Tag: Lockdown Package

  • ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ರೂಪುರೇಷೆ ಸಿದ್ದವಾಗಿಲ್ಲ – ಸಚಿವ ಅಂಗಾರ

    ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ರೂಪುರೇಷೆ ಸಿದ್ದವಾಗಿಲ್ಲ – ಸಚಿವ ಅಂಗಾರ

    ಕಾರವಾರ: ರಾಜ್ಯದಲ್ಲಿ ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ವಿಚಾರದಲ್ಲಿ ಇನ್ನೂ ಸರಿಯಾದ ರೂಪುರೇಷೆ ಸಿದ್ದವಾಗಿಲ್ಲ ಎಂದು ಮೀನುಗಾರಿಕೆ ಸಚಿವ ಎಸ್ ಅಂಗಾರ ಹೇಳಿದ್ದಾರೆ. ಇದನ್ನು ಓದಿ: ತುಮಕೂರು, ಎರಡು ಪ್ರತ್ಯೇಕ ಅಪಘಾತ – ನಾಲ್ವರ ಸಾವು

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಮತ್ತು ಬೈತಖೋಲ್ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೀನುಗಾರರಿಗೆ ಸೂಕ್ತ ಪರಿಹಾರ ಘೋಷಿಸಿರಲಿಲ್ಲ. ಈ ಬಾರಿ ಮುಖ್ಯಮಂತ್ರಿಗಳು ಗಮನ ನೀಡಿದ್ದಾರೆ. ಮೀನುಗಾರರ ಉಳಿತಾಯ ಪರಿಹಾರ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬರುವ ಶುಕ್ರವಾರ ಮೀನುಗಾರಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಫೈನಲ್ ಮಾಡುತ್ತೇವೆ. ಡಿಸೇಲ್, ಸೀಮೆಎಣ್ಣೆ ಸಬ್ಸಿಡಿ ಬಾಕಿ ಇರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಹೆಚ್ಚುವರಿ ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ ಎಂದರು.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೆಲ್ಲರೂ ಒಂದು ವಿಚಾರದಲ್ಲಿ ಬೆಳೆದು ಬಂದವರು. ನಮಗೆ ನಾಯಕತ್ವದ ಪ್ರಶ್ನೆ ಬರೋದಿಲ್ಲ. ನಾವು ಯಾವ ನಾಯಕತ್ವದಲ್ಲಿ ಇರಲು ಸಿದ್ದರಿದ್ದೇವೆ. ಹಾಗಂತ ಯಡಿಯೂರಪ್ಪ ಅವರನ್ನ ಬದಲಾಯಿಸಲು ಬಯಸುವುದಿಲ್ಲ ಎಂದು ಅಂಗಾರ ಹೇಳಿದರು. ಇದನ್ನು ಓದಿ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

  • ರಕ್ಷಣಾ ವಲಯಕ್ಕೆ ಮೇಕ್ ಇನ್ ಇಂಡಿಯಾ ಬಲ- 6 ಏರ್ ಪೋರ್ಟ್‍ಗಳ ಹರಾಜು

    ರಕ್ಷಣಾ ವಲಯಕ್ಕೆ ಮೇಕ್ ಇನ್ ಇಂಡಿಯಾ ಬಲ- 6 ಏರ್ ಪೋರ್ಟ್‍ಗಳ ಹರಾಜು

    -50 ಗಣಿಗಳ ಹರಾಜಿಗೆ ಕೇಂದ್ರ ನಿರ್ಧಾರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆಯ 20 ಲಕ್ಷ ಕೋಟಿಯ ಪ್ಯಾಕೇಜ್ ನ ನಾಲ್ಕನೇ ಹಂತದ ಪ್ರಕಟನೆಯನ್ನ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಟಿಯಲ್ಲಿ ಮಂಡಿಸಿದರು.

    ಪಿಎಂ ಮೋದಿ ಸುಧಾರಣೆಯ ಕುರಿತು ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ. ನೇರ ವರ್ಗಾವಣೆಯ ಅವಶ್ಯಕತೆ ಹೆಚ್ಚಿದ್ದು, ಈ ಕುರಿತು ಹಲವು ನಿಯಮಗಳನ್ನು ಸರಳೀಕರಣಕೊರಿಸುವ ಬಗ್ಗೆ ಕೇಂದ್ರ ಸಚಿವರು ಆರಂಭದಲ್ಲಿಯೇ ಮಾತನಾಡಿದರು. ಕೈಗಾರಿಕಾ ಮೂಲಭೂತ ಸುಧಾರಣೆಗೆ ಕ್ರಮ, ಉದ್ಯೋಗ ಸೃಷ್ಟಿ, ಉದ್ಯಮಗಳ ಮೇಲೆ ನಿಯಮಗಳ ಸರಳೀಕರಣ, ಭಾರತ ಮತ್ತು ಆರ್ಥಿಕತೆಯ ಮರು ನಿರ್ಮಾಣ ಕುರಿತ ಮಹತ್ವದ ಘೋಷಣೆಗಳನ್ನು ಘೋಷಿಸಿದರು. ಇಂದು 8 ವಲಯಗಳಾದ ಕಲ್ಲಿದ್ದಲು, ರಕ್ಷಣಾ ವ್ಯವಸ್ಥೆ, ಖನಿಜ ಸಂಪತ್ತು, ಏರ್‍ಪೋರ್ಟ್, ಏರ್ ಸ್ಪೇಸ್, ಎಂಆರ್‍ಓ (ಮೇಂಟೇನ್ಸ್ ರಿಪೇರ್ ಓವರ್ ಆಲ್), ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ಘಟಕಗಳು ಹಾಗೂ ಬಾಹ್ಯಾಕಾಶಕ್ಕೆ ಅನುದಾನ ಘೋಷಿಸಲಾಯ್ತು.

    ಸುದ್ದಿಗೋಷ್ಠಿಯ ಪ್ರಮುಖಾಂಶಗಳು:
    1. ಕಲ್ಲಿದ್ದಲು
    * ಕಲ್ಲಿದ್ದಲು ಕ್ಷೇತ್ರದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದ್ದು, ಸರ್ಕಾರದ ಏಕಸ್ವಾಮ್ಯ ಅಂತ್ಯ. ಅವಶ್ಯಕತೆ ಇರೋ ಕಲ್ಲಿದ್ದಲ್ಲನ್ನ ಮಾತ್ರ ಆಮದು ಮಾಡಿಕೊಳ್ಳುವುದು. ಆಮದು ಕಡಿಮೆ ಮಾಡಿಕೊಳ್ಳುವ ರೀತಿಯಲಿ ಕೆಲಸ ಮಾಡೋದು. ನಮ್ಮಲ್ಲಿಯೇ ಹೆಚ್ಚು ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡೋದರಿಂದ ಉದ್ಯೋಗ ನಿರ್ಮಾಣವಾಗಲಿದೆ.
    * ಸರಳ ನಿಯಮಗಳ ಅನ್ವಯ 50 ಕಲ್ಲಿದ್ದಲು ಉತ್ಪದಾನ ಕ್ಷೇತ್ರಗಳ ಹರಾಜು ಪ್ರಕ್ರಿಯೆ.
    * ಕೋಲ್ ಇಂಡಿಯಾ ಲಿಮಿಟೆಡ್ ಗಣಿಯನ್ನು ಖಾಸಗೀಕರಣ ಮಾಡಲು ಸರ್ಕಾರದ ಸಮ್ಮತಿ. ಕಲ್ಲಿದ್ದಲು ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ. ಅನುದಾನ.
    * 2023-24 ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ

    2. ಖನಿಜ ಸಂಪತ್ತು:
    * 500 ಮೈನಿಂಗ್ ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಗಣಿಗಾರಿಕೆಯ ಗುತ್ತಿಗೆಯನ್ನು ವರ್ಗಾಯಿಸಲಾಗುವುದು.
    * ಖನಿಜ ಸಂಪತ್ತು ವಲಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ.
    * ಆತ್ಮನಿರ್ಭರಭಾರತ ಅಭಿಯಾನದಡಿಲ್ಲಿ ವಿಶ್ವ ಮಾರುಕಟ್ಟೆಯ ಜೊತೆ ಸ್ಪರ್ಧೆಗೆ ಭಾರತ ಸಿದ್ಧವಾಗಬೇಕಿದೆ. ಮಿನರಲ್ ಇಂಡೆಕ್ಸ್ ಆರಂಭಿಸೋದರ ಜೊತೆ ಟ್ಯಾಕ್ಸ್ ಸರಳೀಕರಣದ ವ್ಯವಸ್ಥೆ.

    3. ರಕ್ಷಣಾ ವಲಯ:
    * ರಕ್ಷಣಾ ವಲಯಕ್ಕೆ ಬೇಕಾಗುವ ಉತ್ಪನ್ನಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದಿಸಲಾಗುವುದು. ಸೇನೆಗೆ ಅವಶ್ಯಕವಾಗಿರು ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುವುದು.
    * ಆರ್ಡಿನಸ್ ಫ್ಯಾಕ್ಟರಿ ಸಾಂಸ್ಥೀಕರಣ ಮಾಡಲಾಗುವುದು. ಇದು ಖಾಸಗೀಕರಣಕ್ಕೆ ಒಳಪಡಲ್ಲ. ಆರ್ಡಿನಸ್ ಫ್ಯಾಕ್ಟರಿಯನ್ನು ಷೇರು ಮಾರುಕಟ್ಟೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.
    * ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಉತ್ಪಾದಾನದಲ್ಲಿ ಎಫ್‍ಡಿಐ ಹೂಡಿಕೆಯನ್ನು ಶೇ 49ರಿಂದ ಶೇ.74ಕ್ಕೆ ಏರಿಕೆ.

    4 ನಾಗರಿಕ ವಿಮಾನಯಾನ ಕ್ಷೇತ್ರ-ಏರ್ ಸ್ಪೇಸ್ 5.ಎಂಆರ್‍ಓ
    * ನಾಗರಿಕ ವಿಮಾನಯಾನ ಕ್ಷೇತ್ರದ ಸುಧಾರಣೆ ಹಿನ್ನೆಲೆಯಲ್ಲಿ ಆರು ವಿಮಾನ ನಿಲ್ದಾಣಗಳನ್ನು ಹರಾಜು ಹಾಕಲಾಗುವುದು. ಈಗಾಗಲೇ 12 ಏರ್ ಪೋರ್ಟ್ ಹರಾಜು ಹಾಕಲಾಗಿದೆ. ಈ ಪ್ರಕ್ರಿಯೆ ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯುಲಿದೆ.
    * ಹರಾಜು ಮೂಲಕ ಒಟ್ಟು 13 ಸಾವಿರ ಕೋಟಿ ಆದಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
    * ಖಾಸಗೀಕರಣ ಮತ್ತು ಹರಾಜು ಪ್ರಕ್ರಿಯೆಯಿಂದ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚ ತಗ್ಗಲಿದೆ.
    * ಸಮಯ ಉಳಿತಾಯಕ್ಕಾಗಿ ವಾಯು ಮಾರ್ಗದಲ್ಲಿ ಸರಳೀಕರಣಕ್ಕಾಗಿ ಚಿಂತನೆ. ಸಮಯ ಉಳಿತಾಯದಿಂದ ವಿಮಾನ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ.ಯ ಲಾಭವಾಗಲಿದೆ. ವಾಯುಮಾರ್ಗದ ಸರಳೀಕರಣದಿಂದ ಇಂಧನ ಮತ್ತು ಪರಿಸರ ಮಾಲಿನ್ಯ ಸಹ ತಗ್ಗಲಿದೆ.

    6. ವಿದ್ಯುತ್ ಪ್ರಸರಣ:
    * ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಸ್ಕಾಂಗಳ ಸುಧಾರಣೆಗಾಗಿ ಖಾಸಗೀಕರಣ
    * ವಿದ್ಯುತ್ ಉತ್ಪಾದನಾ ಕಂಪನಿಗಳಿ ನಿಗದಿತ ಸಮಯದಲ್ಲಿ ಪಾವತಿ. ಗ್ರಾಹಕರ ರಕ್ಷಣೆಗಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಅಳವಡಿಕೆ.
    * ದೇಶದ ವಿದ್ಯುತ್ ಪ್ರಸರಣಗಳಲ್ಲಿ ಬದಲಾವಣೆ

    7. ಆಸ್ಪತ್ರೆಗಳ ಅಭಿವೃದ್ಧಿ:
    * ಸಾಮಾಜಿಕ ಅಭಿವೃದ್ಧಿಯಲ್ಲಿ 8100 ಕೋಟಿ ರೂ. ಹೂಡಿಕೆ.
    * ಆಸ್ಪತ್ರೆಗಳಿಗೆ ಸಾಮಾಜಿಕ ಭದ್ರತೆ

    8. ಬಾಹ್ಯಾಕಾಶ:
    * ಬಾಹ್ಯಾಕಾಶ ಸುಧಾರಣೆಗಾಗಿ ಕ್ರಮ
    * ಭವಿಷ್ಯದ ಬಾಹ್ಯಾಕಾಶ ಅಧ್ಯಯನದಲ್ಲಿ ಖಾಸಗಿಯವರಿಗೆ ಪಾಲು
    * ಉಪಗ್ರಹ ಉಡಾವಣೆಯಲ್ಲಿ ಖಾಸಗಿ ಕಂಪನಿಯವರಿಗೆ ಅವಕಾಶ
    * ಖಾಸಗಿ ಕಂಪನಿಗಳು ಇಸ್ರೋ ಸೌಲಭ್ಯ ಪಡೆಯಬಹುದು.

  • ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ, ನೆರವು ನೀಡುತ್ತಾಳೆ – ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಲು ‘ರಾಗಾ’ ಒತ್ತಾಯ

    ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ, ನೆರವು ನೀಡುತ್ತಾಳೆ – ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಲು ‘ರಾಗಾ’ ಒತ್ತಾಯ

    ನವದೆಹಲಿ : ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಬೇಕು. ವಲಸೆ ಕಾರ್ಮಿಕರು ಮತ್ತು ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುವಂತೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

    ದೇಶದ ಹಲವು ರಾಜ್ಯಗಳ ಪತ್ರಕರ್ತರ ಜೊತೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಮಾತನಾಡಿದ ಅವರು, ಅವಶ್ಯಕತೆ ಇರುವವರ ಖಾತೆಗೆ ಹಣ ಹಾಕಿ, ಬಡವರ ಜೇಬಿಗೆ ನೇರವಾಗಿ ಹಣ ತಲುಪಬೇಕು. ಬಡ ಜನರಿಗೆ ಲೋನ್ ಅವಶ್ಯಕತೆ ಇಲ್ಲ. ಅವರಿಗೆ ಬೇಕಿರುವುದು ಆರ್ಥಿಕ ನೆರವು ಅವರ ಖಾತೆಗಳಿಗೆ, ಕೈಗಳಿಗೆ ನೇರ ಹಣ ವರ್ಗಾಯಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

    ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಭಾರತದ ಭವಿಷ್ಯದ ಮಕ್ಕಳು ರೋಡ್ ನಲ್ಲಿವೆ. ಪ್ರತಿನಿತ್ಯ ಕಾರ್ಮಿಕರು ವಲಸೆ ಹೋಗುವುದು ನಿಲ್ಲುತ್ತಿಲ್ಲ. ದೇಶ ಅವರ ನೆರವಿಗೆ ನಿಲ್ಲಬೇಕು ಎಂದರು. ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ ನೆರವು ನೀಡುತ್ತಾಳೆ. ಹಾಗೇ ಸರ್ಕಾರವು ಜನರ ನೆರವಿಗೆ ಮುಂದಾಗಬೇಕು. ನೇರವಾಗಿ ಹಣದ ವರ್ಗಾವಣೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ. ಇದರ ಜೊತೆಗೆ ಮನರೇಗಾದಡಿ ಕೂಲಿ ದಿನಗಳನ್ನು 200ಕ್ಕೆ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಎಚ್ಚರಿಕೆಯಿಂದ ಹಂತ ಹಂತವಾಗಿ ಸಡಿಲಿಸಬೇಕು. ದುರ್ಬಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ವಿನಾಯತಿ ನೀಡಬೇಕು. ಲಾಕ್‍ಡೌನ್ ವಿನಾಯತಿಯಿಂದ ತೊಂದರೆಗಳಾಗಬಾರದು ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

  • ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

    ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

    – ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ
    – ಒಂದು ಹೆಕ್ಟೇರ್ ಗೆ 25 ಸಾವಿರ ರೂ.
    – ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

    ಲಾಕ್‍ಡೌನ್ ನಿಂದಾಗಿ ಸಭೆ ಸಮಾರಂಭ, ಮದುವೆ ನಡೆಸದ ಇರೋದರಿಂದ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೇ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು, ಅಗಸರಿಗೆ 5 ಸಾವಿರ ರೂ. ಪರಿಹಾರ ಸರ್ಕಾರ ಘೋಷಣೆ ಮಾಡಿದೆ. ಅಂದಾಜು 60,000 ಅಗಸರು, 2,30,000 ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಟ್ಟು 7,75000 ಜನ ಇದ್ದಾರೆ .

    ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನಲ್ಲಿ 2 ತಿಂಗಳ ಬಿಲ್ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿ ಬಡ್ಡಿ ರಹಿತವಾಗಿ 2 ತಿಂಗಳಿಗೆ ಮುಂದೂಡಲಾಗಿದೆ. ನೇಕಾರರಿಗೆ 109 ಕೋಟಿ ಸಾಲಮನ್ನ ಘೋಷಿಸಲಾಗಿದೆ. ಮೊದಲು 29 ಕೋಟಿ ಮನ್ನ ಮಾಡಲಾಗಿತ್ತು ಉಳಿದ ಹಣವನ್ನ ಸರ್ಕಾರ ಕೂಡಲೇ ಬಿಡುಗಡೆ ಮಾಡಲಾಗುತ್ತದೆ.

    1 ಲಕ್ಷದ ಒಳಗಿನ ಸಾಲ ಕಟ್ಟಿದ ನೇಕಾರರಿಗೆ ಕಟ್ಟಿದ ಹಣವನ್ನ ವಾಪಸ್ ಕೊಡಲು ಸರ್ಕಾರ ತೀರ್ಮಾನಿಸಿದೆ. ನೇಕಾರ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ಹಣ ಅವರ ಖಾತೆಗೆ ಹಾಕಲಾಗುವುದು.