Tag: Lok Sabha Election 2024

  • ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ

    ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ

    ತುಮಕೂರು: ಲೋಕಸಭಾ ಚುನಾವಣೆಯಲ್ಲಿ (Lok sabha election 2024) ಡಿ.ಕೆ ಸುರೇಶ್ (DK Suresh) ಸೋಲಿಗೆ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಟೀಮ್ ಕಾರಣ ಎಂದು ಬಿಜೆಪಿ (BJP) ಶಾಸಕ ಸುರೇಶ್ ಗೌಡ (Sureshgowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಎಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತಿದೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. ಚುನಾವಣೆಗಿಂತ ಮೊದಲೇ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ ಹಾಗೂ ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿ.ಕೆ ಸುರೇಶ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗಿದ್ದು, ಅದ್ಕಕಿಂತ ಹೆಚ್ಚಿನ ಅಂತರದಲ್ಲಿ ಅವರು ಸೋತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮೋದಿ ಪ್ರಮಾಣವಚನಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆಹ್ವಾನ

    ಡಿ.ಕೆ ಸುರೇಶ್ ಅವರ ಸೋಲು, ಸಂಚಿನ ಒಂದು ಭಾಗವಾಗಿದೆ. ಡಿ.ಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಬಾರದು. ಅವರ ನೈತಿಕತೆ ಕುಸಿಯಬೇಕು ಎಂದು ಹೀಗೆ ಮಾಡಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಲ್ಲ, ಈ ಸರ್ಕಾರ ಉಳಿಯಲ್ಲ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭವಾಗಿ, ಕಾಂಗ್ರೆಸ್‍ನಲ್ಲಿ ಒಳಜಗಳ ಶುರುವಾಗಲಿದೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದೆ. ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ. ಇನ್ನೂ ಸರ್ಕಾರ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

  • ಕೋಲಾರದಲ್ಲಿ `ಕೈ’ ನಾಯಕರ ಪ್ರತಿಷ್ಠೆಗೆ ಮಕಾಡೆ ಮಲಗಿದ ಕಾಂಗ್ರೆಸ್

    ಕೋಲಾರದಲ್ಲಿ `ಕೈ’ ನಾಯಕರ ಪ್ರತಿಷ್ಠೆಗೆ ಮಕಾಡೆ ಮಲಗಿದ ಕಾಂಗ್ರೆಸ್

    ಕೋಲಾರ: ಕಾಂಗ್ರೆಸ್‌ನ ಭದ್ರಕೋಟೆ ಕೋಲಾರ (Kolar) ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ (Congress) ಸತತ ಎರಡನೇ ಸೋಲಾಗುವ ಮೂಲಕ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ಗೆ ಒಳ ಏಟು ಬಿದ್ದಿದ್ದು, ರಾಜೀನಾಮೆ ಪ್ರಹಸನ ಮಾಡಿದ ರೆಬಲ್ ಶಾಸಕ, ಸಚಿವರಿಗೆ ತೀವ್ರ ಹಿನ್ನಡೆಯಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ವರ್ಷ ಕಳೆಯುವ ಮುನ್ನವೇ ಮತದಾರರು ಪಾಠ ಕಲಿಸಿದ್ದಾರೆ. ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರ ಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಕಾಂಗ್ರೆಸ್ ಕಳೆದುಕೊಂಡಿದೆ. ಕ್ಷೇತ್ರದಲ್ಲಿ ಐವರು ಕಾಂಗ್ರೆಸ್, ಇಬ್ಬರು ಮೇಲ್ಮನೆ ಸದಸ್ಯರು, ಒಬ್ಬರು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲೆಯವರೇ ಆದ ಸಚಿವ ಕೆ.ಹೆಚ್.ಮುನಿಯಪ್ಪ ಇದ್ದರೂ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಮೈತ್ರಿ ಟಕ್ಕರ್ ಕೊಟ್ಟಿದೆ. ಆದರೆ ಕೊನೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೆ.ವಿ.ಗೌತಮ್ ಹರಕೆಯ ಕುರಿಯಾದರು ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ಕೋಲಾರ ಕ್ಷೇತ್ರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಕೆ.ಹೆಚ್.ಮುನಿಯಪ್ಪ ಮಧ್ಯೆ ಇರುವ ಕಿತ್ತಾಟ, ಎಡ-ಬಲ ಸಮುದಾಯದ ಗೊಂದಲ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಈಗ ಪಕ್ಷಕ್ಕೆ ಮುಳುವಾಗಿದೆ. ಇನ್ನು ಕೆಲ ಕಾಂಗ್ರೆಸ್ ನಾಯಕರು ನಾನು ಎಂದು ಮೆರೆಯುತ್ತಿದ್ದರು. ಅವರಿಗೆ ತಕ್ಕ ಪಾಠ ಸಿಕ್ಕಿದೆ ಅನ್ನೋದು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮಾತು. ಮುನಿಯಪ್ಪ ಕೂಡ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ್ದು, ಸೋಲಿನಲ್ಲಿ ಅಂತ್ಯ ಕಂಡಿದೆ. ಹಾಗಾಗಿ ಕೋಲಾರ ಸೋಲಿಗೆ ಟಿಕೆಟ್ ಕೊಡಿಸಿದವರನ್ನೆ ಕೇಳಿ ಎನ್ನುವ ಮೂಲಕ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

    ಕಾಂಗ್ರೆಸ್‌ನ ಕಿತ್ತಾಟಕ್ಕಿಂತ ಮೈತ್ರಿಯೇ ಉತ್ತಮ ಅನ್ನೋ ನಂಬಿಕೆಯಿಂದ ಕೋಲಾರ ಮತದಾರರು ಮೈತ್ರಿ ಅಭ್ಯರ್ಥಿಗೆ ಜೈ ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಮಕಾಡೆ ಮಲಗಿಸಿದ್ದಾರೆ. ಕಾಂಗ್ರೆಸ್ ಸೋಲಿಗೆ ರಮೇಶ್ ಕುಮಾರ್ ಟೀಂ ಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ ಕೋಲಾರಕ್ಕೆ ಯಾವುದೇ ಯೋಜನೆ ತಂದಿಲ್ಲ. ಬಜೆಟ್‌ನಲ್ಲೂ ಕೋಲಾರವನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನವೂ ಸಿಕ್ಕಿಲ್ಲ ಎಂಬ ಅಂಶಗಳು ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!

    ರಾಜ್ಯ ರಾಜಕೀಯದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಗೆ ಸಖತ್ ಸೌಂಡ್ ಮಾಡಿತ್ತು. ರಾಜೀನಾಮೆ ಪ್ರಹಸನವೂ ಕೂಡ ಪಕ್ಷಕ್ಕೆ ಮುಳುವಾದಂತೆ ಕಾಣಿಸುತ್ತಿದೆ. ಕೋಲಾರ ಕಾಂಗ್ರೆಸ್‌ನ 2 ಬಣಗಳನ್ನು ಒಂದುಗೂಡಿಸುವುದರಲ್ಲಿ ಹೈಕಮಾಂಡ್ ಕೂಡ ವಿಫಲವಾಗಿದ್ದು, ಇದು ಕೂಡ ಗೌತಮ್ ಸೋಲಿಗೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ

  • ಮೈತ್ರಿ ಅಭ್ಯರ್ಥಿ ಎಂದಲ್ಲ, ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ: ಕೆ.ಸುಧಾಕರ್

    ಮೈತ್ರಿ ಅಭ್ಯರ್ಥಿ ಎಂದಲ್ಲ, ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ: ಕೆ.ಸುಧಾಕರ್

    – ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಭರ್ಜರಿ ಗೆಲುವು

    ಚಿಕ್ಕಬಳ್ಳಾಪುರ: ಜೆಡಿಎಸ್ (JDS) ಪಕ್ಷದ ಬಹಳಷ್ಟು ಜನ ಸುಧಾಕರ್ (K Sudhakar) ಮೈತ್ರಿ ಅಭ್ಯರ್ಥಿ ಎಂದು ಭಾವಿಸಿಲ್ಲ. ಸ್ವತಃ ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ. ಇವೆಲ್ಲದರ ಪ್ರತಿಫಲ ಈಗ ರಿಸಲ್ಟ್ ರೂಪದಲ್ಲಿ ನೋಡುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಕೆ.ಸುಧಾಕರ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದ (Chikkaballapura) ನಾಗಾರ್ಜುನ ಕಾಲೇಜು ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ಇದು ಕೋಟ್ಯಂತರ ಜನರ ಆಸೆ. ಜನ ಚಿಕ್ಕಬಳ್ಳಾಪುರ ವಿಕಸಿತ ಚಿಕ್ಕಬಳ್ಳಾಪುರ ಆಗಬೇಕೆಂದು ಬಯಸಿದ್ದಾರೆ. ನಮಗೆ ದೊಡ್ಡ ಶಕ್ತಿ ನಮ್ಮ ನಾಯಕರು ಮತ್ತು ಕಾರ್ಯಕರ್ತರು. ಮಾಜಿ ಪ್ರಧಾನಿ ಹೆಚ್‌ಡಿಡಿ ಮತ್ತು ಹೆಚ್‌ಡಿಕೆ ಬೆಂಬಲ ಚೆನ್ನಾಗಿತ್ತು. ಜೆಡಿಎಸ್ ಕಾರ್ಯಕರ್ತರ ಬೆಂಬಲವೂ ಚೆನ್ನಾಗಿತ್ತು ಎಂದರು. ಇದನ್ನೂ ಓದಿ: ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    ವಿಧಾನಸಭೆ ಸೋಲಿಗೆ ಡಾ.ಕೆ.ಸುಧಾಕರ್ ಸೇಡು ತೀರಿಸಿಕೊಂಡಿದ್ದು, ಲೋಕಸಭೆಯಲ್ಲಿ ಗೆದ್ದು ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ. ಒಟ್ಟು 8,22,619 ಮತಗಳನ್ನು ಪಡೆದಿರುವ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 1,63,460 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಒಟ್ಟು 6,59,159 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

  • ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

    ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

    ನವದೆಹಲಿ: ಲೋಕಸಭೆಗೆ (Lok Sabha Election) ಇಂದು (ಶನಿವಾರ) ಆರನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.

    ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಹಾರದ 8, ಹರಿಯಾಣದ ಎಲ್ಲಾ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ, ಜಾರ್ಖಂಡ್‌ನ 4 ಸ್ಥಾನ, ದೆಹಲಿಯ ಎಲ್ಲಾ 7 ಸ್ಥಾನಗಳು, ಒಡಿಶಾದಲ್ಲಿ 6, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 8 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದಾರೆ. 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5,120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 8.93 ಲಕ್ಷಕ್ಕೂ ಹೆಚ್ಚು ನೋಂದಾಯಿತ 85+ ವರ್ಷದ, 23,659 100 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ ಚಲಾಯಿಸಲಿದ್ದಾರೆ. ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

    ಆರನೇ ಹಂತದ ಮತದಾನಕ್ಕೆ 1.14 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 11.4 ಲಕ್ಷ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು 20 ವಿಶೇಷ ರೈಲುಗಳನ್ನು ನಿಯೋಜಿಸಿದ್ದು, 184 ವೀಕ್ಷಕರು, 2,222 ಫ್ಲೈಯಿಂಗ್‌ ಸ್ಕ್ವಾಡ್‌ಗಳ ನೇಮಕ ಮಾಡಲಾಗಿದೆ. 257 ಅಂತರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ಗಳು, 927 ಅಂತರ-ರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ನಿಯೋಜನೆ ಮಾಡಿದ್ದು, ಚುನಾವಣಾ ಗಲಭೆ ತಡೆಯಲು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರದ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಾಧ್ಯತೆ – ಮೇ 28 ರಿಂದ 60 ದಿನ 144 ಸೆಕ್ಷನ್ ಜಾರಿ

    ಆರನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
    ನವದೆಹಲಿ – ಬನ್ಸೂರಿ ಸ್ವರಾಜ್ (ಬಿಜೆಪಿ)
    ಈಶಾನ್ಯ ದೆಹಲಿ – ಮನೋಜ್ ತಿವಾರಿ (ಬಿಜೆಪಿ), ಕನ್ಹಯ್ಯಾ ಕುಮಾರ್ (ಕಾಂಗ್ರೆಸ್)
    ರೊಹ್ಟಕ್ – ದೀಪೇಂದ್ರ ಸಿಂಗ್ ಹೂಡಾ (ಕಾಂಗ್ರೆಸ್)
    ಸಂಬಲ್‌ಪುರ – ಧರ್ಮೇಂದ್ರ ಪ್ರಧಾನ್ (ಬಿಜೆಪಿ)
    ಸುಲ್ತಾನ್‌ಪುರ – ಮೇನಕಾ ಗಾಂಧಿ (ಬಿಜೆಪಿ),
    ಅನಂತನಾಗ್ ರಜೌರಿ- ಮೆಹಬೂಬಾ ಮುಫ್ತಿ (ಪಿಡಿಪಿ)
    ತಮ್ಲುಕ್ – ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)
    ಕರ್ನಾಲ್ – ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)
    ಕುರುಕ್ಷೇತ್ರ – ನವೀನ್ ಜಿಂದಾಲ್ (ಬಿಜೆಪಿ)
    ಗುರ್‌ಗಾಂವ್ – ಇಂದರ್‌ಜಿತ್ ಸಿಂಗ್ (ಬಿಜೆಪಿ)

  • ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್‌ ಅಂಬಾನಿ ಕುಟುಂಬ!

    ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್‌ ಅಂಬಾನಿ ಕುಟುಂಬ!

    ಜೈಪುರ: ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರಿಂದು ಕುಟುಂಬಸ್ಥರೊಂದಿಗೆ ಮತಚಲಾಯಿಸಿದರು. ಮುಂಬೈನ ಮಲಬಾರ್ ಹಿಲ್ ಮತಗಟ್ಟೆಯಲ್ಲಿ ಪತ್ನಿ ನೀತಾ ಅಂಬಾನಿ, ಪುತ್ರ ಆಕಾಶ್‌ ಅಂಬಾನಿಯೊಂದಿಗೆ (Akash Ambani) ಬಂದು ಹಕ್ಕು ಚಲಾಯಿಸಿದರು.

    ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಕೇಶ್‌ ಅಂಬಾನಿ, ಭಾರತೀಯ ಪ್ರಜೆಯಾಗಿ ಮತದಾನ ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬ ಭಾರತೀಯನೂ ವೋಟ್‌ (Vote) ಮಾಡಬೇಕು ಎಂಬುದು ನನ್ನ ಮನವಿ ಎಂದು ನುಡಿದರು. ಇದೇ ವೇಳೆ, ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮುಖ್ಯ. ಏಕೆಂದರೆ ಇದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಪತ್ನಿ ನೀತಾ ಅಂಬಾನಿ (Nita Ambani) ಮತದಾನಕ್ಕೆ ಕರೆ ಕೊಟ್ಟರು.

    ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು (ಸೋಮವಾರ) ನಡೆದಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆದಿದೆ. ಇನ್ನೂ 2 ಹಂತದ ಚುನಾವಣೆ ಬಾಕಿಯಿದ್ದು, ಮೇ 25 ರಂದು 6ನೇ ಹಂತ ಹಾಗೂ ಜೂನ್‌ 1ರಂದು 7ನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್‌ 4ರಂದು 7 ಹಂತಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

    ಮತದಾನ ನಡೆದ ಪ್ರಮುಖ ಕ್ಷೇತ್ರಗಳು:
    ಲಕ್ನೋ, ರಾಯ್ ಬರೇಲಿ, ಅಮೇಥಿ, ಫತೇಪುರ್, ಫೈಜಾಬಾದ್, ಕೈಸರ್‌ಗಂಜ್, ನಾಸಿಕ್, ಪಾಲ್ಘರ್, ಕಲ್ಯಾಣ್, ಥಾಣೆ, ಮುಂಬೈ ಉತ್ತರ ಮತ್ತು ಮಹಾರಾಷ್ಟ್ರದ ಮುಂಬೈ ದಕ್ಷಿಣ, ಬಂಗಾವ್, ಬ್ಯಾರಕ್‌ಪೋರ್, ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ, ಬಿಹಾರದ ಮುಜಾಫರ್‌ಪುರ, ಸರನ್ ಮತ್ತು ಹಾಜಿಪುರ, ಸುಂದರ್‌ಗಢ, ಒಡಿಶಾದ ಬೋಲಂಗೀರ್ ಮತ್ತು ಕಂಧಮಾಲ್, ಜಾರ್ಖಂಡ್‌ನ ಕೋಡರ್ಮಾ ಮತ್ತು ಹಜಾರಿಬಾಗ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ.

    ಚುನಾವಣಾ ಕಣದಲ್ಲಿದ್ದವರು:
    ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಪಿಯೂಷ್ ಗೋಯಲ್, ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ, ಸಜ್ಜದ್ ಗನಿ ಲೋನ್, ಸಾಧ್ವಿ ನಿರಂಜನ್ ಜ್ಯೋತಿ, ಲಲ್ಲು ಸಿಂಗ್, ಕರಣ್ ಭೂಷಣ್ ಸಿಂಗ್, ಕೀರ್ತಿ ವರ್ಧನ್ ಸಿಂಗ್, ತನುಜ್ ಪೂಧನ್ ಸಿಂಗ್, ನರೇಶ್ ಉತ್ತಮ್ ಪಟೇಲ್, ಉಜ್ವಲ್ ನಿಕಮ್, ರಾಹುಲ್ ಶೆವಾಲೆ, ಅನಿಲ್ ದೇಸಾಯಿ, ವರ್ಷ ಗಾಯಕ್ವಾಡ್, ಸಂಜಯ್ ದಿನ ಪಾಟೀಲ್, ರವೀಂದ್ರ ವೈಕರ್, ಶ್ರೀಕಾಂತ್ ಶಿಂಧೆ, ಹೇಮಂತ್ ಗೋಡ್ಸೆ, ಭಾರತಿ ಪವಾರ್, ಕಪಿಲ್ ಮೊರೇಶ್ವರ್ ಪಾಟೀಲ್, ಸುಭಾಷ್ ರಾಮರಾವ್ ಭಮ್ರೆ, ಶಾಂತನು ಠಾಕೂರ್, ಅರ್ಜುನ್ ಸಿಂಗ್, ಪ್ರಸೂನೆಟ್ ಚಟರ್ಜಿ, ಕಲ್ಯಾಣ್ ಬ್ಯಾನರ್ಜಿ, ದೇವೇಶ್ ಚಂದ್ರ ಠಾಕೂರ್, ಅಲಿ ಅಶ್ರಫ್ ಫಾತ್ಮಿ, ಅಜಯ್ ನಿಶಾದ್, ರಾಜೀವ್ ಪ್ರತಾಪ್ ರೂಡಿ, ರೋಹಿಣಿ ಆಚಾರ್ಯ, ಚಿರಾಗ್ ಪಾಸ್ವಾನ್, ಜುಯಲ್ ಓರಮ್, ದಿಲೀಪ್ ಟಿರ್ಕಿ, ಅಚ್ಯುತ ಸಮಂತಾ, ಸಂಗೀತಾ ಕುಮಾರಿ ಸಿಂಗ್ ಡಿಯೋ, ಅನ್ನಪೂರ್ಣ ದೇವಿ ಮತ್ತು ಜೈ ಪ್ರಕಾಶ್ ಭಾಯಿ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದರು.

  • ಗುರುದ್ವಾರಕ್ಕೆ ಭೇಟಿ ನೀಡಿ ಭಕ್ತರಿಗೆ ಪ್ರಸಾದ ಬಡಿಸಿದ ಪ್ರಧಾನಿ ಮೋದಿ

    ಗುರುದ್ವಾರಕ್ಕೆ ಭೇಟಿ ನೀಡಿ ಭಕ್ತರಿಗೆ ಪ್ರಸಾದ ಬಡಿಸಿದ ಪ್ರಧಾನಿ ಮೋದಿ

    ಪಾಟ್ನಾ: ಪ್ರಧಾನಿ ನರೆಂದ್ರ ಮೋದಿಯವರು (Narendra Modi) ಇಲ್ಲಿನ ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು (ಮೇ 13) ಗುರುದ್ವಾರ ಪಾಟ್ನಾ ಸಾಹಿಬ್‍ಗೆ (Takhat Sri Harimandir Ji Patna Sahib) ಭೇಟಿ ನೀಡಿದರು.

    ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ತಯಾರಿಸಿ, ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು. ಇದನ್ನೂ ಓದಿ: ಕಿಡ್ನಾಪ್ ಪ್ರಕರಣದಲ್ಲಿ FIR ಮುನ್ನವೇ ಸತೀಶ್ ಬಾಬು ವಶಕ್ಕೆ- ಸಾರಾ ಮಹೇಶ್ ಹೊಸ ಬಾಂಬ್

    ಮೋದಿ ರೋಡ್ ಶೋ: ಇಂದು (ಮೆ.13) ಹಾಜಿಪುರ, ಮುಜಾಫರ್‍ಪುರ ಮತ್ತು ಸರನ್‍ನಲ್ಲಿ ಎನ್‍ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ನಡೆಸಿ ಮೋದಿ ಮಾತನಾಡಲಿದ್ದಾರೆ.

    ಪಾಟ್ನಾ ಸಾಹಿಬ್ ವಿಶೇಷವೇನು?: ತಖತ್ ಶ್ರೀ ಪಾಟ್ನಾ ಸಾಹಿಬ್‍ನ್ನು ತಖತ್ ಶ್ರೀ ಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದು ಸಹ ಕರೆಯುತ್ತಾರೆ. ಇದು ಪಾಟ್ನದಲ್ಲಿರುವ ಸಿಖ್ಖರ ಐದು ತಖತ್‍ಗಳಲ್ಲಿ ಒಂದಾಗಿದೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದ.

    ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್‍ಗೆ ತೆರಳುವ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದರು. ಇದನ್ನೂ ಓದಿ: Exclusive: ಕರ್ನಾಟಕದಲ್ಲಿ ‘ಆಪರೇಷನ್ ನಾಥ’ ಸುಳಿವು ಕೊಟ್ಟ ಏಕನಾಥ ಶಿಂಧೆ!

  • ಇಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ – 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ

    ಇಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ – 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ

    ನವದೆಹಲಿ: ದೇಶದ ಸಾರ್ವತ್ರಿಕ ಚುನಾವಣೆಯ (Lok Sabha Election 2024) ಮೂರನೇ ಹಂತದಲ್ಲಿ ಇಂದು 11 ರಾಜ್ಯಗಳ 92 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.

    ಕರ್ನಾಟಕದ (Karnataka) 14 ಕ್ಷೇತ್ರ ಸೇರಿದಂತೆ ಒಟ್ಟು 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 1,300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1.85 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಿದ್ದು, 18.5 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

    8.85 ಕೋಟಿ ಪುರುಷರು, 8.39 ಕೋಟಿ ಮಹಿಳೆಯರು ಸೇರಿ 17.24 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ. 85 ವರ್ಷ ಮೇಲ್ಪಟ್ಟ 14.04 ಲಕ್ಷ ಹಿರಿಯ ಮತದಾರರು, 100 ವರ್ಷ ಮೇಲ್ಪಟ್ಟ 39,599 ಮತದಾರರು ಮತದಾನ ಮಾಡಲಿದ್ದಾರೆ. ಚುನಾವಣೆ ಹಿನ್ನೆಲೆ 264 ಚುನಾವಣೆ ವೀಕ್ಷಕರು, 4,303 ಫ್ಲೈಯಿಂಗ್ ಸ್ಕ್ವ್ಯಾಡ್ ನೇಮಕ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು 1,041 ಚೆಕ್‌ಪೋಸ್ಟ್ ನಿಯೋಜಿಸಲಾಗಿದೆ.

    ಬಿಎಸ್‌ಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಚುನಾವಣೆ 2ನೇ ಹಂತದಿಂದ 3ನೇ ಹಂತಕ್ಕೆ ಬದಲಾಗಿದೆ. 3ನೇ ಹಂತದಲ್ಲಿ ನಡೆಯಬೇಕಿದ್ದ ಅನಂತ್ ನಾಗ್ – ರಜೋರಿ ಕ್ಷೇತ್ರದ ಚುನಾವಣೆ 6ನೇ ಹಂತದಲ್ಲಿ ನಡೆಯಲಿದೆ.

    ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
    ಅಸ್ಸಾಂ – 4
    ಬಿಹಾರ – 5
    ಛತ್ತೀಸ್‌ಗಢ – 7
    ಗೋವಾ – 2
    ಗುಜರಾತ್ – 26
    ಕರ್ನಾಟಕ – 14
    ಮಧ್ಯಪ್ರದೇಶ – 8+1
    ಮಹಾರಾಷ್ಟ್ರ -11
    ಉತ್ತರ ಪ್ರದೇಶ – 10
    ಪಶ್ಚಿಮ ಬಂಗಾಳ – 4
    ದಾದ್ರಾ ಮತ್ತು ಹವೇಲಿ ಹಾಗೂ ದಮನ್ ಮತ್ತು ದಿಯು 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಮೂರನೇ ಹಂತದ ಚುನಾವಣೆಯ ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು:
    ಅಮಿತ್ ಶಾ – ಗಾಂಧಿನಗರ, ಗುಜರಾತ್
    ಡಿಂಪಲ್ ಯಾದವ್ – ಮೈನ್‌ಪುರಿ, ಉತ್ತರ ಪ್ರದೇಶ
    ಜ್ಯೋತಿರಾದಿತ್ಯ ಸಿಂಧಿಯಾ – ಗುಣಾ, ಮಧ್ಯಪ್ರದೇಶ
    ಶಿವರಾಜ್ ಸಿಂಗ್ ಚೌಹಾಣ್ – ವಿದಿಶಾ, ಮಧ್ಯಪ್ರದೇಶ
    ದಿಗ್ವಿಜಯ ಸಿಂಗ್ – ರಾಜಗಢ, ಮಧ್ಯಪ್ರದೇಶ
    ಸುಪ್ರಿಯಾ ಸುಳೆ – ಬಾರಾಮತಿ, ಮಹಾರಾಷ್ಟ್ರ
    ಸುನೇತ್ರಾ ಪವಾರ್ – ಬಾರಾಮತಿ, ಮಹಾರಾಷ್ಟ್ರ
    ಪಲ್ಲವಿ ಡೆಂಪೋ – ದಕ್ಷಿಣ ಗೋವಾ, ಗೋವಾ
    ಬದ್ರುದ್ದೀನ್ ಅಜ್ಮಲ್ – ಧುಬ್ರಿ, ಅಸ್ಸಾಂ
    ಮನ್ಸುಕ್ ಮಾಂಡವಿಯ – ಪೋರಬಂದರ್, ಗುಜರಾತ್
    ಪುರುಷೋತ್ತಮ್ ರೂಪಾಲ – ರಾಜ್‌ಕೋಟ್, ಗುಜರಾತ್

  • ಎರಡನೇ ಹಂತದ ಚುನಾವಣೆ – ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ಜೊತೆಗೆ ಬಿಎಂಟಿಸಿ ನಿಯೋಜನೆ

    ಎರಡನೇ ಹಂತದ ಚುನಾವಣೆ – ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ಜೊತೆಗೆ ಬಿಎಂಟಿಸಿ ನಿಯೋಜನೆ

    – ನೈರುತ್ಯ ರೈಲ್ವೆಯಿಂದ 5 ವಿಶೇಷ ರೈಲುಗಳ ಓಡಾಟ

    ಬೆಂಗಳೂರು: ಮಂಗಳವಾರ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ (Lok Sabha Election 2024) ನಡೆಯುವ ಹಿನ್ನೆಲೆ ಉತ್ತರ ಕರ್ನಾಟಕ ಭಾಗಗಳಿಗೆ ಕೆಎಸ್‌ಆರ್‌ಟಿಸಿ (KSRTC) ಹೆಚ್ಚುವರಿ ಬಸ್‌ಗಳ ಜೊತೆಗೆ ಬಿಎಂಟಿಸಿ (BMTC) ಬಸ್‌ಗಳನ್ನು ನಿಯೋಜಿಸಿದ್ದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ.

    ಮತದಾನ (Vote) ಮಾಡುವ ಸಲುವಾಗಿ ಸೋಮವಾರ ಬೆಳಗ್ಗೆಯಿಂದಲೇ ಪ್ರಯಾಣಿಕರು ತಮ್ಮ ಊರುಗಳತ್ತ ತೆರಳುತ್ತಿದ್ದು, ಭಾನುವಾರವೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಾಕಷ್ಟು ಜನ ತೆರಳಿದ್ದಾರೆ. ಈ ಹಿನ್ನೆಲೆ ಮತದಾರರ ಅನುಕೂಲಕ್ಕಾಗಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲಾಗಿದೆ. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?

    ಮೆಜೆಸ್ಟಿಕ್ (Mejestic) ಸುತ್ತಮುತ್ತ ಇಂದು ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಇಂದು ಸಂಜೆಯ ವೇಳೆಗೆ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇಂದು ಸಹ ಬಹಳಷ್ಟು ಜನ ಮತದಾನಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

    ಮತದಾನಕ್ಕೆ ಒಳಪಡುವ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯಿಂದ ವಿಶೇಷ ರೈಲು ಕಲ್ಪಿಸಲಾಗಿದೆ. ವಿಜಯಪುರ, ಹೊಸಪೇಟೆ, ಹುಬ್ಬಳ್ಳಿ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಿಗೆ ವಿಶೇಷ ರೈಲು (Train) ಸಂಚರಿಸಲಿದ್ದು, ನೈರುತ್ಯ ರೈಲ್ವೆಯಿಂದ ಒಟ್ಟು 5 ವಿಶೇಷ ರೈಲುಗಳು ಓಡಾಟ ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರ ಕಲ್ಪಿಸಲಾಗಿದೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

  • ಚುನಾವಣಾ ಭರಾಟೆ ನಡುವೆ ಅಯೋಧ್ಯೆ ಭೇಟಿ – ರಾಮಲಲ್ಲಾನ ದರ್ಶನ ಪಡೆದ ಮೋದಿ

    ಚುನಾವಣಾ ಭರಾಟೆ ನಡುವೆ ಅಯೋಧ್ಯೆ ಭೇಟಿ – ರಾಮಲಲ್ಲಾನ ದರ್ಶನ ಪಡೆದ ಮೋದಿ

    – ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಜೊತೆ ಪ್ರಧಾನಿ ರೋಡ್‌ಶೋ

    ಅಯೋಧ್ಯೆ (ರಾಮಮಂದಿರ): ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಭಾನುವಾರ) ಅಯೋಧ್ಯೆಗೆ ಭೇಟಿ ನೀಡಿದ್ದರು. ಜಾರ್ಖಂಡ್ ಮತ್ತು ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಅಯೋಧ್ಯೆಗೆ (Ayodhya) ತೆರಳಿ ರಾಮಲಲ್ಲಾ ದರ್ಶನ ಪಡೆದರು. ಬಳಿಕ ಅಯೋಧ್ಯೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.

    ಚುನಾವಣಾ ಕಣದಲ್ಲಿ ಧಣಿವರಿಯದೇ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರ ಕಾರ್ಯಗಳ ನಡುವೆ ಅವರು ಬಾಲರಾಮನ ದರ್ಶನ ಪಡೆದರು. ಜಾರ್ಖಂಡ್ ಮತ್ತು ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ನೇರ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದು ಧೀರ್ಘ ದಂಡ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ

    ರಾಮಮಂದಿರ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಮೊದಲ ಬಾರಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆ ಅಯೋಧ್ಯೆಯನ್ನು ಅಲಂಕೃತಗೊಳಿಸಲಾಗಿತ್ತು. ರಾಮಮಂದಿರ ಸುತ್ತಮುತ್ತಲಿನ ಪ್ರದೇಶ, ರಸ್ತೆಗಳನ್ನು ಶೃಂಗರಿಸಲಾಗಿತ್ತು. ಎಲ್ಲ ಕಡೆ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರುವ ಕಟೌಟ್‌ಗಳನ್ನು ಹಾಕಲಾಗಿತ್ತು.

    ಸಂಜೆ ರಾಮಲಲ್ಲಾ ದರ್ಶನ ಪಡೆದ ಮೋದಿ ಸುಗ್ರೀವ ಕೋಟೆಯಿಂದ ಲತಾ ಚೌಕ್ ತನಕ ರೋಡ್‌ ವರೆಗೂ ಎರಡು ಕಿಲೋ ಮೀಟರ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿ ಅವರಿಗೆ ಸಾಥ್​ ನೀಡಿದರು. ರೋಡ್ ಶೋ ನಲ್ಲಿ ಮೋದಿ ಕಂಡು ಹರ್ಷೋಧ್ಘಾರ ವ್ಯಕ್ತಪಡಿಸಿದರು. ಫೈಜಾಬಾದ್‌ನ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಮತ್ತು ನೆರೆಯ ಜಿಲ್ಲೆಗಳಿಂದ ಸ್ಪರ್ಧಿಸುತ್ತಿರುವವರಿಗೆ ರೋಡ್ ಶೋ ಮೂಲಕ ಮೋದಿ ಬೆಂಬಲ ಕೋರಿದರು. ಇದನ್ನೂ ಓದಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ: ರಾಜನಾಥ್ ಸಿಂಗ್

    ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲೂ ಮತದಾನ ನಡೆಯುತ್ತಿದ್ದು ಮೂರನೇ ಹಂತದ ಮತದಾನಕ್ಕೆ ಎರಡು ದಿನಗಳ ಮುನ್ನ ಅಯೋಧ್ಯೆಯಲ್ಲಿ ಮೋದಿ ರೋಡ್ ಶೋ ಭರ್ಜರಿ ಯಶಸ್ವಿಯಾಗಿದೆ.

  • ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಕೈಕೊಟ್ಟ ಅಭ್ಯರ್ಥಿ

    ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಕೈಕೊಟ್ಟ ಅಭ್ಯರ್ಥಿ

    ಭುವನೇಶ್ವರ: ಪುರಿ ಲೋಕಸಭಾ ಕ್ಷೇತ್ರಕ್ಕೆ (Puri Constituency) ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ (Congress) ಅಭ್ಯರ್ಥಿ ಪಕ್ಷಕ್ಕೆ ಕೈಕೊಟ್ಟಿದ್ದಾರೆ.

    ಚುನಾವಣೆಗೆ ಖರ್ಚು ಮಾಡಲು ಹಣದ ಕೊರತೆ ಇದೆ. ಹೀಗಾಗಿ ನಾನು ಕ್ಷೇತ್ರದ ಟಿಕೆಟ್‌ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಪುರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸುಚರಿತ ಮೊಹಂತಿ (Sucharita Mohanty) ತಿಳಿಸಿದ್ದಾರೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ

    ಪಕ್ಷದ ನಿಧಿಯಿಲ್ಲದೆ ಪುರಿಯಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ನಾನು ವಿಷಾದಿಸುತ್ತೇನೆ. ಹಾಗಾಗಿ, ಪುರಿ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ನಾನು ಈ ಮೂಲಕ ಹಿಂದಿರುಗಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

    ಒಡಿಶಾ ಕಾಂಗ್ರೆಸ್ ಉಸ್ತುವಾರಿ ಅಜೋಯ್ ಕುಮಾರ್ ತನ್ನ ಸ್ವಂತ ಹಣವನ್ನು ಬಳಸಿ ಹೋರಾಡುವಂತೆ ಹೇಳಿದರು. ಪುರಿಯಲ್ಲಿ ಪ್ರಚಾರಕ್ಕೆ ನನ್ನ ಬಳಿಯಿದ್ದೆಲ್ಲವನ್ನೂ ನೀಡಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ಸಾರ್ವಜನಿಕರಿಂದ ದೇಣಿಗೆ ಬಯಸಿದೆ. ಇದುವರೆಗೆ ಅದು ಕೂಡ ಹೆಚ್ಚು ಯಶಸ್ವಿಯಾಗಲಿಲ್ಲ. ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ನಾನು ಪ್ರಯತ್ನಿಸಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಚಾರ್ ಸೌ ಫಾರ್ ಗುರಿ – ಮೂರನೇ ಹಂತದ ಮತದಾನ ಬಿಜೆಪಿಗೆ ಎಷ್ಟು ಮುಖ್ಯ?

    ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬೆನ್ನಲ್ಲೇ ಮೊಹಾಂತಿ ಅವರು ಕ್ರೌಡ್-ಫಂಡಿಂಗ್ ಮೂಲಕ ಹಣ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ದೇಣಿಗೆ ಕೋರಿ UPI QR ಕೋಡ್ ಮತ್ತು ಇತರ ಖಾತೆಯ ವಿವರಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದೇನೆ. ಆದರೆ ಸ್ವಂತವಾಗಿ ಸಾಕಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ ಈ ಕಠಿಣ ಹೆಜ್ಜೆ ಇಡಬೇಕಾಯಿತು ಎಂದು ತಿಳಿಸಿದ್ದಾರೆ.