Tag: loan

  • ಬಣ್ಣಬಣ್ಣದ ಮಾತಾಡಿ 3 ಕೋಟಿ ವಂಚನೆ – ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಜನ

    ಬಣ್ಣಬಣ್ಣದ ಮಾತಾಡಿ 3 ಕೋಟಿ ವಂಚನೆ – ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಜನ

    ಹಾಸನ: ಬಣ್ಣಬಣ್ಣದ ಮಾತಾಡಿ ಹಲವಾರು ಜನರಿಂದ ಲಕ್ಷ ಲಕ್ಷ ಹಣ (Money) ಪಡೆದು ವಂಚಿಸಿದ್ದ (Fraud Case) ಮಹಿಳೆಯನ್ನು ಜನ ಅಟ್ಟಾಡಿಸಿ ಹೊಡೆದ ಘಟನೆ ಹಾಸನದ (Hassan) ಅರಳೇಪೇಟೆಯಲ್ಲಿ ನಡೆದಿದೆ.

    ಟೈಲರ್ ಶಾಪ್ ನಡೆಸುತ್ತಿದ್ದ ಮಹಿಳೆ ಹೇಮಾವತಿ ಎಂಬಾಕೆ, ಹಲವರ ಬಳಿ ಚಿಟ್ಸ್‍ನಲ್ಲಿ 1 ಕೋಟಿ ರೂ. ಚೀಟಿ ಹಾಕಿದ್ದೇನೆ ಎಂದು ಸ್ಲಿಪ್ ತೋರಿಸಿ ಹಣ ಪಡೆದಿದ್ದಳು. ಅಲ್ಲದೇ ಮಗಳನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸುವುದಕ್ಕೆ, ಒಂದು ಕೋಟಿ ರೂ. ಮನೆ ಖರೀದಿಸಿದ್ದೇನೆಂದು ಹೇಳಿ ಹಲವರಿಂದ ಸಾಲ ಪಡೆದಿದ್ದಳು.

    ಚಿನ್ನಾಭರಣ ಅಡವಿಟ್ಟು ಜನ ಲಕ್ಷ ಲಕ್ಷ ಸಾಲ ಕೊಟ್ಟಿದ್ದರು. ಸುಮಾರು 3 ಕೋಟಿಗೂ ಅಧಿಕ ಹಣ ಪಡೆದು ಮೋಸ ಮಾಡಿರುವ ಆರೋಪ ಮಹಿಳೆ ಮೇಲಿದೆ. ಹೆಂಡತಿ ವಂಚನೆಗೆ ಪತಿ ವಿರೂಪಾಕ್ಷಪ್ಪ ಸಾಥ್ ನೀಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಇನ್ನೂ ಓರ್ವ ಮಹಿಳೆಯಿಂದಲೇ 45 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಳಗಾವಿ | 2,000 ಹಣಕ್ಕಾಗಿ ಹರಿಯಿತು ಯುವಕನ ನೆತ್ತರು

    ವಂಚನೆಗೊಳಗಾದ ಜನ ಮಹಿಳೆಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆ ಹಾಗೂ ಪೆನ್‍ಷನ್‍ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ

  • ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ತೀರಿಸಲಾಗದೇ ಯೋಧ ಆತ್ಮಹತ್ಯೆ

    ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ತೀರಿಸಲಾಗದೇ ಯೋಧ ಆತ್ಮಹತ್ಯೆ

    ಮೈಸೂರು: ಮನೆ ನಿರ್ಮಿಸಲು ಮಾಡಿದ್ದ ಸಾಲ (Loan) ತೀರಿಸಲಾಗದೆ ನೇಣು ಬಿಗಿದುಕೊಂಡು ಸೈನಿಕ (Soldier) ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ.

    ನಂಜಾಪುರದ ನಿವಾಸಿ ಎಂ.ಚಂದ್ರಶೇಖರ್ (35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯೋಧ. ಅವರು ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಪರದಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೈಟ್‌ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ

    15 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ, ಆಗ್ರಾ, ಚೀನಾ ಗಡಿಯಲ್ಲಿ ಚಂದ್ರಶೇಖರ್‌ ಕರ್ತವ್ಯ ನಿರ್ವಹಿಸಿದ್ದರು. 1 ತಿಂಗಳ ಹಿಂದೆ ಅವರು ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ಸಾಗ ಬೇಕಿತ್ತು.

    ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಂಡನ ಮನೆಯಲ್ಲಿ ಕಿರುಕುಳ ಆರೋಪ – ನದಿಗೆ ಹಾರಿ ಪ್ರಾಣಬಿಟ್ಟ ತಾಯಿ, ಮಗಳು

  • 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

    1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

    – 15 ಜನರ ವಿರುದ್ಧ ಬಿತ್ತು ಕೇಸ್‌; ಕಿಂಗ್‌ಪಿನ್‌ ನಯನಾ ಅರೆಸ್ಟ್‌

    ಬೆಂಗಳೂರು: ನಗರದಲ್ಲೊಂದು ಖತರ್ನಾಕ್‌ ಗ್ಯಾಂಗ್‌ ಹುಟ್ಟಿಕೊಂಡಿದೆ. ಕಡಿಮೆ ಬಡ್ಡಿಗೆ ಲೋನ್‌ (Loan) ಕೊಡಿಸ್ತೀವಿ ಅಂತ ಬಂದು ಗ್ರಾಹಕರಿಂದ ಹಣ ಪೀಕಿ ಎಸ್ಕೇಪ್‌ ಆಗ್ತಾರೆ. ಇದೇ ರೀತಿ ಜನರನ್ನ ಯಾಮಾರಿಸುತ್ತಿದ್ದ ಖತರ್ನಾಕ್‌ ಲೇಡಿ ಗ್ಯಾಂಗ್‌ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಪ್ರಕರಣ ಕಿಂಗ್‌ಪಿನ್‌ ಲೇಡಿಯನ್ನ (Lady Gang) ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

    ಹೌದು.. ಸುಬ್ಬಲಕ್ಷ್ಮಿ ಚಿಟ್‌ ಫಂಡ್‌ (Chit Fund) ಹೆಸರಿನಲ್ಲಿ 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ನಂಬಿಸಿದ್ದ ಲೇಡಿಗ್ಯಾಂಗ್‌ ಗ್ರಾಹಕರೊಬ್ಬರಿಗೆ 30 ರೂ. ಪಡೆದು ವಂಚನೆ ಎಸಗಿತ್ತು. ದೂರು ಪಡೆದು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಿಂಗ್‌ಪಿನ್‌ ಲೇಡಿಯನ್ನ ಬಂಧಿಸಿದ್ದಾರೆ. ವಿಚಾರಣೆ ಬಳಿಕ ಒಟ್ಟು 15 ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    ಈ ಗ್ಯಾಂಗ್‌ ಪಂಗನಾಮ ಹಾಕಿದ್ದು ಹೇಗೆ?
    1 ರೂ.ಪಾಯಿಗೆ ಲೋನ್‌ ಕೊಡ್ತಿಸ್ತೀವಿ ಅಂದಿದ್ದ ಈ ಗ್ಯಾಂಗ್‌ ಗ್ರಾಹಕರಿಂದ ಲೋನ್‌ ಪ್ರೊಸೆಸಿಂಗ್‌ಗೆ 30 ರೂ. ಹಣ ಪಡೆದುಕೊಂಡಿತ್ತು. ಕಿಂಗ್‌ ಪಿನ್‌ ನಯನಾ ನಮ್ಮ ಸಂಬಂಧಿ ಸುಬ್ಬಲಕ್ಷ್ಮಿ ಚಿಟ್ ಫಂಡ್‌ನಲ್ಲಿ ಕೆಲ್ಸ ಮಾಡ್ತಿದ್ದಾರೆ. 10 ಲಕ್ಷ ಲೋನ್ ಕೊಡಿಸ್ತಾರೆ, ಬರೀ 1 ರೂಪಾಯಿ ಬಡ್ಡಿ ಅಷ್ಟೇ ಅಂತ ಹೇಳಿದ್ದಾಳೆ. ನಂತ್ರ ಲೋನ್‌ ಮಂಜೂರಾಗಬೇಕಾದ್ರೆ, ಮೊದಲೇ 3 ಇಎಂಐ ಕಟ್ಟಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ರೂ. ಇಎಂಐ, ಜೊತೆಗೆ ಪ್ರೊಸೆಸಿಂಗ್‌ ಶುಲ್ಕ 5 ಸಾವಿರ ರೂ. ಕಟ್ಟಬೇಕು ಅಂತ ಹೇಳಿದ್ದಾರೆ. ಕೊನೆಗೆ ಎಲ್ಲರಿಗೂ ಒಟ್ಟಿಗೆ ಲೋನ್‌ ರಿಲೀಸ್‌ ಮಾಡ್ತೇವೆ ಅಂತ ಹೇಳಿ ಅಬೇಸ್‌ ಆಗಿದ್ದಾರೆ. ಇದನ್ನೂ ಓದಿ: ದುರ್ಗಾಪುರ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌ – ಜೊತೆಗಿದ್ದ ಸ್ನೇಹಿತನೇ 6ನೇ ಆರೋಪಿ

    ನಯನಾ ಗೌಡ ಈ ಲೇಡಿಗ್ಯಾಂಗ್‌ನ ಕಿಂಗ್‌ ಪಿನ್‌ ಆಗಿದ್ದು, ಕವನಾ, ಗಿರೀಜಾ ಎಂಬ ಮಹಿಳೆಯರೂ ಸೇರಿಕೊಂಡಿದ್ದಾರೆ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡ ಬಳಿಕ ಲೋನ್‌ ಕೊಡಿಸದೇ, ಹಣವನ್ನೂ ವಾಪಸ್‌ ಕೊಡದೇ ವಂಚಿಸಿದ್ದಾರೆ. ಈ ಕುರಿತು ಸಂತ್ರಸ್ತರು ಬಸವೇಶ್ವರನಗರ, ಕೆ.ಪಿ. ಅಗ್ರಹಾರ, ಶ್ರೀರಾಮ್ ಪುರ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ತನಿಖೆ ಬಳಿಕ ಕಿಂಗ್‌ ಪಿನ್‌ ನಯನಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನ ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ನಯನಾ ಹಲವರ ಹೆಸರು ಬಾಯ್ಬಿಟ್ಟಿದ್ದಿ, ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 15 ಜನರ ಮೇಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ

  • ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದಕ್ಕೆ ರೈತರೊಬ್ಬರು (Farmers)  ಕೈಗೆ ಬಂದಿದ್ದ ಈರುಳ್ಳಿ(Onion) ಫಸಲನ್ನ ಮಣ್ಣಲ್ಲೇ ಮುಚ್ಚಿದ್ದಾರೆ.

    ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

    ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:  ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ಬೀದರ್ | ನಾಲ್ವರು ಮಕ್ಕಳ ಜೊತೆ ನಾಲೆಗೆ ಹಾರಿದ ದಂಪತಿ, ಪತಿ 3 ಮಕ್ಕಳು ಸಾವು

    ಬೀದರ್ | ನಾಲ್ವರು ಮಕ್ಕಳ ಜೊತೆ ನಾಲೆಗೆ ಹಾರಿದ ದಂಪತಿ, ಪತಿ 3 ಮಕ್ಕಳು ಸಾವು

    – ಮಹಿಳೆ, ಮತ್ತೊಬ್ಬ ಮಗನ ರಕ್ಷಣೆ

    ಬೀದರ್: ಸಾಲಗಾರರ ಕಿರುಕುಳದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾರಂಜಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಭಾಲ್ಕಿ ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

    ಶಿವಮೂರ್ತಿ ಮಾರುತಿ (45), 8 ತಿಂಗಳ ಪುಟ್ಟ ಕಂದ ರಾಕೇಶ್, ಶ್ರೀಕಾಂತ್ (8) ಹಾಗೂ ರಿತಿಕ್ (4) ಸಾವನ್ನಪ್ಪಿದ ದುರ್ದೈವಿಗಳು. ತಾಯಿ ರಮಾಬಾಯಿ ಮತ್ತು ಇನ್ನೋಬ್ಬ 7 ವರ್ಷದ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಚಿಂದಿ ಆಯುವ ನೆಪದಲ್ಲಿ ಮನೆಗಳ್ಳತನ – ಬೀಗ ಒಡೆಯುವಾಗಲೇ ಸಿಕ್ಕಿಬಿದ್ದ ಕಳ್ಳಿಯರು

    ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಮಕ್ಕಳ ಸಮೇತ ದಂಪತಿ ಕಾಲುವೆಗೆ ಹಾರಿದ್ದಾರೆ. ಈ ವೇಳೆ ತಾಯಿ ಮತ್ತು ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇವರು ಮೂಲತಃ ಬೀದರ್ (Bidar) ನಗರದ ಮೈಲೂರು ನಿವಾಸಿಗಳಾಗಿದ್ದಾರೆ.

    ಮೃತದೇಹವನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಈಶ್ವರ್ ಖಂಡ್ರೆ ಭೇಟಿ (Eshwara Khandre) ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಎಸ್‍ಪಿ ಪ್ರದೀಪ್ ಗುಂಟಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು | ರಸ್ತೆ ಗುಂಡಿಗೆ ಬಿದ್ದ ಮಹಿಳೆ – ಕ್ಯಾಂಟರ್ ಲಾರಿ ಹರಿದು ಸಾವು

  • ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ 2 ಕೋಟಿ ಸಾಲ ಕೊಟ್ಟಿದ್ದರು: ಜಮೀರ್‌

    ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ 2 ಕೋಟಿ ಸಾಲ ಕೊಟ್ಟಿದ್ದರು: ಜಮೀರ್‌

    ಬೆಂಗಳೂರು: ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ (Radhika Kumaraswamy) ನನಗೆ 2 ಕೋಟಿ ರೂ. ಸಾಲ ನೀಡಿದ್ದರು ಎಂದು ವಸತಿ ಸಚಿವ ಜಮೀರ್‌ ಅಹಮದ್‌ (Zameer Ahmed Khan) ತಿಳಿಸಿದ್ದಾರೆ.

    ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ಎದುರಿಸಿದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಲ ಕೊಟ್ಟಿರುವುದನ್ನು ನಾನು ಆದಾಯ ತೆರಿಗೆಯಲ್ಲಿ ತೋರಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅವರ ಆದಾಯ ತೆರಿಗೆ ಫೈಲ್‌ ಮಾಡುವಾಗ ತೋರಿಸಿದ್ದಾರೆ. ಇಡಿ ದಾಳಿ ನಂತರ ಈಗ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

    ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ವಸತಿ ಸಚಿವರ ಆದಾಯದ ಮೂಲಗಳನ್ನು ಪರಿಶೀಲಿಸಿದಾಗ ಸಾಲ ನೀಡಿದ ವ್ಯಕ್ತಿಗಳ ಪಟ್ಟಿ ಸಿಕ್ಕಿತ್ತು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಇದ್ದ ಕಾರಣ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ರಾಧಿಕಾ, ದಶಕದ ಹಿಂದೆ ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡು ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ

     

    ಏನಿದು ಪ್ರಕರಣ?
    2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಈ ವಂಚಕ ಕಂಪನಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್‌ ಅಹಮದ್‌ ಅವರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು.

    ಇಡಿ ವರದಿಯ ಅನ್ವಯ ಆಗ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ಖಾನ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ ಈ ಪ್ರಕರಣ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ (Lokayukta Police) ವರ್ಗವಾಗಿತ್ತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು ಹಲವರ ವಿಚಾರಣೆ ನಡೆಸುತ್ತಿದ್ದಾರೆ.

    ನಾನು ಯಾರ ಬಳಿ ಸಾಲ ಪಡೆದಿದ್ದೇನೆ ಎನ್ನುವುದರ ಬಗ್ಗೆ ಜಮೀರ್‌ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಪಟ್ಟಿ ನೀಡಿದ್ದರು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬಳಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

    ವಿಚಾರಣೆ ಸಂದರ್ಭದಲ್ಲಿ, ನಾನು 2012ರಲ್ಲಿ ಶಮಿಕಾ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ.ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್‌ ಅಹ್ಮದ್‌ ಅವರಿಗೆ 2.5 ಕೋಟಿ ರೂಗಳನ್ನು ಸಾಲವಾಗಿ ನೀಡಿದ್ದೆ ಎಂದು ರಾಧಿಕಾ ತಿಳಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

  • ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    – ಆಟೋ ಚಾಲಕ, ಸಾಥ್‌ ಕೊಟ್ಟ ಗೆಳತಿ ಅರೆಸ್ಟ್‌ – ಮತ್ತಿಬ್ಬರು ನಾಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರಿನ (Bengaluru) ಆಟೋ ಚಾಲಕನೊರ್ವ ಆಟೋ ಇಎಂಎ ಸಾಲ ತೀರಿಸಲು ತನ್ನಿಬ್ಬರು ಸ್ನೇಹಿತೆಯರನ್ನೇ ಬಳಸಿಕೊಂಡು ಪ್ರೀಪ್ಲಾನ್ ಮಾಡಿ, ಹಳೆಯ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ. ಪಾಪಿ ಆಟೋ ಚಾಲಕನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

    ಆ.16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆಯೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಬೆನ್ನತ್ತಿದ್ದ ಪೊಲೀಸರಿಗೆ ಕಾಣೆಯಾದ ಮಹಿಳೆಯರ ಪ್ರಕರಣಗಳ ಹುಡುಕಾಟ ನಡೆಸಿದಾಗ ಆಕೆ ಆಂಧ್ರದ ಹಿಂದೂಪುರದ ಅರ್ಚನಾ ಎಂಬುದು ಗೊತ್ತಾಗಿತ್ತು. ಹಿಂದೂಪುರ ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ

    ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್‍ಐ ಆಕೆಯ ಸಿಡಿಆರ್ ಪರಿಶೀಲನೆ ಮಾಡಿದಾಗ ಕಾಣೆಯಾದ ದಿನದಂದು ಆರ್ಚನಾಳಿಗೆ ರಾಕೇಶ್ ಎಂಬಾತ ಹಲವು ಬಾರಿ ಕರೆ ಮಾಡಿರೋದು ಗೊತ್ತಾಗಿದೆ. ಹೀಗಾಗಿ ಮೂಲತಃ ಗೌರಿಬಿದನೂರಿನ ವಿರೂಪಸಂದ್ರದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ರಾಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕ ರಾಕೇಶ್ ತನ್ನ ಆಟೋ ಇಎಂಐನ್ನ ಮೂರು ತಿಂಗಳಿಂದ ಕಟ್ಟಿಲ್ಲ, ಹಾಗೂ ಬೈಕ್ ಮೇಲೆ 30,000 ಸಾಲ ಮಾಡಿದ್ದು, ಅದು ಸಹ ತೀರಿಸಲು ಹಣ ಇಲ್ಲ. ಕೈ ಸಾಲ ಬೇರೆ ಮಾಡಿಕೊಂಡಿದ್ದು ಸಾಲಗಾರನಾಗಿದ್ದು ಸಾಲ ತೀರಿಸಲು ಸ್ನೇಹಿತೆಯನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಕೊಲೆಯಾದ ಅರ್ಚನಾ ಶುಭಸಮಾರಂಭಗಳಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳ ಹಿಂದೆ ಕೊಲೆ ಮಾಡಿದ ಆಟೋ ಚಾಲಕ ಸಹ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ. ಅಂದಿನಿಂದಲೂ ಅರ್ಚನಾ ಹಾಗೂ ರಾಕೇಶ್ ಅಣ್ಣ ತಂಗಿಯ ಸಂಬಂಧದಂತೆ ಸ್ನೇಹಿತರಾಗಿದ್ದರಂತೆ. ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಲಕ ಲಕ ಹೊಳೆಯುತ್ತಿದ್ದ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದ. ಹಾಗಾಗಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ತನ್ನ ಮತ್ತೊಬ್ಬ ಸ್ನೇಹಿತಾ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದ. ತಾನು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಆಟೋ ಇಎಂಐ ಸಹ ಕಟ್ಟಿಲ್ಲ, ಹಾಗಾಗಿ ನನ್ನ ಫ್ರೆಂಡ್ ಅರ್ಚನಾ ಹತ್ರ ಚಿನ್ನದ ಸರ ಇದೆ ಅವಳನ್ನ ಸಾಯಿಸಿ ಆದ್ರೂ ಸರ ಕದ್ದು ಸಾಲ ತೀರಿಸಬೇಕು ನೀನು ನನಗೆ ಸಹಾಯ ಮಾಡು ಅಂತ ಕೇಳಿಕೊಂಡಿದ್ದನಂತೆ.

    ನಿಹಾರಿಕಾ ನಾನು ಬರೋಕೆ ಆಗಲ್ಲ ನನ್ನ ಪ್ರಾಣ ಸ್ನೇಹಿತೆ ಅಂಜಲಿ ಅಂತಾ ಇದಾಳೆ ಅವಳನ್ನ ಕರೆದುಕೊಂಡು ಹೋಗು ಅಂತ ಅಂಜಲಿನಾ ಕಳಿಸಿಕೊಟ್ಟಿದ್ದಾಳೆ. ಇನ್ನೂ ಅಂಜಲಿ ತಾನೊಬ್ಬಳೇ ಯಾಕೆ ಅಂತ ತನ್ನ ಸ್ನೇಹಿತ ನವೀನ್‌ ಎಂಬಾತನನ್ನ ಸಹ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ರಾಕೇಶ್ ಆಟೋದಲ್ಲಿ ಆದ್ರೆ ಮರ್ಡರ್ ಮಾಡೋಕೆ ಆಗಲ್ಲ ಅಂತ ಕಾರಿನಲ್ಲಿ ಆದ್ರೆ ಕೆಲಸ ಸುಲಭ ಅಂತ ಯೋಚನೆ ಮಾಡಿ, ಅಂಜಲಿ ವಾಸವಿದ್ದ ಪಿಜಿ ಮಾಲೀಕಿಗೆ ಸ್ನೇಹಿತೆಯನ್ನ ನೊಡೋಕೆ ಹಿಂದೂಪುರಕ್ಕೆ ಹೋಗಿ ಬರ್ತಿವಿ ಅಂತ ಪಿಜಿ ಮಾಲೀಕಿಯ ಇಟಿಯೋಸ್ ಕಾರನ್ನ ತೆಗೆದುಕೊಂಡು ಹೋಗಿದ್ದ.

    ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಸೀದಾ ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನ ಬಾ ಊಟಕ್ಕೆ ಹೋಗಿ ಬರೋಣ ಅಂತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರು ಹತ್ತಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಎಲ್ಲರೂ ಹಿಂದೂಪುರದಲ್ಲೇ ಫೋನ್‍ಗಳನ್ನ ಸ್ವಿಚ್ ಅಫ್ ಮಾಡಿಕೊಂಡಿದ್ದಾರೆ. ಹಿಂದೂಪುರದಿಂದ ಆರಂಭವಾದ ಕಾರು ಜರ್ನಿ ಗೌರಿಬಿದನೂರು ಮಂಚೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಹಾಗೂ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಜೆಯವರೆಗೂ ಸಾಗಿದ್ದು ಸಂಜೆ ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ ಮೃತದೇಹವನ್ನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಗ್ರಾಮದ ಬಳಿ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದರು.

    ಅರ್ಚನಾಳನ್ನ ಕೊಲೆ ಮಾಡಿ ಕದ್ದಿದ್ದ ಮಾಂಗಲ್ಯಸರ ಹಾಗೂ ಬಂಗಾರದ ಕಿವಿಯ ಒಲೆಯನ್ನ ಫೈನಾನ್ಸ್‌ ಒಂದರಲ್ಲಿ 2.19 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಬಂದ ಹಣದಿಂದ ಆಟೋ ಇಎಂಐ ಹಾಗೂ ಕೈ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿಕೊಂಡಿದ್ದರು. ಈಗ ರಾಕೇಶ್ ಹಾಗೂ ಅಂಜಲಿಗೆ ಪೊಲೀಸರು ಜೈಲು ದರ್ಶನ ಮಾಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಹತ್ಯೆಗೈದಿದ್ದ ಪಾಪಿ ತಾಯಿ ಅರೆಸ್ಟ್‌

  • ಫೈನಾನ್ಸ್ ಸಿಬ್ಬಂದಿ ಕಿರುಕುಳ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

    ಫೈನಾನ್ಸ್ ಸಿಬ್ಬಂದಿ ಕಿರುಕುಳ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

    ದಾವಣಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ನಡೆದಿದೆ.

    ಯಶವಂತ್ ನಾಯ್ಕ (24) ನೇಣಿಗೆ ಶರಣಾದ ಯುವಕ. ಈತ ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದ. ಸಾಲ‌ ಕಟ್ಟಲಿಲ್ಲ‌ ಎಂದರೆ ಮನೆ ಜಪ್ತಿ ಮಾಡುವುದಾಗಿ ಖಾಸಗಿ ಪೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರು. ಇನ್ನೊಂದು ಕಡೆ ಬೈಕ್ ಅಡವಿಟ್ಟು ಶಿವಮೊಗ್ಗದ ವ್ಯಕ್ತಿಯೊಬ್ಬರ ಬಳಿ 40 ಸಾವಿರ ರೂ. ಸಾಲ ಮಾಡಿದ್ದ. ಸಾಲ ಕಟ್ಟದ ಹಿನ್ನೆಲೆ ಮನೆ ಮುಂದೆ ಬಂದು ಅವರು ಗಲಾಟೆ ಮಾಡಿದ್ದರು. ಇದರ ಜೊತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಸಹ ಕಿರುಕುಳ ನೀಡುತ್ತಿದ್ದರು ಎಂದು ಯುವಕನ ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ದಾಳಿ ಮಾಡಿ – ಪಾಕ್ ಸೇನಾ ಮುಖ್ಯಸ್ಥನಿಗೆ ಬೆಂಗಳೂರಿನ ಅಲ್‌ಖೈದಾ ಭಯೋತ್ಪಾದಕಿ ಮನವಿ

    ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದ ವೃದ್ಧನ ರಕ್ಷಣೆ – 30 ಸೆಕೆಂಡ್ ತಡವಾಗಿದ್ರೂ ದೇಹ ಛಿದ್ರ!

    ಡೆತ್‌ನೋಟ್‌ನಲ್ಲಿ ಏನಿದೆ?
    ಸಾಲಗಾರರ ಕಿರುಕುಳಕ್ಕಾಗಿ ಸಾಯುತ್ತಿದ್ದೇನೆ. ಅಪ್ಪ ನೀನು ಅಂದು ಕೊಂಡಂತೆ ನಾನು ದುಡ್ಡು ಹಾಳು ಮಾಡಿಲ್ಲ. ಈ ಕೇಸ್‌ನಲ್ಲಿ ನಾನು ಇಷ್ಟಪಡುತ್ತಿದ್ದ ಹುಡುಗಿಯನ್ನು ಎಳೆದು ತರಬೇಡಿ. ಅವಳು ಎಲ್ಲಿದ್ದರೂ ಚೆನ್ನಾಗಿರಬೇಕು. ಅವಳು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಳು ಎಂದು ಬರೆದಿದ್ದಾನೆ. ಅಲ್ಲದೇ, ತಾನು ಮಾಡಿದ್ದ ಸಾಲದ ಬಗ್ಗೆ ಬರೆದು, ದಯವಿಟ್ಟು ನನ್ನನ್ನು ಕ್ಷಮಿಸಿ ಅಪ್ಪ ಅಮ್ಮ ಎಂದು ಉಲ್ಲೇಖಿಸಿದ್ದಾನೆ.

  • ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ದರ್ಪ

    ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ದರ್ಪ

    ವಿಜಯಪುರ: ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಚಡಚಣ (Chadachan) ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ.

    ಕುಮಾರ್‌ಗೌಡ ಬಿರಾದಾರ್ ಎಂಬಾತ ಓರ್ವ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಅಮಾನುಷವಾಗಿ ನಡೆದುಕೊಂಡಿದ್ದಾನೆ.ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ಕುಮಾರ್‌ಗೌಡನ ಬಳಿ ವ್ಯಕ್ತಿಯೋರ್ವ 20 ಸಾವಿರ ರೂ. ಸಾಲ ಪಡೆದಿದ್ದ. ಇದೀಗ ಸಾಲದ ಹಣವನ್ನು ವಾಪಸ್ ಕೊಡದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಕುಮಾರ್ ಗೌಡನ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಭಾರತೀಯ ವಿಮಾನಗಳಿಗೆ ವಾಯು ಮಾರ್ಗ ಬಂದ್ – ಆ.24ರವರೆಗೆ ವಿಸ್ತರಿಸಿದ ಪಾಕ್

  • ಐಷಾರಾಮಿ ಮನೆಯಲ್ಲೇ ಬಾರ್, ಮಲೇಷ್ಯಾ ಹುಡುಗಿಯರು – ಉದ್ಯಮಿಗಳಿಗೆ 200 ಕೋಟಿ ವಂಚಿಸಿದ್ದ ಕಿಂಗ್‌ಪಿನ್ ಅರೆಸ್ಟ್

    ಐಷಾರಾಮಿ ಮನೆಯಲ್ಲೇ ಬಾರ್, ಮಲೇಷ್ಯಾ ಹುಡುಗಿಯರು – ಉದ್ಯಮಿಗಳಿಗೆ 200 ಕೋಟಿ ವಂಚಿಸಿದ್ದ ಕಿಂಗ್‌ಪಿನ್ ಅರೆಸ್ಟ್

    – ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ
    – ಮನೆಯಲ್ಲೇ ಸೀಕ್ರೆಟ್ ರೂಮ್ ಇಟ್ಕೊಂಡು ಭಾರೀ ವಂಚನೆ

    ಮಂಗಳೂರು: ಜಿಲ್ಲಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಭಾರೀ ವಂಚನಾ ಜಾಲವೊಂದು ಭೇದಿಸಿದ್ದು, ಈ ಮೂಲಕ ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ಕಿಂಗ್ ಪಿನ್ ರೋಹನ್‌ನನ್ನು ಬಂಧಿಸಿದ್ದಾರೆ.

    ರೊನಾಲ್ಡ್ ಸಲ್ಡಾನಾ ಅಲಿಯಾಸ್ ರೋಹನ್ ಬಂಧಿತ ಆರೋಪಿ. ಗುರುವಾರ ರಾತ್ರಿ (ಜು.17) ಮಂಗಳೂರು (Mangaluru) ಹೊರವಲಯದ ಜಪ್ಪಿನಮೊಗರು ಎಂಬಲ್ಲಿನ ಐಷಾರಾಮಿ ಬಂಗಲೆಯ ಮೇಲೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

    ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ರೋಹನ್ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ ಐಷಾರಾಮಿ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ, ಜಾಗದ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಿದ್ದ. ಅದಲ್ಲದೇ ದೇಶದ ಪ್ರಮುಖ ನಗರಗಳಲ್ಲಿ ತನ್ನ ವಂಚನೆಗಾಗಿ ಏಜೆಂಟರ್‌ಗಳನ್ನ ಇರಿಸಿದ್ದ. ಅವರ ಮೂಲಕ ಡೀಲ್ ಕುದುರಿಸಲು ಮಂಗಳೂರಿನ ತನ್ನ ಐಷಾರಾಮಿ ಮನೆಗೆ ಕರೆಸುತ್ತಿದ್ದ. ತಾನೊಬ್ಬ ಅಗರ್ಭ ಶ್ರೀಮಂತ ಅನ್ನೋ ರೀತಿ ಪೋಸ್ ಕೊಡುತ್ತಿದ್ದ.

    ಮನೆಯಲ್ಲೇ ಬಾರ್:
    ಮನೆಯಲ್ಲಿನ ಚಿನ್ನ, ಬಣ್ಣದ ಚಿತ್ತಾರ, ಎಲ್ಲಿ ನೋಡಿದ್ರೂ ವಿದೇಶಿ ಮದ್ಯಗಳು, ಮಲೇಶಿಯನ್ ಹುಡುಗಿಯರು ಎಲ್ಲವನ್ನು ಮನೆಗೆ ಬಂದ ಉದ್ಯಮಿಗಳಿಗೆ ನೀಡುತ್ತಿದ್ದ. ಐಷಾರಾಮಿ ಮನೆ, ಅಲ್ಲಿನ ಆತಿಥ್ಯ ನೋಡಿಯೇ ಉದ್ಯಮಿಗಳು ಖೆಡ್ಡಾಕ್ಕೆ ಬೀಳುತ್ತಿದ್ದರು.

    ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳನ್ನು ತನ್ನ ವಂಚನಾ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ಉದ್ಯಮಿಗಳ ಒಪ್ಪಿಗೆಯ ನಂತರ 50 ರಿಂದ 100 ಕೋಟಿ ರೂ. ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ನೀಡುವಂತೆ ಕೇಳುತ್ತಿದ್ದ. ಆತನ ಬಣ್ಣದ ಮಾತಿಗೆ ಮರುಳಾಗಿ ಉದ್ಯಮಿಗಳು ಹಿಂದೆ-ಮುಂದೆ ನೋಡದೇ ಕೋಟ್ಯಂತರ ರೂ. ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರು.

    ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾಕಾರಣ ಹೇಳಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ಉದ್ಯಮಿಗಳಿಂದ ಎಸ್ಕೇಪ್ ಆಗುತ್ತಿದ್ದ. ಹೀಗೆ ಈತನಿಂದ ವಂಚನೆಗೊಳಗಾದ ಇಬ್ಬರು ದೂರು ದಾಖಲಿಸಿದ್ದು, ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವಂಚಿಸಿದ್ದು, ಈವರೆಗೂ 200 ಕೋಟಿ ರೂ. ಅಧಿಕ ಹಣವನ್ನು ವಂಚಿಸಿರುವುದು ಬಯಲಾಗಿದೆ.

    ಮನೆಯಲ್ಲೇ ಸೀಕ್ರೆಟ್ ರೂಮ್:
    ಬಂಗಲೆಯಲ್ಲಿಯೇ ಅಡಗು ತಾಣವನ್ನು ಮಾಡಿಕೊಂಡು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಲಿಂಕ್ ಮಾಡಿಸಿದ್ದ. ಮನೆಯ ಸುತ್ತಮುತ್ತಲೂ ಸಿಸಿ ಕ್ಯಾಮೆರಾ ಹಾಕಿಸಿಕೊಂಡು ಮೋಸ ಹೋದವರು ಹಣ ಕೇಳಲು ಬಂದರೆ ಸೀಕ್ರೆಟ್ ರೂಮ್‌ಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸುತ್ತಿದ್ದ.

    ಪೊಲೀಸರ ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದ್ದು, ಆತನ ಬ್ಯಾಂಕ್ ಖಾತೆಗಳಲ್ಲಿ 40 ಕೋಟಿ ರೂ. ಹಣ ಪತ್ತೆಯಾಗಿದೆ. ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಉದ್ಯಮ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದ. ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದ ಈತ, ಹೆಂಡತಿಯ ಹೆಸರಿನಲ್ಲೂ ಹಲವು ಉದ್ಯಮ ನಡೆಸುತ್ತಿದ್ದ ಎನ್ನುವುದು ಬಯಲಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ – ಕೊಡಗಿಗೆ ರೆಡ್, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ