Tag: loc

  • ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಭಾರತ (India) ಪಾಕಿಸ್ತಾನದ (Pakistan) ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಿದೆ ಎಂದು ವರದಿಯಾದ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವಾಲಯ (Defense Ministry) ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನದಿಂದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು (Terrorists) ಕೊಲ್ಲಲಾಗಿದೆ ಎಂದು ತಿಳಿಸಿದೆ.

    ಸೋಮವಾರ ಬೆಳಗ್ಗೆ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಗುರುತಿಸಿ ಅವರನ್ನು ಕೊಲ್ಲಲಾಗಿದೆ. ಅವರು ಬಾಲಕೋಟ್ ವಲಯದ ಹಮೀರ್‌ಪುರ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ, ದಟ್ಟ ಮಂಜು, ದಟ್ಟ ಪೊದೆಗಳ ಅನುಕೂಲಗಳನ್ನು ಬಳಸಿಕೊಂಡು ಒಳನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಸಚಿವಾಲಯ ತಿಳಿಸಿದೆ.

    ವರದಿ ಏನಿತ್ತು?
    ಮುಂಜಾನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಭಾರತಿಯ ಸೇನೆ ಶನಿವಾರ ರಾತ್ರಿ ಎಲ್‌ಒಸಿಯಾದ್ಯಂತ 2.5 ಕಿ.ಮೀ ಮುಂದಕ್ಕೆ ಪ್ರವೇಶಿಸಿ ಪಾಕಿಸ್ತಾನಿ ಭಯೋತ್ಪಾದಕರ 4 ಲಾಂಚಿಂಗ್ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್

     

    ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 7-8 ಭಯೋತ್ಪಾದಕರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಬಳಿಕ ಎಲ್ಲಾ ಸೈನಿಕರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಹೇಳಿತ್ತು. ಆದರೆ ಬಳಿಕ ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ಈ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • LACಯಲ್ಲಿ ಸಂಘರ್ಷ, ಭಾರತದಲ್ಲಿ ಉಗ್ರ ದಾಳಿ- ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

    LACಯಲ್ಲಿ ಸಂಘರ್ಷ, ಭಾರತದಲ್ಲಿ ಉಗ್ರ ದಾಳಿ- ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

    ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ (LoC) ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಘರ್ಷಣೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಭಾರತದಲ್ಲಿ ಉಗ್ರಗಾಮಿ ದಾಳಿಯ (Terror Attack) ಸಾಧ್ಯತೆಯೂ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ (US Intelligence Agency) ಎಚ್ಚರಿಕೆ ನೀಡಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಆಧರಿಸಿ ಈ ಎಚ್ಚರಿಕೆಯನ್ನು ನೀಡಲಾಗಿದೆ.

    ಪಾಕಿಸ್ತಾನವು ಭಾರತ ವಿರೋಧಿ ಉಗ್ರಗಾಮಿ ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಸುದೀರ್ಘ ಇತಿಹಾಸವನ್ನು ಹೊಂದಿದೆ. ಭಾರತ ಸರ್ಕಾರ ಕಾಶ್ಮೀರದ ಮೇಲೆ ಹಿಡಿತ ಹೆಚ್ಚಿಸುತ್ತಿದ್ದು ಇದು ಪಾಕ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಭಾರತದ ವಿರೋಧಿ ಉಗ್ರಗಾಮಿ ಗುಂಪುಗಳು ಕಾಶ್ಮೀರದಲ್ಲಿ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಬೇರೆ ಭಾಗಗಳಲ್ಲೂ ದಾಳಿ ನಡೆಯುವ ಸಂಭವಗಳಿದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ – ಪಾಕಿಸ್ತಾನಕ್ಕೆ ಭಾರತ ವಾರ್ನಿಂಗ್

    ಇದರ ಜೊತೆಗೆ ಚೀನಾದ ಜೊತೆಗೂ ಭಾರತದ ಸಂಬಂಧ ಮತ್ತಷ್ಟು ಹದಗೆಡಲಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಭವಿಷ್ಯ ನುಡಿದಿದೆ. 2020ರ ಗಾಲ್ವಾನ್ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಕೆಟ್ಟಿವೆ. ಎರಡು ದೇಶಗಳು ಮಿಲಿಟರಿ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದು ಇದು ಯುದ್ಧದ ವಾತವರಣ ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಸಿಬಿಐ ದಾಳಿಗೆ ಒಳಗಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.

    ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಲಾದ ವ್ಯಕ್ತಿಗಳ ಪಟ್ಟಿಯಲ್ಲಿರುವ ಮನೀಶ್ ಸಿಸೋಡಿಯಾ ಹಾಗೂ ಇತರೆ 8 ಮಂದಿ ವಿರುದ್ಧ ಇಂದು ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಜೊತೆಗೆ ಸಿಸೋಡಿಯಾ ವಿದೇಶ ಪ್ರಯಾಣ ಮಾಡದಂತೆ ಸಿಬಿಐ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಖ್ಯಾತ ಗಾಯಕಿ ನಯ್ಯಾರ ನೂರ್‌ ನಿಧನ

    8 ಖಾಸಗಿ ಆರೋಪಿಗಳ ವಿರುದ್ಧವಷ್ಟೇ ಲುಕ್‌ಔಟ್ ನೋಟೀಸ್ ಹೊರಡಿಸಲಾಗಿದೆಯೇ ಹೊರತು ನಾಲ್ವರು ಸಮಾಜ ಸೇವಕರ ವಿರುದ್ಧ ಅಲ್ಲ. ಸಮಾಜ ಸೇವಕರು ದೇಶ ಬಿಟ್ಟು ಹೋಗುವುದಿಲ್ಲವಾದ್ದರಿಂದ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂದೂ ಸಿಬಿಐ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ

    ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಒಟ್ಟು 9 ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಿದೆ. ಇನ್ನೊಂದೆಡೆ, ಉದ್ಯಮಿ ವಿಜಯ್ ನಾಯರ್, ಬ್ರಿಂಡ್ಕೊ ಸ್ಪಿರಿಟ್ಸ್ ಮಾಲೀಕ ಮನದೀಪ್ ಧಾಲ್, ಇಂಡೋಸ್ಪಿರಿಟ್‌ನ ಎಂ.ಡಿ ಸಮೀರ್ ಮಹೇಂದ್ರು ಮತ್ತು ಹೈದರಾಬಾದ್ ಮೂಲದ ಅರುಣ್ ರಾಮಚಂದ್ರ ಪಿಳ್ಳೈ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಲಾಗಿದೆ.

    ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಘಟಕಗಳಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಅದಕ್ಕಾಗಿ ಶುಕ್ರವಾರ ಸಿಸೋಡಿಯಾ ಅವರ ನಿವಾಸ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಸೈನಿಕನನ್ನ ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಇಂದು ತನ್ನ ಪಾಕಿಸ್ತಾನಿ ಸಹವರ್ತಿಯನ್ನು ಕೇಳಿದೆ.

    ಮೇಜರ್ ಜನರಲ್ ಎಎಸ್ ಪೆಂಧಾರ್ಕರ್ ಘಟನೆ ಕುರಿತು ಮಾಹಿತಿ ನೀಡಿದ್ದು, ಕೆರಾನ್ ಸೆಕ್ಟರ್‌ನಲ್ಲಿ ಬಿಎಟಿ(ಪಾಕ್ ಸೇನೆಯ ಗಡಿ ಕಾರ್ಯಾಚರಣೆ ತಂಡ)ಯ ಸೈನಿಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದನು. ಇದನ್ನು ಎಲ್‍ಒಸಿಯಲ್ಲಿನ ಪಡೆಗಳು ಕಂಡುಹಿಡಿದಿದ್ದು, ಆತನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.

    ಮೃತ ಸೈನಿಕನ ಬಳಿಯಿದ್ದ ಗುರುತಿನ ಚೀಟಿಯಿಂದ ಈತ ಒಬ್ಬ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ. ಈತನ ಹೆಸರು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಪಾಕ್ ಸೈನಿಕರು ಈ ರೀತಿ ಹೊಂಚು ಹಾಕಿ ಒಳನುಸುಳಲು ಪ್ರಯತ್ನಿಸುತ್ತಾರೆ ಎಂದು ನಾವು ಮೊದಲೇ ಗುರುತಿಸಿದ್ದೆವು. ಅದಕ್ಕೆ ಈ ಬಗ್ಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು. ಈ ಪರಿಣಾಮ ಪಾಕ್ ಸೈನಿಕ ಭಾರತದ ಒಳನುಸುತ್ತಿದ್ದಂತೆ ಆತನನ್ನು ಹತ್ಯೆ ಮಾಡಲಾಯಿತು. ಈ ವೇಳೆ ಒಂದು ಎಕೆ ರೈಫಲ್, ಮದ್ದುಗುಂಡುಗಳು ಮತ್ತು ಏಳು ಗ್ರೆನೇಡ್‍ಗಳೊಂದಿಗೆ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

    ಪಾಕ್ ಎಷ್ಟೇ ಪ್ರಯತ್ನ ಪಟ್ಟರು ಗಡಿಭಾಗದಲ್ಲಿ ಕಣ್ಗಾವಲು ಇನ್ನೂ ಪ್ರಗತಿಯಲ್ಲಿದೆ. ನಾವು ಪಾಕಿಸ್ತಾನ ಸೇನೆಗೆ ಹಾಟ್‍ಲೈನ್ ಸಂಪರ್ಕವನ್ನು ಮಾಡಲಾಗಿದ್ದು, ಹತ್ಯೆಗೀಡಾದ ವ್ಯಕ್ತಿಯ ದೇಹವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ ಎಂದರು.

    ಆತನ ಶವವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶದ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಾರ್ಡ್‍ನಲ್ಲಿರುವ ಫೋಟೋದಲ್ಲಿ ಮೃತ ವ್ಯಕ್ತಿ ಪಾಕ್ ಸಶಸ್ತ್ರ ಪಡೆಗಳ ಸಮವಸ್ತ್ರ ಧರಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಎಂದು ಘೋಷಿಸಲಾಗಿತ್ತು. ಆದರೆ ಈ ಪ್ರಯತ್ನದಿಂದ ಆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ ಎಂದರು.

  • ಗಡಿಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ – ಏಳೆಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಗಡಿಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ – ಏಳೆಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    – ಮೂವರು ಭಾರತೀಯ ಸೈನಿಕರು ಹುತಾತ್ಮ

    ಶ್ರೀನಗರ: ಎಲ್‍ಓಸಿ ಬಳಿ ಪಾಕಿಸ್ತಾನ ಮತ್ತೆ ಖ್ಯಾತೆ ತೆಗೆದಿದ್ದು, ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಪರಿಣಾಮ ಭಾರತೀಯ ಸೈನಿಕರು ಪ್ರತಿದಾಳಿ ಮಾಡಿದ್ದು, ಪಾಕಿಸ್ತಾನದ ಏಳೆಂಟು ಸೈನಿಕರನ್ನು ಹೊಡೆದುರುಳಿಸಿದೆ.

    ಉರಿ ಮತ್ತು ಗುರೆಜ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಆರ್ಮಿ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿ ಮಾಡಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಎರಡು-ಮೂರು ಸೇನಾ ವಿಶೇಷ ಸೇವಾ ಗುಂಪು (ಎಸ್‍ಎಸ್‍ಜಿ) ಕಮಾಂಡೋಗಳು ಸೇರಿದಂತೆ ಏಳೆಂಟು ಸೈನಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನದ 12 ಮಂದಿ ಯೋಧರು ಗಾಯಗೊಂಡಿದ್ದಾರೆ.

    ಎರಡು ಕಡೆ ನಡೆದ ಈ ಗುಂಡಿನ ದಾಳಿಯಲ್ಲಿ ಉರಿ ಸೆಕ್ಟರಿನಲ್ಲಿ ಇಬ್ಬರು ಭಾರತೀಯ ಸೈನಿಕರು ಮತ್ತು ಗುರೆಜ್ ಸೆಕ್ಟರಿನಲ್ಲಿ ಓರ್ವ ಯೋಧ ಸೇರಿ ಒಟ್ಟು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಬಂಕರ್ ಗಳು, ಇಂಧನ ಡಂಪ್‍ಗಳು ಮತ್ತು ಲಾಂಚ್ ಪ್ಯಾಡ್‍ಗಳು ಹಾಗೂ ಭಯೋತ್ಪಾದಕರು ಅಡಗು ತಾಣಗಳು ನಾಶವಾಗಿವೆ ಎಂದು ಸೇನೆಯಿಂದ ಮಾಹಿತಿ ದೊರಕಿದೆ.

    ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಸೇನೆ, ದಾವರ್, ಕೆರನ್, ಉರಿ ಮತ್ತು ನೌಗಮ್ ಸೇರಿದಂತೆ ಹಲವಾರು ಸೆಪ್ಟರ್ ಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜೊತೆಗೆ ಮಾರ್ಟಾರ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ. ಜೊತೆಗೆ ಮಕ್ಕಳು ಸೇರಿದಂತೆ ಆರು ಜನ ನಾಗರಿಕರು ಗಾಯಗೊಂಡಿದ್ದಾರೆ ತಿಳಿಸಿದೆ.

  • ಎಲ್‍ಓಸಿ ಬಳಿ 2 ಬಾರಿ ಗುಂಡಿನ ಚಕಮಕಿ – ಮೂವರು ಯೋಧರು ಹುತಾತ್ಮ, 3 ಉಗ್ರರು ಉಡೀಸ್

    ಎಲ್‍ಓಸಿ ಬಳಿ 2 ಬಾರಿ ಗುಂಡಿನ ಚಕಮಕಿ – ಮೂವರು ಯೋಧರು ಹುತಾತ್ಮ, 3 ಉಗ್ರರು ಉಡೀಸ್

    ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಮತ್ತು ಭಾರತೀಯ ಯೋಧರ ನಡುವೆ ಎರಡು ಬಾರಿ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಗಳಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ಯೋಧರ ಗುಂಡಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ.

    ಕುಪ್ವಾರಾ ಜಿಲ್ಲೆಯ ಎಲ್‍ಓಸಿ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಆರ್ಮಿ ಆಫೀಸರ್ ಮತ್ತು ಒಬ್ಬರು ಬಿಎಸ್‍ಎಫ್ ಪೇದೆ ಸೇರಿದಂತೆ ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ಎರಡು ದಾಳಿಯಲ್ಲಿ ಮೂವರು ಉಗ್ರರನ್ನು ಯೋಧರು ಗುಂಡಿಕ್ಕಿ ಕೊಂದಿದ್ದಾರೆ.

    ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್ ಬಳಿ ರಾತ್ರಿ ಒಂದು ಗಂಟೆಗೆ ಎಲ್‍ಓಸಿ ಬಳಿ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಸ್ಥಳಕ್ಕೆ ಹೋದಾಗ ಗುಂಡಿನ ದಾಳಿ ಆರಂಭವಾಗಿದೆ. ಎರಡು ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದ್ದು, ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಹುತಾತ್ಮರಾಗಿದ್ದಾರೆ. ಜೊತೆಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

    ಈ ವೇಳೆ ಸ್ಥಳಕ್ಕೆ ಹೆಚ್ಚುವರಿ ಯೋಧರು ಬಂದಿದ್ದು, ಕಾರ್ಯಚರಣೆ ಮಾಡಿದ್ದಾರೆ. ಆದರೆ ಬೆಳಗ್ಗೆ 10 ಗಂಟೆಗೆ ಮತ್ತೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಓರ್ವ ಆರ್ಮಿ ಆಫೀಸರ್ ಸೇರಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಏಪ್ರಿಲ್‍ನಿಂದ ಇತ್ತೀಚೆಗೆ ನಡೆದ ಎನ್‍ಕೌಂಟರಿನಲ್ಲಿ ಇದು ಬಹುದೊಡ್ಡ ಕಾರ್ಯಚರಣೆ ಎಂದು ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.

  • ಗುಂಡಿನ ಚಕಮಕಿ- ಉಗ್ರನನ್ನು ಹೊಡೆದುರುಳಿಸಿದ ಸೇನೆ

    ಗುಂಡಿನ ಚಕಮಕಿ- ಉಗ್ರನನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಸೋಪೊರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭದ್ರತಾ ಸಿಬ್ಬಂದಿ ಒರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ ಕೆಲ ಉಗ್ರರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಹತನಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎಂದು ಅಧಿಕಾರಿಗಳು ಗುರುತಿಸುತ್ತಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ.

    ಇಂದು ಬೆಳಗ್ಗೆ ಸೋಪೊರದ ರೆಬ್ಬಾನ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಉಗ್ರರು ಗುಂಡಿನ ಮಳೆಗೈದಿದ್ದಾರೆ. ಈ ವೇಳೆ ಉಗ್ರರು ಅಡಿ ಕುಳಿತ ಜಾಗದ ಕಡೆ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಒಬ್ಬ ಉಗ್ರ ಹತನಾಗಿದ್ದಾನೆ.

    ಈ ಕುರಿತು ಭಾರತೀಯ ಸೇನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇಂದು ಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಜಂಟಿ ಕಾರ್ಯಾಚರಣೆ ನಡೆದಿದ್ದು, ಕಾರ್ಡನ್ ಹಾಕಿ ಸಂಪರ್ಕ ಸಾಧಿಸಲಾಯಿತು, ಬಳಿಕ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.

    ರೆಬ್ಬನ್ ಪ್ರದೇಶದಲ್ಲಿ ಮೂವರು ಉಗ್ರರು ತಲೆಮರೆಸಿಕೊಂಡಿದ್ದು, ಸಂಪೂರ್ಣ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಶನಿವಾರ ವರದಿಯಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದಲ್ಲಿ ಅಂತರ್ಜಾಲ ಸಂಪರ್ಕವನ್ನು ಸಹ ಕಡಿತ ಮಾಡಲಾಗಿತ್ತು. ಗಡಿಯ ಇನ್ನೊಂದು ಕಡೆಯಿಂದ ಭಾರತದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸುಮಾರು 250ರಿಂದ 300 ಉಗ್ರರು ಯತ್ನಿಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮೇಜರ್ ಜನರಲ್ ವೀರೇಂದ್ರ ವಾಟ್ಸ್ ಹೇಳಿದ್ದರು.

  • 13 ಜನ ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೇನೆ

    13 ಜನ ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೆಂಧರ್-ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ 13 ಭಯೋತ್ಪಾದಕರು ಭಾರತ ಸೈನಿಕರು ಎನ್‍ಕೌಂಟರ್ ಮಾಡಿದ್ದಾರೆ.

    ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಸೋಮವಾರ ಬೆಳಗ್ಗೆ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹತ್ಯೆಗೈಯಲಾಗಿತ್ತು. ಬಳಿಕ ಅಂದ್ರೆ ಸಂಜೆ ವೇಳೆ ಜಮ್ಮು ವಿಭಾಗದ ನಿಯಂತ್ರಣ ರೇಖೆಯ ಉದ್ದಕ್ಕೂ ಮೆಂಧರ್‌ನಲ್ಲಿ ಸೇನಾ ಪಡೆ ನಡೆಸಿದ ದಾಳಿಯಲ್ಲಿ 10 ಜನ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಭಯೋತ್ಪಾದಕರು ಮೇ 28ರಿಂದ ಪ್ರತಿ-ಒಳನುಸುಳುವಿಕೆ ಪ್ರಾರಂಭಿಸಿದ್ದರು. ಇದರಿಂದಾಗಿ ಭಾರತೀಯ ಸೇನೆಯು ಮೆಂಧರ್ ಸೆಕ್ಟರ್ ನಲ್ಲಿನ ಎಲ್‍ಒಸಿ ಉದ್ದಕ್ಕೂ ಹೈ ಅಲರ್ಟ್ ಆಗಿತ್ತು. ನಿರಂತರ ಕಾರ್ಯಾಚರಣೆಯಲ್ಲಿ ಕನಿಷ್ಠ ಹತ್ತು ಉಗ್ರರನ್ನು ಮಟ್ಟ ಹಾಕಲಾಗಿದೆ. ಪೂಂಚ್ ಜಿಲ್ಲೆಯ ಹಳ್ಳಿಗಳಲ್ಲಿ ಅಡಗಿರುವ ಉಗ್ರರಿಗೆ ಶೋಧ ನಡೆದಿ ಎಂದು ಅಧಿಕಾರಿ ತಿಳಿಸಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರು ಮೇ 28ರಂದು ನೌಶೇರಾದ ಕಲಾಲ್ ಪ್ರದೇಶಕ್ಕೆ ನುಸುಳಲು ಪ್ರಯತ್ನ ನಡೆಸಿದ್ದರು. ಆದರೆ ನಂತರದ ಪ್ರತಿ-ಒಳನುಸುಳುವಿಕೆ ಕಾರ್ಯಾಚರಣೆಯಲ್ಲಿ ಹತ್ಯೆಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರಿಂದ 2 ಎಕೆ ಅಟ್ಯಾಕ್ ರೈಫಲ್, ಅಮೆರಿಕ ನಿರ್ಮಿತ ಎಂ-16 ಎ2 ರೈಫಲ್, 9-ಎಂಎಂ ಚೈನೀಸ್ ಪಿಸ್ತೂಲ್, ಆರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್), ಐದು ಹ್ಯಾಂಡ್ ಗ್ರೆನೇಡ್ ಹಾಗೂ ಎರಡು ಚಾಕು ಸೇರಿದಂತೆ ಅನೇಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    – ಪುಂಡಾಟ ಮುಂದುವರಿಸಿದ ಪಾಕ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಡುತ್ತಿದೆ. ಅಷ್ಟೇ ಅಲ್ಲದೆ ವಿವಿಧ ದೇಶಗಳಿಗ ಸಹಾಯ ಮಾಡುತ್ತಿದೆ. ಇಂತಹ ಪರಿಸ್ಥಿತಿ ಪಾಕಿಸ್ತಾನ ತನ್ನ ಪುಂಡಾಟವನ್ನು ಮುಂದುವರಿಸಿದೆ ಎಂದು ಆರ್ಮಿ ಮುಖ್ಯಸ್ಥ ಜನರಲ್‌ ಮನೋಜ್ ಮುಕುಂದ್ ನರವಾಣೆ ಗುಡುಗಿದ್ದಾರೆ.

    ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರ ಹೇಳಿಕೆಯ ಕೆಲವೇ ಗಂಟೆಗಳ ಮುನ್ನ ಪಾಕಿಸ್ತಾನ ಸೇನೆಯು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಯತ್ನಿಸಿತ್ತು. ಅಷ್ಟೇ ಅಲ್ಲದೆ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಎಲ್‍ಒಸಿ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತ್ತು.

    ಕುಪ್ವಾರಾದಲ್ಲಿ ಮಾತನಾಡಿದ ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರು, ”ನಾವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೆ ವೈದ್ಯಕೀಯ ತಂಡ, ಔಷಧಿಗಳನ್ನು ರಫ್ತು ಮಾಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಮತ್ತೊಂದೆಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಮಾತ್ರ ರಫ್ತು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

    ಇಲ್ಲಿಯವರೆಗೆ ಭಾರತೀಯ ಸೈನ್ಯದಲ್ಲಿ ಕೇವಲ 8 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅವರಲ್ಲಿ 2 ವೈದ್ಯರು ಮತ್ತು 1 ನರ್ಸಿಂಗ್ ಸಹಾಯಕ, 4 ಜನರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಡಾಖ್‍ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

    ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರದ ಯೋಧರನ್ನು ಮತ್ತೆ ಘಟಕಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನಾವು ಈಗಾಗಲೇ ಎರಡು ವಿಶೇಷ ರೈಲುಗಳನ್ನು ಒದಗಿಸಿದ್ದೇವೆ. ಬೆಂಗಳೂರಿನಿಂದ ಜಮ್ಮು ಮತ್ತು ಬೆಂಗಳೂರಿನಿಂದ ಗುವಾಹಟಿಗೆ ರೈಲು ಸೇವೆ ಕಲ್ಪಿಸಲಾಗಿದ್ದು, ಅಲ್ಲಿಂದ ಯೋಧರನ್ನು ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಅವರು, ”ಇಂದು ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನವು ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರ ಮತ್ತು ಗಾರೆಗಳಿಂದ ಗುಂಡು ಹಾರಿಸುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಮಾಡಿದೆ. ಇದಕ್ಕೆ ಭಾರತೀಯ ಸೇನೆಯು ಸೂಕ್ತವಾಗಿ ಪ್ರತೀಕಾರ ತೀರಿಸುತ್ತಿದೆ” ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6000ಕ್ಕೆ ತಲುಪಿದ್ದರೆ, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 117ಕ್ಕೆ ತಲುಪಿದೆ. ವಿಶ್ವಾದ್ಯಂತ 1.3 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ.

  • ಪುಂಡಾಟ ಮೆರೆದ ಪಾಕ್‍ಗೆ ಭಾರತೀಯ ಸೇನೆಯಿಂದ ಪ್ರತ್ಯುತ್ತರ

    ಪುಂಡಾಟ ಮೆರೆದ ಪಾಕ್‍ಗೆ ಭಾರತೀಯ ಸೇನೆಯಿಂದ ಪ್ರತ್ಯುತ್ತರ

    ನವದೆಹಲಿ: ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಿಂದಾಗಿ ಪಾಕಿಸ್ತಾನ ಸೇನಾ ಪ್ರದೇಶ ಮತ್ತು ಉಗ್ರರ ನೆಲೆಯ ಮೇಲೆ ಭಾರತೀಯ ಸೇನೆಯು ಶುಕ್ರವಾರ ಕಾರ್ಯಾಚರಣೆ ನಡೆಸಿ ತಕ್ಕ ಉತ್ತ ನೀಡಿದೆ.

    ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಎರಡು ಪ್ರದೇಶಗಳಲ್ಲಿ ಶತ್ರು ಕಡೆಯವರು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದರು. ಹೀಗಾಗಿ ಕುಪ್ವಾರಾ ಜಿಲ್ಲೆಯ ಕೇರನ್ ವಲಯದಲ್ಲಿ ಇಂದು ಮಧ್ಯಾಹ್ನ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತೀಕಾರ ತೀರಿಸಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ಪಾಕ್ ಸೇನೆ ಹಾಗೂ ಉಗ್ರರಿಗೆ ಭಾರೀ ಹಾನಿಯ ವರದಿಗಳಿವೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲೂ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಉಭಯ ದೇಶಗಳು ಗಮನ ಹರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಕಳೆದ ಒಂದು ವಾರದಿಂದ ಪೂಂಚ್ ಜಿಲ್ಲೆಯಲ್ಲಿ ಶೆಲ್ ದಾಳಿಗಳು ಹಾಗೂ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಗುತ್ತಿದೆ.

    ಸುಂದರ್‌ಬಾನಿ-ನೌಶೇರಾ ವಲಯದಲ್ಲಿ ಕಳೆದ ವಾರ ನಡೆದ ದಾಳಿಯಲ್ಲಿ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಕುರಿತು ಮಾರ್ಚ್ ತಿಂಗಳು  ಸಂಸತ್ತಿನಲ್ಲಿ ಮಾಹಿತಿ ನೀಡಿದ್ದ ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್, 2020ರ ಜನವರಿ 1ರಿಂದ ಫೆಬ್ರವರಿ 23ರ ನಡುವೆ ಪಾಕಿಸ್ತಾನ ಕನಿಷ್ಠ 646 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದರು.

    2019ರ ನವೆಂಬರ್ 17ರಂದು ಅಖ್ನೂರ್ ಸೆಕ್ಟರ್ ಬಳಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ವೇಳೆ ಅಲ್ಲಿ ಟ್ರಕ್‍ನಲ್ಲಿ ತೆರೆಳುತ್ತಿದ್ದ ಓರ್ವ ಯೋಧ ಹುತಾತ್ಮರಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು. ಅವರನ್ನು ಉಧಂಪುರ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗೆಯೇ 2019ರ ನವೆಂಬರ್ 16ರಂದು ಪಾಕಿಸ್ತಾನವು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಪಡೆಗಳು ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದವು.