Tag: Lok Saba Elections

  • ಅತಿ ಹೆಚ್ಚು ಮತದಾನ ನಡೆದ ಲೋಕಸಭಾ ಕ್ಷೇತ್ರಗಳು

    ಅತಿ ಹೆಚ್ಚು ಮತದಾನ ನಡೆದ ಲೋಕಸಭಾ ಕ್ಷೇತ್ರಗಳು

    ಬೆಂಗಳೂರು: ಎಷ್ಟು ಜನ ಮತದಾರರು ಇದ್ದಾರೆ ಎನ್ನುವುದಕ್ಕಿಂತ ಎಷ್ಟು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂಬುದು ಮುಖ್ಯ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಗೊಂಡ ಟಾಪ್ 10 ಕ್ಷೇತ್ರಗಳ ಪೈಕಿ ಕರ್ನಾಟಕವು ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.

    ಆಂಧ್ರ ಪ್ರದೇಶದ ಮಲ್ಕಾಜ್ ಗಿರಿ ಲೋಕಸಭಾ ಕ್ಷೇತ್ರವು ಅತಿ ಹೆಚ್ಚು ಮತದಾನವಾದ ಕ್ಷೇತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. 2014ರಲ್ಲಿ 16,20,397 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆ ವರ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿ ಸಿಎಚ್ ಮಲ್ಲಾ ರೆಡ್ಡಿ ಗೆಲುವು ಸಾಧಿಸಿದ್ದರು. ಇದನ್ನು ಓದಿ: ಲೋಕಸಭಾ ಚುನಾವಣೆ: ಅತಿ ಕಡಿಮೆ ಮತದಾನವಾದ ಕ್ಷೇತ್ರಗಳು

    ಔಟರ್ ದೆಹಲಿ ಕ್ಷೇತ್ರವು ಎರಡನೇ ಸ್ಥಾನದಲ್ಲಿದೆ. 2004ರಲ್ಲಿ 15,53,849 ಮತಗಳು ಚಲಾವಣೆಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಜ್ಜನ್ ಕುಮಾರ್ ಆಯ್ಕೆಯಾಗಿದ್ದರು. ಮೂರನೇ ಸ್ಥಾನದಲ್ಲಿ ಕರ್ನಾಟಕದ ಕನಕಪುರ ಲೋಕಸಭಾ ಕ್ಷೇತ್ರವಿದೆ. 2004ರಲ್ಲಿ ಒಟ್ಟು15,52,416 ಮತಗಳು ಚಲಾವಣೆಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ರಮೇಶ್ ಜಯಗಳಿಸಿದ್ದರು.

    ಅಸ್ಸಾಂನ ಗುವಾಹಟಿ ಕ್ಷೇತ್ರವು ನಾಲ್ಕನೇ ಸ್ಥಾನದಲ್ಲಿದ್ದು, 2014ರಲ್ಲಿ 15,11,729 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆ ವರ್ಷ ಬಿಜೆಪಿಯ ಅಭ್ಯರ್ಥಿ ಬಿಜೋಯಾ ಚಕ್ರವರ್ತಿ ಆಯ್ಕೆಯಾಗಿದ್ದರು. ಟಾಪ್ 5 ನಲ್ಲಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರವಿದೆ. 2014ರಲ್ಲಿ ಒಟ್ಟು 14,55,244 ಮತಗಳು ಚಲಾವಣೆಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದರು.

    ಅತಿ ಹೆಚ್ಚು ಮತದಾನ ನಡೆದ ಲೋಕಸಭಾ ಕ್ಷೇತ್ರಗಳು

    ಗೆದ್ದ ಅಭ್ಯರ್ಥಿ – ಸಿಎಚ್ ಮಲ್ಲಾ ರೆಡ್ಡಿ
    ಪಕ್ಷ – ತೆಲುಗು ದೇಶಂ ಪಕ್ಷ (ಟಿಡಿಪಿ)
    ಕ್ಷೇತ್ರ – ಮಲ್ಕಾಜ್ ಗಿರಿ (ಆಂಧ್ರ ಪ್ರದೇಶ)
    ಚಲಾವಣೆಗೊಂಡ ಮತಗಳು – 16,20,397
    ವರ್ಷ – 2014

    ಗೆದ್ದ ಅಭ್ಯರ್ಥಿ – ಸಜ್ಜನ್ ಕುಮಾರ್
    ಪಕ್ಷ – ಕಾಂಗ್ರೆಸ್
    ಕ್ಷೇತ್ರ – ಔಟರ್ ದೆಹಲಿ
    ಚಲಾವಣೆಗೊಂಡ ಮತಗಳು – 15,53,849
    ವರ್ಷ – 2004

    ಗೆದ್ದ ಅಭ್ಯರ್ಥಿ – ತೇಜಸ್ವಿನಿ ರಮೇಶ್
    ಪಕ್ಷ – ಕಾಂಗ್ರೆಸ್
    ಕ್ಷೇತ್ರ – ಕನಕಪುರ (ಕರ್ನಾಟಕ)
    ಚಲಾವಣೆಗೊಂಡ ಮತಗಳು – 15,52,416
    ವರ್ಷ – 2004

    ಗೆದ್ದ ಅಭ್ಯರ್ಥಿ – ಬಿಜೋಯಾ ಚಕ್ರವರ್ತಿ
    ಪಕ್ಷ – ಬಿಜೆಪಿ
    ಕ್ಷೇತ್ರ – ಗುವಾಹಟಿ (ಅಸ್ಸಾಂ)
    ಚಲಾವಣೆಗೊಂಡ ಮತಗಳು – 15,11,729
    ವರ್ಷ – 2014

    ಗೆದ್ದ ಅಭ್ಯರ್ಥಿ – ಡಿ.ಕೆ.ಸುರೇಶ್
    ಪಕ್ಷ – ಕಾಂಗ್ರೆಸ್
    ಕ್ಷೇತ್ರ – ಬೆಂಗಳೂರು ಗ್ರಾಮಾಂತರ
    ಚಲಾವಣೆಗೊಂಡ ಮತಗಳು – 14,55,244
    ವರ್ಷ – 2014

    ಗೆದ್ದ ಅಭ್ಯರ್ಥಿ – ಕೃಷ್ಣಲಾಲ್ ಶರ್ಮಾ
    ಪಕ್ಷ – ಬಿಜೆಪಿ
    ಕ್ಷೇತ್ರ – ಔಟರ್ ದೆಹಲಿ
    ಚಲಾವಣೆಗೊಂಡ ಮತಗಳು – 14,21,128
    ವರ್ಷ – 1998

    ಗೆದ್ದ ಅಭ್ಯರ್ಥಿ – ಬದ್ರುದ್ದಿನ್ ಅಜ್ಮಲ್
    ಪಕ್ಷ – ಎಯುಡಿಎಫ್
    ಕ್ಷೇತ್ರ – ಧುಬ್ರಿ (ಅಸ್ಸಾಂ)
    ಚಲಾವಣೆಗೊಂಡ ಮತಗಳು – 13,69,624
    ವರ್ಷ – 2014

    ಗೆದ್ದ ಅಭ್ಯರ್ಥಿ – ದೀಪಕ್ ಅಧಿಕಾರಿ
    ಪಕ್ಷ – ಟಿಎಂಸಿ (ತೃಣಮೂಲ ಕಾಂಗ್ರೆಸ್)
    ಕ್ಷೇತ್ರ – ಘಟಾಲ್ (ಪಶ್ಚಿಮ ಬಂಗಾಳ)
    ಚಲಾವಣೆಗೊಂಡ ಮತಗಳು – 13,66,709
    ವರ್ಷ – 2014

    ಗೆದ್ದ ಅಭ್ಯರ್ಥಿ – ಅಪರೂಪಾ ಪೊಡ್ಡರ್
    ಪಕ್ಷ – ಟಿಎಂಸಿ
    ಕ್ಷೇತ್ರ – ಅರಾಂಬಾಗ್ (ಪಶ್ಚಿಮ ಬಂಗಾಳ)
    ಚಲಾವಣೆಗೊಂಡ ಮತಗಳು – 13,61,934
    ವರ್ಷ – 2014

    ಗೆದ್ದ ಅಭ್ಯರ್ಥಿ – ಡಿ.ವಿ.ಸದಾನಂದಗೌಡ
    ಪಕ್ಷ – ಬಿಜೆಪಿ
    ಕ್ಷೇತ್ರ – ಬೆಂಗಳೂರು ಉತ್ತರ
    ಚಲಾವಣೆಗೊಂಡ ಮತಗಳು – 13,56,718
    ವರ್ಷ – 2014