Tag: Lockdown 4

  • ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣ

    ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣ

    ಹುಬ್ಬಳ್ಳಿ: ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

    ಬಸ್ ಸಂಚಾರ ಪುನರಾರಂಭಿಸಲು ರಾಜ್ಯ ಸರ್ಕಾರದಿಂದ ನಿರ್ದೇಶನಗಳು ಬಂದ ನಂತರ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆ ಗಿಳಿಸಲು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಭಾಗದಲ್ಲಿ 2166 ಸಿಬ್ಬಂದಿಗಳಿದ್ದು ಎಲ್ಲರಿಗೂ ಕರ್ತವ್ಯಕ್ಕೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

    ಈಗಾಗಲೇ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒಂದೇ ಪ್ರವೇಶ ಹಾಗೂ ಒಂದೇ ನಿರ್ಗಮನ ವ್ಯವಸ್ಥೆ, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣತೆ ಪರೀಕ್ಷೆ, ಸ್ಯಾನಿಟೈಸರ್, ಮಾಸ್ಕ್ ಧರಿಸಿರುವ ಬಗ್ಗೆ ಪರಿಶೀಲನೆ ಮಾಡಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ಸುಗಮ ನಿರ್ವಹಣೆಗಾಗಿ ಮೂರು ಪಾಳಿಯಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ಬಸ್ ನಿಲ್ದಾಣಕ್ಕೂ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ.

    ವಿಭಾಗದಲ್ಲಿ 462 ಬಸ್ಸುಗಳಿದ್ದು, ಲಾಕ್‍ಡೌನ್ ಪೂರ್ವದಲ್ಲಿ ಜಿಲ್ಲೆಯೊಳಗಡೆ, ಅಂತರ ಜಿಲ್ಲೆಗಳು ಮತ್ತು ಅಂತರರಾಜ್ಯಗಳ ಪ್ರದೇಶಗಳಲ್ಲಿ ಸಾಮಾನ್ಯ, ವೇಗಧೂತ, ತಡೆರಹಿತ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್, ಹವಾನಿಯಂತ್ರಣ ಸಹಿತ ಸ್ಲೀಪರ್ ಮತ್ತು ವೋಲ್ವೊ ಮಾದರಿ ಬಸ್ಸಗಳು ಸೇರಿದಂತೆ ಒಟ್ಟು 419 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು.

    ಸರ್ಕಾರದ ನಿರ್ದೇಶನಗಳು ಬಂದ ನಂತರ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಯಾವ ಮಾದರಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡಬೇಕು? ಯಾವ ಮಾರ್ಗಗಳಲ್ಲಿ ಎಷ್ಟು ಬಸ್ಸುಗಳನ್ನು ರಸ್ತೆಗಿಳಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

  • ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆ

    ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆ

    ನವದೆಹಲಿ: ಮೇ 31ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಲಾಕ್‍ಡೌನ್ ಆರಂಭವಾಗಲಿದೆ.

    ಮೂರನೇ ಹಂತದ ಲಾಕ್‍ಡೌನ್ ಇಂದು ಅಂತ್ಯವಾಗಲಿದೆ. ಇಡೀ ದೇಶದಾದ್ಯಂತ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಲಿದ್ದು, ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

    ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಅನ್ನೋದು ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು ಸಡಿಲ ಮಾಡಿರೋ ಕಾರಣ ಕೊರೋನಾ ವೈರಸ್ ಸಂಖ್ಯೆಯೋ ಮೂರ್ನಾಲ್ಕು ಪಟ್ಟು ವೇಗವಾಗಿ ಏರಿಕೆ ಕಾಣುತ್ತಿದೆ.

  • ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

    ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

    ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗ ಸೂಚಿಗಳ ರಚನೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಸಂಜೆ 4:30 ಕ್ಕೆ ಸಭೆ ನಡೆಯಲಿದೆ.

    ಸಭೆಯಲ್ಲಿ ಪ್ರಮುಖ ಕೇಂದ್ರ ಸಚಿವರು ಹಾಗೂ ಸರ್ಕಾರ ರಚಿಸಿರುವ ಟಾಸ್ಕ್ ಫೋರ್ಸ್ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಮೇ 17ರ ಬಳಿಕ ಲಾಕ್‍ಡೌನ್ ವಿಸ್ತರಣೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ನಾಲ್ಕನೇ ಹಂತದಲ್ಲಿ ಎಷ್ಟು ದಿನಗಳ ಲಾಕ್‍ಡೌನ್ ಮಾಡಬೇಕು ಮತ್ತು ವಿನಾಯತಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪ್ರಧಾನಿ ಮೋದಿ ಪಡೆಯಲಿದ್ದಾರೆ.

    ಈಗಾಗಲೇ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸಿಎಂಗಳ ಅಭಿಪ್ರಾಯದ ಜೊತೆಗೆ ತಜ್ಞರು ಮತ್ತು ಟಾಸ್ಕ್ ಫೋರ್ಸ್ ಗಳ ಸಲಹೆ ಆಧಾರಿಸಿ ಅಂತಿಮ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿತ್ತೆ ಎನ್ನಲಾಗಿದೆ.

    ಬಹುತೇಕ ಇಂದಿನ ಸಭೆ ಬಳಿಕ ಎಲ್ಲ ನಿಯಮಗಳು ಅಂತಿಮವಾಗಿ ರೂಪಗೊಳ್ಳಲಿದೆ. ಮೇ 15 ರೊಳಗೆ ಕೇಂದ್ರ ಗೃಹ ಇಲಾಖೆ ಲಾಕ್‍ಡೌನ್ ಆದೇಶ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.