Tag: loan

  • ಸಾಲ ಮರುಪಾವತಿ ವಿಳಂಬ- ತುಮಕೂರು ಕಾಲೇಜಿಗೆ ಬೀಗ ಜಡಿದ ಬ್ಯಾಂಕ್‌

    ಸಾಲ ಮರುಪಾವತಿ ವಿಳಂಬ- ತುಮಕೂರು ಕಾಲೇಜಿಗೆ ಬೀಗ ಜಡಿದ ಬ್ಯಾಂಕ್‌

    ತುಮಕೂರು: ಸಾಲ ಮರುಪಾವತಿ ಮಾಡದ ಕಾರಣಕ್ಕೆ ಶೆಟ್ಟಿಹಳ್ಳಿ ಬಳಿಯ ಎಚ್ಎಂಎಸ್ ಪಾಲಿಟೆಕ್ನಿಕ್ ಕಾಲೇಜಿಗೆ (HSM Polytechnic College) ಟಿಜಿಎಂಸಿ ಬ್ಯಾಂಕ್ (TGMC Bank) ಸಿಬ್ಬಂದಿ ಬೀಗ ಹಾಕಿದ ಪ್ರಸಂಗ ನಡೆದಿದೆ.

    ಮಾಜಿ ಶಾಸಕ, ಎಚ್‌ಎಂಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಫಿ ಅಹ್ಮದ್ ಹಲವು ವರ್ಷಗಳ ಹಿಂದೆ ತುಮಕೂರು ಗ್ರೈನ್ ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಪಡೆದ ಸಾಲವನ್ನು ಪಾವತಿಸದ ಕಾರಣ ಬ್ಯಾಂಕ್‌ ಹಲವು ಬಾರಿ ನೋಟಿಸ್‌ ಜಾರಿ ಮಾಡಿತ್ತು. ಇದನ್ನೂ ಓದಿ: ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ಬ್ಯಾಂಕ್‌ನಿಂದ ಹಲವು ಬಾರಿ ನೋಟಿಸ್ ನೀಡಿದರೂ ಸ್ಪಂದಿಸದ ಕಾರಣ ಶನಿವಾರ ಬ್ಯಾಂಕ್ ಸಿಬ್ಬಂದಿ ಕಾಲೇಜಿಗೆ ಬೀಗ ಹಾಕಿದ್ದಾರೆ. ಸಂಜೆ ಬಾಕಿ ಹಣ ಪಾವತಿಸಿದ ನಂತರ ಕಾಲೇಜಿಗೆ ಹಾಕಿದ್ದ ಬೀಗ ತೆರವು ಮಾಡಲಾಯಿತು.

    ಹಣ ಪಾವತಿ ಮಾಡಿದ ನಂತರ ಆಡಳಿತ ಮಂಡಳಿ ವಶಕ್ಕೆ ಕಾಲೇಜನ್ನು ನೀಡಲಾಯಿತು ಎಂದು ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ದಿವ್ಯಾನಂದಮೂರ್ತಿ ತಿಳಿಸಿದರು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾಗೆ 25 ಕೋಟಿ ರೂ. ಸಾಲ ಕೊಟ್ಟ ನಟನಾರು?: ಅಸಲಿ ಸತ್ಯವೇನು?

    ಸಮಂತಾಗೆ 25 ಕೋಟಿ ರೂ. ಸಾಲ ಕೊಟ್ಟ ನಟನಾರು?: ಅಸಲಿ ಸತ್ಯವೇನು?

    ಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನಂತೆ. ಚಿಕಿತ್ಸೆಗಾಗಿ ಇಷ್ಟು ಕೋಟಿ ಬೇಕಾ? ಏನಿದರ ಹಿಂದಿನ ಹೂರಣ.

    ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು. ಕೈಯಲ್ಲಿದ್ದ ಹಣ ಕೊಟ್ಟು ಈಗ ಸ್ಟಾರ್ ನಟನಿಂದ ಕೋಟಿ ಕೋಟಿ ಸಾಲ ಪಡೆದುಕೊಂಡಿದ್ದಾರೆ. ಇದು ಸತ್ಯವಾ ಸುಳ್ಳಾ?

    ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ ? ಸಾವಿರದ ಪ್ರಶ್ನೆಗಳು ಸಾಲು ಸಾಲು. ಈ ಪ್ರಮಾಣದಲ್ಲಿ ಹಣವನ್ನು ಸಾಲವಾಗಿ ಪಡೆದಿರುವುದು ಅನುಮಾನ ಎನ್ನುತ್ತಾರೆ ಸಮಂತಾ ಹತ್ತಿರದವರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

    ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

    ಮುಂಬೈ: ಸಾಲ (Loan) ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಪತಿಯೆದುರೇ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಘಟನೆ ಈ ವರ್ಷ ಫೆಬ್ರವರಿಯಲ್ಲಿ ನಡೆದಿದೆ. ಆದರೆ ಈಗ ಬೆಳಕಿಗೆ ಬಂದಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ವ್ಯಕ್ತಿಯೊಬ್ಬ 40,000 ರೂ. ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಸಾಲ ನೀಡಿದಾತ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಮಹಿಳೆಯ ಪತಿಗೆ ಚಾಕು ತೋರಿಸಿ, ಬೆದರಿಸಿ ನಂತರ ಆತನ ಸಮ್ಮುಖದಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಕೃತ್ಯದ ವೀಡಿಯೋವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದ ವಿಸಿ ನಾಲೆಗೆ ಕಾರು ಪಲ್ಟಿ – ಚಾಲಕ ನಾಪತ್ತೆ

    ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಅವಘಡ – ಕೊಟ್ಟಿಗೆಯಲ್ಲಿದ್ದ 7 ಹಸುಗಳು ಸಜೀವ ದಹನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KMDC ಸಾಲ ವಸೂಲಾತಿ 50% ಪ್ರಗತಿ ತೋರಿಸಲು ಸಚಿವ ಜಮೀರ್ ಟಾರ್ಗೆಟ್!

    KMDC ಸಾಲ ವಸೂಲಾತಿ 50% ಪ್ರಗತಿ ತೋರಿಸಲು ಸಚಿವ ಜಮೀರ್ ಟಾರ್ಗೆಟ್!

    ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ನೀಡಿರುವ ಸಾಲ ವಸೂಲಾತಿ (Loan Recovery) ಪ್ರಸಕ್ತ ವರ್ಷ 50% ಪ್ರಗತಿ ಸಾಧಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಟಾರ್ಗೆಟ್ ನೀಡಿದ್ದಾರೆ.

    KMDC ಭವನದಲ್ಲಿ ಗುರುವಾರ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಾಲ ವಸೂಲಾತಿಯಲ್ಲಿ ಕಳಪೆ ಪ್ರದರ್ಶನದ ತೋರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ವರ್ಷ 50% ವಸೂಲಾತಿ ಆಗಲೇಬೇಕು ಎಂದು ನಿರ್ದೇಶನ ನೀಡಿದರು. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?

    ಶೈಕ್ಷಣಿಕ, ಉದ್ದಿಮೆ, ಸ್ವಾವಲಂಬಿ ಯೋಜನೆ ಸೇರಿ ನಿಗಮ ನೀಡಿರುವ ಸಾಲದ ಪೈಕಿ 582 ಕೋಟಿ ರೂ. ವಸೂಲಾತಿ ಆಗಬೇಕಿದೆ. ವಸೂಲಾತಿ ಪ್ರಮಾಣ 2021 ರಲ್ಲಿ 15%, 2022 ರಲ್ಲಿ 25% ಇದೆ. 2023-24 ರಲ್ಲಿ 50% ಗುರಿ ಸಾಧಿಸಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: 26/11 ರಂತೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಸಿದ್ಧರಾಗಿ- ಮುಂಬೈ ಪೊಲೀಸ್ರಿಗೆ ಬೆದರಿಕೆ ಕರೆ

    ಕಲಬುರಗಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ ಜಿಲ್ಲೆಗಳಲ್ಲಿ ಸಾಲ ವಸೂಲಾತಿ ಪ್ರಮಾಣ ಕೇವಲ ಶೇ.1.36 ರಿಂದ 2.64 ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಅದಕ್ಕಾಗಿ ವೇತನ, ಸೌಲಭ್ಯ ನೀಡಬೇಕೆ ಎಂದು ಪ್ರೆಶ್ನೆ ಮಾಡಿದರು. ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳ ಸಭೆ ಇದೇ ತಿಂಗಳು 25 ರಂದು ಕರೆಯುವಂತೆ ಸೂಚಿಸಿದರು. ಇನ್ಮುಂದೆ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ ಎಂದು ಹೇಳಿದರು.

    ಸಾಲ ಮರು ಪಾವತಿ ವಿಚಾರದಲ್ಲಿ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ, ಸಾಲ ಮರುಪಾವತಿ ಸರಿಯಾಗಿ ಮಾಡುವವರಿಗೆ ಪ್ರಸಂಶನಾ ಪ್ರಮಾಣ ಪತ್ರ ನೀಡಿ ಮತ್ತೆ ಹೊಸದಾಗಿ ಸಾಲ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಸಾಲ ವಸೂಲಾತಿಗಾಗಿ ಅಭಿಯಾನ ಆರಂಭಿಸಿ ಅದಕ್ಕಾಗಿ ವಾಹನ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಿದರು.

    ಅಧಿಕಾರಿಗಳಿಗೆ ತೀವ್ರ ತರಾಟೆ:
    2016-17ನೇ ಸಾಲಿನಿಂದ ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳನ್ನ ರಾಜ್ಯದಲ್ಲಿ ಪಡೆಯದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣದಿಂದ ಪ್ರಾರಂಭ ಮಾಡಲು ಸೂಚಿಸಿದರು. ಶಿಕ್ಷಣ ಹಾಗೂ ಉದ್ದಿಮೆಗೆ ಎನ್‌ಎಂಡಿಸಿಯಿಂದ ವರ್ಷಕ್ಕೆ 10 ಕೋಟಿ ರೂ. ವರೆಗೆ ಸಾಲ ದೊರೆಯಲಿದ್ದು ರಾಜ್ಯದ ವಿದ್ಯಾರ್ಥಿ, ಯುವ ಉದ್ಯಮಿಗಳಿಗೆ ನೆರ ವಾಗಲಿದೆ. ಇಷ್ಟು ವರ್ಷ ಕೇಂದ್ರದ ಯೋಜನೆ ಯಾಕೆ ಪಡೆಯಲಿಲ್ಲ ಎಂದು ಪ್ರೆಶ್ನೆ ಮಾಡಿದರು.

    ಇದೇ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಸಾಲ ಹಾಗೂ ಕಂತು ಮರುಪಾವತಿ ವ್ಯವಸ್ಥೆಗೆ ಸಚಿವರು ಚಾಲನೆ ನೀಡಿದರು. ನಿಗಮದ ಯೋಜನೆಗಳ ಬಗ್ಗೆ ಒನ್ ಟೈಮ್ ಸೆಟ್ಲ್ ಮೆಂಟ್, ಸಾಲ ವಸೂಲಾತಿಅಭಿಯಾನ ಬಗ್ಗೆ ವ್ಯಾಪಕ ಪ್ರಚಾರ ನೀಡಲು ನಿರ್ದೇಶನ ನೀಡಿದರು. ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ನಜೀರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಳ್ಳು ದೂರು ಸಲ್ಲಿಸಿ ವಂಚನೆ: ಪ್ರಶಾಂತ್‌ ಸಂಬರಗಿ ವಿರುದ್ಧ ಎಫ್‌ಐಆರ್‌

    ಸುಳ್ಳು ದೂರು ಸಲ್ಲಿಸಿ ವಂಚನೆ: ಪ್ರಶಾಂತ್‌ ಸಂಬರಗಿ ವಿರುದ್ಧ ಎಫ್‌ಐಆರ್‌

    ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ (Cheating) ಎಸಗಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ (Prashanth Sambargi) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವಂತೆ ಒತ್ತಾಯಿಸಿ ಆಸ್ತಿ (Property) ಕಬಳಿಸಲು ಯತ್ನಿಸುತ್ತಿರುವ ಆರೋಪ ಹೊರಿಸಿ ಬನಶಂಕರಿ 3ನೇ ಹಂತದ ನಿವಾಸಿ ವೈ.ಕೆ. ದೇವನಾಥ್ ದೂರು ನೀಡಿದ್ದಾರೆ. ಇದನ್ನೂ ಓದಿ: ಯುವಕರ ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತಿದ್ದ ಪಿಎಫ್‍ಐ ಮುಖಂಡ ಬಳ್ಳಾರಿಯಲ್ಲಿ ಅರೆಸ್ಟ್

    ದೂರಿನಲ್ಲಿ ಏನಿದೆ?
    ಉತ್ತರಹಳ್ಳಿ ಮುಖ್ಯರಸ್ತೆಯ ಸಿಂಹಾದ್ರಿ ಬಡಾವಣೆಯಲ್ಲಿ ನನ್ನ ನಿವಾಸವಿದೆ. ಆರ್ಥಿಕ ಕಷ್ಟದಲ್ಲಿದ್ದ ಸಮಯದಲ್ಲಿ ನಾನು ಪ್ರಶಾಂತ್‌ ಸಂಬರಗಿ ಅವರಿಂದ 2017ರ ಜುಲೈನಲ್ಲಿ 7.25 ಲಕ್ಷ ರೂ. ಸಾಲ (Loan) ಪಡೆದಿದ್ದೆ. ಸಾಲ ಪಡೆಯುವ ಸಮಯದಲ್ಲಿ ನಾನು ಮನೆಯ ದಾಖಲಾತಿಗಳು ಹಾಗೂ ಖಾಲಿ ಚೆಕ್‌ಗಳನ್ನು ನೀಡಿದ್ದೆ.

    2017ರ ಡಿಸೆಂಬರ್‌ನಲ್ಲಿ 1.25 ಲಕ್ಷ ರೂ. ಹಣವನ್ನು ನಾನು ವಾಪಸ್‌ ನೀಡಿದ್ದೇನೆ. ಆದರೆ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವಂತೆ ಪ್ರಶಾಂತ್‌ ಒತ್ತಾಯಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

     

    ಕಳೆದ ಎಪ್ರಿಲ್ ನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಕುರಿತು ಅವಹೇಳನಕಾರಿ ಪೋಸ್ಟ್‌ ವಿವಾದ ಸಂಬಂಧ ಸಂಬರಗಿ ಉತ್ತರ ವಿಭಾಗದ ಡಿಸಿಪಿ ಮುಂದೆ 2 ಲಕ್ಷ ರು.ಬಾಂಡ್‌ ಹಾಗೂ ಮುಚ್ಚಳಿಕೆ ಬರೆದುಕೊಟ್ಟು ವಿವಾದಕ್ಕೆ ಅಂತ್ಯ ಹಾಡಿದ್ದರು.

  • ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ – ಬ್ಯಾಂಕ್ ಸಿಬ್ಬಂದಿಗೆ ಸ್ತ್ರಿಶಕ್ತಿ ಸಂಘದ ಮಹಿಳೆಯರಿಂದ ಕ್ಲಾಸ್

    ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ – ಬ್ಯಾಂಕ್ ಸಿಬ್ಬಂದಿಗೆ ಸ್ತ್ರಿಶಕ್ತಿ ಸಂಘದ ಮಹಿಳೆಯರಿಂದ ಕ್ಲಾಸ್

    ಕೋಲಾರ: ಡಿಸಿಸಿ ಬ್ಯಾಂಕ್‍ನಿಂದ (DCC Bank) ಕೊಟ್ಟದ್ದ ಸಾಲ (Loan) ಮರುಪಾವತಿಸುವಂತೆ ತಿಳಿಸಲು ಹೋದ ಅಧಿಕಾರಿಗಳಿಗೆ ಮಹಿಳೆಯರು ತರಾಟೆ ತೆಗೆದುಕೊಳ್ಳುತ್ತಿರುವ ಘಟನೆ ಕೋಲಾರದಿಂದ (Kolar) ವರದಿಯಾಗಿದೆ.

     

    ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ (Congress Guarantee) ಜೊತೆಗೆ ಮಹಿಳೆಯರಿಗೆ ಸಿದ್ದರಾಮಯ್ಯ (Siddaramaiah) ನೀಡಿದ್ದ ಮತ್ತೊಂದು ಭರವಸೆ ಈ ಮೂಲಕ ಈಗ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ನೀಡಿದ್ದರು. ಇದೇ ಕಾರಣಕ್ಕೆ ಈಗ ಕೋಲಾರ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಂದ ಸಾಲ ವಸೂಲಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

    ಚುನಾವಣೆ ವೇಳೆ ಐದು ಲಕ್ಷದವರೆಗಿನ ಬಡ್ಡಿ ರಹಿತವಾಗಿ ನೀಡಿದ ಸಾಲವನ್ನು ಮನ್ನಾ ಮಾಡುವುದಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಮೊದಲು ಘೋಷಣೆ ಮಾಡಿದ್ದರು. ಅಲ್ಲದೆ ಈಗಿರುವ ಸಾಲದ ಮೊತ್ತವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ 1 ಲಕ್ಷ ರೂ. ನಷ್ಟು ಹೆಚ್ಚಿಗೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲದೇ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಇದನ್ನೇ ಕಾರಣ ನೀಡಿ ಮಹಿಳೆಯರು ಸಾಲ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

  • 2 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು

    2 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು

    ಬೀದರ್: ಸಾಲಬಾಧೆ ತಾಳಲಾರದೆ ರೈತ (Farmer) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ (Hedgapur) ಗ್ರಾಮದಲ್ಲಿ ನಡೆದಿದೆ.

    ನಾಗಪ್ಪ ಹಲಗೆ (43) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಪಿಕೆಪಿಎಸ್ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ 2 ಲಕ್ಷಕ್ಕೂ ಅಧಿಕ ಸಾಲ (Loan) ಮಾಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮನನೊಂದು ತನ್ನ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ 

    ವಿಷಯ ತಿಳಿದು ಠಾಣಾ ಕುಸುನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಠಾಣಾ ಕುಸುನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೇವಿಗೆ ವಿದ್ಯುತ್ ತಂತಿ ಸ್ಪರ್ಶ- ಟ್ರ‍್ಯಾಕ್ಟರ್ ಭಸ್ಮ

  • ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೆಂಗಳೂರು: ಕರ್ನಾಟಕ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ (Beluru Raghavendra Shetty) ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿದೆ. ಆದರೆ ಹರಾಜಿಗೂ ಮುನ್ನವೇ ಬ್ಯಾಂಕ್ (Bank) ಕಾವಲಿಗಿಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಿದ್ದಾರೆ.

    ಬೇಳೂರು ರಾಘವೇಂದ್ರ ಶೆಟ್ಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿ ರೂ.ಗೂ ಅಧಿಕ ಸಾಲ (Loan) ಪಡೆದಿದ್ದರು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ರಾಘವೇಂದ್ರ ಅವರ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿತ್ತು. ಇದೀಗ ಬ್ಯಾಂಕ್ 3 ದಿನಗಳಲ್ಲಿ ಮನೆಯನ್ನು ಹರಾಜಿಗಿಡಲು ಮುಂದಾಗಿದೆ.

    ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಎಸ್‌ಎಂಸಿ ಬೆವರ್ಲಿ ಅಪಾರ್ಟ್ಮೆಂಟ್‌ನಲ್ಲಿ ರಾಘವೇಂದ್ರ ಅವರ ಈ ಫ್ಲ್ಯಾಟ್ ಇದೆ. ರಾಘವೇಂದ್ರ ಮಾಡಿದ್ದ ಸಾಲ ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

    ಇದೀಗ ಬ್ಯಾಂಕ್ ವಶಕ್ಕೆ ಪಡೆದಿರುವ ಮನೆಯನ್ನು ಹರಾಜು ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ನಡುವೆ ಬುಧವಾರ ಮಧ್ಯರಾತ್ರಿ ರಾಘವೆಂದ್ರ ಶೆಟ್ಟಿ ಕಡೆಯವರು ಮನೆಗೆ ಹಾಕಲಾಗಿದ್ದ ಸೀಲ್ ಅನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.

    ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದನ್ನು ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಮನೆಯೊಳಗಿದ್ದವರಿಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಾಗಿಲನ್ನು ತೆರೆದಿದ್ದಾರೆ. ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕಲು ಪ್ರಯತ್ನಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿದ್ದಾರೆ.

    ಇದೀಗ ಅತಿಕ್ರಮವಾಗಿ ಮನೆ ಪ್ರವೇಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

  • ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು: ಸಂಜಯ್ ಪಾಟೀಲ್

    ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು: ಸಂಜಯ್ ಪಾಟೀಲ್

    ಬೆಳಗಾವಿ: 20 ವರ್ಷಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನನ್ನ ಬಳಿ 50 ಸಾವಿರ ರೂ. ಹಣ ಪಡೆದಿದ್ದರು. ಇಂದು ಅವರು 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ (BJP) ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಪ್ರಶ್ನೆಯಿಟ್ಟಿದ್ದಾರೆ.

    ಸಂಜಯ್ ಪಾಟೀಲ್ ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು,

    20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಅವರು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ನನಗೆ ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.

    ಅಂದು ನನ್ನ ಕಡೆಯಿಂದ 50 ಸಾವಿರ ರೂ. ಸಾಲ ತೆಗೆದುಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ? ಅವತ್ತೇ ಸಂಜಯ್ ಪಾಟೀಲ್ ನಿಮಗೆ 50 ಸಾವಿರ ರೂ. ಸಾಲ ಕೊಟ್ಟಿದ್ದಾನೆ. ಅವನಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಮಣ್ಣು ಮಾರುವಂತಹ ಬಡತನ ಬಂದಿಲ್ಲ. ಸಂಜಯ್ ಪಾಟೀಲ್‌ಗೆ ಕೊಂಡು ತೆಗೆದುಕೊಳ್ಳೋ, ಎರಡು ನಂಬರ್ ಬ್ಯುಸಿನೆಸ್ ಮಾಡುವಂತಹ ಆಶೀರ್ವಾದ ದೇವರು ನನಗೆ ಮಾಡಿಲ್ಲ. ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ. ದುಡ್ಡಿನ ಸಲುವಾಗಿ ಸಗಣಿ ತಿನ್ನುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.

    ಆ ಮಣ್ಣು ಮಾರೋಕೆ ನಾನು ರಾಜಹಂಸಗಡ ಕೆಲಸ ಪ್ರಾರಂಭ ಮಾಡಿರಲಿಲ್ಲ. ಶಿವಾಜಿ ಮಹಾರಾಜರನ್ನು ದೇವರು ಎಂದು ಪೂಜೆ ಮಾಡುತ್ತೇನೆ. ಆ ಶಿವಾಜಿ ಮಹಾರಾಜರ ಸ್ಮಾರಕ ಮಾಡಲು ಆ ಕೆಲಸ ಪ್ರಾರಂಭ ಮಾಡಿದ್ದೇನೆ. ನಾನು ಕೊಟ್ಟ 50 ಸಾವಿರ ರೂ. ವಾಪಸ್ ಕೊಟ್ಟಿಲ್ಲ. ಅದಕ್ಕೂ ಆಣೆ ಮಾಡಲಿ ಬರಲಿ ಅವರು. ಮಳೇಕರಣಿ ದೇವಿ ಅಲ್ಲ, ಅವರಿಗೆ ಯಾವ ದೇವರ ಮೇಲೆ ಭಕ್ತಿ ಇದೆ, ಆ ದೇವರ ಕಡೆ ಬರಬೇಕು. ಸಂಜಯ್ ಪಾಟೀಲ್ ಬಳಿ 50 ಸಾವಿರ ರೂ. ಪಡೆದಿಲ್ಲ ಎಂದು ಆಣೆ ಮಾಡಬೇಕು. ನನಗೆ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು 50 ಸಾವಿರ ರೂ. ಕೊಡಿ ಎಂದಿದ್ದರು. 2 ಗಂಟೆ ನನ್ನ ಕಚೇರಿಯಲ್ಲಿ ಕುಳಿತು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

    ಸಂಜಯ ಪಾಟೀಲ್ ಗೋಮಟೇಶ್ ವಿದ್ಯಾಪೀಠಕ್ಕೆ ಶಾಸಕರ ಅನುದಾನದ 40 ಲಕ್ಷ ರೂ. ಹಣ ಪಡೆದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅದರ ಬಗ್ಗೆ ಅಭ್ಯಾಸ ಮಾಡಿ ಹೇಳಬೇಕು. ಗೋಮಟೇಶ್ ವಿದ್ಯಾಪೀಠಕ್ಕೆ ತೆಗೆದುಕೊಂಡಿದ್ದೇವೋ ಇಲ್ಲವೋ, ಹಣ ವಾಪಾಸ್ ಆಗಿದೆಯೋ ಇಲ್ಲವೋ ಅಂತ. ಗೋಮಟೇಶ್ ವಿದ್ಯಾಪೀಠದ ಹಣ ಉಪಯೋಗ ಆಗಿದೆಯೋ ಇಲ್ಲವೋ ಅದರ ಬಗ್ಗೆ ತಿಳಿದುಕೊಳ್ಳಬೇಕು. ಆ ಬಳಿಕ ನಾನು ಯಾವಾಗ ಬೇಕಾದರೂ ಉತ್ತರಿಸಲು ವೇದಿಕೆ ಮೇಲೆ ಬರುತ್ತೇನೆ ಎಂದರು.

    ಅವರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಯಾವ ವಿಚಾರ ಬಂದರೂ ದಾಖಲೆ ತೆಗೆದುಕೊಂಡು ಬರಬೇಕು. ನೀವು 10 ವರ್ಷ ಎಂಎಲ್‌ಎ ಆಗಿದ್ದು, 20 ಕೋಟಿ ರೂ. ಶಾಸಕರ ಅನುದಾನ ಬಂದಿತ್ತು. ಶಿವಾಜಿ ಮೂರ್ತಿ ಏಕೆ ಪ್ರತಿಷ್ಠಾಪಿಸಿಲ್ಲ ಎಂದು ಕೇಳಿದ್ರು. ನಾನು ಶಿವಾಜಿ ಮೂರ್ತಿ ಸಲುವಾಗಿ ಎಂಎಲ್‌ಎ ಫಂಡ್ ನೀಡುವಂತೆ ಡಿಸಿಗೆ ಪತ್ರ ಬರೆದಿದ್ದೇನೆ. ಅದಕ್ಕೆ ಅದು ಪ್ರೊವಿಜಿನ್ ಇಲ್ಲ, ಕೊಡೋಕೆ ಆಗಲ್ಲ ಎಂದು ಡಿಸಿ ಉತ್ತರಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತೆರೆದ ವಾಹನದಲ್ಲಿ ಎಚ್‌ಡಿಡಿ 100 ಕಿ.ಮೀ. ರೋಡ್ ಶೋ

    ಎಂಎಲ್‌ಎ ಫಂಡ್ ಯಾವ್ಯಾವ ಕೆಲಸಕ್ಕೆ ಉಪಯೋಗ ಮಾಡಬೇಕು ಎಂಬ ಜ್ಞಾನ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೇಕಲ್ಲ. ಎಂಎಲ್‌ಎ ಫಂಡ್ ಯಾವ್ಯಾವ ಕಾಮಗಾರಿಗಳಿಗೆ ಕೊಡಬೇಕು ಅಂತಾ ಕಾನೂನು ಇದೆ. ಆ ಕಾನೂನು ಬಿಟ್ಟು ಮಾಡೋಕೆ ಆಗಲ್ಲ. ಸುಮ್ಮನೆ ಭಾಷಣ ಏನೇನೋ ಮಾಡೋದು, ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ಸ್ವಭಾವವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೊಂದಿದ್ದಾರೆ ಎಂದು ಕಿಡಿ ಕಾರಿದರು.

    ಶಾಸಕಿ ಅಂದ್ರೆ ಏನು? ಶಾಸಕರ ಅಧಿಕಾರ ಏನಿದೆ? ಇದರ ಬಗ್ಗೆ ಅವರು ಅಧ್ಯಯನ ಮಾಡಬೇಕು. ನಾನು ರಾಜಹಂಸಗಡ ಕೋಟೆ ಅಭಿವೃದ್ಧಿ ಕೆಲಸ ಪ್ರಾರಂಭ ಮಾಡಿದ್ದ ದಾಖಲೆಗಳಿವೆ. ಅವರಿಗೆ ಬಹಳ ಸಲ ವಿನಂತಿ ಮಾಡಿದ್ದೇನೆ. ಅವರು ಕೇವಲ ಭಾಷಣ ಮಾಡುತ್ತಿದ್ದಾರೆ. ಸರ್ಕಾರಿ ದಾಖಲಾತಿಗಳೊಂದಿಗೆ ಅವರು ಉತ್ತರಿಸಲು ಪ್ರಾರಂಭ ಮಾಡಬೇಕು. ಅಲ್ಲಿ ಎಲ್ಲಾದರೂ ತಪ್ಪಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ ಎಂದು ಸಂಜಯ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ