Tag: lock down

  • ಡೌನ್‌ ಡೌನ್‌ ಕ್ಸಿ ಜಿನ್‌ಪಿಂಗ್‌.. ಲಾಕ್‌ಡೌನ್‌ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ

    ಡೌನ್‌ ಡೌನ್‌ ಕ್ಸಿ ಜಿನ್‌ಪಿಂಗ್‌.. ಲಾಕ್‌ಡೌನ್‌ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ

    ಬೀಜಿಂಗ್: ಚೀನಾದಲ್ಲಿ (China) ಕೋವಿಡ್‌ (Covid) ಪ್ರಕರಣಗಳು ಮತ್ತೆ ಉಲ್ಬಣಿಸುತ್ತಿದ್ದು, ಹಲವೆಡೆ ʼಜೀರೋ ಕೋವಿಡ್‌ ನಿಯಮʼ ಜಾರಿಗೊಳಿಸಿ ನಿರ್ಬಂಧ ವಿಧಿಸಲಾಗಿದೆ. ಅಲ್ಲಿನ ಸರ್ಕಾರದ ವಿರುದ್ಧ ಜನ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಮಂದಿ ಸಾವಿಗೀಡಾದ ಘಟನೆಗೆ ಚೀನಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

    ದೇಶದಲ್ಲಿ ಕೋವಿಡ್‌ ಹೆಚ್ಚಳದಿಂದಾಗಿ ಆರ್ಥಿಕ ಕೇಂದ್ರ ಶಾಂಘೈ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದೇ ವೇಳೆ ಕ್ಸಿನ್‌ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿಯಲ್ಲಿನ ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಜನ ಮೃತಪಟ್ಟಿದ್ದರು. ಕಟ್ಟಡವು ಭಾಗಶಃ ಲಾಕ್‌ಡೌನ್ ಆಗಿರುವುದರಿಂದ ನಿವಾಸಿಗಳು ಸಮಯಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಅರಾಜಕತೆ ಸೃಷ್ಟಿಸೋದು ನನಗೆ ಇಷ್ಟವಿಲ್ಲ- ಪ್ರತಿಭಟನಾ ರ‍್ಯಾಲಿ ಕೈಬಿಟ್ಟ ಇಮ್ರಾನ್ ಖಾನ್

    ಚೀನಾದ ಅತ್ಯಂತ ಜನನಿಬಿಡ ನಗರವಾದ ಶಾಂಘೈನಲ್ಲಿ ನಿವಾಸಿಗಳು ಶನಿವಾರ ರಾತ್ರಿ ವುಲುಮುಕಿ ರಸ್ತೆಯಲ್ಲಿ ಜಮಾಯಿಸಿದರು. ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು. ʼಡೌನ್‌ ಕ್ಸಿ ಜಿನ್‌ಪಿಂಗ್‌ʼ (Xi Jinping) ಎಂದು ಆಕ್ರೋಶ ಹೊರಹಾಕಿದರು.

    ʻಲಾಕ್‌ಡೌನ್‌ ತೆರವುಗೊಳಿಸಿ, ಡೌನ್‌ ವಿತ್‌ ಕ್ಸಿ ಜಿನ್‌ಪಿಂಗ್‌, ಡೌನ್‌ ವಿತ್‌ ಕಮ್ಯೂನಿಸ್ಟ್‌ ಪಾರ್ಟಿʼ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೂಚಿಪುಡಿ ನೃತ್ಯ ಪ್ರದರ್ಶಿಸಿದ ಬ್ರಿಟನ್ ಪ್ರಧಾನಿ ಮಗಳು

    Live Tv
    [brid partner=56869869 player=32851 video=960834 autoplay=true]

  • ಏಕಾಂಗಿಯಾಗಿ ಬಾವಿ ತೋಡಿ ನೀರು ತಂದ ಎಂಟೆಕ್ ಪದವೀಧರ

    ಏಕಾಂಗಿಯಾಗಿ ಬಾವಿ ತೋಡಿ ನೀರು ತಂದ ಎಂಟೆಕ್ ಪದವೀಧರ

    ಬೀದರ್: ಕೃಷಿಗಾಗಿ ಸತತ 5 ತಿಂಗಳಿನಿಂದ ಏಕಾಂಗಿಯಾಗಿ ಬಾವಿ ತೋಡಿದ ಎಂಟೆಕ್ ಪದವೀಧರರೊಬ್ಬರು ನೀರು ತಂದು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.

    ಜಿಲ್ಲೆಯ ಔರಾದ್ ತಾಲೂಕಿನ ಸೂರ್ಯಕಾಂತ್ ಪ್ರಭು ಎಂಟೆಕ್ ಓದಿದ್ದಾರೆ. 25/30 ವಿಸ್ತೀರ್ಣದ 14 ಅಡಿ ಬಾವಿಯನ್ನು ಬಬ್ಬರೇ ತೋಡಿ ನೀರು ತೆಗೆದಿದ್ದಾರೆ. ಎಂಟೆಕ್ ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯಕಾಂತ್ ಲಾಕ್‍ಡೌನ್ ವೇಳೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?

    ಮೊದ ಮೊದಲು ಈ ಪದವೀಧರನ ಈ ಸಾಹಸ ನೋಡಿ ಗ್ರಾಮಸ್ಥರು ಹುಚ್ಚು ಎನ್ನುತ್ತಿದ್ದರು. ಈಗ ಅದೇ ಗ್ರಾಮಸ್ಥರು ಅವರ ಬಾವಿಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಬಾವಿ ನೀರಿನಿಂದ 400 ಗಡಿಗಳನ್ನು ಬೆಳಸಿರುವ ಸೂರ್ಯಕಾಂತ್ ಛಲಕ್ಕೆ ಜಿಲ್ಲೆಯ ಜನರು ಜೈಕಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ತಮ್ಮ ಸಾಧನೆ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸೂರ್ಯಕಾಂತ್‍ರವರು, ಮೊದಲು ಎಲ್ಲರು ಹುಚ್ಚ ಎಂದು ಕರೆಯುತ್ತಿದ್ದರು. ಈಗ ಅದೇ ಗ್ರಾಮಸ್ಥರು ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದು ನನಗೆ ಬಹಳ ಖುಷಿಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

  • ಜನರನ್ನು ಮನೆಗಳಿಂದ ಹೊರಬಾರದಂತೆ ತಡೆಯುವುದಷ್ಟೇ ಲಾಕ್‍ಡೌನ್‍ನ ಉದ್ದೇಶವಾಗ್ಬಾರ್ದು: ಹೆಚ್‍ಡಿಕೆ

    ಜನರನ್ನು ಮನೆಗಳಿಂದ ಹೊರಬಾರದಂತೆ ತಡೆಯುವುದಷ್ಟೇ ಲಾಕ್‍ಡೌನ್‍ನ ಉದ್ದೇಶವಾಗ್ಬಾರ್ದು: ಹೆಚ್‍ಡಿಕೆ

    – ಲಾಕ್‍ಡೌನ್ ವಿಸ್ತರಣೆ ಮಾಡಿದರೆ ಜನರಿಗೆ ಪ್ಯಾಕೆಜ್ ಘೋಷಿಸಿ

    ಬೆಂಗಳೂರು: ಜನರನ್ನು ಮನೆಗಳಿಂದ ಹೊರಬಾರದಂತೆ ತಡೆಯುವುದಷ್ಟೇ ಈ ಲಾಕ್‍ಡೌನ್‍ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಪರಿಹಾರ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಲಾಕ್ ಡೌನ್ ವಿಸ್ತರಣೆ ಮಾಡಿದರೆ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಸರ್ಕಾರ ಲಾಕ್‍ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದೆ. ಲಾಕ್‍ಡೌನ್ ವಿಸ್ತರಿಸುವುದೇ ಆದರೆ, ಅದು ‘ಜನಹಿತದ ಲಾಕ್‍ಡೌನ್’ ಆಗಿರಲಿ. ಆರ್ಥಿಕ, ಆಹಾರ ಪ್ಯಾಕೇಜ್, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್‍ಡೌನ್‍ನಲ್ಲಿರಲಿ. ಸರ್ವಪಕ್ಷಗಳ ಸಭೆಯಲ್ಲಿ ನಾವು ಸೂಚಿಸಿದ್ದೂ ‘ಜನಹಿತದ ಲಾಕ್‍ಡೌನ್’ ಕಲ್ಪನೆಯೇ ಆಗಿತ್ತು.

    ನೆರೆಯ ರಾಜ್ಯಗಳಲ್ಲಿ ಲಾಕ್‍ಡೌನ್ ಹೇಗಿದೆ, ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಒಂದು ಬಾರಿ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್‍ಡೌನ್‍ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಪರಿಹಾರ ಅಗತ್ಯ.

    ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‍ಡೌನ್‍ನ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರ ಜನರ ಕೈಬಿಟ್ಟಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷಿಸಬಾರದು. ಅವರ ಅಗತ್ಯಗಳನ್ನು ಪೂರೈಸುವುದರತ್ತ ರಾಜ್ಯ ಗಮನಹರಿಸಬೇಕು. ಲಾಕ್‍ಡೌನ್‍ನಲ್ಲಿ ಪರಿಹಾರ ಕ್ರಮಗಳು ಇರಬೇಕು.

    ಲಾಕ್‍ಡೌನ್ ಜನರ ಜೀವ ಉಳಿಸುವ ಕ್ರಮ ಹೌದು. ಆದರೆ, ಈ ಲಾಕ್‍ಡೌನ್ ಜನರ ಬದುಕನ್ನು ಹೈರಾಣಾಗಿಸುತ್ತಿದೆ ಎಂಬುದೂ ನಮಗೆಲ್ಲರಿಗೂ ಅರಿವಿಗೆ ಬಂದಿರುವ ವಿಚಾರ. ಹೀಗಾಗಿಯೇ ನಾವು ಸೂಚಿಸುತ್ತಿರುವ ಜನಹಿತದ ಲಾಕ್‍ಡೌನ್ ಮಾಡುವುದರತ್ತ ಸರ್ಕಾರ ಆದ್ಯತೆ ನೀಡಬೇಕು. ಜನರ ಜೀವ ಉಳಿಸುತ್ತಲೇ, ಜೀವನಕ್ಕೂ ನೆರವಾಗುವುದು ಜನಪರ ಸರ್ಕಾರವೊಂದರ ಕರ್ತವ್ಯ ಎಂದು ಹೆಚ್‍ಡಿಕೆ ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

  • ಲಾಕ್‍ಡೌನ್ ಉಲ್ಲಂಘಿಸಿ ರೋಡಿಗಿಳಿದು ಕಿರಿಕ್- ಪೊಲೀಸರು ಬೈಕ್, ಕಾರು ತಡೆದಿದ್ದಕ್ಕೆ ಅವಾಜ್

    ಲಾಕ್‍ಡೌನ್ ಉಲ್ಲಂಘಿಸಿ ರೋಡಿಗಿಳಿದು ಕಿರಿಕ್- ಪೊಲೀಸರು ಬೈಕ್, ಕಾರು ತಡೆದಿದ್ದಕ್ಕೆ ಅವಾಜ್

    ಬೆಂಗಳೂರು: ಲಾಕ್‍ಡೌನ್ ಇದೆ ರಸ್ತೆಗೆ ಬರ್ಬೇಡಿ ಅಂದ್ರೆ ಜನ ಕೇಳಲ್ಲ.. ರೋಡಿಗೆ ಬರೋದು ಮಾತ್ರವಲ್ಲದೇ ಒಂದಷ್ಟು ಕಿರಿಕ್‍ಗಳನ್ನು ಮಾಡ್ತಾರೆ. ಅವಾಜ್ ಕೂಡ ಹಾಕ್ತಾರೆ. ಇಂತಹ ಕೆಲ ಕಿರಿಕ್ ಪಾರ್ಟಿಗಳ ಕಥೆ ಇಲ್ಲಿದೆ.

    ಲಾಕ್‍ಡೌನ್ ರೂಲ್ಸ್ ಮಾಡಿರೋದೇ ಕೊರೊನಾದಿಂದ ಬಚಾವ್ ಆಗಲಿ ಅಂತಾ. ಆದರೆ ಕೆಲವರಿಗೆ ಈ ರೂಲ್ಸ್‍ನ್ನು ಉಲ್ಲಂಘಿಸಿದ್ರೇನೇ ಸಮಾಧಾನ ಅನಿಸತ್ತೆ. 10 ಗಂಟೆ ನಂತ್ರ ರೋಡಿಗೆ ಇಳಿಬೇಡಿ ಅಂದ್ರೆ ಇಳಿದ್ರೇ ಏನಾಗುತ್ತೆ ಅಂತಾನೇ ಕೇಳೋ ದುರಂಕಾರ ಕೆಲವರದ್ದು. ನೋಡಿ ಇದು ಯಾದಗಿರಿಯಲ್ಲಿ ನಡೆದ ಘಟನೆ. ಇಲ್ಲಿನ ಸುಭಾಷ್ ವೃತ್ತದಲ್ಲಿ ಈ ದಂಪತಿ ಮಾಸ್ಕ್ ಹಾಕದೇ ಸ್ಕೂಟಿಯಲ್ಲಿ ರೌಂಡ್ ಹೊಡೀತಿದ್ರು. ಪೊಲೀಸರು ಹಿಡಿದು ಕೇಳಿದ್ರೆ, ನಮ್ಮನ್ನಾ ಯಾಕೆ ಹಿಡಿತೀರಿ.. ದೇಶ ಲೂಟಿ ಮಾಡೋರನ್ನಾ ಹಿಡಿಯಿರಿ.. ಮಾಸ್ಕ್ ಹಾಕಿದ್ರೆ ಮೂಗೂ ನೋವು ಆಗುತ್ತೆ ಅಂತಾರೆ. ಪೊಲೀಸರು ಕೇಳಿದ್ರೆ ನಾನು ಗರ್ಭಿಣಿ, ಸ್ಕೂಲ್ ಟೀಚರ್, ಇನ್ನೊಂದು ಸಲ ಸ್ಟೂಡೆಂಟ್ ಅಂತೆಲ್ಲಾ ಹೈಡ್ರಾಮಾ ಕೂಡ ಮಾಡಿದ್ದಾಳೆ.

    ಚಿತ್ರದುರ್ಗದ ಮಹಿಳೆಯೊಬ್ಬರು ಗಾಂಧಿಸರ್ಕಲ್ ಬಳಿ ಬೆಳಗ್ಗೆ ವಾಹನದಲ್ಲಿ ರಸ್ತೆಗಿಳಿದಿದ್ರು. ಕೇಳಿದ್ರೆ ಪೊಲೀಸರಿಗೇ ಕಾನೂನಿನ ಪಾಠ ಮಾಡಿದ್ದಾರೆ. 10 ಗಂಟೆಯತನಕ ಓಡೋಡೋಕೆ ಸಮಯ ಇಲ್ವಾ…? ನಿಮ್ಗೆಲ್ಲಾ ದಿನಕ್ಕೆ 20 ಸಲ ಐಡಿ ಕಾರ್ಡ್ ತೋರಿಸ್ಕೊಂಡು ನಿಲ್ಲಬೇಕಾ ಅಂತ ಸಿಡಿಮಿಡಿ ಆಗಿದ್ದಾರೆ. ಬೆಂಗಳೂರಿನ ಶ್ರೀನಗರದಲ್ಲಿ ಹೆಲ್ಮೆಟ್ ಹಾಕದ್ದನ್ನ ಪ್ರಶ್ನಿಸಿದಕ್ಕೆ ಬೈಕ್ ಸವಾರ ಪೊಲೀಸರ ಜೊತೆಗೆ ಕಿರಿಕ್ ಮಾಡ್ಕೊಂಡಿದ್ದಾನೆ. ‘ನಾನು ಆಸ್ಪತ್ರೆಗೆ ಹೋಗ್ತಿದ್ದೀನಿ… ಯಾಕೆ ಫೋಟೋ ತೆಗೆಯುತ್ತಿರಿ.. ಅರ್ಜೆಂಟ್ ಇದೆ… ಹೋಗ್ತಾ ಇದ್ದೀನಿ ಅಷ್ಟೇ ಅಂತಾ ಅಬ್ಬರಿಸಿದ್ದಾನೆ.

    ಬೆಂಗಳೂರಿನ ಮೈಸೂರು ರಸ್ತೆಯ ನೈಸ್‍ರೋಡ್ ಜಂಕ್ಷನ್ ಬಳಿ ಕುಟುಂಬಸ್ಥರು ಪೊಲೀಸರ ಕೈಗೆ ತಗ್ಲಾಕೊಂಡಿದ್ದರು. ಆಟೋದಲ್ಲಿ ಬಂದವರನ್ನು ತಡೆದಾಗ ಮದುವೆ ಕಾರ್ಡ್ ಕೊಡೋಕೆ ಹೋಗ್ತಿದ್ದೀವಿ.. ಬಿಟ್ಬಿಡಿ ಸರ್ ಅಂತಾ ಗೋಗರೆದ್ರು. ಆದರೆ ಇದಕ್ಕೆ ಒಪ್ಪದ ಪೊಲೀಸರು ಯಾವುದೇ ಕಾರಣಕ್ಕೂ ಹೊರಗಡೆ ಬಿಡಲ್ಲ ಅಂತಾ ವಾಪಸ್ ಕಳಿಸಿದರು. ಮಂಗಳೂರಿನ ಅಡ್ಯಾರು ಬಳಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಮದುವೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿವರೆಗೂ ಕುಣಿದು ಕುಪ್ಪಳಿಸಿದ್ದಾರೆ.

    ಬೆಳಗಾವಿಯಲ್ಲಿ ಲಾಕ್‍ಡೌನ್‍ನ್ನೇ ಖದೀಮರು ಬಂಡವಾಳ ಮಾಡಿಕೊಂಡಿದ್ದಾರೆ. ಕಾರ್ಖಾನೆಗಳು, ಹಣಕಾಸು ಸಂಸ್ಥೆಗಳು, ಕೋ-ಆಪರೇಟಿವ್ ಸೊಸೈಟಿ, ಕ್ಯಾಟರಿಂಗ್ ಹೆಸರಲ್ಲಿ ನಕಲಿ ಐಡಿ ಕಾರ್ಡ್ ತಯಾರಿಸ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ ರೂಲ್ಸ್ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೊಲೀಸರು ಮೊಣಕೈ ಮತ್ತು ಬೆರಳ ಮೇಲೆ ನಡೆಸಿದ್ದಾರೆ.

  • ಪ್ರಕರಣಗಳ ಸಂಖ್ಯೆ ಮುಂದುವರಿದ್ರೆ ವ್ಯವಸ್ಥೆಯನ್ನು ಕಠಿಣಗೊಳಿಸಬೇಕಾಗ್ತದೆ: ಕೋಟಾ

    ಪ್ರಕರಣಗಳ ಸಂಖ್ಯೆ ಮುಂದುವರಿದ್ರೆ ವ್ಯವಸ್ಥೆಯನ್ನು ಕಠಿಣಗೊಳಿಸಬೇಕಾಗ್ತದೆ: ಕೋಟಾ

    ಉಡುಪಿ: ಇದೇ ರೀತಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಾ ಹೋದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆ. ಲಾಕ್‍ಡೌನ್ ಯಶಸ್ವಿಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡ್ತಿದ್ದೇವೆ. ಎಲ್ಲಾ ಶಾಸಕರು ಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಕರಣಗಳ ಸಂಖ್ಯೆ ಮುಂದುವರಿದರೆ ವ್ಯವಸ್ಥೆಯನ್ನು ಕಠಿಣ ಗಳಿಸಬೇಕಾಗುತ್ತದೆ. ಹಾಗೆ ಆಗದಿರಲಿ ಅನ್ನೋದು ನಮ್ಮ ಆಶಯ ಎಂದರು.

    ಕೊರೊನಾ ನಿಯಂತ್ರಣಕ್ಕೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಲಾಕ್ ಡೌನ್ ಪಾಲನೆ ಕುರಿತು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಸಮಯ ನಿಗದಿ, ಅಧಿಕಾರಿಗಳ ಬಳಕೆ, ಪಾಸಿಟಿವ್ ರೋಗಿಗಳ ಆಸ್ಪತ್ರೆ ಸೇರ್ಪಡೆ ಗೆ ಸೂಚನೆ ನೀಡಿದ್ದಾರೆ. ಜನತೆ ಮನೆಯೊಳಗೆ ಇದ್ದುಕೊಂಡೇ ಕಫ್ರ್ಯೂ ಪಾಲಿಸಿ ಎಂದು ಮನವಿ ಮಾಡಿಕೊಂಡರು.

    ಅಗತ್ಯ ವಸ್ತು ಖರೀದಿಗೆ 10 ಗಂಟೆಯವರೆಗೆ ಮಾತ್ರ ಸಮಯವಕಾಶ ಇದೆ. ಜನ ಹತ್ತು ಗಂಟೆಯ ನಂತರ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಹತ್ತು ಗಂಟೆಯ ನಂತರ ಓಡಾಟ ಸರಿಯಲ್ಲ. ತಜ್ಞರು ಈ ಬಗ್ಗೆ ಸರಕಾರಕ್ಕೆ ಸಲಹೆ ನೀಡಿದ್ದಾರೆ . ಸಮಯ ಸೀಮಿತಗೊಳಿಸುವ ಬಗ್ಗೆ ಸಿಎಂ ಮತ್ತು ಆರೋಗ್ಯ ಮಂತ್ರಿ ಜೊತೆ ಮಾತನಾಡುವೆ ಎಂದು ತಿಳಿಸಿದರು.

    ಪಾಸಿಟಿವ್ ಬಂದ ವ್ಯಕ್ತಿಗೆ ಅಗತ್ಯವಿದ್ದರೆ ಆಸ್ಪತ್ರೆಗೆ ಕಳುಹಿಸುತ್ತೇವೆ. ಮನೆಯಲ್ಲಿ ವ್ಯವಸ್ಥೆ ಇಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ತೇವೆ. ಜನರ ಓಡಾಟ ಹೆಚ್ಚಾದರೆ ಕೊರೋನ ನಿಯಂತ್ರಣ ಸಾಧ್ಯವಿಲ್ಲ. 10 ಗಂಟೆಯ ಒಳಗಾಗಿ ಜನರು ಮನೆ ಸೇರಬೇಕು. ಮನೆಯೊಳಗಿದ್ದುಕೊಂಡೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಚಿವರು ನುಡಿದರು.

  • ದೇಶದಲ್ಲಿ ಕಂಪ್ಲಿಟ್ ಲಾಕ್‍ಡೌನ್‍ಗೆ ಒಪ್ಪದ ಕೇಂದ್ರ – ರಾಜ್ಯಗಳಿಗೆ ಲಾಕ್‍ಡೌನ್ ಅಧಿಕಾರ ಕೊಟ್ಟ ಪ್ರಧಾನಿ

    ದೇಶದಲ್ಲಿ ಕಂಪ್ಲಿಟ್ ಲಾಕ್‍ಡೌನ್‍ಗೆ ಒಪ್ಪದ ಕೇಂದ್ರ – ರಾಜ್ಯಗಳಿಗೆ ಲಾಕ್‍ಡೌನ್ ಅಧಿಕಾರ ಕೊಟ್ಟ ಪ್ರಧಾನಿ

    – 2 ತಿಂಗಳು 5 ಕೆಜಿ ಉಚಿತ ಪಡಿತರ ಘೋಷಣೆ

    ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟಕ್ಕೆ ಬ್ರೇಕ್ ಹಾಕಲು ಸೋಂಕು ತಜ್ಞರಿಂದ ಹಿಡಿದು ಸುಪ್ರೀಂಕೋರ್ಟ್‍ವರೆಗೂ ಲಾಕ್‍ಡೌನ್ ಒಂದೇ ಮಾರ್ಗ ಎಂದು ಹೇಳ್ತಿದ್ದಾರೆ.

    ಲಾಕ್‍ಡೌನ್ ವಿಧಿಸಿದ್ರೂ, ವಿಧಿಸದಿದ್ರೂ ಆರ್ಥಿಕ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಇಂದಿನ ಮೋದಿ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಸುದ್ದಿ ಹರಡಿತ್ತು. ಆದರೆ ಮೋದಿ ಸರ್ಕಾರ ಇಡೀ ದೇಶದಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಮನಸ್ಸು ಮಾಡಿಲ್ಲ. ಕಾದು ನೊಡುವ ತಂತ್ರಕ್ಕೆ ಶರಣಾಗಿದೆ.

    ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ಸದ್ಯದ ಮಟ್ಟಿಗೆ ರಾಜ್ಯಗಳಿಗೆ ಲಾಕ್‍ಡೌನ್ ನಿರ್ಣಯಾಧಿಕಾರವನ್ನು ಮೋದಿ ಸರ್ಕಾರ ನೀಡಿದೆ. ಕೊರೊನಾ ಸಂಕಷ್ಟದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೆಚ್ಚುವರಿಯಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರಿಂದ 80 ಕೋಟಿ ಭಾರತೀಯರಿಗೆ ಅನುಕೂಲವಾಗಲಿದೆ.

    ಸ್ಥಳೀಯವಾಗಿ ಜಾರಿ ಆಗ್ತಿರುವ ಲಾಕ್‍ಡೌನ್ ಪರಿಸ್ಥಿತಿ, ಮಳೆ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಎರಡು ತಿಂಗಳು ಉಚಿತ ಆಹಾರ ಧಾನ್ಯ ನೀಡಲು ಕೇಂದ್ರ ತೀರ್ಮಾನಿಸಿದೆ.

  • ಅಕ್ಕಿ ಕೇಳಿದ್ದಕ್ಕೆ ಸಾಯೋರು ಸಾಯ್ಲಿ ಅಂದ ಸಚಿವ ಉಮೇಶ್ ಕತ್ತಿ

    ಅಕ್ಕಿ ಕೇಳಿದ್ದಕ್ಕೆ ಸಾಯೋರು ಸಾಯ್ಲಿ ಅಂದ ಸಚಿವ ಉಮೇಶ್ ಕತ್ತಿ

    ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವಾಗಿದೆ. ಆದರೆ ಇತ್ತ ಆಹಾರ ಸಚಿವ ಉಮೇಶ್ ಕತ್ತಿ ಉಡಾಫೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಹೌದು. ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ.

    ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್‍ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.

    ಫೋನು ಸಂಭಾಷಣೆ ಹೀಗಿದೆ:
    ಈಶ್ವರ್: 2 ಕೆಜೆ ಅಕ್ಕಿ ಮಾಡಿದ್ದೀರಾ ಸಾಲುತ್ತಾ..?
    ಉಮೇಶ್ ಕತ್ತಿ: 3 ಕೆಜಿ ರಾಗಿ ಮಾಡಿತ್ತೀವಿ..
    ಈಶ್ವರ್: ಉತ್ತರ ಕರ್ನಾಟಕ ಜನ ರಾಗಿ ತಿನ್ನುತ್ತಾರಾ..?
    ಮಂತ್ರಿ: 2 ಕೆಜಿ ಜೋಳ ಮಾಡಿದ್ದೀವಿ
    ಜನ: ತಿಂಗಳಿಗೆ 2ಕೆ.ಜಿ ಸಾಲುತ್ತಾ ಸರ್
    ಮಂತ್ರಿ: ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ


    ಜನ: ಯಾವಾಗ ಕೊಡುತ್ತೀರಾ..?
    ಮಂತ್ರಿ: ಬರುವ ತಿಂಗಳು ಮೇ ನಲ್ಲಿ ನೀಡುತ್ತೇವೆ
    ಜನ: ಬರುವ ತಿಂಗಳು ಕೊಡುತ್ತೀರಾ..? ಅಲ್ಲಿಯವರೆಗೆ ಉಪವಾಸ ಇರುದಾ ಅಥವಾ ಸತ್ತುಹೋಗುದಾ..?
    ಮಂತ್ರಿ: ಸತ್ತುಹೋಗುವುದು ಒಳ್ಳೆದು. ಅದಕ್ಕಿಂತ ಫೋನ್ ಮಾಡುವುದು ಬಿಡಿ.
    ಜನ: ಸರ್, ನೀವು ಮಂತ್ರಿಗಳು ಜನಕ್ಕೆ ಉತ್ತರಿಸಬೇಕಾದವರು ನೀವು.

  • ಒಂದೇ ಗ್ರಾಮದ 24 ಮಂದಿಗೆ ಕೊರೊನಾ – ಗ್ರಾಮಸ್ಥರಿಂದಲೇ ಸೆಲ್ಫ್ ಲಾಕ್ ಡೌನ್

    ಒಂದೇ ಗ್ರಾಮದ 24 ಮಂದಿಗೆ ಕೊರೊನಾ – ಗ್ರಾಮಸ್ಥರಿಂದಲೇ ಸೆಲ್ಫ್ ಲಾಕ್ ಡೌನ್

    ಚಿಕ್ಕಬಳ್ಳಾಪುರ: ಕೊರೊನಾ ಕಡಿವಾಣಕ್ಕೆ ಲಾಕ್‍ಡೌನ್ ಮಾಡ್ಬೇಕಾ ಬೇಡ್ವಾ ಅಂತ ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ ಪಾಳ್ಯ ಗ್ರಾಮದಲ್ಲಿ ಈಗಾಗಲೇ ಜನರೇ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ.

    ಹೌದು. ಡಿ ಪಾಳ್ಯ ಗ್ರಾಮದಲ್ಲಿ 24 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಗ್ರಾಮಪಂಚಾಯ್ತಿ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸ್ವಯಂ ನಿರ್ಣಯ ಕೈಗೊಂಡ ಗ್ರಾಮಸ್ಥರು ಲಾಕ್‍ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಹಾಗೂ ಕೆಲಸಗಳಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಸಮಯ ನಿಗದಿ ಮಾಡಿಕೊಂಡಿದ್ದಾರೆ.

    ಉಳಿದ ಸಮಯ ಗ್ರಾಮದಲ್ಲಿ ಅನಗತ್ಯವಾಗಿ ಯಾರೂ ಒಡಾಡುವಂತಿಲ್ಲ ಸುಖಾಸುಮ್ಮನೆ ಗುಂಪು ಸೇರುವಂತಿಲ್ಲ. ಗುಂಪು ಸೇರೋದು, ಅನಗತ್ಯವಾಗಿ ಒಡಾಟ ಸೇರಿ ಮಾಸ್ಕ್ ಇಲ್ಲದೆ ಹೊರಬಂದವರಿಗೆ ಗ್ರಾಮಪಂಚಾಯ್ತಿ ಅಧಿಕಾರಿಗಳು ದಂಡ ವಿಧಿಸುವ ಕೆಲಸ ಸಹ ಮಾಡ್ತಿದ್ದಾರೆ. ಅಂದಹಾಗೆ ಈ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಬಾಬಾ ಮೂರ್ತಿಯನ್ನ ರಾಜಸ್ಥಾನದಲ್ಲಿ ಕೆತ್ತನೆ ಮಾಡಲಾಗುತ್ತಿದೆ.

    ಸಾಯಿಬಾಬಾ ವಿಗ್ರಹ ನೋಡಿಕೊಂಡು ಬರಲು ಗ್ರಾಮದ 45 ಮಂದಿ ರಾಜಸ್ಥಾನದ ಜೈಪುರಕ್ಕೆ ಹೋಗಿ ಬಂದಿದ್ರು. ಇವರು ಕೋವಿಡ್ ಟೆಸ್ಟ್ ಗೆ ಒಳಪಟ್ಟಾಗ 34 ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇವರಲ್ಲಿ 60 ಹಾಗೂ 61 ವರ್ಷದ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೋಂಕಿತರ ಮನೆಗಳನ್ನ ಸಂಪೂರ್ಣ ಲಾಕ್‍ಡೌನ್ ಮಾಡಿ ಸಂಬಂಧಿಕರನ್ನ ಹೋಂ ಕ್ವಾರಂಟೈನ್ ಮಾಡಿ ಅಗತ್ಯ ವಸ್ತುಗಳನ್ನ ಅವರ ಮನೆಗಳಿಗೆ ಸರಬರಾಜು ಮಾಡಲಾಗ್ತಿದೆ ಅಂತ ಡಿ ಪಾಳ್ಯ ಗ್ರಾಮ ಪಂಚಾಯ್ತಿ ಪಿಡಿಓ ಪಬ್ಲಿಕ್ ಟಿವಿಗೆ ತಿಳಿಸಿದರು.

    ಡಿ ಪಾಳ್ಯ ಹೋಬಳಿ ಕೇಂದ್ರವಾಗಿದ್ದು ಡಿ ಪಾಳ್ಯ ಗ್ರಾಮದಲ್ಲಿ 1000ಕ್ಕೂ ಹೆಚ್ಚು ಮನೆ 7,000 ಮಂದಿ ಜನ ಸಂಖ್ಯೆ ಇದೆ. ಕೊರೊನಾ ಸೋಂಕಿತರ ಸಂಖ್ಯೆ ಸಂಪೂರ್ಣ ಸೊನ್ನೆ ಆದ ನಂತರ ಪುನಃ ಮನೆ ಮಬೆ ಸರ್ವೆ ನಡೆಸಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮತ್ತೆ ನಿರ್ಣಯ ಮಾಡಿ ಲಾಕ್ ಡೌನ್ ತೆರವುಗೊಳಿಸಲಾಗುವುದು ಅಂತ ಪಿಡಿಒ ವಿಜಯಲಕ್ಷ್ಮೀ ತಿಳಿಸಿದರು.

  • ಬೆಂಗಳೂರಲ್ಲಿ ಲಾಕ್‍ಡೌನ್ ಮಾಡಿ – ತಜ್ಞರ ಜೊತೆ ತುರ್ತು ಸಭೆಯಲ್ಲಿ ಏನಾಯ್ತು? ಆತಂಕ ಏನು? ಸಲಹೆ ಏನು?

    ಬೆಂಗಳೂರಲ್ಲಿ ಲಾಕ್‍ಡೌನ್ ಮಾಡಿ – ತಜ್ಞರ ಜೊತೆ ತುರ್ತು ಸಭೆಯಲ್ಲಿ ಏನಾಯ್ತು? ಆತಂಕ ಏನು? ಸಲಹೆ ಏನು?

    ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಜಾರಿಯಾಗುತ್ತಾ? ಈಗ ಈ ಮಾತು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಎರಡನೇ ಅಲೆಯಾಗಿ ಕಾಡುತ್ತಿರುವ ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಹೇರಿದ್ದರೂ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಹೀಗಾಗಿ ಮತ್ತೆ ಲಾಕ್‍ಡೌನೇ ಪ್ರಬಲವಾದ ಅಸ್ತ್ರ ಎನ್ನುವ ಮಾತು ಕೇಳಿ ಬರುತ್ತಿದೆ.

    ಈ ಸಂಬಂಧ ಇಂದು ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯರ ಜೊತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತುರ್ತು ಸಭೆ ನಡೆಸಿದರು. ಈ ವೇಳೆ, ತಜ್ಞರು ನೈಟ್ ಕರ್ಫ್ಯೂ ವಿನಾಯ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬೆಂಗಳೂರಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಲಾಕ್‍ಡೌನ್ ಬಗ್ಗೆ ಪ್ರಸ್ತಾಪಿಸಿದ್ದಾಗಿಯೂ ತಿಳಿದು ಬಂದಿದೆ.

    ಲಾಕ್‍ಡೌನ್ ಪ್ರಸ್ತಾಪಕ್ಕೆ ಸುಧಾಕರ್ ಒಪ್ಪಿಗೆ ನೀಡಿಲ್ಲ. ಆದಾಗ್ಯೂ, ಸಮಗ್ರ ವರದಿಯನ್ನು ನೀಡಿ. ಮುಖ್ಯಮಂತ್ರಿಗಳ ಜೊತೆ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಸೂಚಿಸಿದ್ದಾರೆ. ಆದರೆ ಲಾಕ್‍ಡೌನ್ ಸಾಧ್ಯತೆಯನ್ನು ಸುಧಾಕರ್ ಎಲ್ಲಿಯೂ ತಳ್ಳಿ ಹಾಕಿಲ್ಲ. ಹಾಗಾಗಿ ಲಾಕ್‍ಡೌನ್ ಭವಿಷ್ಯ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅಂಗಳದಲ್ಲಿದೆ. ಮುಖ್ಯಮಂತ್ರಿಗಳು ಈಗಾಗಲೇ ಲಾಕ್‍ಡೌನ್ ಮಾತಿಲ್ಲ ಅಂತಲೇ ಹೇಳುತ್ತಿದ್ದಾರೆ. ಆದರೆ ಈಗ ಹಿಂದಿನಂತೆ ಕೇಸ್‍ಗಳ ಸಂಖ್ಯೆ ಕಡಿಮೆ ಇಲ್ಲ. ದಿನದಿಂದ ದಿನಕ್ಕೇ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್‍ವೈ ಮನಸು ಬದಲಿಸ್ತಾರಾ ಎಂಬ ಪ್ರಶ್ನೆಗೆ ಮಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ತಜ್ಞರ ಸಲಹೆ ಏನು?
    ಬೆಂಗಳೂರಿನಲ್ಲಿ ಸೋಂಕು ಭಾರೀ ಏರಿಕೆ ಆಗುತ್ತಿದ್ದು 10 ದಿನ ಲಾಕ್‍ಡೌನ್ ಮಾಡಿದರೆ ಈ ಚೈನ್ ನಿಲ್ಲಬಹುದು. ತಿಂಗಳವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕು. ಈಗ ಇರುವ ಜಿಲ್ಲೆ ಅಲ್ಲದೇ ಬೆಂಗಳೂರು ಗ್ರಾಮಾಂತರ, ಹಾಸನ, ಬೆಳಗಾವಿ, ಬಳ್ಳಾರಿ, ಮಂಡ್ಯ, ಧಾರವಾಡ ಜಿಲ್ಲೆಗಳಿಗೆ ಕೊರೋನಾ ಕರ್ಫ್ಯೂ ವಿಸ್ತರಣೆ ಮಾಡುವುದು ಉತ್ತಮ. ಲಾಕ್‍ಡೌನ್ ಆಗದಿದ್ದರೆ ವೀಕೆಂಡ್ ಲಾಕ್‍ಡೌನ್ ಆದರೂ ಮಾಡಬೇಕು. 144 ಸೆಕ್ಷನ್ ಪರಿಣಾಮಕಾರಿಯಾಗಿ ಜಾರಿ ಮಾಡಿ ಗುಂಪು ಸೇರುವ ಸ್ಥಳಗಳ ಗುರುತು ಮಾಡಿ ಕ್ರಮ ಕೈಗೊಳ್ಳಬೇಕು.

    ತಜ್ಞರ ಆತಂಕ ಏನು?
    ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗ್ತಿರೋದಕ್ಕೆ ತಾಂತ್ರಿಕ ಸಲಹಾ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಮೇನಲ್ಲಿ ಕೊರೋನಾ ಉತ್ತುಂಗ ಸ್ಥಿತಿ ತಲುಪುತ್ತದೆ. ಮುಂದಿನ 2-3 ವಾರ ಮತ್ತಷ್ಟು ಎಚ್ಚರಿಕೆ ಅಗತ್ಯವಾಗಿದೆ. ಮೇ 15ರ ಹೊತ್ತಿಗೆ ಬೆಂಗಳೂರಿನಲ್ಲಿ ನಿತ್ಯ 15 ಸಾವಿರ ಕೇಸ್ ದಾಖಲಾಗಬಹುದು. 2ನೇ ಅಲೆ 80 ರಿಂದ 120 ದಿನ ಇರುತ್ತದೆ. ಹೀಗಾಗಿ ಅಂಬುಲೆನ್ಸ್, ಬೆಡ್ ಕೊರತೆ ಕಾಡಬಹುದು.

    ತಜ್ಞರು ಕೊಟ್ಟ ಪರಿಹಾರಗಳು?
    – ಕಠಿಣ ನಿಯಮಗಳನ್ನು ಕೂಡಲೇ ಜಾರಿಗೆ ತನ್ನಿ
    – ಜನ ಗುಂಪು ಸೇರೋದನ್ನು ನಿಷೇಧಿಸಿ (ಜಾತ್ರೆ, ಮದುವೆ, ಮಾರ್ಕೆಟ್, ಐಸ್‍ಕ್ರೀಂ ಪಾರ್ಲರ್‌ಗಳಲ್ಲಿ ಬ್ರೇಕ್ ಹಾಕಿ)
    – ಸೆಕ್ಷನ್ 144 ಕಠಿಣವಾಗಿ ಜಾರಿಗೆ ತನ್ನಿ
    – ಸರ್ಕಾರ ಆಸ್ಪತ್ರೆ ವ್ಯವಸ್ಥೆ ಬಲಪಡಿಸಿ
    – ಲಸಿಕೆ ವಿತರಣೆ ಹೆಚ್ಚು ಮಾಡಬೇಕು

  • ಸೆಪ್ಟೆಂಬರ್ 1ರಿಂದ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ

    ಸೆಪ್ಟೆಂಬರ್ 1ರಿಂದ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ

    ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶ ನಿಷೇಧ ಹಾಗೂ ಕೆಲವೊಂದು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸೆಪ್ಟೆಂಬರ್ 1 ರಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.

    ಈ ಮೂಲಕ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನು ಮುಂದೆ ದೇವಸ್ಥಾನಗಳಲ್ಲಿ ಮಾಮೂಲಿ ಪೂಜೆ ನಡೆಯಲಿದೆ. ಅದು ಕೂಡ ಕೊರೊನಾ ಮಾರ್ಗಸೂಚಿ ಅನ್ವಯವೇ ಎಲ್ಲಾ ಸೇವೆಗಳು ಲಭ್ಯವಾಗಲಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೀಗಾಗಿ ಸೆಪ್ಟೆಂಬರ್ 1ರಿಂದಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈಗಿದ್ದ ಸೀಮಿತ ಸೇವೆಗಳ ಜೊತೆಗೆ ಹೆಚ್ಚುವರಿ ಸೇವೆಗಳ ಆರಂಭ ಮಾಡುವ ಸಾಧ್ಯತೆಯೂ ಇದೆ. ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ ಹಾಗೂ ಮುಡಿ ಸೇವೆ ಆರಂಭಕ್ಕೆ ಚಿಂತನೆ ಮಾಡಲಾಗಿದೆ. ಈ ವಿಚಾರವನ್ನು ಮುಜರಾಯಿ ಇಲಾಖೆ ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪ ಮಾಡಿದೆ. ಸರ್ಕಾರ ಒಪ್ಪಿದ್ರೆ ಸದ್ಯದಲ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಒಟ್ಟಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸೇವೆಗಳು ಸ್ಥಗಿತಗೊಂಡಿದ್ದವು. ಅಲ್ಲದೆ ಕೇವಲ ಸೀಮಿತ ಸೇವಗಳಿಗೆ ಮಾತ್ರ ಅವಕಾಶ ಕೊಡಲಾಗಿತ್ತು. ಅನ್ ಲಾಕ್ ಪ್ರಕ್ರಿಯೆ ಜಾರಿ ಆಗುತ್ತಿರುವುದರಿಂದ ಎಲ್ಲಾ ಸೇವೆಗಳಿಗೆ ಅವಕಾಶ ನೀಡಲು ಸಿದ್ಧತೆ ನಡೆಸಲಾಗಿದೆ.