Tag: Lok Sabha Elction

  • ಕರ್ನಾಟಕದಲ್ಲಿ 22.34% ಮತದಾನ – ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ

    ಕರ್ನಾಟಕದಲ್ಲಿ 22.34% ಮತದಾನ – ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ

    ಬೆಂಗಳೂರು: ರಾಜ್ಯದಲ್ಲಿ ಮತದಾನ (Lok Sabha Election) ಬಿರುಸುಗೊಂಡಿದ್ದು, ಬೆಳಗ್ಗೆ 11:30ರ ವೇಳೆಗೆ ಒಟ್ಟು 22.34% ಮತದಾನ ನಡೆದಿದೆ. ಅತಿ ಹೆಚ್ಚು ದಕ್ಷಿಣ ಕನ್ನಡದಲ್ಲಿ (Dakshina Kannada) 30.98% ದಾಖಲಾದರೆ ಬೆಂಗಳೂರು ಕೇಂದ್ರದಲ್ಲಿ (Bengaluru Centrel) 19.81% ದಾಖಲಾಗಿದೆ.

    ಬೆಳಗ್ಗೆಯಿಂದಲೂ ಕರ್ನಾಟಕದಲ್ಲಿ (Karnataka) ಲೋಕಸಭಾ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಬೆಳಗ್ಗೆ 9 ಗಂಟೆ ಟ್ರೆಂಡ್‌ ಪ್ರಕಾರ ರಾಜ್ಯದಲ್ಲಿ 9.21% ಮತದಾನ ನಡೆದಿತ್ತು. ಉಳಿದ 2:30 ಗಂಟೆಯಲ್ಲಿ ಈ ಪ್ರಮಾಣ 22.34% ಏರಿಕೆಯಾಗಿದೆ. ಮಧ್ಯಾಹ್ನದ ನಂತರ ಬಿಸಿಲು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳಗ್ಗೆಯೇ ಜನತೆ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

    ಬೆಂಗಳೂರಿನಲ್ಲಿ ಪ್ರತಿಬಾರಿಯೂ ಕಡಿಮೆ ಮತದಾನ ನಡೆಯುತ್ತಿರುತ್ತದೆ. ಬೆಳಗ್ಗೆಯಿಂದಲೂ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಯಾವ ರಾಜ್ಯದಲ್ಲಿ ಎಷ್ಟು?
    ಅಸ್ಸಾಂ – 27.43
    ಬಿಹಾರ – 21.68
    ಛತ್ತೀಸ್ಗಢ – 35.47
    ಜಮ್ಮುಕಾಶ್ಮೀರ – 26.61
    ಕರ್ನಾಟಕ- 22.34
    ಕೇರಳ – 25.61
    ಮಧ್ಯಪ್ರದೇಶ – 28.15
    ಮಹಾರಾಷ್ಟ್ರ – 18.83
    ಮಣಿಪುರ – 33.22
    ರಾಜಸ್ಥಾನ- 26.84
    ತ್ರಿಪುರ- 36.42
    ಉತ್ತರಪ್ರದೇಶ – 24.31
    ಪಶ್ಚಿಮ ಬಂಗಾಳ- 31.25