Tag: Local Elections

  • ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ರಾಮನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪನವರ ಬಳಿ ಹೋಗಿದ್ದರು ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.

    ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಾದ ಹಿನ್ನೆಲೆ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಬಳಿ ಹೋಗಿದ್ದರು. ಶಾಸಕ ಎ. ಮಂಜು ಜೊತೆಗೆ ಹೋಗಿ ಬೇಕಾದ ಕ್ಯಾಟಗರಿ ಮಾಡಿಸಿಕೊಂಡರು. 18 ವಾರ್ಡ್ ಗಳಲ್ಲಿ ಅವರು ಮೊದಲೇ ತಯಾರಿ ನಡೆಸಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರು. ಜೊತೆಗೆ ಕುಮಾರಸ್ವಾಮಿಯವರು ಎರಡು ದಿನ ಪ್ರಚಾರ ಕೂಡಾ ನಡೆಸಿದ್ದರು ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಲೋಕಲ್ ಎಲೆಕ್ಷನ್ ಪ್ರಚಾರಕ್ಕಾಗಿ ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಕರೆದಿದ್ದೆ. ಆದರೆ ನಮ್ಮ ನಾಯಕರು ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದರು. ಈ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು, ಆಡಳಿತವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ಎಂದು ನುಡಿದರು.

    ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಇಲ್ಲ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಇದ್ದಾರೆ ಅಷ್ಟೇ. ಆದರೆ ಈ ಪುರಸಭೆ ಚುನಾವಣೆಯಲ್ಲಿ ಫೇಲ್ ಆಗಿದ್ದಾರೆ. ಸರ್ಕಾರ ಇದ್ದಾಗ ಒಂದೆರಡು ಸ್ಥಾನವನ್ನಾದರೂ ಗೆಲ್ಲಬೇಕಿತ್ತು. ಆದರೆ ಅವರು ಯಾವ ಸ್ಥಾನಗಳನ್ನೂ ಗೆದ್ದಿಲ್ಲ. ಇನ್ನು ಯೋಗೇಶ್ವರ್ ನ ನಾವು ಕಾಂಗ್ರೆಸ್‍ಗೆ ಕರೆಯಲ್ಲ. ನಾನು ಅಷ್ಟು ದೊಡ್ಡ ನಾಯಕ ಅಲ್ಲ, ಕೆಪಿಸಿಸಿ ಅಧ್ಯಕ್ಷ ಅಲ್ಲ. ಅವರು ಸಹ ನಮ್ಮನ್ನ ಕೇಳಿ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ

    ಅವರದ್ದೇ ಆದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದು ಯಾರೆಂದು ಅವರೇ ಹೇಳಿದ್ದಾರೆ. ವಿಧಾನಸಭೆಯಲ್ಲೇ ಅವರು ಹೇಳಿದ್ದಾರೆ. ಚೆಲುವನಾರಾಯಣಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ನನ್ನನ್ನ ಸಿಎಂ ಮಾಡಿದ್ದು ಎಂದಿದ್ದಾರೆ. ಆದರೆ ಅವರು ಅದನ್ನ ಉಳಿಸಿಕೊಳ್ಳಲಿಲ್ಲ. ಉಳಿಸಿಕೊಂಡಿದ್ದರೆ ಅವರ ಮತ್ತು ರಾಜ್ಯದ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದರು.

  • ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಭಾರೀ ಗೆಲುವು ಕಂಡಿದೆ.

    ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳ ಪೈಕಿ 44 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜಯಭೇರಿ ಬಾರಿಸಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದರೂ ಸಹ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ.

    ಈ ಮೂಲಕ ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದ್ದು, ಕೇವಲ 14 ವಾರ್ಡ್‌ಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ ಭರ್ಜರಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಿದೆ. ಬಹುಮತ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಒಟ್ಟು 60 ವಾರ್ಡ್‍ಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14, ಜೆಡಿಎಸ್ ಶೂನ್ಯ ಹಾಗೂ ಇತರೆ 02 ಸ್ಥಾನಗಳನ್ನು ಪಡೆದುಕೊಂಡಿವೆ.

    ಯಾರ್ಯಾರು ಜಯಗಳಿಸಿದ್ದಾರೆ?
    ಸುರತ್ಕಲ್ (ಪಶ್ಚಿಮ) ಶೋಭಾ ರಾಜೇಶ್(ಬಿಜೆಪಿ), ಸುರತ್ಕಲ್ (ಪೂರ್ವ) ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ(ಪೂರ್ವ) ಲೋಕೇಶ್ ಬೊಳ್ಳಾಜೆ(ಬಿಜೆಪಿ), ಕಾಟಿಪಳ್ಳ(ಕೃಷ್ಣಾಪುರ) ಲಕ್ಷ್ಮಿ ಶೇಖರ್ (ಬಿಜೆಪಿ), ಕಾಟಿಪಳ್ಳ(ಉತ್ತರ) ಶಂಶಾದ್ ಅಬೂಬ್‍ಕ್ಕರ್ (ಎಸ್‍ಡಿಪಿಐ), ಇಡ್ಯಾ(ಪೂರ್ವ) ಸರಿತಾ ಶಶಿಧರ್ (ಬಿಜೆಪಿ), ಇಡ್ಯಾ (ಪಶ್ಚಿಮ) ನಯನ ಆರ್ ಕೋಟ್ಯಾನ್ (ಬಿಜೆಪಿ), ಹೊಸಬೆಟ್ಟು-ವರೂಣ್ ಚೌಟ(ಬಿಜೆಪಿ), ಕುಳಾಯಿ-ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್ (ದಕ್ಷಿಣ) ಸುಮಂಗಲ(ಬಿಜೆಪಿ), ಬೈಕಂಪಾಡಿ-ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್ ಕುಮಾರ್ (ಬಿಜೆಪಿ), ಪಣಂಬೂರು ಸುನಿತಾ(ಬಿಜೆಪಿ), ದೇರೇಬೈಲ್(ಉತ್ತರ) ಮನೋಜ್ ಕುಮಾರ್ (ಬಿಜೆಪಿ).

    ಪಂಜಿಮೊಗರು- ಅನಿಲ್ ಕುಮಾರ್ (ಕಾಂಗ್ರೆಸ್), ಕಾವೂರು ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ) ಶರತ್ ಕುಮಾರ್ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್.ನಾಯಕ್(ಬಿಜೆಪಿ), ಮರಕಡ-ಲೋಹಿತ್ ಅಮಿನ್ (ಬಿಜೆಪಿ), ತಿರುವೈಲ್-ಹೇಮಲತಾ ರಘು ಸಾಲಿಯಾನ್ (ಬಿಜೆಪಿ), ದೇರೆಬೈಲು(ಪಶ್ಚಿಮ) ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು(ಪಶ್ಚಿಮ) ವನಿತಾ ಪ್ರಸಾದ್ (ಬಿಜೆಪಿ), ದೇರೆಬೈಲು(ನೈರುತ್ಯ) ಗಣೇಶ್ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್(ಬಿಜೆಪಿ), ಬೋಳೂರು ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು(ಪೂರ್ವ) ರಂಜನಿ ಕೋಟ್ಯಾನ್(ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ-ಲೀಲಾವತಿ (ಬಿಜೆಪಿ), ದೇರೆಬೈಲು(ದಕ್ಷಿಣ) ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್), ಕೊಡಿಯಾಲ್ ಬೈಲ್- ಸುಧೀರ್ ಶೆಟ್ಟಿ(ಬಿಜೆಪಿ), ಬಜಾರ್-ಅಶ್ರಾಫ್(ಕಾಂಗ್ರೆಸ್), ಬೋಳಾರ್- ಭಾನುಮತಿ(ಬಿಜೆಪಿ), ಜೆಪ್ಪು- ಎಸ್.ಭರತ್ ಕುಮಾರ್ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ(ಬಿಜೆಪಿ).

    ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹ್ಯೂಗೆ ಬಜಾರ್- ರೇವತಿ(ಬಿಜೆಪಿ), ಬಂಗ್ರೆ- ಮುನೀಬ್ ಬಂಗ್ರೆ(ಎಸ್‍ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್(ಕಾಂಗ್ರೆಸ್), ಬಂದರ್- ಝೀನತ್ ಸಂಶುದ್ದೀನ್(ಕಾಂಗ್ರೆಸ್), ಪೋರ್ಟ್- ಅಬ್ದುಲ್ ಲತೀಫ್(ಕಾಂಗ್ರೆಸ್), ಕಂಟೋನ್ಮೆಂಟ್- ದಿವಾಕರ(ಬಿಜೆಪಿ), ಮಿಲಾಗ್ರೀಸ್- ಅಬ್ದುಲ್ ರವೂಫ್(ಕಾಂಗ್ರೆಸ್), ಕಂಕನಾಡಿ ವೆಲೆನ್ಸಿಯಾ- ಸಂದೀಪ್(ಬಿಜೆಪಿ), ಕಂಕನಾಡಿ- ಟಿ.ಪ್ರವೀಣ್ ಚಂದ್ರ ಆಳ್ವಾ(ಕಾಂಗ್ರೆಸ್), ಅಳಪೆ(ಉತ್ತರ) ರೂಪ ಶ್ರೀ ಪೂಜಾರಿ(ಬಿಜೆಪಿ), ಕಣ್ಣೂರು- ಚಂದ್ರಾವತಿ(ಬಿಜೆಪಿ), ಬಿಜೈ- ಪ್ರಶಾಂತ್ ಆಳ್ವ(ಬಿಜೆಪಿ), ಕದ್ರಿ (ಉತ್ತರ) ಶಖಿಲ ಕಾವ(ಬಿಜೆಪಿ), ಕದ್ರಿ(ದಕ್ಷಿಣ) ಕದ್ರಿ ಮನೋಹರ ಶೆಟ್ಟಿ(ಬಿಜೆಪಿ), ಶಿವಭಾಗ್- ಕಾವ್ಯ ನಟರಾಜ ಆಳ್ವ (ಬಿಜೆಪಿ), ಪದವು (ಸೆಂಟ್ರಲ್) ಕಿಶೋರ್ ಕೊಟ್ಟಾರಿ(ಬಿಜೆಪಿ), ಪದವು(ಪೂರ್ವ) ಕೆ.ಭಾಸ್ಕರ್ (ಕಾಂಗ್ರೆಸ್), ಮರೋಳಿ- ಕೇಶವ(ಕಾಂಗ್ರೆಸ್), ಬೆಂದೂರ್- ನವೀನ್ ಆರ್.ಡಿಸೋಜ(ಕಾಂಗ್ರೆಸ್), ಫಳ್ನೀರ್- ಜೆಸಿಂತಾ ವಿಜಯ ಆಲ್ಫ್ರೆಡ್ (ಕಾಂಗ್ರೆಸ್), ಕೋರ್ಟ್- ಎ.ಸಿ.ವಿನಯ ರಾಜ್(ಕಾಂಗ್ರೆಸ್), ಸೆಂಟ್ರಲ್ ಮಾರ್ಕೆಟ್- ಪೂರ್ಣಿಮಾ(ಬಿಜೆಪಿ).

  • ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಶಿವಮೊಗ್ಗ: ಮಹಾನಗರ ಪಾಲಿಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. 35 ವಾರ್ಡ್ ಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಿಂಗ್ ಮೇಕರ್ ಆಗುವ ಆಸೆ ಇಟ್ಟುಕೊಂಡಿದ್ದ ಜೆಡಿಎಸ್ ಗೆ ಕೇವಲ ಎರಡು ಸ್ಥಾನಗಳು ಮಾತ್ರ ದೊರಕಿವೆ. ಪಕ್ಷೇತರರು ಐವರು ಗೆದ್ದಿದ್ದು, ಎಸ್ ಡಿಪಿಐ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಲಿ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ.

    ಸತತವಾಗಿ ಐದು ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಬಿಜೆಪಿಯ ಗನ್ನಿ ಶಂಕರ್ ಎದರು ಸೋತಿದ್ದಾರೆ. ಕಾಂಗ್ರೆಸ್ ನ ನರಸಿಂಹಮೂರ್ತಿ, ಜೆಡಿಎಸ್ ನ ಮಾಜಿ ಮೇಯರ್ ಪತ್ನಿ ಗೀತಾ ಏಳುಮಲೈ, ಮಾಜಿ ಉಪಮೇಯರ್ ಪಾಲಾಕ್ಷಿ ಸೋಲಿನ ರುಚಿ ನೋಡುವಂತಾಗಿದೆ.

    15ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ರಾಜಶೇಖರ್ ಹಾಗೂ ಜೆಡಿಎಸ್ ನ ಸತ್ಯನಾರಾಯಣ ಇಬ್ಬರೂ ಸಮ ಸಮ ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಸತ್ಯನಾರಾಯಣ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

    35 ವಾರ್ಡ್ ಹಾಗೂ ಇಬ್ಬರು ಶಾಸಕರು ಹಾಗೂ ಮೂವರು ವಿಧಾನ ಪರಿಷತ ಸದಸ್ಯರು ಸೇರಿ ಒಟ್ಟು ಸದಸ್ಯರ ಸಂಖ್ಯೆ 40. ಪಾಲಿಕೆ ಅಧಿಕಾರ ಹಿಡಿಯಲು 21 ಸದಸ್ಯರ ಬೆಂಬಲ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದ ಅಭ್ಯರ್ಥಿಗಳು 20 ಜನ ಹಾಗೂ ನಾಲ್ವರು ಶಾಸಕರು ಸೇರಿ ಸದಸ್ಯ ಬಲ 25 ತಲುಪಿದೆ. ಈ ಮೂಲಕ ಬಿಜೆಪಿ ನಿಚ್ಚಳ ಬಹುಮತ ಪಡೆದಿದೆ.

    ಕಾಂಗ್ರೆಸ್ ಹಿನ್ನಡೆಗೆ ಕಾರಣಗಳೇನು?
    ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್ ತಿದ್ದುಕೊಳ್ಳಲಿಲ್ಲ. ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ಹಿರಿಯ ನಾಯಕರು ದಿಟ್ಟ ಹೆಜ್ಜೆ ಇಡಲೇ ಇಲ್ಲ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಶಿ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಇನ್ನಿತರ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ದೊರಕಲಿಲ್ಲ. ಇದು ಒಟ್ಟಾರೆಯಾಗಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಸಿತು. ಇದಲ್ಲದೇ, ಪ್ರಚಾರ ವಿಷಯದಲ್ಲೂ ಕೂಡ ಒಗ್ಗಟ್ಟಾದ ಪ್ರಯತ್ನ ಕಾಂಗ್ರೆಸ್ ನಾಯಕರಲ್ಲಿ ಕಂಡು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್!
    ಕಳೆದ ಬಾರಿ ಕೇವಲ ಐದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಸಹ 8-10 ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುವ ಉಮೇದಿನಲ್ಲಿ ಜೆಡಿಎಸ್ ನಾಯಕರು ಇದ್ದರು. ಆದರೆ, ನಗರದಲ್ಲಿ ಜೆಡಿಎಸ್ ಒಟ್ಟಾರೆಯಾಗಿ ಶಿಥಿಲಗೊಂಡಿದೆ. ಮೂರು ವಾರ್ಡ್ ಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಲಿ ಮೇಯರ್ ಆಗಿದ್ದ ಜೆಡಿಎಸ್ ನಾಗರಾಜ್ ಕಂಕಾರಿ ಹಾಗೂ ಚೀಟಿ ಮೂಲಕ ಆಯ್ಕೆ ಗೊಂಡ ಸತ್ಯನಾರಾಯಣ ಇಬ್ಬರೇ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನುಳಿದ ಕಡೆ ತೆನೆಹೊತ್ತ ಮಹಿಳೆ ಹೀನಾಯ ಸೋಲು ಕಂಡಿದ್ದಾಳೆ.

    ಬಸವನಗುಡಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಹೆಗ್ಡೆ 2246 ಮತಗಳ ಅಂತರ ದಿಂದ ಗೆದ್ದಿದ್ದಾರೆ. ಇದು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ದೊರಕಿರುವ ಅತ್ಯಧಿಕ ಅಂತರ. ಮೆಲ್ಲೇಶ್ವರ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಬಜರಂಗದಳ ಸಂಚಾಲಕ ದೀನದಯಾಳು ಕಾಂಗ್ರೆಸ ಅಭ್ಯರ್ಥಿ ಎದುರು ಸೋತಿದ್ದಾರೆ.

    ಬಿಜೆಪಿ ಗೆದ್ದಿದ್ದು ಹೇಗೆ?
    ಮುಖ್ಯವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದವು. ಇದೇ ಹವಾ ಪಾಲಿಕೆ ಚುನಾವಣೆಯಲ್ಲಿ ಪುನಾರವರ್ತನೆ ಆಗಿದೆ. ಬಿಜೆಪಿಯಲ್ಲಿ ಅತೀ ಹೆಚ್ಚು ಬಂಡಾಯ ಅಭ್ಯರ್ಥಿಗಳೂ ಇದ್ದರು. ಅವರನ್ನು ಮನವೊಲಿಸಿ ಕಣದಿಂದ ನಿವೃತ್ತಿಗೊಳಿಸುವಲ್ಲಿ ಹಿರಿಯ ನಾಯಕರು ಸಫಲರಾಗಿದ್ದರು. ಆದರೂ, ಕಣದಲ್ಲಿ ಇದ್ದ ಬಿಜೆಪಿ ಅಭ್ಯರ್ಥಿಗಳೂ ಗೆಲವು ಸಾಧಿಸಿದ್ದಾರೆ. ಬಿಜೆಪಿ- ಕೆಜೆಪಿ ಭಿನ್ನತೆ ಈ ಚುನಾವಣೆಯಲ್ಲಿ ಕಂಡರೂ ಕೂಡ ಅದು ಗೆಲವಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

    ಮುಖ್ಯವಾಗಿ ಬಿಜೆಪಿಗೆ ಬಲ ತಂದು ಕೊಟ್ಟದ್ದು ಅವರ ನಾಯಕರು ಹೇಳುವ ಪ್ರಕಾರ ಹಿಂದುತ್ವದ ಅಂಶ. ಇದರೊಂದಿಗೆ ನಾಯಕರ ಸಂಘಟಿತ ಪ್ರಯತ್ನ. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ ವಾರ್ಡ್ ಗಳನ್ನು ಹಂಚಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದರು. ಇವುಗಳ ಜೊತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ನಗರದ ಜನತೆಗೆ ಇರುವ ತಿರಸ್ಕಾರ ಮನೋಭಾವ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.

    ಇಷ್ಟೇ ಕಾರಣಗಳೇ?
    ಮೊಟ್ಟ ಮೊದಲ ಬಾರಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆ ಹಲವು ಅಂಶಗಳಿಂದ ಗಮನ ಸೆಳೆಯಿತು. ಮುಖ್ಯವಾಗಿ ಈ ಬಾರಿ ಪಕ್ಷಾತೀತವಾಗಿ ಮತದಾರರನ್ನು ಕೊಳ್ಳುವ ಪ್ರಯತ್ನಗಳು ನಡೆದವು. ಈ ಕಾರಣದಿಂದ ಮತ ಖರೀದಿ ಬಗ್ಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಪಕ್ಷಗಳ ತತ್ವ ಸಿದ್ಧಾಂತದ ಜೊತೆ ಹಣವೂ ಈ ಭಾರಿಯ ಚುನಾವಣೆಯಲ್ಲಿ ಪ್ರಾಮುಖ್ಯಗಳಿಸಿತು. ಹಣವಿಲ್ಲದೆ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವನ್ನು ಚಿವುಟೋದು, ತೊಟ್ಟಿಲು ತೂಗುವ ಎರಡು ಕೆಲಸವನ್ನು ಕುಮಾರಸ್ವಾಮಿ ಮಾಡಿದ್ರು: ಬಿಎಸ್‍ವೈ

    ಮಗುವನ್ನು ಚಿವುಟೋದು, ತೊಟ್ಟಿಲು ತೂಗುವ ಎರಡು ಕೆಲಸವನ್ನು ಕುಮಾರಸ್ವಾಮಿ ಮಾಡಿದ್ರು: ಬಿಎಸ್‍ವೈ

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಕೂಗು ಕೇಳಿಬರಲು ಸಿಎಂ ಕುಮಾರಸ್ವಾಮಿ ಅವರು ಕಾರಣ. ಮಗುವನ್ನು ಚಿವುಟೋದು, ತೊಟ್ಟಿಲು ತೂಗುವ ಎರಡು ಕೆಲಸವನ್ನು ಅವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

    ಉತ್ತರ ಕರ್ನಾಟಕದ ಮುಖಂಡರು ಪ್ರತ್ಯೇಕತೆಗಾಗಿ ಹೋರಾಟಕ್ಕಿಳಿದಿದ್ದರು, ಇಂದು ಹೋರಾಟ ಬಿಟ್ಟು ಸಹಕಾರ ಕೊಟ್ಟಿದ್ದಾರೆ. ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾನು ಬೆಳಗಾವಿಗೆ ಹೋಗಿ ಹೋರಾಟಗಾರರಿಗೆ, ಸ್ವಾಮೀಜಿಗಳಿಗೆ ಮನವಿ ಮಾಡಿ ಬಂದಿದ್ದೆ. ದೇವರ ದಯೆಯಿಂದ ಇಂದು ಯಾರೂ ಹೋರಾಟಕ್ಕಿಳಿಯದೇ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಹೋರಾಟಕ್ಕೆ ಬಿಜೆಪಿ ಕುಮ್ಮಕ್ಕು ಎಂಬ ಕಾಂಗ್ರೆಸ್, ಜೆಡಿಎಸ್ ಆರೋಪಕ್ಕೆ ಕಿಡಿಕಾರಿದ ಬಿಎಸ್‍ವೈ, ಯಾರೋ ತಲೆ ತಿರುಕರು ಮಾತನಾಡಿದ್ದಾರೋ, ಬೆಂಕಿ ಹಚ್ಚಿದರೋ ಅವರಿಗೆ ಈ ರೀತಿ ಹಗುರವಾಗಿ ಮಾತನಾಡುವ ಹಕ್ಕಿಲ್ಲ. ಸಿಎಂ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಹೋರಾಟಗಾರರ ವಿಚಾರದಲ್ಲಿ ಮಾಡಬೇಕಿದ್ದ ಕೆಲಸವನ್ನು ನಾನು ಬೆಳಗಾವಿಗೆ ಹೋಗಿ ಮಾಡಿದ್ದೇನೆ. ಅದ್ದರಿಂದ ಈ ರೀತಿ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರಲ್ಲ. ರಾಜ್ಯದಲ್ಲಿ ಯಾರು ಬೆಂಕಿ ಹಚ್ಚುತ್ತಿದ್ದಾರೆ, ಯಾರು ಶಾಂತಪಡಿಸುತ್ತಿದ್ದಾರೆ ಎಂದು ಜನತೆಗೆ ಅರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಹಿನ್ನೆಲೆ ನಾವು ಎಲ್ಲಾ ಪ್ರಮುಖರ ಜೊತೆ ಸಮಾಲೋಚಿಸಿ ಸಿದ್ಧತೆ ಮಾಡುತ್ತಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಲು ನಮ್ಮ ಎಲ್ಲಾ ಕಾರ್ಯಕರ್ತರು ಸಿದ್ಧರಾಗುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಬಗ್ಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.