Tag: living together

  • ಅನೈತಿಕ ಸಂಬಂಧ ಶಂಕೆ – ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ

    ಅನೈತಿಕ ಸಂಬಂಧ ಶಂಕೆ – ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ

    ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಗೆಳತಿಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ ಘಟನೆ ನಗರದ ಹೊರವಲಯದ ಹುಳಿಮಾವು (Hulimavu) ಬಳಿ ನಡೆದಿದೆ.

    ವನಜಾಕ್ಷಿ (26) ಮೃತ ಮಹಿಳೆ ಹಾಗೂ ಆರೋಪಿಯನ್ನು ವಿಠ್ಠಲ (52) ಎಂದು ಗುರುತಿಸಲಾಗಿದ್ದು, ಕ್ಯಾಬ್‌ ಚಾಲಕನಾಗಿದ್ದ.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!

    ಮಳೆನಲ್ಲಸಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದರು. ಆದರೆ ಇತ್ತೀಚೆಗೆ ಮೃತ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಕೊಲೆ ಆರೋಪಿ ವಿಠ್ಠಲನಿಗೆ ಅನುಮಾನ ಮೂಡಿತ್ತು. ಇದರಿಂದಾಗಿ ವಿಠ್ಠಲ ಆಕೆಯನ್ನು ಫಾಲೋ ಮಾಡಲು ಶುರು ಮಾಡಿದ್ದ. ಇದೇ ಸಮಯದಲ್ಲಿ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು ಕೋಪಗೊಂಡಿದ್ದ.

    ಆಕೆಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ ಆರೋಪಿ ತನ್ನ ಕಾರಿನಲ್ಲಿದ್ದ 5 ಲೀಟರ್ ಪೆಟ್ರೋಲ್ ತೆಗೆದು ವನಜಾಕ್ಷಿ ಮೇಲೆ ಸುರಿಯಲು ಮುಂದಾದ. ಇದರಿಂದ ಭಯಭೀತಳಾದ ವನಜಾಕ್ಷಿ ಕಾರಿನಿಂದ ಇಳಿದು ಅಲ್ಲಿಂದ ಓಡಿಹೋಗಿದ್ದಾಳೆ. ಆದರೂ ಅಷ್ಟಕ್ಕೆ ಬಿಡದ ಆರೋಪಿ ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

    ತೀವ್ರವಾಗಿ ಸುಟ್ಟು ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು (ಸೆ.1) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹುಳಿಮಾವು ಪೊಲೀಸರು (Hulimavu Police) ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

  • ಕಲಹದಲ್ಲಿ ಪೆಟ್ಟು ತಿಂದು ಆಸ್ಪತ್ರೆ ಸೇರಿದ ಮಹಿಳೆ – ತೊರೆದು ಹೋದಳೆಂದು ಲಿವಿಂಗ್ ಟುಗೆದರ್‌ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

    ಕಲಹದಲ್ಲಿ ಪೆಟ್ಟು ತಿಂದು ಆಸ್ಪತ್ರೆ ಸೇರಿದ ಮಹಿಳೆ – ತೊರೆದು ಹೋದಳೆಂದು ಲಿವಿಂಗ್ ಟುಗೆದರ್‌ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

    ಮಡಿಕೇರಿ: ಲಿವಿಂಗ್‌ ಟುಗೆದರ್‌ನಲ್ಲಿದ್ದ (Living Together) ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಸಾಗರ್ (30) ಎಂದು ಗುರುತಿಸಲಾಗಿದೆ.

    ಮೃತ ಸಾಗರ್ ಸೆಸ್ಕಾಂನಲ್ಲಿ ವಿದ್ಯುತ್ ಕಂಬ ಅಳವಡಿಸುವ ಕೆಲಸ ಮಾಡುತಿದ್ದ. ಅಲ್ಲದೇ ಆಟೋ ಚಾಲನೆ ಮಾಡುತಿದ್ದ. ಈತ ಮಹಿಳೆಯೊಬ್ಬರ ಜೊತೆ, ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ಸುಮಾರು 18 ವರ್ಷಗಳಿಂದ ಜೀವನ ನಡೆಸುತಿದ್ದ. ಈತನಿಗೆ ಕುಡಿತದ ಚಟವು ಇತ್ತು. ಎರಡು ದಿನಗಳ ಹಿಂದೆ ಸಾಗರ್ ಮತ್ತು ಮಹಿಳೆಯ ಮಧ್ಯೆ ಕಲಹ ನಡೆದಿತ್ತು. ಇದನ್ನೂ ಓದಿ: ಢಾಬಾದಲ್ಲಿ ಬ್ಲಾಂಕೆಟ್ ಸುತ್ತಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ – ಬಾಯ್‌ಫ್ರೆಂಡ್‌ ಅರೆಸ್ಟ್‌

    ಇದರಿಂದ ಎರಡು ದಿನಗಳ ಹಿಂದೆ ಮನನೊಂದು ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಒಬ್ಬನೇ ತೆರಳಿ ನಂತರ ಮನೆಗೆ ಸಂಜೆ 6ರ ವೇಳೆಗೆ ಹಿಂದಿರುಗಿದ್ದ. ಮನೆಗೆ ಬಂದ ವೇಳೆ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿ ಮಹಿಳೆಗೆ ಹಲವು ಸಲ ಕರೆ ಮಾಡಿದ್ದಾನೆ. ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಆಕೆ ನನ್ನಿಂದ ದೂರವಾಗಿದ್ದಾಳೆ ಎಂದು ಭಾವಿಸಿ, ವೀಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.

    ಮಹಿಳೆ ಗಲಾಟೆ ವೇಳೆ, ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಳು. ಮಹಿಳೆಯ ಮಗ ಆಧಾರ್ ಕಾರ್ಡ್ ತರಲೆಂದು ಮನೆಗೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಮೃತನ ತಾಯಿ ನೀಡಿರುವ ದೂರಿನ ಅನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುತ್ತಿಗೆದಾರನ ಹತ್ಯೆ ಆರೋಪಿ ಮನೆಗೆ ಬೆಂಕಿ – 6 ಜನ ಅರೆಸ್ಟ್‌

  • ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ಕಲಬುರಗಿ: ಲಿವಿಂಗ್ ಟುಗೆದರ್‌ನಲ್ಲಿರಲು ಮನೆಯವರು ವಿರೋಧಿಸಿದ್ದಕ್ಕೆ ಯುವಕ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ (Kalaburagi) ನಗರದ ನಾಗನಹಳ್ಳಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ಕುಮಸಿ ಗ್ರಾಮದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    ತಾನು ಲಿವಿಂಗ್ ಟುಗೆದರ್‌ನಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದ. ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ. ಇದರಿಂದ ಬೇಸತ್ತ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ, ತಾನು ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆಗೆ ಕರೆಮಾಡಿದ್ದಾನೆ. ಬಳಿಕ ಕಲಬುರಗಿ ನಗರದ ನಾಗನಹಳ್ಳಿ ರೈಲ್ವೆ ಹಳಿಯ ಬಳಿ ತೆರಳಿ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದು ಆತನ ರಕ್ಷಣೆಗೆ ಮುಂದಾಗಿದ್ದ ಯುವತಿ ಕೂಡ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಾಡಿ (Wadi) ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

  • ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ನಗರದ ಸಬ್‍ಇನ್‍ಸ್ಪೆಕ್ಟರ್  (Sub Inspector) ಒಬ್ಬರ ಮೇಲೆ ಪತ್ನಿಗೆ (Wife) ಕಿರುಕುಳ ನೀಡಿ ಕೊಲೆಗೈದ ಆರೋಪ ಕೇಳಿ ಬಂದಿದೆ.

    ಮೃತ ಮಹಿಳೆಯನ್ನು ಶಿಲ್ಪಾ (33) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ರಮೇಶ್ ಅವರ ಮೇಲೆ ಶಿಲ್ಪಾ ಪೊಷಕರು ಕೊಲೆ ಆರೋಪ ಹೊರಿಸಿದ್ದಾರೆ. ಅಲ್ಲದೆ ನಿರಂತರ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

    ರಮೇಶ್ ಹಾಗೂ ಶಿಲ್ಪಾ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ (Living Together) ರಿಲೇಶನ್‍ಶಿಪ್‍ನಲ್ಲಿದ್ದರು. ಆದರೆ ಮದುವೆಯಾಗಲು (Marriage) ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಬಳಿಕ ಹಠಬಿಡದೆ ಪೊಲೀಸರ ಸಮ್ಮುಖದಲ್ಲಿ ಶಿಲ್ಪಾ, ರಮೇಶ್‍ನನ್ನು ಮದುವೆಗೆ ಒಪ್ಪಿಸಿದ್ದಳು.

    ಮದುವೆ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂದು ಪತ್ನಿಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದ. ಆದರೆ ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಪದೇ ಪದೇ ಜಾತಿ ನಿಂದನೆ ಮಾಡಿ, ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯಾ ಮನೆಬಿಟ್ಟು ಹೋಗು ಎಂದು ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಪೋಷಕರು ದೂರಿದ್ದಾರೆ.

    ಶುಕ್ರವಾರ ರಾತ್ರಿ ಕುಟುಂಬದವರ ಜೊತೆ ಫೋನಿನಲ್ಲಿ ಮಾತನಾಡಿದ್ದ ಶಿಲ್ಪಾ ಖರ್ಚಿಗೆ ಹಣ ಬೇಕು ಎಂದು ಹಾಕಿಸಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಮನೆಯ ಮಾಲೀಕರು ಬಾಗಿಲು ತೆರೆಯುತ್ತಿಲ್ಲ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ. ಕುಟುಂಬದವರು ಬರುವ ಮುನ್ನವೇ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಶಿಲ್ಪಾ ಕುಟುಂಬ ಆಗ್ರಹಿಸಿದೆ. ಇದನ್ನೂ ಓದಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

  • ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ (Living Together) ಪ್ರಿಯಮೆಯೊಂದಿಗೆ ತನ್ನ ಗೆಳೆಯ ಸಲುಗೆಯಿಂದ ಇರುತ್ತಿದ್ದನ್ನು ನೋಡಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಡೆದಿದೆ.

    ನೈಜೀರಿಯ (Nigeria) ಮೂಲದ ಇಬ್ಬರು ವ್ಯಕ್ತಿಗಳ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಸ್ನೇಹಿತ ಸುಲೇಮಾನ್ (38)ನನ್ನು ಕೊಲೆ ಮಾಡಿರುವ ಆರೋಪಿ ವಿಕ್ಟರ್‌ನನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದಿಂದ ಎಡವಟ್ಟು- ಹಾಲ್ ಟಿಕೆಟ್‍ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಐಶ್ವರ್ಯ ರೈ ಫೋಟೋ

    ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಆಗಾಗ್ಗೆ ರೂಮಿಗೆ ಬರ್ತಿದ್ದ ಸುಲೇಮಾನ್, ಆತನ ಗೆಳತಿಯ (Girlfriend) ಜೊತೆ ಸಲುಗೆಯಿಂದ ಇರುವುದನ್ನು ನೋಡಿದ್ದಾನೆ. ಇದೇ ಕಾರಣಕ್ಕೆ ಗಲಾಟೆ ಮಾಡಿ ಚಾಕು ತೆಗೆದುಕೊಂಡು ಇರಿದು ಗೆಳೆಯನನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇತ್ತ ಪ್ರಕರಣ (FIR) ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: CJI ಹುದ್ದೆಗೆ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಶಿಫಾರಸು

    ವೀಸಾ (Visa), ಪಾಸ್‌ಪೋರ್ಟ್ (PassPort) ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!

    – ಲಿವಿಂಗ್ ಟುಗೆದರ್ ಸಂಗಾತಿಯನ್ನು ಕೊಂದು ಮನೆಯಲ್ಲೇ ಗೋರಿ ಕಟ್ಟಿದ್ದ

    ಭೋಪಾಲ್: ವ್ಯಕ್ತಿಯೊಬ್ಬ ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ತನ್ನ ಮನೆಯಲ್ಲೇ ಗೋರಿ ಕಟ್ಟಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಬಂಧಿತ ಆರೋಪಿ ತನ್ನ ತಂದೆ ತಾಯಿಯನ್ನೂ ಕೊಂದು ಮನೆಯ ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

    ಮಧ್ಯಪ್ರದೇಶದ ಭೋಪಾಲ್ ನಿವಾಸಿ ಉದ್ಯಾನ್ ದಾಸ್ ಎರಡು ತಿಂಗಳ ಹಿಂದೆ ತನ್ನ ಸಂಗಾತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನ ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲೇ ಗೋರಿ ಕಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಾನ್ ದಾಸ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಈತ 6 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನೂ ಕೊಂದಿರುವುದಾಗಿ ಹೇಳಿದ್ದಾನೆ. 2010-11 ರಲ್ಲಿ ತನ್ನ ತಂದೆ ತಾಯಿಯನ್ನು ಕೊಂದು ರಯ್‍ಪುರದ ಮನೆಯ ಕಾಂಪೌಂಡ್‍ನಲ್ಲಿ ಹೂತಿರುವುದಾಗಿ ಉದ್ಯಾನ್ ದಾಸ್ ಹೇಳಿದ್ದಾನೆ.

    ಈತ ನೀಡಿರುವ ಈ ಆಘಾತಕಾರಿ ಹೇಳಿಕೆಯ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾವು ರಾಯ್‍ಪುರಕ್ಕೆ ಪೊಲೀಸ್ ತಂಡವನ್ನು ಕಳಿಸುತ್ತಿದ್ದೇವೆ. ಉದ್ಯಾನ್ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿರುವುದರಿಂದ ಈತ ಹೇಳುವುದೆಲ್ಲವನ್ನೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

    ಮೊದಲು ಉದ್ಯಾನ್ ದಾಸ್ ನೀಡಿದ್ದ ಹೇಳಿಕೆಯಲ್ಲಿ, ಭೋಪಾಲ್‍ನ ಬಿಇಹೆಚ್‍ಇಎಲ್‍ನ ನಿವೃತ್ತ ಅಧಿಕಾರಿಯಾದ ತನ್ನ ತಂದೆ ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದು, 2010ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಿದ್ದ. ತನ್ನ ತಾಯಿ ಇಂದ್ರಾಣಿ ಅಮೆರಿಕದಲ್ಲಿದ್ದಾರೆ ಎಂದು ಹೇಳಿದ್ದ. ಆರೋಪಿ ತುಂಬಾ ಚಾಲಾಕಿಯಾಗಿದ್ದು, ಇಂಗ್ಲಿಷ್‍ನಲ್ಲಿ ಸಾರಾಗವಾಗಿ ಮಾತಾಡ್ತಾನೆ. ಕಾನ್ಫಿಡೆಂಟ್ ಆಗಿ ಸುಳ್ಳು ಹೇಳ್ತಾನೆ ಅಂತ ಪೊಲೀಸರು ಹೇಳಿದ್ದಾರೆ.

    ಉದ್ಯಾನ್ ಈ ಹಿಂದೆ ಹೇಳಿದಂತೆ ಐಐಟಿ ಮಾಡಿಲ್ಲ, ಆತ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾನೆ ಅಷ್ಟೆ. ಈತ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ಪೋಷಕರಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಫ್ಲಾಟ್ ಇದ್ದು, ಅದರಿಂದ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಬರುತ್ತದೆ. ರಾಯುಪುರ್‍ನಲ್ಲಿರುವ ಫ್ಲಾಟ್‍ನಿಂದ 7 ಸಾವಿರ ರೂ. ತಿಂಗಳ ಬಾಡಿಗೆ ಹಾಗೂ ಭೋಪಾಲ್‍ನ ಸಾಕೇತ್ ನಗರದಲ್ಲಿ ಈತ ವಾಸವಿರುವ ಕಟ್ಟಡದಲ್ಲಿ ಕೆಳ ಮಹಡಿಯ ಬಾಡಿಗೆ ಮನೆಯಿಂದ 5 ಸಾವಿರ ರೂ. ತಿಂಗಳ ಬಾಡಿಗೆ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಉದ್ಯಾನ್ ಮತ್ತು ಆತನ ತಂದೆಯ ಜಾಯಿಂಟ್ ಅಕೌಂಟ್‍ನಲ್ಲಿ 8.5 ಲಕ್ಷ ಫಿಕ್ಸ್ಡ್ ಡೆಪಾಸಿಟ್ ಇದ್ದು ಇದರ ಬಡ್ಡಿಯೂ ಕೂಡ ಉದ್ಯಾನ್‍ಗೆ ಸಿಗುತ್ತಿತ್ತು. ಉದ್ಯಾನ್ ತನ್ನ ಪೋಷಕರ ಪಿಂಚಣಿ ಹಣವನ್ನೂ ಕೂಡ ಡ್ರಾ ಮಾಡಿಕೊಳ್ಳುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಉದ್ಯಾನ್ ಲಿವಿಂಗ್ ಟುಗೆದರ್‍ನಲ್ಲಿದ್ದ ಗೆಳತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ಸುರಿದು ಮನೆಯಲ್ಲೇ ಗೋರಿ ಕಟ್ಟಿದ್ದ. ಗೋರಿಯನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಇದರ ಮೇಲೆ ಮಲಗುತ್ತಿದ್ದ. ಆಕಾಂಕ್ಷಾ ಎರಡು ತಿಂಗಳಿನಿಂದ ಫೋನ್ ಮಾಡದ ಕಾರಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾಲ್ ಟ್ರೇಸ್ ಮಾಡಿ ಉದ್ಯಾನ್‍ನನ್ನು ಬಂಧಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ಅಮೆರಿಕಗೆ ಹೋಗ್ತಿದ್ದೀನಿ ಅಂತ ಹೇಳಿ ಉದ್ಯಾನ್ ಜೊತೆ ಲಿವಿಂಗ್ ಟುಗೆದರ್‍ನಲ್ಲಿದ್ದ ಆಕಾಂಕ್ಷಾ

     

  • ಲಿವಿಂಗ್ ಟುಗೆದರ್ ಸಂಗಾತಿಯನ್ನ ಕೊಂದು ಮನೆಯಲ್ಲೇ ಗೋರಿ ಕಟ್ಟಿದ

    – ಹೆಣವಿದ್ದ ಸಿಮೆಂಟ್ ಚಪ್ಪಡಿಯ ಮೇಲೆ ಪ್ರತಿದಿನ ಮಲಗ್ತಿದ್ದ

    ಭೋಪಾಲ್: ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ಸಿಮೆಂಟ್ ಗೋರಿಯೊಳಗೆ ಆಕೆಯ ಶವವನ್ನು ಹೂತಿಟ್ಟಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿನ ಸಾಕೇತ್ ನಗರದ ನಿವಾಸಿಯಾಗಿದ್ದ 32 ವರ್ಷದ ಉದ್ಯಾನ್ ದಾಸ್ ಬಂಧಿತ ಆರೋಪಿ. ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಾನ್ ಮರ್ಸೀಡಿಸ್ ಬೆಂಜ್ ಕಾರ್‍ನಲ್ಲಿ ಓಡಾಡುತ್ತಿದ್ದ. ತನ್ನ ಮನೆಯಲ್ಲಿ ಒಬ್ಬನೇ ವಾಸವಿದ್ದ. ಉದ್ಯಾನ್‍ಗೆ ಎರಡು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ 28 ವರ್ಷದ ಆಕಾಂಕ್ಷಾ ಶರ್ಮಾಳ ಪರಿಚಯವಾಗಿತ್ತು. ಆಕಾಂಕ್ಷಾ 2 ವರ್ಷದ ಹಿಂದೆ ಅಮೆರಿಕಗೆ ಹೋಗುತ್ತಿರುವುದಾಗಿ ಪೋಷಕರಿಗೆ ಹೇಳಿ ಪಶ್ಚಿಮ ಬಂಗಾಳದ ಬಂಕುರಾದ ತನ್ನ ಮನೆಯಿಂದ ಬಂದಿದ್ದಳು. ಅದ್ರೆ ಆಕೆ ಅಮೆರಿಕಗೆ ಹೋಗದೆ ಭೋಪಾಲ್‍ಗೆ ಬಂದು ಉದ್ಯಾನ್ ದಾಸ್‍ನೊಂದಿಗೆ ವಾಸವಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಎರಡು ತಿಂಗಳ ಹಿಂದಿನವರೆಗೆ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಆಕಾಂಕ್ಷಾಳಿಂದ ಫೋನ್ ಬರುತ್ತಿತ್ತು. ಆದ್ರೆ ಫೋನ್ ಬರೋದು ನಿಂತಾಗ ಅನುಮಾನಗೊಂಡ ಆಕಾಂಕ್ಷಾ ತಂದೆ ಬಂಕುರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಕುರಾ ಪೊಲೀಸರು ಕಾಲ್ ಟ್ರೇಸ್ ಮಾಡಿದಾಗ ಭೋಪಾಲ್ ವಿಳಾಸ ಸಿಕ್ಕಿದ್ದು, ಈ ಬಗ್ಗೆ ಉದ್ಯಾನ್ ದಾಸ್‍ನನ್ನು ಪ್ರಶ್ನಿಸಿದ್ದಾರೆ. ಮೊದಲಿಗೆ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಉದ್ಯಾನ್ ದಾಸ್, ನಂತರ ಆಕಾಂಕ್ಷಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಮನೆಯಲ್ಲೇ ಗೋರಿ ಕಟ್ಟಿದ: ಆಕಾಂಕ್ಷಾಳನ್ನು ಕೊಂದ ನಂತರ ಉದ್ಯಾನ್ ಮೊದಲನೇ ಮಹಡಿಯಲ್ಲಿದ್ದ ತನ್ನ ಮನೆಯ ಒಳಗೆಯೇ ಒಂದು ಮರದ ಪೆಟ್ಟಿಗೆಯಲ್ಲಿ ಆಕೆಯ ಮೃತದೇಹವನ್ನು ಹಾಕಿ ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ತುಂಬಿ ಚಪ್ಪಡಿಯಂತೆ ಮಾಡಿದ್ದ. ಸಿಮೆಂಟ್ ಒಣಗಿದ ನಂತರ ಇದನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಅದರ ಮೇಲೆಯೇ ಮಲಗುತ್ತಿದ್ದುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಗುರುವಾರ ರಾತ್ರಿ ಪೊಲೀಸರು ಸುಮಾರು 3 ಗಂಟೆಗಳ ಕಾಲ ಡ್ರಿಲ್ಲಿಂಗ್ ಮಾಡಿ ಸಿಮೆಂಟ್ ಚಪ್ಪಡಿಯೊಳಗಿದ್ದ ಆಕಾಂಕ್ಷಾ ಮೃತದೇಹದ ಅಂಗಾಂಗಗಳನ್ನು ಹೊರತೆಗೆದಿದ್ದಾರೆ.

    ಐಷಾರಾಮಿ ಜೀವನ ನಡೆಸ್ತಿದ್ದ: ಪ್ರಕರಣದ ಸಂಬಂಧ ಗ್ರೌಂಡ್ ಫ್ಲೋರ್‍ನಲ್ಲಿ ವಾಸವಿದ್ದ ಉದ್ಯಾನ್ ನೆರೆಹೊರೆಯವರು ಹೇಳಿಕೆ ನೀಡಿದ್ದು, ಆ ಯುವತಿ ಹಲವು ಬಾರಿ ಮನೆಗೆ ಬರೋದನ್ನ ನೋಡಿದ್ದೆವು. ಆದ್ರೆ ಕೊನೆಯ ಬಾರಿ ಆಕೆಯನ್ನು ನೋಡಿದ್ದು ಎರಡು ತಿಂಗಳ ಹಿಂದೆ. ಕಳೆದ 25 ವರ್ಷಗಳಿಂದ ನಮಗೆ ಉದ್ಯಾನ್ ಗೊತ್ತು. ಆದ್ರೆ ಆತ ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆತ ಐಷಾರಾಮಿ ಜೀವನ ನಡೆಸುತ್ತಿದ್ದ. ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ಇದೆ ಎಂದು ಹೇಳುತ್ತಿದ್ದ. ಆತ ಅವನ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದರಿಂದ ಪೋಷಕರೇ ಆತನಿಗೆ ಹಣ ಕೊಡುತ್ತಿರಬಹುದು ಎಂದುಕೊಂಡಿದ್ದೆವು ಅಂತ ಹೇಳಿದ್ದಾರೆ.

    ಪೊಲೀಸರು ಉದ್ಯಾನ್‍ನನ್ನು ವಿಚಾರಣೆ ಮಾಡಿದಾಗ ತಾನು ಐಐಟಿ ಮಾಡಿದ್ದು, ಅಮೆರಿಕದಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿದ್ದಾನೆ. ಅಲ್ಲದೆ ಆಕಾಂಕ್ಷಾಳೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ಅಮೆರಿಕದಲ್ಲಿ ವಾಸವಿರುವ ತನ್ನ ತಾಯಿಯನ್ನು ನೋಡಲು ಕೂಡ ಹೋಗಿದ್ದೆವು. ತನ್ನ ತಂದೆ ಕೆಲವು ವರ್ಷದ ಹಿಂದೆ ನಿಧನರಾಗಿರುವುದಾಗಿ ಹೇಳಿದ್ದಾನೆ.

    ಕೊಲೆಗೆ ಕಾರಣವೇನು?: ಆಕಾಂಕ್ಷಾಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದ ವಿಷಯ ತಿಳಿದು ಕೊಲೆ ಮಾಡಿದ್ದಾಗಿ ಉದ್ಯಾನ್ ಹೇಳಿದ್ದಾನಾದ್ರೂ ಕೊಲೆಗೆ ಸೂಕ್ತ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಉದ್ಯಾನ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು, ಸಿಮೆಂಟ್ ಚಪ್ಪಡಿಯಿಂದ ಹೊರತೆಗೆದ ಆಕಾಂಕ್ಷಾ ಅಂಗಾಂಗಗಳನ್ನು ಡಿಎನ್‍ಎ ಪರೀಕ್ಷೆಗಾಗಿ ಕಳಿಸಿದ್ದಾರೆ.