Tag: LK Advani

  • ಎಲ್.ಕೆ ಅಡ್ವಾಣಿ ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ

    ಎಲ್.ಕೆ ಅಡ್ವಾಣಿ ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ

    -ಮೋದಿ ದಾಖಲೆ ಬಳಿಕ ಹೊಸ ದಾಖಲೆ ಬರೆದ ಚಾಣಕ್ಯ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅಮಿತ್ ಶಾ ಅವರು 2019ರ ಮೇ 30ರಿಂದ 2025ರ ಆ.4ರವರೆಗೆ ಒಟ್ಟು 2,258 ದಿನಗಳನ್ನು (6 ವರ್ಷ 65 ದಿನ) ಪೂರೈಸಿದ್ದಾರೆ. ಇದಕ್ಕೂ ಮುನ್ನ ಲಾಲ್ ಕೃಷ್ಣ ಅಡ್ವಾಣಿ ಅವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಸೇವೆ ಸಲ್ಲಿಸಿ ಒಟ್ಟು 2,256 ದಿನಗಳ (6 ವರ್ಷ 64 ದಿನ) ದಾಖಲೆ ಬರೆದಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರೆಂದು ಅಮಿತ್ ಶಾ ಅವರನ್ನು ಪ್ರಶಂಸಿಸಿದರು.ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಅಮಿತ್ ಶಾ ಅವರು ತಮ್ಮ ಅಧಿಕಾರವಧಿಯಲ್ಲಿ ಹತ್ತಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
    ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ರದ್ದು: 2019ರ ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದತಿಯ ಮೂಲಕ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಿಸಲಾಯಿತು. ಈ ಕ್ರಮವು ದೇಶದ ಏಕೀಕರಣಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಪರಿಗಣಿಸಲಾಗಿದೆ.

    ಸಿಎಎ ಮತ್ತು ಎನ್‌ಆರ್‌ಸಿ: ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಮೂಲಕ ನೆರೆಯ ರಾಷ್ಟ್ರಗಳಿಂದ ಬಂದಿರುವ ಶರಣಾರ್ಥಿಗಳಿಗೆ ನಾಗರಿಕತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕೂಡ ಚರ್ಚೆಯ ಕೇಂದ್ರವಾಗಿತ್ತು.

    ಕಾನೂನು ಸುಧಾರಣೆಗಳು: ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಬದಲಾವಣೆ ತಂದು ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ರಕ್ಷಣೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಪರಿಚಯಿಸಲಾಯಿತು.

    ಆಂತರಿಕ ಭದ್ರತೆ: ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮತ್ತು ಇತರ ಭದ್ರತಾ ಸಂಸ್ಥೆಗಳನ್ನು ಬಲಪಡಿಸಲಾಗಿದೆ.

    ಕೋವಿಡ್-19 ನಿರ್ವಹಣೆ: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಆಂತರಿಕ ಭದ್ರತೆಯ ಜೊತೆಗೆ ಲಾಕ್‌ಡೌನ್‌ನಂತಹ ಕಠಿಣ ನಿರ್ಧಾರಗಳನ್ನು ಕೈಗೊಂಡು ದೇಶವನ್ನು ಸುರಕ್ಷಿತವಾಗಿಡಲು ಕೊಡುಗೆ ನೀಡಿದ್ದಾರೆ.ಇದನ್ನೂ ಓದಿ: `ಕ್ಯಾರಮ್ ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

  • ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

    ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Advani) ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    97 ವರ್ಷದ ಎಲ್‌ಕೆ ಅಡ್ವಾಣಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ದಿಢೀರ್ ಆರೋಗ್ಯದಲ್ಲಿ ಏರುಪೇರು ಉಂಟಾದ ಪರಿಣಾಮ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಹೆಂಡತಿ, ಮಾವನ ಕಿರುಕುಳಕ್ಕೆ ಹೆಡ್‌ಕಾನ್‌ಸ್ಟೇಬಲ್ ಬಲಿ – ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

    ಸದ್ಯ ಎಲ್‌ಕೆ ಅಡ್ವಾಣಿ ಅವರನ್ನು ತಜ್ಞ ವೈದ್ಯರ ನಿಗಾದಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: Ramanagara | ಸ್ನೇಹಿತನನ್ನು ಕೊಲೆಗೈದ ಪ್ರಕರಣ – ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 50,000 ರೂ. ದಂಡ

  • ಒಸಿಐ ಕಾರ್ಡ್ ಹೊಂದಿರುವ ಸಾಗರೋತ್ತರ ಭಾರತೀಯ ನಾಗರಿಕರು ವಿದೇಶಿಗರೇ? ಕೇಂದ್ರ ಸರ್ಕಾರ ಹೇಳೋದೇನು?

    ಒಸಿಐ ಕಾರ್ಡ್ ಹೊಂದಿರುವ ಸಾಗರೋತ್ತರ ಭಾರತೀಯ ನಾಗರಿಕರು ವಿದೇಶಿಗರೇ? ಕೇಂದ್ರ ಸರ್ಕಾರ ಹೇಳೋದೇನು?

    – ಯಾರೀ ಸಾಗರೋತ್ತರ ಭಾರತೀಯ ಸಮುದಾಯ?
    – ಒಸಿಐ ಕಾರ್ಡ್ ಇದ್ರೆ ಭಾರತದಲ್ಲಿ ಸಿಗುವ ಸೌಲಭ್ಯಗಳೇನು?

    ದೇಶದಲ್ಲಿ ಸಾಗರೋತ್ತರ ಭಾರತೀಯ ನಾಗರಿಕರ (OCI) ವಿಚಾರ ಚರ್ಚೆಯಲ್ಲಿದೆ. ಒಸಿಐ ಕಾರ್ಡ್‌ಗಳನ್ನು ಹೊಂದಿರುವವರನ್ನು ವಿದೇಶಿಗರು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ವದಂತಿ ದೇಶದೆಲ್ಲೆಡೆ ಚರ್ಚೆ ಹುಟ್ಟುಹಾಕಿತು. ವದಂತಿ ಹರಡಿದ ಬೆನ್ನಲ್ಲೇ ಸಾಗರೋತ್ತರ ಭಾರತೀಯ ಸಮುದಾಯವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ವದಂತಿಗಳನ್ನು ವಿದೇಶಾಂಗ ಇಲಾಖೆ ಅಲ್ಲಗಳೆಯಿತು. ಅಂತಹ ಯಾವುದೇ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು.

    ಅಷ್ಟಕ್ಕೂ ಒಸಿಐ ಕಾರ್ಡ್ ಎಂದರೇನು? ಈ ಕಾರ್ಡ್‌ಗಳ ಅನುಕೂಲತೆಗಳೇನು? ಒಸಿಐಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ನಿಯಮಗಳೇನು? ಇದು ಒಸಿಐ ನಿಯಮಗಳಿಗೆ ಮಾಡಿದ ಮೊದಲ ಬದಲಾವಣೆಯೇ?

    ಏನಿದು ಒಸಿಐ ಕಾರ್ಡ್?
    2005 ರ ಆಗಸ್ಟ್‌ನಲ್ಲಿ ಇದನ್ನು ಪರಿಚಯಿಸಲಾಯಿತು. ಈ ಕಾರ್ಡ್‌ಗಳನ್ನು ಸಾಗರೋತ್ತರ ಭಾರತೀಯ ಸಮುದಾಯದವರಿಗೆ ನೀಡಲಾಗುತ್ತದೆ. ಭಾರತೀಯ ಮೂಲದವರಾಗಿದ್ದು, ವಿದೇಶಗಳಲ್ಲಿ ನೆಲೆಸಿರುವವರಿಗೆ ದ್ವಿಪೌರತ್ವ ಕಲ್ಪಿಸುವುದೇ ಈ ಕಾರ್ಡ್‌ಗಳ ಮುಖ್ಯ ಉದ್ದೇಶವಾಗಿದೆ. 1950ರ ಜನವರಿ 26 ರಂದು ಭಾರತದ ಪ್ರಜೆಗಳಾಗಿದ್ದ ಅಥವಾ ಆ ದಿನಾಂಕದಂದು ಭಾರತದ ಪ್ರಜೆಗಳಾಗಲು ಅರ್ಹರಾಗಿದ್ದ ಭಾರತೀಯ ಮೂಲದ ಎಲ್ಲಾ ವ್ಯಕ್ತಿಗಳಿಗೆ ಒಸಿಐ ಯೋಜನೆಯು ನೋಂದಣಿಗೆ ಅವಕಾಶ ಕಲ್ಪಿಸಿತ್ತು. 2005ರ ಸಂದರ್ಭದಲ್ಲಿ ಸಂಸತ್ ಅಧಿವೇಶನದಲ್ಲಿ ಎಲ್.ಕೆ.ಅಡ್ವಾಣಿ ಶಾಸನ ಮಂಡಿಸಿದ್ದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ವಲಸೆಗಾರರಿಗೆ ದ್ವಿಪೌರತ್ವ ಪರಿಚಯಿಸುವುದೇ ಮಸೂದೆಯ ಮುಖ್ಯ ಉದ್ದೇಶ ಎಂದಿದ್ದರು.

    ಒಸಿಐ ಕಾರ್ಡ್ ಹೊಂದಿರುವವರು, ಮೂಲಭೂತವಾಗಿ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಭಾರತಕ್ಕೆ ಭೇಟಿ ನೀಡಲು ಬಹು ಉದ್ದೇಶದ ಜೀವಿತಾವಧಿಯ ವೀಸಾವನ್ನು ಪಡೆಯುತ್ತಾರೆ. ದೇಶದಲ್ಲಿ ಯಾವುದೇ ಅವಧಿಯವರೆಗೆ ಸ್ಥಳೀಯ ಪೊಲೀಸ್ ಪ್ರಾಧಿಕಾರದಲ್ಲಿ ನೋಂದಣಿಯಿಂದ ವಿನಾಯಿತಿ ಪಡೆದಿರುತ್ತಾರೆ. ಆರಂಭದಲ್ಲಿ ಒಸಿಐ ಕಾರ್ಡ್ ಹೊಂದಿರುವವರು ಕೃಷಿ ಅಥವಾ ತೋಟದ ಆಸ್ತಿಗಳ ಸ್ವಾಧೀನಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ಆರ್ಥಿಕ, ಹಣಕಾಸು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಂಬಂಧ ಅನಿವಾಸಿ ಭಾರತೀಯರೊಂದಿಗೆ (ಎನ್‌ಆರ್‌ಐ) ಸಾಮಾನ್ಯ ಸಮಾನತೆಗೆ ಅರ್ಹರಾಗಿದ್ದರು. ಎನ್‌ಆರ್‌ಐಗಳು ವಿದೇಶಿ ರಾಜ್ಯದ ಖಾಯಂ ನಿವಾಸಿಗಳಾಗಿರುವ ಭಾರತೀಯ ನಾಗರಿಕರು.

    ಕಾರ್ಡ್‌ನಿಂದ ಸಿಗುವ ಅನುಕೂಲಗಳೇನು?
    ಒಸಿಐ ಕಾರ್ಡ್‌ಗಳನ್ನು ಹೊಂದಿರುವವರಿಗೆ, ಅದರಲ್ಲೂ ಮುಖ್ಯವಾಗಿ ವಿದೇಶಿಗಳ ಪಾಸ್‌ಪೋರ್ಟ್ ಹೊಂದಿರುವವರಿಗೆ ಭಾರತಕ್ಕೆ ಹಲವು ಬಾರಿ ಬಂದು ಹೋಗಲು ವೀಸಾ ಸಿಗುತ್ತದೆ. ಆಜೀವ ಪರ್ಯಂತ ಈ ಸೌಲಭ್ಯ ಅವರಿಗೆ ಸಿಗುತ್ತದೆ. ಇಲ್ಲದಿದ್ದರೆ, ಭಾರತದಲ್ಲಿ ವೀಸಾ ಅವಧಿ ಮೀರಿದ ಬಳಿಕ ತುಂಬಾ ದಿನ ಉಳಿದಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ. ತಾವು ಯಾವ ಕಾರಣಕ್ಕಾಗಿ ಉಳಿದಿದ್ದೇವೆ, ಎಷ್ಟು ದಿನ ಉಳಿದುಕೊಳ್ಳುತ್ತೇವೆ ಎಂಬ ವಿಚಾರವಾಗಿ ಘೋಷಣಾ ಪತ್ರ ಸಲ್ಲಿಸಬೇಕಾಗುತ್ತದೆ. ಒಸಿಐ ಕಾರ್ಡ್ ಇದ್ದರೆ ಈ ಯಾವ ಪ್ರಮೇಯವೂ ಬರುವುದಿಲ್ಲ.

    ಒಸಿಐಗಳಿಗೆ ಸಂಬಂಧಿಸಿದ ಈಚಿನ ನಿಯಮಗಳೇನು?
    2021ರ ಮಾರ್ಚ್ 4 ರಂದು ಗೃಹ ವ್ಯವಹಾರಗಳ ಸಚಿವಾಲಯವು ಒಸಿಐ ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು. ಈ ನಿಯಮಗಳು ಒಸಿಐ ಕಾರ್ಡ್ ಹೊಂದಿರುವವರು ಭಾರತದಲ್ಲಿನ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಲು ಅನುಮತಿಯನ್ನು ಪಡೆಯಬೇಕು. ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳಿಗೂ ಇದೇ ನಿರ್ಬಂಧಗಳು ಅನ್ವಯಿಸುತ್ತವೆ. ಯಾವುದೇ ಸಂಶೋಧನೆ ಕೈಗೊಳ್ಳಲು, ಯಾವುದೇ ಮಿಷನರಿ ಅಥವಾ ತಬ್ಲಿಘಿ ಅಥವಾ ಪತ್ರಿಕೋದ್ಯಮ ಕಾರಣಕ್ಕಾಗಿ ಭಾರತದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಲು ಒಸಿಐಗಳಿಗೆ ವಿಶೇಷ ಪರವಾನಗಿಯನ್ನು ಪಡೆಯುವ ಅವಶ್ಯಕತೆ ಸೇರಿದಂತೆ ಹೊಸ ನಿರ್ಬಂಧಗಳ ಸರಣಿಯನ್ನು ಪರಿಚಯಿಸಲಾಯಿತು.

    ಇದು ಒಸಿಐ ನಿಯಮಗಳಿಗೆ ಮಾಡಿದ ಮೊದಲ ಬದಲಾವಣೆಯೇ?
    ಇಲ್ಲ, 2021 ರ ಅಧಿಸೂಚನೆಯು 2005ರ ಏಪ್ರಿಲ್ 11, 2007ರ ಜನವರಿ 5 ಮತ್ತು 2009ರ ಜನವರಿ 5 ರಂದು ನೀಡಲಾದ ಮೂರು ಹಿಂದಿನ ಅಧಿಸೂಚನೆಗಳನ್ನು ರದ್ದುಗೊಳಿಸಿತು. ಇದು ಒಸಿಐಗಳ ಹಕ್ಕುಗಳನ್ನು ನಿಗದಿಪಡಿಸಿತು. 2005ರ ಏಪ್ರಿಲ್ 11 ರಂದು ಹೊರಡಿಸಲಾದ ಆದೇಶವು ಒಸಿಐಗಳಿಗೆ ಜೀವಿತಾವಧಿಯ ವೀಸಾಗಳನ್ನು ಸಕ್ರಿಯಗೊಳಿಸಿತು. ಯಾವುದೇ ಅವಧಿಯ ವಾಸ್ತವ್ಯಕ್ಕಾಗಿ ಎಫ್‌ಆರ್‌ಆರ್‌ಒ ನೋಂದಣಿಯಿಂದ ವಿನಾಯಿತಿ ನೀಡಲಾಯಿತು.

    2009ರ ಜನವರಿಯಲ್ಲಿ ಒಂದಷ್ಟು ತಿದ್ದುಪಡಿ ಮಾಡಲಾಯಿತು. ಸ್ಮಾರಕಗಳು, ಐತಿಹಾಸಿಕ ಸ್ಥಳಗಳು, ವಸ್ತುಸಂಗ್ರಹಾಲಯಗಳಲ್ಲಿ ಪ್ರವೇಶ ಶುಲ್ಕ ಮತ್ತು ವೈದ್ಯರು, ಸಿಎಗಳು, ವಕೀಲರು ಹಾಗೂ ವಾಸ್ತುಶಿಲ್ಪಿಗಳಂತಹ ವೃತ್ತಿಗಳಿಗೆ ಸಂಬಂಧಿಸಿದಂತೆ ಎನ್‌ಆರ್‌ಐಗಳಂತೆಯೇ ಒಸಿಐಗಳಿಗೂ ಸಮಾನ ಅವಕಾಶ ಕಲ್ಪಿಸಲು ತಿದ್ದುಪಡಿ ಮಾಡಲಾಯಿತು.

    ಯಾರು ಒಸಿಐ ಆಗಲು ಸಾಧ್ಯವಿಲ್ಲ?
    ಅರ್ಜಿದಾರನು ಅವನ/ಅವಳ ಪೋಷಕರು ಅಥವಾ ಅಜ್ಜ/ಅಜ್ಜಿಯರು ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಪ್ರಜೆಯಾಗಿದ್ದರೆ ಒಸಿಐ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ. ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ವಿದೇಶಿ ಸೇನಾ ಸಿಬ್ಬಂದಿಯೂ ಒಸಿಐ ಕಾರ್ಡ್‌ಗೆ ಅರ್ಹರಾಗಿರುವುದಿಲ್ಲ. ಆದರೆ, ಭಾರತದ ಪ್ರಜೆಯ ವಿದೇಶಿ ಮೂಲದ ಸಂಗಾತಿ ಅಥವಾ ಒಸಿಐ ಕಾರ್ಡ್ ಇರುವವರ ವಿದೇಶಿ ಮೂಲದ ಸಂಗಾತಿಯು ಮದುವೆಯನ್ನು ನೋಂದಾಯಿಸಿ, ಎರಡು ವರ್ಷ ದಾಟಿದ್ದರೆ ಒಸಿಐ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

    ಒಸಿಐ ಕಾರ್ಡ್ ಹೊಂದಿರುವವರಿಗೆ ಯಾವ ಹಕ್ಕಿರಲ್ಲ?
    ಒಸಿಐ ಕಾರ್ಡ್ ಹೊಂದಿರುವವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ವಿಧಾನಸಭೆ, ವಿಧಾನ ಪರಿಷತ್ ಅಥವಾ ಸಂಸತ್ತಿನ ಸದಸ್ಯರಾಗಲು, ರಾಷ್ಟ್ರಪತಿ, ಉಪಾಧ್ಯಕ್ಷ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನ್ಯಾಯಾಧೀಶರಂತಹ ಭಾರತೀಯ ಸಾಂವಿಧಾನಿಕ ಹುದ್ದೆಗಳನ್ನು ಹೊಂದಲು ಅವಕಾಶ ಇರಲ್ಲ. ಸಾಮಾನ್ಯವಾಗಿ ಸರ್ಕಾರಿ ಉದ್ಯೋಗವನ್ನು ಹೊಂದಲು ಕೂಡ ಸಾಧ್ಯವಿಲ್ಲ.

    ಸರ್ಕಾರಿ ದಾಖಲೆಗಳು ಏನು ಹೇಳುತ್ತವೆ?
    ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, 2023ರ ಹೊತ್ತಿಗೆ ಭಾರತ ಸರ್ಕಾರದಿಂದ 129 ದೇಶಗಳಲ್ಲಿರುವ 45 ಲಕ್ಷ ಸಾಗರೋತ್ತರ ಭಾರತೀಯ ನಾಗರಿಕರು ಒಸಿಐ ಕಾರ್ಡ್‌ಗಳನ್ನು ನೀಡಲಾಗಿದೆ. ಈ ಕಾರ್ಡ್‌ಗಳನ್ನು ಹೆಚ್ಚಾಗಿ ಪಡೆದಿರುವುದು ಅಮೆರಿಕದಲ್ಲಿರುವ ಭಾರತೀಯರು. ಅಲ್ಲಿರುವ 16.8 ಲಕ್ಷ ಭಾರತೀಯರಿಗೆ ಒಸಿಐ ಕಾರ್ಡ್‌ಗಳನ್ನು ನೀಡಲಾಗಿದೆ. ಆನಂತರದ ಸ್ಥಾನಗಳಲ್ಲಿ ಯುಕೆಯಲ್ಲಿರುವ ಭಾರತೀಯರು (4.94) ಹಾಗೂ ಕೆನಡಾ (4.18 ಲಕ್ಷ) ಮಂದಿ ಈ ಕಾರ್ಡ್‌ಗಳನ್ನು ಪಡೆದಿದ್ದಾರೆ.

  • ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್

    – ಸೋಶಿಯಲ್ ಮೀಡಿಯಾಗಳಲ್ಲಿ ನಿಧನದ ವದಂತಿ

    ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ (LK Advani) ಸಾವನ್ನಪ್ಪಿದ್ದಾರೆ ಎಂದು ವದಂತಿ ಹಬ್ಬಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಅವರ ಆರೋಗ್ಯ (Health) ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಶುಕ್ರವಾರ ಅವರು ಅಪೊಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸದ್ಯ ತಮ್ಮ ನಿವಾಸದಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    96 ವರ್ಷ ವಯಸ್ಸಿನ ಅಡ್ವಾಣಿ ಅವರು ವಯೋಸಹಜ ಸಮಸ್ಯೆಯಿಂದ ಎರಡು ದಿನಗಳ ಹಿಂದೆ ದೆಹಲಿಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿಟ್ಟು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಅವರನ್ನು ಶುಕ್ರವಾರ ಸಂಜೆ ಡಿಸ್ಚಾರ್ಜ್ ಮಾಡಲಾಗಿತ್ತು. ಇದಕ್ಕೂ ಮುನ್ನ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    1927ರ ನವೆಂಬರ್ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ ಅಡ್ವಾಣಿ ಜನಿಸಿದರು. ಭಾರತೀಯ ರಾಜಕೀಯದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದ ಅಡ್ವಾಣಿ, 1942ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಚಾರಕರಾಗಿ ಕೆಲಸ ಆರಂಭಿಸಿದ ಅವರು 1951ರಲ್ಲಿ ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗವಾದ ಭಾರತೀಯ ಜನಸಂಘ ಸೇರಿದರು. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ- ಪತ್ನಿ ಸ್ಪರ್ಧೆ ವದಂತಿಗೆ ಡಾ. ಮಂಜುನಾಥ್ ಸ್ಪಷ್ಟನೆ

    1980ರಲ್ಲಿ ಜನತಾ ಪಕ್ಷದ ವಿಸರ್ಜನೆಯ ನಂತರ ಭಾರತೀಯ ಜನತಾ ಪಕ್ಷವನ್ನು ರಚಿಸಲಾಯಿತು. ಅಡ್ವಾಣಿ ಅದರ ಪ್ರಮುಖ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ಬಿಜೆಪಿಯ ಸಿದ್ಧಾಂತವನ್ನು ರೂಪಿಸುವಲ್ಲಿ ಮತ್ತು ಭಾರತದಾದ್ಯಂತ ಅದರ ನೆಲೆಯನ್ನು ವಿಸ್ತರಿಸುವಲ್ಲಿ ಅಡ್ವಾಣಿ ನಿರ್ಣಾಯಕ ಪಾತ್ರ ವಹಿಸಿದರು. 1990ರಲ್ಲಿ ರಾಮ ಮಂದಿರಕ್ಕಾಗಿ ರಾಷ್ಟ್ರವ್ಯಾಪಿ ರಥಯಾತ್ರೆ ಮಾಡಿದರು. 2002ರಿಂದ 2004ರವರೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಉಪನಾಯಕರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ

  • ಆಸ್ಪತ್ರೆಗೆ ದಾಖಲಾಗಿರುವ ಅಡ್ವಾಣಿ ಆರೋಗ್ಯ ಸ್ಥಿರ

    ಆಸ್ಪತ್ರೆಗೆ ದಾಖಲಾಗಿರುವ ಅಡ್ವಾಣಿ ಆರೋಗ್ಯ ಸ್ಥಿರ

    ನವದೆಹಲಿ: ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್‌.ಕೆ ಅಡ್ವಾಣಿ (LK Advani) ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯು ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.

    ಏಕಾಏಕಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ 96 ವರ್ಷ ವಯಸ್ಸಿನ ಅಡ್ವಾಣಿಯವರನ್ನು ಬುಧವಾರ ತಡರಾತ್ರಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

    ಅಡ್ವಾಣಿಯವರು ವೃದ್ಧಾಪ್ಯ ವಿಭಾಗದ ತಜ್ಞರ ಅಡಿಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ

    2024ರ ಮಾರ್ಚ್ 30 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರು ನವದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದರು.

  • ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದ ಮೋದಿ

    ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದ ಮೋದಿ

    ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು  ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ, ತಮ್ಮ ರಾಜಕೀಯ ಗುರು ಎಲ್‌ಕೆ ಅಡ್ವಾಣಿ (LK Advani) ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

    ಮಧ್ಯಾಹ್ನ ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ನಂತರ ನೇರವಾಗಿ ಮೋದಿ ಅವರು ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.

    ಫೆಬ್ರವರಿಯಲ್ಲಿ ಮೋದಿ ಅವರು ಅಡ್ವಾಣಿ ಅವರಿಗೆ ಈ ಬಾರಿ ಭಾರತ  ರತ್ನ (Bharat Ratna) ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ನಂತರ ಮಾರ್ಚ್‌ನಲ್ಲಿ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ 

    ಅಡ್ವಾಣಿ ಮತ್ತು ಮೋದಿ ಅವರಿಗೆ ಮೊದಲಿನಿಂದಲೂ ಉತ್ತಮ ಸಂಬಂಧವಿದೆ. ಅಡ್ವಾಣಿ ಅವರ ರಥಯಾತ್ರೆಯ ಯಶಸ್ಸಿನ ಹಿಂದೆ ಮೋದಿ ಅವರ ಪಾತ್ರವಿದೆ. ಗುಜರಾತ್‌ನಲ್ಲಿ ಇದ್ದಾಗ ಮೋದಿ ಯಶಸ್ವಿ ಸಂಘಟಕರಾಗಿದ್ದರು. ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಾಗ ಮೋದಿ ಅವರು ಯಶಸ್ವಿಯಾಗಿ ಚುನಾವಣೆಯನ್ನು ಸಂಘಟಿಸುತ್ತಿದ್ದರು. ಇವರಲ್ಲಿನ ನಾಯಕತ್ವ ಕೌಶಲ್ಯವನ್ನು ನೋಡಿ ಬಿಜೆಪಿ ಹೈಕಮಾಂಡ್‌ 2001ರಲ್ಲಿ ಮೋದಿ ಅವರಿಗೆ ಸಿಎಂ ಹುದ್ದೆ ನೀಡಿತ್ತು.

     

    ಮೋದಿ ಅವರು ಈ ಹಿಂದೆ ತಮ್ಮ ರಾಜಕೀಯ ಭಾಷಣದಲ್ಲಿ ಅಡ್ವಾಣಿ ಅವರ ಕೆಲಸವನ್ನು ಸ್ಮರಿಸುತ್ತಿದ್ದರು. ವಿರೋಧಿಗಳು ಬಿಜೆಪಿಯನ್ನು ಅಸ್ಪೃಶ್ಯ ಎಂದು ಕರೆಯುತ್ತಿದ್ದರು. ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಈ ಸಿದ್ಧಾಂತವನ್ನು ಸೋಲಿಸಲು ಮತ್ತು ಪಕ್ಷವನ್ನು ದೇಶದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದ್ದರು. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್‌ಡಿಎ ಕೊಂಡಾಡಿದ ಮೋದಿ

    ಒಂದು ಕುಟುಂಬದಿಂದ ದೇಶವನ್ನು ಪಾರು ಮಾಡಲು ಅಡ್ವಾಣಿ ಅವರು ರಾಷ್ಟ್ರೀಯತೆಯ ಸಿದ್ಧಾಂತದೊಂದಿಗೆ ಜನರನ್ನು ಸಂಪರ್ಕಿಸಿ ದೇಶವನ್ನು ಬಲಪಡಿಸುವ ಸವಾಲು ತೆಗೆದುಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದರು.

  • ಎಲ್‌ಕೆ ಅಡ್ವಾಣಿ ನಿವಾಸದಲ್ಲೇ ಭಾರತ ರತ್ನ ಪ್ರದಾನ

    ಎಲ್‌ಕೆ ಅಡ್ವಾಣಿ ನಿವಾಸದಲ್ಲೇ ಭಾರತ ರತ್ನ ಪ್ರದಾನ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಅವರು ಬಿಜೆಪಿ ಹಿರಿಯ ನಾಯಕ, ಮಾಜಿ ಗೃಹ ಸಚಿವ ಎಲ್‌.ಕೆ.ಅಡ್ವಾಣಿ (LK Advani) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ (Bharat Ratna) ಪ್ರಶಸ್ತಿಯನ್ನು ಅವರ ನಿವಾಸದಲ್ಲೇ ಪ್ರದಾನ ಮಾಡಿದರು.

    ಈ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಉಪರಾಷ್ಟ್ರಪತಿ ಜಗದೀಪ್ ಧನಕರ್, ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು.

    ಶನಿವಾರ ರಾಷ್ಟ್ರಪತಿ ಭವನದಲ್ಲಿ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌, ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಅನಾರೋಗ್ಯದ ಕಾರಣ ಶನಿವಾರ ನಡೆದ ಸಮಾರಂಭದಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಲು ಅಡ್ವಾಣಿ ಆಗಮಿಸಿರಲಿಲ್ಲ. ಇದನ್ನೂ ಓದಿ: ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ

    ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ವರ್ಷದ ಫೆಬ್ರವರಿಯಲ್ಲಿ ಪ್ರಕಟಿಸಿದ್ದರು.

    ಎಲ್ ಕೆ ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

    ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು, ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಬಹಳಷ್ಟಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶ ಸೇವೆ ಮಾಡಿದ್ದಾರೆ. ಅವರು ನಮ್ಮ ಗೃಹ ಮಂತ್ರಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿಯೂ ಗುರುತಿಸಿಕೊಂಡರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಆದರ್ಶಪ್ರಾಯವಾಗಿವೆ, ಶ್ರೀಮಂತ ಒಳನೋಟಗಳಿಂದ ತುಂಬಿವೆ. ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ದಶಕಗಳ ಸುದೀರ್ಘ ಸೇವೆಯು ಪಾರದರ್ಶಕತೆ ಮತ್ತು ಸಮಗ್ರತೆಗೆ ಅಚಲವಾದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಕಡೆಗೆ ಅಪ್ರತಿಮ ಪ್ರಯತ್ನಗಳನ್ನು ಅಡ್ವಾಣಿ ಮಾಡಿದ್ದಾರೆ. ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೊಡುವುದು ನನ್ನ ಪಾಲಿನ ಅತ್ಯಂತ ಭಾವನಾತ್ಮಕ ಕ್ಷಣ ಎಂದು ಬರೆದಿದ್ದರು.

     

  • ಪಿ.ವಿ ನರಸಿಂಹ ರಾವ್ ಸೇರಿ ಐವರಿಗೆ `ಭಾರತ ರತ್ನ’

    ಪಿ.ವಿ ನರಸಿಂಹ ರಾವ್ ಸೇರಿ ಐವರಿಗೆ `ಭಾರತ ರತ್ನ’

    – ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪ್ರದಾನ

    ನವದೆಹಲಿ: ಸಮಾಜವಾದಿ ನಾಯಕ ಚೌಧರಿ ಚರಣ್ ಸಿಂಗ್, ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ (P.V Narasimha Rao), ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು (Bharat Ratna) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರದಾನ ಮಾಡಿದ್ದಾರೆ.

    ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನರಸಿಂಹರಾವ್ ಅವರ ಪುತ್ರ ಪಿ.ವಿ ಪ್ರಭಾಕರ್ ರಾವ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಸಿಂಗ್, ಸ್ವಾಮಿನಾಥನ್ ಅವರ ಪುತ್ರಿ ನಿತ್ಯಾ ರಾವ್ ಮತ್ತು ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್‍ನಾಥ್ ಠಾಕೂರ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: `ಕೈ’ಗೆ ಶಾಕ್‌ ಮೇಲೆ ಶಾಕ್‌; 1,800 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ಬೆನ್ನಲ್ಲೇ ಐಟಿಯಿಂದ ಮತ್ತೆರಡು ನೋಟಿಸ್!

    5ನೇ ಪ್ರಶಸ್ತಿ ಪುರಸ್ಕೃತರಾದ ಎಲ್.ಕೆ ಅಡ್ವಾಣಿ (L.K Advani) ಅನಾರೋಗ್ಯದ ಕಾರಣ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಭಾನುವಾರ ಅವರ ನಿವಾಸದಲ್ಲೇ ಅವರಿಗೆ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ – ‘ಕೈ’ ನಾಯಕನ ಸೊಸೆ ಬಿಜೆಪಿ ಸೇರ್ಪಡೆ

  • ಅಡ್ವಾಣಿಯನ್ನು ಬಿಜೆಪಿಯವರೇ ಮೂಲೆಗುಂಪು ಮಾಡಿದ್ರು, ಬುದ್ಧಿ ಬಂದ ಮೇಲೆ ‘ಭಾರತ ರತ್ನ’ ಕೊಟ್ಟಿದ್ದಾರೆ: ರಾಮಲಿಂಗಾ ರೆಡ್ಡಿ

    ಅಡ್ವಾಣಿಯನ್ನು ಬಿಜೆಪಿಯವರೇ ಮೂಲೆಗುಂಪು ಮಾಡಿದ್ರು, ಬುದ್ಧಿ ಬಂದ ಮೇಲೆ ‘ಭಾರತ ರತ್ನ’ ಕೊಟ್ಟಿದ್ದಾರೆ: ರಾಮಲಿಂಗಾ ರೆಡ್ಡಿ

    ಗದಗ: ಎಲ್.ಕೆ ಅಡ್ವಾಣಿಗೆ (LK Advani) ಭಾರತ ರತ್ನ (Bharat Ratna) ಪ್ರಶಸ್ತಿ ನೀಡಿದ್ದು ಸಂತೋಷ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್‌ಗಳ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಸಹ ಕಾರಣ. ಅವರನ್ನು ಮೂಲೆಗುಂಪು ಮಾಡಿದ್ದರು. ಈಗಲಾದರೂ ಬಿಜೆಪಿಯವರಿಗೆ ಬುದ್ಧಿ ಬಂದು ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದು ಸಂತೋಷ ಎಂದರು.

    ಪ್ರಹ್ಲಾದ್ ಜೋಷಿ ಹಾಗೂ ಸಂತೋಷ್ ಅವರು ಸೇರಿ ಯಡಿಯೂರಪ್ಪಗೆ ಏನು ಮಾಡಿದ್ರು? ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದವರು ಯಾರು? ಇವರೆ ತಾನೇ ಇಳಿಸಿದ್ದು? ವಿಜಯೇಂದ್ರ ಏನು ಆಗಬಾರದು ಎಂದು ಮೊನ್ನೆಯೂ ಏನೋ ಪ್ರಯತ್ನ ಮಾಡಿದರು. ಆದರೂ ಏನು ನಡಿಯಲಿಲ್ಲ. ಚುನಾವಣೆ ಬಂತಲ್ವಾ, ಅದಕ್ಕೆ ಯಡಿಯೂರಪ್ಪ ಮುಖ ನೋಡಿ ಮತ ಹಾಕುತ್ತಾರೆ ಎಂದು ಸುಮ್ಮನಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಪಿತೂರಿಗೆ ಬಲಿಯಾಗಿ ನಾನು, ಪ್ರೀತಂ ವಿಷಕಂಠರಾಗಿದ್ದೇವೆ: ಸಿ.ಟಿ ರವಿ

    ಇನ್ನು ದಕ್ಷಿಣ ಭಾರತ ಪ್ರತ್ಯೇಕ ಕೂಗು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ನಮ್ಮ ದೇಶದಲ್ಲಿ 560 ರಾಜ್ಯಗಳಿದ್ದವು. ಮೊದಲು ನಮ್ಮ ದೇಶನೇ ಇರಲಿಲ್ಲ. ಬ್ರಿಟಿಷರು ಆಳುವ ಸಂದರ್ಭದಲ್ಲಿ 560 ರಾಜ್ಯಗಳಿದ್ದವು. ಆಗ ಎಲ್ಲಾ ರಾಜ್ಯಗಳ ಭೂಪ್ರದೇಶ ಭಾರತ, ಇಂಡಿಯಾ ಎಂದು ಮಾಡಿದ್ದು ಕಾಂಗ್ರೆಸ್. ಸ್ವಾತಂತ್ರ‍್ಯ ಹೋರಾಟದಲ್ಲಿ ಕಾಂಗ್ರೆಸ್‌ನವರು (Congress) ಭಾಗವಹಿಸಿದ್ದರು. ಬಿಜೆಪಿ ಪೂರ್ವಜರು ವಿಹೆಚ್‌ಪಿ, ಆರ್‌ಎಸ್‌ಎಸ್ ನವರು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅಖಂಡ ಭಾರತ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಭಾರತ ಒಡೆಯುವ ಪ್ರಶ್ನೆಯೇ ಇಲ್ಲ. ಡಿಕೆ ಸುರೇಶ್ (DK Suresh) ಆ ರೀತಿ ಹೇಳಬೇಕು ಅಂದರೆ ಅವರಿಗೆ ಎಷ್ಟು ಕೋಪ ಬಂದಿರಬಾರದು? ದಕ್ಷಿಣ ಭಾರತ ರಾಜ್ಯಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? 2 ಲಕ್ಷ ಕೋಟಿ ಸಹ ಕೊಟ್ಟಿಲ್ಲ. ನಮ್ಮ ರಾಜ್ಯದಿಂದ ನಾಲ್ಕೂವರೆ ಲಕ್ಷ ಕೋಟಿ ಟ್ಯಾಕ್ಸ್ ಹೋಗುತ್ತೆ. ಅದರಲ್ಲಿ ನಮಗೆ ಕೊಡುವುದು ಕೇವಲ 50 ಸಾವಿರ ಕೋಟಿ ಮಾತ್ರ. ದೇಶ ಅಖಂಡವಾಗಿ ಇರಬೇಕು. ಆದರೆ ನಮಗೆ ಕೊಡುವಂತಹದ್ದು ಕೊಡಬೇಕಲ್ಲಾ? ನಮ್ಮ ರಾಜ್ಯಕ್ಕೆ ಅನುದಾನ ಕಡಿಮೆ ಕೊಡುತ್ತಿರುವುದರಿಂದ ಬಿಜೆಪಿಯವರಿಗೆ ಒಳಒಳಗೆ ಖುಷಿ. ರಾಜ್ಯದಲ್ಲಿ 123 ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಪ್ರಧಾನಿಗಳು ಬಿಡಿಗಾಸು ಸಹ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಒಂದು ರೂ. ಸಹ ಬಿಡುಗಡೆ ಮಾಡಿಲ್ಲ. ಇದು ಮಲತಾಯಿ ಧೋರಣೆ ಅಲ್ವಾ? ಈ ಕೋಪಕ್ಕೆ ಅವರು ಹೇಳಿದ್ದಾರೆ ಅಷ್ಟೇ ಎಂದು ಸಮಜಾಯಿಷಿ ಕೊಟ್ಟರು. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್

    ಬರಗಾಲ ವಿಷಯಕ್ಕೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದ ಮಾರ್ಗದರ್ಶನ ಪ್ರಕಾರ ನಾವು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ನಾಲ್ಕೂವರೆ ಲಕ್ಷ ಕೋಟಿ ಹಣ ನಮ್ಮನ್ನು ಯಾಕೆ ಕೇಳುತ್ತಾರೆ? ನಾವು ಯಾಕೆ ಕೊಡಬೇಕು? ಕರ್ನಾಟಕ ರಾಜ್ಯಕ್ಕೆ ಹೆಚ್ಚೇನು ಕೊಡಬೇಕಿಲ್ಲ ಅನ್ನುವುದಾದರೆ ನಾವು ಏಕೆ ಕೊಡಬೇಕು? ನಾವು ಟ್ಯಾಕ್ಸ್ ಯಾಕೆ ಕೊಡಬೇಕು? ನಾವು ಪರಿಹಾರ ಕೊಡುತ್ತೇವೆ. ಆದರೆ ಕೇಂದ್ರದ ಕೊಡುಗೆ ಏನು ಎಂಬುದು ಮೊದಲು ಹೇಳಲಿ. ಬಿಜೆಪಿ ಅವರಿಗೆ ಬಾಯಿ ಇಲ್ಲ, ಫೆವಿಕಾಲ್ ಹಾಕಿಕೊಂಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಇವರ ಕೊಡುಗೆ ಏನು? ರಾಜ್ಯಕ್ಕೆ ಬರ ಬಂದಿದೆ, ಹಣ ಕೊಡಿ ಎಂದು ಕೇಳುವ ತಾಕತ್ತು, ಧಮ್ಮು ಅವರಿಗಿಲ್ಲ. ಇಂಥವರನ್ನು ಕರ್ನಾಟಕದಿಂದ 25 ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಎಲ್ಲಾ ದಂಡ ಎಂದರು. ಈ ವೇಳೆ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ನೀಡಿದ 20 ವರ್ಷದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಆರ್.ಅಶೋಕ್

  • ತೀವ್ರ ಚಳಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಎಲ್‌.ಕೆ ಅಡ್ವಾಣಿ ಗೈರು

    ತೀವ್ರ ಚಳಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಎಲ್‌.ಕೆ ಅಡ್ವಾಣಿ ಗೈರು

    ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿಯವರು (LK Advani) ಅಯೋಧ್ಯೆಯಲ್ಲಿ ನಡೆಯುವ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.

    ತೀವ್ರ ಚಳಿಯಿಂದಾಗಿ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ (Ayodhya Ram Mandir) ಪ್ರಯಾಣ ರದ್ದಾಗಿದೆ. ಈ ಮೂಲಕ ಅಡ್ವಾಣಿಯವರು ಇಂದಿನ ಕಾರ್ಯಕ್ರದಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ: ಹೆಚ್‌ಡಿಕೆ

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಚಳವಳಿಯಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96 ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು.

    ಭಾರತೀಯ ಹವಾಮಾನ ಇಲಾಖೆ ಬುಲೆಟಿನ್ ಪ್ರಕಾರ, ಅಯೋಧ್ಯೆಯಲ್ಲಿ ಲಘು ಗಾಳಿಯೊಂದಿಗೆ ಚಳಿಯ ಅಲೆ ಮುಂದುವರಿಯುತ್ತದೆ. ಬೆಳಗಿನ ಗೋಚರತೆ ಕೂಡ 100 ರಿಂದ 400 ಮೀಟರ್ ಆಗಿರುತ್ತದೆ. ದಿನ ಕಳೆದಂತೆ ಗೋಚರತೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.