Tag: local body

  • 2013ಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಸಿಕ್ಕಿದೆ ಹೆಚ್ಚು ಸ್ಥಾನ!

    2013ಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಸಿಕ್ಕಿದೆ ಹೆಚ್ಚು ಸ್ಥಾನ!

    ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.

    ಈ ಸಂಬಂಧ ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ 2013ರಲ್ಲಿ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶವನ್ನು 2018ರ ಚುನಾವಣಾ ಫಲಿತಾಂಶಕ್ಕೆ ಹೋಲಿಕೆ ಮಾಡಿ ಎರಡು ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಕಟಿಸಿದೆ.

    ಗ್ರಾಫಿಕ್ಸ್ ನಲ್ಲಿ ಏನಿದೆ?
    2013ರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನಲ್ಲಿ ನಮಗೆ 683 ಬಂದಿದ್ದರೆ ಈಗ 875 ವಾರ್ಡ್ ಗಳಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ 1,014ರಿಂದ 946ಕ್ಕೆ ಕುಸಿದರೆ ಜೆಡಿಎಸ್ 361 ರಿಂದ 345ಕ್ಕೆ ಇಳಿಕೆಯಾಗಿದೆ. ಇತರರು 2013ರಲ್ಲಿ 214 ಸ್ಥಾನ ಗಳಿಸಿದರೆ ಈ ಬಾರಿ 361ರಲ್ಲಿ ಗೆದ್ದಿದ್ದಾರೆ.

    2013ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮಗೆ 32 ಸ್ಥಾನ ಸಿಕ್ಕಿದರೆ ಈ ಬಾರಿ ಈ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. 50 ಸ್ಥಾನ ಗಳಿಸಿದ್ದ ಕಾಂಗ್ರೆಸ್ಸಿಗೆ ಈ ಬಾರಿ 36 ಸಿಕ್ಕಿದರೆ ಜೆಡಿಎಸ್ 42ರಿಂದ 30ಕ್ಕೆ ಇಳಿಕೆಯಾಗಿದೆ. 11 ರಲ್ಲಿ ಗೆಲುವು ಸಾಧಿಸಿದ್ದ ಪಕ್ಷೇತರರು ಈ ಬಾರಿ 15 ರಲ್ಲಿ ಗೆಲುವು ಪಡೆದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?

    ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?

    ಬೆಂಗಳೂರು: ರಾಜ್ಯದ ಜನರ ಮನಸ್ಥಿತಿಯೇ ಅತಂತ್ರವಾದಂತಿದೆ. 6 ತಿಂಗಳ ಹಿಂದೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲೂ ಯಾವೊಬ್ಬ ಪಕ್ಷಕ್ಕೂ ಮತದಾರ ಬಹುಮತ ನೀಡಿರಲಿಲ್ಲ. ಈಗ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆಯಲ್ಲೂ ಇದೇ ಸ್ಥಿತಿಯೇ ಪುನರಾವರ್ತನೆಯಾಗಿದೆ.

    ಲೋಕಸಭೆಗೆ ಮುನ್ನ ನಡೆದ ಲೋಕಲ್ ಫೈಟ್‍ನಲ್ಲಿ ಪಕ್ಷವಾರು ಫಲಿತಾಂಶ ನೋಡಿದರೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ, ದೋಸ್ತಿ ಸರ್ಕಾರದ ಮೈತ್ರಿ ದೃಷ್ಟಿಯಲ್ಲಿ ಬಿಜೆಪಿಯನ್ನು ಮತ್ತೆ ಕಾಂಗ್ರೆಸ್-ಜೆಡಿಎಸ್ ಅಧಿಕಾರದಿಂದ ದೂರ ಇರಿಸಲಿವೆ. ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆ ಸೇರಿ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್ ಸೇರಿ 105 ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಒಟ್ಟು 2,527 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು ಕಾಂಗ್ರೆಸ್ 946, ಬಿಜೆಪಿ 875, ಜೆಡಿಎಸ್ 345, ಪಕ್ಷೇತರರು 315, ಎಸ್‍ಡಿಪಿಐ 17, ಬಿಎಸ್‍ಪಿ 12, ಕೆಪಿಜೆಪಿ 10, ಎಸ್‍ಪಿ 4, ಕೆಆರ್‍ಆರ್‍ಎಸ್ 1, ನ್ಯೂ ಇಂಡಿಯನ್ ಕಾಂಗ್ರೆಸ್ 1, ಡಬ್ಲ್ಯೂಪಿಐ 1ರಲ್ಲಿ ಗೆದ್ದುಕೊಂಡಿದೆ.

    ಮಹಾನಗರ ಪಾಲಿಕೆ:
    ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಒಟ್ಟು 135 ವಾರ್ಡ್ ಗಳಲ್ಲಿ ಬಿಜೆಪಿ 54, ಕಾಂಗ್ರೆಸ್ 36, ಜೆಡಿಎಸ್ 30, ಪಕ್ಷೇತರರು 14, ಬಿಎಸ್‍ಪಿ 1 ವಾರ್ಡ್ ನಲ್ಲಿ ಜಯಗಳಿಸಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಶಿವಮೊಗ್ಗ ಪಾಲಿಕೆಯನ್ನು ಬಿಜೆಪಿ ಗೆದ್ದುಕೊಂಡಿದೆ.

    ನಗರ ಸಭೆ ಚುನಾವಣೆ:
    ಒಟ್ಟು 926 ವಾರ್ಡ್ ಗಳಲ್ಲಿ ಬಿಜೆಪಿ 370, ಕಾಂಗ್ರೆಸ್ 294, ಜೆಡಿಎಸ್ 106, ಪಕ್ಷೇತರ 123, ಬಿಎಸ್‍ಪಿ 10, ಎಸ್‍ಡಿಪಿಐ 13, ಕೆಪಿಜೆಪಿ 10 ವಾರ್ಡ್ ನಲ್ಲಿ ಗೆದ್ದಿದೆ. ಒಟ್ಟು 29 ನಗರಸಭೆಗಳ ಪೈಕಿ ಬಿಜೆಪಿ 9 ರಲ್ಲಿ ವಿಜಯ ಪತಾಕೆ ಹಾರಿಸಿದ್ದು, ಕಾಂಗ್ರೆಸ್ 5 ಕಡೆ, ಜೆಡಿಎಸ್ 2 ಕಡೆ ಸ್ವತಂತ್ರವಾಗಿ ಗದ್ದುಗೆ ಏರಲಿದೆ. ಗೋಕಾಕ್‍ನಲ್ಲಿ ಇತರರು ಕ್ಲೀನ್ ಸ್ವೀಪ್ ಮಾಡಿದ್ದಾರೆ. 13 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಬಿಜೆಪಿ – ಶಿರಸಿ, ಪುತ್ತೂರು, ಉಡುಪಿ, ರಬಕವಿ-ಬನಹಟ್ಟಿ, ಬಾಗಲಕೋಟೆ, ಸುರಪುರ, ಮುಧೋಳ, ಇಳಕಲ್, ಯಾದಗಿರಿ
    ಕಾಂಗ್ರೆಸ್ – ಸಿಂಧನೂರು, ಜಮಖಂಡಿ, ಚಳ್ಳಕೆರೆ, ದಾಂಡೇಲಿ, ಶಹಾಬಾದ್,
    ಜೆಡಿಎಸ್ -ಅರಸಿಕೆರೆ ಮತ್ತು ಮಂಡ್ಯ

    ಅತಂತ್ರ – ಹಾವೇರಿ, ಕಾರವಾರ, ಉಳ್ಳಾಲ, ರಾಣೆಬೆನ್ನೂರು, ಕೊಳ್ಳೇಗಾಲ, ಚಾಮರಾಜನಗರ, ರಾಯಚೂರು, ನಿಪ್ಪಾಣಿ, ಗೋಕಾಕ್, ಹಾಸನ, ಚಿತ್ರದುರ್ಗ, ಕೊಪ್ಪಳ, ಗಂಗಾವತಿ.

    ಪುರಸಭೆ ಚುನಾವಣೆ:
    ಒಟ್ಟು 1246 ವಾರ್ಡ್ ಗಳಲ್ಲಿ ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210, ಪಕ್ಷೇತರರು 135, ಬಿಎಸ್‍ಪಿ 2, ಎಸ್‍ಡಿಪಿಐ 4, ಕೆಆರ್‍ಆರ್‍ಎಸ್ 1, ಎಸ್‍ಪಿ 4, ಡಬ್ಲ್ಯೂಪಿಐ 1ರಲ್ಲಿ ಜಯಗಳಿಸಿದೆ. ಒಟ್ಟು 53 ಪುರಸಭೆಯಲ್ಲಿ ಕಾಂಗ್ರೆಸ್ 18, ಬಿಜೆಪಿ 11, ಜೆಡಿಎಸ್ 8 ಕಡೆ ಗೆದ್ದುಕೊಂಡಿದ್ದು 16 ಪುರಸಭೆ ಅತಂತ್ರವಾಗಿದೆ. ಈ ಪೈಕಿ 11 ಪುರಸಭೆಗಳ ಪೈಕಿ 6ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ. ಬಂಟ್ವಾಳದಲ್ಲಿ ಕಾಂಗ್ರೆಸ್ ಎಸ್‍ಡಿಪಿಐ ಜೊತೆ ಮೈತ್ರಿ ಮಾಡಿಕೊಂಡು ಗದ್ದುಗೆ ಹಿಡಿಯುವ ಸಾಧ್ಯತೆಯಿದೆ. ಸಂಕೇಶ್ವರ ಮತ್ತು ತೇರದಾಳದಲ್ಲಿ ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಅಧಿಕಾರಕ್ಕೇರುವ ಸಂಭವ ಇದೆ. ಲಕ್ಷೇಶ್ವರ ಮತ್ತು ಅಂಕೋಲದಲ್ಲಿ ಅಧಿಕಾರ ಯಾರ ಕೈಗೆ ಸಿಗುತ್ತದೋ . ಇಬ್ಬರಿಗೂ ಫಿಫ್ಟಿ, ಫಿಫ್ಟಿ ಚಾನ್ಸ್ ಇದೆ. ಪಕ್ಷೇತರರ ಕೃಪೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಶತ ಪ್ರಯತ್ನ ನಡೆಸಿವೆ

    ಕಾಂಗ್ರೆಸ್ – ಬದಾಮಿ, ಗುಳೇದಗುಡ್ಡ, ಬೈಲಹೊಂಗಲ, ಕುಡಚಿ, ಹುಕ್ಕೇರಿ, ಹಳ್ಳಿಖೇಡ, ರೋಣ, ಹಾನಗಲ್, ಸವಣೂರು, ಚಿತ್ತಾಪೂರ, ಚಿಂಚೋಳಿ, ಅಫ್ಜಲ್‍ಪುರ, ಕುಷ್ಟಗಿ, ಲಿಂಗಸುಗೂರು, ಮುದಗಲ್, ಮಧುಗಿರಿ, ಹಳಿಯಾಳ, ಗುರುಮಿಠ್ಕಲ್

    ಬಿಜೆಪಿ – ಮಹಾಲಿಂಗಪುರ, ಹುನಗುಂದ, ರಾಮದುರ್ಗ, ಸವದತ್ತಿ, ಸದಲಗ, ಹೊಸದುರ್ಗ, ಗಜೇಂದ್ರಗಡ, ಸೇಡಂ, ಜೇವರ್ಗಿ, ಕುಂದಾಪುರ, ಅಂಕೋಲ

    ಜೆಡಿಎಸ್ – ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ, ಪಾಂಡವಪುರ, ಮದ್ದೂರು, ನಾಗಮಂಗಲ, ಪಿರಿಯಾಪಟ್ಟಣ, ಚಿಕ್ಕನಾಯಕನಹಳ್ಳಿ

    ಅತಂತ್ರ – ತೇರದಾಳ, ಸಂಕೇಶ್ವರ, ಮೂಡಲಗಿ, ಕೊಣ್ಣರು, ಬಂಟ್ವಾಳ, ಚನ್ನಗಿರಿ, ಲಕ್ಷ್ಮೇಶ್ವರ, ಆಳಂದ, ಟಿ.ನರಸೀಪುರ, ಹೆಚ್‍ಡಿ ಕೋಟೆ, ದೇವದುರ್ಗ, ಮಾನ್ವಿ , ಕಾರ್ಕಳ, ಮುದ್ದೆಬಿಹಾಳ, ಅಂಕೋಲ

    ಪಟ್ಟಣ ಪಂಚಾಯತ್:
    ಒಟ್ಟು 355 ವಾರ್ಡ್ ಗಳ ಕಾಂಗ್ರೆಸ್ 138, ಬಿಜೆಪಿ 130, ಪಕ್ಷೇತರರು 57, ಜೆಡಿಎಸ್ 29, ಇಂಡಿಯನ್ ನ್ಯೂ ಕಾಂಗ್ರೆಸ್ 1ರಲ್ಲಿ ಗೆದ್ದಿದೆ. ಒಟ್ಟು 20 ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 7, ಬಿಜೆಪಿ 7, ಜೆಡಿಎಸ್ 2 ಕಡೆ ಗೆದ್ದುಕೊಂಡಿದೆ. 3 ಪಟ್ಟಣ ಪಂಚಾಯ್ತಿಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಖಾನಾಪುರದಲ್ಲಿ ಯಾವೊಂದು ಪಕ್ಷವೂ ಖಾತೆ ತೆರೆದಿಲ್ಲ. ಇತರರು ಎಲ್ಲಾ ಸ್ಥಾನಗಳನ್ನ ಸ್ವೀಪ್ ಮಾಡಿದ್ದಾರೆ. ಆದ್ರೆ ಪಕ್ಷೇತರರ ಪೈಕಿ ಬಹುತೇಕರು ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಬಲಿಗರು ಎನ್ನಲಾಗಿದೆ. ಇದು ಪಕ್ಷಕ್ಕೆ ನೀಡುವ ಎಚ್ಚರಿಕೆಯೋ ಏನು ಗೊತ್ತಿಲ್ಲ. ಅತಂತ್ರ ಫಲಿತಾಂಶ ಹೊರಬಿದ್ದಿರೋ 3 ಕ್ಷೇತ್ರಗಳ ಪೈಕಿ ಕೆರೂರಿನಲ್ಲಿ 9 ಸ್ಥಾನ ಗೆದ್ದಿರೋ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಹಿರೆಕೆರೂರು ಮತ್ತು ಕೊಟ್ಟೂರಿನಲ್ಲಿ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.

    ಕಾಂಗ್ರೆಸ್ – ಕುಡಿತಿನಿ, ರಾಯಬಾಗ, ಮುಳಗುಂದ, ಶಿರಹಟ್ಟಿ, ಬೆಳ್ಳೂರು, ಹಟ್ಟಿ, ಯಲ್ಲಾಪುರ
    ಬಿಜೆಪಿ – ಬೀಳಗಿ, ಹೊನ್ನಾಳಿ, ಜಗಳೂರು, ನರೇಗಲ್, ಯಲಬುರ್ಗಾ, ಸಾಲಿಗ್ರಾಮ, ಮುಂಡಗೋಡು
    ಜೆಡಿಎಸ್ – ಗುಬ್ಬಿ, ಕೊರಟಗೆರೆ
    ಅತಂತ್ರ – ಕೆರೂರು, ಹಿರೆಕೆರೂರು, ಕೊಟ್ಟೂರು
    ಇತರರು – ಖಾನಾಪುರ