Tag: locked

  • ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಭೋಪಾಲ್: ಮನೆಯಲ್ಲಿ ಹಣವವಿಲ್ಲದಿದ್ದರೆ ಮನೆ ಬಾಗಿಲು ಲಾಕ್ ಮಾಡಿ ಹೋಗುವ ಅವಶ್ಯಕತೆ ಏನಿತ್ತು ಎಂದು ಕಳ್ಳರು ಮನೆ ಮಾಲೀಕನಿಗೆ ಪಶ್ನಿಸಿ ಪತ್ರ ಬರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪತ್ರದಲ್ಲಿ ಏನಿದೆ?
    ಹಣವೇ ಇಲ್ಲದಿರುವಾಗ ಮನೆಯನ್ನು ಲಾಕ್ ಮಾಡುವ ಅಗತ್ಯವೇನಿತ್ತು? (ಜಬ್‍ಪೈಸೆ ನಹೀ ತೇ ತೋ ಲಾಕ್ ನಹಿ ಕರ್ನಾ ಥಾ ನಾ) ಎಂದು ಬರೆಯಲಾಗಿದೆ. ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

    ಹಿನ್ನೆಲೆ ಏನು:
    ಭೋಪಾಲ್‍ನಿಂದ ಸ್ವಲ್ಪ ದೂರದಲ್ಲಿ ದೇವಾಸ್‍ನ ಸಿವಿಲ್ ಲೈನ್ ಪ್ರದೇಶದಲ್ಲಿ ಮಧ್ಯಪ್ರದೇಶದ ಉಪ ಜಿಲ್ಲಾಧಿಕಾರಿ ತ್ರಿಲೋಚನ್ ಗೌರ್ ಅವರ ಮನನೆ ಇದೆ. ಖಟೇಗಾಂವ್‌ ತಹಸಿಲ್‍ನಲ್ಲಿ (ಎಸ್‍ಡಿಎಮ್) ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಗೊಂಡಿರುವ ತ್ರಿಲೋಚನ್ ಗೌರ್ ಕಳೆದ 20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ಮನೆಗೆ ನುಗ್ಗಿದ್ದಾರೆ. ದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ತ್ರಿಲೋಚನ್ ಅವರು ಮರಳಿ ಮನೆಗೆ ಬಂದಾಗ ಮನೆಯಲ್ಲಿ ಇರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು, ಹಣ, ಚಿನ್ನಾಭರಣಗಳು ಕಳುವಾಗಿದ್ದವು. ತಕ್ಷಣ ಪೊಲೀಸರಲ್ಲಿ ದೂರು ನೀಡಿದ್ದಾರೆ. 30,000 ನಗದು ಮತ್ತು ಕೆಲವು ಆಭರಣಗಳನ್ನು ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳವು ಮಾಡಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ಉಮ್ರಾವ್ ಸಿಂಗ್ ಹೇಳಿದ್ದಾರೆ.

  • ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಕಚೇರಿಗೆ ಬೀಗ!

    ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಕಚೇರಿಗೆ ಬೀಗ!

    ಬಳ್ಳಾರಿ: ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರ ಕಚೇರಿಗೆ ಹೊಸಪೇಟೆ ಎಸಿ ಗಾರ್ಗಿಜೈನ್ ಬೀಗ ಮುದ್ರೆ ಜಡಿದಿದ್ದಾರೆ.

    ಭಾನುವಾರ ಸಂಜೆ ದಾಳಿ ನಡೆಸಿದ ಎಸಿ ಗಾರ್ಗಿ ಜೈನ್ ಅಲ್ಲಿದ್ದ ಪುಸ್ತಕ, ನೋಟ್‍ಬುಕ್, ಕುರ್ಚಿ, ಸ್ಪೀಕರ್ ಗಳನ್ನು ವಶಪಡಿಸಿಕೊಂಡು ಕಚೇರಿಗೆ ಬೀಗ ಮುದ್ರೆ ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಆನಂದ್ ಸಿಂಗ್, ನಾವಿಲ್ಲಿ ಯಾವುದೇ ಪಕ್ಷದ ಚಿಹ್ನೆಯಡಿ ಸೇರಿಲ್ಲ. ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಬಂದಿದ್ದು, ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಇಲ್ಲಿ ನಡೆದಿಲ್ಲ ಎಂದು ಗಾರ್ಗಿ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

    ಆದ್ರೆ ಗಾರ್ಗಿ ಅವರು ಆನಂದ್ ಸಿಂಗ್ ಅವರಿಗೆ ನೀವು ಕಾನೂನು ಉಲ್ಲಂಘಿಸಿ, ಧ್ವನಿವರ್ಧಕಗಳನ್ನು ಬಳಸಿ ಸಭೆ ನಡೆಸಿದ್ದೀರಿ. ಈ ರೀತಿ ನೂರಾರು ಜನ ಒಂದು ಕಡೆ ಸೇರಿದ್ದು, ಸರಿಯಲ್ಲ ಎಂದು ಹೇಳಿ ಬೀಗಮುದ್ರೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಎಫ್.ಐ.ಆರ್ ಪ್ರತಿಯನ್ನು ತಮಗೆ ತೋರಿಸಬೇಕೆಂದು ಗಾರ್ಗಿ ಜೈನ್ ಪೊಲೀಸರಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಗಾರ್ಗಿ ಅವರು, ಪಕ್ಷದ ಚಟುವಟಿಕೆ ನಡೆಸುವುದಕ್ಕೆ ಅನುಮತಿ ಕೋರಿ ಕೆಲವು ದಿನಗಳ ಹಿಂದೆ ನನಗೆ ಪತ್ರ ಬರೆದಿದ್ದರು. ಆದರೆ ಸಮೀಪದಲ್ಲಿಯೇ ಶಾಲೆ ಇದೆ. ಶಾಲೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಚಟುವಟಿಕೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ಅನುಮತಿ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದೆ. ಆದರೂ ಅವರು ಕಾನೂನು ಮೀರಿ ಸಭೆ ನಡೆಸುತ್ತಿದ್ದರು. ಹೀಗಾಗಿ ಐ.ಪಿ.ಸಿ. ಕಾಲಂ 188ರ ಅಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.