Tag: Loco Pilot

  • ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಡಿಕ್ಕಿ ಬಳಿಕ ಹೊತ್ತಿ ಉರಿದ ಇಂಜಿನ್‌  – ಮೂವರು ಸಿಬ್ಬಂದಿಗೆ ಗಾಯ

    ರಾಂಚಿ: ಜಾರ್ಖಂಡ್‌ನ (Jharkhand) ಸಾಹಿಬ್‌ಗಂಜ್‌ನಲ್ಲಿ ಎರಡು ಗೂಡ್ಸ್‌ ರೈಲುಗಳ (Train) ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಲೋಕೋ ಪೈಲಟ್‌ (Loco Pilot) ಸೇರಿದಂತೆ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ.

    ಅಪಘಾತದ ಬಳಿಕ ರೈಲಿನ ಎಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೂವರ ಸಾವಾಗಿದೆ. ಅವಘಡದಲ್ಲಿ ಮೂವರು ಸಿಐಎಸ್‌ಎಫ್ (Central Industrial Security Force) ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಬೆಳಗಿನ ಜಾವ 3:30ರ ಸುಮಾರಿಗೆ ಈ ಅಪಘಾತ ನಡೆದಿದೆ. ಫರಕ್ಕಾದಿಂದ ಲಾಲ್ಮಾಟಿಯಾಗೆ ಗೂಡ್ಸ್ ರೈಲು ಬರ್ಹೆತ್‌ನಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.‌

    ಕಲ್ಲಿದ್ದಲು ತುಂಬಿದ್ದ ಹಿನ್ನಲೆ ವೇಗವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 11 ಮಂದಿ ಸಾವು – ಅವಘಡ ಹೇಗಾಯ್ತು?

  • ರೈಲು ಹಳಿಗಳ ಮೇಲೆ ಮರದ ದಿಮ್ಮಿ – ರೈತ ಮುಖಂಡನ ಪುತ್ರ, ಸ್ನೇಹಿತ ಅರೆಸ್ಟ್

    ರೈಲು ಹಳಿಗಳ ಮೇಲೆ ಮರದ ದಿಮ್ಮಿ – ರೈತ ಮುಖಂಡನ ಪುತ್ರ, ಸ್ನೇಹಿತ ಅರೆಸ್ಟ್

    ಲಕ್ನೋ: ಉತ್ತರಪ್ರದೇಶದಲ್ಲಿ (Uttarpradesh) ರೈಲು ಹಳಿಗಳ ಮೇಲೆ ಮರದ ದಿಮ್ಮಿ ಹಾಕಿ ಕೃತ್ಯವೆಸಗಲು ಮುಂದಾದ ರೈತ ಮುಖಂಡನ ಪುತ್ರ ಹಾಗೂ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿ ಹಳಿ ತಪ್ಪಿಸಲು ಯತ್ನಿಸಿದಾಗ ಲೋಕೋ ಪೈಲೆಟ್  ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ದುರಂತವನ್ನು ಸಂಭವಿಸುವುದನ್ನು ತಪ್ಪಿಸಿದ್ದಾರೆ. ಇದನ್ನೂ ಓದಿ: ರಾಜ ಎಲ್ಲಿದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಇಪ್ಪತ್ತು ವರ್ಷದ ದೇವ್ ಸಿಂಗ್ ಹಾಗೂ ಫರೂಕಾಬಾದ್ ಅರಿಯಾರಾ ಗ್ರಾಮದ ಮೊಹನ್ ಕುಮಾರ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ದೇವ್ ಸಿಂಗ್‌ನ ತಂದೆ ಕಮಲೇಶ್ ರೈತ ಮುಖಂಡ. ಇದನ್ನೂ ಓದಿ: ಇಂದಿನಿಂದ 5 ದಿನಗಳ ಕಾಲ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

    ವಿಚಾರಣೆಯ ವೇಳೆ ತಮ್ಮ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ ಎಂಬ ಕಾರಣಕ್ಕಾಗಿ ಹೀಗೆ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ ಎಂದು ಕಾಯಮ್ ಗಂಜ್ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಮೂವರು ಭಯೋತ್ಪಾದಕರ ಹತ್ಯೆ

    ಈ ಘಟನೆಯ ಬಗ್ಗೆ ಭಾರತೀಯ ರೈಲ್ವೇ ಉದ್ಯೋಗಿ ಜಮೀರ್ ಅಹ್ಮದ್ ಖಾನ್ ಆಗಸ್ಟ್ 24 ರಂದು ದೂರು ನೀಡಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: 10 ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ: ಡಿಕೆಶಿ

    ಅಪರಾಧ ಮಾಡಿರುವ ವ್ಯಕ್ತಿಗಳು ತನಿಖೆಯ ವೇಳೆ, ತಾವು ಶನಿವಾರ ರಾತ್ರಿ ಆ ಪ್ರದೇಶದಲ್ಲಿ ಯಾರು ಇಲ್ಲದ ಸಮಯದಲ್ಲಿ ಪಕ್ಕದಲ್ಲಿದ್ದ ಗದ್ದೆಯಿಂದ ಮರದ ದಿಮ್ಮಿಗಳನ್ನು ತಂದು 80 ಮೀಟರ್ ದೂರದಲ್ಲಿರುವು ರೈಲು ಹಳಿಗಳ ಮೇಲೆ ಹಾಕಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ – ಯಾವ ನಗರಗಳಲ್ಲಿ ಬರಲಿದೆ?

    ಆರೋಪಿ ಸಿಂಗ್ ಹಾಗೂ ಕುಮಾರ್ ರೈತರಾಗಿದ್ದು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 327 ಮತ್ತು ರೈಲ್ವೇ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೈಯಲ್ಲಿ ಬೆಡ್‌ ಶೀಟ್‌ ಹಿಡ್ಕೊಂಡು ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್‌

  • ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಚೆನೈ: ರೈಲ್ವೇ ಟ್ರ್ಯಾಕ್‍ನಲ್ಲಿದ್ದ ಟ್ರಕ್ ಟೈರ್‌ಗೆ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ (Chennai-Kanyakumari Express Train) ರೈಲು ಡಿಕ್ಕಿಯಾದ ಘಟನೆ ತಮಿಳುನಾಡಿನಲ್ಲಿ (Tamil Nadu) ಶನಿವಾರ ನಡೆದಿದೆ.

    ಲೋಕೋ ಪೈಲಟ್ ದೂರದಿಂದಲೇ ಎರಡು ಟ್ರಕ್ ಟೈರ್‌ಗಳನ್ನು ರೈಲ್ವೇ ಟ್ರ್ಯಾಕ್‍ನಲ್ಲಿ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ರೈಲನ್ನು ಕ್ರಮೇಣ ನಿಧಾನಗೊಳಿಸಿದ್ದಾರೆ. ಆದರೂ ಇಂಜಿನ್ ಮುಂಭಾಗ ಟೈರ್‌ಗೆ ಡಿಕ್ಕಿಯಾಗಿದೆ. ರೈಲಿನ ವೇಗ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

    ಚೆನ್ನೈ (Chennai) ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಮಧ್ಯರಾತ್ರಿ 12:30ರ ಸುಮಾರಿಗೆ ತಿರುಚ್ಚಿಗೆ ಆಗಮಿಸಿತ್ತು. ಲೊಕೋ ಪೈಲಟ್ (Loco Pilot) ರಘುರಾಮನ್ ಮತ್ತು ಸಹಾಯಕ ಲೊಕೋ ಪೈಲಟ್ ವಿನೋದ್ ಎಂಬವರು ರೈಲನ್ನು ಚಲಾಯಿಸುತ್ತಿದ್ದರು. 1:05ರ ಸುಮಾರಿಗೆ ರೈಲು ವಾಲಾಡಿ ನಿಲ್ದಾಣವನ್ನು ದಾಟಿದ ನಂತರ ಲೋಕೋ ಪೈಲಟ್ ಹಳಿಯಲ್ಲಿ ಕಪ್ಪು ವಸ್ತು ಇರುವುದನ್ನು ಗಮನಿಸಿ ಬ್ರೇಕ್ ಹಾಕಿದ್ದಾರೆ.

    ಬಳಿಕ ಎರಡು ದೊಡ್ಡ ಟೈರ್‌ಗಳನ್ನು ಒಂದರ ಮೇಲೊಂದು ಹಾಕಿರುವುದು ಅವರ ಅರಿವಿಗೆ ಬಂದಿದೆ. ಟೈರ್‌ಗೆ ಡಿಕ್ಕಿಯಾಗಿ ರೈಲು ಸ್ವಲ್ಪ ದೂರದಲ್ಲಿ ನಿಂತಿದೆ. ಈ ವೇಳೆ ಒಂದು ಟೈರ್ ಇಂಜಿನ್‍ಗೆ ಸಿಕ್ಕಿಹಾಕಿಕೊಂಡಿತು. ಇದರಿಂದಾಗಿ ರೈಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಕ್ಷಣ ಲೋಕೋ ಪೈಲಟ್ ಸಮೀಪದ ವಾಲಾಡಿ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದುರಸ್ತಿಯಾದ ನಂತರ ರೈಲು ಅಲ್ಲಿಂದ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರನ್, ವೃದ್ಧಾಚಲಂನ ಇನ್ಸ್‌ಪೆಕ್ಟರ್ ರತಿನಕುಮಾರ್ ಮತ್ತು ಸಹಾಯಕ ಭದ್ರತಾ ಆಯುಕ್ತ ಚಿನ್ನತುರೈ ನೇತೃತ್ವದಲ್ಲಿ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ವಿಧ್ವಂಸಕ ಕೃತ್ಯ ಎಸಗಲು ಕೆಲ ದುಷ್ಕರ್ಮಿಗಳು ಟ್ರಕ್‍ನ ಟೈರ್‌ಗಳನ್ನು ಹಳಿಗಳ ಮೇಲೆ ಇಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೈಲ್ವೆ ಪೊಲೀಸರು (Railway Police) ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.‌ ಇದನ್ನೂ ಓದಿ: ಒಡಿಶಾ ರೈಲು ದುರಂತ- ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂತಾಪ

  • ರೈಲನ್ನು 1 ಕಿ.ಮೀ ರಿವರ್ಸ್ ಚಾಲನೆ ಮಾಡಿ ಇಬ್ಬರ ಪ್ರಾಣ ಉಳಿಸಿದ ಲೋಕೋಪೈಲಟ್

    ರೈಲನ್ನು 1 ಕಿ.ಮೀ ರಿವರ್ಸ್ ಚಾಲನೆ ಮಾಡಿ ಇಬ್ಬರ ಪ್ರಾಣ ಉಳಿಸಿದ ಲೋಕೋಪೈಲಟ್

    ಜೈಪುರ್: ರೈಲಿನಿಂದ ಬಿದ್ದು ಗಾಯಗೊಂಡಿದ್ದ ಪ್ರಯಾಣಿಕನನ್ನು ರಕ್ಷಿಸಲು ಲೋಕೋಪೈಲಟ್ ಒಬ್ಬರು ರೈಲನ್ನು ಸುಮಾರು ಒಂದು ಕಿ.ಮೀ. ಹಿಂದಕ್ಕೆ ಓಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜೇಂದ್ರ ವರ್ಮಾ (32) ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದ ವ್ಯಕ್ತಿ. ಜೀವ ಉಳಿಸಿದ ಲೋಕೋಪೈಲಟ್ ಹೆಸರು ತಿಳಿದು ಬಂದಿಲ್ಲ. ಶುಕ್ರವಾರ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಆಗಿದ್ದೇನು?:
    ರಾಜೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬದ ಜೊತೆಗೆ ರಾಜಸ್ಥಾನದ ಬರಾನ್ ಜಿಲ್ಲೆಯ ಅಟ್ರು-ಸಲಾಪುರ್ ಮಾರ್ಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರಾಜೇಂದ್ರ ಏಕಾಏಕಿ ಸಂಜೆ 4 ಗಂಟೆ ಸುಮಾರಿಗೆ ಸಲಾಪುರ್ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿದ್ದಾನೆ.

    ರಾಜೇಂದ್ರನನ್ನು ರಕ್ಷಿಸಲು ಹೋಗಿದ್ದ ಸಹೋದರ ವಿನೋದ್ ಆಯ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದಾಗಿ ತಕ್ಷಣವೇ ಅವರ ಸಹಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ, ಆಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ.

    ರಾಜೇಂದ್ರ ಹಾಗೂ ವಿನೋದ್ ಬಿದ್ದ ಸ್ಥಳಕ್ಕೆ ರಸ್ತೆ ಸಂಪರ್ಕವಿರಲಿಲ್ಲ. ಹೀಗಾಗಿ ಆಂಬುಲೆನ್ಸ್ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಲೋಕೋ ಪೈಲಟ್ ರೈಲನ್ನು ಒಂದು ಕಿ.ಮೀ. ಹಿಂದಕ್ಕೆ ಚಾಲನೆ ಮಾಡಿ ಪ್ರಯಾಣಿಕರು ಬಿದ್ದಿದ್ದ ಸ್ಥಳವನ್ನು ತಲುಪಿದ್ದಾರೆ.

    ಪ್ರಯಾಣಿಕರು ಬಿದ್ದ ಸ್ಥಳಕ್ಕೆ ರೈಲು ತಲುಪುತ್ತಿದ್ದಂತೆ ಕೆಲ ಪ್ರಯಾಣಿಕರು ಅವರನ್ನು ಎತ್ತಿಕೊಂಡು ರೈಲಿಗೆ ಹಾಕಿದ್ದಾರೆ. ಬಳಿಕ ಗಾಯಾಳುಗಳನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಿ ಬರಾನ್‍ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಗಂಭೀರವಾಗಿ ಗಾಯಾಗೊಂಡಿದ್ದ ರಾಜೇಂದ್ರ ಹಾಗೂ ವಿನೋದ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದ್ದು, ಲೋಕೋ ಪೈಲಟ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ

    ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ

    ಕಲಬುರಗಿ: ರೈಲ್ವೇ ಎಂಜಿನ್‍ ವೊಂದು ಚಾಲಕನಿಲ್ಲದೇ ಸುಮಾರು 13 ಕಿಮೀ ಸಂಚರಿಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್‍ನಲ್ಲಿ ನಡೆದಿದೆ.

    ಚಿತ್ತಾಪುರದ ವಾಡಿ ಜಂಕ್ಷನ್‍ನ ಪ್ಲಾಟ್‍ ಫಾರಂ 4 ರಲ್ಲಿ ಚೆನ್ನೈ-ಮುಂಬೈ ರೈಲಿಗೆ ಜೋಡಣೆಯಾಗಬೇಕಿದ್ದ ಎಂಜಿನ್ ನಿಲ್ಲಿಸಲಾಗಿತ್ತು. ಆದರೆ ಚಾಲಕ ಎಂಜಿನ್ ಆಫ್ ಮಾಡದೇ ಕೆಳಗಿಳಿದಿದ್ದ ಕಾರಣ ವಾಡಿ ಜಂಕ್ಷನ್ ನಿಂದ ನಾಲವಾರ ವರೆಗೆ ಸಂಚರಿಸಿದೆ.

    ರೈಲ್ವೆ ಎಂಜಿನ್ ಪ್ಲ್ಯಾಟ್‍ ಫಾರಂನಲ್ಲಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ನಂತರ ಎಂಜಿನ್ ಅನ್ನು ಸುಮಾರು 13 ಕಿ.ಮೀ ದೂರ ಬೈಕ್‍ನಲ್ಲಿ ಹಿಂಬಾಲಿಸಿ ನಾಲವಾರ ಪ್ರದೇಶದಲ್ಲಿ ತಡೆದಿದ್ದಾರೆ. ಅದೃಷ್ಟವಶತ್ ಈ ಸಂದರ್ಭದಲ್ಲಿ ರೈಲ್ವೇ ಎಂಜಿನ್ ಸಂಚರಿಸಿದ ಮಾರ್ಗದಲ್ಲಿ ಯಾವುದೇ ರೈಲು ಎದುರುಬಾರದ ಕಾರಣ ಭಾರೀ ಅನಾಹುತ ತಪ್ಪಿದೆ.

    ಇದನ್ನೂ ಓದಿ: ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್

    ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸುವುದಾಗಿ ಪ್ರಭಾರಿ ಸ್ಟೇಷನ್ ಮಾಸ್ಟರ್ ಜೆ.ಎನ್ ಪರಿಡಾ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.