದೇಶಿತ ಕೆ.ನವಾಸ್ಕಾನಿ ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯ ಪಿ.ಜಯಪೆರುಮಾಳ್ ಸೇರಿದ್ದಾರೆ. ಪ್ರಮುಖ ಸ್ಪರ್ಧಿಗಳ ಹೆಸರನ್ನು ಹೋಲುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು ಹೊಸದೇನಲ್ಲ. ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಇದು ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ?

  • ಅಮಿತ್ ಶಾ ಓರ್ವ ಗೂಂಡಾ, ರೌಡಿ ಗುಜರಾತ್‍ನಲ್ಲಿ ನರಮೇಧ ಮಾಡಿದ್ರು: ಯತೀಂದ್ರ ಸಿದ್ದರಾಮಯ್ಯ

    ಅಮಿತ್ ಶಾ ಓರ್ವ ಗೂಂಡಾ, ರೌಡಿ ಗುಜರಾತ್‍ನಲ್ಲಿ ನರಮೇಧ ಮಾಡಿದ್ರು: ಯತೀಂದ್ರ ಸಿದ್ದರಾಮಯ್ಯ

    ಚಾಮರಾಜನಗರ: ಅಮಿತ್ ಶಾ (Amit Shah) ಓರ್ವ ಗೂಂಡಾ, ರೌಡಿ ಎಂದು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹನೂರು ಕಾಂಗ್ರೆಸ್ (Congress) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಿಲ್ಲೆಯ ಜನರನ್ನು ಬಕ್ರಾ ಮಾಡೋಕೆ ಬಂದಿದ್ದಾರಾ ಶೆಟ್ಟರ್: ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

    2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು, ಅದು ಆಗಲಿಲ್ಲ. ಈಗ ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡೋದು ಕೇಂದ್ರ ಸರ್ಕಾರದ ಹೊಣೆ ಅಲ್ಲ ಎಂದು ಹೇಳ್ತಿದ್ದಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದರು, ತಂದ್ರಾ? ಸ್ವಿಸ್ ಬ್ಯಾಂಕ್‍ನಲ್ಲಿ ಯಾರ ಖಾತೆಯಿದೆ ಎಂದು ಪಟ್ಟಿ ಕೂಡ ರಿಲೀಸ್ ಮಾಡಲಿಲ್ಲ. ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಹೋಗಿದೆ ಎಂದಿದ್ದಾರೆ.

    400ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ, 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡುವುದು ಇವರ ಹಿಡನ್ ಅಜೆಂಡಾ ಆಗಿದೆ. ದೇಶದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಎಂದರೆ ಅದು ಮೋದಿ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲೂ ಉಗ್ರರ ಜಾಲ – ರಾಮೇಶ್ವರಂ ಕೆಫೆ ಸ್ಫೋಟ, ಓರ್ವ ಅರೆಸ್ಟ್‌

  • ಜಿಲ್ಲೆಯ ಜನರನ್ನು ಬಕ್ರಾ ಮಾಡೋಕೆ ಬಂದಿದ್ದಾರಾ ಶೆಟ್ಟರ್: ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

    ಜಿಲ್ಲೆಯ ಜನರನ್ನು ಬಕ್ರಾ ಮಾಡೋಕೆ ಬಂದಿದ್ದಾರಾ ಶೆಟ್ಟರ್: ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

    ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಹಂಚಿಕೆ ಆಗಿದ್ದ ಆಕ್ಸಿಜನ್‍ನ್ನು ಹುಬ್ಬಳ್ಳಿ – ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ (Jagadish Shettar) ಕೊಡುಗೆ ಏನಿದೆ? ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಎನ್ನುತ್ತಿದ್ದಾರೆ. ನಾವೇನು ಹುಚ್ಚರಾ? ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಾಗ್ದಾಳಿ ನಡೆಸಿದ್ದಾರೆ.

    ಗೋಕಾಕ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಬೆಳಗಾವಿಗೆ ಏನು ಮಾಡಿದ್ದಾರೆ? ಬೆಳಗಾವಿ ದೊಡ್ಡ ಜಿಲ್ಲೆ, ಜನಸಂಖ್ಯೆ ಹೆಚ್ಚಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಗೆ ಆಕ್ಸಿಜನ್ ಹಂಚಿಕೆ ಮಾಡಿದ್ದನ್ನು ಹುಬ್ಬಳ್ಳಿ -ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದೇ ಕರ್ಮ ಭೂಮಿಯಾ? ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಇಲ್ಲಿಗೆ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ತೆರಿಗೆ ಮೌಲ್ಯಮಾಪನ ಕೇಸ್‌ – ಹೈಕೋರ್ಟ್‌ನಲ್ಲೂ ಹಿನ್ನಡೆ, 4 ಅರ್ಜಿ ವಜಾ

    ಆರು ಬಾರಿ ಹುಬ್ಬಳ್ಳಿ ಜನರು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರಾದರು. ಎಲ್ಲವನ್ನೂ ಅನುಭವಿಸಿದ್ದಂತವರನ್ನು ಹುಬ್ಬಳ್ಳಿ- ಧಾರವಾಡ ಜನರು ಹೊರಗೆ ಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಎನ್ನಲು ಏನಿದೆ? ಬೆಳಗಾವಿಗೆ ನಿಮ್ಮ ಕೊಡುಗೆ ಏನಾದರೂ ಇದೆಯಾ? ನಾಚಿಕೆಯಾಗಬೇಕು ನಿಮಗೆ ಎಂದು ಕಿಡಿಕಾರಿದ್ದಾರೆ.

    ಗೋ ಬ್ಯಾಕ್ ಶೆಟ್ಟರ್ ಎನ್ನುವುದು ಅವರ ಪಕ್ಷದ ಕಾರ್ಯಕರ್ತರೇ ಮಾಡುತ್ತಿರುವ ಅಭಿಯಾನ, ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿಯವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿಯಷ್ಟು ದೊಡ್ಡವರಾ? ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್‌