Tag: Lockdown Effect

  • ಲಾಕ್‍ಡೌನ್ ಎಫೆಕ್ಟ್: ಕಡಿಮೆಯಾದ ಅಪಘಾತಗಳು- ರಾಯಚೂರಿನಲ್ಲಿ 94 ಲಕ್ಷ ರೂ. ದಂಡ ವಸೂಲಿ

    ಲಾಕ್‍ಡೌನ್ ಎಫೆಕ್ಟ್: ಕಡಿಮೆಯಾದ ಅಪಘಾತಗಳು- ರಾಯಚೂರಿನಲ್ಲಿ 94 ಲಕ್ಷ ರೂ. ದಂಡ ವಸೂಲಿ

    ರಾಯಚೂರು: ಕೋವಿಡ್-19  ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕಿನಿಂದ ಸಾಕಷ್ಟು ಸಾವುಗಳು ಸಹ ಸಂಭವಿಸಿವೆ. ನಿಜ, ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಅಲ್ಲದೇ ಸಾವು, ಗಾಯಾಳುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ.

    ರಾಯಚೂರು ಜಿಲ್ಲೆಯೊಂದರಲ್ಲೇ ಪೊಲೀಸ್ ಇಲಾಖೆ ದಾಖಲೆಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ 40ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿವೆ. 2019 ರಲ್ಲಿ ಜನವರಿಯಿಂದ ಮೇ ತಿಂಗಳಲ್ಲಿ ಒಟ್ಟು 125 ಭೀಕರ, 180 ಸಾಮಾನ್ಯ ಒಟ್ಟು 305 ಅಪಘಾತಗಳು ಸಂಭವಿಸಿದ್ದು, 138 ಜನ ಸಾವನ್ನಪ್ಪಿದ್ದಾರೆ. 461 ಜನ ಅಪಘಾತಗಳಿಂದ ಗಾಯಗೊಂಡಿದ್ದಾರೆ.

    2020ರಲ್ಲಿ ಕೊರೊನಾದಿಂದಾಗಿ ಅಂಕಿ ಸಂಖ್ಯೆಯ ಲೆಕ್ಕದಲ್ಲಿ ಬಹಳ ವ್ಯತ್ಯಾಸವಾಗಿದೆ. ಈ ವರ್ಷ ಜನವರಿಯಿಂದ ಮೇ ವರೆಗೆ 91 ಭೀಕರ, 226 ಸಾಮಾನ್ಯ ಸೇರಿದಂತೆ ಒಟ್ಟು 226 ಅಪಘಾತಗಳು ಸಂಭವಿಸಿದೆ. ಈ ಅಪಘಾತಗಳಲ್ಲಿ 98 ಜನ ಸಾವನ್ನಪ್ಪಿದ್ದು, 317 ಜನ ಗಾಯಗೊಂಡಿದ್ದಾರೆ. ಜನವರಿ, ಫೆಬ್ರವರಿ ಮಾತ್ರ ಅಧಿಕ ಅಪಘಾತಗಳು ಸಂಭವಿಸಿದ್ದು, ಮಾರ್ಚ್‍ನಿಂದ ಅಪಘಾತ ಹಾಗೂ ಸಾವಿನ ಸಂಖ್ಯೆ ಇಳಿದಿದೆ.

    ಅಪಘಾತಗಳ ಸಂಖ್ಯೆ ಲಾಕ್ ಡೌನ್ ಸಮಯದಲ್ಲಿ ಇಳಿಕೆಯಾಗಿದೆ. ಆದರೆ ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಿಂದ ವಸೂಲಿಯಾದ ದಂಡದ ಪ್ರಮಾಣ ಮಾತ್ರ ಗಣನೀಯವಾಗಿ ಹೆಚ್ಚಿದೆ. ಲಾಕ್‍ಡೌನ್ ಸಮಯದಲ್ಲಿ ಅನಗತ್ಯವಾಗಿ ಜನ ಓಡಾಡಿದ್ದರಿಂದ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. 2019ರ ಜನವರಿಯಿಂದ ಏಪ್ರಿಲ್ ವರೆಗೆ 39,547 ಪ್ರಕರಣ ದಾಖಲಾಗಿದ್ದು, 55 ಲಕ್ಷ 32 ಸಾವಿರದ 150 ರೂ. ದಂಡ ವಸೂಲಿಯಾಗಿದೆ. 2020ರ ಜನವರಿಯಿಂದ ಏಪ್ರಿಲ್ ವರೆಗೆ 25,572 ಪ್ರಕರಣಗಳು ದಾಖಲಾಗಿದ್ದು 94 ಲಕ್ಷ 77 ಸಾವಿರದ 400 ರೂಪಾಯಿ ದಂಡ ವಸೂಲಿಯಾಗಿದೆ.

  • ಲಾಕ್‍ಡೌನ್ ಎಫೆಕ್ಟ್- ನುಗ್ಗೆಕಾಯಿ ಬೆಳೆದ ರೈತರು ಕಂಗಾಲು

    ಲಾಕ್‍ಡೌನ್ ಎಫೆಕ್ಟ್- ನುಗ್ಗೆಕಾಯಿ ಬೆಳೆದ ರೈತರು ಕಂಗಾಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನುಗ್ಗೆಕಾಯಿ ಬೆಳೆದ ರೈತರು ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಈ ವರ್ಷ ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಅಲ್ಲದೆ ನುಗ್ಗೆಕಾಯಿ ಬೆಲೆ ಕೂಡ ಇಳಿಕೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

    ಒಬ್ಬೊಬ್ಬ ರೈತರು ಎರಡು ಮೂರು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ನುಗ್ಗೆಕಾಯಿ ಬೆಳೆದಿದ್ದಾರೆ. ಈ ಬಾರಿ ನುಗ್ಗೆಕಾಯಿ ಬೆಳೆಕೂಡ ಉತ್ತಮವಾಗೇ ಬಂದಿದೆ. ಆದರೆ ಕೊಳ್ಳುವವರೇ ಇಲ್ಲವಾಗಿದೆ. ಹೀಗಾಗಿ ರೈತನ ಕೈ ಹಿಡಿಯಬೇಕಿದ್ದ ನುಗ್ಗೆಕಾಯಿ ಈಗ ರೈತನ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

    ನುಗ್ಗೆಕಾಯಿ ಸರಿಯಾಗಿ ಮಾರಾಟವಾಗದೇ ಮನೆಯಲ್ಲೇ ಹಾಳಾಗುತ್ತಿವೆ. ಲಾಕ್‍ಡೌನ್‍ನಿಂದ ನುಗ್ಗೆಕಾಯಿ ಮಾರಾಟವಾಗದೇ ರೈತ ಸಾಲಗಾರನಾಗುತ್ತಿದ್ದಾನೆ. ಹೀಗಾಗಿ ಸರ್ಕಾರ ರೈತರಿಂದ ನೇರವಾಗಿ ಖರೀದಿಸಬೇಕು. ಇಲ್ಲವೇ ಮಾರುಕಟ್ಟೆ ಸೌಲಭ್ಯ ಹಾಗೂ ಉತ್ತಮ ಬೆಲೆಯನ್ನು ದೊರಕಿಸಿಕೊಡಬೇಕು ಎಂದು ನುಗ್ಗೆಕಾಯಿ ಬೆಳೆದಿರುವ ರೈತರು ಮನವಿ ಮಾಡಿದ್ದಾರೆ.

  • ಲಾಕ್‍ಡೌನ್ ವೇಳೆ ದೇಶದಲ್ಲಿ ಪೋರ್ನ್ ನೋಡೋ ಪ್ರಮಾಣ ಶೇ.95 ರಷ್ಟು ಹೆಚ್ಚಳ

    ಲಾಕ್‍ಡೌನ್ ವೇಳೆ ದೇಶದಲ್ಲಿ ಪೋರ್ನ್ ನೋಡೋ ಪ್ರಮಾಣ ಶೇ.95 ರಷ್ಟು ಹೆಚ್ಚಳ

    ನವದೆಹಲಿ: ಪೋರ್ನ್ ಹಬ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಲಾಕ್‍ಡೌನ್ ವೇಳೆ ಹೆಚ್ಚು ಪೋರ್ನ್ ನೋಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ. ಲಾಕ್‍ಡೌನ್ ವಿಧಿಸಿದ ಬಳಿಕ ಪೋರ್ನ್ ನೋಡುವ ಪ್ರಮಾಣ ವಿಶ್ವದಲ್ಲಿ ಶೇ.60 ರಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ಸಾಕಷ್ಟು ಮಂದಿ ಕೆಲಸವಿಲ್ಲದೇ ಮನೆಯಲ್ಲೇ ಉಳಿದುಕೊಂಡಿರುವುದು ಎಂದು ವರದಿ ತಿಳಿಸಿದೆ. ಅಲ್ಲದೇ ಭಾರತದಲ್ಲಿ ಲಾಕ್‍ಡೌನ್ ಸಮಯದಲ್ಲಿ ಪೋರ್ನ್ ವೆಬ್‍ಸೈಟ್ ನೋಡುವವರ ಟ್ರಾಫಿಕ್ ಶೇ.95 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕಳೆದ ಮೂರು ವಾರದ ಸಮಯದಲ್ಲಿ ನಡೆಸಿದ ಸರ್ವೇ ಇದಾಗಿದೆ. ದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಳೆದ ವರ್ಷ ಸರ್ಕಾರ ಪೋರ್ನ್ ವೆಬ್‍ಸೈಟ್‍ಗಳ ಮೇಲೆ ನಿಷೇಧ ವಿಧಿಸಿತ್ತು. ಎಲ್ಲಾ ಮೊಬೈಲ್ ಅಪರೇಟಿಂಗ್ ಸಂಸ್ಥೆಗಳು ಕೂಡ ಪೋರ್ನ್ ಸೈಟ್‍ಗಳು ಭಾರತದಲ್ಲಿ ಓಪನ್ ಆಗದಂತೆ ನಿಷೇಧ ಹೇರಿದ್ದವು. ಈ ರೀತಿ ಕಠಿಣ ಕ್ರಮಕೈಗೊಂಡಿದ್ದರು ಕೂಡ ಬೇರೆ ಬೇರೆ ಮಾರ್ಗಗಳಲ್ಲಿ ವೆಬ್‍ಸೈಟ್‍ಗಳಿಗೆ ಭೇಟಿ ನೀಡುತ್ತಾರೆ. ಸಾಮಾನ್ಯ ಅವಧಿಯಲ್ಲಿ ಇದರ ಪ್ರಮಾಣ ಶೇ.20 ರಷ್ಟಿದ್ದರೆ, ಲಾಕ್‍ಡೌನ್ ವೇಳೆಯಲ್ಲಿ ಅತ್ಯಾಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ.

    ಲಾಕ್‍ಡೌನ್ ಸಮಯದಲ್ಲಿ ಪೋರ್ನ್ ವೀಕ್ಷಣೆ ಮಾಡುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನ ಹಾಗೂ ಫ್ರಾನ್ಸ್ 2ನೇ ಸ್ಥಾನದಲ್ಲಿದೆ. ಉಳಿದಂತೆ ಜರ್ಮನಿ, ಇಟಲಿ, ರಷ್ಯಾ, ಸೌತ್ ಕೊರಿಯಾ, ಸ್ಪೇನ್, ಸ್ವಿಜರ್ಲ್ಯಾಂಡ್, ಅಮೆರಿಕ ಕ್ರಮವಾಗಿ ಸ್ಥಾನ ಪಡೆದಿದೆ. ಫ್ರಾನ್ಸ್ ನಲ್ಲಿ ಮಾರ್ಚ್ 17 ರಂದು ಲಾಕ್‍ಡೌನ್ ವಿಧಿಸಿದ ಬಳಿಕ ಒಂದೇ ದಿನದಲ್ಲಿ ಶೇ.40 ರಷ್ಟು ವೆಬ್‍ಸೈಟ್‍ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ಉಳಿದಂತೆ ಇಟಲಿ, ಸೌತ್ ಕೊರಿಯಾ, ಸ್ಪೇನ್, ಸ್ವಿಜರ್ಲ್ಯಾಂಡ್ ದೇಶಗಳಲ್ಲಿ ಲಾಕ್‍ಡೌನ್ ವಿಧಿಸಿದ 2 ದಿನಗಳಲ್ಲಿ ಪೋರ್ನ್ ವೀಕ್ಷಕರ ಗ್ರಾಫ್ ಒಮ್ಮೆಲೇ ಹೆಚ್ಚಾಗಿತ್ತು.

    ವಿಶ್ವದಾದ್ಯಂತ ಕೊರೊನಾ ವೈರಸ್ ಪ್ರಭಾವ ಹೆಚ್ಚಾಗುತ್ತಿದಂತೆ ಹಲವು ದೇಶಗಳು ಲಾಕ್‍ಡೌನ್ ಘೋಷಣೆ ಮಾಡಿದ್ದವು. ಇದರ ನಡುವೆಯೇ ಹಲವು ಪೋರ್ನ್ ವೆಬ್‍ಸೈಟ್‍ಗಳು ಇದನ್ನು ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದ್ದವು. ಕೆಲ ಪೋರ್ನ್ ಸಂಸ್ಥೆಗಳು ತನ್ನ ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ವಿಶೇಷ ಆಫರ್‍ಗಳನ್ನು ನೀಡಿತ್ತು. ಜನರು ತಮ್ಮ ಮನೆಗಳಲ್ಲಿ ಸಮಯವನ್ನು ಕಳೆಯಲು ಹೊಸ ಹೊಸ ಮಾರ್ಗಗಳನ್ನು ಕಂಡು ವೇಳೆ ಪೋರ್ನ್ ನೋಡುವ ಕ್ರಮವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಈ ಮಾಹಿತಿಯನ್ನು ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಇತ್ತ ಹೆಚ್ಚಿನ ಯುವ ಸಮುದಾಯವೇ ಇತ್ತ ಆಕರ್ಷಣೆ ಆಗಿರುವುದರಿಂದ ವೆಬ್‍ಸೈಟ್‍ಗಳು ಉಚಿತ ಪ್ರೀಮಿಯಮ್ ಸೌಲಭ್ಯಗಳನ್ನು ನೀಡುತ್ತಿವೆ.