Tag: living togethar

  • ಫೇಸ್‌ಬುಕ್‌ ಯುವಕನಿಗಾಗಿ ಊರು ಬಿಟ್ಟು ಬಂದಿದ್ದಾಕೆ ಶವವಾಗಿ ಪತ್ತೆ – ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಮಹಿಳೆ ಕೊಲೆ?

    ಫೇಸ್‌ಬುಕ್‌ ಯುವಕನಿಗಾಗಿ ಊರು ಬಿಟ್ಟು ಬಂದಿದ್ದಾಕೆ ಶವವಾಗಿ ಪತ್ತೆ – ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಮಹಿಳೆ ಕೊಲೆ?

    ಹಾಸನ: ಫೇಸ್‌ಬುಕ್‌ನಲ್ಲಿ (FaceBook) ಪರಿಚಯವಾದ ಯುವಕನಿಗಾಗಿ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ವಿಜಯನಗರದ ಸಿರಿಸ್‌ ಅಲಿಯಾಸ್‌ ಸಿರಿ (23) ಮೃತಪಟ್ಟವಳು. ಈಕೆಗೆ ಕಟ್ಟಾಯ ಹೋಬಳಿಯ ಮಾರನಾಯಕನಹಳ್ಳಿ ಗ್ರಾಮದ ಆದರ್ಶ್‌ (26) ಎಂಬಾತನ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ನಂತರ ಇಬ್ಬರೂ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಸನದ ಗುಡ್ಡೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

    ಈ ಮೊದಲು ಸಿರಿಸ್‌ ಬೆಂಗಳೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಆದರ್ಶ್‌ ಪರಿಚಯವಾಗಿದೆ. ಬಳಿಕ ಆಕೆ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದಾಳೆ. ನಂತರ ಇಬ್ಬರೂ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಮದುವೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಲಿವಿಂಗ್‌ ಟುಗೆದರ್‌ನಲ್ಲಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸಿರಿಸ್‌ನ್ನು ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಆದರ್ಶ್‌ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಎ‌ಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ್‌ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಮಂಡ್ಯ: ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಒಂದು ರೀತಿಯ ಆಧುನಿಕ ಶಾಸಕರಾಗಿದ್ದಾರೆ. ಅವರೀಗ ಲಿವ್ ಇನ್ ಟುಗೇದರ್ ಮಾಡುತ್ತಿದ್ದಾರೆ. ಮದುವೆಗಿಂತ ಮುಂಚೆಯೇ ಅವರು ಪ್ರಸ್ಥ ಮಾಡಿಕೊಳ್ಳುತ್ತಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ.

    ಜಮೀರ್ ಅಹಮದ್ ಜೊತೆಯಲ್ಲಿ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಬೈಕ್ ಜಾಥಾ ನಡೆಸಿದ್ರು. ಈ ವೇಳೆ ಕಾರ್ಯಕರ್ತರು ತಮ್ಮ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ರು. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸೇರದೇ ಇದ್ದರೂ ಹಣಕ್ಕಾಗಿ ಯಾವ ಆಟ ಬೇಕಾದ್ರೂ ಆಡುತ್ತಾರೆ ಎಂದು ಟೀಕಿಸಿದರು.

    ಶಿಖಂಡಿ ರಾಜಕಾರಣಿ: ಸಿದ್ದರಾಮಯ್ಯ ಅವರ ಕೈಯಲ್ಲಿ ಅಧಿಕಾರ ಇರುವವರೆಗೂ ಅವರು ಅಲ್ಲಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ವೀಕ್ ಆದ ನಂತರ ಬೇರೆ ಪಕ್ಷ ನೋಡುತ್ತಾರೆ. ಇವರಿಗೆ ನಿಯತ್ತು ನಂಬಿಕೆ ಇಲ್ಲ. ಚಲುವರಾಯಸ್ವಾಮಿಗೆ ಚಾಲೆಂಜ್ ಮಾಡುತ್ತೇನೆ. ಎಚ್‍ಎಎಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನನ್ನ ಮೇಲಿನ ಆರೋಪ ಸಾಬೀತು ಪಡಿಸಿದ್ರೆ ರಾಜಕೀಯ ಬಿಟ್ಟು ಹೋಗ್ತೀನಿ. ಇಲ್ಲದಿದ್ದರೆ ಅವನು ಬಿಟ್ಟು ಹೋಗ್ತಾನೆ. ಸಿದ್ದರಾಮಯ್ಯ ಇದ್ದಾರೆ ಎಂದು ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಸಿದ್ದಾರೆ. ಅವನೊಬ್ಬ ಶಿಖಂಡಿ ರಾಜಕಾರಣಿ ಎಂದು ಆಕ್ರೋಶ ಹೊರಹಾಕಿದ್ರು.

    ಚಲುವರಾಯಸ್ವಾಮಿ ಯಾವಾಗಲೂ ಹಿಂದಿನಿಂದ ಯುದ್ಧ ಮಾಡ್ತಾನೆ. ಶಿಖಂಡಿ ಆಗಲಿ ಯಾರೇ ಆಗಲಿ ನಮ್ಮೆದುರು ಬಂದಾಗ ತೀರಿಸಬೇಕಾಗುತ್ತೆ. ರಾಜಕೀಯವಾಗಿ ಚಲುವರಾಯಸ್ವಾಮಿಯನ್ನು ತೀರಿಸುವವನೇ ನಾನು. ನನ್ನದು ಒಂದೇ ಗುರಿ, ಒಂದೇ ಶಪಥ ಚಲುವರಾಯಸ್ವಾಮಿ ಸೋಲುವವರೆಗೂ ನಾನು ವಿರಮಿಸುವುದಿಲ್ಲ. ಚಲುವರಾಯಸ್ವಾಮಿ ಒಬ್ಬ ದುಷ್ಠ ವ್ಯಕ್ತಿ. ವೈಯಕ್ತಿಕವಾಗಿ ರಾಜಕೀಯವಾಗಿ ನಾನು ಚಲುವರಾಯಸ್ವಾಮಿ ದ್ವೇಷಿ ಎಂದು ಸುರೇಶ್‍ಗೌಡ ಹೇಳಿದರು.