ವಿಜಯಪುರ: ತಂದೆಯೊಬ್ಬ ತನ್ನ ಪತ್ನಿ ಜಮೀನು ಮಾರಲು ಒಪ್ಪದಕ್ಕೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ತಿನ್ನಿಸಿದ್ದು, ಪುತ್ರ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
ಶಿವರಾಜ್ ಅರಸನಾಳ (2) ಹತ್ಯೆಗೀಡಾದ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದನು. ಮಾರಾಟ ಮಾಡಲು ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.
ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 600 ಕೋಟಿ ಸಾಲ ಬಾಕಿ ಆರೋಪದ ವಿಚಾರವಾಗಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿ ಇದೆ. ಜೆಡಿಎಸ್‍ನ ಬಂಡೆಪ್ಪ ಕಾಶೆಂಪೂರ್ ಸೇರಿ ಹಲವರು ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಅವರು ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳು ಇದೆ. ಅದರಲ್ಲಿ 16 ಡಿಸಿಸಿ ಬ್ಯಾಂಕ್ ರಿವ್ಯೂ ಮಾಡಿದ್ದೇನೆ. ಇವತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ನೋಟಿಸ್ ಮಾಡೋದಕ್ಕೆ ಬಂದಿದ್ದೇನೆ. ರಮೇಶ್ ಒಬ್ಬರೇ ಸಾಲ ಪಡೆದಿಲ್ಲ. 23 ಸಕ್ಕರೆ ಕಾರ್ಖಾನೆಗೂ ಸಾಲ ಕೊಟ್ಟಿದ್ದೇವೆ. ಅಪೆಕ್ಸ್ ಬ್ಯಾಂಕ್‍ಗೆ ಗಂಭೀರವಾಗಿ ಹೇಳಿದ್ದೇವೆ. ನೋಟಿಸ್ ನೀಡಿ ವಸೂಲಾತಿ ಮಾಡುತ್ತಿದ್ದಾರೆ. ಒಟ್ಟಾರೆ 23 ಜನ ಸಾಲ ಪಡೆದಿದ್ದಾರೆ ಎಂದರು.
ನಗರದ ಡಿಸಿಸಿ ಬ್ಯಾಂಕ್‍ನಿಂದ ಒಟ್ಟು 1,024 ಕೋಟಿ ರೂ. ಸಾಲ ನೀಡಲಾಗಿದೆ. ಯಾರಿಗೆ ಸಾಲ ಕೊಟ್ಟಿದ್ದಾರೆ? ಯಾರು ಮರುಪಾವತಿಸಿಲ್ಲ. ಅವರಿಗೆ ನೋಟಿಸ್ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಗಂಭಿರವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನವರೂ ನಮ್ಮಲ್ಲಿ ಸಾಲ ಪಡೆದಿದ್ದಾರೆ. ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಖಾನೆ ಸಾಲ ತೆಗೆದುಕೊಂಡಿದೆ. ಜೆಡಿಎಸ್‍ನಿಂದ ಬಂಡೆಪ್ಪ ಕಾಂಶೆಪೂರ್ ಸಾಲ ತೆಗೆದುಕೊಂಡಿದ್ದಾರೆ. ಎಸ್. ಆರ್ ಪಾಟೀಲ್ ಕೂಡ ಸಾಲ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಯಾರೂ ಸಾಲ ಕಟ್ಟಿಲ್ಲ ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಯಾರದು ಎಷ್ಟು ಸಾಲ ಬಾಕಿ ಇದೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ: ಲೋನ್ ಆ್ಯಪ್‌ನಲ್ಲಿ ಕೇವಲ 8 ಸಾವಿರ ರೂ. ಸಾಲ ಮಾಡಿದ ವ್ಯಕ್ತಿ ಲಕ್ಷ ಲಕ್ಷ ಹಣ ಮರುಪಾವತಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ಲೋನ್ ಆ್ಯಪ್‌ನಲ್ಲಿ ಹಣ ಪಡೆದು ಮೋಸಹೋದ ವ್ಯಕ್ತಿ. ರೋಹನ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಲೋನ್ ಕ್ಯೂಬ್ ಮೊಬೈಲ್ ಆ್ಯಪ್‌ನಲ್ಲಿ 8 ಸಾವಿರ ರೂ. ಸಾಲ ಪಡೆಯಲು ಮುಂದಾಗಿದ್ದರು.
8 ಸಾವಿರ ರೂ. ಸಾಲದ ಮುಂಗಡ ಬಡ್ಡಿ ಕಡಿತಗೊಳಿಸಿ ಕೇವಲ 4,960 ರೂ. ಹಣವನ್ನು ಲೋನ್ ಆ್ಯಪ್ ನೀಡಿತ್ತು ಅಲ್ಲದೇ 8 ಸಾವಿರ ರೂ. ಹಣವನ್ನು 7 ದಿನಗಳಲ್ಲಿ ತೀರಿಸಬೇಕೆಂದು ಷರತ್ತು ಸಹ ವಿಧಿಸಿತ್ತು. ಈ ಬಗ್ಗೆ ರೋಹನ್‌ಗೆ ನಿತ್ಯ ಕರೆಗಳು ಬರುತ್ತಿದ್ದು, ಹಣ ಬೇಗ ಹಿಂತಿರುಗಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಇದನ್ನೂ ಓದಿ: ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಈ ಕಿರಿಕಿರಿಗೆ ಬೇಸತ್ತ ರೋಹನ್ ಅದೇ ಆ್ಯಪ್‌ನಲ್ಲಿ ಪದೇ ಪದೇ ಲೋನ್ ಪಡೆದಿದ್ದಾರೆ. ಒಟ್ಟು 4,26,654 ರೂ. ಹಣ ಪಡೆದುಕೊಂಡಿದ್ದ ರೋಹನ್ ವಿಪರ್ಯಾಸವೆಂದರೆ ಅದೇ ಆ್ಯಪ್‌ಗೆ ಮತ್ತೆ ಹಿಂದಿರುಗಿಸಿದ್ದಾರೆ. ಹೀಗಿದ್ದರೂ ಆ್ಯಪ್‌ನಿಂದ ಮತ್ತೆ ಕರೆಗಳು ಬರುತ್ತಿದ್ದು, ಎಲ್ಲಾ ಸಾಲವನ್ನು ಮರಳಿ ತುಂಬುವಂತೆ ನಿರಂತರ ಒತ್ತಡ ಹಾಕಲಾಗಿದೆ.
ಈ ಹಿನ್ನೆಲೆ ಆ್ಯಪ್‌ನಲ್ಲಿ ಮಾಡಿದ ಸಾಲವಲ್ಲದೇ, ವೈಯಕ್ತಿಕವಾಗಿ ಲಕ್ಷಾಂತರ ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. ಇಷ್ಟಾದರೂ ಆ್ಯಪ್ ರೋಹನ್‌ಗೆ, ವಿವಿಧ ನಂಬರ್‌ಗಳ ಮೂಲಕ ಕರೆ ಮಾಡಿ ಮತ್ತೆ ಹಣ ತುಂಬುವಂತೆ ಹೇಳಲಾಗುತ್ತಿದೆ. ಕೇಳಿದಷ್ಟು ಹಣ ನೀಡದಿದ್ದರೆ, ಎಲ್ಲಾ ಪರಿಚಯದವರಿಗೆ, ವೈಯಕ್ತಿಕ ಡೇಟಾ ಹಾಗೂ ಮೆಸೇಜ್‌ಗಳನ್ನು ಹಂಚುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು
ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಹನ್, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು: ಹೆಚ್ಚು ಸಾಲ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವ್ಯಂಗ್ಯವಾಡಿದರು.
ಕೆ ಆರ್ ನಗರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವರು ರಾಜ್ಯದ ಸಿಎಂ ಆಗಿದ್ದರು. ನಮ್ಮ ಪಕ್ಷದಿಂದಲೇ ಹೊರ ಹೋದ ಹಿರಿಯ ನಾಯಕರೊಬ್ಬರು ನಮಗೆ ಬೆಂಬಲ ನೀಡಲಿಲ್ಲ. ನಮ್ಮ ಮನೆಯಲ್ಲಿಯೇ ತಿಂದು ಮೈ ಬೆಳೆಸಿ ಈಗ ನಮಗೇನೇ ತಿರುಗಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಗೆದ್ದರು ಪರವಾಗಿಲ್ಲ ಜೆಡಿಎಸ್ ಗೆಲ್ಲಬಾರದು ಅಂದಿದ್ದರು. ಆದರೆ ನಮ್ಮ ರಾಜ್ಯದ ಜನ ತುಂಬಾ ಹುಷಾರ್ ಇದ್ದಾರೆ. ಯಾರನ್ನು ಗೆಲ್ಲಿಸಬೇಕು. ಯಾರನ್ನು ಬೀಡಬೇಕು ಅನ್ನುವುದು ಜನತೆಗೆ ತುಂಬಾ ಚೆನ್ನಾಗಿ ಗೋತ್ತಿದೆ ಎಂದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಯಾರು ಮಾಡದಷ್ಟು ಸಾಲ ಸಿದ್ದರಾಮಯ್ಯ ಮಾಡಿದ್ದಾರೆ. ಅವರು 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯದ ಬಜೆಟ್‍ನಷ್ಟೇ ಅವರು ಸಾಲ ಮಾಡಿದ್ದಾರೆ. ಆದರೂ ಜೆಡಿಎಸ್ ಬಗ್ಗೆ ಅವರು ಮಾತನಾಡುತ್ತಾರೆ. ಇನ್ನು ಮುಂದೆಯಾದರೂ ಅವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲಿಯಂ ಹರ್ಟ್ ಇನ್ನಿಲ್ಲ
ಕೊಲಂಬೊ: ಶ್ರೀಲಂಕಾದಲ್ಲಿ ತುರ್ತು ತೈಲ ಖರೀದಿಗೆ ಭಾರತ ಬುಧವಾರ 500 ಮಿಲಿಯನ್ ಡಾಲರ್(ಸುಮಾರು 3 ಸಾವಿರ ಕೋಟಿ ರೂ.) ಸಾಲ ನೀಡಿದೆ. ಈ ಮೂಲಕ ಶ್ರೀಲಂಕಾಗೆ ತಾತ್ಕಾಲಿಕ ಆರ್ಥಿಕ ಪರಿಹಾರ ಲಭಿಸಿದೆ.
ಶ್ರೀಲಂಕಾದಲ್ಲಿ ಸದ್ಯ ಆರ್ಥಿಕ ಕುಸಿತ ಕಂಡುಬಂದಿದ್ದು, ಇಂಧನದ ಕೊರತೆ ನಿಭಾಯಿಸಲು ಭಾರತ ಸಹಾಯ ಮಾಡುತ್ತಿದೆ.
ಶ್ರೀಲಂಕಾದಲ್ಲಿ ಬೃಹತ್ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಲ್ಲಿ ಸ್ಥಗಿತ ಹಾಗೂ ವಿದ್ಯುತ್ ಕಡಿತಗಳು ಹೆಚ್ಚಾಗಿವೆ. ಇದರಿಂದ ಅಲ್ಲಿನ ಜನರು ಅಡುಗೆ ಅನಿಲ ಹಾಗೂ ಸೀಮೆ ಎಣ್ಣೆ ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ದೇಶ ತೈಲದ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್ ಯಾದವ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ಜನವರಿ 15ರಂದು ನಡೆದ ವರ್ಚುವಲ್ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಶ್ರೀಲಾಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ನಡುವೆ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಭಾರತ ಸಾಲ ನೀಡಲು ನಿರ್ಣಯಿಸಿದೆ ಎಂದು ಬುಧವಾರದ ಅಧಿಕೃತ ಮಾಹಿತಿಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ ವಿಚಾರದಲ್ಲಿ ರಷ್ಯಾ,ಭಾರತದ ನಿಲುವು ಒಂದೇ: ವರ್ಶಿನಿನ್
ಪೆಟ್ರೋಲಿಯಂ ಉತ್ಪನ್ನ ಖರೀದಿಗೆ ಭಾರತ ಶ್ರೀಲಂಕಾಗೆ 500 ಮಿಲಿಯನ್ ಡಾಲರ್ ನೀಡುತ್ತಿದೆ. ಅಕ್ಕಿ, ವಾಹನಗಳ ಬಿಡಿ ಭಾಗಗಳು ಹಾಗೂ ಸಿಮೆಂಟ್‌ನ ಕೊರತೆ ಕೂಡಾ ಶ್ರೀಲಂಕಾದಲ್ಲಿ ಉಂಟಾಗಿದೆ. ದ್ವೀಪ ರಾಷ್ಟ್ರದಲ್ಲಿ ವಿದೇಶಿ ವಿನಿಮಯದಿಂದ ಲಾಭಗಳಿಸುವ ವಲಯವೆಂದರೆ ಪ್ರವಾಸೋದ್ಯಮ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರವಾಸೋದ್ಯಮದಲ್ಲಿ ಕುಸಿತ ಉಂಟಾಗಿದೆ. ಹೀಗಾಗಿ ದೇಶ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ ಎಂದು ತಿಳಿಸಿದೆ.
ಲಕ್ನೋ: ಸಾಲ ತೀರಿಸಿ ಎಂದಿದ್ದಕ್ಕೆ ದಂಪತಿ ಮೇಲೆ ಗುಂಡು ಹಾರಿಸಲಾಗಿದ್ದು, ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಮತ್ತು ಆಕೆಯ ಪತಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪತಿ ಮತ್ತು ಪತ್ನಿ ದೇವಾಲಯದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ದಂಪತಿ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ್ದಾರೆ. ಭೂಮಿ ಬದಲಾಗಿ ನೀಡಿದ್ದ ಹಣವನ್ನು ಮರಳಿ ನೀಡುವಂತೆ ಕೇಳಿದ ಕಾರಣಕ್ಕೆ ಮಹಿಳೆ ಹಾಗೂ ಆಕೆಯ ಪತಿ ಮೇಲೆ ಗುಂಡು ಹಾರಿಸಲಾಗಿದೆ ಎಂದು ದಂಪತಿಯ ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ. ಇದನ್ನೂ ಓದಿ: SC/ST ಬಡ್ತಿ ಮೀಸಲಾತಿ: ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ
ಘಟನೆ ಬಳಿಕ ಕೂಡಲೇ ಪತಿ ಹಾಗೂ ಪತ್ನಿ ಇಬ್ಬರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಜಿಲ್ಲಾಸ್ಪತ್ರೆಗೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದವರು ಜಿನ್ನಾನ ಆರಾಧಕರು: ಯೋಗಿ ಆದಿತ್ಯನಾಥ್ ಟೀಕೆ
ಇಸ್ಲಾಮಾಬಾದ್ : ನಮ್ಮ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದಿದ್ದ ಪಾಕಿಸ್ತಾನ ಈಗ ಹೆದ್ದಾರಿಯನ್ನು ಅಡವಿಟ್ಟು ದುಬಾರಿ ಬಡ್ಡಿಗೆ ಸಾಲವನ್ನು ಪಡೆದುಕೊಂಡು ಸುದ್ದಿಯಾಗಿದೆ.
ಹೌದು. ಪಾಕಿಸ್ತಾನ ಈಗ 7 ವರ್ಷ ಅವಧಿಯ ಇಸ್ಲಾಮಿಕ್ ಬಾಂಡ್(ಸುಕುಕ್) ಮೂಲಕ 1 ಶತಕೋಟಿ ಡಾಲರ್( 17,600 ಪಾಕಿಸ್ತಾನ ರೂ.) ಸಾಲವನ್ನು ಪಡೆದುಕೊಂಡಿದೆ. ಈ ಸಾಲಕ್ಕೆ ಶೇ.7.95 ಬಡ್ಡಿದರ ಅಲ್ಲದೇ ಲಾಹೋರ್-ಇಸ್ಲಾಮಾಬಾದ್ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಿರಿಸಿದೆ.
ಇಸ್ಲಾಮಿಕ್ ಬಾಂಡ್‌ನಡಿ ಪಡೆದ ಸಾಲಕ್ಕೆ ಇಷ್ಟು ಹೆಚ್ಚು ಪ್ರಮಾಣದ ಬಡ್ಡಿ ಪಾವತಿ ಮಾಡುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲು ಎಂದು ಮಾಧ್ಯಮಗಳು ತಿಳಿಸಿವೆ.
ಯಾಕೆ ಸಾಲ?
ಸೌದಿ ಅರೇಬಿಯಾದಿಂದ ಪಡೆದಿರುವ 3 ಬಿಲಿಯನ್ ಡಾಲರ್(52,800 ಕೋಟಿ ರೂ.) ಪೈಕಿ 35,200 ಕೋಟಿ ರೂ. ಅನ್ನು ಪಾಕ್ ಈಗಾಗಲೇ ವೆಚ್ಚ ಮಾಡಿದೆ. ಇದರಿಂದಾಗಿ ಜ.14ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್ ಡಾಲರ್‌ನಿಂದ ಕುಸಿತವಾಗಿದೆ. ಹೀಗಾಗಿ ತನ್ನ ವಿದೇಶಾಂಗ ವಿನಿಮಯ ಸಂಗ್ರಹದಲ್ಲಿ ಇನ್ನಷ್ಟುಕುಸಿತ ತಡೆಯಲು ಸಾಲ ಪಡೆಯಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಉಗ್ರರಿಗೆ ಸಹಕಾರ – ಪಾಕಿಸ್ತಾನದ ಜೊತೆ ಬೂದುಪಟ್ಟಿಗೆ ಸ್ನೇಹಿತ ಟರ್ಕಿಯೂ ಸೇರ್ಪಡೆ
ಅಂತಾರಾಷ್ಟ್ರೀಯ ಚೇಂಬರ್ಸ್ ಶೃಂಗಸಭೆ 2022ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನವು ಬೇರೆ ದೇಶಗಳಿಗಿಂತ ವಿಶೇಷವಾಗಿ ಭಾರತಕ್ಕಿಂತ ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ. ನಮ್ಮನ್ನು ಅಸಮರ್ಥರು ಎಂದು ಕರೆಯುತ್ತಾರೆ, ಆದರೆ ನಮ್ಮ ಸರ್ಕಾರವು ಎಲ್ಲಾ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ಉಳಿಸಿದೆ ಎಂಬುದು ಸತ್ಯ ಎಂದು ಎಂದು ಹೇಳಿದ್ದರು.
ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್ ಎಫಿಸಿಯೆನ್ಸಿ ಇಂಪ್ರೂವ್‌ಮೆಂಟ್ ಪ್ರಾಜೆಕ್ಟ್ (ಇಡಿಇಐಪಿ), ವಿದ್ಯುತ್ ಪೂರೈಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ವಿದ್ಯುತ್ ಗ್ರಿಡ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ವಿತರಣಾ ಕಂಪನಿಗಳ ಕಾರ್ಯಾಚರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆದಾಯ ಸಂಗ್ರಹಣೆ ಹೆಚ್ಚಿಸಲು ಮತ್ತು ನಷ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ತಂತ್ರಜ್ಞಾನ ಮತ್ತು ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಕಾರ್ಯಾಚರಣೆಗಳನ್ನು ಆಧುನೀಕರಿಸುತ್ತದೆ. ನಿರ್ದಿಷ್ಟವಾಗಿ ಗ್ರಿಡ್ ಕೇಂದ್ರಗಳು, ಪ್ರಸರಣ ಮಾರ್ಗಗಳು, ವಿತರಣೆ ಮತ್ತು ಉಪಯುಕ್ತತೆ ಸೇವೆಗಳಿಗೆ ನಿರ್ಣಾಯಕವಾಗಿವೆ.
ವಿದ್ಯುತ್ ಕ್ಷೇತ್ರದ ದೀರ್ಘಾವಧಿಯ ಆರ್ಥಿಕ ಕಾರ್ಯಸಾಧ್ಯತೆಯು ಗ್ರಾಹಕರಿಗೆ ವಿದ್ಯುತ್ ಸೇವೆಯನ್ನು ಒದಗಿಸುವ ವಿದ್ಯುಚ್ಛಕ್ತಿ ವಿತರಣಾ ಕಂಪನಿಗಳ ದಕ್ಷತೆಯ ಮೇಲೆ ಅವಲಂಬಿತವಾಗಿದೆ ಎಂದು ವಿಶ್ವಬ್ಯಾಂಕ್‌ನಲ್ಲಿರುವ ಪಾಕಿಸ್ತಾನ ಪ್ರತಿನಿಧಿ ನಜಿ ಬೆನ್ಹಸ್ಸಿನ್ ಹೇಳಿದ್ದಾರೆ. ಇದನ್ನೂ ಓದಿ: 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್ ಮುಖ್ಯಸ್ಥ
ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್ ನೀಡಿರುವ ಸಾಲವು ವಿದ್ಯುಚ್ಛಕ್ತಿ ಕ್ಷೇತ್ರದ ಸುಧಾರಣೆ ಉದ್ದೇಶಕ್ಕಾಗಿದೆ.
ಯಾದಗಿರಿ: ನಗರದಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ್ದು, ಖಾಸಗಿ ಫೈನಾನ್ಸ್ಗಳಿಂದ ಸಾಲಗಾರರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿದೆ.
ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್ ನಿಂದ ಸಾಲಗಾರರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ ಮಹ್ಮದ್ ಮೂರು ಲಕ್ಷ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದ್ದರು. ಹೀಗಿದ್ದರೂ ಫೈನಾನ್ಸ್‌ನಿಂದ ಹೆಚ್ಚಿನ ಬಡ್ಡಿ ನೀಡಲು ಒತ್ತಾಯ ಮಾಡಿತ್ತು. ಇದಕ್ಕೆ ಮಹ್ಮದ್ ಒಪ್ಪಿರಲಿಲ್ಲ. ಇದನ್ನೂ ಓದಿ:ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ ಯತ್ನ- ಯುವಕನಿಂದ ರಕ್ಷಣೆ
ಹೀಗಾಗಿ ಆತನ ಹೆಂಡತಿ ರಿಜ್ವಾನರನ್ನು ಆಫೀಸ್ಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂಡ ಫೈನಾನ್ಸ್ ಮಾಲೀಕರು, ಮೂತ್ರ ವಿಸರ್ಜನೆಗೂ ಬಿಡದೇ ಚಿತ್ರ ಹಿಂಸೆ ನೀಡಿದ್ದಾರೆ. ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬವರಿಂದ ಈ ಕೃತ್ಯ ನಡೆದಿದೆ. ಇನ್ನೂ ಫೈನಾನ್ಸ್‌ನವರ ಕಿರುಕುಳವನ್ನು ರಿಜ್ವಾನ್‍ರವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್
ಗದಗ: ಬೆಂಗಳೂರಿನ ಇಂಡಸ್ ಆ್ಯಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಲೋನ್ ಕೊಡುವುದಾಗಿ ನಂಬಿಸಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಂಗಾಲಾಗಿದ್ದಾರೆ.
ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಎಂದು ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬವರು ಕೂಡ ಇದೀಗ ಇಂಥದ್ದೇ ಮೋಸದ ಕರೆಯನ್ನು ನಂಬಿ ಹಣಕಳೆದುಕೊಂಡಿದ್ದಾರೆ.
ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಮಾತಾಡೋದು ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.ಇದನ್ನೂ ಓದಿ: ಭೂ ಕುಸಿತದಿಂದ ಮಾರ್ಗ ಬಂದ್ – ಹೆಗಲ ಮೇಲೆ ಬೈಕ್ ಹೊತ್ತು ಸಾಗಿದ ಬಾಹುಬಲಿ
ಜುಲೈ 11 ರಂದು 49 ಸಾವಿರದಂತೆ 2 ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್‍ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್‍ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿ ವಿರುದ್ಧ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.