Tag: Liver transplant

  • 73 ವರ್ಷದ ವ್ಯಕ್ತಿಗೆ ಯಶಸ್ವಿ ಲಿವರ್ ಕಸಿ

    73 ವರ್ಷದ ವ್ಯಕ್ತಿಗೆ ಯಶಸ್ವಿ ಲಿವರ್ ಕಸಿ

    ಬೆಂಗಳೂರು: 73 ವರ್ಷದ ಮುಂಬೈನ (Mumbai) ಯೋಗೇಶ್ ಹೆಸರು ಬದಲಾಯಿಸಲಾಗಿದೆಅವರು ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಯಕೃತ್ತಿನ ಕಸಿ (Liver Transplant) ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ (Trustwell Hospitals) ಕಸಿ ಶಸ್ತ್ರಚಿಕಿತ್ಸಕರು, ಕಸಿ ಅರಿವಳಿಕೆ ತಜ್ಞರು ಮತ್ತು ತೀವ್ರತರವಾದ ತಜ್ಞರ ತಂಡವು ರೋಗಿಯನ್ನು ಬದುಕಿಸಲು ಸಂಕೀರ್ಣವಾದ ಯಕೃತ್ತಿನ ಕಸಿ ಮಾಡಿ ಇವರ ಬದುಕಿನಲ್ಲಿ ನೆಮ್ಮದಿಯ ನಗು ಮೂಡಿಸಿದರು.

    ಯೋಗೇಶ್ ಅವರನ್ನು ಮೊದಲು ಹಿರಿಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಅವರು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್ ಗೆ ಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್ ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ (Angiography) ಒಳಗಾಗಿದ್ದರು. ಈ ಎಲ್ಲಾ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು. ಇದನ್ನೂ ಓದಿ: ಮರಣದಂಡನೆಗೆ ಯಾವ ವಿಧಾನ ಸೂಕ್ತ?- ತಜ್ಞರ ವರದಿ ಕೇಳಿದ ಸುಪ್ರೀಂಕೋರ್ಟ್

    ಈ ಎಲ್ಲಾ ಸವಾಲಿನ ನಡುವೆ ಮಾರ್ಚ್ 7ರಂದು ಮುಂಜಾನೆ ವೈದ್ಯರ ತಂಡವು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ ಅವರಿಗೆ ಕಸಿ ಐಸಿಯು ನಲ್ಲಿ ಸರಿಯಾದ ಪೌಷ್ಠಿಕಾಂಶ ಹಾಗೂ ಫಿಸಿಯೋಥೆರಪಿ ನೀಡಿ 6 ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

  • ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    – ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿ

    ಗುರುಗ್ರಾಮ್‍: ಹರಿಯಾಣದ ಗುರುಗ್ರಾಮ್‍ನ ಖಾಸಗಿ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿಯನ್ನು ಮಾಡಲಾಗಿದೆ.

    ಸೌದಿ ಅರೇಬಿಯಾದ ಒಂದು ವರ್ಷದ ಬಾಲಕಿ ಬೇಬಿ ಹರ್ ಯಕೃತ್ ಕಸಿಗೆ ಹಸುವಿನ ರಕ್ತನಾಳಗಳನ್ನು ಬಳಸಲಾಗಿದೆ. 14 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ತಂಡವು ಬಾಲಕಿಯನ್ನು ಎರಡು ವಾರಗಳ ಕಾಲ ಮೇಲ್ವಿಚಾರಣೆಯಲ್ಲಿ ಇಟ್ಟು, ಬುಧವಾರ ಡಿಸ್ಚಾರ್ಜ್ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸಕ ಡಾ.ಗಿರಿರಾಜ್ ಬೋರಾ ಅವರು, ಸೌದಿ ಅರೇಬಿಯಾದ ಬೇಬಿ ಹರ್ ಪಿತ್ತರಸ ನಾಳಗಳಿಲ್ಲದೆ ಜನಿಸಿದೆ. ಬಳಿಕವೂ ಅವಳ ಪಿತ್ತರಸ ನಾಳ ಅಭಿವೃದ್ಧಿಯಾಗಲಿಲ್ಲ. ಆದ್ದರಿಂದ ಬೋವಿನ್ ಜುಗುಲಾರ್ ಸಿರೆ (ಹಸುವಿನ ಗಂಟಲು ಅಬಿಧಮನಿ) ಅನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗಿದೆ. ಈ ರಕ್ತನಾಳವು ಯಕೃತ್ತಿಗೆ ರಕ್ತವನ್ನು ತಲುಪಿಸಲು ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಕೆಲಸವನ್ನು ವೈದ್ಯರ ತಂಡವು ಚೆನ್ನಾಗಿ ನಿರ್ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾರಾ ಮತ್ತು ಅಹ್ಮದ್ ದಂಪತಿಯ ಮೂರನೇ ಮಗು ಬೇಬಿ ಹರ್. ಅವಳು ಜನಿಸಿದ ಮೂರು ತಿಂಗಳ ನಂತರ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಳು. ಸೌದಿ ಅರೆಬಿಯಾದ ವೈದ್ಯರು ಸಮಸ್ಯೆಯನ್ನು ಎದುರಿಸಲು ಮುಂದಾಗಲಿಲ್ಲ. ಬಳಿಕ ನಡೆಸಿದ ಬಿಲಿಯರಿ ಬೈಪಾಸ್ ಶಸ್ತ್ರಚಿಕಿತ್ಸೆ ವಿಫಲವಾದ ನಂತರ ಅಲ್ಲಿನ ವೈದ್ಯರು, ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಸಲಹೆ ನೀಡಿದರು. ಹೀಗಾಗಿ ಭಾರತಕ್ಕೆ ಕರೆತಂದ ಸಾರಾ ದಂಪತಿ ಹರಿಯಾಣದ ಗುರುಗ್ರಾಮ್‍ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿದ್ದು, ಮಗುವಿನ ತಂದೆ ಅಹ್ಮದ್ ಭಾರತ ಮತ್ತು ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಡಾ. ಗಿರಿರಾಜ್ ಬೋರಾ ಮಾತನಾಡಿ, ಸೌದಿ ಅರೆಬಿಯಾದ ವೈದ್ಯರು ದ್ವಿಪಕ್ಷೀಯ ಅಟ್ರೆಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯನ್ನು ಗುರುತಿಸಿದರು. ಈ ರೋಗವು 16 ಸಾವಿರದಲ್ಲಿ ಒಂದು ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ. ಅಂತಹ ಮಕ್ಕಳಲ್ಲಿ ಪಿತ್ತರಸ ನಾಳಗಳು ಬೆಳೆಯುವುದಿಲ್ಲ. ಮಗುವಿನ ತೂಕ 5.2 ಕೆ.ಜಿ. ಇರುತ್ತದೆ ಎಂದು ಹೇಳಿದ್ದಾರೆ.

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.