Tag: LLB

  • ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!

    ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!

    ಲಕ್ನೋ: ಇತ್ತೀಚೆಗೆ ಚಿತ್ರ-ವಿಚಿತ್ರ ರೀತಿಯಲ್ಲಿ ಮದುವೆ (Krishna Marriage) ಗಳು ನಡೆಯುತ್ತವೆ. ಅಂತೆಯೇ ಯುವತಿಯೊಬ್ಬಳು ಭಗವಾನ್ ಶ್ರೀಕೃಷ್ಣನನ್ನು ಮದುವೆಯಾದ ವಿಚಿತ್ರ ಪ್ರಸಂಗವೊಂದು ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಔರ್ರೈಯಾ ಜಿಲ್ಲೆಯಲ್ಲಿ ನಡೆದಿದೆ. ರಕ್ಷಾ, ಕೃಷ್ಣನನ್ನು ಮದುವೆಯಾದ ವಿದ್ಯಾರ್ಥಿನಿ. ಈಕೆ ಪ್ರತಿನಿತ್ಯ ಕೃಷ್ಣನ್ನು ಪೂಜಿಸುತ್ತಿದ್ದಳು. ಕಾನೂನು ಪದವಿ ಓದಿರುವ ಈಕೆಗೆ ಕೃಷ್ಣನ ಮೇಲೆ ಭಕ್ತಿ ಹೆಚ್ಚಾಗಿ, ಕೃಷ್ಣ ಯಾವತ್ತೂ ನನ್ನ ಜೊತೆಗೇ ಇರಬೇಕು ಅನ್ನೋ ಉದ್ದೇಶದಿಂದ ಆತನನ್ನೇ ವರಿಸಿದ್ದಾಳೆ.

    ರಕ್ಷಾ ಮೊದಲು ತನ್ನ ನಿರ್ಧಾರವನ್ನು ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಅಂತೆಯೇ ಮಗಳ ತೀರ್ಮಾನಕ್ಕೆ ತಂದೆಯೂ ಸೈ ಎಂದರು. ಅಲ್ಲದೆ ಆಕೆಯ ಮದುವೆಗೆ ತಯಾರಿ ನಡೆಸಲು ಆರಂಭಿಸಿದರು. ಈ ಅದ್ಧೂರಿ ಮದುವೆಯಲ್ಲಿ ರಕ್ಷಾ ಕುಟುಂಬಸ್ಥರು, ಆಪ್ತರು ಪಾಲ್ಗೊಂಡು ಆಶೀರ್ವದಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

    ರಕ್ಷಾ ಕೃಷ್ಣನ ಮೂರ್ತಿಯನ್ನು ತಲೆಯಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡಿದಳು. ಈ ವೇಳೆ ಕುಟುಂಬಸ್ಥರು ಆರತಿ ಬೆಳಗಿದ್ದಾರೆ. ಇದೇ ವೇಳೆ ಕೃಷ್ಣನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಕುಟುಂಬಸ್ಥರು ಇಮ್ಮಡಿಗೊಳಿಸಿದರು. ಇತ್ತ ವಧು, ಕೃಷ್ಣ ಮೂರ್ತಿಯೊಂದಿಗೆ ಮೊದಲು ತನ್ನ ಸಂಬಂಧಿಕರ ಮನೆಗೆ ಹೋಗಿ ನಂತರ ತನ್ನ ಅಲ್ಲಿಂದ ತನ್ನ ತವರಿಗೆ ಬಂದಿದ್ದಾಳೆ.

    ಸದ್ಯ ಈ ವಿಭಿನ್ನ ಮದುವೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ.

  • ಪ್ರಿನ್ಸಿಪಾಲ್‌ ಬೈದಿದ್ದಕ್ಕೆ ಎಲ್‌ಎಲ್‌ಬಿ ವಿದ್ಯಾರ್ಥಿ ನೇಣಿಗೆ ಶರಣು

    ಪ್ರಿನ್ಸಿಪಾಲ್‌ ಬೈದಿದ್ದಕ್ಕೆ ಎಲ್‌ಎಲ್‌ಬಿ ವಿದ್ಯಾರ್ಥಿ ನೇಣಿಗೆ ಶರಣು

    ಬೆಂಗಳೂರು: ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ (LLB Student) ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಲ್ ಅಮೀನ್ ಕಾಲೇಜಿನ ರಿಜ್ವಾನ್ ಜೈದ್ (25) ಮಂಗಳವಾರ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಇದನ್ನೂ ಓದಿ: ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌


    ಅಂತಿಮ ವರ್ಷದ ಕಾನೂನು ಪದವಿ ಓದುತ್ತಿದ್ದ ರಿಜ್ವಾನ್‌ಗೆ ಮಂಗಳವಾರ ಪ್ರಾಂಶುಪಾಲರು ಬೈದಿದ್ದಾರೆ. ಇದರಿಂದ ತೀವ್ರ ಬೇಸತ್ತು ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಅಂತಾ ಶಂಕಿಸಲಾಗುತ್ತಿದೆ. ಸದ್ಯ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ (Supreme Court) ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ.ವೈ ಚಂದ್ರಚೂಡ್ (DY Chandrachud) ಅವರನ್ನು ನೇಮಿಸಿ ಕೇಂದ್ರ ಸರ್ಕಾರ (Government Of India) ಅಧಿಸೂಚನೆ ಹೊರಡಿಸಿದೆ.

    ನವೆಂಬರ್ 8ರಂದು ಹಾಲಿ ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (CJI) ಅವರು 2 ವರ್ಷ ಅಧಿಕಾರದಲ್ಲಿ ಇರಲಿದ್ದು, 2024ರ ನವೆಂಬರ್ 10ರಂದು ಚಂದ್ರಚೂಡ್ ನಿವೃತ್ತಿ ಹೊಂದಲಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಸಂವಿಧಾನದ 124ನೇ (Constitution of India) ವಿಧಿಯ ಕಲಂ (2)ರ ಅಡಿ ಅಧಿಕಾರ ಚಲಾಯಿಸಿ ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ಸಿಜೆಐ ಆಗಿ 2022ರ ನವೆಂಬರ್ 9ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ (President Of Inida) ಅವರು ಆದೇಶ ಮಾಡಿದ್ದಾರೆ ಎಂದು ಕಾನೂನು ಇಲಾಖೆ (Law) ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

    ಅಕ್ಟೋಬರ್ 11ರಂದೇ ಹಾಲಿ ಸಿಜೆಐ ಲಲಿತ್ (UU Lalit) ಅವರು ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನೂ ಓದಿ: 200 ವರ್ಷಗಳಿಂದ ವಕ್ಪ್ ಆಸ್ತಿ , ಎರಡು ಬಾರಿ ನಮಾಜ್‌ಗೆ ಮಾತ್ರ ಅವಕಾಶ – ಸುಪ್ರೀಂ ಕೋರ್ಟ್‌ನಲ್ಲಿ ವಾದ ಹೇಗಿತ್ತು?

    ಚಂದ್ರಚೂಡ್ ಹಿನ್ನೆಲೆ ಏನು?
    ಎಲ್‌ಎಲ್‌ಎಂ (LLM) ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್ ಅವರು ಡಾಕ್ಟರ್ ಇನ್ ಜುಡಿಷಿಯಲ್ ಸೈನ್ಸಸ್ ಪದವಿಯನ್ನು ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯಿಂದ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ನ್ಯಾ. ಚಂದ್ರಚೂಡ್ ಅವರನ್ನು ಬಾಂಬೆ ಹೈಕೋರ್ಟ್ 1998ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು.

    2000ದಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ (Allahabad High Court) ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

    Live Tv
    [brid partner=56869869 player=32851 video=960834 autoplay=true]

  • 3 ವರ್ಷಗಳಿಂದ ನಡೀತಿಲ್ಲ ಘಟಿಕೋತ್ಸವ- ಕಾನೂನು ಪದವೀಧರರಿಂದ ಆಕ್ರೋಶ

    3 ವರ್ಷಗಳಿಂದ ನಡೀತಿಲ್ಲ ಘಟಿಕೋತ್ಸವ- ಕಾನೂನು ಪದವೀಧರರಿಂದ ಆಕ್ರೋಶ

    ಹುಬ್ಬಳ್ಳಿ: ವಿಶ್ವ ವಿದ್ಯಾಲಯಗಳಲ್ಲಿ ಪ್ರತಿ ವರ್ಷ ಘಟಿಕೋತ್ಸವ ಆಚರಿಸಲಾಗುತ್ತದೆ. ಆದರೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿಶ್ವವಿದ್ಯಾಲಯದಲ್ಲಿ ಮಾತ್ರ ಕಳೆದ ಮೂರು ವರ್ಷಗಳಿಂದ ಘಟಿಕೋತ್ಸವ ನಡೆಯದಿರುವುದು ಕಾನೂನು ಪದವೀಧರರ ಆಕ್ರೋಶಕ್ಕೆ ಗುರಿಯಾಗಿದೆ.

    ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿಶ್ವವಿದ್ಯಾಲಯ ಕಳೆದ ಮೂರು ವರ್ಷಗಳಿಂದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಪಟ್ಟಿ ಪ್ರಕಟಗೊಳಿಸಿಲ್ಲ. ರ‍್ಯಾಂಕ್ ವಿದ್ಯಾರ್ಥಿ ಎನ್ನುವ ಅಂಶವನ್ನು ಪ್ರಕಟಸದಿರುವುದು ಪದವೀಧರರ ಅಸಮಾಧಾನಕ್ಕೆ ಕಾರಣವಾಗಿದೆ.

    ರ‍್ಯಾಂಕ್ ಪಡೆದು ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನ ಕೊರಳಿಗೆ ಹಾಕಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಘಟಿಕೋತ್ಸವ ಆಯೋಜನೆ, ರ‍್ಯಾಂಕ್ ಪಟ್ಟಿ ಪ್ರಕಟಿಸಲು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಅನುಮೋದನೆ ಸಿಕ್ಕಿಲ್ಲ. ಸಿಂಡಿಕೇಟ್ ಸದಸ್ಯರಿದ್ದಾಗ ಶೈಕ್ಷಣಿಕ ಮಂಡಳಿಗೆ ಸದಸ್ಯರಿಲ್ಲ ಪರಿಣಾಮ ಘಟಿಕೋತ್ಸವ ಆಯೋಜನೆ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

    2014ರಲ್ಲೊ ಶೈಕ್ಷಣಿಕ ಮಂಡಳಿ ನೇಮಕವಾಗಿತ್ತು. ಅದರ ಅವಧಿ ಮುಗಿದರು ಇದೂವರೆಗೂ ಮಂಡಳಿಗೆ ನೂತನ ಸದಸ್ಯರ ನೇಮಕವಾಗಿಲ್ಲ. ಹೀಗಾಗಿ ಸಿಂಡಿಕೇಟ್ ಸದಸ್ಯ ಮಂಡಳಿ ಸಹ ಘಟಿಕೋತ್ಸವ ಆಯೋಜನೆ ಮಾಡಲು ಸಾಧ್ಯವಾಗಿಲ್ಲ.

    ಕಾನುನು ಪದವೀಧರರು ಅರ್ಜಿ ಶುಲ್ಕ ತುಂಬಿ ಪದವಿ ಪ್ರಮಾಣ ಪತ್ರ ಪಡೆಯಬಹುದಾಗಿದ್ದರು. ಘಟಿಕೋತ್ಸವ ನಡೆಯದಿರುವುದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಕಾನೂನು ಪದವೀಧರರು ಘಟಿಕೋತ್ಸವ ಇಲ್ಲದೇ ಪದವಿ ಪ್ರಮಾಣ ಪತ್ರ ಪಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

    ಈ ವರ್ಷವಾದರೂ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಕಾನೂನು ವಿಶ್ವ ವಿದ್ಯಾಲಯಕ್ಕೆ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರ ನೇಮಕ ಮಾಡಿ ಘಟಿಕೋತ್ಸವ ಆಯೋಜನೆ ಮಾಡಲಿ ಅಂತ ಕಾನೂನು ಪದವೀಧರರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

  • ಪತ್ನಿಯ ಸಹಾಯದಿಂದ್ಲೇ ವಿದ್ಯಾರ್ಥಿನಿಯ ಮೇಲೆ ವಕೀಲನಿಂದ ರೇಪ್!

    ಪತ್ನಿಯ ಸಹಾಯದಿಂದ್ಲೇ ವಿದ್ಯಾರ್ಥಿನಿಯ ಮೇಲೆ ವಕೀಲನಿಂದ ರೇಪ್!

    ಹೈದರಾಬಾದ್: ಎಲ್‍ಎಲ್‍ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವಕೀಲನನ್ನು ರಾಮಾ ರಾವ್ ಎಂದು ಗುರುತಿಸಲಾಗಿದೆ. ಏಪ್ರಿಲ್ 26 ರಂದು ವಿದ್ಯಾರ್ಥಿನಿ ಈತನ ವಿರುದ್ಧ ಚಿಲ್ಕಲ್ ಗುಡ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.

    ಈತ ಹೈದರಾಬಾದ್ ನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದು, ವಿದ್ಯಾರ್ಥಿನಿ ಇಂಟರ್ನ್ ಶಿಪ್ ಮಾಡಲೆಂದು ಈತನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಆತ ತನ್ನ ವಿಸಿಟಿಂಗ್ ಕಾರ್ಡ್ ನೀಡಿ ಮತ್ತೊಮ್ಮೆ ಭೇಟಿ ಮಾಡುವಂತೆ ಹೇಳಿದ್ದಾನೆ. ಅಲ್ಲದೆ ಏಪ್ರಿಲ್ 21ರಂದು ಆರೋಪಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಹೀಗೆ ಮನೆಗೆ ಬಂದಾಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ.

    ನಂತರ ಏಪ್ರಿಲ್ 25ರಂದು ಕೂಡ ಮತ್ತೆ ವಿದ್ಯಾರ್ಥಿನಿಯನ್ನು ಮನೆಗೆ ಕರೆದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದಾನೆ. ಪತಿಯ ನೀಚ ಕೃತ್ಯಕ್ಕೆ ಪತ್ನಿ ಕೂಡ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಆರೋಪಿ ವಿರುದ್ಧ ಶುಕ್ರವಾರ ಅತ್ಯಾಚಾರ(378), ಜೀವಬೆದರಿಕೆ(506)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.