Tag: loan

  • ಬೆಂಗ್ಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಂಗ್ಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಂಗಳೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ ವ್ಯಾಪ್ತಿಯ ಅನಂತಪುರದಲ್ಲಿ ನಡೆದಿದೆ.

    ಅನಂತಪುರ ನಿವಾಸಿ ಮುನಿ ವೆಂಕಟಪ್ಪ (54), ಪತ್ನಿ ನಾಗಮಣಿ (50) ಮತ್ತು ಮಗ ರವಿ ಕುಮಾರ್ (27) ನೇಣಿಗೆ ಶರಣಾದ ಕುಟುಂಬ. ಗಂಡ, ಹೆಂಡತಿ ಹಾಗೂ ಮಗ ಮೂವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ವೆಂಕಟಪ್ಪ ಕುಟುಂಬ ಯಲಹಂಕ ಉಪನಗರದಲ್ಲಿ ವಾಸವಿದ್ದರು. ವೆಂಕಟಪ್ಪ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ತಂದೆಗೆ ಮಗ ರವಿ ಕುಮಾರ್ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ವೆಂಕಟಪ್ಪ ತಮ್ಮ ಸ್ನೇಹಿತರ ಬಳಿ ಲಕ್ಷಾಂತರ ಸಾಲ ಪಡೆದಿದ್ದ. ಆದರೆ ಅದನ್ನು ವಾಪಸ್ಸು ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಇದರಿಂದ ನೊಂದು ಪತ್ನಿ ಮತ್ತು ಮಗನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯಲಹಂಕ ನ್ಯೂಟೌನ್ ಠಾಣಾ ಪೊಲೀಸರು ಮೂವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆತ್ಮಹತ್ಯೆ ಮಾಡ್ಕೊಂಡಿದ್ದ ಮನೆಗೆ ಹೋದ ಪೊಲೀಸರು- ಒಳಗೆ ನಾಲ್ವರ ಶವ ಪತ್ತೆ

    ಆತ್ಮಹತ್ಯೆ ಮಾಡ್ಕೊಂಡಿದ್ದ ಮನೆಗೆ ಹೋದ ಪೊಲೀಸರು- ಒಳಗೆ ನಾಲ್ವರ ಶವ ಪತ್ತೆ

    – ಪತ್ನಿ, ಮೂವರು ಮಕ್ಕಳನ್ನ ಕೊಂದು ನೇಣಿಗೆ ಶರಣಾದ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

    ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ವಿವೇಕ್ ಶುಕ್ಲಾ (38), ಪತ್ನಿ ಅನಾಮಿಕಾ (35) ಇವರ ಮಕ್ಕಳಾದ ಬಾಬಲ್ (5), ರಿತು (7) ಮತ್ತು ಕವನ (10) ಎಂದು ಗುರುತಿಸಲಾಗಿದೆ. ಮೊದಲಿಗೆ ಪತ್ನಿ, ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವ್ಯಕ್ತಿಯು ತನ್ನ ಹೆಂಡತಿ ಮತ್ತು ಮಕ್ಕಳನ್ನು ಎರಡು-ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಯಾಕೆಂದರೆ ಅವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ವ್ಯಕ್ತಿ ಒಂದು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬೇಕು. ಸ್ಥಳದಲ್ಲಿ ಕಬ್ಬಿಣದ ರಾಡ್ ಮತ್ತು ರಕ್ತವಾಗಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

    ವಿವೇಕ್ ಮನೆಯ ಪಕ್ಕದಲ್ಲಿ ಆತನ ಪೋಷಕರು ವಾಸಿಸುತ್ತಿದ್ದರು. ತಾಯಿ ಟೆರೇಸ್‍ನಲ್ಲಿದ್ದಾಗ ಮಗ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರು ಕೂಡಲೇ ತನ್ನ ಪತಿಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ತನ್ನ ಸೊಸೆ, ಮೊಮ್ಮಕ್ಕಳು ಎಲ್ಲೋ ಹೋಗಿದ್ದಾಗ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದರು. ಆದರೆ ಮಾಹಿತಿ ತಿಳಿದು ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಪತ್ನಿ ಮತ್ತು ಮೂವರು ಮಕ್ಕಳ ಮೃತ ದೇಹಗಳನ್ನು ಸಹ ಪತ್ತೆಯಾಗಿವೆ.

    ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಕ್ತಿ ಡೆತ್‍ನೋಟಿನಲ್ಲಿ ಬರೆದಿದ್ದಾನೆ. ಸಾಲದಿಂದ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಐಜಿ ಸಂಜೀವ್ ಗುಪ್ತಾ ತಿಳಿಸಿದ್ದಾರೆ.

  • ಒನ್ ನೇಷನ್, ಒನ್ ರೇಷನ್ ಕಾರ್ಡ್ – ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ

    ಒನ್ ನೇಷನ್, ಒನ್ ರೇಷನ್ ಕಾರ್ಡ್ – ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ

    – ಗೃಹಸಾಲದಲ್ಲಿ ಸಬ್ಸಿಡಿ ಸಹಾಯಧನ

    ನವದೆಹಲಿ: ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ, ರೈತರಿಗೆ ಸಾಲದ ಬಡ್ಡಿಯಿಂದ ವಿನಾಯಿತಿ – ಇದು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಪ್ಯಾಕೇಜ್ ಗಳ ಮುಖ್ಯಾಂಶಗಳು.

    ಕೈಗಾರಿಕೆ, ಉದ್ಯಮ, ರಿಯಲ್ ಎಸ್ಟೇಟ್, ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದರೆ ಇಂದು ಬಡವರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪ್ಯಾಕೇಜ್ ಪ್ರಕಟ ಮಾಡಿದೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಲಸೆ ಕಾರ್ಮಿಕರು, ರೈತರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡಿದರು. ಒನ್ ನೇಷನ್, ಒನ್ ರೇಷನ್ ಕಾರ್ಡ್ ಮಹತ್ವದ ಘೋಷಣೆಯನ್ನು ಜಾರಿಗೊಳಿಸಿದರು.

    ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
    * ಸರ್ಕಾರ ಲಾಕ್‍ಡೌನ್ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದೆ. 25 ಸಾವಿರ ಕೋಟಿಯ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಇದು 3 ಕೋಟಿ ರೈತರಿಗೆ ಲಾಭವಾಗಲಿದೆ. * 3 ಕೋಟಿ ರೈತರಿಗೆ ಸಾಲದ ಬಡ್ಡಿಯಿಂದ ಪಾವತಿಯಿಂದ ವಿನಾಯ್ತಿ.

    * ಬೀದಿ ಬದಿ ವ್ಯಾಪಾರಿ, ಮನೆಯಲ್ಲಿ ಕೆಲಸ ಮಾಡೋರಿಗೆ 10 ಸಾವಿರದವರೆಗೆ ಸಾಲ ಯೋಜನೆ. ಒಂದು ತಿಂಗಳಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಾಗುವುದು. ಸಾಲ ಪಡೆದ ವ್ಯಾಪಾರಸ್ಥರು ಡಿಜಿಟಲ್ ಮೂಲಕ ವ್ಯವಹರಿಸಿದ್ರೆ ಹೆಚ್ಚು ಲಾಭ ಸಿಗಲಿದೆ. ಇದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲು. ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.

    * ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ 3500 ಕೋಟಿ ರೂ. ಅನುದಾನದಲ್ಲಿ ಉಚಿತ ಪಡಿತರ ವಿತರಣೆ. ಪ್ರತಿ ವ್ಯಕ್ತಿಗೆ ಅಕ್ಕಿ ಅಥವಾ ಗೋಧಿ 5 ಕೆ.ಜಿ ಹಾಗೂ ಕುಟುಂಬಕ್ಕೆ 1 ಕೆ.ಜಿ. ಕಾಳು ರಾಜ್ಯ ಸರ್ಕಾರಗಳಿಂದ ನೀಡಲಾಗುವುದು. ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ವಿತರಣೆ.
    * ನ್ಯಾಷನಲ್ ಪೋರ್ಟಬಿಟಲಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಯಾವುದೇ ರಾಜ್ಯದ ರೇಷನ್ ಕಾರ್ಡ್ ಇದ್ರೂ ಅದನ್ನ ನೀವು ಇರುವ ಸ್ಥಳದಲ್ಲಿ ಬಳಸಬಹುದು.

    * ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರಕ್ಕೆ 63 ಲಕ್ಷ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಸಾಲದ ಒಟ್ಟು ಮೊತ್ತ 86,600 ಕೋಟಿ ರೂಪಾಯಿ ಇದೆ.
    * ನಗರ ಪ್ರದೇಶದಲ್ಲಿ ವಾಸವಾಗಿರುವ ಬಡವರಿಗೆ ಎಸ್‍ಡಿಆರ್‍ಎಫ್ ಮೂಲಕ 11 ಸಾವಿರ ಕೋಟಿ ಮಂಜೂರು ಮಾಡಲಾಗುವುದು. ನಿರಾಶ್ರಿತರರಿಗೆ ಸರ್ಕಾರದಿಂದ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಕಲ್ಪಿಸೋದರ ಜೊತೆಗೆ ಹಣದ ವ್ಯವಸ್ಥೆಯನ್ನು ಮಾಡಲಾಗುವುದು. 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ಮತ್ತು 1.20 ಲಕ್ಷ ಲೀಟರ್ ಸ್ಯಾನಿಟೈಸರ್ ಉತ್ಪಾದಿಸಲಾಗುವುದು, ಇದು ಪರೋಕ್ಷವಾಗಿ ನಗರ ಪ್ರದೇಶದಲ್ಲಿ ಉದ್ಯೋಗದ ದಿನಗಳನ್ನು ಹೆಚ್ಚಿಸುತ್ತದೆ.

    * ದೇಶಾದ್ಯಂತ ಪೈಸಾ ಪೋರ್ಟಲ್ ಜಾರಿ. ಹೊಸದಾಗಿ 7,200 ಸ್ವಸಹಾಯ ಸಂಘಗಳು ಕಾರ್ಯ ಆರಂಭಗೊಂಡಿವೆ.
    * ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್ ನಿಂದ 29,500 ಕೋಟಿ ಸಹಾಯ.
    * ವಲಸೆ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರ ನೇರ ಲಾಭ ತಲುಪಿಸುವ ಗುರಿ ಇದೆ.

    * ನಗರಗಳಿಂದ ಗ್ರಾಮಗಳಿಗೆ ತೆರಳಿರೋ ವಲಸೆ ಕಾರ್ಮಿಕರಿಗೆ ಪಂಚಾಯ್ತಿ ಮೂಲಕ ನರೇಗಾ ಯೋಜನೆ ಅಡಿ ಉದ್ಯೋಗ ಸೃಷ್ಟಿಸಲಾಗುವುದು. ಕನಿಷ್ಠ ವೇತನವನ್ನು 182ರಿಂದ 202 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಪ್ರತಿಯೊಬ್ಬ ದಿನಗೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಪ್ರಾಮುಖ್ಯತೆ ನೀಡಲಾಗುವುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹೊಸ ಮಾರ್ಗದರ್ಶಿ ಪ್ರಕಟ

    * ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಶೀಘ್ರದಲ್ಲಿ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ನಗರದ ಬಡವರಿಗೆ ಬಾಡಿಗೆ ಮನೆಗಳನ್ನು ಸಂಕೀರ್ಣಗಳಾಗಿ ಮಾಡುವ ಪ್ಲಾನ್
    * ಅತಿ ಸಣ್ಣ ಸಾಲದಾರರಿಗೆ ಮುದ್ರಾ ಶಿಶು ಯೋಜನೆಯಡಿಯ ಸಾಲ. ಮುದ್ರಾ ಯೋಜನೆಗಾಗಿ 15 ಸಾವಿರ ಕೋಟಿ. 12 ತಿಂಗಳು ಮುದ್ರಾ ಯೋಜನೆಯಡಿ (ಶಿಶು ಲೋನ್) ಶೇ.2ರಷ್ಟು ಬಡ್ಡಿ ವಿನಾಯ್ತಿ. ಈ ಯೋಜನೆಯಿಂದ ಸುಮಾರು 3 ಕೋಟಿ ಜನರಿಗೆ ಲಾಭ ಸಿಗಲಿದೆ.

    * ಮಧ್ಯಮ ವರ್ಗಕ್ಕೆ ಗೃಹ ಸಾಲದಲ್ಲಿ ಸಬ್ಸಿಡಿ. ಈ ಸಬ್ಸಿಡಿಯ ಅವಧಿಯನ್ನು ಮಾರ್ಚ್ 2021ರವರೆಗೆ ವಿಸ್ತರಿಸಲಾಗುವುದು. 6 ರಿಂದ 18 ಲಕ್ಷ ಆದಾಯವುಳ್ಳ ಮಧ್ಯಮ ವರ್ಗಕ್ಕೆ ಸಬ್ಸಿಡಿ ಸಿಗಲಿದೆ.

    * ಉದ್ಯೋಗ ಸೃಷ್ಟಿಗಾಗಿ 6 ಸಾವಿರ ಕೋಟಿ ಅನುದಾನ. ಬುಡಕಟ್ಟು ಮತ್ತು ಆದಿವಾಸಿಗಳಿಗೆ ತೋಟಗಾರಿಕೆ ಮತ್ತು ಅರಣ್ಯೀಕರಣದಲ್ಲಿ ಉದ್ಯೋಗ ಸೃಷ್ಟಿ.
    * ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ ತುರ್ತು ಹಣಕಾಸು ನೆರವು. ಮೀನುಗಾರಿಗೆ ಮತ್ತು ಹೈನುಗಾರಿಕೆ ಸೇರಿದಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ಕೋಟಿ ಸಾಲ ವಿತರಣೆ.

  • ಜನರಿಗೆ ದಿನಸಿ ಕಿಟ್ ನೀಡಲು ಪೆಟ್ರೋಲ್ ಬಂಕ್, ಸ್ವಂತ ಮನೆ ಅಡವಿಟ್ಟ ಸಾ.ರಾ ಮಹೇಶ್

    ಜನರಿಗೆ ದಿನಸಿ ಕಿಟ್ ನೀಡಲು ಪೆಟ್ರೋಲ್ ಬಂಕ್, ಸ್ವಂತ ಮನೆ ಅಡವಿಟ್ಟ ಸಾ.ರಾ ಮಹೇಶ್

    – ರೈತರಿಗೆ ಹಣ ಕೊಡಲು ಕೈ ಸಾಲ ಸಿಗದೆ ಆಸ್ತಿ ಅಡ ಇಟ್ರು
    – ಜನರಿಗೆ ದಿನಸಿ ಕಿಟ್, ತರಕಾರಿ ವಿತರಿಸಲು 5.5 ಕೋಟಿ ಖರ್ಚು

    ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಿಸಲು ಪೆಟ್ರೋಲ್ ಬಂಕ್ ಹಾಗೂ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ.

    ತಮ್ಮ ಕ್ಷೇತ್ರದ ಜನರಿಗೆ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಿದ್ದಾರೆ. ರೈತರಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ತರಕಾರಿ ಖರೀದಿ ಮಾಡಿದ್ದಾರೆ. ರೈತರಿಗೆ ಈ ತಿಂಗಳ 18ರ ಒಳಗೆ ಹಣ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ ಯಾರಿಂದಲೂ ಈ ವೇಳೆ ಇಷ್ಟು ಪ್ರಮಾಣದ ಹಣ ಕೈ ಸಾಲ ಸಿಗದ ಕಾರಣ ಪೆಟ್ರೋಲ್ ಬಂಕ್ ಹಾಗೂ ಮನೆಯನ್ನು ಕೆ.ಆರ್. ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ಪಡೆದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್, ಕೊರೊನಾ ಬಂದಾಗಿನಿಂದ ಜನರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿದೆ ಸುಮಾರು 72 ಸಾವಿರ ಕುಟುಂಬವಿದೆ. ಅದರಲ್ಲಿ ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು 10 ಸಾವಿರ ಕುಟುಂಬಗಳಿವೆ. ಆದರೆ ನಾವು ಕಾರ್ಡ್ ಇರಲಿ, ಇಲ್ಲದೆ ಇರಲಿ ಪ್ರತಿ ಕುಟುಂಬದವರಿಗೂ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಜೊತೆ ಎರಡು ಬಾರಿ ತರಕಾರಿ ಹಂಚಿದ್ದೇವೆ ಎಂದರು.

    ಕೊರೊನಾದಿಂದ ತರಕಾರಿ ಬೆಳೆದ ರೈತರು ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ರೈತರಿಂದ ಸುಮಾರು 15 ಸಾವಿರ ಟನ್‍ನಷ್ಟು ತರಕಾರಿ ಖರೀದಿಸಿದ್ದೇವೆ. ಅವರಿಗೆ 18 ರಂದು ಹಣ ಕೊಡುತ್ತೇನೆ ಎಂದು ಹೇಳಿದ್ದೆ. ರೈತರಿಂದ ಖರೀದಿಸಿರುವ ಬೆಳೆಗೆ ಸುಮಾರು 1.5ಕೋಟಿ ಹಣ ಕೊಡಬೇಕು. ಈ ಬಗ್ಗೆ ನಮ್ಮ ಸ್ನೇಹಿತರಿಗೆ ಹೇಳಿದೆ ಅವರು ತಕ್ಷಣ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

    ಇದುವರೆಗೂ ರೈತರಿಗೂ ಸೇರಿದಂತೆ 5.5 ಕೋಟಿ ಖರ್ಚಾಗಿದೆ. ನಾವು 3.5 ಕೋಟಿ ಆಗುತ್ತೆ ಎಂದು ಅಂದಾಜು ಮಾಡಿದ್ದೆ. ನಾವು ಹುಟ್ಟಿದಾಗಿನಿಂದ ಶ್ರೀಮಂತರಲ್ಲ. ಆದರೆ ನಮ್ಮ ದೇಶಕ್ಕೆ ಕೊರೊನಾ ಅನಿರೀಕ್ಷಿತವಾಗಿ ಬಂದಿದೆ. ಇಲ್ಲಿವರೆಗೂ ನಮಗೆ ಸುಮಾರು 10 ಕೋಟಿ ಸಾಲ ಇದೆ. ಆದರೆ ಈಗ ಅನಿರೀಕ್ಷಿತವಾಗಿ 5.5 ಕೋಟಿ ಸಾಲ ಆಗಿದೆ. ಅದರಲ್ಲಿ ಸ್ವಲ್ಪ ಸ್ನೇಹಿತರು ಕೊಟ್ಟಿದ್ದಾರೆ. ಉಳಿದನ್ನು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದೇನೆ.

    ಬೇರೆ ಸಮಯದಲ್ಲಿ ಸಾಲ ಕೇಳಿದ್ದರೆ ಸ್ನೇಹಿತರು ಕೊಡುತ್ತಿದ್ದರು. ಆದರೆ ಕೊರೊನಾ ಸಂದರ್ಭದಲ್ಲಿ ಯಾರು ಕೊಡಲ್ಲ. ಅವರಿಗೆ ಮುಂದೆ ಯಾವ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿಲ್ಲ. ಕೊನೆಗೆ ರೈತರಿಗೆ ಕೊಡಬೇಕಾದ 1.5 ಕೋಟಿಯನ್ನು ಸಾಲ ಮಾಡಬೇಕಾಯಿತು. ಬೇರೆ ಯಾವ ಉದ್ದೇಶಕ್ಕೆ ಮಾಡಿದ್ದರೆ ಬೇಸರವಾಗುತ್ತದೆ. ಆದರೆ ನಮಗೆ ವೋಟು ಹಾಕಿ, ಗೆಲ್ಲಿಸಿ ಅಧಿಕಾರಿ ಕೊಟ್ಟು ಜವಾಬ್ದಾರಿ ಕೊಟಿದ್ದಾರೆ. ಅವರ ಊರಿಗೆ ಹೋದಾಗ ಹಾರ ಹಾಕಿ ಪ್ರೀತಿ-ಗೌರವ ಕೊಟ್ಟಿದ್ದಾರೆ. ಅಂತವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ. ಇದು ಅಳಿಲು ಸೇವೆ ಅಷ್ಟೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಾರಾ ಮಹೇಶ್ ಹೇಳಿದರು.

  • ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ನವದೆಹಲಿ: 15 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಸಂಬಳದಲ್ಲಿ ಕಡಿತವಾಗ್ತಿದ್ದ ಪಿಎಫ್ ಮತ್ತು ಇಪಿಎಫ್ ಮೊತ್ತವನ್ನು ಸರ್ಕಾರ ಮೂರು ತಿಂಗಳು ಪಾವತಿಸಲಿದೆ. 72 ಲಕ್ಷ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಧು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು. ಇಂದು ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.

    ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಇಪಿಎಫ್ ಮತ್ತು ಪಿಎಫ್‍ಗಾಗಿ ಸರ್ಕಾರದಿಂದ 2500 ಕೋಟಿ ರೂ. ಹಣ ಮೀಸಲು. ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ ಕಡಿತವನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ. ಪಿಎಸ್‍ಯುನಲ್ಲಿ ಶೇ.12ರಷ್ಟು ಇಪಿಎಫ್ ಕಡಿತವಾಗಲಿದೆ.

    – ಸಣ್ಣ ಮತ್ತು ಲಘು ಕೈಗಾರಿಕೆಗಳಿಗೆ 3 ಲಕ್ಷ ಕೋಟಿ: ಸಣ್ಣ, ಅತಿ ಸಣ್ಣ ಉದ್ಯಮ ಹೊಸ ವ್ಯವಹಾರಗಳಿಗೆ – ಅಡಮಾನ ರಹಿತ 3 ಲಕ್ಷ ಕೋಟಿ ಸಾಲದ ಮಹತ್ವದ ಘೋಷಣೆ.
    – ಕೋವಿಡ್-19 ನಿಂದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಹೊಣೆಗಾರಿಕೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳು ಖರೀದಿ ಮತ್ತು ವ್ಯವಹಾರಗಳನ್ನು ಪುನಃ ಆರಂಭಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ.

    – ವ್ಯವಹಾರ/ಎಂಎಸ್‍ಎಂಇ ಗಳಿಗೆ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿಗಳಿಂದ ಅವರ ಔಟ್ ಸ್ಟ್ಯಾಂಡಿಂಗ್ (29.02.2020) ಕ್ರೆಡಿಟ್ ನ ಶೇ.20ರಷ್ಟು ಸಾಲ ಸೌಲಭ್ಯ. ಸಾಲ ಪಡೆಯುವ ವ್ಯವಹಾರದ ಟರ್ನ್ ಓವರ್ 25 ಕೋಟಿಯಿಂದ 100 ಕೋಟಿ ರೂ. ಒಳಗಿರಬೇಕು. ಸಾಲದ ಅವಧಿ 4 ವರ್ಷ ಇರಲಿದ್ದು, ಮೊದಲ 12 ತಿಂಗಳ ಅಸಲು ಪಾವತಿ ಮೇಲೆ ನಿಷೇಧ

    – ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಅಸಲು ಮತ್ತು ಬಡ್ಡಿಯ ಮೇಲೆ ಶೇ.100ರಷ್ಟು ಗ್ಯಾರೆಂಟಿ. ಅಕ್ಟೋಬರ್ 31, 2020ರಿಂದ ಈ ಯೋಜನೆ ಆರಂಭವಾಗಲಿದೆ. ಈ ಯೋಜನೆಯಿಂದ 45 ಲಕ್ಷ ಘಟಕಗಳಿಗೆ ಪ್ರೋತ್ಸಾಹ.

    – ಜಾಗತಿಕ ಟೆಂಡರ್ ಇಲ್ಲ: ಸ್ಥಳೀಯ ಮತ್ತು ಸಣ್ಣ ಹಾಗೂ ಲಘು ಕಂಪನಿಗಳು ಜಾಗತಿಕ ಮಾರುಕಟ್ಟೆಯ ಪೈಪೋಟಿಯಿಂದ ನಷ್ಟಕ್ಕೆ ಒಳಗಾಗಿದ್ದವು. ಹಾಗಾಗಿ ಜಾಗತಿಕ ಟೆಂಡರ್ ನಿಷೇಧಿಸಲಾಗಿದೆ. ಈ ಯೋಜನೆ ಸಂಪೂರ್ಣ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಬರಲಿದೆ. ಜಾಗತಿಕ ಟೆಂಡರ್ ನಿಷೇಧ ಸಣ್ಣ ಹಾಗೂ ಲಘು ಉದ್ಯಮಗಳ ಚೇತರಿಕೆಗೆ ಕಾರಣವಾಗಲಿದೆ.

    – 30 ಸಾವಿರ ಕೋಟಿ ಅನುದಾನದಲ್ಲಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಆರಂಭಿಸಲಾಗುವುದು. ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ 2.0 ಮೂಲಕ 45 ಸಾವಿರ ಕೋಟಿ ಬಂಡವಾಳ ಹೂಡಿಕೆ. ವಿದ್ಯುತ್ ಪ್ರಸರಣ ಕಂಪನಿಗಳಿಗಾಗಿ 90 ಸಾವಿರ ಕೋಟಿ ರೂ. ಅನುದಾನದ ಘೋಷಣೆ. ಸರ್ಕಾರಿ ಗುತ್ತಿಗೆಗಳ ಎಲ್ಲ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆಯ ಮಹತ್ವದ ಘೋಷಣೆಯನ್ನು ಮಾಡಿದೆ.

  • 7 ದಿನಗಳಲ್ಲಿ ಸಾಲ ಕಟ್ಟದಿದ್ರೆ ಕೇಸ್- ರೈತರಿಗೆ ಬ್ಯಾಂಕ್ ನೋಟಿಸ್

    7 ದಿನಗಳಲ್ಲಿ ಸಾಲ ಕಟ್ಟದಿದ್ರೆ ಕೇಸ್- ರೈತರಿಗೆ ಬ್ಯಾಂಕ್ ನೋಟಿಸ್

    ಚಿಕ್ಕಮಗಳೂರು: ಏಳು ದಿನಗಳ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಜಿಲ್ಲೆಯ ಕಡೂರು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟಿಸ್ ನೀಡಿದ್ದು, ರೈತರು ಕಂಗಾಲಾಗಿದ್ದಾರೆ.

    ಕಡೂರಿನ ಟಿ.ಬಿ.ರಸ್ತೆ ನಿವಾಸಿ ಶಂಕರ್ ಎಂಬವರು 2016ರಲ್ಲಿ ಭೂ ಅಭಿವೃದ್ಧಿ ಉದ್ದೇಶದಿಂದ ಎರಡು ಲಕ್ಷ ಹಣ ಸಾಲ ಪಡೆದಿದ್ದರು. ಆದರೆ ಶಂಕರ್ ಸಾಲ ಮರುಪಾವತಿಸಿಲ್ಲ. ಈ ಬಗ್ಗೆ ಶಂಕರ್ ಅವರಿಗೆ ಬ್ಯಾಂಕ್‍ನವರು ಆಗಾಗ್ಗೆ ಸಾಲ ಮರುಪಾವತಿಸುವಂತೆ ನೋಟಿಸ್ ಕೂಡ ನೀಡಿದ್ದಾರೆ. ಆದರೆ ಕಾರಣಾಂತರಿಂದ ಶಂಕರ್ ಸಾಲ ಕಟ್ಟಿರಲಿಲ್ಲ. ಈಗ ಬ್ಯಾಂಕ್‍ನವರು ನೋಟಿಸ್ ಕಳಿಸಿದ್ದು, ಇನ್ನು ಏಳು ದಿನಗಳ ಒಳಗಾಗಿ ಸಾಲ ಹಾಗೂ ಬಡ್ಡಿ ಎಲ್ಲಾ ಸೇರಿ 3 ಲಕ್ಷದ 9 ಸಾವಿರ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಕಟ್ಟದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ.

    ಕಳೆದ 37 ದಿನಗಳಿಂದ ಕೊರೊನಾ ಆತಂಕದಲ್ಲಿ ದೇಶವೇ ಲಾಕ್‍ಡೌನ್ ಆಗಿ ಇಡೀ ದೇಶವೇ ಸ್ಥಬ್ಧವಾಗಿದೆ. ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ಹೊತ್ತಿನ ತುತ್ತಿಗೂ ಪರದಾಡುತ್ತಿದ್ದಾರೆ. ರೈತರ ಬೆಳೆಗೆ ಬೆಲೆ ಇಲ್ಲ. ಬೆಳೆಗಳನ್ನ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ರೈತರು ದಿನದಿಂದ ದಿನಕ್ಕೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನೋಟಿಸ್ ನೀಡಿರೋದು ರೈತರನ್ನ ಮತ್ತಷ್ಟು ಜರ್ಜರಿತರನ್ನಾಗಿಸಿದೆ.

  • ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’

    ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’

    – ರೈಟಾಫ್ ಮಾಹಿತಿ ನೀಡಿದ ಆರ್‌ಬಿಐ
    – ಆರ್‌ಟಿಐ ಅಡಿ ಮಾಹಿತಿ ಪಡೆದ ಸಾಕೇತ್ ಗೋಖಲೆ

    ನವದೆಹಲಿ: ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಒಟ್ಟು 50 ಉದ್ಯಮಿಗಳ 68,607 ಕೋಟಿ ರೂ. ವಸೂಲಾಗದ ಸಾಲವನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಮನ್ನಾ(ರೈಟಾಫ್) ಮಾಡಿದೆ.

    ಬ್ಯಾಂಕ್ ಗಳಿಗೆ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದ ವ್ಯಕ್ತಿಗಳ ಪೈಕಿ ಯಾರ ಸಾಲವನ್ನು ಸರ್ಕಾರ ಎಷ್ಟು ಪ್ರಮಾಣದಲ್ಲಿ ರೈಟಾಫ್ ಮಾಡಿದೆ? ಈ ಮಾಹಿತಿ ನೀಡಿ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಆರ್‌ಬಿಐ ಈ ಉತ್ತರವನ್ನು ನೀಡಿದೆ.

     

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ  ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಖಾತೆಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರು. ಈ ಕಾರಣಕ್ಕೆ ನಾನು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಾಕೇತ್ ಗೋಖಲೆ, ಆರ್‌ಬಿಐನ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಅವರು 2019ರ ಸೆಪ್ಟೆಂಬರ್ 30 ರವರೆಗಿನ 68,607 ಕೋಟಿ ರೂ. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಏ.24ರಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

    2015 ಡಿಸೆಂಬರ್ 16ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಆರ್‌ಬಿಐ ವಿದೇಶಿ ಸುಸ್ತಿಗಾರರ ಮಾಹಿತಿಯನ್ನು ನೀಡಿಲ್ಲ. ಸುಸ್ತಿದಾರರು ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲವನ್ನು ಪಡೆದು ವಂಚಿಸಿದ್ದಾರೆ. ಈ ಪೈಕಿ ಕೆಲವರು ದೇಶ ಬಿಟ್ಟು ಪರಾರಿಯಾಗಿದ್ದು ಅವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಇದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿಸದೆ ಬಾರ್ಬಡೋಸ್‍ನ ಆಂಟಿಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್‍ನ 5,492 ಕೋಟಿ ರೂ. ಗಿಲಿ ಇಂಡಿಯಾ ಲಿಮಿಟೆಡ್‍ನ 1,447 ಕೋಟಿ ರೂ. ಹಾಗೂ ನಕ್ಷತ್ರ ಬ್ರಾಂಡ್ಸ್ ನ 1,109 ಕೋಟಿ ರೂ. ಸಾಲ ಮನ್ನಾವಾಗಿದೆ.

    ಲಂಡನ್‍ನಲ್ಲಿದ್ದು ಕಾನೂನು ಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್‍ಲೈನ್ಸ್‍ನ 1,943 ಕೋಟಿ ರೂ., ರುಚಿ ಸೋಯಾ ಕಂಪನಿಯ 2,212 ಕೋಟಿ ರು. ಸುಸ್ತಿಸಾಲ ಕೂಡ ಮನ್ನಾ ಮಾಡಲಾಗಿದೆ.

    ಯಾರ ಸಾಲ ಎಷ್ಟು ಮನ್ನಾ?
    ಮೆಹುಲ್ ಚೋಕ್ಸಿ – 8,048 ಕೋಟಿ ರೂ.
    ಆರ್‍ಇಐ ಅಗ್ರೋ ಲಿ. 4,314 ಕೋಟಿ ರೂ.
    ವಿನ್ಸಮ್ ಡೈಮಂಡ್ಸ್ – 4,076 ಕೋಟಿ ರೂ.

    ರೊಟೋಮ್ಯಾಕ್ ಗ್ಲೋಬಲ್ – 2,850 ಕೋಟಿ ರೂ.
    ಕುಡೋಸ್ ಕೆಮಿ, ಪಂಜಾಬ್ – 2,326 ಕೋಟಿ ರೂ.
    ರುಚಿ ಸೋಯಾ ಇಂಡಸ್ಟ್ರೀಸ್ – 2,212 ಕೋಟಿ ರೂ.
    ಜೂಮ್ ಡೆವಲಪರ್ಸ್ – 2,012 ಕೋಟಿ ರೂ.
    ಕಿಂಗ್‍ಫಿಶರ್ ಏರ್‍ಲೈನ್ಸ್ – 1,943 ಕೋಟಿ ರೂ.
    ಫಾರೆವರ್ ಪ್ರಿಶಿಯಸ್ ಜುವೆಲ್ಲರಿ -1,962 ಕೋಟಿ ರೂ.

    ಒಟ್ಟು 18 ಕಂಪನಿಗಳು 1 ಸಾವಿರ ಕೋಟಿ ಸಾಲ ಮಾಡಿದ್ದರೆ 25 ಕಂಪನಿಗಳು 1 ಸಾವಿರ ಕೋಟಿ ರೂ.ಗಿಂತ ಕಡಿಮೆ ಸಾಲ ಮಾಡಿದೆ. 50 ಮಂದಿ ಸುಸ್ತಿದಾರರ ಪೈಕಿ 6 ಮಂದಿ ವಜ್ರ ಮತ್ತು ಚಿನ್ನದ ಉದ್ಯಮಗಳನ್ನು ನಡೆಸಿದವರಾಗಿದ್ದಾರೆ.

    ರೈಟಾಫ್ ಎಂದರೇನು?
    ಸರ್ಕಾರಗಳು ರೈತರ ಸಾಲಮನ್ನಾ ಮಾಡಿದಂತೆ ಉದ್ಯಮಿಗಳ ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡುವುದಿಲ್ಲ. ಕೋಟ್ಯಂತರ ರೂ ಸಾಲ ಮಾಡಿ ದೇಶ ತೊರೆದ ಉದ್ಯಮಿಗಳನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಬ್ಯಾಂಕುಗಳು ಮೊದಲೇ ಗುರುತಿಸುತ್ತದೆ. ಸಾಲ ಪಾವತಿಸದೇ ಇದ್ದರೆ ಕೋಟ್ಯಂತರ ರೂ. ಸಾಲ ಬ್ಯಾಲೆನ್ಸ್ ಶೀಟ್ ನಲ್ಲಿ ಹಾಗೆಯೇ ಇರುತ್ತದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆದು ಹಾಕಲು ರೈಟಾಫ್ ಮಾಡುತ್ತದೆ. ರೈಟಾಫ್ ಮಾಡಿದರೂ ಉದ್ಯಮಿಗಳ ಸಾಲ ವಸೂಲಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ವಂಚನೆಗೈದವರ ವಿರುದ್ಧ ತನಿಖೆ ನಡೆಸುತ್ತಿರುತ್ತದೆ. ಮುಂದೆ ಈ ಸಾಲ ವಸೂಲಾದರೆ ಲೆಕ್ಕಪತ್ರದಲ್ಲಿ ಅದನ್ನು ಲಾಭ ಎಂಬುದಾಗಿ ತೋರಿಸುತ್ತದೆ.

  • ಸಣ್ಣ ಕೈಗಾರಿಕೆಗೆ ಆರ್‌ಬಿಐನಿಂದ ಬಿಗ್ ಗಿಫ್ಟ್- 50 ಸಾವಿರ ಕೋಟಿ ನೆರವು

    ಸಣ್ಣ ಕೈಗಾರಿಕೆಗೆ ಆರ್‌ಬಿಐನಿಂದ ಬಿಗ್ ಗಿಫ್ಟ್- 50 ಸಾವಿರ ಕೋಟಿ ನೆರವು

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಣ್ಣ ಕೈಗಾರಿಕಾ ಉದ್ಯಮಗಳಿಗೆ 50 ಸಾವಿರ ಕೋಟಿ ರೂಪಾಯಿ ನೆರವು ನೀಡಿದೆ.

    ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಾಕಷ್ಟು ಕುಸಿತವಾಗಿದೆ. ಹೀಗಾಗಿ ರಾಜ್ಯಗಳಿಗೆ ಹಣಕಾಸು ನೆರವನ್ನು ಘೋಷಣೆ ಮಾಡಿದೆ. ಕೊರೊನಾ ವೈರಸ್‍ನಿಂದ ದೇಶದ ಮೇಲೆ ಆರ್ಥಿಕವಾಗಿ ತುಂಬಾನೇ ಪರಿಣಾಮ ಬೀರಿದೆ. ಒಂದು ಕಡೆ ಮೊಬೈಲ್ ಬ್ಯಾಂಕಿಂಗ್ ಏರಿಕೆಯಾಗಿದೆ. ಆದರೆ ಆಟೋಮೊಬೈಲ್ ಉತ್ಪಾದನೆ ಕುಸಿತವಾಗಿದೆ. ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಹೊಸ ಕರೆನ್ಸಿ ಚಲಾವಣೆಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

    ಕೈಗಾರಿಕೆ ಮೇಲೆ ಕೊರೊನಾ ತುಂಬಾ ಪರಿಣಾಮ ಬೀರಿದೆ. ಹೀಗಾಗಿ ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ನೆರವು ಘೋಷಣೆ ಮಾಡಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್‌ಬಿಐ ಬರೋಬ್ಬರಿ 50 ಸಾವಿರ ಕೋಟಿ ನೆರವು ನೀಡಿದೆ. ನಬಾರ್ಡ್ ಗೆ 25 ಸಾವಿರ ಕೋಟಿ, ರಾಷ್ಟ್ರೀಯ ಗೃಹ ಬ್ಯಾಂಕ್ (ಎನ್‍ಎಚ್‍ಬಿ)ಗೆ 10 ಸಾವಿರ ಕೋಟಿ, ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್(ಎಸ್‍ಐಡಿಬಿಐ)ಗೆ 15 ಸಾವಿರ ಕೋಟಿ ನೆರವು ನೀಡಿದೆ.

    ಅಷ್ಟೇ ಅಲ್ಲದೇ ಆರ್‌ಬಿಐನಿಂದ ಹೆಚ್ಚುವರಿ ಕ್ರಮಗಳನ್ನ ಘೋಷಣೆ ಮಾಡಿದ್ದು, ದೇಶದಲ್ಲಿ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ವಲಯಗಳಿಗೆ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯುವ ಮಿತಿಯನ್ನು ಶೇ.60ಕ್ಕೆ ಹೆಚ್ಚಿಸಿದ್ದು, ಕಂಪನಿಗಳಿಗೆ ಸಾಲ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡಿದೆ.

    ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಲಾಗಿರುವ ಸಾಲದ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ರಿವರ್ಸ್ ರಿಪೋ ರೇಟ್ ಶೇ.25 ರಷ್ಟು ಕಡಿತ ಮಾಡಿದೆ. ಇನ್ನೂ ಬ್ಯಾಂಕ್‍ಗಳು ಷೇರುದಾರರಿಗೆ ಯಾವುದೇ ಲಾಭಂಶ ನೀಡುವಂತಿಲ್ಲ ಎಂದು ಆರ್‌ಬಿಐ ಘೋಷಣೆ ಮಾಡಿದೆ.

  • ಒಂದೂವರೆ ಎಕ್ರೆಯಲ್ಲಿದ್ದ ಈರುಳ್ಳಿಯನ್ನು ರಾತ್ರೋರಾತ್ರಿ ಕದ್ದರು

    ಒಂದೂವರೆ ಎಕ್ರೆಯಲ್ಲಿದ್ದ ಈರುಳ್ಳಿಯನ್ನು ರಾತ್ರೋರಾತ್ರಿ ಕದ್ದರು

    ಬಳ್ಳಾರಿ: ಲಾಕ್‍ಡೌನ್ ಆಗಿದ್ದನ್ನೇ ಬಂಡವಾಳ ಮಡಿಕೊಂಡು ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿಯ ಹೊರವಲಯದ ಒಂದೂವರೆ ಎಕ್ರೆಯಲ್ಲಿ ಬೆಳೆದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಟಾವು ಮಾಡಿಕೊಂಡು ಕದ್ದೊಯ್ದ ಘಟನೆಯೊಂದು ಬೆಳಕಿಗೆ ಬಂದಿದೆ.

    ಯರ್ರಂಗಳಿ ಗ್ರಾಮದ ರೈತ ಸುನೀಲ್ ಕುಮಾರ್ ಅವರಿಗೆ ಈ ಹೊಲ ಸೇರಿದ್ದು, ಶನಿವಾರ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆಯನ್ನು ವೀಕ್ಷಣೆ ಮಾಡಿದ್ದರು. ಭಾನುವಾರ ರಾತ್ರಿಯೊಳಗೆ ಈ ಬೆಳೆಯನ್ನು ಯಾರೋ ದುಷ್ಕರ್ಮಿಗಳು ಬಂದು ಕಟಾವು ಮಾಡಿಕೊಂಡು ಹೋಗಿದ್ದಾರೆ.

    ಈ ಮೊದಲು ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿತ್ತು. ಆದರೆ ವಿಪರೀತ ಮಳೆ ಸುರಿದ ಕಾರಣ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ಅದನ್ನು ನಾಶಪಡಿಸಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದೆ. ಆದರೆ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆಯನ್ನು ಇನ್ನೇನು ಸೋಮವಾರ ಕಟಾವು ಮಾಡಬೇಕಿತ್ತು. ಈ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಸಿಗದ ಕಾರಣ ಕಟಾವಿಗೆ ವಿಳಂಬವಾಗಿತ್ತು. ಆದರೆ ರಾತ್ರೋ ರಾತ್ರಿ ಈರುಳ್ಳಿ ಬೆಳೆಯನ್ನೇ ಕದ್ದಿದ್ದಾರೆ ಎಂದು ರೈತ ಸುನೀಲ್ ಕುಮಾರ್ ದೂರಿದ್ದಾರೆ.

    ಹೊಲದಲ್ಲಿ ಬೆಳೆದ ಬೆಳೆಯನ್ನೇ ಕದಿಯುವ ಖದೀಮರು ಹುಟ್ಟಿಕೊಂಡರೇ ಮುಂದೆ ನಾವು ಭೂಮಿ ತಾಯಿಯನ್ನು ನೆಚ್ಚಿಕೊಂಡು ಕೆಲಸ ಮಾಡುವುದು ಹೇಗೆ. ಸಾಲಸೂಲ ಮಾಡಿ ಈ ಬೆಳೆಯನ್ನ ಬೆಳೆಯಲಾಗಿತ್ತು. ಉತ್ತಮ ಇಳುವರಿಯೂ ಬಂದಿತ್ತು. ಆದರೆ ಈ ಬೆಳೆ ನಮ್ಮ ಕೈಗೆ ಸಿಗದೆ ಕಳ್ಳರ ಪಾಲಾಗಿದೆ. ಅತ್ತ ಸಾಲ ಮಾಡಿದ ಹಣ ತೀರಿಸದೇ ಇತ್ತ ಬೆಳೆಯೂ ಸಿಗದೆ ಕಂಗಾಲಾಗಿದ್ದೇನೆ ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ.

  • ಕೊರೊನಾ ಹೊಡೆತ – ಉದ್ಯಮಿಗಳು, ವ್ಯಾಪಾರಿಗಳ ನೆರವಿಗೆ ಧಾವಿಸಿದ ಬ್ಯಾಂಕುಗಳು

    ಕೊರೊನಾ ಹೊಡೆತ – ಉದ್ಯಮಿಗಳು, ವ್ಯಾಪಾರಿಗಳ ನೆರವಿಗೆ ಧಾವಿಸಿದ ಬ್ಯಾಂಕುಗಳು

    ನವದೆಹಲಿ: ಕೊರೊನಾ ಹೊಡೆತದಿಂದ ದೇಶದಲ್ಲಿ ವಾಣಿಜ್ಯ ವಹಿವಾಟುಗಳ ಮೇಲೆ ಪರಿಣಾಮ ಬೀರಿದ್ದು, ಉದ್ಯಮಿಗಳು, ವ್ಯಾಪಾರಿಗಳ ನೆರವಿಗೆ ಬ್ಯಾಂಕ್‍ಗಳು ಧಾವಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ವಿಶೇಷ ತುರ್ತು ಸಾಲ ಸೌಲಭ್ಯ ಘೋಷಿಸಿವೆ.

    ಎಸ್‍ಬಿಐ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯುಕೋ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ಗಳು ತುರ್ತು ಸಾಲ ಘೋಷಿಸಿವೆ. ಉದ್ದಿಮೆಗಳಿಗೆ ಶೇ.10ರವರೆಗೂ ಹೆಚ್ಚುವರಿ ಸಾಲ ಸೌಲಭ್ಯ ಸಿಗಲಿದೆ.

    ಮೊದಲು ಆರು ತಿಂಗಳು ಸಾಲದ ಕಂತು ಪಾವತಿ ಮಾಡುವ ಹಾಗಿಲ್ಲ. 36 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬಹುದಾಗಿದೆ. ಗರಿಷ್ಠ 50 ಲಕ್ಷ ರೂಪಾಯಿವರೆಗೂ ಸಾಲ ಸಿಗಲಿದೆ.

    ಇಂಡಿಯನ್ ಬ್ಯಾಂಕ್, ದುಡಿಯುವ ಮಹಿಳೆಯರಿಗೆ 5000 ರೂ.ಗಳಿಂದ 1 ಲಕ್ಷ ರೂ.ವರೆಗೂ ಸಹಾಯ ಸಾಲ ನೀಡಲಿದೆ. ಇದೇ ವೇಳೆ, ವೇತನ ಪಡೆಯುವ ವರ್ಗಕ್ಕೂ ಕೊರೊನಾ ತುರ್ತು ವೇತನ ಸಾಲ ಸಿಗಲಿದೆ. ವೇತನದ 20 ಪಟ್ಟು ಅಥ್ವಾ ಗರಿಷ್ಠ 2 ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತಿದೆ.

    ಈ ಮಧ್ಯೆ, ಐದು ಕಿಲೋಮೀಟರ್ ಗೆ ಒಂದು ಬ್ಯಾಂಕ್‍ನ್ನು ಮಾತ್ರ ತೆರೆದು, ಉಳಿದ ಬ್ಯಾಂಕ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಸಹ ಚಿಂತನೆ ನಡೆದಿದೆ.