ನವದೆಹಲಿ: ಕೇರಳದ ವಯನಾಡಿನಲ್ಲಿ ಚುನಾವಣೆ ಬಳಿಕ ರಾಹುಲ್ ಗಾಂಧಿ (Rahul Gandhi) ಬೇರೇಡೆ ಮುಖ ಮಾಡಲಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅಮೇಥಿಯಲ್ಲೂ ಸೋಲಿನ ಭಯ ಕಂಡಿರುವ ಅವರು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವ್ಯಂಗ್ಯ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಯನಾಡಿನಲ್ಲಿ ಸೋಲಿನ ಬಗ್ಗೆ ತಿಳಿದಿರುವ ರಾಹುಲ್ ಗಾಂಧಿ ಮತ್ತೊಂದು ಕ್ಷೇತ್ರಕ್ಕೆ ಹೋಗಿದ್ದಾರೆ. ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡಿರುವುದು ಯಾವ ಕ್ಷೇತ್ರ? ರಾಯ್‌ಬರೇಲಿ (Raebareli), ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೊಕೆ ರಾಹುಲ್‌ಗೆ ಭಯ ಹೀಗಿದ್ದರೂ ಸಹ ರಾಹುಲ್ ಗಾಂಧಿ ಹೇಳೋದು ಹೆದರಬೇಡಿ ಅಂತಾ, ನಾನು ರಾಹುಲ್ ಗಾಂಧಿಗೆ ಹೇಳುತ್ತೇನೆ ಹೆದರಬೇಡಿ, ಓಡಿ ಹೋಗಬೇಡಿ ಎಂದು ಕುಟುಕಿದ್ದಾರೆ.
ಸಂವಿಧಾನವನ್ನು ಬದಲಾಯಿಸಿ ದಲಿತ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳನ್ನು ಕಸಿದುಕೊಂಡು ‘ಜಿಹಾದಿ’ ವೋಟ್ ಬ್ಯಾಂಕ್‌ಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ. ಅವರಿಗೆ (ವಿರೋಧ ಪಕ್ಷಗಳಿಗೆ) ಅಭಿವೃದ್ಧಿಯನ್ನು ತರಲು ಸಾಧ್ಯವಿಲ್ಲ. ಅವರು ಮತಕ್ಕಾಗಿ ಸಮಾಜವನ್ನು ವಿಭಜಿಸುವುದು ಹೇಗೆಂಬುದು ತಿಳಿದಿರುವುದಾಗಿ ವಾಗ್ದಾಳಿ ನಡೆಸಿದ್ದಾರೆ.
ತೃಣಮೂಲ ಶಾಸಕ ಹುಮಾಯೂನ್ ಕಬೀರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, ಟಿಎಂಸಿ ಶಾಸಕರೊಬ್ಬರು ಬಹಿರಂಗ ಬೆದರಿಕೆ ಹಾಕಿದರು. ಅವರು ಕೇವಲ ಎರಡು ಗಂಟೆಗಳಲ್ಲಿ ಭಾಗೀರಥಿಯಲ್ಲಿ ಹಿಂದೂಗಳನ್ನು ಮುಳುಗಿಸುತ್ತಾರೆ ಎಂದು ಹೇಳಿದರು. ಇದು ಏನು ಭಾಷೆ? ಇದು ಯಾವ ರಾಜಕೀಯ ಸಂಸ್ಕೃತಿ? ಬಂಗಾಳದಲ್ಲಿ ಹಿಂದೂಗಳಿಗೆ ಏನಾಗುತ್ತಿದೆ? ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಹಿಂದೂಗಳನ್ನು 2ನೇ ಪ್ರಜೆಯನ್ನಾಗಿ ಮಾಡಿದೆ ಎಂದು ತೋರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೈದು ಅತ್ತೆ ಕೊಲೆ – ಕುಸಿದು ಸತ್ತರೆಂದು ಕಥೆ ಕಟ್ಟಿದ್ದ ಸೊಸೆ ಅರೆಸ್ಟ್
ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ದೃಷ್ಟಿ ಇಲ್ಲ, ಎಡಪಕ್ಷಗಳು ತ್ರಿಪುರಾವನ್ನು ಸಂಪೂರ್ಣವಾಗಿ ನಾಶಪಡಿಸಿದರು ಅವರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಳೆದ 5 ವರ್ಷಗಳಲ್ಲಿ ಬಿಜೆಪಿ ತ್ರಿಪುರವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ನನ್ನ ಕನಸು, ನಿಮ್ಮೆಲ್ಲರಿಗೂ ಮತ್ತು ದೇಶಕ್ಕೂ ಸೇವೆ ಸಲ್ಲಿಸಲು ನನಗೆ ಆಶೀರ್ವಾದಿಸಬೇಕು. ನನ್ನ ಬಳಿ ಏನೂ ಇಲ್ಲ ನೀವೆಲ್ಲರೂ ಕುಟುಂಬದವರು, ನಿಮ್ಮಗಾಗಿ ನಿಮ್ಮ ಮಕ್ಕಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
– ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಬಹುತೇಕ ಖಚಿತ
– ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್ ಬರೇಲಿ?
ನವದೆಹಲಿ: ಉತ್ತರ ಪ್ರದೇಶದ ಎರಡು ಹೈವೊಲ್ಟೇಜ್ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್‌ಬರೇಲಿಯಿಂದ (Amethi, Raebareli) ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇರುವುದರಿಂದ ಇಂದೇ ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.
ಸೋನಿಯಾ ಗಾಂಧಿ (Sonia Gandhi) ರಾಜ್ಯಸಭೆಗೆ ಆಯ್ಕೆಯಾಗಿದ್ದು, ವಯನಾಡ್ ನಿಂದ ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿರುವ ಹಿನ್ನೆಲೆ ಅಮೇಥಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವ ಚರ್ಚೆಗಳು ಹುಟ್ಟುಕೊಂಡಿದ್ದವು. ಅಲ್ಲದೇ ಕಾಂಗ್ರೆಸ್ ಕೂಡಾ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೇ ಕುತೂಹಲ ಹೆಚ್ಚಿಸಿತ್ತು. ಈ ಹಿಂದೆ ಅಮೇಥಿಯಿಂದ ರಾಹುಲ್ ಗಾಂಧಿ ಹೆಸರು ಕೇಳಿಬಂದಿದ್ದರೂ, ಬಳಿಕ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿತ್ತು. ಇದೀಗ ರಾಗಾ ಅವರೇ ಸೂಕ್ತ ಎಂದು ಪಕ್ಷ ನಿರ್ಧರಿಸಿದೆ, ಇಂದು ಅಧಿಕೃತವಾಗಿ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
2019ರ ಚುನಾವಣೆಯಲ್ಲಿಯೂ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿದ್ದರು. ಆದ್ರೆ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋಲು ಎದುರಿಸಬೇಕಾಯಿತು. ಈ ಬಾರಿಯೂ ಬಿಜೆಪಿಯಿಂದ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್‌ಬರೇಲಿ?
1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.
ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆ ಆಯ್ಕೆ ಬಳಿಕ ಪ್ರಿಯಾಂಕಾ ಗಾಂಧಿ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ ಅಭ್ಯರ್ಥಿಯ ಘೋಷಣೆ ವಿಳಂಭವಾದರೂ ಪಕ್ಷಕ್ಕೆ ಆತಂಕ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
1951ರಿಂದ 1971ರವರೆಗೆ ಕರ್ನಾಟಕ ಮೈಸೂರು ಪ್ರಾಂತ್ಯ ಎಂದು ಕರೆಯಲ್ಪಡುತ್ತಿತ್ತು. 1951ರಲ್ಲಿ ಸ್ವತಂತ್ರ ಭಾರತದ ಮೊದಲ ಚುನಾವಣೆ ನಡೆದಾಗ ಮೈಸೂರು ಪ್ರಾಂತ್ಯದಲ್ಲಿ 9 ಕ್ಷೇತ್ರಗಳಿದ್ದವು. 9ರಲ್ಲಿ 9 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಈ ಚುನಾವಣೆಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಮೈಸೂರು ರಾಜ್ಯದಿಂದಲೂ ಕಾಂಗ್ರೆಸ್ ಪ್ರಮುಖ ಪಕ್ಷವಾಗಿತ್ತು. ಮೊದಲ ಚುನಾವಣೆ ಬಳಿಕ 1971ರಲ್ಲಿ ಕಾಂಗ್ರೆಸ್ 27ರಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಬಾರಿಗೆ ಕ್ಲೀನ್ ಸ್ವೀಪ್ ಮಾಡಿತ್ತು.
1980ರಲ್ಲಿ ಬಿಜೆಪಿ ಸ್ಥಾಪನೆಯಾದರೂ 1984ರಲ್ಲಿ 2 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯದ ರುಚಿಯನ್ನು ಕಂಡಿತ್ತು. ದೇಶದಲ್ಲಿ 1984ರಲ್ಲಿ ಗೆಲುವು ಸಿಕ್ಕರೂ, ಕರ್ನಾಟಕದಲ್ಲಿ 1991ರಲ್ಲಿ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆಯಿತು. 1991ರಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಸೀಟುಗಳು
ಕರ್ನಾಟಕ ರಾಜ್ಯ ರಚನೆಯಾದ ಬಳಿಕ ರಾಜ್ಯದಲ್ಲಿ 28 ಕ್ಷೇತ್ರಗಳು ಫಿಕ್ಸ್ ಆಯ್ತು. ಕ್ಷೇತ್ರ ಪುನರ್ ವಿಂಗಡನೆಯಾಗಿ ಹೊಸ ಹೊಸ ಕ್ಷೇತ್ರಗಳು ಹುಟ್ಟಿದರೂ ರಾಜ್ಯದ ಒಟ್ಟು ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. 1977ರಲ್ಲಿ 26, 1980ರಲ್ಲಿ 27, 1984ರಲ್ಲಿ 24, 1989ರಲ್ಲಿ 27, 1991ರಲ್ಲಿ 23, 1996ರಲ್ಲಿ 5, 1998ರಲ್ಲಿ 9, 1999ರಲ್ಲಿ 18, 2004ರಲ್ಲಿ 8, 2009ರಲ್ಲಿ 6 ಮತ್ತು 2014ರಲ್ಲಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಕರ್ನಾಟಕದಲ್ಲಿ ಬಿಜೆಪಿ ಗೆದ್ದ ಸೀಟುಗಳು:
ಭಾರತೀಯ ಜನತಾ ಪಕ್ಷ 1991ರಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಖಾತೆ ತೆರೆಯಿತು. 1991ರಲ್ಲಿ 4, 1996ರಲ್ಲಿ 6, 1998ರಲ್ಲಿ 13, 1999ರಲ್ಲಿ 7, 2004ರಲ್ಲಿ 18, 2009ರಲ್ಲಿ 9 ಮತ್ತು 2014ರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ.
1980ರಲ್ಲಿ ಬಿಜೆಪಿ ಸ್ಥಾಪನೆಯಾದರೂ ಮೊದಲ ಗೆಲುವಿನ ರುಚಿ 1984ರಲ್ಲಿ ಸಿಕ್ಕಿತ್ತು. ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳಿಸಲು ಮಾತ್ರ ಸಾಧ್ಯವಾಗಿತ್ತು. ಇದುವೇ ಬಿಜೆಪಿಯ ಇದುವರೆಗಿನ ಕನಿಷ್ಠ ಸಾಧನೆಯಾಗಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು. ಇದು ಬಿಜೆಪಿಯ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.
ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 412 ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗಳಿಗೆ, 84 ಎಸ್‍ಸಿ ಅಭ್ಯರ್ಥಿಗಳಿಗೆ ಹಾಗೂ ಎಸ್‍ಟಿ ಅಭ್ಯರ್ಥಿಗಳಿಗೆ 47 ಕ್ಷೇತ್ರಗಳು ಅಂತಾ ವಿಭಜಿಸಲಾಗಿದೆ. ಒಟ್ಟು 543 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆ ನಡೆಯುತ್ತಿದೆ.
ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಜಾತಿವಾರು ವಿಂಗಡನೆ ನೋಡುವುದಾದರೆ
1. ಆಂಧ್ರ ಪ್ರದೇಶ:
ಆಂಧ್ರ ಪ್ರದೇಶದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 32 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, ಎಸ್‍ಸಿ 7 ಮತ್ತು ಎಸ್‍ಟಿ 3 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.
2. ಅರುಣಾಚಲ ಪ್ರದೇಶ:
ಅರುಣಾಚಲ ಪ್ರದೇಶದಲ್ಲಿ ಕೇವಲ ಎರಡು ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಇಲ್ಲಿ ಎರಡು ಕ್ಷೇತ್ರಗಳು ಸಾಮಾನ್ಯ ಅಭ್ಯರ್ಥಿಗಳು ನಿಲ್ಲಲಿದ್ದು, ಎಸ್‍ಸಿ, ಎಸ್‍ಟಿ ಮೀಸಲಾತಿ ಇಲ್ಲ.
3. ಅಸ್ಸಾಂ:
ಅಸ್ಸಾಂ ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಸಾಮಾನ್ಯರು 11 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ, 1 ಕ್ಷೇತ್ರ ಎಸ್‍ಸಿ ಹಾಗೂ 2 ಕ್ಷೇತ್ರ ಎಸ್‍ಟಿಗೆ ಮೀಸಲಿರಿಸಲಾಗಿದೆ.
4. ಬಿಹಾರ:
ಬಿಹಾರ ರಾಜ್ಯದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 34 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, ಎಸ್‍ಸಿ 6 ಕ್ಷೇತ್ರಗಳಾಗಿವೆ. ಈ ರಾಜ್ಯದಲ್ಲಿ ಎಸ್‍ಟಿಗೆ ಯಾವುದೇ ಮೀಸಲಾತಿ ಇಲ್ಲ.
5. ಗೋವಾ:
ಗೋವಾ ರಾಜ್ಯದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳಿವೆ. ಈ ಎರಡು ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.
6. ಗುಜರಾತ್
ಗುಜರಾತ್ ರಾಜ್ಯದಲ್ಲಿ 26 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 20 ಸಾಮಾನ್ಯ, 2 ಎಸ್‍ಸಿ ಮತ್ತು ಎಸ್‍ಟಿ ವರ್ಗಕ್ಕೆ 4 ಕ್ಷೇತ್ರವನ್ನು ಮೀಸಲಿಡಲಾಗಿದೆ.
8. ಹರಿಯಾಣ:
ಹರಿಯಾಣ ಒಟ್ಟು 10 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 8 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, 2 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.
9. ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದಲ್ಲಿ ಒಟ್ಟು 4 ಲೋಕಸಭಾ ಕ್ಷೇತ್ರಗಳು ಇದೆ. ಅವುಗಳಲ್ಲಿ 3 ಸಾಮಾನ್ಯ ಲೋಕಸಭಾ ಕ್ಷೇತ್ರಗಳಾಗಿದ್ದು, 1 ಕ್ಷೇತ್ರವನ್ನು ಎಸ್‍ಸಿ ವರ್ಗಕ್ಕೆ ನೀಡಲಾಗಿದೆ.
10. ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 6 ಲೋಕಸಭಾ ಕ್ಷೇತ್ರಗಳಿವೆ. ಈ ಆರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಹೀಗಾಗಿ ಇಲ್ಲಿ ಎಸ್‍ಸಿ ಮತು ಎಸ್‍ಟಿ ಜಾತಿಯವರಿಗೆ ಯಾವುದೇ ಮೀಸಲಾತಿ ನೀಡಿಲ್ಲ.
11. ಕರ್ನಾಟಕ
ಕರ್ನಾಟದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಸಾಮಾನ್ಯರಿಗೆ 21 ಕ್ಷೇತ್ರ, ಎಸ್‍ಸಿ ಅವರಿಗೆ 5 ಮತ್ತು ಎಸ್‍ಟಿ ಅವರಿಗೆ 2 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
12. ಕೇರಳ
ಕೇರಳ ರಾಜ್ಯದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಸಾಮಾನ್ಯರಿಗೆ 18 ಕ್ಷೇತ್ರ, ಎಸ್‍ಸಿ ಅವರಿಗೆ 2 ಕ್ಷೇತ್ರಗಳು ಎಂದು ವಿಂಗಡನೆ ಮಾಡಲಾಗಿದೆ. ಕೇರಳ ರಾಜದಲ್ಲಿ ಎಸ್‍ಟಿ ಅವರಿಗೆ ಯಾವುದೇ ರೀತಿ ಸ್ಥಾನವನ್ನು ನೀಡಿಲ್ಲ.
13. ಮಧ್ಯ ಪ್ರದೇಶ
ಮಧ್ಯ ಪ್ರದೇಶದಲ್ಲಿ 29 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 19 ಸಾಮಾನ್ಯ, 4 ಎಸ್‍ಸಿ ಮತ್ತು ಎಸ್‍ಟಿ ಅವರಿಗೆ 6 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.
14. ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 39 ಸಾಮಾನ್ಯ ಕ್ಷೇತ್ರ, 5 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
15. ಮಣಿಪುರ: ಮಣಿಪುರದಲ್ಲಿ 2 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 1 ಸಾಮಾನ್ಯ ಕ್ಷೇತ್ರ, ಮತ್ತೊಂದು ಎಸ್‍ಟಿ ಕ್ಷೇತ್ರವಾಗಿದೆ.
16. ಮೇಘಾಲಯ: ಮೇಘಾಲಯದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳು ಇದೆ. ಎರಡು ಕ್ಷೇತ್ರವನ್ನು ಎಸ್‍ಟಿ ವರ್ಗಕ್ಕೆ ಮೀಸಲಿಡಲಾಗಿದೆ.
17. ಓಡಿಶಾ: ಒಡಿಶಾದಲ್ಲಿ 21 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 13 ಸಾಮಾನ್ಯ, 3 ಎಸ್‍ಸಿ ಮತ್ತು ಎಸ್‍ಟಿ ಅವರಿಗೆ 5 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
18. ಪಂಜಾಬ್: ಪಂಜಾಬ್‍ನಲ್ಲಿ ಒಟ್ಟು 13 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 9 ಸಾಮಾನ್ಯ ಕ್ಷೇತ್ರ, 4 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.
16. ರಾಜಸ್ಥಾನ: ರಾಜಸ್ಥಾನದಲ್ಲಿ 25 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 18 ಸಾಮಾನ್ಯ ಕ್ಷೇತ್ರ, 4 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 3 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
20. ತಮಿಳುನಾಡು: ಇಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. ಅವುಗಳಲ್ಲಿ 32 ಸಾಮಾನ್ಯ, ಎಸ್‍ಸಿ ವರ್ಗಕ್ಕೆ 7 ಕ್ಷೇತ್ರಗಳನ್ನು ಮೀಸಲಿರಿಸಲಾಗಿದೆ. ಇಲ್ಲಿ ಎಸ್‍ಟಿ ವರ್ಗಕ್ಕೆ ಯಾವುದೇ ಕ್ಷೇತ್ರವನ್ನು ಮೀಸಲಿಟ್ಟಿಲ್ಲ.
21. ತ್ರಿಪುರ
ತ್ರಿಪುರದಲ್ಲಿ ಒಟ್ಟು 2 ಲೋಕಸಭಾ ಕ್ಷೇತ್ರಗಳು ಇದೆ. ಸಾಮಾನ್ಯ ಒಂದು ಮತ್ತು ಮತ್ತೊಂದು ಕ್ಷೇತ್ರದಲ್ಲಿ ಎಸ್‍ಟಿ ವರ್ಗದ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ.
22. ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 63 ಸಾಮಾನ್ಯ ಕ್ಷೇತ್ರವಾಗಿದ್ದು 17 ಕ್ಷೇತ್ರ ಎಸ್‍ಸಿ ವರ್ಗಕ್ಕೆ ಮೀಸಲಿಡಲಾಗಿದೆ.
23. ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 30 ಸಾಮಾನ್ಯ ಕ್ಷೇತ್ರ, 10 ಎಸ್‍ಸಿ ಕ್ಷೇತ್ರ ಮತ್ತು ಎಸ್‍ಟಿ ಅವರಿಗೆ 02 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
24. ಛತೀಸ್‍ಗಢ
ಛತೀಸ್‍ಗಢದಲ್ಲಿ ಒಟ್ಟು 11 ಲೋಕಸಭಾ ಕ್ಷೇತ್ರಗಳು ಇದೆ. ಸಾಮಾನ್ಯರಿಗೆ 6 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
25. ಜಾರ್ಖಂಡ್
ಜಾರ್ಖಂಡ್ ನಲ್ಲಿ ಒಟ್ಟು 14 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಸಾಮಾನ್ಯರಿಗೆ 8 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 5 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
26. ಉತ್ತರಾಖಂಡ
ಉತ್ತರಾಖಂಡದಲ್ಲಿ 5 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಅವುಗಳಲ್ಲಿ 4 ಸಾಮಾನ್ಯ ಕ್ಷೇತ್ರ ಮತ್ತು 1 ಎಸ್‍ಸಿ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಉತ್ತರಾಖಂಡದಲ್ಲಿ ಎಸ್‍ಟಿ ಅವರಿಗೆ ಯಾವುದೇ ಕ್ಷೇತ್ರ ವಿಂಗಡನೆ ಮಾಡಿಲ್ಲ.
27. ಚಂಡೀಗಢ
ಚಂಡೀಗಢದಲ್ಲಿ ಒಟ್ಟು 11 ಲೋಕಸಭಾ ಚುನಾವಣಾ ಕ್ಷೇತ್ರಗಳಿವೆ. ಸಾಮಾನ್ಯರಿಗೆ 6 ಕ್ಷೇತ್ರ, ಎಸ್‍ಸಿಗೆ 1 ಹಾಗೂ ಎಸ್‍ಟಿ ಅವರಿಗೆ 4 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ. ಇಲ್ಲಿ ಒಟ್ಟು 11 ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ.
28. ದೆಹಲಿ
ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳು ಇದೆ. ಇದರಲ್ಲಿ 6 ಸಾಮಾನ್ಯ ಕ್ಷೇತ್ರವಾಗಿದ್ದರೆ ಒಂದು ಎಸ್‍ಸಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
ಒಂದು ಲೋಕಸಭಾ ಚುನಾವಣಾ ಕ್ಷೇತ್ರ:
ಲಕ್ಷದ್ವೀಪ, ಪುದುಚೇರಿ, ದಮನ್ ಮತ್ತು ದಿಯು, ದಾದ್ರ ಮತ್ತು ನಗರ ಹವೇಲಿ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಒಂದು ಕ್ಷೇತ್ರವಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮೀಜೋರಾಂನಲ್ಲಿ ಒಂದು ಕ್ಷೇತ್ರವಿದ್ದು ಎಸ್‍ಟಿ ವರ್ಗಕ್ಕೆ ಮೀಸಲಿಡಲಾಗಿದೆ.