ಹಾವೇರಿ: ನೇಣು ಬಿಗಿದು ಒಂದೇ ಕುಟುಂಬದ (Family) ಮೂವರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದವರಾದ ತಂದೆ ಹನುಮಂತಗೌಡ ಪಾಟೀಲ (54), ತಾಯಿ ಲಲಿತಾ ಪಾಟೀಲ (50), ಮತ್ತು ಮಗಳು ನೇತ್ರಾ ಪಾಟೀಲ (22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಭೀಕರ ರಸ್ತೆ ಅಪಘಾತ – ರಾಯಚೂರು ಮೂಲದ ನಾಲ್ವರು ಸ್ಥಳದಲ್ಲೇ ಸಾವು
ಹನುಮಂತಗೌಡ ಪಾಟೀಲ ದಂಪತಿ ಸುಮಾರು 25 ಲಕ್ಷ ರುಪಾಯಿ ಸಾಲ ಮಾಡಿ ಮಗಳ ಮದುವೆಯನ್ನು ಮಾಡಿದ್ದರು. ಈ ಸಾಲಬಾಧೆಯನ್ನು ತಾಳಲಾರದೆ ದಂಪತಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ತನ್ನ ಕಾರಣಕ್ಕೆ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದನ್ನು ತಿಳಿದು ನೊಂದ ಮಗಳು ತಾನೂ ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ.
ರಾಮನಗರ: ಸಾಲಬಾಧೆ (Loan) ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿರುವ (Suicide Attempt) ಹೃದಯವಿದ್ರಾವಕ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.
ಹುಟ್ಟೂರು ಬಿಟ್ಟುರೂ ಬೆಂಬಿಡದ ಸಾಲಗಾರ ಕಾಟಕ್ಕೆ ಒಂದೇ ಕುಟುಂಬದ 7 ಜನರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಜಗತ್ತನ್ನೇ ಅರಿಯದ ಮೂರು ಮುದ್ದು ಕಂದಮ್ಮಗಳು ಸೇರಿದಂತೆ 6 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೂಲತಃ ರಾಮನಗರ ತಾಲೂಕಿನ ಕುಂಬಳಗೂಡು ನಿವಾಸಿ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅಲ್ಲದೇ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ. ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿದ್ದ. ಕೊನೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬದ ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗುರುವಾರ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು. ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿದ್ದಾರೆ. ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು. ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘನೆ – ದಂಡ ಪಾವತಿಗೆ 50% ಡಿಸ್ಕೌಂಟ್
ಕೆಲ ಹೊತ್ತಿನ ಬಳಿಕ ರಾಜು ಪತ್ನಿ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದವರು ಸಂಕಟ ತಾಳಲಾರದೆ ಅಲ್ಲಿಂದ ಹೊರಟು ಊರ ಕಡೆಗೆ ಬಂದು ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ತಕ್ಷಣವೇ ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ರಾಜು ಪತ್ನಿ ಮಂಗಳಮ್ಮ (28) ಸಾವನ್ನಪ್ಪಿದ್ದರೆ, ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ತಾನು ಮಾತ್ರ ಸತ್ತರೆ ಕುಟುಂಬಸ್ಥರಿಗೆ ಸಾಲಗಾರರ ಕಾಟ ತಪ್ಪುವುದಿಲ್ಲ ಎಂದು ಎಲ್ಲರಿಗೂ ವಿಷವುಣಿಸುವ ನಿರ್ಧಾರ ರಾಜು ಮಾಡಿದ್ದ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ರಾಜು ಸಾಲಗಾರರ ಕಾಟಕ್ಕೆ ಈ ರೀತಿಯ ತೀರ್ಮಾನ ಮಾಡಿದ್ದ. ನನ್ನ ತಮ್ಮ ಹಾಗೂ ಸ್ನೇಹಿತರು ಸೇರಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ ಎಂದಿದ್ದಾನೆ.
ಜೈಪುರ: ಇಎಂಐ (EMI) ಕಟ್ಟು ಎಂದು ಹೇಳಿದ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯನ್ನು (Hot Oil) ಎರಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ (Rajasthan) ಜುಂಜುನು ಎಂಬಲ್ಲಿ ನಡೆದಿದೆ. ದಾಳಿಗೊಳಗಾದ ಇಬ್ಬರು ಉದ್ಯೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರದಿಗಳ ಪ್ರಕಾರ ಜುಂಜುನುವಿನ ರಾಝಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ಬಳಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ಸುರೇಂದ್ರ ಸ್ವಾಮಿ ಫೈನಾನ್ಸ್ ಕಂಪನಿಯಲ್ಲಿ ವೈಯಕ್ತಿಕ ಸಾಲ (Loan) ಪಡೆದಿದ್ದು, ಇಎಂಐ ವಸೂಲಿಗಾಗಿ ಬಂದಿದ್ದ ಇಬ್ಬರು ನೌಕರರು ಕುಲದೀಪ್ ಹಾಗೂ ನವೀನ್ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ.
ಆರೋಪಿಯು ವಾರ್ಡ್ ನಂ.44ರ ಖೈತಾನ್ ಕಾ ಮೊಹಲ್ಲಾದ ನಿವಾಸಿಯಾಗಿದ್ದು, ಕುಲದೀಪ್ ಮತ್ತು ನವೀನ್ ಇಬ್ಬರೂ ಇಎಂಐ ಕೇಳಲು ಸ್ವಾಮಿ ಮನೆಗೆ ಬಂದಿದ್ದರು. ಆದರೆ ಸ್ವಾಮಿ ಅವರನ್ನು ರಾಣಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಬಳಿ ಭೇಟಿಯಾಗುವಂತೆ ಕರೆದಿದ್ದಾನೆ. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ
ಸ್ವಾಮಿ ಅವರನ್ನು ಭೇಟಿಯಾದ ಬಳಿಕ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ವೇಳೆ ಸಿಟ್ಟಾದ ಸ್ವಾಮಿ ಹತ್ತಿರದ ಅಂಗಡಿಯ ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಜಗ್‌ನಲ್ಲಿ ತೆಗೆದುಕೊಂಡು ಅವರಿಬ್ಬರ ಮೇಲೆ ಎರಚಿದ್ದಾನೆ. ಬಳಿಕ ಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ದಾಳಿಯಿಂದಾಗಿ ತೀವ್ರವಾದ ಸುಟ್ಟ ಗಾಯಗಳಾಗಿ ಉದ್ಯೋಗಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಆರೋಪಿ ಸುರೇಂದ್ರ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಕುಲದೀಪ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನವೀನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊತ್ವಾಲಿ ಪೊಲೀಸರು ಸುರೇಂದ್ರ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ
Live Tv
[brid partner=56869869 player=32851 video=960834 autoplay=true]
ಕೋಲಾರ: ಆತ ಮಗಳನ್ನು (Daughter) ಪ್ರೀತಿಯಿಂದ ಬೆಳೆಸಿದ್ದ. ತನ್ನ ಮಗಳಿಗಾಗಿ ಕೇಳಿದ್ದೆಲ್ಲವನ್ನು ತಂದು ಕೊಡುತ್ತಿದ್ದ ತಂದೆ (Father). ಆದರೂ ಆತನಿಗೆ ಕಾಡಿದ ಅದೊಂದು ಸಾಲದ (Loan) ಬಾಧೆ, ಹೂಡಿಕೆಯಲ್ಲಿನ ನಷ್ಟ ತನ್ನ ಕೈಯಾರೆ ಆಡಿಸಿದ್ದ ಮಗಳನ್ನು ತಾನೇ ಎದೆಗೆ ಬಿಗಿದಪ್ಪಿ ಕೊಂದುಹಾಕಿದ್ದಾನೆ.
ನವೆಂಬರ್ 16 ರಂದು ನಡೆದಿದ್ದ ಘಟನೆ, ಗುಜರಾತ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ (Techie) ಒಬ್ಬ ತನ್ನ ಮಗಳನ್ನು ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದ ಪ್ರಕರಣದ ಅಸಲಿಯತ್ತು ಇದೀಗ ಬಯಲಾಗಿದೆ. ತನ್ನ ಮಗಳನ್ನು ತನ್ನ ಕೈಯಾರೆ ಕೊಂದ ತಂದೆ ಹೇಳಿದ ಕಥೆ ಕೇಳಿದರೆ ಎಂತಹವರಿಗೂ ಕಣ್ಣಾಲೆಗಳು ತುಂಬಿ ಬರುತ್ತವೆ.
ಗುಜರಾತ್ ಮೂಲದ ಸಾಪ್ಟ್‌ವೇರ್ ಎಂಜಿನಿಯರ್ ರಾಹುಲ್ ಬೆಂಗಳೂರಿನ ಬಾಗಲೂರಿನಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ ಭವ್ಯ ಜೊತೆ ರಾಗಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ. 5-6 ವರ್ಷಗಳ ದಾಂಪತ್ಯ ಜೀವನಕ್ಕೆ ಸಾಕ್ಷಿ ಎಂಬಂತೆ ರಾಹುಲ್ ಮತ್ತು ಭವ್ಯಾ ದಂಪತಿಗೆ 3 ವರ್ಷದ ಒಂದು ಮುದ್ದಾದ ಹೆಣ್ಣು ಮಗು ಇತ್ತು. ಆಕೆಯ ಹೆಸರು ಜಿಯಾ.
2016 ರಿಂದ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದ ರಾಹುಲ್ ಕಳೆದ ಒಂದೂವರೆ ವರ್ಷಗಳಿಂದ ಕೆಲಸವೂ ಇಲ್ಲದೆ ಕುಳಿತಿದ್ದ. ನವೆಂಬರ್ 15 ರಂದು ಮಗಳನ್ನು ಶಾಲೆಗೆ ಬಿಡಲು ಹೊರಡುವ ವೇಳೆಗೆ ಆತನ ಸಮಸ್ಯೆಗಳೆಲ್ಲಾ ಮನೆ ಬಾಗಿಲಿಗೆ ಬಂದು ನಿಂತಿದ್ದವು. ಸಾಲಗಾರರು ಮನೆಯ ಬಳಿ ಬಂದು ನಿಂತಿದ್ದರು. ತಾನು ನೀಡಿದ್ದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂದು ಠಾಣೆಗೆ ಬರುವಂತೆ ಕರೆದಿದ್ದರು. ಇದರ ಜೊತೆಗೆ ತನ್ನ ಪತ್ನಿ ಕೇಳಿದ್ದನ್ನು ಕೊಡಿಸಿ ಸಂತೋಷವಾಗಿಡಬೇಕು ಎನ್ನುವ ಜವಾಬ್ದಾರಿ. ಇಂತಹ ಪರಿಸ್ಥಿತಿಯಲ್ಲಿ ಜೇಬಲ್ಲಿ ಒಂದು ನಯಾಪೈಸೆ ಇಲ್ಲದಿರುವಾಗ ಅಂದು ತನ್ನ ಮಗಳನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೋದ ರಾಹುಲ್ ವಾಪಾಸ್ ಮನೆಗೆ ಮರಳಲಾಗದ ಸ್ಥಿತಿ ಆತನಿಗೆ ಬಂದಿತ್ತು. ಒಂದು ವೇಳೆ ಮನೆಗೆ ಹೋದರೂ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿ, ತನ್ನ ಮುದ್ದಿನ ಮಗಳೊಂದಿಗೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದ.
ಸಾಯುವ ನಿರ್ಧಾರ ಮಾಡಿ ಮನೆಯಿಂದ ಹೊರಟ ರಾಹುಲ್ ತನ್ನ ಮಗಳೊಂದಿಗೆ ಸೀದಾ ಹೊಸಕೋಟೆ ಮಾರ್ಗವಾಗಿ ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದು ನಿಂತಿದ್ದ. ಅಷ್ಟೊತ್ತಿಗೆ ಸಂಜೆಯಾಗಿತ್ತು. ತನ್ನ ಮಗಳೊಂದಿಗೆ ರಾಹುಲ್ ಕೆರೆಯಲ್ಲಿ ಮುಳುಗಿ ಸಾಯಲು ನಿರ್ಧರಿಸಿದ್ದ. ಆದರೆ ಮಗಳು ಬದುಕಿ ತಾನು ಸಾಯಬಾರದು ಎಂದು ಮೊದಲು ಮಗಳನ್ನು ಬಿಗಿದಪ್ಪಿಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಮಗಳನ್ನು ಎದೆಗಪ್ಪಿಕೊಂಡು ನೀರಿಗೆ ಹಾರಿದ್ದಾನೆ. ಆದರೆ ನೀರು ಆಳವಿರಲಿಲ್ಲ. ಸಾಯಲು ಸಾಧ್ಯವಾಗಿಲ್ಲ. ಅಷ್ಟು ಹೊತ್ತಿಗೆ ರಾಹುಲ್‌ಗೆ ಸಾಯಲು ಧೈರ್ಯ ಬರಲಿಲ್ಲ. ಇದನ್ನೂ ಓದಿ: ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ
ಸಾವಿಗೆ ಹೆದರಿ ರಾಹುಲ್ ಮಗಳ ಮೃತದೇಹವನ್ನು ಅಲ್ಲೇ ಬಿಟ್ಟು ಕಾರ್‌ನಲ್ಲಿ ತನ್ನ ಮೊಬೈಲ್, ಪರ್ಸ್, ಎಲ್ಲವನ್ನೂ ಬಿಟ್ಟು, ಅಪರಿಚಿತ ವ್ಯಕ್ತಿಯೊಬ್ಬರ ಸಹಾಯದಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಂಡು, ರೈಲು ಹತ್ತಿ ಹೊರಟಿದ್ದಾನೆ. ರಾಹುಲ್ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ದೆಹಲಿ, ಹೀಗೆ ರೈಲಿನಲ್ಲಿ 4-5 ರಾಜ್ಯಗಳನ್ನು ಸುತ್ತಾಡಿದ್ದಾನೆ. ರೈಲಿನಲ್ಲಿ ಪ್ರಯಾಣ ಮಾಡುವ ವೇಳೆಯೂ ರೈಲಿನಿಂದ ಹಾರಿ ಸಾಯಲು ಯತ್ನಿಸಿದ್ದಾನೆ. ಆದರೂ ಆತನಿಗೆ ಸಾಯಲು ಧೈರ್ಯ ಸಾಕಾಗಲಿಲ್ಲ. ಈ ವೇಳೆ ತನ್ನ ಹೆಂಡತಿ ಹಾಗೂ ಮನೆಯವರಿಗೆ ಪೋನ್ ಮಾಡಿ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಆಗ ಇವನಿಗಾಗಿ ಹುಡುಕಾಟ ನಡೆಸಿದ ಪೊಲೀಸರು ರಾಹುಲ್ ಆಂಧ್ರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ, ಕರೆತಂದು ವಿಚಾರಣೆ ಮಾಡಿದಾಗ ಅಸಲಿ ವಿಷಯ ತಿಳಿದು ಬಂದಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಅಂಬುಲೆನ್ಸ್-ಆಟೋ ಮುಖಾಮುಖಿ ಡಿಕ್ಕಿ – ನಾಲ್ವರಿಗೆ ಗಾಯ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮೃತದೇಹದ ಜೊತೆ ಭೂಪನೊಬ್ಬ ಠಾಣೆಗೆ ಆಗಮಿಸಿ ಪೊಲೀಸರಿಗೆ(Bengaluru Police) ಶಾಕ್ ಕೊಟ್ಟ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ಕಾರಿನಲ್ಲೇ ಮೃತದೇಹವನ್ನು ಹೊತ್ತುಕೊಂಡು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ(Ramamurthy Nagar Police Station) ತಂದಿದ್ದಾನೆ. ಈಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.
ಬ್ಯಾಂಕ್‌ನಿಂದ ಸಾಲ(Bank Loan) ಕೊಡಿಸುವುದಾಗಿ ಹಲವಾರು ಜನರಿಂದ ಮಹೇಶಪ್ಪ ಹಣ ಪಡೆದಿದ್ದ. ಈ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ನೀಡದೇ ಪಡೆದ ಹಣ ವಾಪಸ್ ಕೊಡದೇ ಮಹೇಶಪ್ಪ ಪರಾರಿಯಾಗಿದ್ದ.
ಸಾಲ ನೀಡಿದವರು ಪ್ರಶ್ನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಡಬೇಕಿದ್ದ ಹಣವನ್ನು ರಾಜಶೇಖರ ನೀಡಿದ್ದ. ಈ ಕಾರಣಕ್ಕೆ ಒಂದೂವರೆ ಕೋಟಿ ರೂ.ಗಾಗಿ ರಾಜಶೇಖರ ಮಹೇಶಪ್ಪನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ.
ನಂಜನಗೂಡು ಬಳಿಯ ಹಿಮನಗುಂಡಿ ಹಳ್ಳಿಯಿಂದ ಮಹೇಶಪ್ಪನನ್ನು ಭಾನುವಾರ ಬೆಂಗಳೂರಿಗೆ ಕಾರಿನಲ್ಲಿ ರಾಜಶೇಖರ ಕರೆತಂದಿದ್ದ. ರಾತ್ರಿ ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ಹಠ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಸಿಟ್ಟಾದ ರಾಜಶೇಖರ ಮಹೇಶಪ್ಪನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಬಳಿಕ ಬೆಳಗ್ಗಿನ ತನಕ ಗಾಯಾಳುವನ್ನು ಕಾರಿನಲ್ಲಿ ರಾಜಶೇಖರ ಇರಿಸಿಕೊಂಡಿದ್ದ. ಬೆಳಗಿನ ಜಾವ ಎಚ್ಚರವಾಗಿ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಗೊತ್ತಾಗಿದೆ.
ಸೋಮವಾರ ರಾತ್ರಿ ಕಾರು, ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ರಾಜಶೇಖರ ಪೊಲೀಸರ ಮುಂದೆ ಶರಣಾಗಿ ನಡೆದ ಘಟನೆಯನ್ನು ವಿವರಿಸಿದ್ದಾನೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ತನ್ನ 2-3 ಸ್ನೇಹಿತರಿಗೆ (Friends) ಸಂದೇಶ (Message) ಕಳುಹಿಸಿ ಯುವಕನೊಬ್ಬ ನೀರಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಡ್ಯಾಂನಲ್ಲಿ ನಡೆದಿದೆ.
ಕಲ್ಲಹಳ್ಳಿ ಗ್ರಾಮದ ಸಚಿನ್(24) ಮೃತ ಯುವಕ. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಸಾಲದ (Loan) ಸುಳಿಗೆ ಸಿಲುಕಿ ಮಾನಸಿಕ ಒತ್ತಡ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ
ಯುವಕ ಆತ್ಮಹತ್ಯೆಗೂ ಮುನ್ನ ತನ್ನ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದಾನೆ. ತಾನು ಈ ರೀತಿ ಸೂಸೈಡ್ ಮಾಡಿಕೊಳ್ಳುತ್ತಿರುವುದನ್ನು ಮನೆಯವರಿಗೆ ತಿಳಿಸುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಮೃತ ದೇಹ ಮೇಲೆತ್ತಿದ್ದಾರೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾವಿಯಲ್ಲಿ ಬಾರ್ ಉದ್ಯಮಿ ಶವವಾಗಿ ಪತ್ತೆ
Live Tv
[brid partner=56869869 player=32851 video=960834 autoplay=true]
– ವಿಕೃತ ಮನಸ್ಸಿನ ವ್ಯಕ್ತಿಗಳಿಂದ ಅಪ್ರಾಪ್ತ ಬಾಲಕನಿಗೆ ವಂಚನೆ -ಪೂಜೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೊಪ್ಪಳ: ಅಪ್ಪನ ಸಾಲ ತೀರಿಸುವುದಕ್ಕೆ ಮಗನಿಂದ ಬೆತ್ತಲೆ ಪೂಜೆ (Naked Worship) ಮಾಡಿಸುವ ಮೂಲಕ ವಿಕೃತ ಮನಸ್ಸಿನ ವ್ಯಕ್ತಿಗಳು ಅಪ್ರಾಪ್ತ ಬಾಲಕನಿಗೆ ಅವಮಾನ ಮಾಡಿರುವ ಅಮಾನವೀಯ ಘಟನೆ ಹುಬ್ಬಳಿಯಲ್ಲಿ (Hubballi) ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ 16 ವರ್ಷದ ಪ್ರದೀಪ್ ನೊಂದ ಬಾಲಕ. ಶರಣಪ್ಪ, ಇರುಪನಗೌಡ, ಶರಣಪ್ಪ ತಳವರ್ ವಿಕೃತ ಮೆರೆದವರಾಗಿದ್ದಾರೆ. ನಿಮ್ಮ ಅಪ್ಪನ ಸಾಲ ತೀರಬೇಕೆಂದರೆ ಬೆತ್ತಲೆ ಪೂಜೆ ಮಾಡಿದ್ರೆ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಬೆತ್ತಲೆ ಪೂಜೆ ಮಾಡಬೇಕು. ಇದರಿಂದ ಬಡತನ ನಿವಾರಣೆ ಆಗುತ್ತದೆ ಎಂದು ಪ್ರದೀಪ್ ಅನ್ನು ಶರಣಪ್ಪ ಆ್ಯಂಡ್ ಟೀಂ ಪುಸಲಾಯಿಸಿದ್ದರು. ಇದನ್ನೂ ಓದಿ: ನವರಾತ್ರಿ ದಾಂಡಿಯಾ ಉತ್ಸವದಲ್ಲಿ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್
ಬಳಿಕ ರೂಮ್‍ನಲ್ಲಿ ಪ್ರದೀಪ್ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿ. ಇದನ್ನು ವೀಡಿಯೋ ಮಾಡಿ ಫೇಸ್‍ಬುಕ್, ವಾಟ್ಸಾಪ್ ಹಾಗೂ ಯೂಟ್ಯೂಬ್‍ಗಳಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ಇದರಿಂದಾಗಿ ನೊಂದ ಪ್ರದೀಪ್ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತುಮಕೂರು: ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ (Manju Pavagada) ಸಹೋದರ ಪ್ರದೀಪ್‍ಗೆ ಧರ್ಮದೇಟು ಹಾಕಿದ್ದಾರೆ.
ಪ್ರದೀಪ್ ಸದ್ಯಕ್ಕೆ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ (Subsidized Loan) ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ
ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ. ಘಟನೆಗೆ ಸಂಬಂಧಿಸಿ ಬ್ಲಾಕ್ ಮೇಲ್‍ಗೆ ಮುಂದಾಗಿದ್ದ ನಾಲ್ವರು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು (Tumkur) ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ:ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್
Live Tv
[brid partner=56869869 player=32851 video=960834 autoplay=true]
ನವದೆಹಲಿ: ರೈಲ್ವೇ ನಿಲ್ದಾಣದಲ್ಲಿ (Railway Station) ಮಲಗಿದ್ದ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ (Fire) ಹಚ್ಚಿರುವ ಭೀಕರ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಸಂತ್ರಸ್ತ ವ್ಯಕ್ತಿಯ ದೇಹದಲ್ಲಿ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಸಂತ್ರಸ್ತ ವ್ಯಕ್ತಿ ಜೋಗರಾಜ್(48) ತನ್ನ ಮಗಳ ಮದುವೆಗಾಗಿ ಸಾಲ(Loan) ಮಾಡಿದ್ದ. ಆತ ಸಾಲವನ್ನು ತೀರಿಸದೇ ಇದ್ದಿದ್ದರಿಂದ ಸೇಡು ತೀರಿಸಿಕೊಳ್ಳಲು ಬೆಂಕಿ ಹಚ್ಚಲಾಗಿದೆ. ವ್ಯಕ್ತಿಯ ಕಾಲ್ಬೆರಳುಗಳನ್ನು ಸಹಿಯಾಗಿ ಬಳಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತನ ಹೇಳಿಕೆಯೇನು?
ಈ ವರ್ಷ ಮೇ ತಿಂಗಳಲ್ಲಿ, ನನ್ನ ಮಗಳ ಮದುವೆಗಾಗಿ ನಾನು ಸಾಲಗಾರ ರಾಜೀವ್‌ನಿಂದ ಸಾಲವನ್ನು ತೆಗೆದುಕೊಂಡಿದ್ದೆ. ನಾನು ಅದನ್ನು ಮರುಪಾವತಿಸಲು ಸ್ವಲ್ಪ ಸಮಯ ಕೇಳಿದ್ದೆ. ಆದರೆ ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಗುರುವಾರ ರಾತ್ರಿ ಅವರು ನನಗೆ ಕೊಲೆ ಬೆದರಿಕೆ ಒಡ್ಡಿದ್ದರು ಎಂದು ಜೋಗರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ನಾಯಿಗಳ ಹಾವಳಿ- ಒಂದೇ ವರ್ಷದಲ್ಲಿ ಆರೂವರೆ ಸಾವಿರ ಮಂದಿಗೆ ಕಡಿತ
ಶುಕ್ರವಾರ ರಾತ್ರಿ ನಾನು ಪೊಲೀಸ್ ಬ್ಯಾರಿಕೇಡ್ ಬಳಿ ಮಲಗಿದ್ದೆ. ಸುಮಾರು 2 ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ನಾನು ಸಾಲ ತೆಗೆದುಕೊಂಡಿದ್ದ ರಾಜೀವ್ ನನ್ನ ಮೇಲೆ ಬೆಂಕಿ ಇಟ್ಟು ಹೋಗಿದ್ದಾನೆ. ನಾನು ಸಹಾಯಕ್ಕಾಗಿ ಕಿರುಚಿದೆ. ಆದರೆ ರಾಜೀವ್ ಇನ್ನೊಬ್ಬ ಯುವಕನೊಂದಿಗೆ ತನ್ನ ಸ್ಕೂಟರ್‌ನಲ್ಲಿ ಓಡಿಹೋದ ಎಂದಿದ್ದಾರೆ.
ಜೋಗರಾಜ್ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದು, ಯಾವಾಗಲೂ ದೆಹಲಿಯ ರೈಲ್ವೇ ನಿಲ್ದಾಣದ ಪೊಲೀಸ್ ಪೋಸ್ಟ್ ಅಥವಾ ಬ್ಯಾರಿಕೇಡ್‌ಗಳ ಬಳಿ ಮಲಗುತ್ತಿದ್ದ. ಆರೋಪಿಗಳು ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾದಾಗ ಜೋಗರಾಜ್‌ನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಹೈದರಾಬಾದ್: ಆನ್‍ಲೈನ್‍ನಲ್ಲಿ ಆ್ಯಪ್ (Online Loan App) ಮೂಲಕ ಸಾಲ ನೀಡಿದವರ ಕಿರುಕುಳ ಸಹಿಸಲಾಗದೇ ದಂಪತಿ(Couple) ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಕೊಲ್ಲಿ ದುರ್ಗಾರಾವ್ ಹಾಗೂ ರಮ್ಯಾ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಕೊಲ್ಲಿ ದುರ್ಗಾರಾವ್ ಅವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಲಬ್ಬರ್ತಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಜೀವನೋಪಾಯ ಅರಸಿ ರಾಜಮಹೇಂದ್ರವರಂಗೆ ಬಂದಿದ್ದರು. ಆರು ವರ್ಷಗಳ ಹಿಂದೆ ರಮ್ಯಾ ಲಕ್ಷ್ಮಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ 4 ವರ್ಷದ ನಾಗ ಸಾಯಿ ಹಾಗೂ 2 ವರ್ಷದ ಲಿಕಿತಾ ಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
ಪೇಂಟರ್ ಆಗಿ ದುರ್ಗಾರಾವ್ ಹಾಗೂ ಟೈಲರ್ ಆಗಿ ರಮ್ಯಾ ಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬದಲ್ಲಿನ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಈ ದಂಪತಿ ಎರಡು ಆನ್‍ಲೈನ್ ಲೋನ್ ಅಪ್ಲಿಕೇಶನ್‍ಗಳಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು. ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಸಾಲ ನೀಡಿದವರು ಕಿರುಕುಳ ನೀಡಲು ಆರಂಭಿಸಿದರು. ದಂಪತಿ ಸಾಲದ ಮೊತ್ತದ ಸ್ವಲ್ಪ ಭಾಗವನ್ನು ಮಾತ್ರ ಮರುಪಾವತಿಸಿದರು. ಆದರೆ ಅವರು ಸಾಲ ಪಡೆದ ಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ.
ನಂತರ ಆನ್‍ಲೈನ್ ಲೋನ್ ಆ್ಯಪ್ ಕಂಪನಿಯು ದಂಪತಿಗೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಡಲು ಪ್ರಾರಂಭಿಸಿತು ಮತ್ತು ರಮ್ಯಾ ಲಕ್ಷ್ಮಿ ಅವರ ಅಸಭ್ಯ, ಮಾರ್ಫ್ (Morphed Picture) ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿತ್ತು. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ
ಹೇಗಾದರೂ ಹೆಚ್ಚು ಹಣ (Money) ವನ್ನು ಸಂಪಾದಿಸಲೇ ಬೇಕು ಎಂಬ ಕಾರಣಕ್ಕೆ ದುರ್ಗಾ ರಾವ್ ಅವರು 10 ದಿನಗಳ ಹಿಂದೆ ಡೆಲಿವರಿ ಬಾಯ್(Deliver Boy) ಆಗಿ ಹೆಚ್ಚುವರಿ ಕೆಲಸವನ್ನು ಮಾಡುತ್ತಿದ್ದರು ಮತ್ತು ತಮ್ಮ ಕೈಲಾದಷ್ಟು ಹಣವನ್ನು ಸಂಪಾದಿಸಿದರು. ಇದನ್ನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು
ಈ ನಡುವೆ ಆನ್‍ಲೈನ್ ಸಾಲದ ಆ್ಯಪ್ ಕಂಪನಿಯು ರಮ್ಯಾ ಲಕ್ಷ್ಮಿ ಅವರ ಮಾರ್ಫ್ ಮಾಡಿದ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವ ಮೂಲಕ ಬೆದರಿಕೆಯೊಡ್ಡಿದೆ. ಎರಡು ದಿನಗಳಲ್ಲಿ ಪೂರ್ಣ ಸಾಲವನ್ನು ಮರುಪಾವತಿಸದೇ ಇದ್ದರೆ ಶೀಘ್ರದಲ್ಲೇ ಆಕೆಯ ಮಾರ್ಫ್ ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ದಂಪತಿಗೆ ಎಚ್ಚರಿಕೆ ನೀಡಿದೆ.
ನಂತರ ಸೆಪ್ಟೆಂಬರ್ 5 ರಂದು ದಂಪತಿ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ಪ್ರಯಾಣ ಬೆಳೆಸಿದರು. ನಗರದ ಗೋದಾವರಿ ನದಿಯ ಬಂಡ್‍ನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದರು. ಈ ವೇಳೆ ಮಧ್ಯರಾತ್ರಿ ರಮ್ಯಾ ತನ್ನ ಸೋದರಸಂಬಂಧಿಗೆ ಕರೆ ಮಾಡಿ ತಾನು ಮತ್ತು ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು, ತಮ್ಮ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವಂತರ ಮನವಿ ಮಾಡಿದ್ದಾರೆ.
ಕೂಡಲೇ ರಮ್ಯಾ ಸೋದರ ಸಂಬಂಧಿ ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಹೋಟೆಲ್‍ಗೆ ತಲುಪಿದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಂಪತಿ ಸಾವನ್ನಪ್ಪಿದ್ದು, ಇಬ್ಬರೂ ವಿಷ ಸೇವಿಸಿದ್ದಾರೆ ಎಂಬ ಸತ್ಯ ತಿಳಿದು ಬಂದಿದೆ. ಇದೀಗ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]