Tag: loan

  • ಬರೀ ಮಾತೇ ಆಯ್ತು, ಎಲ್ಲಾ ರೈತರ ಬಾಯಿಗೆ ಬಿದ್ದಿಲ್ಲ ಸಾಲ ಮನ್ನಾದ ಲಡ್ಡು!

    ಬರೀ ಮಾತೇ ಆಯ್ತು, ಎಲ್ಲಾ ರೈತರ ಬಾಯಿಗೆ ಬಿದ್ದಿಲ್ಲ ಸಾಲ ಮನ್ನಾದ ಲಡ್ಡು!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಒಂದು ವರ್ಷ ಆಗುತ್ತಿದೆ. ದಿನಗಳು ಉರುಳುತ್ತಿದ್ದು, ಆದರೆ ರೈತರ ಸಾಲ ಸಂಪೂರ್ಣ ಮನ್ನಾ ಆಗದ್ದಕ್ಕೆ ಟೀಕೆ ಕೇಳಿಬಂದಿದೆ.

    ವಿಧಾನಸಭಾ ಚುನಾವಣೆ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಲೋಕಸಭಾ ಚುನಾವಣೆ ಮುಗಿಯುತ್ತಾ ಬಂದಿದ್ದು ಸಾಲ ಮನ್ನಾ ಭರವಸೆ ಭರವಸೆಯಾಗಿಯೇ ಉಳಿದಿದ್ದು ಪೂರ್ಣವಾಗಿ ಮನ್ನಾ ಆಗದ್ದಕ್ಕೆ ರೈತರಿಂದ ಮತ್ತು ಬಿಜೆಪಿಯಿಂದ ಟೀಕೆ ಕೇಳಿ ಬಂದಿದೆ.

    ಋಣಮುಕ್ತ ಪತ್ರ ಕಳುಹಿಸುತ್ತೇನೆ ಎಂದು ಹೇಳಿದ ಸಿಎಂ, ರೈತರಿಗೆ ಸಾಂತ್ವನ ಪತ್ರ ಪತ್ರ ನೀಡಿದ್ದಾರೆ. ರೈತರಿಗೆ ಕಳಿಸಲಾದ ಸಾಂತ್ವನ ಪತ್ರದಲ್ಲಿ ಕೇವಲ ಆಶಯ, ಇಸ್ರೇಲ್ ಮಾದರಿ ಕೃಷಿ, ಕವಿವಾಣಿಗಳು ಇದೆ ಹೊರತು ಸಾಲಮನ್ನಾ ಮೊತ್ತದ ಉಲ್ಲೇಖವೇ ಇಲ್ಲ. ಸಾಲ ಮರುಪಾವತಿ ಮಾಡಿದ ರೈತರಿಗೆ 25 ಸಾವಿರ ಪ್ರೋತ್ಸಾಹ ಧನದ ಬಗ್ಗೆಯೂ ಮಾತಿಲ್ಲ. ರೈತರ ಸಹಕಾರ ಅಗತ್ಯ. ಸರ್ಕಾರ ಸದಾ ನಿಮ್ಮೊಂದಿಗೆ ಎಂದು ಹೇಳಿ ಪತ್ರ ಮುಗಿಯುತ್ತದೆ.

    ಎಷ್ಟು ಕೋಟಿ ಸಾಲ ಮನ್ನಾ ಆಗಿದೆ?
    ಸಿಎಂ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತ 44ಸಾವಿರ ಕೋಟಿ ರೂ. ಆಗಿದ್ದು, ಸಹಕಾರಿ ಸಂಘಗಳ ಸಾಲ ಮನ್ನಾಗೆ 9,448.61 ಕೋಟಿ ರೂ. ಹಣದ ಅಗತ್ಯವಿದೆ. ಇಲ್ಲಿಯವರೆಗೆ ಸಹಕಾರಿ ಸಂಘಗಳಲ್ಲಿ ರೈತರ 2,630 ಕೋಟಿ ರೂ. ಸಾಲ ಮನ್ನಾ ಆಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿ 2,800  ಕೋಟಿ ರೂ. ಮನ್ನಾ ಆಗಿದೆ. ಸಾಲ ಮನ್ನಾಗೆ ರಾಜ್ಯ ಸರ್ಕಾರ ಒಟ್ಟು 5,430 ಕೋಟಿ ರೂ. ಹಣವನ್ನು ವಿನಿಯೋಗಿಸಿದೆ.

    ಪಬ್ಲಿಕ್ ಪ್ರಶ್ನೆಗಳು
    1. ಪತ್ರದಲ್ಲಿ ಸಾಲಮನ್ನಾ ಮೊತ್ತ ಉಲ್ಲೇಖಿಸದೇ ಜವಾಬ್ದಾರಿಯಿಂದ ನುಣುಚಿಕೊಂಡ್ರಾ ಸಿಎಂ?
    2. ಕೇವಲ `ಲೋಕ’ಎಲೆಕ್ಷನ್ ಗೆಲ್ಲುವ ಸಲುವಾಗಿ ಫೆ.19ಕ್ಕೆ ಸಾಂತ್ವನ ಪತ್ರ ಕಳಿಸಿಕೊಟ್ರಾ?
    3. ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ರೈತರ ಮತಬುಟ್ಟಿಗೆ ಸಾಂತ್ವನದ ಮೂಲಕ ಕೈ ಹಾಕಿದ್ರಾ?
    4. ಜೂನ್ ಅಂತ್ಯದ ವೇಳೆಗೆ ಬಾಕಿ ಉಳಿದ 28570 ಕೋಟಿ ರೂ. ಸಾಲ ಮನ್ನಾ ಆಗುತ್ತಾ?
    5. ಈಗಾಗಲೇ ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ಸಿಗೋದು ಯಾವಾಗ?

  • ಹಣ ಕೊಡ್ತೀನಿ ಬಾ ಎಂದು ಹೇಳಿ ಕಾರಿನಲ್ಲಿ ಮಹಿಳೆಯನ್ನು ಕೊಲೆಗೈದವರು ಅರೆಸ್ಟ್!

    ಹಣ ಕೊಡ್ತೀನಿ ಬಾ ಎಂದು ಹೇಳಿ ಕಾರಿನಲ್ಲಿ ಮಹಿಳೆಯನ್ನು ಕೊಲೆಗೈದವರು ಅರೆಸ್ಟ್!

    ಚಿಕ್ಕಬಳ್ಳಾಪುರ: ಸಾಲ ಕೊಟ್ಟ ಹಣವನ್ನು ಮರಳಿಸುವಂತೆ ಹೇಳಿದ ಮಹಿಳೆಗೆ ಹಣ ಕೊಡ್ತೀನಿ ಬಾ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದ ಆಕೆಯನ್ನು ಕೊಲೆ ಮಾಡಿದ್ದ ಕೊಲೆಗಡುಕರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕು ಕಾಡತಿಪ್ಪೂರು ಗ್ರಾಮದ ರಾಮಾಂಜಿನಪ್ಪ ಮತ್ತು ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಕಾರಿನಲ್ಲಿ ಆರೋಪಿಗಳು ನೆಲಮಂಗಲ ತಾಲೂಕಿನ ತಾವರೆಕೆರೆ ಗ್ರಾಮದ ಶಾಂತಮ್ಮ ಅವರನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

    ಏನಿದು ಪ್ರಕರಣ?
    ಜನವರಿ 21ರಂದು ಗೌರಿಬಿದನೂರು ತಾಲೂಕು ಸೋಮಶೆಟ್ಟಿಹಳ್ಳಿ ಬಳಿ ನರಸಿಂಹಯ್ಯ ಎಂಬವರ ಜಮೀನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗೌರಿಬಿದನೂರು ಪೊಲೀಸರಿಗೆ ಮೃತಳ ಮಗ ಹಾಗೂ ಮಗಳು ಮೃತದೇಹವನ್ನು ಕಂಡು ಇದು ತನ್ನ ತಾಯಿ ಶಾಂತಮ್ಮಳದ್ದೇ ಎಂದು ಪತ್ತೆ ಹಚ್ಚಿದರು. ಹೀಗಾಗಿ ಶಾಂತಮ್ಮಳ ಕೊಲೆ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೊಬೈಲ್ ಕರೆಗಳನ್ನು ಆಧರಿಸಿ ರಾಮಾಂಜಿನಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ರಾಮಾಂಜಿನಪ್ಪ ಸತ್ಯ ಬಾಯ್ಬಿಟ್ಟಿದ್ದಾನೆ. ಮೃತ ಶಾಂತಮ್ಮ ಗಾರ್ಮೆಂಟ್ಸ್ ನೌಕರಳಾಗಿದ್ದು, ಕೊಲೆ ಮಾಡಿದ ರಾಮಾಂಜಿನಪ್ಪ ಗಾರ್ಮೆಂಟ್ಸ್ ಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯವ ವಾಹನದ ಚಾಲಕ ಕಂ ಮಾಲೀಕನಾಗಿದ್ದ. ಹೀಗಾಗಿ ಗಂಡ ತೀರಿಕೊಂಡಿದ್ದ ಶಾಂತಮ್ಮ ತನ್ನ ಬಳಿ ಇದ್ದ ಹಣವನ್ನು ಪರಿಚಯಸ್ಥ ರಾಮಾಂಜಿನಪ್ಪನಿಗೆ ನೀಡಿದ್ದಳು. ಶಾಂತಮ್ಮಳ ಮಗಳ ಮದುವೆ ಫಿಕ್ಸ್ ಆಗಿದ್ದು ಮದುವೆಗೆ ಹಣ ಬೇಕು ಕೊಡು ಎಂದು ರಾಮಾಂಜಿನಪ್ಪನ ಬಳಿ ಪಟ್ಟು ಹಿಡಿದದ್ದಾಳೆ.

    ಮೊದಲೇ ಮೈ ತುಂಬಾ ಸಾಲ ಮಾಡಿಕೊಂಡಿದ್ದ ರಾಮಾಂಜಿನಪ್ಪ ಪ್ಲಾನ್ ಮಾಡಿ ಶಾಂತಮ್ಮಳನ್ನು ಜನವರಿ 19ರಂದು ಕಾರಿನಲ್ಲಿ ಕರೆದುಕೊಂಡು ಬಂದು ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ರಾಮಾಂಜಿನಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಸಹಕರಿಸಿದ್ದು, ಸದ್ಯ ರಾಮಾಂಜಿನಪ್ಪ ಹಾಗೂ ನರಸಿಂಹಮೂರ್ತಿ ಇಬ್ಬರನ್ನು ಗೌರಿಬಿದನುರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷಿ ಸಾಲಮನ್ನಾದಿಂದ ಯಾವುದೇ ಬದಲಾವಣೆ ಆಗಲ್ಲ: ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್

    ಕೃಷಿ ಸಾಲಮನ್ನಾದಿಂದ ಯಾವುದೇ ಬದಲಾವಣೆ ಆಗಲ್ಲ: ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್

    ನವದೆಹಲಿ: ಕೃಷಿ ಸಾಲಮನ್ನಾದಿಂದ ರೈತರ ಜೀವನ ಮತ್ತು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾಲಮನ್ನಾದಿಂದ ರೈತರ ಸಮಸ್ಯೆಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ. ರೈತರಿಗೆ ನಗದು ವರ್ಗಾವಣೆ ಮಾಡುವುದರಿಂದ ಕೃಷಿ ವಲಯದ ಜನರ ಆರ್ಥಿಕ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ. ನನ್ನ ಪ್ರಕಾರ ಕೃಷಿ ಸಾಲಮನ್ನಾ ಒಂದೇ ಒಂದು ಸಮಸ್ಯೆಗೆ ಪರಿಹಾರ ಸಿಗಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರ ಬಿತ್ತನೆ ಸಮಯದಲ್ಲಿ ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಅವರ ಖಾತೆಗೆ ನಗದು ವರ್ಗಾಯಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಕೃಷಿ ವರ್ಗದ ಜನರನ್ನು ಖುಷಿಪಡಿಸಲು ಸಾಲಮನ್ನಾ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಸಾಲಮನ್ನಾ ಘೋಷಣೆ ಮಾಡಿವೆ. ಕರ್ನಾಟಕ ರಾಜ್ಯ ಸರ್ಕಾರ ಸಹ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದು ಋಣಮುಕ್ತ ಪ್ರಮಾಣ ಪತ್ರವನ್ನು ವಿತರಿಸುತ್ತದೆ. ಕಾಂಗ್ರೆಸ್ ಸರ್ಕಾರ ರಚಿಸಿರುವ ರಾಜ್ಯಗಳಲ್ಲಿ ಸಾಲಮನ್ನಾ ಘೋಷಣೆ ಮಾಡಲಾಗುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರು, ಪ್ರಧಾನಿಗಳು ದೇಶದ ಎಲ್ಲ ರೈತರ ಸಂಪೂರ್ಣ ಸಾಲಮನ್ನಾ ಮಾಡುವವರೆಗೂ ಮೋದಿ ಅವರಿಗೆ ನಿದ್ದೆ ಮಾಡಲು ಬಿಡಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.

    ಈ ಸಂಬಂಧ ಪ್ರಧಾನಿಗಳು ತಮ್ಮ ಸಾರ್ವಜನಿಕ ಸಮಾವೇಶಗಳಲ್ಲಿ ಸಾಲಮನ್ನಾ ಆದೇಶಿಸುವ ಕುರಿತ ಸುಳಿವು ನೀಡುತ್ತಾ ಬಂದಿದ್ದಾರೆ. ಸಾಲಮನ್ನಾ ಅಥವಾ ಅದೇ ಉದ್ದೇಶ ಹೊಂದಿರುವ ಬೇರೆ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆಗಳಿವೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಂ ರಾಜನ್, ಕೃಷಿ ಸಾಲಮನ್ನಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಐಡಿ ಕದ್ದು 53,570 ರೂ. ಲೋನ್ ಪಡೆದ..!

    ಪೊಲೀಸ್ ಐಡಿ ಕದ್ದು 53,570 ರೂ. ಲೋನ್ ಪಡೆದ..!

    ಬೆಂಗಳೂರು: ಪೊಲೀಸ್ ಪೇದೆಯೊಬ್ಬರ ಐಡಿ ಕಾರ್ಡ್ ಕದ್ದು ಲೋನ್ ಪಡೆದಿರೋ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ಬೆಳಕಿಗೆ ಬಂದಿದೆ.

    ಇಲ್ಲಿನ ಪೊಲೀಸ್ ಠಾಣೆಯ ಪೇದೆ ಸೋಮಶೇಖರ್ ಅವರ ಐಡಿ ಕಾರ್ಡ್ ಕದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಜಾಜ್ ಫೈನಾನ್ಸ್ ಕಂಪನಿಯಿಂದ 53,570 ರೂ ಮೊತ್ತದ ಲೋನ್ ಪಡೆಯಲಾಗಿದೆ. ಮಾರ್ಚ್‍ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದಿದ್ದು, ಕಳೆದ ಶುಕ್ರವಾರ ಪೊಲೀಸ್ ಪೇದೆಗೆ ಫೈನಾನ್ಸ್ ಕಂಪನಿಯಿಂದ ಲೋನ್ ಹಣ ಪಾವತಿ ಮಾಡುವಂತೆ ಕರೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಫೈನಾನ್ಸ್ ಕಂಪನಿ ಲೋನ್ ನೀಡುವುದಕ್ಕೆ ಮುಂಚೆ ದಾಖಲಾತಿಗಳ ಪರಿಶೀಲನೆ ನಡೆಸದೆ ಲೋನ್ ಮಂಜೂರಾತಿ ಮಾಡಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿ ಲೋನ್ ಪಡೆಯಲಾಗಿದೆ. ಹೀಗಾಗಿ ಸೋಮಶೇಖರ್ ಅವರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

    ಫೈನಾನ್ಸ್ ಕಂಪನಿ ಹಾಗೂ ಲೋನ್ ಪಡೆದ ವ್ಯಕ್ತಿ ವಿರುದ್ಧ ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಈ ಕಳ್ಳ ಆಸಾಮಿ 50 ಬಾರಿ ಬಂದಿದ್ದು, ಈಗಲೂ ಮತ್ತೊಮ್ಮೆ ಬಂದಿದ್ದಾನೆ’

    `ಈ ಕಳ್ಳ ಆಸಾಮಿ 50 ಬಾರಿ ಬಂದಿದ್ದು, ಈಗಲೂ ಮತ್ತೊಮ್ಮೆ ಬಂದಿದ್ದಾನೆ’

    – ವಿಜಯಪುರದಲ್ಲಿ ಸಿಎಂ ಎಚ್‍ಡಿಕೆಯನ್ನು ಬೇತಾಳನಂತೆ ಕಾಡಿದ ವ್ಯಕ್ತಿ
    – ಹಣ ಕೊಡಿ ಇಲ್ಲವೇ ಬ್ಯಾಂಕಿನಿಂದ ಸಾಲ ಕೊಡಿಸಿ
    – ಪ್ರತಿ ಬಾರಿ ಬಂದಾಗಲೂ ಹಣ ಕೊಟ್ಟಿದ್ದೇನೆ ಎಂದ ಸಿಎಂ

    ವಿಜಯಪುರ: ಸಿಎಂ ಕುಮಾರಸ್ವಾಮಿ ಅವರನ್ನು ಬಹಳ ದಿನಗಳಿಂದ ಕಾಡುತ್ತಿದ್ದ ವ್ಯಕ್ತಿಯೊಬ್ಬ ವಿಜಯಪುರದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಗಂಟು ಬಿದ್ದಿದ್ದಾನೆ.

    ಜಿಲ್ಲೆಯ ಹಾವಿನಾಳ ಗ್ರಾಮದ ನಿವಾಸಿ ಕಾಶಿನಾಥ್ ಬನಸೋಡೆ ಸಿಎಂ ಗೆ ಬೆನ್ನಿಗೆ ಬಿದ್ದ ಬೇತಾಳನಂತೆ ಕಾಡುತ್ತಿದ್ದಾನೆ. ಹಣ ಕೊಡಿ ಇಲ್ಲವೇ ಬ್ಯಾಂಕ್‍ನಿಂದ ಸಾಲ ಕೊಡಿಸಿ ಎಂದು ಸಿಎಂ ಅವರನ್ನು ಬಹಳ ದಿನಗಳಿಂದ ಪೀಡಿಸುತ್ತಿದ್ದಾನೆ.

    ಹಲವು ಬಾರಿ ಸಿಎಂ ಅವರಿಂದಲೇ ಹಣವನ್ನು ಕೂಡ ಪಡೆದಿದ್ದ ಕಾಶಿನಾಥ್ ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಕಾಶಿನಾಥ್ ಸಿಎಂ ಬಳಿ ಬಂದು ಸಾಲ ಕೊಡಿಸಿ ಎಂದು ಪೀಡಿಸಿದ್ದಾನೆ.

    ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಿಎಂ ಹಾಗೂ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಕಾಶಿನಾಥ್, ನಾನೊಬ್ಬ ಅನಾಥ ನನ್ನ ಬಳಿ ಹಣವಿಲ್ಲ, 63 ಸಾವಿರ ರೂ. ಕಬ್ಬಿನ ಹಣ ಹಾಗೂ ಸ್ವಲ್ಪ ಹಣ ಆಸ್ಪತ್ರೆಗೆ ಬೇಕು. ಅದಕ್ಕೆ ನನಗೆ 1 ಲಕ್ಷ ರೂ. ಸಾಲ ಕೊಡಿಸಿ ಅದನ್ನು ಹಾಳುಮಾಡಲ್ಲ ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ಸಿಎಂ, ಈತ ಕಳ್ಳ ಆಸಾಮಿ, 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತಿ ಸಾರಿ ಹಣ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಮತ್ತೆ ಈಗ ಬಂದಿದ್ದಾನೆ ಎಂದು ಹೇಳಿದರು.

    ಕಾಶಿನಾಥ್ ಬೆನ್ನಿಗೆ ಬಿದ್ದರೆ ಸುಮ್ಮನೆ ಹೋಗೋ ಆಸಾಮಿಯಲ್ಲ. ಹಣ ಕೊಡಿ ಅಂತ ಈ ಹಿಂದೆ ಹಲವರನ್ನು ಕಾಡಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಕೊನೆಗೆ ಈ ವಿಚಾರದ ಕುರಿತು ನೋಡುತ್ತೇವೆ ಎಂದು ಅಧಿಕಾರಿಗಳು ಕಾಶಿನಾಥ್ ನನ್ನು ಸಮಾಧಾನಪಡಿಸಿ ಸಭೆಯಿಂದ ಕಳುಹಿಸಿಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 8 ವರ್ಷದ ಮಗಳಿನೊಂದಿಗೆ ಕಲ್ಲುಕ್ವಾರಿಗೆ ಹಾರಿದ ತಾಯಿ

    8 ವರ್ಷದ ಮಗಳಿನೊಂದಿಗೆ ಕಲ್ಲುಕ್ವಾರಿಗೆ ಹಾರಿದ ತಾಯಿ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೊಂದಿಬಸವನಹಳ್ಳಿಯಲ್ಲಿ ಸಾಲಬಾಧೆಯಿಂದ ಬೇಸತ್ತು ಮಹಿಳೆಯೊಬ್ಬರು ತನ್ನ 8 ವರ್ಷದ ಮಗಳಿನೊಂದಿಗೆ ಕಲ್ಲಿನಕ್ವಾರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಗೊಂದಿಬಸವನಹಳ್ಳಿಯ ತಾಯಮ್ಮ (35) ಹಾಗೂ 8 ವರ್ಷದ ಮಗಳು ಗಾನವಿ (ದಿವ್ಯ) ಮೃತಪಟ್ಟ ದುರ್ದೈವಿಗಳು. ಸಾಲಬಾಧೆಯಿಂದ ಬೇಸತ್ತ ತಾಯಮ್ಮ ಮಂಗಳವಾರ ಬೆಳಗ್ಗೆ ತನ್ನ ಮಗಳು ದಿವ್ಯ ಜೊತೆಗೆ ಊರ ಹೊರಗಿರುವ ಕಲ್ಲುಕ್ವಾರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಇಬ್ಬರ ಮೃತದೇಹಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಘಟನೆ ಕುರಿತು ಮೃತ ತಾಯಮ್ಮರ ಪತಿ ಸ್ವಾಮಿ ನಾಯಕ್ ಮಾತನಾಡಿ, ನಾನು ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದೇನೆ. ಎಂದಿನಂತೆ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರ ಬಂದೆ. ನಾನು ಬಂದ ಮೇಲೆ ಅಮ್ಮ ಮಗಳು ಹೋಗಿ ಇಂತಹ ಕೆಲಸಕ್ಕೆ ಕೈ ಹಾಕಿ ಜೀವ ಕಳೆದುಕೊಂಡಿದ್ದಾರೆ. ಸಂಘ ಮತ್ತು ಇತರರಿಂದ ಕೈ ಸಾಲ ಮಾಡಿಕೊಂಡಿದ್ದೇವು. ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

    ಮೃತ ಗಾನವಿ ಗೊಂದಿಬಸವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳೆಂದು ಶಿಕ್ಷಕರು ಕಂಬನಿ ಮಿಡಿದಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಲ್ಕತ್ತಾ ಕೋರ್ಟ್ ನಿಂದ ಮಹಿಳೆಯರಿಗೆ ಅರೆಸ್ಟ್ ವಾರೆಂಟ್- ಭಯದಿಂದ ಗ್ರಾಮವನ್ನೇ ತೊರೆದ ಕೆಲ ಮಹಿಳೆಯರು

    ಕೋಲ್ಕತ್ತಾ ಕೋರ್ಟ್ ನಿಂದ ಮಹಿಳೆಯರಿಗೆ ಅರೆಸ್ಟ್ ವಾರೆಂಟ್- ಭಯದಿಂದ ಗ್ರಾಮವನ್ನೇ ತೊರೆದ ಕೆಲ ಮಹಿಳೆಯರು

    ದಾವಣಗೆರೆ: ಇಷ್ಟು ದಿನ ರೈತರಿಗೆ ಬಂಧನದ ವಾರೆಂಟ್ ಜಾರಿ ಆಗುತ್ತಿತ್ತು. ಇದೀಗ ದಾವಣಗೆರೆ ಮಹಿಳೆಯರಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಬಂಧನದ ಭೀತಿಯಿಂದ ಕೆಲ ಮಹಿಳೆಯರು ಗ್ರಾಮವನ್ನೇ ತೊರೆದಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೇನಹಳ್ಳಿಯ ಗ್ರಾಮದ ಮಹಿಳೆಯರಿಗೆ ಎಲ್‍& ಟಿ ಫೈನಾನ್ಸ್ ಕಂಪನಿಯಿಂದ ಸ್ವಸಹಾಯ ಸಂಘಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 2017-18 ಸಾಲಿನಲ್ಲಿ ಗ್ರಾಮದ ಕೆಲ ಮಹಿಳೆಯರು ತಲಾ 50 ಸಾವಿರ ರೂ. ಪಡೆದುಕೊಂಡಿದ್ದಾರೆ. ಮಹಿಳೆಯರು ಕಂತು ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದರು. ಆದ್ರೆ ಕಳೆದ ನಾಲ್ಕೈದು ತಿಂಗಳಿನಿಂದ ಕಂತು ಕಟ್ಟಿರಲಿಲ್ಲ. ಹಾಗಾಗಿ ಕೋಲ್ಕತ್ತಾ ಕೋರ್ಟ್ ನಿಂದ ಫೈನಾನ್ಸ್ ಕಂಪನಿ ನೋಟಿಸ್ ಕಳುಹಿಸಿದೆ.

    ಸ್ಥಳೀಯ ಪೊಲೀಸರು ಗ್ರಾಮದ ಮಹಿಳೆಯರಿಗೆ ಸಂದೇಶ ರವಾನಿಸಿದ್ದು, ಹಣ ಕಟ್ಟದಿದ್ದಲ್ಲಿ ನಿಮ್ಮನ್ನು ಬಂಧಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 30ರವರೆಗೆ ಮಾತ್ರ ಮಹಿಳೆಯರಿಗೆ ಬಾಕಿ ಹಣ ಪಾವತಿಸುವ ಅಂತಿಮ ದಿನವಾಗಿದ್ದು, ಬಂಧನದ ಭೀತಿಯಲ್ಲಿ ಮಹಿಳೆಯರು ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಎಂ ಎಚ್ಚರಿಕೆ ಬಳಿಕವೂ ನಿಂತಿಲ್ಲ ಕಿರುಕುಳ- ಮಳೆ, ಬೆಳೆ ಇಲ್ಲದೆ ಕಂಗಾಲಾದ ರೈತನಿಗೆ ಸಂಕಷ್ಟ

    ಸಿಎಂ ಎಚ್ಚರಿಕೆ ಬಳಿಕವೂ ನಿಂತಿಲ್ಲ ಕಿರುಕುಳ- ಮಳೆ, ಬೆಳೆ ಇಲ್ಲದೆ ಕಂಗಾಲಾದ ರೈತನಿಗೆ ಸಂಕಷ್ಟ

    ರಾಯಚೂರು: ರೈತರ ಸಾಲ ವಸೂಲಾತಿಗೆ ಮುಂದಾಗದಂತೆ ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ ನೀಡಿದ್ದರೂ ಬ್ಯಾಂಕ್‍ಗಳು ಮಾತ್ರ ರೈತರಿಗೆ ನೋಟಿಸ್ ಗಳನ್ನ ನೀಡುತ್ತಿವೆ. ರಾಯಚೂರಿನ ಬಿಜನಗೇರಾ ಗ್ರಾಮದ ರೈತ ನರಸಿಂಹರನ್ನು ಬ್ಯಾಂಕ್ ಅಧಿಕಾರಿಗಳು ನಿತ್ಯ ಬ್ಯಾಂಕ್ ಗೆ ಕರೆಯಿಸಿ ಸಾಲ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

    ನರಸಿಂಹ ಅವರು ತಮ್ಮ ತಾಯಿ ಹೆಸರಲ್ಲಿ, 2015 ರಲ್ಲಿ ಐಸಿಐಸಿಐ ಬ್ಯಾಂಕ್ ನಲ್ಲಿ ಬೆಳೆ ಸಾಲ ಪಡೆದಿದ್ರು. ಇಷ್ಟು ವರ್ಷ ಬಡ್ಡಿಯನ್ನ ಚಾಚೂ ತಪ್ಪದೇ ಕಟ್ಟಿರುವ ನರಸಿಂಹ ಈಗ ಮಳೆ ಬೆಳೆಯಿಲ್ಲದ ಕಾರಣ ಬಡ್ಡಿಯನ್ನ ಕಟ್ಟಿಲ್ಲ. ಸಿಎಂ ಸಾಲ ಮನ್ನಾ ಘೋಷಣೆ ಮಾಡಿದ ನಂತರ ಅಂದ್ರೆ 2018 ರ ಜೂನ್ 8 ರಂದು ಸಾಲ ಮರುಪಾವತಿಸುವಂತೆ ನೋಟಿಸ್ ಕಳುಹಿಸಿರುವ ಐಸಿಐಸಿಐ ಬ್ಯಾಂಕ್, ಸುಮಾರು 6 ಲಕ್ಷ ರೂಪಾಯಿ ಪಾವತಿಸಲು ಒತ್ತಾಯಿಸಿದೆ. ಇದನ್ನೂ ಓದಿ:  Exclusive: ಸಾಲ ನೋಟಿಸ್ ಪಡೆದ ರೈತರಿಗೆ ಪಬ್ಲಿಕ್ ಟಿವಿ ಮೂಲಕ ಎಚ್‍ಡಿಕೆ ಅಭಯ

    ಸಾಲ ತೀರಿಸದಿದ್ದರೆ ಸ್ವತ್ತುಗಳ ಸುಪರ್ದಿ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನೀಡಿದೆ. ನೋಟಿಸ್ ಕೊಟ್ಟು ಸುಮ್ಮನಾಗದ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಗೆ ಕರೆಯಿಸಿ ಸಾಲ ಮರುಪಾವತಿ ಮಾಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ ಅಂತ ನರಸಿಂಹ ಅವರು ತಮ್ಮ ಅಲವತ್ತುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೈತನ ಬಾಗಿಲಿಗೆ ಕೋಲ್ಕತಾ ಕೋರ್ಟಿನಿಂದ ಅರೆಸ್ಟ್ ವಾರೆಂಟ್

    ರೈತನ ಬಾಗಿಲಿಗೆ ಕೋಲ್ಕತಾ ಕೋರ್ಟಿನಿಂದ ಅರೆಸ್ಟ್ ವಾರೆಂಟ್

    ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಚ್ಚರಿಕೆಯನ್ನು ನೀಡಿದ್ದರೂ ಅವರು ಮಾತನ್ನು ತಿರಸ್ಕರಿಸಿ ಕೋಲ್ಕತ್ತಾದ ಕೋರ್ಟ್ ರೈತರ ಮನೆ ಬಾಗಿಲಿಗೆ ಅರೆಸ್ಟ್ ವಾರೆಂಟ್ ಕಳುಹಿಸಿದೆ.

    ಬೆಳಗಾವಿಯ ಬೈಲಹೊಂಗಲ ನಗರದ ಅಕ್ಸಿಸ್ ಬ್ಯಾಂಕ್‍ನಲ್ಲಿ ಸಾಲ ಪಡೆದ 180 ಕ್ಕೂ ಹೆಚ್ಚು ರೈತರ ವಿರುದ್ಧ ಅರೆಸ್ಟ್ ವಾರೆಂಟ್ ಬಂದಿದೆ. ರೈತರಿಗೆ ಯಾವುದೇ ನೋಟಿಸ್, ಅರೆಸ್ಟ್ ವಾರೆಂಟ್ ಕಳಿಸೋದಿಲ್ಲ ಎಂದು ಮೊಸಳೆ ಕಣ್ಣಿರು ಹಾಕಿದ್ದ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವಚನ ನೀಡಿದ್ದು ಇದೀಗ ಮತ್ತೆ ಉಡಾಫೆ ವರ್ತನೆಯನ್ನು ತೋರಿದೆ.

    ಕಳೆದ ತಿಂಗಳ ಕೋರ್ಟ್ ಕೇಸಿಗೆ ಹಾಜರಿರದ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ರೈತರಿಗೆ ಸವದತ್ತಿ ಠಾಣೆಯಿಂದ ಅರೆಸ್ಟ್ ವಾರೆಂಟ್ ಬಂದಿತ್ತು. ಗ್ರಾಮದಲ್ಲಿ ರೈತರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸರ್ಕಾರದ ಆದೇಶಕ್ಕೆ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪೊಲೀಸ್ ಜಿಲ್ಲಾ ವರಷ್ಠಾಧಿಕಾರಿಗಳು ನೀಡಿದ ಎಚ್ಚರಿಕೆಯನ್ನು ಮರೆತು ಅವರ ಕಚೇರಿಯಿಂದ ಅ.9 ಕ್ಕೆ ಅರೆಸ್ಟ್ ವಾರೆಂಟ್ ಹೊರಬಂದಿದೆ. ಸದ್ಯಕ್ಕೆ ಅನ್ನದಾತರಲ್ಲಿ ಬಂಧನದ ಭೀತಿ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಂಡನ್ ಮನೆಯಿಂದ ವಿಜಯ್ ಮಲ್ಯ ಔಟ್?

    ಲಂಡನ್ ಮನೆಯಿಂದ ವಿಜಯ್ ಮಲ್ಯ ಔಟ್?

    ಬ್ರಿಟನ್: ದೇಶದ ಬ್ಯಾಂಕ್‍ಗಳಿಂದ ಸಾಲ ಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

    ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಬಹುಕೋಟಿ ಮೌಲ್ಯದ ಮನೆಯಿಂದ ಮಲ್ಯರನ್ನ ಹೊರಹಾಕಲು ಸ್ವಿಸ್ ಬ್ಯಾಂಕ್ ಬ್ರಿಟನ್ ಹೈಕೋರ್ಟ್ ಮೆಟ್ಟಿಲೇರಿದೆ.

    ವಿಜಯ್ ಮಲ್ಯ ಸದ್ಯಕ್ಕೆ ಅವರ ತಾಯಿ ಲಲಿತಾ ಮಲ್ಯ ಮತ್ತು ಅವರ ಮಗ ಸಿದ್ಧಾರ್ಥ್ ಮಲ್ಯರ ಜೊತೆ ರೀಜೆಂಟ್ ಪಾರ್ಕ್ ನಲ್ಲಿರುವ ಮಲ್ಟಿ ಮಿಲಿಯನ್ ಮ್ಯಾನ್ಷನ್ ನಲ್ಲಿ ವಾಸಿವಿದ್ದಾರೆ. ಆದರೆ ಈ ಮನೆಯನ್ನ ಅಡವಿಟ್ಟಿದ್ದ ವಿಜಯ್ ಮಲ್ಯ, ಸೆಪ್ಟೆಂಬರ್ 2017 ರಲ್ಲಿ ಸುಮಾರು 198 ಕೋಟಿಗಳಷ್ಟು ಹಣವನ್ನ ಸಾಲ ಪಡೆದಿದ್ದು, 5 ವರ್ಷಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಆದರೆ ಇಲ್ಲಿಯ ವರೆಗೆ ಸಾಲ ಮರುಪಾವತಿ ಮಾಡದ ಹಿನ್ನಲೆ ವಿಜಯ್ ಮಲ್ಯ ಅವರನ್ನು ಮ್ಯಾನ್ಷನ್ ನಿಂದ ಹೊರಹಾಕುವುದಕ್ಕೆ ಅನುಮತಿ ನೀಡಬೇಕೆಂದು ಸ್ವಿಸ್ ಬ್ಯಾಂಕ್ ಬ್ರಿಟನ್ ಕೋರ್ಟ್ ಮೆಟ್ಟಿಲೇರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv